ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 22-08-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 221/2021, ಕಲಂ: 447, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ವಿನೋದ ತಂದೆ ಕೇತ್ರಪಾಲ ಆಚಾರಿ, ಪ್ರಾಯ-30 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಕೊಳಗದ್ದೆ, ತಾ: ಹೊನ್ನಾವರ, 2]. ಸುನೀಲ ತಂದೆ ಪರಮೇಶ್ವರ ಆಚಾರಿ, ಪ್ರಾಯ-27 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಕೊಳಗದ್ದೆ, ಖರ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 21-08-2021 ರಂದು ರಾತ್ರಿ 21-15 ಗಂಟೆಗೆ ಪಿರ್ಯಾದಿಯ ಹೆಂಡತಿಯ ತಮ್ಮನಾದ ಕೇಶವ ತಂದೆ ಗಣಪಯ್ಯ ಗೌಡ, ಪ್ರಾಯ-40 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಕೊಳಗದ್ದೆ, ತಾ: ಹೊನ್ನಾವರ ಈತನ ಮನೆಯ ಹತ್ತಿರ ಅಕ್ರಮ ಪ್ರವೇಶ ಮಾಡಿ, ದುಡ್ಡಿನ ವ್ಯವಹಾರವಾಗಿ ಕೇಶವ ತಂದೆ ಗಣಪಯ್ಯ ಗೌಡ, ಈತನಿಗೆ ದುಡ್ಡು ಕೊಡಲು ಕೇಳಿದಾಗ ಕೇಶವ ತಂದೆ ಗಣಪಯ್ಯ ಗೌಡ ಈತನು ‘ಇನ್ನೊಂದು ಎರಡು ದಿನದಲ್ಲಿ ಕೊಡುತ್ತೇನೆ’ ಎನ್ನುವುದಾಗಿ ಹೇಳಿದಾಗ ಆರೋಪಿತರಿಬ್ಬರೂ ಸೇರಿ ಕೇಶವ ತಂದೆ ಗಣಪಯ್ಯ ಗೌಡ, ಈತನಿಗೆ ‘ಬೋಳಿ ಮಗನೇ, ಸೂಳೆ ಮಗನೇ’ ಅಂತಾ ಅವಾಚ್ಯವಾಗಿ ಬೈಯ್ದು, ತಾವು ತಂದಿದ್ದ ಕಟ್ಟೆಗೆಯ ದೊಣ್ಣೆಯಿಂದ ಕೇಶವ ತಂದೆ ಗಣಪಯ್ಯ ಗೌಡ ಈತನ ತಲೆಗೆ ಹಾಗೂ ಮೈಮೇಲೆ ಹೊಡೆದು ಗಾಯನೋವು ಪಡಿಸಿದ್ದು, ಆಗ ಕೇಶವ ತಂದೆ ಗಣಪಯ್ಯ ಗೌಡ, ಈತನ ಕೂಗಾಟ ಕೇಳಿ ಊರ ಜನರು ಸೇರುವುದನ್ನು ನೋಡಿದ ಆರೋಪಿತರು ಮನೆಯಿಂದ ಹೋಗುವಾಗ ಕೇಶವ ತಂದೆ ಗಣಪಯ್ಯ ಗೌಡ, ಈತನಿಗೆ ‘ಇವತ್ತು ತಪ್ಪಿಸಿಕೊಂಡೆ. ಇನ್ನೊಂದು ದಿನ ನಿನ್ನನ್ನು ಕೊಂದು ಹೊಳೆಗೆ ಹಾಕುತ್ತೇವೆ’ ಎನ್ನುವುದಾಗಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಈಶ್ವರ ತಂದೆ ಕೃಷ್ಣ ಪಟಗಾರ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊಳಗದ್ದೆ, ತಾ: ಹೊನ್ನಾವರ ರವರು ದಿನಾಂಕ: 22-08-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 222/2021, ಕಲಂ: 323, 324, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೇಶವ ತಂದೆ ಗಣಪಯ್ಯ ಗೌಡ, ಪ್ರಾಯ-45 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಕೊಳಗದ್ದೆ, ಖರ್ವಾ, ತಾ: