ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 22-04-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: 188, 269, 271 ಐಪಿಸಿ ಹಾಗೂ ಕಲಂ: 5(1) THE KARNATAKA EPIDEMIC DISEASES ACT-2020 & 51(b) THE DISASTER MANAGEMENT ACT-2005 ನೇದ್ದರ ವಿವರ...... ನಮೂದಿತ ಆರೋಪಿತರು ನರೇಂದ್ರ ರಾಣೆ, ಮಾಲಿಕರು ಸದಾ ಆನಂದ ಪ್ಯಾಲೇಸ್ ಕಲ್ಯಾಣ ಮಂಟಪ, ರೈಲ್ವೇ ಸ್ಟೇಶನ್ ರಸ್ತೆ, ಶೇಜವಾಡ, ಕಾರವಾರ ಹಾಗೂ ಸಂಬಂಧಪಟ್ಟವರು. ನಮೂದಿತ ಆರೋಪಿತನು ಸದಾ ಆನಂದ ಪ್ಯಾಲೇಸ್ ಕಲ್ಯಾಣ ಮಂಟಪದ ಮಾಲಿಕರಾಗಿದ್ದು, ದಿನಾಂಕ: 22-04-2021 ರಂದು ಮಧ್ಯಾಹ್ನ 12-00 ಗಂಟೆಯ ಸಮಯದಲ್ಲಿ ಕಾರವಾರದ ಶಿರವಾಡ ಪಂಚಾಯತ ವ್ಯಾಪ್ತಿಯಲ್ಲಿಯ ತಮ್ಮ ಸದಾ ಆನಂದ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಶ್ರೀ ರಮೇಶ ರಾಮ ಗುನಗಿ ಇವರ ಪುತ್ರ ನಿತೇಶ ಗಾಗೂ ಶ್ರೀ ಉಲ್ಲಾಸ ಟಿ. ಮಿರಾಶಿ ಇವರ ಪುತ್ರಿ ಸೋನಾಲಿ ಇವರ ಮದುವೆ ಸಮಾರಂಭ ನಡೆಯುವ ವೇಳೆಯಲ್ಲಿ 50 ಕ್ಕಿಂತಲೂ ಹೆಚ್ಚಿನ ಜನರು ಏಕಕಾಲಕ್ಕೆ ಉಪಸ್ಥಿತರಿಟ್ಟುಕೊಂಡು ಮದುವೆ ಸಮಾರಂಭ ನಡೆಸಿ ದಿನಾಂಕ: 20-04-2021 ರಂದು ಮುಖ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ರವರು ಕೋವಿಡ್-19 ನೇದರ ಸಂಬಂಧ ಹೊರಡಿಸಿದ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಜೀವ ಪಿ ನಾಯ್ಕ, ಎ.ಇ.ಇ, ಪಿ.ಡಬ್ಲ್ಯೂ.ಡಿ, ಕಾರವಾರ, ಸೆಕ್ಟರ್ ಅಧಿಕಾರಿ, ಶಿರವಾಡ ಮತ್ತು ಕಡವಾಡ, ಕಾರವಾರ ರವರು ದಿನಾಂಕ: 22-04-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 121/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಚಂದನಾ ತಂದೆ ಪ್ರಭಾಕರ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹಳ್ಳಿಮೂಲೆ, ಹೊದ್ಕೆ ಶಿರೂರ, ತಾ: ಹೊನ್ನಾವರ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 21-04-2021 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 22-04-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ರಾತ್ರಿ ಮನೆಯಲ್ಲಿ ಮಲಗಿದ್ದವಳು, ಮನೆಯಿಂದ ಹೊರಗಡೆ ಹೋಗಿ ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಭಾಕರ ತಂದೆ ಹೊಸಬಯ್ಯ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಳ್ಳಿಮೂಲೆ, ಹೊದ್ಕೆ ಶಿರೂರ, ತಾ: ಹೊನ್ನಾವರ ರವರು ದಿನಾಂಕ: 22-04-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 40/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಶೈಲ ತಂದೆ ಗುರುಲಿಂಗಯ್ಯ ಹಿರೇಮಠ, ಪ್ರಾಯ-26 ವರ್ಷ, ಸಾ|| ಬಾಗಲಕೋಟೆ (ಮೋಟಾರ್ ಸೈಕಲ್ ನಂ: ಕೆ.ಎ-36/ಎಲ್-6741 ನೇದರ ಸವಾರ). ಈತನು ದಿನಾಂಕ: 21-04-2021 ರಂದು 20-00 ಗಂಟೆಗೆ ಶಿರಸಿ-ಹುಬ್ಬಳ್ಳಿ ರಸ್ತೆಯ ಗೌಡಳ್ಳಿ ಹತ್ತಿರ ತನ್ನ ಮೋಟಾರ್ ಸೈಕಲ್ ನಂ: ಕೆಎ-36/ಎಲ್-6741 ನೇದನ್ನು ಗೌಡಳ್ಳಿ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ, ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಶಿರಸಿ ಕಡೆಯಿಂದ ಗೌಡಳ್ಳಿ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-3906 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತಾನು ಸಹ ಗಾಯನೋವು ಪಡಿಸಿಕೊಂಡಿದ್ದಲ್ಲದೇ, ಅಪಘಾತಕ್ಕೀಡಾದ ಮೋಟಾರ್ ಸೈಕಲ್ ಸವಾರನಾದ ಅಬ್ದುಲ್ ರಜಾಕ್ ಅಮಾನುಲ್ಲಾ ಈತನಿಗೆ ಮತ್ತು ಅವನ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ಪಿರ್ಯಾದಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ನಫೀಸಾಬಿ ಗಂಡ ಮಹಮ್ಮದ್ ಫಾರೂಖ್ ಪಟ್ಟೆಗಾರ, ಪ್ರಾಯ-28 ವರ್ಷ, ವೃತ್ತಿ-ಗೃಹಿಣಿ, ಸಾ|| ಕಸ್ತೂರಬಾ ನಗರ, 2 ನೇ ಕ್ರಾಸ್, ತಾ: ಶಿರಸಿ ರವರು ದಿನಾಂಕ: 22-04-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಈರಣ್ಣ ಚಿನ್ನಸ್ವಾಮಿ ನಾಯಡು, ಪ್ರಾಯ-33 ವರ್ಷ, ಸಾ|| ಬಸವನ ಬೀದಿ, ತಾ: ಮುಂಡಗೋಡ, 2]. ರಾಮನಗೌಡ ಶಂಕರಗೌಡ ಪಾಟೀಲ್, ಪ್ರಾಯ-28 ವರ್ಷ, ಸಾ|| ಹಳ್ಳೂರ ಓಣಿ, ತಾ: ಮುಂಡಗೋಡ, 3]. ವಿರುಪಾಕ್ಷಯ್ಯ ಬಸವರಾಜಯ್ಯ ಮಿಶ್ರಿಕೋಟೆ, ಪ್ರಾಯ-32 ವರ್ಷ, ಸಾ|| ಬಸವನ ಬೀದಿ, ತಾ: ಮುಂಡಗೋಡ, 4]. ಸಂತೋಷ ನಿಂಗಪ್ಪ ಗೌಳಿ, ಪ್ರಾಯ-22 ವರ್ಷ, ಸಾ|| ಹುಬ್ಬಳ್ಳಿ ರೋಡ್, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ದಿನಾಂಕ: 22-04-2021 ರಂದು ಸಂಜೆ 18-30 ಗಂಟೆಗೆ ಮುಂಡಗೋಡ-ಹುಬ್ಬಳ್ಳಿ ರಸ್ತೆಯಲ್ಲಿ ಸಾಗರ ಡಾಬಾದ ಹಿಮದೆ ಇರುವ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭದ ಸಲುವಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಾ ನಗದು ಹಣ 1,600/- ರೂಪಾಯಿ ಹಾಗೂ ಜೂಗಾರಾಟದ ಸಲಕರಣೆಗಳಾದ ನ್ಯೂಸ್ ಪೇಪರ್-01, ಇಸ್ಪೀಟ್ ಎಲೆಗಳು-52 ನೇದವುಗಳು ದಾಳಿಉ ಕಾಲಕ್ಕೆ ಆರೋಪಿತರೆಲ್ಲರ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರಭುಗೌಡ ಡಿ. ಕೆ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 22-04-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92/2021, ಕಲಂ: 447, 379, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಡಿವಾಳಪ್ಪಾ ತಂದೆ ರುದ್ರಪ್ಪಾ ಇಂಗಳಗಿ, ಪ್ರಾಯ-57 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾಳಗಿನಕೊಪ್ಪ, ತಾ: ಹಳಿಯಾಳ, 2]. ಬಸವರಾಜ ತಂದೆ ಚನ್ನಬಸಪ್ಪಾ ಇಂಗಳಗಿ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾಳಗಿನಕೊಪ್ಪ, ತಾ: ಹಳಿಯಾಳ, 3]. ಶ್ರೀಮತಿ ಗೌರವ್ವಾ ಕೋಂ. ಬಸಪ್ಪಾ ಚೌಡಳ್ಳಿ, ಪ್ರಾಯ-30 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಾಳಗಿನಕೊಪ್ಪ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ದಿನಾಂಕ: 05-04-2021 ರಂದು 11-00 ಗಂಟೆಗೆ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಪಿರ್ಯಾದಿಯವರು ತಮ್ಮ ಬಾಬ್ತು ಹೊಲದಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ಬೆಳೆದ ಹೊಲಕ್ಕೆ ಅಕ್ರಮ ಪ್ರವೇಶ ಮಾಡಿಕೊಂಡು ಹೋಗಿ, ಹೊಲದಲ್ಲಿದ್ದ ಭತ್ತದ ಬೆಳೆಯನ್ನು ಕಳ್ಳತನದಿಂದ ತೆಗೆದುಕೊಂಡು ಹೋಗಿ ಜೀವದ ಬೆದರಿಕೆ ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ತುಕಾರಾಮ ತಂದೆ ಅಂಬುಗೌಡಾ ದೇವರಮನಿ, ಪ್ರಾಯ-80 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾಳಗಿನಕೊಪ್ಪ, ತಾ: ಹಳಿಯಾಳ ರವರು ದಿನಾಂಕ: 22-04-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಇಟ್ಟು ತಂದೆ ಅಂತೋನಿ ಪುಡ್ತಾದ್, ಪ್ರಾಯ-49 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಕ್ಕಬೆಂಗಳೆ ಗ್ರಾಮ, ಬೆಂಗಳೆ, ತಾ: ಶಿರಸಿ. ಈತನು ದಿನಾಂಕ: 22-04-2021 ರಂದು 12-05 ಗಂಟೆಗೆ ಚಿಕ್ಕಬೆಂಗಳೆ ಗ್ರಾಮದ ಸಮುದಾಯ ಭವನದ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ತನ್ನ ಅಕ್ರಮ ಲಾಭಕೋಸ್ಕರ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕೂಗಿ ಕರೆದು ಜನರಿಂದ ಹಣವನ್ನು ಪಡೆದು ತನ್ನ ಕೈಯಲ್ಲಿರುವ ಚೀಟಿಯಲ್ಲಿ ಅಂಕೆ-ಸಂಖ್ಯೆಗಳನ್ನು ಬರೆದು ಕೊಡುತ್ತಿರುವಾಗ ದಾಳಿ ಮಾಡಿದಾಗ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ಓ.ಸಿ ಚೀಟಿ-01, 2). ನಗದು ಹಣ 75/- ರೂಪಾಯಿ, 3). ಬಾಲ್ ಪೆನ್-01 ನೇದವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಎಸ್. ಬಿರಾದಾರ, ಪಿ.ಎಸ್.ಐ, ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 22-04-2021 ರಂದು 13-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ನೀಲವ್ವಾ ಹಾಲಪ್ಪ ಪೂಜೇರಿ, ಸಾ|| ಹುಲ್ಲೊಳ್ಳಿ, ತಾ: ಹುಕ್ಕೇರಿ, ಜಿ: ಬೆಳಗಾವಿ.  ಪಿರ್ಯಾದಿಯವರ ಅಣ್ಣನಾದ ಕುಮಾರ ತಂದೆ ಕಾಳಪ್ಪ ಕಾಂಬಳೆ ಇವರು ಅವರ ಕುಟುಂಬದೊಂದಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಾರಾಪುರ ಗ್ರಾಮದಲ್ಲಿ ವಾಸವಾಗಿದ್ದು, ಇವರು ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಮಾಡಿಕೊಂಡಿರುತ್ತಾರೆ. ಪಿರ್ಯಾದಿಯವರ ಅಣ್ಣನಾದ ಕುಮಾರ ಇವರು ದಿನಾಂಕ: 19-03-2021 ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಲ್ಲೊಳ್ಳಿ ಗ್ರಾಮದವರಾದ ನಮೂದಿತ ಆರೋಪಿತಳಿಗೆ ಸಂಬಂಧಿಸಿದ ಬೋರವೆಲ್ ಗಾಡಿ ನಂ: ಕೆ.ಎ-01/ಎಮ್.ಇ-7797 ನೇದರ ಮೇಲೆ ಲೇಬರ್ ಕೆಲಸದ ಮೇಲೆ ಹೋಗಿದ್ದರು. ಹೀಗಿರುವಾಗ ದಿನಾಂಕ: 21-03-2021 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ಪಿರ್ಯಾದಿಯವರ ಅಣ್ಣ ರಾಮನಗರದ ಜಯಂತ ಕಾಫನೇ ಇವರ ಅಸು ಗ್ರಾಮದ ಜಮೀನನಲ್ಲಿ ಬೋರವೆಲ್ ಕೆಲಸದಲ್ಲಿದ್ದಾಗ,  ಬೋರವೆಲ್ ಹಾಕಲು ಸದರಿ ಬೋರವೆಲ್ ಗಾಡಿ ನಂ: ಕೆ.ಎ-01/ಎಮ್.ಇ-7797 ನೇದರಿಂದ ಬೋರವೇಲ್ ಪೈಪ್ ಗಳನ್ನು ಕೆಳಗೆ ಇಳಿಸುತ್ತಿರುವಾಗ ಪಿರ್ಯಾದಿಯವರ ಅಣ್ಣನಾದ ಕುಮಾರ ಈತನು ಕಾಲು ಜಾರಿ ಕೆಳಗೆ ಬಿದ್ದು ಬಲಗಾಲಿನ ಹಿಮ್ಮಡಿಗೆ ತೀವೃ ಸ್ವರೂಪದ ದುಃಖಾಪತವಾಗಿ, ಕುಮಾರ ಇವನಿಗೆ ಅಲ್ಲಿಯೇ ಇದ್ದ ಕುಮಾರನ ಸಹ ಕೆಲಸಗಾರರಾದ 1). ಯಲ್ಲಪ್ಪಾ ಹಾಲಟ್ಟಿ, 2). ಭೀಮಪ್ಪ ಕಾಂಬಳೆ, 