ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 22-05-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಎಕ್ಟ್-1965 ನೇದ್ದರ ವಿವರ...... ನಮೂದಿತ ಆರೋಪಿತ ಸಣ್ಣು ತಂದೆ ಕರಿಯಾ ಗೊಂಡ, ಪ್ರಾಯ-61 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾಲೆಕೊಡ್ಲ, ಬೆಂಗ್ರೆ-1, ತಾ: ಭಟ್ಕಳ. ಈತನು ದಿನಾಂಕ: 22-05-2021 ರಂದು 19-00 ಗಂಟೆಗೆ ಬೆಂಗ್ರೆ-01, ಮಾಲೆಕೊಡ್ಲದಲ್ಲಿರುವ ತನ್ನ ಮನೆಯ ಮುಂದೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾದ ಶೆಡ್ಡಿನಲ್ಲಿ ತನ್ನ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟು 1). ಶೀಲ್ಡ್ ಇರುವ HAYWARDS Cheers Whisky-90 ML ಅಳತೆಯ ಪ್ಯಾಕೆಟ್ ಗಳು-4 ಇದ್ದು, ಪ್ರತಿ ಪ್ಯಾಕೆಟಿಗೆ 35.13/- ರೂಪಾಯಿಯಂತೆ 4 ಪ್ಯಾಕೆಟ್ ಗಳ ಬೆಲೆ 140.52/- ರೂಪಾಯಿ ಇರುತ್ತದೆ. 2) ಶೀಲ್ಡ್ ಇರುವ Radico 8PM-180 ML ಅಳತೆಯ ಪ್ಯಾಕೆಟ್ ಗಳು-2 ಇದ್ದು, ಪ್ರತಿ ಪ್ಯಾಕೆಟಿಗೆ 86.75/- ರೂಪಾಯಿಯಂತೆ 2 ಪ್ಯಾಕೆಟ್ ಗಳ ಬೆಲೆ 173.05/- ರೂಪಾಯಿ ಇರುತ್ತದೆ. 3) Radico 8PM-180 ML ಅಳತೆಯ ಖಾಲಿ ಪ್ಯಾಕೆಟ್ ಗಳು-2 ಇದ್ದು, ಅ||ಕಿ|| 00.00/- ರೂಪಾಯಿ, 4) ಪ್ಲಾಸ್ಟಿಕ್ ಗ್ಲಾಸುಗಳು-05, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಎಮ್. ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 22-05-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 269, 270 ಐಪಿಸಿ ಹಾಗೂ ಕಲಂ: 32, 34 ಕರ್ನಾಟಕ ಅಬಕಾರಿ ಎಕ್ಟ್-1965 ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಧರ ತಂದೆ ಸೂರಪ್ಪ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಸೂರನಮನೆ, ಬೈಲೂರು, ತಾ: ಭಟ್ಕಳ. ಈತನು ದಿನಾಂಕ: 22-05-2021 ರಂದು 20-30 ಗಂಟೆಗೆ ಇತ್ತೀಚೆಗೆ ದೇಶದಾದ್ಯಂತ ಕೊರೋನಾ ಸಾಂಕ್ರಾಮಿಕ ರೋಗವು ತೀವೃವಾಗಿ ಹರಡುತ್ತಿದ್ದು, ಅದನ್ನು ತಡೆಗಟ್ಟುವ ಉದ್ದೇಶದಿಂದ ಸುರಕ್ಷತಾ ಕ್ರಮವನ್ನು ಕೈಗೊಳ್ಳಲು ಘನ ಕರ್ನಾಟಕ ಸರಕಾರದ ಪರವಾಗಿ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರವರು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದಂತೆ ಯಾರೂ ಮನೆಯಿಂದ ಹೊರೆಗೆ ಬಾರದಂತೆ ಲಾಕಡೌನ್ ಆದೇಶವನ್ನು ಜಿಲ್ಲಾದ್ಯಂತ ಜಾರಿ ಮಾಡಿರುವ ಬಗ್ಗೆ ಗೊತ್ತಿದ್ದರೂ ಸಹ ಮುಖಕ್ಕೆ ಯಾವುದೇ ಮಾಸ್ಕ್ ಅನ್ನು ಧರಿಸದೇ ಹಾಗೂ ಯಾವುದೇ ರಕ್ಷಣೆಯನ್ನು ಹೊಂದದೆ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡಲು ನಿರ್ಲಕ್ಷ್ಯತನ ತೋರಿ, ಯಾವುದೇ ಪಾಸ್ ಯಾ ಪರವಾನಗಿ ಹೊಂದದೇ 1). FOSTERS GOLD STRONG BEER-650 ML ಅಳತೆಯ ಬಾಟಲಿಗಳು-10, 2). KINGFISHER STRONG PREMIUM BEER-650 ML ಅಳತೆಯ ಬಾಟಲಿಗಳು-22, 3). BAGPIPER WHISKY-180 ML ಅಳತೆಯ ಟೆಟ್ರಾ ಪ್ಯಾಕೆಟ್ ಗಳು-09, ಹೀಗೆ ಒಟ್ಟೂ 5456.07/- ರೂಪಾಯಿ ಮೌಲ್ಯದ ಸರಾಯಿ ಬಾಟಲಿ/ಪ್ಯಾಕೆಟ್ ಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡು ತನ್ನ ಲಾಭಕ್ಕೋಸ್ಕರ ಮಾರಾಟ ಮಾಡುತ್ತಿರುವಾಗ ಬೈಲೂರು ಗುಡಿಗದ್ದೆ ಕ್ರಾಸ್ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ದಿವಾಕರ ಪಿ. ಎಮ್, ಪೊಲೀಸ್ ವೃತ್ತ ನಿರೀಕ್ಷಕರು, ಭಟ್ಕಳ ವೃತ್ತ, ಭಟ್ಕಳ ರವರು ದಿನಾಂಕ: 22-05-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 279 ಐಪಿಸಿ ವಿವರ...... ನಮೂದಿತ ಆರೋಪಿತ ಪಿಕೂ ತಂದೆ ಬಚ್ಚಾರಾಮ ಯಾದವ್, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ರಾಮಚಂದಿಪುರ, ಚೌಬಿಯಾಪುರ, ವಾರಣಾಸಿ, ಉತ್ತರ ಪ್ರದೇಶ (ಕಂಟೇನರ್ ಲಾರಿ ನಂ: ಜಿ.ಜೆ-05/ಬಿ.ಎಕ್ಸ್-8167 ನೇದರ ಚಾಲಕ). ಈತನು ದಿನಾಂಕ: 18-05-2021 ರಂದು ಸಾಯಂಕಾಲ 17-00 ಗಂಟೆಯ ಸುಮಾರಿಗೆ ತನ್ನ ಕಂಟೇನರ್ ಲಾರಿ ನಂ: ಜಿ.ಜೆ-05/ಬಿ.ಎಕ್ಸ್-8167 ನೇದನ್ನು ಹುಬ್ಬಳ್ಳಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ತಿರುವಿನಲ್ಲಿ, ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಲಾರಿಯನ್ನು ರಸ್ತೆಯ ಬಲಬದಿಗೆ ಪಲ್ಟಿ ಕೆಡವಿ ಕಂಟೇನರ್ ಲಾರಿಯ ಬಲಭಾಗದಲ್ಲಿ ಜಖಂ ಮಾಡಿದ್ದಲ್ಲದೇ, ಕಂಟೇನರ್ ಲಾರಿಯಲ್ಲಿದ್ದ ಪಿ.ವಿ.ಸಿ ಮಟೀರಿಯಲ್ಸ್ ಇರುವ 22 ಬ್ಯಾಗ್ ಅನ್ನು ಡ್ಯಾಮೇಜ್ ಮಾಡಿ ಇದರಿಂದ 75,000/- ರೂಪಾಯಿಯಷ್ಟು ಲುಕ್ಸಾನ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸೋಹನಲಾಲ್ ತಂದೆ ಜೊಗೇಶ್ವರ ಮಹಾತೋ, ಪ್ರಾಯ-25 ವರ್ಷ, ವೃತ್ತಿ-ತೇಜಸ್ ಲಾಜಿಸ್ಟಿಕ್, ದೆಹಲಿ, ಸಾ|| ಟೆಲಿನಕೋಚಾ, ಕುಯಾಲಿ ಕೋವಾಲಿ, ಈಸ್ಟ ಸಿಂಗ್ ಬೂಮ್, ಜಾರ್ಕಂಡ್  ಹಾಲಿ ಸಾ|| ಶಾಂತಿ ಸದನ, ಬಜಪೆ, ಎಮ್.ಆರ್.ಪಿ.ಎಲ್ ರಸ್ತೆ, ಕಾರ್ಪೋರೇಶನ್ ಮಾರ್ಕೆಟ್ ಎದುರು, ತಾ: ಸುರತ್ಕಲ್, ಜಿ: ದಕ್ಷಿಣ ಕನ್ನಡ ರವರು ದಿನಾಂಕ: 22-05-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 87/2021, ಕಲಂ: 279 ಐಪಿಸಿ ವಿವರ...... ನಮೂದಿತ ಆರೋಪಿತ ಸಾಹೇಬ್ ತಂದೆ ಹಮೀದ್ ದೇಸಾಯಿ, ಪ್ರಾಯ-43 ವರ್ಷ, ವೃತ್ತಿ-ಚಾಲಕ, ಸಾ|| ಕುಂದರಗಿ, ತಾ: ಗೋಕಾಕ, ಜಿ: ಬೆಳಗಾವಿ (ಟ್ಯಾಂಕರ್ ಲಾರಿ ನಂ: ಕೆ.ಎ-22/ಡಿ-1127 ನೇದರ ಚಾಲಕ). ಈತನು ದಿನಾಂಕ: 22-05-2021 ರಂದು ಬೆಳಗಿನ ಜಾವ 02-00 ಗಂಟೆಯ ಸುಮಾರಿಗೆ ತನ್ನ ಟ್ಯಾಂಕರ್ ಲಾರಿ ನಂ: ಕೆ.ಎ-22/ಡಿ-1127 ನೇದನ್ನು ಹುಬ್ಬಳ್ಳಿ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ತಿರುವಿನಲ್ಲಿ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಲಾರಿಯನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಗಜಾನನ ಯು. ನಾರ್ವೇಕರ, ಎ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 22-05-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 269, 270, 143 