Daily District Crime Report
Date:- 22-01-2022
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 09/2022, ಕಲಂ: 304, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುಳಾ ತಂದೆ ರಾಮ ನಾಯಕ, ಸಾ|| ಲಕ್ಷ್ಮೇಶ್ವರ, ತಾ: ಅಂಕೋಲಾ, 2]. ನಾಗರಾಜ (ನಾಗು) ಅಂಕೋಲೆಕರ, ಸಾ|| ಕಣಸಿಗದ್ದೆ, ತಾ: ಅಂಕೋಲಾ. ಪಿರ್ಯಾದಿಯವರ ಗಂಡನಾದ ಮೃತ ಅಶೋಕ ತಂದೆ ಗೊಂಗಾ ಗಾಂವಕರ, ಪ್ರಾಯ-44 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಪೂಜಗೇರಿ, ತಾ: ಅಂಕೋಲಾ ಈತನು ಆರೋಪಿ 1 ನೇಯವಳ ಗಂಡನಾದ ಆರೋಪಿ 2 ನೇಯವನ ಹತ್ತಿರ ಬಡ್ಡಿಗೆ ಸಾಲವನ್ನು ಪಡೆದುಕೊಂಡು ಅವರ ಮರಣದ ನಂತರ ಪ್ರತಿ ತಿಂಗಳು ಸಾಲದ ಬಡ್ಡಿ ಹಣವನ್ನು ಕೊಡು ಅಂತಾ ನಮೂದಿತ ಆರೋಪಿತರು ಪಿರ್ಯಾದಿಯವರ ಗಂಡನಿಗೆ ತೊಂದರೆಯನ್ನು ಕೊಡುತ್ತಾ ಬಂದವರು, 2-3 ಸಲ ಪಿರ್ಯಾದಿಯವರ ಮನೆಗೆ ಬಂದು ಬಡ್ಡಿ ಹಣಕಾಗಿ ಬೆದರಿಕೆಯನ್ನು ಹಾಕಿ ಹೋದವರು, ದಿನಾಂಕ: 21-01-2022 ರಂದು ಪಿರ್ಯಾದಿಯ ಮನೆಯಲ್ಲಿ ಸಾಯಂಕಾಲ 06-45 ಗಂಟೆಯಿಂದ ರಾತ್ರಿ 08-30 ಗಂಟೆಯವರೆಗೆ ಪಿರ್ಯಾದಿಯ ಗಂಡನಿಗೆ ‘ಬಡ್ಡಿ ಹಣವನ್ನು ಕೊಡದಿದ್ದರೆ ಅಂಕೋಲಾದಲ್ಲಿ ಓಡಾಡಲು ಬಿಡುವುದಿಲ್ಲ. ಒಂದು ಗತಿ ಕಾಣಿಸುತ್ತೇನೆ ಮತ್ತು ಜೀವ ಸಮೇತವಾಗಿ ಬಿಡುವುದಿಲ್ಲ. ಬಡ್ಡಿ ಹಣವನ್ನು ಕೊಡಲಿಕ್ಕೆ ಆಗದಿದ್ದರೇ ಸಾಲ ಏಕೆ ಮಾಡಿದ್ದಿ? ನೀನು ಜೀವಂತವಿದ್ದು ಏನೂ ಪ್ರಯೋಜನ, ನಿನ್ನಂತವರು ವಿಷ ಕುಡಿದು ಸಾಯುವುದು ಒಳ್ಳೆದು. ನಿನ್ನ ಕಾಟ ತಪ್ಪುತ್ತದೆ’ ಅಂತಾ ಬೆದರಿಕೆ ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಮಾಡಿದ್ದರಿಂದ ಇದೇ ಕಾರಣಕ್ಕೆ ಪಿರ್ಯಾದಿಯ ಗಂಡ ಅಶೋಕ ತಂದೆ ಗೊಂಗಾ ಗಾಂವಕರ ಇವರು ದಿನಾಂಕ: 22-01-2022 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ ವಿಷವನ್ನು ಸೇವಿಸಿ ಮೃತಪಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಉಷಾ ಗಂಡ ಅಶೋಕ ಗಾಂವಕರ, ಪ್ರಾಯ-43 ವರ್ಷ, ವೃತ್ತಿ-ಅಂಗನವಾಡಿ ಸಹಾಯಕಿ ಪೂಜಗೇರಿ ಗ್ರಾಮ, ಸಾ|| ಪೂಜಗೇರಿ, ತಾ: ಅಂಕೋಲಾ ರವರು ದಿನಾಂಕ: 22-01-2022 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮಂಕಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 11/2022, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 19-01-2022 ರಂದು ಬೆಳಿಗ್ಗೆ 09-15 ಗಂಟೆಯಿಂದ ದಿನಾಂಕ: 20-01-2022 ರಂದು ಬೆಳಿಗ್ಗೆ 10-45 ಗಂಟೆಯ ನಡುವಿನ ಅವಧಿಯಲ್ಲಿ ಮಂಕಿ ವಲಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹುಲಿ ಗಣತಿ-2022ರ ಕಾರ್ಯದ ಪ್ರಯುಕ್ತ ಆಡುಕುಳ ಅರಣ್ಯ ಸರ್ವೇ ನಂ: 19 ರಲ್ಲಿ ಅಳವಡಿಸಿದ ಸುಮಾರು 10,000/- ರೂಪಾಯಿ ಮೌಲ್ಯದ ಅuಜಜebಚಿಛಿಞ ಕಂಪನಿಯ ಸಿಸಿಟಿವಿ ಕ್ಯಾಮೆರಾ (ಟ್ರ್ಯಾಪ್ ನಂ: ಊಓ087)-01 ನೇದನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಹಾಬಲ ಎಮ್. ಗೌಡ, ಅರಣ್ಯ ರಕ್ಷಕ, ಆಡುಕಳ ಗಸ್ತು, ಮಂಕಿ ಶಾಖೆ, ಮಂಕಿ ವಲಯ ರವರು ದಿನಾಂಕ: 22-01-2022 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 09/2022, ಕಲಂ: 78(3) ಕರ್ನಾಟಕ ಪೊಲೀಸ್ ತಿದ್ದುಪಡಿ ಅಧಿನಿಯಮ-2021 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುನೀಲ್ ತಂದೆ ಅಣ್ಣಪ್ಪ ಶೇಟ್, ಪ್ರಾಯ-27 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮೂಲೆಪಾಲ್, ಸೋವಿನಕೊಪ್ಪ ಗ್ರಾಮ, ತಾ: ಸಿದ್ದಾಪುರ, 2]. ಪ್ರಸನ್ನ ಹೆಗಡೆ, ಸಾ|| ಬುಗರಿಮಕ್ಕಿ, ಸೋವಿನಕೊಪ್ಪ ಗ್ರಾಮ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 22-01-2022 ರಂದು ಮಧ್ಯಾಹ್ನ 15-30 ಗಂಟೆಗೆ ಸಿದ್ದಾಪುರ ಶಹರದ ಶಂಕರ ಮಠದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟದ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಅವರಿಗೆ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಚೀಟಿಯನ್ನು ಬರೆದುಕೊಟ್ಟು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿ 1 ನೇಯವನು ದಾಳಿಯ ಕಾಲಕ್ಕೆ ಓ.ಸಿ ಜುಗಾರಾಟದ ಸಲಕರಣೆಗಳಾದ 1). ಬಾಲ್ ಪೆನ್-1, 2). ಓ.ಸಿ ಚೀಟಿ-1 ಮತ್ತು 3). ನಗದು ಹಣ 1,150/- ರೂಪಾಯಿಗಳೊಂದಿಗೆ ಸಿಕ್ಕಿದ್ದು ಹಾಗೂ ಈ ಓ.ಸಿ ಚೀಟಿ ಮತ್ತು ಸಂಗ್ರಹವಾದ ಹಣವನ್ನು ಸ್ವೀಕರಿಸುವ ಬುಕ್ಕಿಯಾದ ಆರೋಪಿ 2 ನೇಯವನಾಗಿರುವ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 22-01-2022 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
Daily District U.D Report
Date:- 22-01-2022
at 00:00 hrs to 24:00 hrs
ಕಾರವಾರ ಶಹರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 06/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಶೃದ್ಧಾ ಕೋಂ. ರಾಮದಾಸ ವೈಂಗಣಕರ್, ಪ್ರಾಯ-35 ವರ್ಷ, ವೃತ್ತಿ-ನಿರುದ್ಯೋಗಿ, ಸಾ|| ಸಿದ್ಧರಾಮೇಶ್ವರ ಮಠ, ಬೈತಕೋಲ್, ಕಾರವಾರ. ಪಿರ್ಯಾದಿಯ ಮಗಳಾದ ಇವಳು ಕಳೆದ 17 ವರ್ಷಗಳಿಂದ ‘ಸ್ಕಿಜ್ರೋಫೆನಿಯಾ’ ಎಂಬ ಮಾನಸಿಕ ಖಾಯಿಲೆಯಿಂದ ನರಳುತ್ತಿದ್ದವಳು, ಆಗಾಗ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಹೇಳುತ್ತಾ ಇದ್ದವಳು, ದಿನಾಂಕ: 21-01-2022 ರಂದು ರಾತ್ರಿ 23-00 ಘಂಟೆಯಿಂದ ದಿನಾಂಕ: 22-01-2022 ರಂದು ಬೆಳಿಗ್ಗೆ 01-30 ಘಂಟೆಯ ನಡುವೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮನೆಯಲ್ಲಿ ತಾನು ಮಲಗಿದ ಕಡೆಯಿಂದ ಎದ್ದು ಹೊರಗೆ ಹೋಗಿ ಬೈತಕೋಲ್ ಬಂದರು ದ್ವಾರದ ಹತ್ತಿರ ಅರಬ್ಬಿ ಸಮುದ್ರದಲ್ಲಿ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ತನ್ನ ಮಗಳ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಕಮಲಾ ಕೋಂ. ರಾಮದಾಸ ವೈಂಗಣಕರ್, ಪ್ರಾಯ-59 ವರ್ಷ, ವೃತ್ತಿ-ಗೃಹಿಣಿ, ಸಾ|| ಡಬ್ಲ್ಯೂ-9/26, ಜೆ.ಪಿ ನಗರ, ಕೊಪ್ರಾಡ್, ವಿರಾರ್, ವೆಸ್ಟ್, ಅಗಾಸಿ, ವಸಾಯಿ, ಠಾಣೆ, ಮಹಾರಾಷ್ಟ್ರ, ಹಾಲಿ ಸಾ|| ಸಿದ್ಧರಾಮೇಶ್ವರ ಮಠ, ಬೈತಕೋಲ್, ಕಾರವಾರ ರವರು ದಿನಾಂಕ: 22-01-2022 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 06/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಕು: ಸಂದೀಪ ತಂದೆ ಶಿವರಾಮ ಜೋಶಿ, ಪ್ರಾಯ-32 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಿಚನಾಳ ಮಜರೆ, ಬಳಗಾರ ಗ್ರಾಮ, ತಾ: ಯಲ್ಲಾಪುರ. ಈತನು ಕಳೆದ 10-12 ವರ್ಷಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದವನು, ಖಾಸಗಿ ಔಷಧೋಪಚಾರ ಮಾಡಿಸಿದರೂ ಸಹ ಗುಣವಾಗದಿರುವುದರಿಂದ ಮನನೊಂದು ತನಗೆ ಜೀವನ ಬೇಡಾ ಅಂತಾ ಈ ಹಿಂದೆ ಒಂದು ಸಲ ಆತ್ಮಹತ್ಯೆಗೆ ಪ್ರಯತ್ನಿಸಿದವನು, ದಿನಾಂಕ: 21-01-2022 ರಂದು ಸಾಯಂಕಾಲ 05-00 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಸಹಸ್ರಳ್ಳಿ ಗ್ರಾಮದ ತನ್ನ ದೊಡ್ಡಪ್ಪ ಶ್ರೀ ಗಣಪತಿ ಜೋಶಿ ರವರ ಮನೆಯ ಸಮೀಪ ಯಾವುದೋ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದವನನ್ನು ಯಲ್ಲಾಪುರದ ಸರಕಾರಿ ಆಸ್ಪತ್ರೆಗೆ ತಂದು ಪ್ರಥಮೋಪಚಾರ ಮಾಡಿಸಿ, ಅದೇ ದಿನ ಹೆಚ್ಚಿನ ಚಿಕಿತ್ಸೆಯ ಕುರಿತು ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ ಒಯ್ದು ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ದಿನಾಂಕ: 22-01-2022 ರಂದು ಬೆಳಿಗ್ಗೆ 07-50 ಗಂಟೆಗೆ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಶ್ವೇಶ್ವರ ತಂದೆ ವೆಂಕಟರಮಣ ಜೋಶಿ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನೂತನ ನಗರ, ತಾ: ಯಲ್ಲಾಪುರ ರವರು ದಿನಾಂಕ: 22-01-2022 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======