3). ರಾಜು, 4). ಜಿನರಾಳ ಗ್ರಾಮದ ಕುಮಾರ ಇವರು ಎಬ್ಬಿಸಿ ನೀರು ಕುಡಿಸಿ ಉಪಚರಿಸಿ, ನಂತರ 1). ಯಲ್ಲಪ್ಪಾ ಹಾಲಟ್ಟಿ, 2). ಭೀಮಪ್ಪ ಕಾಂಬಳೆ ಇವರು ಸದರ ಪಿರ್ಯಾದಿಯವರ ಅಣ್ಣನಾದ ಕುಮಾರ ಇವನಿಗೆ ಜೋಯಿಡಾ ತಾಲೂಕಿನ ರಾಮನಗರದ ಯಾವುದೋ ಖಾಸಗಿ ಆಸ್ಪತ್ರೆಯೊಂದರಲ್ಲಿ ಉಪಚಾರ ಕೊಡಿಸಿ, ದಿನಾಂಕ: 22-03-2021 ರಂದು ಸಾರಾಪುರ ಗ್ರಾಮಕ್ಕೆ ತಂದು ಬಿಟ್ಟಿರುತ್ತಾರೆ. ನಂತರ ಪಿರ್ಯಾದಿಯವರ ಅಣ್ಣ ಕುಮಾರ ಇವನಿಗೆ ಅವರ ಮನೆಯಲ್ಲಿಯೇ ದಿನಾಂಕ: 29-03-2021 ರವರೆಗ ಉಪಚಾರ ನೀಡಿದ್ದು, ಪಿರ್ಯಾದಿಯವರ ಅಣ್ಣ ಕುಮಾರ ಇವನಿಗೆ ಬಲಗಾಲಿನ ಹಿಮ್ಮಡಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ನೋವು ಜಾಸ್ತಿಯಾಗಿದ್ದು, ನಂತರ ದಿನಾಂಕ: 29-03-2021 ರಂದು ಸದರಿ ಕುಮಾರ ಇವನಿಗೆ ತಾಲೂಕಾ ಆಸ್ಪತ್ರೆ ಹುಕ್ಕೇರಿಗೆ ಕರೆದುಕೊಂಡು ಬಂದು ಉಪಚಾರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿರುತ್ತಾರೆ. ಸದರಿ ಅವಘಡ ಸಂಭವಿಸಲು ಸದರಿ ಬೋರವೆಲ್ ಗಾಡಿ ನಂ: ಕೆ.ಎ-01/ಎಮ್.ಇ-7797 ನೇದರ ಮಾಲೀಕರಾದ ನಮೂದಿತ ಆರೋಪಿತಳು ಕೆಲಸಗಾರರ ಬಗ್ಗೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ಹಾಗೂ ನಿಷ್ಕಾಳಜಿತನ ವಹಿಸಿದ್ದರ ಕಾರಣ ಸದರಿ ಬೋರವೆಲ್ ಗಾಡಿ ನಂ: ಕೆ.ಎ-01/ಎಮ್.ಇ-7797 ನೇದರ ಮಾಲೀಕರಾದ ನಮೂದಿತ ಆರೋಪಿತಳ ಮೇಲೆ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ದೀಪಾ ಕೋಂ. ರಾಜೇಂದ್ರ ಮೋಶಿ, ಪ್ರಾಯ-33 ವರ್ಷ, ವೃತ್ತಿ-ಗೃಹಿಣಿ, ಸಾ|| ಕೋಚರಿ, ತಾ: ಹುಕ್ಕೇರಿ, ಜಿ: ಬೆಳಗಾವಿ ರವರು ದಿನಾಂಕ: 22-04-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 22-04-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಅರುಳದಾಸ್ ಎಮ್. ಎಸ್. ತಂದೆ ಸೌರಿದಾಸ್, ಪ್ರಾಯ-60 ವರ್ಷ, ವೃತ್ತಿ-ಚಾಲಕ, ಸಾ|| ಮನೆ ನಂ: 853, ಧಾರಾ ನಿವಾಸ್, ನಾರಗೇರಿ, ಪೋ: ಶೇಜವಾಡ, ಕಾರವಾರ. ಈತನು ವೈಯಕ್ತಿಕ ಸಾಲ ಮಾಡಿಕೊಂಡು ಈಗ ಕೆಲವು ದಿನಗಳಿಂದ ಕೆಲಸವು ಇಲ್ಲದೇ ಮನೆಯಲ್ಲಿ ಇರುತ್ತಿದ್ದವನು, ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 21-04-2021 ರಂದು ಬೆಳಿಗ್ಗೆ 09-30 ಗಂಟೆಯಿಂದ ದಿನಾಂಕ: 22-04-2021 ರಂದು 18-15 ಗಂಟೆಯ ನಡುವಿನ ಅವಧಿಯಲ್ಲಿ ಕಾರವಾರದ ನಾರಗೇರಿಯ ಜಿ.