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಫಯಾಜ್ ತಂದೆ ಇಲಿಯಾಸ್ ಖಾಜಿ, ಪ್ರಾಯ-40 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಕೋಟೆ ಗಲ್ಲಿ, ತಾ: ಶಿರಸಿ, 2]. ಹಬೀಬ್ ರೆಹಮಾನ್ ತಂದೆ ಅಬ್ದುಲ್ ಖುದ್ದುಸ್ ಸೌಧಾಗರ್, ಪ್ರಾಯ-40 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಕೋಟೆ ಗಲ್ಲಿ, ತಾ: ಶಿರಸಿ, 3]. ಮಹ್ಮದ್ ಆರೀಪ್ ತಂದೆ ಅಲ್ಲಾವುದ್ದೀನ್ ಬಿಳಗಿ, ಪ್ರಾಯ-36 ವರ್ಷ, ವೃತ್ತಿ-ಮಟನ್ ವ್ಯಾಪಾರ, ಸಾ|| ಕೋಟೆ ಗಲ್ಲಿ, ತಾ: ಶಿರಸಿ, 4]. ಬಿಲಾಲ್ ತಂದೆ ಸಾಧಿಕ್ ಸೌಧಾಗರ್, ಪ್ರಾಯ-27 ವರ್ಷ, ವೃತ್ತಿ-ವ್ಯಾಪಾರ, ಸಾ|| ಕೋಟೆ ಗಲ್ಲಿ, ತಾ: ಶಿರಸಿ, 5]. ಅಬ್ದುಲ್ ಖಾಲಿದ್ ತಂದೆ ಇಲಿಯಾಸ್ ಖಾಜಿ, ಪ್ರಾಯ-32 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಕೋಟೆ ಗಲ್ಲಿ, ತಾ: ಶಿರಸಿ. ಮಾನ್ಯ ಕರ್ನಾಟಕ ಸರ್ಕಾರ, ಬೆಂಗಳೂರು ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಅಧೀಕೃತ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಕೊರೋನಾ ಕರ್ಫ್ಯೂ (ಲಾಕಡೌನ್) ಜಾರಿ ಮಾಡಿದ್ದರೂ ಸಹ ನಮೂದಿತ ಆರೋಪಿತರು ದಿನಾಂಕ: 22-05-2021 ರಂದು 18-30 ಗಂಟೆಯ ಸುಮಾರಿಗೆ ಶಿರಸಿ ಶಹರದ ಮುಸ್ಲಿಂ ಗಲ್ಲಿಯ ಸಾರ್ವಜನಿಕ ರಸ್ತೆಯ ಮೇಲೆ ಗುಂಪು ಗುಂಪಾಗಿ ಸೇರಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಯಾವುದೇ ಕಾರಣವಿಲ್ಲದೆ ಅನಾವಶ್ಯಕವಾಗಿ ತಿರುಗಾಡಿ ಕೊರೋನಾ ಸಾಂಕ್ರಾಮಿಕ ರೋಗದ ಕರ್ಫ್ಯೂ ಜಾರಿಯ ಸರ್ಕಾರದ ಮತ್ತು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ, ಕೋವಿಡ್-19 ವೈರಾಣು ಹರಡುವಿಕೆ ಉದ್ದೇಶದಿಂದ ನಿರ್ಲಕ್ಷ್ಯತೆ ಹಾಗೂ ಸಾರ್ವಜನಿಕರ ದೇಹದ ಸುರಕ್ಷತೆಗೆ ಅಪಾಯವುಂಟು ಮಾಡುವಂತಹ ನಿರ್ಲಕ್ಷ್ಯದ ಕೃತ್ಯ ಮಾಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 22-05-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 269, 270 ಐಪಿಸಿ ಹಾಗೂ ಕಲಂ: 51(ಬಿ) ವಿಪತ್ತು ನಿರ್ವಹಣಾ ಕಾಯ್ದೆ-2005 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುಹಾಸ ತಂದೆ ಗಣಪತಿ ಸರ್ವದೆ, ಪ್ರಾಯ-28 ವರ್ಷ, ವೃತ್ತಿ-ಮಹೇಂದ್ರ ಪೈನಾನ್ಸ್ ನಲ್ಲಿ ಕೆಲಸ, ಸಾ|| 3 ನೇ ಕ್ರಾಸ್, ವಿದ್ಯಾನಗರ, ತಾ: ಶಿರಸಿ, 2]. ಅನೂಪ ಸುಭಾಷ ಸರ್ವದೆ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| 3 ನೇ ಕ್ರಾಸ್, ವಿದ್ಯಾನಗರ, ತಾ: ಶಿರಸಿ, 3]. ಆದರ್ಶ ತಂದೆ ಪ್ರಕಾಶ ಪಗಡೆ, ಪ್ರಾಯ-23 ವರ್ಷ, ವೃತ್ತಿ-ದಿವಗಿ ಫ್ಯಾಕ್ಟರಿಯಲ್ಲಿ ಕೆಲಸ, ಸಾ|| 4 ನೇ ಕ್ರಾಸ್, ವಿದ್ಯಾನಗರ, ತಾ: ಶಿರಸಿ, 4]. ಆಶೀಸ್ ನಾಗರಾಜ ಪಗಡೆ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| 3 ನೇ ಕ್ರಾಸ್, ವಿದ್ಯಾನಗರ, ತಾ: ಶಿರಸಿ, 5]. ನೋಹನ್ ಜೋಯಲ್ ಸೋನ್ಸ್, ಪ್ರಾಯ-23 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| 3 ನೇ ಕ್ರಾಸ್, ವಿದ್ಯಾನಗರ, ತಾ: ಶಿರಸಿ, 6]. ಸೋಲಮನ್ ತಂದೆ ಜೋಯಲ್ ಸೋನ್ಸ್, ಪ್ರಾಯ-25 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| 3 ನೇ ಕ್ರಾಸ್, ವಿದ್ಯಾನಗರ, ತಾ: ಶಿರಸಿ, 7]. ಸುಶಾಂತ ನವೀನ್ ಕರ್ಕಡ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| 3 ನೇ ಕ್ರಾಸ್, ವಿದ್ಯಾನಗರ, ತಾ: ಶಿರಸಿ, 8]. ಕಾರ್ತಿಕ ತಂದೆ ನಾಗೇಶ ಕಿಣಿ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| 1 ನೇ ಕ್ರಾಸ್, ವಿದ್ಯಾನಗರ, ತಾ: ಶಿರಸಿ, 9]. ಲಿಖಿತ ತಂದೆ ನಾಗರಾಜ ಗುಡಿಗಾರ, ಪ್ರಾಯ-24 ವರ್ಷ, ವೃತ್ತಿ-ದಿವಗಿ ಪ್ಯಾಕ್ಟರಿಯಲ್ಲಿ ಕೆಲಸ, ಸಾ|| 1 ನೇ ಕ್ರಾಸ್, ವಿದ್ಯಾನಗರ, ತಾ: ಶಿರಸಿ. ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಲಾಕಡೌನ್ ಆದೇಶ ಹೊರಡಿಸಿದ್ದು, ಅದರಲ್ಲಿ ಜನರು ಮನೆಯಿಂದ ಹೊರಗಡೆ ಬಂದು ಅನಾವಶ್ಯಕವಾಗಿ ತಿರುಗಾಡದಂತೆ ಮತ್ತು ಗುಂಪುಗೂಡದಂತೆ ಸೂಚಿಸಿದರು ಸಹ ನಮುದಿತ ಆರೋಪಿತರೆಲ್ಲರೂ ಸೇರಿಕೊಂಡು ದಿನಾಂಕ: 22-05-2021 ರಂದು 18-00 ಗಂಟೆಗೆ ಶಿರಸಿ ನಗರದ ವಿದ್ಯಾನಗರ 3 ನೇ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೋವಿಡ್-19 ರೋಗ ಹರಡುವುದನ್ನು ತಡೆಯಲು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳಾದ ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಗುಂಪು ಕಟ್ಟಿಕೊಂಡು ಕುಳಿತುಕೊಂಡು ಇಸ್ಪೀಟ್ ಕತ್ತೆ ಆಟವನ್ನು ಮನೋರಂಜನೆಗಾಗಿ ಆಡುತ್ತಿರುವಾಗ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಲಾಕಡೌನ್ ಆದೇಶದ ಕಟ್ಟುನಿಟ್ಟಿನ ಜಾರಿ ಮಾಡುವ ಕರ್ತವ್ಯದಲ್ಲಿದ್ದ  ಪಿರ್ಯಾದಿಯವರಿಗೆ ಸಿಕ್ಕವರಿಗೆ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶದ ಬಗ್ಗೆ ತಿಳಿಸಿ, ಅಲ್ಲಿಂದ ಹೋಗುವಂತೆ ಹೇಳಿದಾಗಲೂ ಸಹ ನಮೂದಿತ ಆರೋಪಿತರು ಹೋಗದೇ ತಿರಸ್ಕಾರ ಮಾಡಿದ್ದು, ಆರೋಪಿತರು ಕೋವಿಡ್-19 ರೋಗ ಹರಡದಂತೆ ತಡೆಯುವಲ್ಲಿ ನಿರ್ಲಕ್ಷ್ಯದ ಮತ್ತು ದ್ವೇಷಪೂರ್ವಕ ಕೃತ್ಯ ಎಸಗಿದ್ದಲ್ಲದೇ, ಕೋವಿಡ್ ರೋಗ ಹರಡದಂತೆ ತಡೆಯವಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಯ ಸೂಚನೆ ಪಾಲಿಸದೇ ಸರ್ಕಾರ ಹೊರಡಿಸಿದ ಲಾಕಡೌನ್ ಆದೇಶದ ಉಲ್ಲಂಘನೆ ಮಾಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ (ಕಾ&ಸು), ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 22-05-2021 ರಂದು 20-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 269, 270 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸೈಯ್ಯದ್ ತಂದೆ ಅಬ್ದುಲ್ ರೆಹಮಾನ್ ಬಮ್ಮಿಗಟ್ಟಿ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಿಲ್ಲೆ ಓಣಿ, ತಾ: ಮುಂಡಗೋಡ, 2]. ದಾದಾಪೀರ್ ತಂದೆ ಮಹ್ಮದಸಾಬ್ ಶ್ಯಾಬಾಳ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಾಯ್.ಬಿ ರೋಡ್, ಮುಲ್ಲಾ ಗಲ್ಲಿ, ತಾ: ಮುಂಡಗೋಡ, 3]. ಆನಂದ ತಂದೆ ತಿಪ್ಪಣ್ಣ ಭೋವಿ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಿಲ್ಲೆ ಓಣಿ, ತಾ: ಮುಂಡಗೋಡ, 4]. ಹಬೀಬವುಲ್ಲಾ ತಂದೆ ಅಬ್ದುಲ್ ರಜಾಕ್ ಹುಬ್ಬಳ್ಳಿ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸುಭಾಷ ನಗರ, ತಾ: ಮುಂಡಗೋಡ, 5]. ಗರೀಬ್ ದಿವಾನ್ ತಂದೆ ರಾಜೇಸಾಬ್ ಮಜ್ಜಿಗೇರಿ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಿಲ್ಲೆ ಓಣಿ, ತಾ: ಮುಂಡಗೋಡ, 6]. ರಿಯಾಜ್ ಅಹ್ಮದ್ ತಂದೆ ಮಾಬುಬಸಾಬ್ ಭಂಡಾರಿ, ಪ್ರಾಯ-37 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಮಾರಿಕಾಂಬಾ ನಗರ, ತಾ: ಮುಂಡಗೋಡ, 7]. ರಫೀಕ್ ತಂದೆ ಹುಸೇನಸಾಬ್ ಕಲೇಗಾರ, ಪ್ರಾಯ-43 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಆನಂದ ನಗರ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ದಿನಾಂಕ: 25-05-2021 ರಂದು ಸಂಜೆ 17-50 ಗಂಟೆಗೆ ಮುಂಡಗೋಡ ಶಹರದ ಮಾರಿಕಾಂಬಾ ನಗರ ಅಮಟಗೇರೆ ಕೆರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ (ಕೋವಿಡ್-19) ಕೊರೋನಾ ರೋಗ ಹರಡುವ ಸಂಭವ ಇದ್ದ ಬಗ್ಗೆ ಮಾನ್ಯ ಕರ್ನಾಟಕ ಸರಕಾರದ ಹಾಗೂ ಜಿಲ್ಲಾಧಿಕಾರಿಯವರ ಲಾಕಡೌನ್ ಆದೇಶ ಇದ್ದ ಬಗ್ಗೆ ಗೊತ್ತಿದ್ದರೂ ಸಹ ವಿಧಿವಿರುದ್ಧವಾಗಿ ನಿರ್ಲಕ್ಷ್ಯತನದಿಂದ ಹಾಗೂ ಉದ್ದೇಶ ಪೂರ್ವಕವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಕೊರೋನಾ ರೋಗದ ಸೋಂಕು ಹರಡಿ ಮಾನವನ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಕುಳಿತುಕೊಂಡು ನೆಲಕ್ಕೆ ನ್ಯೂಸ್ ಪೇಪರ್ ಅನ್ನು ಹಾಸಿ ತಮ್ಮ ತಮ್ಮ ಲಾಭದ ಸಲುವಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿರುವಾಗ ನಗದು ಹಣ 5,500/- ರೂಪಾಯಿ ಹಾಗೂ ಜುಗಾರಾಟದ ಸಲಕರಣೆಗಳಾದ ನ್ಯೂಸ್ ಪೇಪರ್, 52 ಇಸ್ಪೀಟ್ ಎಲೆಗಳು, ಇವುಗಳೊಂದಿಗೆ ಆರೋಪಿತರೆಲ್ಲರೂ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬಸವರಾಜ ಮಬನೂರ, ಪಿ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 22-05-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 101/2021, ಕಲಂ: 269, 271 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಿವದೇವ ತಂದೆ ಕಾಶಿನಾಥ ದೇಸಾಯಿ ಸ್ವಾಮಿ, 2]. ಸೃಷ್ಟಿ ತಂದೆ ಶಿವದೇವ ದೇಸಾಯಿ ಸ್ವಾಮಿ, 3]. ಶ್ರೀಮತಿ ಪುಷ್ಪಾ ಕೋಂ. ಶಿವದೇವ ದೇಸಾಯಿ ಸ್ವಾಮಿ, 4]. ಚೆನ್ನಬಸಪ್ಪ ಶಿವದೇವ ದೇಸಾಯಿ ಸ್ವಾಮಿ, ಸಾ|| (ಎಲ್ಲರೂ) ಜವಾಹರ ರೋಡ, ಹಳಿಯಾಳ ಶಹರ. ಜಗತ್ತಿನಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿಕೊಂಡಿದ್ದು, ಅದು ಭಾರತ ದೇಶದಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಅದರಂತೆ ಕರ್ನಾಟಕ ರಾಜ್ಯ ಸರಕಾರವು ಜನತಾ ಲಾಕಡೌನ್ ಘೋಷಣೆ ಮಾಡಿ ಆದೇಶಿಸಿದ್ದು, ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ, ಜಿಲ್ಲೆ, ಕಾರವಾರ ರವರು ದಿನಾಂಕ: 16-05-2021 ರಿಂದ 24-05-2021 ರವರೆಗೆ ಹೆಚ್ಚುವರಿ ಕ್ರಮ ಕೈಗೊಳ್ಳಲು ಆದೇಶಿಸಿದಂತೆ ಹಳಿಯಾಳ ಶಹರವನ್ನು ವಿಶೇಷ ಕಂಟೈನಮೆಂಟ್ ಜೋನ್ ಆಗಿ ಘೋಷಿಸಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟನ್ನು ನಿಷೇಧಿಸಿದ್ದು ಇರುತ್ತದೆ. ಅದರಂತೆ ಪಿರ್ಯಾದಿಯವರು ಪುರಸಭೆಯ ಮುಖ್ಯಾಧಿಕಾರಿ ಇದ್ದು, ತಮ್ಮ ಸಂಗಡ ಸಿಬ್ಬಂದಿಗಳನ್ನು ಕರೆದುಕೊಂಡು ಹಳಿಯಾಳ ಶಹರದಲ್ಲಿ ತಮ್ಮ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ ತಿರುಗಾಡುತ್ತಿದ್ದಾಗ, ದಿನಾಂಕ: 22-05-2021 ರಂದು ಬೆಳಿಗ್ಗೆ 07-00 ಗಂಟೆಯಿಂದ 07-30 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ಶಹರದ ಜವಾಹರ ರಸ್ತೆಯಲ್ಲಿರುವ ಕಾಶೆಪ್ಪಾ ಗೌಡ ಹೋ ದೇಸಾಯಿ ಸ್ವಾಮಿ ಕಿರಾಣಿ ಅಂಗಡಿಯ ಮಾಲೀಕರಾದ ಆರೋಪಿ 1 ನೇಯವರು ಇವರು ತನ್ನ ಸಂಗಡ ತಮ್ಮ ಮನೆಯವರಾದ  ಆರೋಪಿ 2, 3 ಹಾಗೂ 4 ನೇಯವರೊಂದಿಗೆ ಕೂಡಿಕೊಂಡು ತಮ್ಮ ಕಿರಾಣಿ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದಾಗ ಪಿರ್ಯಾದಿಯವರು ಸದರ ಆರೋಪಿತರಿಗೆ ‘ಜಗತ್ತಿನಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿಕೊಂಡಿದ್ದು, ಅದು ಭಾರತ ದೇಶದಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಅದರಂತೆ ಕರ್ನಾಟಕ ರಾಜ್ಯ ಸರಕಾರವು ಜನತಾ ಲಾಕಡೌನ್ ಘೊಷಣೆ ಮಾಡಿ ಆದೇಶಿಸಿದ ಬಗ್ಗೆ ನಿಮಗೆ ತಿಳಿದಿಲ್ಲವೇ?’ ಅಂತಾ ಹೇಳಿದ್ದಕ್ಕೆ ಆರೋಪಿತರು ಪಿರ್ಯಾದಿಯವರಿಗೆ ಉದ್ದೇಶಿಸಿ ‘ನಾವು ನಮ್ಮ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತೇವೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ’ ಅಂತಾ ಹೇಳಿರುತ್ತಾರೆ. ಕಾರಣ ಜಗತ್ತಿನಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿಕೊಂಡಿದ್ದು, ಅಲ್ಲದೇ ಹಳಿಯಾಳ ಶಹರವನ್ನು ವಿಶೇಷ ಕಂಟೈನಮೆಂಟ್ ಜೋನ್ ಅಂತಾ ಘೋಷಣೆ ಮಾಡಿದ ವಿಷಯ ತಿಳಿದೂ ಸಹ ಅಂಗಡಿ ತೆರೆದು ವ್ಯಾಪಾರ ವಹಿವಾಟು ಮಾಡಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಆರೋಪಿತರಿಗೆ ತಿಳಿದಿದ್ದದರೂ ಸಹ ನಿರ್ಲಕ್ಷ್ಯತನದಿಂದ ವ್ಯಾಪಾರ ವಹಿವಾಟು ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಕೇಶವ ಎಮ್, ಚೌಗಲೆ, ಮುಖ್ಯಾಧಿಕಾರಿಗಳು, ಪುರಸಭೆ, ಹಳಿಯಾಳ ಶಹರ ರವರು ದಿನಾಂಕ: 22-05-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 102/2021, ಕಲಂ: 269, 271, 353, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಶಾಂತ ತಂದೆ ಶಿವಾಜಿ ಬಡಸ್ಸರ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿಂಧೆ ಗಲ್ಲಿ, ಮುರ್ಕವಾಡ ಗ್ರಾಮ, ತಾ: ಹಳಿಯಾಳ, 2]. ಚಂದ್ರಕಾಂತ ತಂದೆ ರಾಯಪ್ಪ ಸುರೇಕರ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುರ್ಕವಾಡ ಗ್ರಾಮ, ತಾ: ಹಳಿಯಾಳ. ಜಗತ್ತಿನಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿಕೊಂಡಿದ್ದು, ಅದು ಭಾರತ ದೇಶದಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಅದರಂತೆ ಕರ್ನಾಟಕ ರಾಜ್ಯ ಸರಕಾರವು ಜನತಾ ಲಾಕಡೌನ್ ಘೋಷಣೆ ಮಾಡಿ ಆದೇಶಿಸಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಉತ್ತರಕನ್ನಡ ಜಿಲ್ಲೆ ಕಾರವಾರ ರವರು ದಿನಾಂಕ: 16-05-2021 ರಿಂದ 24-05-2021 ರ ವರೆಗೆ ಹೆಚ್ಚುವರಿಕ್ರಮ ಕೈಗೊಳ್ಳಲು ಆದೇಶಿಸಿ ಹಳಿಯಾಳ ಶಹರವನ್ನು ವಿಶೇಷ ಕಂಟೈನಮೆಂಟ್ ಜೋನ್ ಆಗಿ ಘೋಷಿಸಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟನ್ನು ನಿಷೇಧಿಸಿದ್ದು ಇರುತ್ತದೆ. ಅದರಂತೆ ಪಿರ್ಯಾದಿಯವರು ಮುರ್ಕವಾಡ ಗ್ರಾಮ ಪಂಚಾಯಿತಿಯ ಪಿ.ಡಿ.ಓ ರವರಿದ್ದು, ಅವರ ಮೇಲಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಟಾಸ್ಕ್ ಫೋರ್ಸ್ ಕಮಿಟಿ ವತಿಯಿಂದ ಪಿರ್ಯಾದಿಯವರು ಅವರ ಸಿಬ್ಬಂದಿಗಳಾದ 1). ಸಂಜೀವ ತಂದೆ ನೀಲಕಂಠ ಕರೆಂಜೇಕರ, 2). ಕೃಷ್ಣಾ ತಂದೆ ಹನುಮಂತ ಮಂಗನಗೌಡ, 3). ಮಧುರಾ ಠೋಸ್ರರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, 4). ಮಹಾಂತೇಶ ದೊಡ್ಡಮನಿ, ಗ್ರಾಮ ಲೆಕ್ಕಾಧಿಕಾರಿಗಳು, ಹಾಗೂ 5). ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾಂಚನಾ ಪರಶುರಾಮ ಸುಳುಗೇಕರ ಇವರೊಂದಿಗೆ ಕೂಡಿಕೊಂಡು ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನಾವಶ್ಯಕವಾಗಿ ಯಾರೂ ಓಡಾಡದಂತೆ ತಡೆಯಲು ಬೆಳಿಗ್ಗೆಯಿಂದ ದಂಡ ಹಾಕುತ್ತಿದ್ದಾಗ ದಿನಾಂಕ: 22-05-2021 ರಂದು ಬೆಳಿಗ್ಗೆ 11-00 ಗಂಟೆಗೆ ಮುರ್ಕವಾಡ ಗ್ರಾಮ ಪಂಚಾಯಿತಿ ಹತ್ತಿರ ಇದ್ದಾಗ ಆರೋಪಿ 1 ನೇಯವನಿಗೆ ಪಿರ್ಯಾದಿಯವರು ‘ನೀನು ಯಾಕೆ ಓಡಾಡುತ್ತಿದ್ದೀಯಾ? ಲಾಕಡೌನ್ ಆದೇಶದ ಬಗ್ಗೆ ನಿನಗೆ ಗೊತ್ತಿಲ್ಲವೇ?’ ಅಂತಾ ಕೇಳಿ ಅವನಿಗೆ ಕೋವಿಡ್-19 ನೇದರ ಉಲ್ಲಂಘನೆ ಮಾಡಿದ ಬಗ್ಗೆ ಪಂಚಾಯಿತಿ ವತಿಯಿಂದ 100/- ರೂಪಾಯಿಗಳ ದಂಡವನ್ನು ಹಾಕಿ ಮನೆಯಿಂದ ಹೊರಗಡೆ ಬರದಂತೆ ತಿಳಿಸಿ ಕಳುಹಿಸಿ ಕೊಟ್ಟಿದ್ದು, ಇದೇ ಸಿಟ್ಟನಿಂದ ಇದ್ದ ಆರೋಪಿ 1 ನೇಯವನು ಸಂಜೆ 04-30 ಗಂಟೆಗೆ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮ ಪಂಚಾಯಿತಿ ಹತ್ತಿರ ಬಂದು ಪಿರ್ಯಾದಿಯವರು ಕರ್ತವ್ಯದಲ್ಲಿದ್ದಾಗ, ಆರೋಪಿ 1 ನೇಯವನು ತನ್ನ ಸಂಗಡ ಆರೋಪಿ 2 ನೇಯವನಿಗೆ ಕರೆದುಕೊಂಡು ಪಂಚಾಯಿತಿ ಮುಂದೆ ಬಂದು ನಿಂತುಕೊಂಡು ಪಿರ್ಯಾದಿ ಹಾಗೂ ಅವರ ಸಿಬ್ಬಂದಿಗಳನ್ನು ಉದ್ದೇಶಿಸಿ ‘ನೀವು ನನಗೆ ಹೇಗೆ ದಂಡ ಹಾಕಿದಿರಿ?’ ಅಂತಾ ಮರಾಠಿ ಭಾಷೆಯಲ್ಲಿ ಕೇಳುತ್ತಾ ‘ಪಿ.ಡಿ.ಓ ಜಕ್ ಮಾರ್ಲೆ, ರಾಂಡೇಚಾ ಲೋಕ್, ಫಕ್ತ್ ಪೈಸೇ ಗೇಹಾಲಾ ಹೈ ಕೈ’ ಅಂತಾ ಹೊಲಸು ಪದಗಳಿಂದ ಬೈಯ್ದು ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೇ, ಸದರ ಇಬ್ಬರೂ ಆರೋಪಿತರು  ಪಿರ್ಯಾದಿ ಮತ್ತು ಅವರ ಸಿಬ್ಬಂದಿಗಳಿಗೆ ‘ಮುರ್ಕವಾಡ ಪಂಚಾಯಿತಿಯಲ್ಲಿ ನೀವು ಹೇಗೆ ಕೆಲಸ ಮಾಡುತ್ತೀರಿ ಅಂತಾ ನಾವು ನೋಡಿಕೊಳ್ಳುತ್ತೇವೆ’ ಅಂತಾ ಹೇಳಿ ‘ನಿಮಗೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಾಜಿ ತಂದೆ ಮಹಾದೇವ ಮಡಿವಾಳ, ಪ್ರಾಯ-47 ವರ್ಷ, ವೃತ್ತಿ-ಪಿ.