ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 22-06-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 323, 448, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಶಿಕಾಂತ ತಂದೆ ಮನೋಹರ ರಾಣೆ, ಪ್ರಾಯ-52 ವರ್ಷ, ವೃತ್ತಿ-ಪೂಣಾದಲ್ಲಿ ಖಾಸಗಿ ಕೆಲಸ, ಸಾ|| ಬೋಳಶಿಟ್ಟಾ, ಹಳಗಾ, ಕಾರವಾರ. ಪಿರ್ಯಾದಿಯು ಬೋಳಶಿಟ್ಟಾದಲ್ಲಿರುವ ತನ್ನ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದು, ನಮೂದಿತ ಆರೋಪಿತನು ದಿನಾಂಕ: 21-06-2021 ರಂದು ಸಾಯಂಕಾಲ 17-00 ಗಂಟೆಗೆ ಪಿರ್ಯಾದಿಯ ಮನೆಯ ಒಳಗಡೆಗೆ ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಆತನ ಬಲಗೈ ಮುಷ್ಠಿಯಿಂದ ಪಿರ್ಯಾದಿಗೆ ಎದೆಯ ಭಾಗಕ್ಕೆ ಹಾಗೂ ಹಣೆಯ ಭಾಗಕ್ಕೆ ಹೊಡೆದು ದೂಡಿ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ರುಕ್ಮಿಣಿ ಕೋಂ. ವಿಠೋಬಾ ರಾಣೆ, ಪ್ರಾಯ-78 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬೋಳಶಿಟ್ಟಾ, ಹಳಗಾ, ಕಾರವಾರ ರವರು ದಿನಾಂಕ: 22-06-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಘವೇಂದ್ರ ತಂದೆ ವೆಂಕಟೇಶ ಗೌಡ, ಪ್ರಾಯ-25 ವರ್ಷ, ಸಾ|| ಬಂಕಿಕೊಡ್ಲ, ಗೋಕರ್ಣ, ತಾ: ಕುಮಟಾ. ಈತನು ತನ್ನ ಗದ್ದೆ ಪ್ರದೇಶಕ್ಕೆ ಪಿರ್ಯಾದಿಯವರ ಗದ್ದೆಯ ಕಡೆಯಿಂದ ನೀರು ಹಾಯ್ದ ವಿಷಯಕ್ಕೆ ಸಂಬಂಧಿಸಿದಂತೆ ಪಿರ್ಯಾದಿಯವರಿಗೆ ದಿನಾಂಕ: 22-06-2021 ರಂದು ಮಧ್ಯಾಹ್ನ 14-30 ಗಂಟೆಯ ಸುಮಾರಿಗೆ ಬಂಕಿಕೊಡ್ಲ ಗ್ರಾಮದಲ್ಲಿರುವ ಪಿರ್ಯಾದಿಯ ಮನೆಯ ಪಕ್ಕದಲ್ಲಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವಾಗ ಪಿರ್ಯಾದಿಯವರು ಕೇಳಲು ಹೋದಾಗ ಆರೋಪಿತನು ‘ಬೋಳಿ ಮಗನೇ, ಸೂಳೆ ಮಗನೇ, ನೀರನ್ನು ಯಾಕೆ ಬಿಡುತ್ತಿಯಾ? ಇದರಿಂದ ತನ್ನ ಗದ್ದೆಯ ಬೀಜ ಹಾಳಾಗುತ್ತಿದೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ತನ್ನ ಕೈಯಲ್ಲಿದ್ದ ರಾಡಿನಿಂದ ಪಿರ್ಯಾದಿಯ ತಲೆಗೆ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ ‘ಮತ್ತೆ ತನ್ನ ಗದ್ದೆಗೆ ನೀರು ಬಿಟ್ಟರೆ ನಿನಗೆ ಒಂದು ಗತಿ ಕಾಣಿಸುತ್ತೇನೆ’ ಅಂತಾ ಪಿರ್ಯಾದಿಗೆ ಜೀವದ ಧಮಕಿ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಹನುಮಂತ ಗೌಡ, ಪ್ರಾಯ-43 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಂಕಿಕೊಡ್ಲ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 22-06-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 160 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರೆಹಮತತುಲ್ಲಾ ಮಹ್ಮದ್ ಉಸ್ಮಾನಿ, ಪ್ರಾಯ-45 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತೆಂಗಿನಗುಂಡಿ, ತಾ: ಭಟ್ಕಳ, 2]. ಮುಸಾ ಅಬ್ದುಲ್ ಲತೀಫ್ ಡಾಂಗಿ, ಪ್ರಾಯ-42 