ಹೊನ್ನಾವರ. ಈತನು ಪಿರ್ಯಾದಿಯೊಂದಿಗೆ ಈ ಹಿಂದಿನಿಂದಲೂ ತಂಟೆ ತಕರಾರು ಮಾಡಿಕೊಂಡು ಬಂದವನು, ದಿನಾಂಕ: 21-08-2021 ರಂದು ರಾತ್ರಿ 20-15 ಗಂಟೆಗೆ ಪಿರ್ಯಾದಿ ಮತ್ತು ಪಿರ್ಯಾದಿಯ ದೊಡ್ಡಪ್ಪನ ಮಗನಾದ ವಿನೋದ ತಂದೆ ಕ್ಷೇತ್ರಪಾಲ ಆಚಾರಿ, ಪ್ರಾಯ-26 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಖರ್ವಾ ಕ್ರಾಸ್, ತಾ; ಹೊನ್ನಾವರ ಇಬ್ಬರೂ ತಮ್ಮ ಊರಿನ ರಾಮ ಗೌಡ ಈತನ ಅಂಗಡಿಯಲ್ಲಿ ತಿಂಡಿಯನ್ನು ಖರೀದಿ ಮಾಡಿ ಮನೆಗೆ ಹೋಗಲು ಬರುತ್ತಿರುವಾಗ ನಮೂದಿತ ಆರೋಪಿತನು ಪಿರ್ಯಾದಿ ಮತ್ತು ಪಿರ್ಯಾದಿಯ ದೊಡ್ಡೊಪ್ಪನ ಮಗನಾದ ವಿನೋದ ಈತನಿಗೆ ಅಡ್ಡಗಟ್ಟಿ ತಡೆದು ‘ಬೋಳಿ ಮಕ್ಕಳಾ, ಸೂಳೆ ಮಕ್ಕಳಾ, ನೀವು ಯಾಕೇ ಇಲ್ಲಿ ಬಂದಿದ್ದಿರಾ?‘ ಅಂತಾ ಅವಾಚ್ಯವಾಗಿ ಬೈಯ್ದಿದ್ದು, ಆಗ ಪಿರ್ಯಾದಿಯು ಆರೋಪಿತನಿಗೆ ‘ಈ ರೀತಿ ಮಾತನಾಡುವುದು ಸರಿಯಲ್ಲ‘ ಅಂತಾ ಹೇಳಿದಾಗ ಆರೋಪಿತನು ಪಿರ್ಯಾದಿಗೆ ಕೈಯಿಂದ ಹೊಡೆದು ನೆಲಕ್ಕೆ ದೂಡಿ ಹಾಕಿ, ತನ್ನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿಯ ದೊಡ್ಡಪ್ಪನ ಮಗನಾದ ವಿನೋದ ಈತನಿಗೆ ಕತ್ತಿಯಿಂದ ಹೊಡೆದಿದ್ದು, ಆತನ ಎಡಗೈಗೆ ಗಾಯನೋವು ಆಗಲು ಕಾರಣನಾಗಿದ್ದಲ್ಲದೇ, ಈ ಗಲಾಟೆ ನೋಡಿ ಊರ ಜನರು ಬರುವುದನ್ನು ನೋಡಿದ ಆರೋಪಿತನು ‘ಈ ದಿನ ತಪ್ಪಿಸಿಕೊಂಡಿರಿ. ಇನ್ನೊಂದು ದಿನ ನಿಮ್ಮನ್ನು ಕೊಚ್ಚಿ ಹೊಳೆಗೆ ಹಾಕುತ್ತೇನೆ‘ ಅಂತಾ ಹೇಳಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಸುನಿಲ ತಂದೆ ಪರಮೇಶ್ವರ ಆಚಾರಿ, ಪ್ರಾಯ-23 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಕೊಳಗದ್ದೆ, ಖರ್ವಾ, ತಾ: ಹೊನ್ನಾವರ ರವರು ದಿನಾಂಕ: 22-08-2021 ರಂದು 01-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 223/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುರೇಶ ಜಿ. ತಂದೆ ಎನ್. ಗಂಗಾರಾಮಯ್ಯ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ನಂ: 26-ಎ, ನಾರ್ಥ್ ರೈಲ್ವೇ ಸ್ಟೇಷನ್ ರೋಡ್, ತಿರುವೋಟಿಯೂರ್, ಚೆನೈ, ತಮಿಳುನಾಡು-600019 (ಲಾರಿ ನಂ: ಎ.ಪಿ-27/ಯು.ಬಿ-7799 ನೇದರ ಚಾಲಕ). ಈತನು ಗ್ರಾನೈಟ್ ಲೋಡ್ ಇರುವ ತನ್ನ ಲಾರಿ ನಂ: ಎ.ಪಿ-27/ಯು.