ಡಿ.ಓ, ಮುರ್ಕವಾಡ ಗ್ರಾಮ ಪಂಚಾಯಿತಿ, ಸಾ|| ತೇರಗಾಂವ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 22-05-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: 269, 270, 336 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಬುಸಾಲಿಯಾ ತಂದೆ ಹಸನಲಿಯಾ ಕುಪಗಡ್ಡೆ, ಪ್ರಾಯ-25 ವರ್ಷ, ವೃತ್ತಿ-ಚಿಕನ್ ವ್ಯಾಪಾರ, ಸಾ|| ಕುಪಗಡ್ಡೆ, ತಾ: ಶಿರಸಿ. ಈತನು ದಿನಾಂಕ: 22-05-2021 ರಂದು 12-00 ಗಂಟೆಗೆ ದೇಶಾದ್ಯಂತ ಕೊರೋನಾ ಕರ್ಫ್ಯೂ (ಲಾಕಡೌನ್) ಇದ್ದರೂ ಸಹ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ, ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗವನ್ನು ಹರಡಲು ಮುಂಜಾಗೃತಾ ಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದು ಅಂತಾ ಆದೇಶವಿದ್ದರೂ ಸಹ, ದ್ವೇಷಪೂರ್ವಕವಾಗಿ ಕ್ವಾಲಿಟಿ ಚಿಕನ್ ಸೆಂಟರ್ ಎಂಬ ಹೆಸರಿನ ಅಂಗಡಿಯನ್ನು ತೆರೆದಿಟ್ಟುಕೊಂಡು ಚಿಕನ್ ವ್ಯಾಪಾರ ಮಾಡಿ, ನಿರ್ಲಕ್ಷ್ಯತನ ತೋರಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಎಸ್. ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 22-05-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 22-05-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 26/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಚೇತನ ತಂದೆ ನಾಗೇಶ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತೆಂಕಣಕೇರಿ, ತಾ: ಅಂಕೋಲಾ. ಪಿರ್ಯಾದಿಯ ತಮ್ಮನ ಮಗನಾದ ಈತನು ಪಿರ್ಯಾದಿಯ ಸಂಬಂಧಿ ಸಂದೀಪ ತಂದೆ ಉಮೇಶ ನಾಯ್ಕ, ಸಾ|| ಬೇಳಾ, ತಾ: ಅಂಕೋಲಾ ಈತನೊಂದಿಗೆ ದಿನಾಂಕ: 21-05-2021 ರಂದು ಅಂಕೋಲಾ ತಾಲೂಕಿನ ಶೇಡಿಕುಳಿಯ ಬಸಾಕಲ್ ಗುಡ್ಡದ ಹತ್ತಿರ ಸಮುದ್ರದ ದಡಕ್ಕೆ ಹೋದವರು, ಮಧ್ಯಾಹ್ನ 01-00 ಗಂಟೆಯಿಂದ 03-00 ಗಂಟೆಯ ನಡುವಿನ ಅವಧಿಯಲ್ಲಿ ಸಮುದ್ರ ದಡದಲ್ಲಿರುವ ದೊಡ್ಡ ಬಂಡೆ ಕಲ್ಲಿನ ಮೇಲೆ ನಿಂತು ಸಮುದ್ರ ನೋಡುತ್ತಿದ್ದಾಗ ಅಥವಾ ಇನ್ನಾವುದೋ ಕಾರಣಕ್ಕೆ ಬಂಡೆ ಕಲ್ಲಿನ ಮೇಲೆ ನಿಂತುಕೊಂಡಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು, ಆತನ ಮೃತದೇಹವು ದಿನಾಂಕ: 22-05-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಸಿಕ್ಕಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೋಹನ ತಂದೆ ಹುಲಿಯಪ್ಪ ನಾಯ್ಕ, ಪ್ರಾಯ-54 ವರ್ಷ, ವೃತ್ತಿ-ಟೇಲರಿಂಗ್, ಸಾ|| ಅಗಸೂರು, ತಾ: ಅಂಕೋಲಾ ರವರು ದಿನಾಂಕ: 22-05-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 24-05-2021 04:49 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080