ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 22-02-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 324, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುರೇಶ ತಂದೆ ಮೋಹನ ಅಂಬಿಗ, ಸಾ|| ಹಟ್ಟಿಕೇರಿ, ತಾ: ಅಂಕೋಲಾ. ನಮೂದಿತ ಆರೋಪಿತನು ದಿನಾಂಕ: 22-02-2021 ರಂದು ಬೆಳಿಗ್ಗೆ ಪಿರ್ಯಾದಿಯು ತನ್ನ ವೈಯಕ್ತಿಕ ಕೆಲಸದ ಕುರಿತು ತನ್ನ ಮೋಟಾರ್ ಸೈಕಲ್ ಮೇಲಾಗಿ ಹಾರವಾಡಕ್ಕೆ ಹೋಗಿ ತನ್ನ ಕೆಲಸ ಮುಗಿಸಿ ವಾಪಸ್ ಮನೆಗೆ ಬರುತ್ತಿರಬೇಕಾದರೆ ಮಧ್ಯಾಹ್ನ 12-15 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಹಾರವಾಡ ಕ್ರಾಸಿನಲ್ಲಿ ಒಮ್ಮೆಲೆ ಪಿರ್ಯಾದಿಯ ಮೋಟಾರ್ ಸೈಕಲನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಪಿರ್ಯಾದಿಗೆ ‘ಬೋಳಿ ಮಗನೆ, ಸೂಳೆ ಮಗನೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ‘ತನ್ನ ಅತ್ತೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡುತ್ತೀಯಾ?’ ಹೇಳಿ ತಾನು ತಂದಿದ್ದ ದೊಣ್ಣೆಯಿಂದ ಪಿರ್ಯಾದಿಯ ಮುಖಕ್ಕೆ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ, ‘ಇವತ್ತು ಬದುಕಿದೆ. ಮತ್ತೆ ಎಲ್ಲಿಯಾದರೂ ಸಿಕ್ಕಿದರೆ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಲಂಬೋದರ ತಂದೆ ತಿಪ್ಪಣ್ಣ ನಾಯಕ, ಪ್ರಾಯ-43 ವರ್ಷ, ವೃತ್ತಿ-ರೈತಾಬಿ ಮತ್ತು ವ್ಯಾಪಾರ, ಸಾ|| ಸೀಬರ್ಡ ಕಾಲೋನಿ ರಸ್ತೆ, ಬೆಲೇಕೇರಿ, ತಾ: ಅಂಕೋಲಾ ರವರು ದಿನಾಂಕ: 22-02-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಯಾರೋ ಆರೋಪಿತನು ಅಪರಿಚಿತನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 16-02-2021 ರಂದು ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ಪಿರ್ಯಾದುದಾರರು ಕುಮಟಾ ಶಹರದ ಹೊಸ್ ಬಸ್ ನಿಲ್ದಾಣದ ಹತ್ತಿರ ಎಸ್.ಬಿ.ಐ ಎ.ಟಿ.ಎಮ್ ಕೌಂಟರಿನಲ್ಲಿ ಹಣ ಡ್ರಾ ಮಾಡಲು ಹೋಗಿ ಮಶೀನ್ ದಲ್ಲಿ ಕಾರ್ಡ್ ಹಾಕಿ ಹಣ ತೆಗೆಯುತ್ತಿರುವಾಗ ಯಾರೋ ಅಪರಿಚಿತ ಆರೋಪಿತನು ಪಿರ್ಯಾದಿಗೆ ಸಹಾಯ ಮಾಡುವ ನೆಪ ಮಾಡಿ, ಎ.ಟಿ.