ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 22-12-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 188/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜನ್ ತಂದೆ ತಿಮ್ಮಣ್ಣ ನಾಯಕ, ಸಾ|| ಭಾವಿಕೇರಿ, ತಾ: ಅಂಕೋಲಾ (ಮೋಟಾರ್ ಸೈಕಲ್ ನಂ: ಕೆ.ಎ-30/ಆರ್-9499 ನೇದರ ಚಾಲಕ). ಈತನು ದಿನಾಂಕ: 20-12-2021 ರಂದು 08-45 ಗಂಟೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-30/ಆರ್-9499 ನೇದನ್ನು ಅಂಕೋಲಾ ಶಹರದ ದಿನಕರ ದೇಸಾಯಿ ರಸ್ತೆಯ ಮೇಲೆ ಜಿ.ಸಿ ಕಾಲೇಜ್ ಸರ್ಕಲ್ ಕಡೆಯಿಂದ ಅಂಕೋಲಾ ಬಸ್ ನಿಲ್ದಾಣದ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಎಡಬದಿಯ ಕಚ್ಚಾ ರಸ್ತೆಯ ಮೇಲಿನಿಂದ ನಡೆದುಕೊಂಡು ಹೋಗುತ್ತಿದ್ದ ಗಣಪತಿ ತಂದೆ ಏಸು ಗೌಡ, ಪ್ರಾಯ-27 ವರ್ಷ, ಸಾ|| ಬಾಳೆಗುಳಿ, ತಾ: ಅಂಕೋಲಾ, ಈತನಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎಡಗಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಗೋವಿಂದ ತಂದೆ ಕುಸ್ಲು ಗೌಡ, ಪ್ರಾಯ-40 ವರ್ಷ, ವೃತ್ತಿ-ವಾಟರ್ ಸಪ್ಲಾಯ್ ನಲ್ಲಿ ಕೆಲಸ, ಸಾ|| ಬಾಳೆಗುಳಿ, ತಾ: ಅಂಕೋಲಾ ರವರು ದಿನಾಂಕ: 22-12-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 220/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣೇಶ ತಂದೆ ಹನುಮಂತಪ್ಪ ಲಮಾಣಿ, ಪ್ರಾಯ-22 ವರ್ಷ, ವೃತ್ತಿ-ಟೈಲ್ಸ್ ಕೆಲಸ, ಸಾ|| ಬೇಗಾನಪೇಟೆ, ಗುಂಟೂರು, ತಾ: ಹಾನಗಲ್, ಜಿ: ಹಾವೇರಿ (ಮೋಟಾರ್ ಸೈಕಲ್ ನಂ: ಕೆ.ಎ-27/ಇ.ಕ್ಯೂ-3161 ನೇದರ ಚಾಲಕ). ಈತನು ದಿನಾಂಕ: 22-12-2021 ರಂದು-13-00 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಕುಮಟಾ-ಅಂಕೋಲಾ ಡಾಂಬರ್ ರಸ್ತೆಯ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-27/ಇ.ಕ್ಯೂ-3161 ನೇದರ ಹಿಂಬದಿಯಲ್ಲಿ ರಾಮಚಂದ್ರ ತಂದೆ ಭೀಮಪ್ಪ ನಾಯಕ, ಪ್ರಾಯ-22 ವರ್ಷ, ವೃತ್ತಿ-ಟೈಲ್ಸ್ ಕೆಲಸ, ಸಾ|| ಬೇಗಾನಪೇಟೆ, ಗುಂಟೂರು, ತಾ: ಹಾನಗಲ್, ಜಿ: ಹಾವೇರಿ ಇವರನ್ನು ಕೂರಿಸಿಕೊಂಡು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಕುಮಟಾದ ತಂಡ್ರಕುಳಿಯ ಹತ್ತಿರ ತಮ್ಮ ಮುಂದಿನಿಂದ ಹೋಗುತ್ತಿದ್ದ ಲಾರಿ ನಂ: ಎಮ್.ಎಚ್-09/ಎಚ್.ಎಚ್-3791 ಓವರಟೇಕ್ ಮಾಡಲು ಹೋಗಿ ರಸ್ತೆಯಲ್ಲಿ ಅಡ್ಡವಾಗಿ ಬಂದ ದನವನ್ನು ತಪ್ಪಿಸಲು ಹೋಗಿ ಲಾರಿ ನಂ: ಎಮ್.ಎಚ್-09/ಎಚ್.ಎಚ್-3791 ನೇದರ ಮುಂಭಾಗದ ಬಲಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿಕೊಂಡು ಮೋಟಾರ್ ಸೈಕಲ್ ಲಾರಿಯ ಬಲಭಾಗಕ್ಕೆ ಸಿಲುಕಿ ಜಖ ಗೊಂಡಿದ್ದು, ಮೋಟಾರ್ ಸೈಕಲ್ ಸವಾರಿಬ್ಬರೂ ರಸ್ತೆಯ ಬಲಬದಿಯಲ್ಲಿ ಹಾರಿ ಬಿದ್ದು, ಮೋಟಾರ್ ಸೈಕಲ್ ಚಾಲಕನಾದ ನಮೂದಿತ ಆರೋಪಿತನಿಗೆ ತಲೆಗೆ ಪೆಟ್ಟಾಗಿದ್ದು, ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತ ರಾಮಚಂದ್ರ ಈತನಿಗೆ ಹಣೆಗೆ ಹಾಗೂ ಎರಡು ಕೈ ಕಾಲುಗಳಿಗೆ ತೆರಚಿದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅಮರಗಿರಿ ತಂದೆ ಪ್ರೇಮಾಗಿರಿ ಗೋಸ್ವಾಮಿ, ಪ್ರಾಯ-46 ವರ್ಷ, ವೃತ್ತಿ-ಚಾಲಕ/ಕ್ಲೀನರ್, ಸಾ|| ಶೀತಲಮಾತಾ ಗಲ್ಲಿ, ತಾ: ಬಿಕನಗಾಂವ, ಜಿ: ಕರಗೋನ, ಮಧ್ಯಪ್ರದೇಶ ರಾಜ್ಯ ರವರು ದಿನಾಂಕ: 22-12-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 221/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಪುರಂದರ ತಂದೆ ಮಾಬ್ಲೇಶ್ವರ ಗುನಗಾ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾಸೂರು, ತಾ: ಕುಮಟಾ. ಈತನು ದಿನಾಂಕ: 22-12-2021 ರಂದು 17-45 ಗಂಟೆಗೆ  ಕುಮಟಾ ತಾಲೂಕಿನ ಮಾಸೂರು ಬಬ್ರು ದೇವರ ದೇವಸ್ಥಾನದ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಅದನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ನಗದು ಹಣ 1,200/- ರೂಪಾಯಿ ಹಾಗೂ ಓ.ಸಿ ಜುಗಾರಾಟದ ಸಲಕರಣೆಗಳೊಂದಿಗೆ ದಾಳಿಯ ವೇಳೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ (ತನಿಖೆ-1), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 22-12-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 22-12-2021

at 00:00 hrs to 24:00 hrs

 

ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

 

 

 

 

ಇತ್ತೀಚಿನ ನವೀಕರಣ​ : 26-12-2021 05:24 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080