ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 22-11-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 143, 147, 447, 323, 324, 427 ಸಹಿತ 149 ಐಪಿಸಿ ಹಾಗೂ ಕಲಂ: 3, 4 The Prevention of Damage to Public Property Act-1984 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುರೇಂದ್ರ ಅರ್ಗೇಕರ, 2]. ಸೂರಜ ಕೊಡಾರಕರ, 3]. ನವೀನ ತಾಂಡೇಲ, 4]. ಶರಣ ಡಿ. ತಾಂಡೇಲ, ಸಾ|| ಮುದಗಾ, ಅಮದಳ್ಳಿ, ಕಾರವಾರ ಹಾಗೂ ಇನ್ನೂ 5-6 ಜನರು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರೆಲ್ಲರೂ ಸೇರಿಕೊಂಡು ದಿನಾಂಕ: 21-11-2021 ರಂದು 17-30 ಗಂಟೆಯ ಸಮಯಕ್ಕೆ ಉದ್ದೇಶಪೂರ್ವಕವಾಗಿ ಕಾರವಾರ ತಾಲೂಕಿನ ಭಾರತೀಯ ನೌಕಾ ಸೇನೆಗೆ ಸಂಬಂಧಪಟ್ಟ ಮುದಗಾ ಎನ್.ಸಿ.ಸಿ ಕಂಪನಿಯ ಲೇಬರ್ ಕ್ಯಾಂಪ್ ನ ಕಂಪೌಂಡ್ ಗೋಡೆಯನ್ನು ಜಿಗಿದು ಅತಿಕ್ರಮಣ ಪ್ರವೇಶ ಮಾಡಿಕೊಂಡು, ಅಲ್ಲಿಯ ಕೆಲಸಗಾರರಾದ ಆದಿತ್ಯ ಬಿಶ್ವಾಸ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪಶ್ಚಿಮ ಬಂಗಾಳ ಹಾಗೂ ಮುಖೇಶ, ಪ್ರಾಯ-28 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಉತ್ತರ ಪ್ರದೇಶ ಇವರಿಗೆ ಕಲ್ಲಿನಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ಸದ್ರಿ ಲೇಬರ್ ಕಾಲೋನಿಯ ಕಿಡಕಿ ಗ್ಲಾಸ್ ಹಾಗೂ ಮೆಶ್ ಗಳನ್ನು ಒಡೆದು ಹಾನಿ ಪಡಿಸಿದ್ದಲ್ಲದೇ, ಇದನ್ನು ವಿಚಾರಿಸಲು ಹೋದ ಪಿರ್ಯಾದಿಗೂ ಕೂಡಾ ಆರೋಪಿ 3 ನೇಯವನು ಕೈಯಿಂದ ತಲೆಗೆ ಮತ್ತು ಕುತ್ತಿಗೆಗೆ ಹೊಡೆದು ನೋವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಬಿಬಿನ್ ಕೆ. ಆರ್. ತಂದೆ ಕೆ. ಪಿ. ರಮಣನ್, ಪ್ರಾಯ-37 ವರ್ಷ, ವೃತ್ತಿ-ಎನ್.ಸಿ.ಸಿ ಯಲ್ಲಿ ಸೆಕ್ಯೂರಿಟಿ ಗಾರ್ಡ್, ಸಾ|| ಸೀಬರ್ಡ್ ಕಾಲೋನಿ, ಮುದಗಾ, ಅಮದಳ್ಳಿ, ಕಾರವಾರ ರವರು ದಿನಾಂಕ: 22-11-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಮತಿ ಕಲ್ಪನಾ ಕೋಂ. ಮಧುಕರ ಹರಿಕಂತ್ರ, ಪ್ರಾಯ-38 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಸೀಬರ್ಡ್ ಕಾಲೋನಿ, ಮುದಗಾ, ಅಮದಳ್ಳಿ, ಕಾರವಾರ. ಇವಳು ದಿನಾಂಕ: 22-11-2021 ರಂದು 19-30 ಗಂಟೆಯ ಸಮಯಕ್ಕೆ ಮುದಗಾದ ಸೀಬರ್ಡ್ ಕಾಲೋನಿಯಲ್ಲಿರುವ ರಸ್ತೆಯ ಖುಲ್ಲಾ ಸ್ಥಳದಲ್ಲಿ ಬೀದಿ ದೀಪದ ಕೆಳಗಡೆ ತನ್ನ ತಾಬಾ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಒಟ್ಟೂ 38,246/- ರೂಪಾಯಿ ಕಿಮ್ಮತ್ತಿನ ಗೋವಾ ರಾಜ್ಯ ತಯಾರಿಕೆಯ ಸರಾಯಿ ಬಾಟಲಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಕುರಿತು ಗೋವಾ ರಾಜ್ಯದಿಂದ ತರಿಸಿಕೊಂಡು ಅದನ್ನು ಮಾರಾಟ ಮಾಡಲು ತನ್ನ ತಾಬಾದಲ್ಲಿ ಇಟ್ಟುಕೊಂಡಿರುವಾಗ ದಾಳಿಯ ಕಾಲಕ್ಕೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ವಿಜಯಲಕ್ಷ್ಮಿ ಕಟಕದೊಂಡ, ಡಬ್ಲ್ಯೂ.ಪಿ.ಎಸ್.ಐ, ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 22-11-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ಮೋಹನ ಕೊಠಾರಕರ್, ಪ್ರಾಯ-33 ವರ್ಷ, ಸಾ|| ಹಳಗಾ, ಬೋಳಶಿಟ್ಟಾ, ಕಾರವಾರ (ಮೋಟಾರ್ ಸೈಕಲ್ ನಂ: ಜಿ.ಎ-08/ಕ್ಯೂ-3657 ನೇದರ ಸವಾರ). ದಿನಾಂಕ: 04-11-2021 ರಂದು ಸಾಯಂಕಾಲ 06-30 ಗಂಟೆಗೆ ಪಿರ್ಯಾದಿ ಮತ್ತು ಆತನ ಹೆಂಡತಿ ಶ್ರೀಮತಿ ಗೀತಾ ಕೋಂ. ಶ್ಯಾಮಕುಮಾರ ತಳೇಕರ, ಪ್ರಾಯ-48 ವರ್ಷ, ಇಬ್ಬರೂ ಸೇರಿಕೊಂಡು ಮೋಟಾರ್ ಸೈಕಲ್ ನಂ: ಕೆ.ಎ-28/ವಾಯ್-4862 ನೇದರ ಮೇಲೆ ಚಿಂಚೇವಾಡಾದ ಬಾಡಿಗೆ ಮನೆಯಿಂದ ಹಳಗೆಜೂಗಕ್ಕೆ ಹೋಗಲು ಹೆಲ್ಮೆಟ್ ಅನ್ನು ಧರಿಸಿಕೊಂಡು ತನ್ನ ಹೆಂಡತಿಗೆ ಹಿಂಬದಿಗೆ ಕೂರಿಸಿಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಬೋಳಶಿಟ್ಟಾ ರಸ್ತೆಯಿಂದ ಮೋಟಾರ್ ಸೈಕಲ್ ನಂ: ಜಿ.ಎ-08/ಕ್ಯೂ-3657 ನೇದರ ಸವಾರನಾದ ನಮೂದಿತ ಆರೋಪಿತನು ತನ್ನ ಮೋಟಾರ್ ಸೈಕಲನ್ನು ನಿರ್ಲಕ್ಷ್ಯತನದಿಂದ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ತನ್ನ ಬದಿಯನ್ನು ಬಿಟ್ಟು ತೀರಾ ಬಲಬದಿಗೆ ಅಂದರೆ ಪಿರ್ಯಾದಿಯವರ ಸೈಡಿಗೆ ಬಂದು ಪಿರ್ಯಾದಿಯವರ ಮೋಟಾರ್ ಸೈಕಲಿನ ಬಲಬದಿಗೆ ಡಿಕ್ಕಿ ಪಡಿಸಿ, ಪಿರ್ಯಾದಿಯವರ ಹೆಂಡತಿ ಗೀತಾಳಿಗೆ ಬಲಗಾಲಿನ ಮಂಡಿಯ ಕೆಳಗೆ ಮೂಳೆಗೆ ಗಂಭೀರ ಗಾಯವಾಗಲು ಮತ್ತು ಮುಂಗಾಲಿಗೆ ತೆರಚಿದ ಗಾಯವಾಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಶ್ಯಾಮಕುಮಾರ ತಂದೆ ಮಹಾಬಳೇಶ್ವರ ತಳೇಕರ್, ಪ್ರಾಯ-48 ವರ್ಷ, ವೃತ್ತಿ-ಸೆಕ್ಯುರಿಟಿ ಗಾರ್ಡ್ ಕೆಲಸ, ಸಾ|| ಹಳಗೆಜೂಗ, ಕಾರವಾರ ರವರು ದಿನಾಂಕ: 22-11-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 315/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಘವೇಂದ್ರ ತಂದೆ ರತ್ನಾಕರ ಮೇಸ್ತಾ, ಪ್ರಾಯ-40 ವರ್ಷ, ವೃತ್ತಿ-ಬಿಸಿನೆಸ್, ಸಾ|| ಮದ್ದುಗುಡ್ಡೆ ರೋಡ್, ತಾ: ಕುಂದಾಪುರ, ಜಿ: ಉಡುಪಿ (ಕಾರ್ ನಂ: ಕೆ.ಎ-20/ಪಿ-7354 ನೇದರ ಚಾಲಕ). ಈತನು ದಿನಾಂಕ: 22-11-2021 ರಂದು ಬೆಳಿಗ್ಗೆ 08-30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೊನ್ನಾವರ ತಾಲೂಕಿನ ಭಾಸ್ಕೇರಿ ವರ್ನಕೇರಿ ಕ್ರಾಸ್ ಹತ್ತಿರ ತನ್ನ ಬಾಬ್ತು ಕಾರ್ ನಂ: ಕೆ.ಎ-20/ಪಿ-7354 ನೇದನ್ನು ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಹೊನ್ನಾವರ ಕಡೆಯಿಂದ ಗೇರುಸೊಪ್ಪ ಕಡೆಗೆ ಗಾಯಾಳು ಮಂಜುನಾಥ ತಂದೆ ಕೇಶ ಗೌಡ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆರವಳ್ಳಿ, ತಾ: ಹೊನ್ನಾವರ, ಈತನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-3639 ನೇದರ ಮೇಲೆ ತನ್ನ ಹೆಂಡತಿಯಾದ ಶ್ರೀಮತಿ ಸವಿತಾ ಕೋಂ. ಮಂಜುನಾಥ ಗೌಡ, ಪ್ರಾಯ-33 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕೆರವಳ್ಳಿ, ತಾ: ಹೊನ್ನಾವರ ಹಾಗೂ ತನ್ನ ಹಿರಿಯ ಮಗಳಾದ ಕು: ಮಧುಶ್ರೀ ತಂದೆ ಮಂಜುನಾಥ ಗೌಡ, ಪ್ರಾಯ-6 ವರ್ಷ, ಮತ್ತು ಕಿರಿಯ ಮಗಳಾದ ಕು: ಮಾನ್ಯಶ್ರೀ ತಂದೆ ಮಂಜುನಾಥ ಗೌಡ, ಪ್ರಾಯ-3 ವರ್ಷ, ಸಾ|| ಕೆರವಳ್ಳಿ, ತಾ: ಹೊನ್ನಾವರ, ಇವರಿಗೆ ಕೂರಿಸಿಕೊಂಡು ತನ್ನ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಮಂಜುನಾಥ ತಂದೆ ಕೇಶ ಗೌಡ, ಈತನಿಗೆ ಹಣೆಗೆ, ಮೂಗಿಗೆ, ತುಟಿಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯ ಪಡಿಸಿ, ಶ್ರೀಮತಿ ಸವಿತಾ ಕೋಂ. ಮಂಜುನಾಥ ಗೌಡ, ಇವಳಿಗೆ ಎಡಗೈಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯನೋವು ಪಡಿಸಿದ್ದಲ್ಲದೇ, ಮಕ್ಕಳಾದ ಕು: ಮಧುಶ್ರೀ, ಇವಳಿಗೆ ತಲೆಗೆ, ಮುಖಕ್ಕೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯ ಪಡಿಸಿದ್ದಲ್ಲದೇ, ಕು: ಮಾನ್ಯಶ್ರೀ, ಇವಳಿಗೆ ಹಣೆಗೆ, ಬಲಗಣ್ಣಿನ ಹತ್ತಿರ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಆನಂದ ತಂದೆ ನಾರಾಯಣ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆರವಳ್ಳಿ ಪೋಸ್ಟ್, ಕೆಳಗಿನ ಮೂಡ್ಕಣಿ, ತಾ: ಹೊನ್ನಾವರ ರವರು ದಿನಾಂಕ: 22-11-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 316/2021, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಕೇಶವ ತಂದೆ ನಾಗಪ್ಪ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಉಪ್ಪೋಣಿ, ತಾ: ಹೊನ್ನಾವರ. ಈತನು ದಿನಾಂಕ: 22-11-2021 ರಂದು 21-00 ಗಂಟೆಗೆ ಹೊನ್ನಾವರ ತಾಲೂಕಿನ ಉಪ್ಪೋಣಿ ಗ್ರಾಮದಲ್ಲಿರುವ ತನ್ನ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸರಾಯಿಯನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವಾಗ ದಾಳಿಯ ಕಾಲಕ್ಕೆ 1). KINGFISHER STRONG ಅಂತಾ ಬರೆದ 500 ML ಅಳತೆಯ ಪ್ರೀಮಿಯಮ್ ಬಿಯರ್  ಟಿನ್-01, 2). HAYWARDS CHEERS WHISKY ಅಂತಾ ಬರೆದ 90 ML ಅಳತೆಯ ಟೆಟ್ರಾ ಪ್ಯಾಕೆಟ್ ಗಳು-02, 3). KINGFISHER STRONG ಅಂತಾ ಬರೆದ 500 ML ಅಳತೆಯ ಖಾಲಿ ಇರುವ ಪ್ರೀಮಿಯಮ್ ಬಿಯರ್ ಟಿನ್-02, 4) ಸರಾಯಿ ವಾಸನೆ ಇರುವ ಸ್ಟೀಲ್ ಲೋಟಗಳು-03, 5). ಬಳಸದೇ ಇರುವ ಖಾಲಿ ಪ್ಲಾಸ್ಟಿಕ್ ಲೋಟಗಳು-03, 6). ಖಾಲಿ ಇರುವ ಶೇಂಗಾ ಪ್ಯಾಕೆಟ್ ಗಳು-04, 7). ಖಾಲಿ ಇರುವ ಚಿಪ್ಸ್ ಪ್ಯಾಕೆಟ್ ಗಳು-02. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ. (ಕಾ&ಸು, ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 22-11-2021 ರಂದು 22-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 206/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಫಾರೂಖ್ ಅಹಮ್ಮದ್ ತಂದೆ ರಿಯಾಜ್ ಅಹಮ್ಮದ್, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಜೆ.ಸಿ ನಗರ, ಬೆಂಗಳೂರು (ಕಾರ್ ನಂ: ಕೆ.ಎ-03/ಎಮ್.ಜೆ-9601 ನೇದರ ಚಾಲಕ). ಈತನು ದಿನಾಂಕ: 22-11-2021 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ತನ್ನ ಕಾರ್ ನಂ: ಕೆ.ಎ-03/ಎಮ್.ಜೆ-9601 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ತನ್ನ ಎದುರಿನಿಂದ ಅಂದರೆ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ನಿಧಾನವಾಗಿ ರಸ್ತೆಯ ಎಡಬದಿಯಿಂದ ಬರುತ್ತಿದ್ದ ಸಾಕ್ಷಿದಾರ ಶ್ರೀ ಎನ್. ಜಿ. ಹುಚ್ಚನೂರ್ ರವರು ಚಲಾಯಿಸಿಕೊಂಡು ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1637 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಬಸ್ಸಿನಲ್ಲಿದ್ದ ಪಿರ್ಯಾದಿಗೆ, ಪ್ರಯಾಣಿಕರಾದ ಶ್ರೀಮತಿ ಬಿಬಿಜಾನ್ ಕೋಂ. ಮೆಹಬೂಬಸಾಬ್ ಹಳ್ಳಿ, ಕು: ಮಹಮ್ಮದ್ ಸಿದ್ದಿಕ್ ತಂದೆ ಅಲ್ಲಿಸಾಬ್ ಪೆಂಡಾರಿ, ಕು: ಉಮ್ಮರ್ ಫಾರೂಖ್ ತಂದೆ ಮೆಹಬೂಬಸಾಬ್ ಹಳ್ಳಿ ಹಾಗೂ ಬಸ್ ನಿರ್ವಾಹಕ ಶ್ರೀ ಶ್ರೀಧರ ತಂದೆ ನಾರಾಯಣ ಮರಾಠೆ ರವರಿಗೆ ಮೈ ಮೇಲೆ ಅಲ್ಲಲ್ಲಿ ಸಾದಾ ಗಾಯನೋವು ಪಡಿಸಿ, ಬಸ್ ಮತ್ತು ಕಾರ್ ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸುಧಾ ಕೋಂ. ಕೃಷ್ಣಾ ಸಿದ್ದಿ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಬ್ಬಿನ ಕುಂಬ್ರಿ, ಪೋ: ವಜ್ರಳ್ಳಿ, ತಾ: ಯಲ್ಲಾಪುರ ರವರು ದಿನಾಂಕ: 22-11-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 207/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಓಬೇಶಖಾನ್ ತಂದೆ ವಶಿಖಾನ್, ಪ್ರಾಯ-21 ವರ್ಷ, ಸಾ|| ಗೈಲಿ ವಿಲೇಜ್, ಪೋ: ಖುದಾಗಂಜ್, ತಾ: ತಿಲಹಾರ, ಜಿ: ಸಹಜಾನಪುರ, ಉತ್ತರ ಪ್ರದೇಶ ರಾಜ್ಯ (ಟ್ರಾಲಿ ಲಾರಿ ನಂ: ಕೆ.ಎ-51/ಎ.ಎ-3118 ನೇದರ ಚಾಲಕ). ಈತನು ದಿನಾಂಕ: 20-11-2021 ರಂದು 21-45 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಕೊಡ್ಲಗದ್ದೆ ಊರಿನಲ್ಲಿ ಹಾದು ಹೋದ ರಾಷ್ಟೀಯ  ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಟ್ರಾಲಿ ಲಾರಿ ನಂ: ಕೆ.