ಎನ್. ನ್ಯಾಷನಲ್ ಸ್ಕೂಲಿಗೆ ಸಂಬಂಧಪಟ್ಟ ಜಮೀನಿನ ಪಕ್ಕದ ಬೆಟ್ಟದಲ್ಲಿ ಇರುವ ಗೇರು ಮರಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬೆಸ್ಟಿನ್ ದಾಸ ತಂದೆ ಅರುಳದಾಸ್, ಪ್ರಾಯ-28 ವರ್ಷ, ವೃತ್ತಿ-ಬ್ಯಾಂಕ್ ನೌಕರ, ಸಾ|| ಮನೆ ನಂ: 853, ಧಾರಾ ನಿವಾಸ್, ನಾರಗೇರಿ, ಪೋ: ಶೇಜವಾಡ, ಕಾರವಾರ ರವರು ದಿನಾಂಕ: 22-04-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಹನಮವ್ವಾ ಗಂಡ ಮಾರುತಿ ನೇಕಾರ, ಪ್ರಾಯ-42 ವರ್ಷ, ಸಾ|| ಬಿ.ಇ.ಓ ಆಫೀಸ್ ಹಿಂದುಗಡೆ, ಸಾಗರ ರೋಡ್, ತಾ: ಭಟ್ಕಳ. ಇವಳು ಸುಮಾರು ದಿವಸಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದವಳು, ಅಸ್ವಸ್ಥಗೊಂಡು ದಿನಾಂಕ: 22-04-2021 ರಂದು ಮಧ್ಯಾಹ್ನ 14-00 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು, ಇದರ ಹೊರತು ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸೋಮ ತಂದೆ ಸುಕ್ರ ಹರಿಜನ, ಪ್ರಾಯ-55 ವರ್ಷ, ಸಾ|| ಕೋಟೇಶ್ವರ ರೋಡ್, ತಾ: ಭಟ್ಕಳ ರವರು ದಿನಾಂಕ: 22-04-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಪ್ರಮೋದ ತಂದೆ ಕಮಲಾಕರ ಹೊನ್ನಾವರ, ಪ್ರಾಯ-38 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಬೀರಪ್ಪ ದೇವಸ್ಥಾನ ಹತ್ತಿರ, ಶ್ರೀನಗರ, ತಾ: ಶಿರಸಿ. ಪಿರ್ಯಾದಿಯವರ ಅತ್ತೆಯ ಮಗನಾದ ಈತನು ಮೊದಲಿನಿಂದಲು ಮಾನಸಿಕನಾಗಿದ್ದವನು, ಯಾವಾಗಲೂ ವಿಪರೀತ ಸರಾಯಿ ಕುಡಿದುಕೊಂಡು ಕೇರಿ ಕೇರಿ ತಿರುಗುತ್ತಿದ್ದವನು, ದಿನಾಂಕ: 21-04-2021 ರಂದು ಸಾಯಂಕಾಲ 05-20 ಗಂಟೆಯ ಸುಮಾರಿಗೆ ಶಿರಸಿಯ ಗಾಯಿತ್ರಿ ನಗರದ 4 ನೇ ಕ್ರಾಸಿನಲ್ಲಿರುವ ರಾಯನ ಕೆರೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಯೇ ಹೊರತು, ತನ್ನ ಅತ್ತೆ ಮಗನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗುರು ಮಹಾದೇವ ಉಡುಪಿ, ಪ್ರಾಯ-48 ವರ್ಷ, ವೃತ್ತಿ-ಕಾಂಟ್ರ್ಯಾಕ್ಟರ್ ಕೆಲಸ, ಸಾ|| ರಾಮನಬೈಲ್, ನೀರಿನ ಟ್ಯಾಂಕ್ ಹತ್ತಿರ, ತಾ: ಶಿರಸಿ ರವರು ದಿನಾಂಕ: 22-04-2021 ರಂದು 09-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 23-04-2021 12:58 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080