ಬಿ-7799 ನೇದನ್ನು ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಹೊನ್ನಾವರ ಗೇರುಸೊಪ್ಪಾದ ಸೂಳೆಮುರ್ಕಿ ಕ್ರಾಸಿನಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ನಿಷ್ಕಾಳಜೀತನದಿಂದ ದಿನಾಂಕ: 19-08-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ರಸ್ತೆಯ ಬದಿಯಲ್ಲಿನ ತಗ್ಗಿನಲ್ಲಿ ಪಲ್ಟಿ ಕೆಡವಿ ಅಪಘಾತ ಪಡಿಸಿ, ಲಾರಿ ಕ್ಲೀನರ್ ಆಗಿದ್ದ ಪಿರ್ಯಾದಿಗೆ ಬಲಗಾಲಿಗೆ ಮತ್ತು ಕೈಗೆ ಸಣ್ಣಪುಟ್ಟ ರಕ್ತಗಾಯ ಪಡಿಸಿ, ಆರೋಪಿ ಚಾಲಕನು ತನಗೂ ಸಹ ಸಣ್ಣಪುಟ್ಟ ಗಾಯನೋವು ಪಡಿಸಿಕೊಂಡು, ಲಾರಿ ಜಖಂ ಆಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಮೋರಿಸ್ ಹರಿ ಕೃಷ್ಣ ತಂದೆ ಮೋಹನರಾವ್, ಪ್ರಾಯ-37 ವರ್ಷ, ವೃತ್ತಿ-ಲಾರಿ ಕ್ಲೀನರ್, ಸಾ|| 39-229, ಗೊರ್ಲಮೆಟ್ಟಾ, ಅಡ್ಡಂಕಿ, ಪ್ರಕಾಸಂ, ಆಂಧ್ರಪ್ರದೇಶ-523203 ರವರು ದಿನಾಂಕ: 22-08-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 116/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಮಾರುತಿ ಎರ್ಟಿಗಾ ಕಾರಿನಲ್ಲಿ ಬಂದ ಯಾರೋ 4 ಜನ ಅಪರಿಚಿತ ಕಳ್ಳರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 22-08-2021 ರಂದು ಬೆಳಿಗ್ಗೆ 04-25 ಗಂಟೆಗೆ ಗುಣವಂತೆ ಗ್ರಾಮದಲ್ಲಿರುವ ಮರಿ ಭಟ್ಟರ ಹೊಟೇಲ್ ಮುಂದೆ ನಿಂತುಕೊಂಡಿದ್ದ ಪಿರ್ಯಾದಿಯ ಸುಮಾರು 4,000/- ರೂಪಾಯಿ ಮೌಲ್ಯದ ಸುಮಾರು 4 ಫೂಟ್ ಎತ್ತರದ ಕಪ್ಪು ಬಿಳಿ ಬಣ್ಣವಿರುವ ಆಕಳನ್ನು ಹಿಡಿದು, ಅದನ್ನು ಅವರು ತಂದಿರುವ ಮಾರುತಿ ಎರ್ಟಿಗಾ ಕಾರಿನ ಡಿಕ್ಕಿಯಲ್ಲಿ ಹಾಕಿ ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಪರಮೇಶ್ವರ ಯಾಜಿ, ಪ್ರಾಯ-56 ವರ್ಷ, ವೃತ್ತಿ-ಪೋಸ್ಟ್ ಮಾಸ್ಟರ್, ಸಾ|| ಗುಣವಂತೆ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 22-08-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 133/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಫ್ರಾನ್ಸಿಸ್ ತಂದೆ ಜೂಜೆ ಕಲಘಟಗಿ, ಪ್ರಾಯ-31 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಇಂದಿರಾನಗರ, ಕಿರವತ್ತಿ, ತಾ: ಯಲ್ಲಾಪುರ, 2]. ಮೌಲಾಲಿ ತಂದೆ ಶರೀಫ್ ಸಾಬ್ ನವಾಬ್, ಪ್ರಾಯ-37 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಇಂದಿರಾನಗರ, ಕಿರವತ್ತಿ, ತಾ: ಯಲ್ಲಾಪುರ, 3]. ರಾಮಚಂದ್ರ ತಂದೆ ಸುಬ್ರಾಯ ನಾಯಕ, ಪ್ರಾಯ-36 ವರ್ಷ, ವೃತ್ತಿ-ಚಾಲಕ, ಸಾ|| ಜಯಂತಿನಗರ, ಕಿರವತ್ತಿ, ತಾ: ಯಲ್ಲಾಪುರ, 4]. ಅಲ್ತಾಫ್ ತಂದೆ ಭಾಷಾಸಾಬ್ ಫಿರಾ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಇಂದಿರಾನಗರ, ಕಿರವತ್ತಿ, ತಾ: ಯಲ್ಲಾಪುರ, 5]. ಅನ್ವರಬಾಷಾ ತಂದೆ ಹಟೇಲಸಾಬ್ ತಾಳಿಕೋಟಿ, ಪ್ರಾಯ-34 ವರ್ಷ, ವೃತ್ತಿ-ಚಾಲಕ, ಸಾ|| ಇಂದಿರಾನಗರ, ಕಿರವತ್ತಿ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರು ದಿನಾಂಕ: 21-08-2021 ರಂದು ಸಾಯಂಕಾಲ 07-30 ಗಂಟೆಗೆ ಯಲ್ಲಾಪುರ ತಾಲೂಕಿನ ಡೌಗಿನಾಲ್ ತೆಂಗಿನಕೇರಿ ರಸ್ತೆಯ ಡೌಗಿನಾಲ್ ಕ್ರಾಸಿನಿಂದ 02 ಕಿ.ಮೀ ತೆಂಗಿನಕೇರಿ ಕಡೆಗೆ ಇರುವ ಅರಣ್ಯದಲ್ಲಿಯ ಸಾರ್ವಜನಿಕ ಸ್ಧಳದಲ್ಲಿ ತಮ್ಮ ತಮ್ಮ ಲಾಭಕ್ಕಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಜೂಗಾರಾಟ ನಡೆಸಿದಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದಾಗ ನಗದು ಹಣ 8,700/- ರೂಪಾಯಿ ಹಾಗೂ ಜೂಗಾರಟದ ಸಲಕರಣೆಗಳೊಂದಿಗೆ ಆರೋಪಿತರು ಸೆರೆ ಸಿಕ್ಕ ಬಗ್ಗೆ ಸ||ತ|| ಪಿರ್ಯಾದಿ ಶ್ರೀ ಮಂಜುನಾಥ ಗೌಡರ್, ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 22-08-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 134/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಭವಿತ್ ತಂದೆ ಭಾಸ್ಕರ್ ಪೂಜಾರಿ, ವೃತ್ತಿ-ವಿದ್ಯಾರ್ಥಿ, ಸಾ|| ಆಂಜನೇಯ ನಗರ, ಬೆಳಗಾವಿ (ಕಾರ್  ನಂ: ಕೆ.ಎ-22/ಪಿ-6259 ನೇದರ ಚಾಲಕ). ಈತನು ದಿನಾಂಕ: 21-08-2021 ರಂದು ಬೇಳಿಗ್ಗೆ 09-30 ಗಂಟೆಯ ಸುಮಾರಿಗೆ ಹಳಿಯಾಳ-ಯಲ್ಲಾಪುರ ರಸ್ತೆಯಲ್ಲಿ ಯಲ್ಲಾಪುರ ತಾಲೂಕಿನ ತಾಟವಾಳ ಗ್ರಾಮದ ಸಮೀಪ ಹಾಯ್ದು ಹೋದ ರಸ್ತೆಯಲ್ಲಿ ತನ್ನ ಬಾಬ್ತು ಕಾರ್ ನಂ: ಕೆ.ಎ-22/ಪಿ-6259 ನೇದರಲ್ಲಿ ಸಾಕ್ಷಿದಾರ ಗಾಯಾಳು ನವೀನ್ ತಂದೆ ಮಲ್ಲಿಕಾರ್ಜುನ್ ಅವರಾಧಿ, ಪವನ್ ತಂದೆ ವಿನಾಯಕ ಕುಲಕರ್ಣಿ, ನಿಖಿಲೇಶ ತಂದೆ ಚಂದ್ರಶೇಖರ್ ಹಿರೇಮಠ್ ರವರನ್ನು ಕೂಡ್ರಿಸಿಕೊಡು ಹಳಿಯಾಳ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ  ಕಾರನ್ನು ಚಲಾಯಿಸಿಕೊಂಡು ಬಂದು ರಸ್ತೆಯ ತಿರುವಿನಲ್ಲಿ ತನ್ನ ಕಾರನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಅಪಾಘಾತ ಪಡಿಸಿ, ಕಾರಿನಲ್ಲಿದ್ದ ಸಾಕ್ಷಿದಾರ ನವೀನ್, ಪವನ್, ನಿಖಿಲೇಶ ರವರಿಗೆ ಮೈ ಮೇಲೆ ಅಲ್ಲಲ್ಲಿ ಸಾದಾ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಸಾದಾ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ಬಸವರಾಜ್ ವಕ್ಕುಂದ್, ಪ್ರಾಯ-34 ವರ್ಷ, ವೃತ್ತಿ-ಖಾಸಗಿ ನೌಕರ, ಸಾ|| ಆಂಜನೇಯ ನಗರ, ಬೆಳಗಾವಿ ರವರು ದಿನಾಂಕ: 22-08-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 135/2021, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜಾ ತಂದೆ ಸೆಲ್ವಂ, ಪ್ರಾಯ-31 ವರ್ಷ, ವೃತ್ತಿ-ಟ್ಯಾಂಕರ್ ಲಾರಿ ಚಾಲಕ, ಸಾ|| ವಟಕಮಾಡು, ತೆಲುಗೈ, ತಾ: ತುರೈವೂರು ಜಿ: ತಿರುಚನಾಪಳ್ಳಿ, ತಮಿಳನಾಡು (ಟ್ಯಾಂಕರ್ ಲಾರಿ ನಂ: ಕೆ.ಎ-21/ಎ-4816 ನೇದರ ಚಾಲಕ). ಈತನು ದಿನಾಂಕ: 22-08-2021 ರಂದು ಸಾಯಂಕಾಲ 06-50 ಗಂಟೆಯ ಸುಮಾರಿಗೆ ತನ್ನ ಟ್ಯಾಂಕರ್ ಲಾರಿ ನಂ: ಕೆ.ಎ-21/ಎ-4816 ನೇದನ್ನು ಯಲ್ಲಾಪುರ ಕಡೆಯಿಂದ ಕಲಘಟಗಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ಯಲ್ಲಾಪುರ ತಾಲೂಕಿನ ಮಲ್ಲಿಕಾ ಹೊಟೇಲ್ ಎದುರುಗಡೆ ಕಾರವಾರ-ಬಳ್ಳಾರಿ ರಾಷ್ಟ್ರಿಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಎದುರಿನಿಂದ ಅಂದರೆ ಹಳಿಯಾಳ ಕ್ರಾಸ್ ಕಡೆಯಿಂದ ಯಲ್ಲಾಪುರ ಕಡೆಗೆ ನಿಧಾನವಾಗಿ ರಸ್ತೆಯ ಎಡಬದಿಯಿಂದ ಲೂನಾ ಎಕ್ಸೆಲ್ ಮೋಟಾರ್ ಸೈಕಲ್ ನಂ: ಕೆ.ಎ-31/ಕೆ-0032 ನೇದರ ಮೇಲೆ ಗಾಯಾಳು ಕೃಷ್ಣ ತಂದೆ ಪರಶ್ಯಾ ಮರಾಠಿ ರವರನ್ನು ಕೂಡ್ರಿಸಿಕೊಂಡು ಬರುತ್ತಿದ್ದ ಮೃತ: ಬಾಳಾ ಗಾವಡೆ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೃತ: ಬಾಳಾ ಗಾವಡೆ ಮತ್ತು ಅವನ ಹಿಂಬದಿ ಸವಾರ: ಕೃಷ್ಣಾ ರವರಿಗೆ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಕೆಡವಿ, ಮೃತ: ಬಾಳಾ ಈತನಿಗೆ ಹಣೆಗೆ, ಎಡಗೈ ಮತ್ತು ಎಡಗಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿ ಸ್ಥಳದಲ್ಲಿಯೇ ಮರಣವನ್ನುಂಟು ಪಡಿಸಿದ್ದಲ್ಲದೇ, ಹಿಂಬದಿ ಸವಾರ ಕೃಷ್ಣಾ ರವರ ಬಲಗಾಲಿನ ಹಿಮ್ಮಡಿ ಗಂಟಿನ ಮೇಲ್ಗಡೆ ಸಾದಾ ಗಾಯ ಹಾಗೂ ತಲೆಗೆ ಗಂಭೀರ ಗಾಯನೋವು ಪಡಿಸಿ, ಮೃತನ ಮೋಟಾರ್ ಸೈಕಲ್ ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ವಾಸುದೇವ ತಂದೆ ಲಕ್ಷ್ಮಣ ಗಾವಡೆ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಬ್ಬಿನಗುಳಿ, ಸಹಸ್ರಳ್ಳಿ, ತಾ: ಯಲ್ಲಾಪುರ ರವರು ದಿನಾಂಕ: 22-08-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಸನ್ನ ತಂದೆ ಸುಬ್ರಾಯ ಹೆಗಡೆ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನಕ್ಷೆ, ಪೋ: ಬಕ್ಕಳ, ತಾ: ಶಿರಸಿ (ಓಮಿನಿ ನಂ: ಕೆ.ಎ-31/ಎಮ್-7959 ನೇದರ ಚಾಲಕ). ಈತನು ದಿನಾಂಕ: 22-08-2021 ರಂದು 13-00 ಗಂಟೆಯ ಸುಮಾರಿಗೆ ತಾನು ಚಾಲಯಿಸುತ್ತಿದ್ದ ಓಮಿನಿ ನಂ: ಕೆ.ಎ-31/ಎಮ್-7959 ನೇದನ್ನು ಬಕ್ಕಳ ಕಡೆಯಿಂದ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಕ್ಕಳ ಕ್ರಾಸ್ ಹತ್ತಿರ ಶಿರಸಿ-ಜಡ್ಡಿಗದ್ದೆ ಮುಖ್ಯ ರಸ್ತೆಯಲ್ಲಿ ಬರ-ಹೋಗುವ ವಾಹನಗಳನ್ನು ಗಮನಿಸದೇ, ವಾನಳ್ಳಿ ಕಡೆಯಿಂದ ಶಿರಸಿ ಕಡೆಗೆ ಪಿರ್ಯಾದಿಯು ಚಲಾಯಿಸಿಕೊಂಡು ಹೋಗುತ್ತಿದ್ದ ಓಮಿನಿ ನಂ: ಕೆ.ಎ-31/ಎಮ್-5951 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ವಾಹನ ಜಖಂಗೊಳಿಸಿದ್ದಲ್ಲದೇ, ಪಿರ್ಯಾದಿಗೆ ಬಲಗೈ ಅಂಗೈ ಮೇಲೆ, ಬಲಗೈ ಮೊಣಗಂಟಿನ ಕೆಳಗೆ ತೆರಚಿದ ಗಾಯನೋವು ಹಾಗೂ ಬಲಗಾಲ ಮೊಣಕಾಲ ಗಂಟಿನ ಕೆಳಗೆ ಒಳನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸಂಜಯ ತಂದೆ ಶಂಕರ ದೇಶಭಂಡಾರಿ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಬೆಂಡೆಗದ್ದೆ, ಪುಟ್ಟನ ಮನೆ, ತಾ: ಶಿರಸಿ ರವರು ದಿನಾಂಕ: 22-08-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆನಂದ ತಂದೆ ದುರ್ಗಪ್ಪಾ ಭೋವಿವಡ್ಡರ್, ಪ್ರಾಯ-26 ವರ್ಷ, ವೃತ್ತಿ-ಟ್ರ್ಯಾಕ್ಟರ್ ಚಾಲಕ, ಸಾ|| ಗಾಂವಠಾಣ, ದಾಂಡೇಲಿ (ರಾಯಲ್ ಎನಫೀಲ್ಡ್ ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-7959 ನೇದರ ಸವಾರ). ಈತನು ದಿನಾಂಕ: 22-08-2021 ರಂದು 18-30 ಗಂಟೆಗೆ ಜೋಯಿಡಾ ತಾಲೂಕಿನ ಜನತಾ ಕಾಲೋನಿಯ ಹತ್ತಿರ ದಾಂಡೇಲಿ-ಜೋಯಿಡಾ ರಾಜ್ಯ ಹೆದ್ದಾರಿಯ ಮೇಲೆ ತನ್ನ ರಾಯಲ್ ಎನಫೀಲ್ಡ್ ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-7959 ನೇದನ್ನು ಜೋಯಿಡಾ ಕಡೆಯಿಂದ ದಾಂಡೇಲಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ ಮೋಟಾರ್ ಸೈಕಲನ್ನು ರಾಜ್ಯ ಹೆದ್ದಾರಿಯ ಮೇಲೆ ಕೆಡವಿ, ಅಪಘಾತ ಪಡಿಸಿ, ತನ್ನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತಿದ್ದ ಸವಾರ ಸಿದ್ದಪ್ಪಾ @ ಮಹೇಶ ತಂದೆ ಶಿವರಾಮ ಭೋವಿವಡ್ಡರ್, ಪ್ರಾಯ-23 ವರ್ಷ, ವೃತ್ತಿ-ಟ್ರ್ಯಾಕ್ಟರ್ ಚಾಲಕ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ದಾಂಡೇಲಿ ಈತನಿಗೆ ಎಡಬದಿಯ ಹುಬ್ಬಿನ ಮೇಲೆ, ಎಡಗಣ್ಣಿನ ಕೆಳಗೆ, ಮೂಗಿಗೆ ಹಾಗೂ ಮೇಲಿನ ತುಟಿಗೆ ತೆರಚಿದ ರಕ್ತದ ಗಾಯನೋವು ಪಡಿಸಿ, ತನಗೂ ಸಹ ಎಡಗೈ ಹಸ್ತಕ್ಕೆ ಸಣ್ಣ ಪ್ರಮಾಣದ ತೆರಚಿದ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸಂಜೀವ ತಂದೆ ನಿಂಗಪ್ಪಾ ಟೋಸೂರ, ಪ್ರಾಯ-31 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನಲ್ಲಿ ಕೆಲಸ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ದಾಂಡೇಲಿ ರವರು ದಿನಾಂಕ: 22-08-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 22-08-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 27/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಲಕ್ಷ್ಮೀನಾರಾಯಣ ತಂದೆ ರಾಮಚಂದ್ರ ಹೆಗಡೆ, ಪ್ರಾಯ-52 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಿಬ್ನಳ್ಳಿ, ಉಚಗೇರಿ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದಿಯ ತಂದೆಯವರಾದ ಇವರು ದಿನಾಂಕ: 22-08-2021 ರಂದು ಬೆಳಿಗ್ಗೆ 05-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಉಚಗೇರಿ ಗ್ರಾಮದ ಬಿಬ್ನಳ್ಳಿಯಲ್ಲಿರುವ ತನ್ನ ಮನೆಯಿಂದ ಎದ್ದು, ತಮ್ಮ ತೊಟದಲ್ಲಿರುವ ಚೌಡಿ ಮನೆಗೆ ಕೈ ಮುಗಿಯಲು ಹೋದಾಗ, ಚೌಡಿ ಮನೆಯ ಹತ್ತಿರ ಇರುವ ಅವರದೇ ಬಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬಾವಿಯ ನೀರಿನಲ್ಲಿ ಮುಳುಗಿ ಮೃತಪಟ್ಟವರಿಗೆ ಬೆಳಿಗ್ಗೆ 08-30 ಗಂಟೆಯ ಸುಮಾರಿಗೆ ಪಿರ್ಯಾದಿಯವರು ನೋಡಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಕುರಿತು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ಲಕ್ಷ್ಮೀನಾರಾಯಣ ಹೆಗಡೆ, ಪ್ರಾಯ-21 ವರ್ಷ, ವೃತ್ತಿ-ಸಂಸ್ಕ್ರತ ಕಾಲೇಜಿನ ವಿದ್ಯಾರ್ಥಿ, ಸಾ|| ಬಿಬ್ನಳ್ಳಿ, ಉಚಗೇರಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 22-08-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 23-08-2021 06:08 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080