ಎ-51/ಎ.ಎ-3118 ನೇದನ್ನು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಎದುರಿನಿಂದ ಬಂದ ಯಾವುದೋ ಒಂದು ಲಾರಿಯನ್ನು ತಪ್ಪಿಸಲು ತನ್ನ ಟ್ರಾಲಿ ಲಾರಿಯನ್ನು ರಸ್ತೆಯ ಬದಿಗೆ ತೆಗೆದುಕೊಂಡಾಗ ಟ್ರಾಲಿ ಲಾರಿಯ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಟ್ರಾಲಿ ಲಾರಿಯನ್ನು ಜಖಂಗೊಳಿಸಿದ್ದಲ್ಲದೇ, ಆರೋಪಿ ಚಾಲಕನು ತನಗೆ ತಾನೇ ಕೈಗೆ, ಕಾಲಿಗೆ ಹಾಗೂ ಹೊಟ್ಟೆಗೆ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೆ. ಸಿದ್ದೇಶ್ವರ ತಂದೆ ಕೆ. ರಾಮಪ್ಪ, ಪ್ರಾಯ-44 ವರ್ಷ, ವೃತ್ತಿ-ವ್ಯವಹಾರ, ಸಾ|| ಹರಿಹರ ರೋಡ್, ನ್ಯಾಶನಲ್ ಸ್ಕೂಲ್ ಹಿಂದೆ, ವಿದ್ಯಾನಗರ, ತಾ: ಹೊಸಪೇಟೆ, ಜಿ: ವಿಜಯನಗರ ರವರು ದಿನಾಂಕ: 22-11-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 208/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಯಾರೋ ಕಳ್ಳರು ದಿನಾಂಕ: 19-11-2021 ರಂದು ಸಾಯಂಕಾಲ 06-00 ಗಂಟೆಯಿಂದ ದಿನಾಂಕ: 20-11-2021 ರಂದು ಬೆಳಿಗ್ಗೆ 08-30 ಗಂಟೆಯ ನಡುವಿನ ಅವದಿಯಲ್ಲಿ ಪಿರ್ಯಾದಿಯವರು ತಮ್ಮ ತೋಟದಲ್ಲಿ ರಾಶಿ ಹಾಕಿ ಇಟ್ಟ ಸುಮಾರು 3,500/- ರೂಪಾಯಿ ಬೆಲೆಯ ಸಿಪ್ಪೆ ಸಮೇತ ಇರುವ ಸುಮಾರು 40-50 ಕೆ.ಜಿ ತೂಕದ ಹಣ್ಣು ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಾಯ ತಂದೆ ಗಣಪತಿ ಭಟ್ಟ, ಪ್ರಾಯ-43 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೀಗಾರ ಗ್ರಾಮ, ವಜ್ರಳ್ಳಿ, ತಾ: ಯಲ್ಲಾಪುರ ರವರು ದಿನಾಂಕ: 22-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 181/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 21-11-2021 ರಂದು ರಾತ್ರಿ 22-00 ಗಂಟೆಯಿಂದ ದಿನಾಂಕ: 22-11-2021 ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ಪಿರ್ಯಾದಿಯವರ ಮನೆಯ ಮುಂದಿನ ಬಾಗಿಲ ಬೀಗ ಮುರಿದು ಮನೆಯ ತಿಜೋರಿಯಲ್ಲಿದ್ದ 1). ಮೂರು ಎಳೆಯ ಶ್ರೀಮಂತ ಹಾರ-01 (ಅಜಮಾಸ-3 ತೊಲೆ), ಅ||ಕಿ|| 72,000/- ರೂಪಾಯಿ, 