ಎಮ್ ಯಂತ್ರದಲ್ಲಿದ್ದ ಪಿರ್ಯಾದಿಯ ಡೆಬಿಟ್ ಕಾರ್ಡನ್ನು ತೆಗೆದುಕೊಂಡು, ಪಿರ್ಯಾದಿಗೆ ತಿಳಿಯದಂತೆ ಮೋಸತನದಿಂದ ಯಂತ್ರದಲ್ಲಿ ಬೇರೊಂದು ಡೆಬಿಟ್ ಕಾರ್ಡ್ ಇಟ್ಟು ಹೋಗಿ ಪಿರ್ಯಾದಿಯ ಡೆಬಿಟ್ ಕಾರ್ಡಿನಿಂದ ಒಟ್ಟು 70,905/- ಹಣವನ್ನು ಡ್ರಾ ಮಾಡಿ ಪಿರ್ಯಾದಿಗೆ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ವಾಸುದೇವ ಬೋರಕರ್, ಪ್ರಾಯ-54 ವರ್ಷ, ವೃತ್ತಿ-ಕೋರ್ಟ್ ಬೀಲಿಪ್ ಕುಮಟಾ ಕೋರ್ಟ್, ಸಾ||  ಹುಲೇಕಲ್ ರೋಡ, ಹೊಸ್ ಬಸ್ ನಿಲ್ದಾಣದ ಹತ್ತಿರ, ತಾ: ಶಿರಸಿ ರವರು ದಿನಾಂಕ: 22-02-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಬ್ದುಲ್ ಕರೀಮ್ ಸವುದ್‍ಅಹಮ್ಮದ್ ಸುಂಟಿ, ಪ್ರಾಯ-39 ವರ್ಷ, ಸಾ|| ಡಾನ್ ಬಾಸ್ಕೋ ಶಾಲೆ ಹತ್ತಿರ, ಹುಬ್ಬಳ್ಳಿ ರಸ್ತೆ, ತಾ: ಶಿರಸಿ (ಸ್ವಿಪ್ಟ್ ಡಿಸೈರ್ ಕಾರ್ ನಂ: ಕೆ.ಎ-31/ಎಮ್-6946 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 21-02-2021 ರಂದು 17-00 ಗಂಟೆಗೆ ತನ್ನ ಸ್ವಿಪ್ಟ್ ಡಿಸೈರ್ ಕಾರ್ ನಂ: ಕೆ.ಎ-31/ಎಮ್-6946 ನೇದನ್ನು ರಾಗಿಹೊಸಳ್ಳಿ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಶಿರಸಿ-ಕುಮಟಾ ರಸ್ತೆಯ ಹೊಸುರ ಗ್ರಾಮದ ಅಗ್ರೆ ಕ್ರಾಸ್ ಹತ್ತಿರದ ತಿರುವು ಮತ್ತು ಸ್ವಲ್ಪ ಇಳಿಜಾರಿನ ರಸ್ತೆಯಲ್ಲಿ ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ, ರಸ್ತೆಯ ಬದಿಗೆ ಇರುವ ಧರೆಗೆ ಡಿಕ್ಕಿ ಹೊಡೆದು ಪಲ್ಟಿ ಕೆಡವಿ ಅಪಘಾತ ಪಡಿಸಿ ಕಾರನ್ನು ಜಖಂಗೊಳಿಸಿ, ತಾನೂ ಸಹ ತನ್ನ ಎಡಭುಜಕ್ಕೆ ಒಳನೋವು ಪಡಿಸಿಕೊಂಡಿದ್ದಲ್ಲದೇ, ತನ್ನ ಹೆಂಡತಿ ಶ್ರೀಮತಿ ಕೌಸರಭಾನು ಸುಂಟಿ ಇವರ ಕೆನ್ನೆಯ ಎಡಬದಿಗೆ ತೆರಚಿದ ಗಾಯ, ಮೂಗಿನ ಎರಡು ಹೊರಳಿನಿಂದ ರಕ್ತಸ್ರಾವ ಹಾಗೂ ಎರಡು ಕಾಲುಗಳ ಮಂಡಿಯ ಕೆಳಗೆ ಒಳನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಮಲ್ಲಿಕ್ ಸವುದ್‍ಅಹಮ್ಮದ್ ಸುಂಟಿ, ಪ್ರಾಯ-40 ವರ್ಷ, ವೃತ್ತಿ-ಕಬ್ಬಿಣ ವ್ಯಾಪಾರ, ಸಾ|| ಡಾನ್ ಬಾಸ್ಕೋ ಶಾಲೆ ಹತ್ತಿರ, ಹುಬ್ಬಳ್ಳಿ ರಸ್ತೆ, ತಾ: ಶಿರಸಿ ರವರು ದಿನಾಂಕ: 22-02-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಮಂಜುನಾಥ ತಂದೆ ನಾಗಪ್ಪ ಪೆಟ್ನೇಕರ್, ಪ್ರಾಯ-39 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನಲ್ಲಿ ಸೆಕ್ಯೂರಿಟಿ ಕೆಲಸ, ಸಾ|| ಉರ್ದು ಶಾಲೆಯ ಹಿಂದೆ, ಟೌನಶಿಪ್, ದಾಂಡೇಲಿ. ಪಿರ್ಯಾದಿಯ ಗಂಡನಾದ ಇವರು ದಿನಾಂಕ: 20-02-2021 ರಂದು ಬೆಳಿಗ್ಗೆ 08-00 ಗಂಟೆಗೆ ತನ್ನ ತಾಯಿಯವರಿಗೆ ಔಷಧಿಯನ್ನು ತೆಗೆದುಕೊಂಡು