ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 22-03-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ಹುಲಿಯಾ ಗೌಡಾ, ಪ್ರಾಯ-36 ವರ್ಷ, ಸಾ|| ದಿವಗಿ, ಹರ್ಕಡೆ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 22-03-2021 ರಂದು 11-40 ಗಂಟೆಗೆ ಕುಮಟಾ ಪಟ್ಟಣದ ಮಾಸ್ತಿಕಟ್ಟೆ ಹತ್ತಿರ ಇರುವ ವರದಾ ಹೊಟೇಲ್ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಅನ್ಯಾಯದ ಲಾಭಕ್ಕಾಗಿ ಬರ-ಹೋಗುವ ಜನರಿಗೆ 01/-ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಅದನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ನಗದು ಹಣ 2,640/- ರೂಪಾಯಿ ಹಾಗೂ ಓ.ಸಿ ಆಟದ ಸಲಕರಣೆಗಳೊಂದಿಗೆ ದಾಳಿಯ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 22-03-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶರವಣನ್ ತಂದೆ ಸುಂದರರಾಜನ್, ಸಾ|| ಸೇಲಮ್, ತಮಿಳುನಾಡು ರಾಜ್ಯ (ಗೂಡ್ಸ್ ಲಾರಿ ನಂ: ಟಿ.ಎನ್-52/ಸಿ-4779 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 21-03-2021 ರಂದು ರಂದು ರಾತ್ರಿ 10-00 ಗಂಟೆಗೆ ತಾನು ಚಲಾಯಿಸುತ್ತಿದ್ದ ಗೂಡ್ಸ್ ಲಾರಿ ನಂ: ಟಿ.ಎನ್-52/ಸಿ-4779 ನೇದನ್ನು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಅತೀವೇಗದಲ್ಲಿದ್ದ ಗೂಡ್ಸ್ ಲಾರಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗದೇ ಹೊನ್ನಾವರ ತಾಲೂಕಿನ ಕರ್ಕಿ ರೈಲ್ವೇ ಸ್ಟೇಷನ್ ಕ್ರಾಸ್ ಹತ್ತಿರ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಮುರ್ಡೇಶ್ವರ ಕಡೆಯಿಂದ ಕುಮಟಾ ಕಡೆಗೆ ನಿಧಾನವಾಗಿ ತಮ್ಮ ಸೈಡಿಗೆ ಹೋಗುತ್ತಿದ್ದ ಕಾರ್ ನಂ: ಕೆ.ಎ-47/8299 ನೇದರ ಎಡಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನ ಎಡಬದಿಯ ಬಾಡಿ ಜಖಂಗೊಳ್ಳಲು ಕಾರಣನಾಗಿದ್ದಲ್ಲದೇ, ತನ್ನ ಲಾರಿಯ ಮುಂದಿನ ಎಡಬದಿಯ ಬಂಪರನ್ನು ಜಖಂಗೊಳಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ಗಣಪತಿ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಗುಡೇಅಂಗಡಿ, ಬಾಡ, ತಾ: ಕುಮಟಾ ರವರು ದಿನಾಂಕ: 22-03-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಚಿನ ತಂದೆ ರಮಾಕಾಂತ ಶೇಟ್, ಪ್ರಾಯ-35 ವರ್ಷ, ವೃತ್ತಿ-ಬಂಗಾರದ ಕೆಲಸ, ಸಾ|| ಆರೋಳ್ಳಿ, ಮೂರಕಟ್ಟೆ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-9857 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 22-03-2021 ರಂದು 22-15 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-9857 ನೇದನ್ನು ಆರೋಳ್ಳಿ ಕಡೆಯಿಂದ ಹೊನ್ನಾವರ ಮೂರಕಟ್ಟೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಬಂದವನು, ಹೊನ್ನಾವರದ ಮೂರಕಟ್ಟೆ ಹತ್ತಿರ ರಸ್ತೆಗೆ ಅಡ್ಡಲಾಗಿ ಬಂದ ಹಂದಿಯನ್ನು ತಪ್ಪಿಸಲು ನಿರ್ಲಕ್ಷ್ಯತನದಿಂದ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ರಸ್ತೆಯ ಎಡಬದಿಗೆ ಚಲಾಯಿಸಿ, ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದುಕೊಂಡು ತನಗೆ ಬಲಗಣ್ಣಿನ ಹತ್ತಿರ, ಹಣೆಗೆ, ಎರಡು ಕೈಗಳಿಗೆ ಮತ್ತು ಎಡಗಾಲಿಗೆ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀಧರ ತಂದೆ ಪಾಂಡುರಂಗ ಶೇಟ್, ಪ್ರಾಯ-58 ವರ್ಷ, ವೃತ್ತಿ-ಬಂಗಾರದ ಕೆಲಸ, ಸಾ|| ದುರ್ಗಾಕೇರಿ, ತಾ: ಹೊನ್ನಾವರ ರವರು ದಿನಾಂಕ: 22-03-2021 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಚಿನ ತಂದೆ ಸುಬ್ರಾಯ ಮೊಗೇರ, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಳಲಗಾಂವ, ಬನವಾಸಿ, ತಾ: ಶಿರಸಿ, ಹಾಲಿ ಸಾ|| ರಾಜೀವನಗರ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 22-03-2021 ರಂದು 15-30 ಗಂಟೆಯ ಸುಮಾರಿಗೆ ಶಿರಸಿ ಶಹರ ರಾಜೀವನಗರದ ಗಾಳಿಮಾರಮ್ಮ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜುಗಾರಾಟದ ಸಲಕರಣೆಗಳಾದ ನಗದು ಹಣ ಒಟ್ಟೂ 430/- ರೂಪಾಯಿ, ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಒಂದು ಬಾಲ್ ಪೆನ್ ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 22-03-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಅಭಿದಲಿ ತಂದೆ ಮಹಮ್ಮದ್ ಯಾಕೂನ್ ಸಿಕಂದರ್, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಂದಾವರ, ನೂರಾಲಿ ಕ್ರಾಸ್, ತಾ: ಹೊನ್ನಾವರ, ಹಾಲಿ ಸಾ|| ಕಸ್ತೂರಬಾ ನಗರ, ಮಟಕಾ ಗನಿ ಅಂಗಡಿಯ ಹಿಂದುಗಡೆ, ಲಮಾಣಿಕೇರಿ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 22-03-2021 ರಂದು 16-15 ಗಂಟೆಯ ಸುಮಾರಿಗೆ ಶಿರಸಿ ಶಹರ ಶಿವಾಜಿ ಚೌಕನ ಟಿ.ಎಮ್.ಸಿ ಕಾಂಪ್ಲೆಕ್ಸ್ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿರುವಾಗ ಓ.ಸಿ. ಮಟಕಾ ಜುಗಾರಾಟದ ಸಲಕರಣೆಗಳಾದ ನಗದು ಹಣ ಒಟ್ಟೂ 520/- ರೂಪಾಯಿ, ಓ.ಸಿ. ಅಂಕೆ-ಸಂಖ್ಯೆ ಬರೆದ ಚೀಟಿ-01, ಒಂದು ಬಾಲ್ ಪೆನ್ ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮೋಹಿನಿ ಶೆಟ್ಟಿ ಡಬ್ಲ್ಯೂ.ಪಿ.ಎಸ್.ಐ (ಕ್ರೈಂ), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 22-03-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರವಿ ತಂದೆ ಮಂಜು ಮೊಗೇರ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹುತ್ಗಾರ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 22-03-2021 ರಂದು 14-00 ಗಂಟೆಗೆ ಶಿರಸಿ ತಾಲೂಕಿನ ಗಣೇಶ ನಗರದ ಕೆ.