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತೆಂಗಿನಗುಂಡಿ, ತಾ: ಭಟ್ಕಳ, 3]. ಜುಬೇರ್ ತಂದೆ ಮೆಹಮೂದ್ ಉಸ್ಮಾನ್, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತೆಂಗಿನಗುಂಡಿ, ತಾ: ಭಟ್ಕಳ, 4]. ಕೇಶವ ದುರ್ಗಪ್ಪ ಮೊಗೇರ, ಪ್ರಾಯ-35 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತೆಂಗಿನಗುಂಡಿ, ತಾ: ಭಟ್ಕಳ, 5]. ಲೊಕೇಶ ದುರ್ಗಪ್ಪ ಮೊಗೇರ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತೆಂಗಿನಗುಂಡಿ, ತಾ: ಭಟ್ಕಳ, 6]. ಯೋಗೆಶ ದೇವಜ್ಜ ಮೊಗೇರ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತೆಂಗಿನಗುಂಡಿ, ತಾ: ಭಟ್ಕಳ. ಈ ನಮೂದಿತ ಆರೋಪಿತರುಗಳು ದಿನಾಂಕ: 21-06-2021 ರಂದು 18-00 ಗಂಟೆಯ ಸಮಯಕ್ಕೆ ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಬಂದರ್ ಧಕ್ಕೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆಯನ್ನು ಕದಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಲಕ್ಷ್ಮಣ ಪಮ್ಮಾರ, ಪ್ರಾಯ-29 ವರ್ಷ, ವೃತ್ತಿ-ಪೋಲಿಸ್ ಕಾನ್ಸಟೇಬಲ್ (ಸಿ.ಪಿ.ಸಿ-781), ಸಾ|| ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 22-06-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 21-06-2021 ರಂದು 19-00 ಗಂಟೆಯಿಂದ ದಿನಾಂಕ: 22-06-2021 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ನಗರದ ಸಾಮ್ರಾಟ್ ಹೊಟೇಲ್ ಎದುರುಗಡೆ ಇರುವ ಪಿರ್ಯಾದಿಯ ಮನೆಯ ಹೊರಗಡೆ ಇರುವ ಖುಲ್ಲಾ ಸ್ಥಳದಲ್ಲಿ ಇಟ್ಟಿದ್ದ ಅ||ಕಿ|| 4,000/- ರೂಪಾಯಿ ಮೌಲ್ಯದ ತಾಮ್ರದ ಹಂಡೆ-1 (ಅದರ ಅಂದಾಜು ತೂಕ 8 ಕೆ.ಜಿ)  ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ನೀಲಕಂಠ ತಂದೆ ನಾರಾಯಣ ಮುರ್ಡೇಶ್ವರ, ಪ್ರಾಯ-61 ವರ್ಷ, ವೃತ್ತಿ-ನಿವೃತ್ತ ಎಲ್.ಐ.ಸಿ ಆಡಳಿತಾಧಿಕಾರಿ, ಸಾ|| ಸಾಮ್ರಾಟ್ ಹೊಟೇಲ್ ಎದುರುಗಡೆ, ತಾ: ಶಿರಸಿ, ಹಾಲಿ ಸಾ|| ಶಾಂತಿ ನಗರ, ಹುತ್ಗಾರ, ತಾ: ಶಿರಸಿ ರವರು ದಿನಾಂಕ: 22-06-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ಕನ್ನಪ್ಪ ನಾಯ್ಕ, ಸಾ|| ಮರಗುಂಡಿ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಕೆ-3620 ನೇದರ ಸವಾರ). ಈತನು ದಿನಾಂಕ: 21-06-2021 ರಂದು 12-45 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಕೆ-3620 ನೇದರ ಹಿಂಬದಿಯಲ್ಲಿ ಶ್ರೀ ಪ್ರಭಾಕರ ತಂದೆ ಬಸವಣ್ಣೆ ನಾಯ್ಕ, ಪ್ರಾಯ-54 ವರ್ಷ, ವೃತ್ತಿ-ಕೃಷಿ ಕೆಲಸ ಸಾ|| ಮರಗುಂಡಿ, ತಾ: ಶಿರಸಿ ಈತನನ್ನು ಕೂಡ್ರಿಸಿಕೊಂಡು ಬನವಾಸಿ-ದಾಸನಕೊಪ್ಪ ರಸ್ತೆಯ ಮಾರ್ಗವಾಗಿ ಮರಗುಂಡಿಗೆ ಹೋಗುತ್ತಿರುವಾಗ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಹಾಡಲಗಿ ಕೆರೆಯ ಬಳಿ ಇರುವ ತಿರುವಿನ ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲ್ ಮೇಲಿನ ವೇಗದಲ್ಲಿ ನಿಯಂತ್ರಣ ಕಳೆದುಕೊಂಡು ಮೋಟಾರ್ ಸೈಕಲನ್ನು ಸ್ಕಿಡ್ ಮಾಡಿ ಬೀಳಿಸಿ, ರಸ್ತೆ ಅಪಘಾತ ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ಕೈ ಕಾಲುಗಳಿಗೆ ರಕ್ತಗಾಯ ಪಡಿಸಿಕೊಂಡಿದ್ದಲ್ಲದೇ, ಮೋಟಾರ್ ಸೈಕಲ್ ಹಿಂಬದಿ ಕುಳಿತ ಪ್ರಭಾಕರ ತಂದೆ ಬಸವಣ್ಣೆ ನಾಯ್ಕ, ಈತನಿಗೆ ಬಲ ಹಣೆಯ ಬಳಿ, ತಲೆಯ ಭಾಗಕ್ಕೆ, ಬಲಗಣ್ಣಿನ ಹುಬ್ಬಿನ ಬಳಿ ಹಾಗೂ ಬಲಕಿವಿಯ ಬಳಿ ಮಾರಣಾಂತಿಕ ಗಂಭೀರ ರಕ್ತಗಾಯ ಪಡಿಸಿದ್ದು, ಉಪಚಾರದ ಕುರಿತು ಬನವಾಸಿಯ ಸರ್ಕಾರಿ ಆಸ್ಪತ್ರೆ, ಅಲ್ಲಿಂದ ಶಿರಸಿಯ ಮಾರಿಕಾಂಬಾ ಆಸ್ಪತ್ರೆ, ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯದಲ್ಲಿ ರಾತ್ರಿ ಸುಮಾರು 09-30 ಗಂಟೆಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ವಿಲಾಸ ತಂದೆ ಪ್ರಭಾಕರ ನಾಯ್ಕ, ಪ್ರಾಯ-27 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮರಗುಂಡಿ, ತಾ: ಶಿರಸಿ ರವರು ದಿನಾಂಕ: 22-06-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 22-06-2021

at 00:00 hrs to 24:00 hrs

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಪ್ರವೀಣ ತಂದೆ ಶ್ರೀಕಾಂತ ಮಾದರ, ಪ್ರಾಯ-20 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಟಿ.ಎಮ್.ಸಿ ಕ್ವಾರ್ಟರ್ಸ್, ಇಂದಿರಾ ನಗರ, ಹಳಿಯಾಳ ಶಹರ. ಪಿರ್ಯಾದಿಯವರ ಮಗನಾದ ಈತನು ಮಾನಸಿಕ ಅಸ್ವಸ್ಥ ಮತ್ತು ಸರಾಯಿ ಕುಡಿಯುವ ಚಟದವನು ಹಾಗೂ ನರ ದೋಷ ಹೊಂದಿದವನಾಗಿದ್ದು, ಕಳೆದ 15 ದಿನಗಳ ಹಿಂದೆ ತನ್ನ ಮಾವ ರತ್ನಪ್ಪ ಏಸಯ್ಯ ಮಂಡಲ ಎಂಬುವವನು ಉರುಳು ಹಾಕಿಕೊಂಡು ಮೃತಪಟ್ಟಿದ್ದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು, ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 22-06-2021 ರಂದು 15-30 ಗಂಟೆಯಿಂದ 17-30 ಗಂಟೆಯ ನಡುವಿನ ಅವಧಿಯಲ್ಲಿ ತಾನು ವಾಸವಾಗಿರುವ ಹಳಿಯಾಳ ಶಹರದ ಇಂದಿರಾ ನಗರದಲ್ಲಿರುವ ಟಿ.ಎಮ್.ಸಿ ಕ್ವಾರ್ಟರ್ಸಿನಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಸರಾಯಿ ಕುಡಿದ ನಶೆಯಲ್ಲಿ ಕ್ವಾರ್ಟರ್ಸ್ ಸೀಲಿಂಗ್ ಫ್ಯಾನಿಗೆ ಸೀರೆಯಿಂದ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಯೇ ಹೊರತು ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ನಯೋಮಿ ಕೋಂ. ಶ್ರೀಕಾಂತ ಮಾದರ, ಪ್ರಾಯ-43 ವರ್ಷ, ವೃತ್ತಿ-ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾ ಕೆಲಸ, ಸಾ|| ಟಿ.ಎಮ್.ಸಿ ಕ್ವಾರ್ಟರ್ಸ್, ಇಂದಿರಾ ನಗರ, ಹಳಿಯಾಳ ಶಹರ ರವರು ದಿನಾಂಕ: 22-06-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 23-06-2021 01:18 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080