ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 22-07-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 112/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಚಿತ್ರಾ ತಂದೆ ನಾಗಪ್ಪ ಹಳ್ಳೇರ, ಪ್ರಾಯ-18 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಬಳಲೆ, ಮಾದನಗೇರಿ, ತಾ: ಅಂಕೋಲಾ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 22-07-2021 ರಂದು ಬೆಳಿಗ್ಗೆ 09-30 ಗಂಟೆಗೆ ಅಂಕೋಲಾ ತಾಲೂಕಿನ ಬಳಲೆಯಲ್ಲಿರುವ ತನ್ನ ಮನೆಯಿಂದ ಅಂಕೋಲಾದ ಜಿ.ಸಿ ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು, ಇದುವರೆಗೂ ಮನೆಗೆ ವಾಪಸ್ ಬಾರದೇ ಹಾಗೂ ಮೊಬೈಲ್ ಸಂಪರ್ಕಕ್ಕೂ ಸಿಗದೇ, ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗಪ್ಪ ತಂದೆ ಜಟ್ಟಿ ಹಳ್ಳೇರ, ಪ್ರಾಯ-46 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಳಲೆ, ಮಾದನಗೇರಿ, ತಾ: ಅಂಕೋಲಾ ರವರು ದಿನಾಂಕ: 22-07-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 117/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಪರಸಪ್ಪ ಲಮಾಣಿ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಸಿದ್ಧೇಶ್ವರ ನಗರ, ಹುಬ್ಬಳ್ಳಿ, ಧಾರವಾಡ (ಬೊಲೆರೋ ವಾಹನ ನಂ: ಕೆ.ಎ-25/ಎ.ಬಿ-2567 ನೇದರ ಚಾಲಕ). ಈತನು ದಿನಾಂಕ: 22-07-2021 ರಂದು ಸಾಯಂಕಾಲ 05-30 ಗಂಟೆಗೆ ಯಲ್ಲಾಪುರ ಕಡೆಯಿಂದ ಕಲಘಟಗಿ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬೊಲೆರೋ ವಾಹನ ನಂ: ಕೆ.ಎ-25/ಎ.ಬಿ-2567 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಕೋಲಿಕೇರಿ ಗ್ರಾಮದಿಂದ ಹಿಂದೆ ಯಲ್ಲಾಪುರ ಕಡೆಗೆ ಅರ್ಧ ಕಿ.ಮೀ ಅಂತರದಲ್ಲಿ ವಾಹನದ ವೇಗ ನಿಯಂತ್ರಿಸದೇ ತನ್ನ ಎದುರಿನಿಂದ ಅಂದರೆ ಕಲಘಟಗಿ ಕಡೆಯಿಂದ ಯಲ್ಲಾಪುರ ಕಡೆಗೆ ನಿಧಾನವಾಗಿ ರಸ್ತೆಯ ಎಡಬದಿಯಿಂದ ಸಾಕ್ಷಿದಾರ ಶ್ರೀ ಆನಂದು ದೇಸಾಯಿ ಯವರು ಚಲಾಯಿಸಿಕೊಂಡು ಬರುತ್ತಿದ್ದ ಕಾರ್ ನಂ: ಜಿ.ಎ-03/ಪಿ-2068 ನೇದರ ಬಲಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಆರೋಪಿ ಚಾಲಕನು ತನ್ನ ಬೊಲೆರೋ ವಾಹನವನ್ನು ಪಲ್ಟಿ ಕೆಡವಿ, ಎರಡು ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಅಪ್ಪಾ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಪೊಲೀಸ್ ಹೆಡ್ ಕಾನ್ಸಟೇಬಲ್ (ಸಿ.ಎಚ್.ಸಿ-1357), ಸಾ|| ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 22-07-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ಕೃಷ್ಣ ಪೂಜಾರಿ, ಪ್ರಾಯ-28 ವರ್ಷ, ಸಾ|| ಸೋಮನಳ್ಳಿ, ಪೋ: ಉಂಬಳೆಕೊಪ್ಪ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-8693 ನೇದರ ಸವಾರ). ಈತನು ದಿನಾಂಕ: 21-070-2021 ರಂದು 08-45 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-8693 ನೇದರ ಹಿಂಬದಿಗೆ ಶ್ರೀಮತಿ ಶಾರದಾ ಕೃಷ್ಣ ಪೂಜಾರಿ, ಪ್ರಾಯ-51 ವರ್ಷ, ಸಾ|| ಸೋಮನಳ್ಳಿ, ಪೋ: ಉಂಬಳೆಕೊಪ್ಪ, ತಾ: ಶಿರಸಿ ಇವರನ್ನು ಕೂಡ್ರಿಸಿಕೊಂಡು ಬನವಾಸಿ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದವನು, ಆರೆಕೊಪ್ಪ ಊರಿನ ಹತ್ತಿರ ಆ ವೇಳೆ ರಭಸವಾಗಿ ಮಳೆ ಬರತೊಡಗಿದ್ದರಿಂದ ಹಿಂಬದಿ ಕುಳಿತ ಮಹಿಳೆಯು ತನ್ನ ಕೈಯಲಿದ್ದ ಛತ್ರಿ ತೆಗೆಯಲು ಹೋಗಿ, ಒಮ್ಮಿಂದೊಮ್ಮೆಲೆ ಛತ್ರಿಯು ಗಾಳಿ ಮತ್ತು ಮಳೆಗೆ ತಿರುಗಿದ ಪರಿಣಾಮ ಮಹಿಳೆಯನ್ನು ಮೋಟಾರ್ ಸೈಕಲ್ ಮೇಲಿಂದ ರಸ್ತೆಯ ಮೇಲೆ ಕೆಳಗೆ ಬೀಳಿಸಿ, ತಲೆಯ ಹಿಂಬದಿಗೆ ಗಂಭೀರ ಸ್ವರೂಪ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಪಂಜು ಪೂಜಾರಿ, ಪ್ರಾಯ-37 ವರ್ಷ, ವೃತ್ತಿ-ಇಲೆಕ್ಟ್ರೀಷಿಯನ್ ಕೆಲಸ, ಸಾ|| ಸೋಮನಳ್ಳಿ, ಪೋ: ಉಂಬಳೆಕೊಪ್ಪ, ತಾ: ಶಿರಸಿ ರವರು ದಿನಾಂಕ: 22-07-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನರೇಶ ತಂದೆ ನಾರಾಯಣ ಪೂಜಾರಿ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಮಕೋ, ಪೊ: ನವಣಗೇರಿ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಎನ್-5925 ನೇದರ ಸವಾರ). ಈತನು ದಿನಾಂಕ: 22-070-2021 ರಂದು 13-30 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಎನ್-5925 ನೇದನ್ನು ಶಿರಸಿ ಕಡೆಯಿಂದ ಬನವಾಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಾ, ಗಡೇಹಳ್ಳಿ ಹತ್ತಿರದ ತಿರುವಿನ ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಎದುರುಗಡೆ ಬನವಾಸಿ ಕಡೆಯಿಂದ ಶಿರಸಿ ಕಡೆಗೆ ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿದ್ದ ರೆನಾಲ್ಟ್ ಕಾರ್ ನಂ: ಕೆ.ಎ-31/ಎನ್-6674 ನೇದಕ್ಕೆ ಡಿಕ್ಕಿ ಹೊಡೆದು ಎರಡು ವಾಹನಗಳನ್ನು ಜಖಂಗೊಳಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ಹಣೆಯ ಬಲಬದಿಗೆ, ಬಲಭುಜಕ್ಕೆ ಹಾಗೂ ಬಲಗಾಲಿನ ಕಿರುಬೆರಳಿಗೆ ಹಾಗೂ ಮೋಟಾರ್ ಸೈಕಲ್ ಹಿಂಬದಿ ಸವಾರ ಶ್ರೀ ಭಾಸ್ಕರ ತಂದೆ ಕುಷ್ಟು ಪೂಜಾರಿ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗುಂಡುವಾನ, ಆಚರಡಿ ಗ್ರಾಮ, ಕುಂದಾಪುರ ಇವರಿಗೆ ಬಲಗಣ್ಣಿನ ಹುಬ್ಬು, ಎರಡು ಮೊಣಕೈಗೆ, ಎರಡು ಮೊಣಕಾಲ ಗಂಟಿಗೆ ಹಾಗೂ ಬಲಗಾಲ ಅಂಗಾಲಿಗೆ ತೆರಚಿದ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ಮಂಜುನಾಥ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಸುಗಾವಿ ಕ್ರಾಸ್, ಬಿದ್ರಳ್ಳಿ, ಪೋ: ಉಂಚಳ್ಳಿ, ತಾ: ಶಿರಸಿ ರವರು ದಿನಾಂಕ: 22-07-2021 ರಂದು 15-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಬಿಕಾನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಭಿಲಾಷ ತಂದೆ ರಾಜಗೋಪಾಲ ಆಚಾರ್ಯ, ಪ್ರಾಯ-23 ವರ್ಷ, ವೃತ್ತಿ-ವ್ಯಾಪಾರ, ಸಾ|| ಬಜಾರ್ ಕಾಂಪ್ಲೆಕ್ಸ್, ಅಂಬಿಕಾನಗರ, ದಾಂಡೇಲಿ (ಕಾರ್ ನಂ: ಜಿ.