ಎಸ್.ಆರ್.ಟಿ.ಸಿ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ, ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,070/- ರೂಪಾಯಿ ಹಾಗೂ ಓ.ಸಿ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ ಮತ್ತು ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 4). ಖಾಲಿ ಪೇಪರ್ ತುಂಡುಗಳು-08, ಅ||ಕಿ|| 00.00/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗಪ್ಪ, ಪ್ರಾಯ-34 ವರ್ಷ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 22-03-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಭುಕುಮಾರ ತಂದೆ ಚಂದ್ರಶೇಖರ ಗೌಡ್ರು, ಪ್ರಾಯ-31 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಸುಭಾಷ ನಗರ, ಮರಾಠಿಕೊಪ್ಪ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 22-03-2021 ರಂದು 17-55 ಗಂಟೆಗೆ ಶಿರಸಿ-ಯಲ್ಲಾಪುರ ರಸ್ತೆಯ ಯಲ್ಲಾಪುರ ನಾಕಾ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ 1). ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,120/- ರೂಪಾಯಿ, 2). ಓ.ಸಿ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಖಾಲಿ ಪೇಪರ್ ತುಂಡುಗಳು-12, ಅ||ಕಿ|| 00.00/- ರೂಪಾಯಿ, 4). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಜಯಶ್ರೀ ಶಾನಭಾಗ, ಡಬ್ಲ್ಯೂ.ಪಿ.ಎಸ್.ಐ (ಕ್ರೈಂ), ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 22-03-2021 ರಂದು 19-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಎಲಿಷಾ ತಂದೆ ಏಸಲು ಬಾಷಾಮಲ್ಲ, ಪ್ರಾಯ-40 ವರ್ಷ, ವೃತ್ತಿ-ಪಾನ್ ಶಾಫ್ ವ್ಯಾಪಾರ, ಸಾ|| ಕಾರವಾರ ರೋಡ್, ಬೈಲಪಾರ, ದಾಂಡೇಲಿ. ನಮೂದಿತ ಆರೋಪಿತನು ದಿನಾಂಕ: 22-03-2021 ರಂದು 12-00 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಹಳೇ ದಾಂಡೇಲಿಯ ಗಾಂಧಿ ಚೌಕ್ ಹತ್ತಿರದ ತನ್ನ ಪಾನ್ ಶಾಫ್ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಒಂದು ಟೇಬಲ್ ಅನ್ನು ಹಾಕಿ ಅದರ ಮೇಲೆ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಗೂ 5 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ತಂದುಕೊಟ್ಟು ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನೂಕೂಲ ಮಾಡಿಕೊಟ್ಟಿದ್ದರಿಂದ ಪಿರ್ಯಾದಿಯವರು ತಮ್ಮ  ಸಿಬ್ಬಂದಿಗಳೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ 1). Original Choice 90 ml ನ 10 ಪ್ಯಾಕೆಟ್ ಗಳು, ಅ||ಕಿ|| 350/- ರೂಪಾಯಿ, 