ಬರುತ್ತೇನೆ ಅಂತಾ ಹೇಳಿ ಧಾರವಾಡದ ಮಾನಸಿಕ ಆಸ್ಪತ್ರೆಗೆ ಹೋದವರು, ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಗಂಡನನ್ನು ಹುಡುಕಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮಂಜುಳಾ ಮಂಜುನಾಥ ಪೆಟ್ನೇಕರ್, ಪ್ರಾಯ-37 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಉರ್ದು ಶಾಲೆಯ ಹಿಂದೆ, ಟೌನಶಿಪ್, ದಾಂಡೇಲಿ ರವರು ದಿನಾಂಕ: 22-02-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬಾಬುಲಾಲ್ ತಂದೆ ದಸ್ತಗೀರಸಾಬ್, ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ಕುಮಟಾ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1489 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 22-02-2021 ರಂದು 13-10 ಗಂಟೆಗೆ ತನ್ನ ಬಾಬ್ತು ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1489 ನೇದನ್ನು ಹಾವೇರಿ ಕಡೆಯಿಂದ ಶಿರಸಿ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಯತನದಿಂದ ಚಲಾಯಿಸಿಕೊಂಡು ಬಂದು ದಾಸನಕೊಪ್ಪದ ಫಾರೆಸ್ಟ್ ಚೆಕ್ ಪೋಸ್ಟ್ ಹತ್ತಿರ ಬಸ್ಸನ್ನು ತೀರಾ ಬಲಕ್ಕೆ ಚಲಾಯಿಸಿ, ಮಳಗಿ ಕಡೆಯಿಂದ ಬಂದ ಮೋಟಾರ್ ಸೈಕಲ್ ನಂ; ಕೆ.ಎ-31/ಕೆ-286 ನೇದಕ್ಕೆ ಬಸ್ಸಿನ ಬಾಡಿಯನ್ನು ತಾಗಿಸಿ ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ದೀಪಕ ತಂದೆ ಕೃಷ್ಣ, ಸಾ|| ಬ್ಯಾರಂಕಿ, ತಾ: ಹೊನ್ನಾವರ ಈತನಿಗೆ ತಲೆಗೆ ಮತ್ತು ಮುಖದ ಭಾಗಕ್ಕೆ ಗಂಭೀರ ಸ್ವರೂಪದ ಗಾಯನೋವುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದಿನೇಶ ತಂದೆ ವಾಸುದೇವ ಕಾಮತ, ಪ್ರಾಯ-50 ವರ್ಷ ವೃತ್ತಿ-ವ್ಯವಹಾರ, ಸಾ|| ದಾಸನಕೊಪ್ಪ, ತಾ: ಶಿರಸಿ ರವರು ದಿನಾಂಕ: 22-02-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 22-02-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಪುರಂದರ ತಂದೆ ಈಶ್ವರ ಅಂಬಿಗ, ಪ್ರಾಯ-26 ವರ್ಷ, ವೃತ್ತಿ-ಆಟೋರಿಕ್ಷಾ ಚಾಲಕ, ಸಾ|| ದಿವಗಿ, ಕೆಳಗಿನಕೇರಿ, ತಾ: ಕುಮಟಾ. ಪಿರ್ಯಾದಿಯ ತಮ್ಮನಾದ ಈತನು ಸಾಲ ಮಾಡಿ ಆಟೋ ರಿಕ್ಷಾವನ್ನು ಖರೀದಿ ಮಾಡಿ ತಂದು ಬಾಡಿಗೆಗೆ ಚಲಾಯಸುತ್ತಿದ್ದವನು, ತನಗಿದ್ದ ಯಾವುದೋ ಸಮಸ್ಯೆಯಿಂದಲೋ ಅಥವಾ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಬೇಸರಗೊಂಡು ದಿವಗಿ ಕೆಳಗಿನಕೇರಿಯಲ್ಲಿರುವ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ದಿನಾಂಕ: 21-02-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 22-02-2021 ರಂದು ಬೆಳಿಗ್ಗೆ 05-00 ಗಂಟೆಯ ನಡುವಿನ ಅವಧಿಯಲ್ಲಿ ಲುಂಗಿಯನ್ನು ಮನೆಯ ಮುಂದಿನ ಕೋಣೆಯಲ್ಲಿದ್ದ ಪ್ಯಾನಿಗೆ ಕಟ್ಟಿಕೊಂಡು, ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಪಿರ್ಯಾದಿ ಶ್ರೀ ರಾಜೇಶ ತಂದೆ ಈಶ್ವರ ಅಂಬಿಗ, ಪ್ರಾಯ-36 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ದಿವಗಿ, ಕೆಳಗಿನಕೇರಿ, ತಾ: ಕುಮಟಾ ರವರು ದಿನಾಂಕ: 22-02-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸುರೇಂದ್ರ ತಂದೆ ಕೊರಗಾ ಗಾಣಿಗ, ಪ್ರಾಯ-68 ವರ್ಷ, ವೃತ್ತಿ-ಮಠದಲ್ಲಿ ಅರ್ಚಕರಿಗೆ ಸಹಾಯ ಮಾಡುವುದು, ಸಾ|| ಶ್ರೀ ಗುಹೇಶ್ವರ ಪ್ರಸನ್ನ, ಶಾಂತಿ ನಿವಾಸ, ಕೊಡಪಾಡಿ, ಪೋ: ಗುಜ್ಜಾಡಿ, ತಾ: ಕುಂದಾಪುರ, ಜಿ: ಉಡುಪಿ. ಪಿರ್ಯಾದಿಯ ತಂದೆಯವರಾದ ಇವರು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ಮಠಗಳಿಗೆ ಭೇಟಿ ನೀಡುತ್ತಾ ಮಠಗಳಲ್ಲಿ ಅರ್ಚಕರಿಗೆ ಪೂಜಾ ಕಾರ್ಯದಲ್ಲಿ ಸಹಾಯ ಮಾಡುತ್ತಾ ಮಠಗಳಲ್ಲೇ ಉಳಿಯುತ್ತಿದ್ದವರು, ದಿನಾಂಕ: 21-02-2021 ರಂದು ಬೆಳಿಗ್ಗೆ 08-30 ಗಂಟೆಗೆ ಶಿರಸಿಯ ಮರಾಠಿಕೊಪ್ಪದಲ್ಲಿರುವ ನಿತ್ಯಾನಂದ ಮಠಕ್ಕೆ ಬಂದವರು ಅಲ್ಲಿಯೇ ಉಳಿದುಕೊಂಡವರು, ರಾತ್ರಿ 09-15 ಗಂಟೆಯ ಸುಮಾರಿಗೆ ದೇವರ ಪೂಜೆ ಮಾಡುತ್ತಾ ಇರುವಾಗ ‘ತನಗೆ ಎದೆಯಲ್ಲಿ ತೀವೃ ನೋವಾಗುತ್ತಿದೆ’ ಅಂತಾ ಹೇಳಿದವರಿಗೆ 21-50 ಗಂಟೆಯ ಸುಮಾರಿಗೆ ಚಿಕಿತ್ಸೆಗೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದು, ಇದರ ಹೊರತು ಮೃತ ತನ್ನ ತಂದೆಯವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಿರೀಶ ತಂದೆ ಸುರೇಂದ್ರ ಗಾಣಿಗ, ಪ್ರಾಯ-33 ವರ್ಷ, ವೃತ್ತಿ-ಆರ್.ಎಸ್.ಎಸ್ ಪ್ರಚಾರಕರು, ಸಾ|| ಶ್ರೀ ಗುಹೇಶ್ವರ ಪ್ರಸನ್ನ, ಶಾಂತಿ ನಿವಾಸ, ಕೊಡಪಾಡಿ, ಪೋ: ಗುಜ್ಜಾಡಿ, ತಾ: ಕುಂದಾಪುರ ಜಿ: ಉಡುಪಿ ರವರು ದಿನಾಂಕ: 22-02-2021 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 23-02-2021 06:05 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080