ಎ-06/ಎ-3629 ನೇದರ ಚಾಲಕ). ಈತನು ದಿನಾಂಕ: 22-07-2021 ರಂದು 16-30 ಗಂಟೆಗೆ ಅಂಬಿಕಾನಗರ–ದಾಂಡೇಲಿ ರಸ್ತೆಯ ಕುಳಗಿ ಕ್ರಾಸ್ ಹತ್ತಿರ ತನ್ನ ಕಾರ್ ನಂ: ಜಿ.ಎ-06/ಎ-3629 ನೇದನ್ನು ಅಂಬಿಕಾನಗರ ಬದಿಯಿಂದ ದಾಂಡೇಲಿ ಬದಿಗೆ ಹೋಗಲು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕಾರನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ತನ್ನ ಸ್ವಯಂಕೃತ ಅಪಘಾತದಿಂದ ಮರಣವನ್ನುಂಟು ಪಡಿಸಿಕೊಂಡು, ಕಾರಿನಲ್ಲಿದ್ದ ಮೂವರ ಪೈಕಿ ಪ್ರಸಾದ ಚವ್ಹಾಣ ಈತನಿಗೆ ತೀವೃ ಸ್ವರೂಪದ ಗಾಯ ಹಾಗೂ ಭೀಮರಾವ್ ಕರಬತ ಈತನಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸುನೀಲ ತಂದೆ ರವಿ ನಾಡರ್, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜಮಗಾ, ಅಂಬಿಕಾನಗರ, ದಾಂಡೇಲಿ ರವರು ದಿನಾಂಕ: 22-07-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 22-07-2021

at 00:00 hrs to 24:00 hrs

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಬಸವಂತಪ್ಪ ತಂದೆ ದ್ಯಾಮಣ್ಣ ವಡ್ಡರ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಯ್ಯಪ್ಪ ನಗರ, ಬನವಾಸಿ, ತಾ: ಶಿರಸಿ. ಪಿರ್ಯಾದಿಯ ತಂದೆಯಾದ ಈತನು ತನ್ನ ಹೆಂಡತಿಯಾದ ಮಂಜಮ್ಮ ಇವಳಿಗೆ ರಸ್ತೆ ಅಪಘಾತದಲ್ಲಿ ರಕ್ತದ ಗಾಯನೋವು ಆಗಿದ್ದು, ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಅವಳೇ ವಹಿಸಿಕೊಂಡು ಹೋಗುತ್ತಿದ್ದವಳಿಗೆ ಈ ರೀತಿಯಾಗಿದ್ದರಿಂದ ಬೇಸರಗೊಂಡು ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ, ದಿನಾಂಕ: 21-07-2021 ರಂದು ಮಧ್ಯಾಹ್ನ 03-00 ಗಂಟೆಯಿದ ದಿನಾಂಕ: 22-07-2021 ರಂದು ಮಧ್ಯಾಹ್ನ 03-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಅಡುಗೆ ಕೋಣೆಯಲ್ಲಿ ಬಿದಿರಿನ ಗಳಕ್ಕೆ ನೈಲಾನ್ ಹಗ್ಗದಿಂದ ಕಟ್ಟಿ, ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಯೇ ಹೊರತು ತನ್ನ ತಂದೆಯ ಸಾವಿನಲ್ಲಿ ಬೇರೆ ಯವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಬಸವಂತಪ್ಪ ವಡ್ಡರ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಯ್ಯಪ್ಪ ನಗರ, ಬನವಾಸಿ, ತಾ: ಶಿರಸಿ ರವರು ದಿನಾಂಕ: 22-07-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 24-07-2021 04:55 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080