2). Original Choice 90 ml ನ 6 ಖಾಲಿ ಪ್ಯಾಕೆಟ್ ಗಳು, ಅ||ಕಿ|| 00.00/- ರೂಪಾಯಿ, 3). ನೀರಿನ ಪ್ಲಾಸ್ಟಿಕ್ ಬಾಟಲಿ-01, ಅ||ಕಿ|| 00.00/- ರೂಪಾಯಿ, 4). ಪ್ಲಾಸ್ಟಿಕ್ ಗ್ಲಾಸ್ ಗಳು-05 ಅ||ಕಿ|| 00.00/- ರೂಪಾಯಿಗಳೊಂದಿಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 22-03-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸೈಯ್ಯದಪೀರ್ ತಂದೆ ಸೈದಾನಸಾಬ್ ಹರಬಿ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾತೂರ, ತಾ: ಮುಂಡಗೋಡ, 2]. ಅತಾವುಲ್ಲಾ, ಸಾ|| ಹಿರೇಕೆರೂರ, ಹಾವೇರಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 22-03-2021 ರಂದು 16-30 ಗಂಟೆಗೆ ಮುಂಡಗೋಡ ಪಟ್ಟಣದ ಮುಂಡಗೋಡ ತಾಲೂಕಿನ ಕಾತೂರ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆ ಮೇಲೆ ಓಡಾಡುವ ಜನರನ್ನು ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನ ಮೇಲೆ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟ ಆಗುವಂತೆ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಜುಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ನಗದು ಹಣ 2,300/- ರೂಪಾಯಿ ಹಾಗೂ ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ನೇದವುಗಳೊಂದಿಗೆ ಸೆರೆ ಸಿಕ್ಕಿದ್ದಲ್ಲದೇ, ಓ.ಸಿ ಮಟಕಾ ಜುಗಾರಾಟದಿಂದ ಸಂಗ್ರಹವಾದ ಹಣವನ್ನು ಆರೋಪಿ 2 ನೇಯವನಿಗೆ ನೀಡುತ್ತಿದ್ದುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಖೀರಪ್ಪ ಘಟಕಾಂಬಳೆ, ಎ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 22-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಹರೀಶ ತಂದೆ ರಾಮಣ್ಣ ಈಡಗೋಡ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂಬೇಡ್ಕರ ಓಣಿ, ಮಳಗಿ, ತಾ: ಮುಂಡಗೋಡ, 2]. ಪಕ್ಕೀರಪ್ಪ ಕಂಬಾರ, ಸಾ|| ಧರ್ಮಾ ಕಾಲೋನಿ, ಮಳಗಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 22-03-2021 ರಂದು 15-50 ಗಂಟೆಗೆ ಮುಂಡಗೋಡ ತಾಲೂಕಿನ ಮಳಗಿ ಗ್ರಾಮದ ಕುರ್ಲಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆ ಮೇಲೆ ಓಡಾಡುವ ಜನರನ್ನು ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನ ಮೇಲೆ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟ ಆಗುವಂತೆ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಜುಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ನಗದು ಹಣ 390/- ರೂಪಾಯಿ ಹಾಗೂ ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ನೇದವುಗಳೊಂದಿಗೆ ಸೆರೆ ಸಿಕ್ಕಿದ್ದಲ್ಲದೇ, ಓ.ಸಿ ಮಟಕಾ ಜುಗಾರಾಟದಿಂದ ಸಂಗ್ರಹವಾದ ಹಣವನ್ನು ಆರೋಪಿ 2 ನೇಯವನಿಗೆ ನೀಡುತ್ತಿದ್ದುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶೇಡಜಿ ಚೌವ್ಹಾಣ, ಎ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 22-03-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ವಿನೋದ ತಂದೆ ನಾಗೇಶ ರಾಯ್ಕರ, ಪ್ರಾಯ-63 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ದೇವಪುರ ಓಣಿ, ಮಳಗಿ, ತಾ: ಮುಂಡಗೋಡ, 2]. ನಾಗರಾಜ ತಂದೆ ಬಾಬಣ್ಣ ಅಂಗಡಿ, ಸಾ|| ಪಾಳಾ, ತಾ: ಮುಂಡಗೋಡ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 22-03-2021 ರಂದು 19-00 ಗಂಟೆಗೆ ಮುಂಡಗೋಡ ತಾಲೂಕಿನ ಮಳಗಿ ಗ್ರಾಮದ ಸೋನಾರ ಓಣಿ ಮಾರುತಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ನಿಂತು ರಸ್ತೆ ಮೇಲೆ ಓಡಾಡುವ ಜನರನ್ನು ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನ ಮೇಲೆ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟ ಆಗುವಂತೆ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಜುಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ನಗದು ಹಣ1,070/- ರೂಪಾಯಿ ಹಾಗೂ ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ನೇದವುಗಳೊಂದಿಗೆ ಸೆರೆ ಸಿಕ್ಕಿದ್ದಲ್ಲದೇ, ಓ.ಸಿ ಮಟಕಾ ಜುಗಾರಾಟದಿಂದ ಸಂಗ್ರಹವಾದ ಹಣವನ್ನು ಆರೋಪಿ 2 ನೇಯವನಿಗೆ ನೀಡುತ್ತಿದ್ದುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರಭುಗೌಡ ಡಿ. ಕೆ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 22-03-2021 ರಂದು 20-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 307 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪಂಕಜ ತಂದೆ ಪಾಂಡುರಂಗ ಪಾಟೀಲ, ಪ್ರಾಯ-33 ವರ್ಷ, ಸಾ|| ಮಾರುತಿ ಗಲ್ಲಿ, ಜಗಲಬೇಟ ತಾ: ಜೋಯಿಡಾ. ನಮೂದಿತ ಆರೋಪಿತನು ಪಿರ್ಯಾದಿಯವರ ಮಗನಾಗಿದ್ದು, ಆರೋಪಿತನು ಕಳೆದ 2009 ನೇ ಸಾಲಿನಿಂದ ಮಾನಸಿಕ ರೋಗಿಯಂತೆ ಇರುವವನಿಗೆ ಪಿರ್ಯಾದಿಯವರು 2009 ನೇ ಸಾಲಿನಿಂದ 2014 ನೇ ಸಾಲಿನ ವರೆಗೆ ಬೆಳಗಾವಿಯ ಡಾ|| ವಿಲಾಸ ದೇಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಅಲ್ಲಿ ಚಿಕಿತ್ಸೆ ಪಡೆದುಕೊಂಡ ನಂತರ ಆರಾಮವಾಗಿ ಇದ್ದವನು, ಅವರು ನೀಡಿದ ಔಷಧಿಗಳನ್ನು ತಿನ್ನದೇ ಇರುವುದರಿಂದ ಮತ್ತೆ ಮಾನಸಿಕ ಸ್ಥಿಮಿತ ಕಳೆದುಕೊಂಡು ಸಿಟ್ಟು ಮಾಡಿಕೊಳ್ಳುವುದು ಮಾಡುಕೊಂಡು ಬಳಲುತ್ತಿದ್ದವನಿಗೆ ಬೆಳಗಾವಿಯ ವ್ಯಸನ ಮುಕ್ತಿ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದೆವು. ದಿನಾಂಕ: 16-07-2020 ರಂದು ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದವನು, ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿ ಚಾಕು ಹಾಗೂ ಕಟ್ಟಿಗೆಯ ತುಂಡನ್ನು ಹಿಡಿದುಕೊಂಡು ಹೊಡೆಯಲು ಬಂದಿದ್ದು, ಆಗ ಮನೆಯಲ್ಲಿದ್ದ ನನ್ನ ಹೆಂಡತಿ-ಶೀತಲ ಬಂದು ತಪ್ಪಿಸಿದ್ದು, ಆಗ ನನ್ನ ಹೆಂಡತಿಗೆ ಚಾಕು ತಾಗಿತ್ತು. ಇದಾದ ನಂತರ ಈ ಮೊದಲು ಚಿಕಿತ್ಸೆ ಕೊಡಿಸಿದ್ದ ಶಿವಮೊಗ್ಗದ ಮಾನಸಾ ನರ್ಸಿಂಗ್ ಹೋಮ್ ಗೆ ಕರೆದೊಯ್ದು ಉಪಚಾರ ಕೊಡಿಸಿದ್ದೆವು. ಅಲ್ಲಿ ಉಪಚಾರ ಕೊಡಿಸಿಕೊಂಡು ಬಂದ ನಂತರದಿಂದ ಆರಾಮ ಆಗಿ ಇದ್ದವನು, ಕಳೆದ ಡಿಸೆಂಬರ್-2020 ರಿಂದ ಮನೆಯಿಂದ ಹೊರಗಡೆ ಇದ್ದವನು, ದಿನಾಂಕ: 21-03-2021 ರಂದು ಮಧ್ಯರಾತ್ರಿ 01-00 ಗಂಟೆಗೆ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು ಬಾಗಿಲು ಬಡಿದಾಗ ನಾನು ಬಾಗಿಲು ತೆಗೆದಾಗ ಚಾಕುವಿನಿಂದ ಹೊಟ್ಟೆಗೆ ತಿವಿದಿದ್ದು, ನಾನು ತಪ್ಪಿಸಿಕೊಂಡು ಅವನ ಕೈಯಿಂದ ಚಾಕುವನ್ನು ಕಿತ್ತುಕೊಂಡಿದ್ದು, ಕೊಲೆ ಮಾಡಲು ಯತ್ನಿಸಿದ ಬಗ್ಗೆ ಪಿರ್ಯಾದಿ ಶ್ರೀ ಪಾಂಡುರಂಗ ತಂದೆ ಕಾಶಿನಾಥ ಪಾಟೀಲ, ಪ್ರಾಯ-61 ವರ್ಷ, ವೃತ್ತಿ-ನಿವೃತ್ತ ಖಾಸಗಿ ಉದ್ಯೋಗಿ, ಸಾ|| ಮಾರುತಿ ಗಲ್ಲಿ, ಜಗಲಬೇಟ, ತಾ: ಜೋಯಿಡಾ ರವರು ದಿನಾಂಕ: 22-03-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 22-03-2021

at 00:00 hrs to 24:00 hrs

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಹಮ್ಮದ್ ನಾಸೀರ್ ತಂದೆ ಅಬ್ದುಲ್ ಸಮದ್ ಸಾಬ್, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಉಂಚಳ್ಳಿ, ತಾ: ಶಿರಸಿ. ಈತನು ತನ್ನ ಪತ್ನಿ ಶ್ರೀಮತಿ ಫರ್ಮೀನ್ ಭಾನು ಇವಳು ಕಳೆದ 5-6 ವರ್ಷದ ಹಿಂದೆ ಕೌಟುಂಬಿಕ ಸಮಸ್ಯೆಯಿಂದ ತನ್ನ ಮಕ್ಕಳೊಂದಿಗೆ ಮನೆ ಬಿಟ್ಟು ತವರು ಮನೆಯಲ್ಲಿ ಹೋಗಿ ಉಳಿದುಕೊಂಡಾಗಿನಿಂದ ತೀವೃವಾಗಿ ಮನ ನೊಂದಿದ್ದು, ಈಗ ಕಳೆದ 2-3 ತಿಂಗಳ ಹಿಂದೆ ಶ್ರೀಮತಿ ಫರ್ಮೀನ್ ಭಾನು ಇವಳು ವಿಚ್ಛೇದನಕ್ಕೆ ಮಸೀದಿಯಲ್ಲಿ ಅರ್ಜಿ ಕೊಟ್ಟ ವಿಷಯದಿಂದ ಇನ್ನಷ್ಟು ತೀವೃವಾಗಿ ಮನ ನೊಂದುಕೊಂಡಿದ್ದವನು, ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 21-03-2021 ರಂದು 19-00 ಗಂಟೆಯಿಂದ ದಿನಾಂಕ: 22-03-2021 ರಂದು ಬೆಳಿಗ್ಗೆ 09-15 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಅಟ್ಟದ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಸಮದ್ ತಂದೆ ಸೈಯದ್ ಅಲಿ ಶೇಖ್, ಪ್ರಾಯ-59 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮನೆ ನಂ: 77, ಉಂಚಳ್ಳಿ, ತಾ: ಶಿರಸಿ ರವರು ದಿನಾಂಕ: 22-03-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 26-03-2021 12:28 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080