2). ಗಂಟಿನ ಹಾರ (ಮಂಗಳ ಸೂತ್ರ)-01 (ಅಜಮಾಸ-3  ತೊಲೆ), ಅ||ಕಿ|| 72,000/- ರೂಪಾಯಿ. ಹೀಗೆ ಒಟ್ಟೂ 1,44000/- ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಾಹುಬಲಿ ತಂದೆ ತವನಪ್ಪ ಲಕ್ಕನಗೌಡರ, ಪ್ರಾಯ-55 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಪೇಟೆ ಓಣಿ, ತೇರಗಾಂವ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 22-11-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 147/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜೆ. ಮಂಜುನಾಥ ತಂದೆ ಡಿ. ಜಯಣ್ಣ, ಪ್ರಾಯ-49 ವರ್ಷ, ವೃತ್ತಿ-ಚಾಲಕ, ಸಾ|| ಬಾಲಪ್ಪ ತೋಟ, ಧ್ವಾರಕಾ ನಗರ ಹತ್ತಿರ, ಅರಿಶಿಣಗುಂಟೆ, ಬೆಂಗಳೂರು ಗ್ರಾಮಾಂತರ (ಈಚರ್ ಕ್ಯಾಂಟರ್ ವಾಹನ ನಂ: ಕೆ.ಎ-53/ಬಿ-4841 ನೇದರ ಚಾಲಕ). ಈತನು ದಿನಾಂಕ: 19-11-2021 ರಂದು ಬೆಂಗಳೂರಿನ ಟಿ.ಬೇಗೂರಿನ ‘ಪೆರ್ನಾಡ್ ರಿಕಾರ್ಡ್ ಇಂಡಿಯಾ ಪ್ರೈ. ಲಿಮಿಟೆಡ್’ ನಿಂದ ಹೊನ್ನಾವರದ ಕೆ.ಎಸ್.ಬಿ.ಸಿ.ಎಲ್ ಡಿಪೋಕ್ಕೆ ತಲುಪಿಸಲು ಈಚರ್ ಕ್ಯಾಂಟರ್ ವಾಹನ ನಂ: ಕೆ.ಎ-53/ಬಿ-4841 ನೇದರಲ್ಲಿ ವಿವಿಧ ಮಾದರಿಯ ವಿವಿಧ ಅಳತೆಯ ಮದ್ಯದ ಬಾಟಲಿ (100 ಪೈಪರ್ಸ್, ಬ್ಲೆಂಡರ್ ಪ್ರೈಡ್, ಇಂಪಿರಿಯಲ್ ಬ್ಲೂ, ರಾಯಲ್ ಸ್ಟಾಗ್) ಗಳು ತುಂಬಿದ್ದ ಬಾಕ್ಸ್ ಗಳನ್ನು ಲೋಡ್ ಮಾಡಿಕೊಂಡು ಹೊನ್ನಾವರಕ್ಕೆ ಹೊರಟಿದ್ದವನು, ದಿನಾಂಕ: 21-11-2021 ರಂದು ಮಧ್ಯಾಹ್ನ ತಾಳಗುಪ್ಪಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಜೋಗಿನಮಠ ಹತ್ತಿರ ತೀವ್ರವಾದ ಎಡ ತಿರುವಾದ ಹಾಗೂ ಇಳಿಜಾರಾದ ರಸ್ತೆಯಲ್ಲಿ 15-30 ಗಂಟೆಯ ಸುಮಾರಿಗೆ ವಾಹನವನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿ ಲಾರಿಯ ಮೇಲೆ ನಿಯಂತ್ರಣ ಕಳೆದುಕೊಂಡು ಲಾರಿಯನ್ನು ಪೂರ್ತಿ ಅವನ ಬಲಕ್ಕೆ ಚಲಾಯಿಸಿ, ರಸ್ತೆಯ ಬಲಬದಿಯಲ್ಲಿ ಬಲ ಮಗ್ಗಲಾಗಿ ಪಲ್ಟಿ ಕೆಡವಿ ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿಗೆ ಹಾಗೂ ಆರೋಪಿ ಚಾಲಕನಿಗೆ ಒಳ ಪೆಟ್ಟು ಬಿದ್ದಿದ್ದಲ್ಲದೇ, ವಾಹನಕ್ಕೆ ಡ್ಯಾಮೇಜ್ ಆಗಿ ವಾಹನದಲ್ಲ್ಲಿ ತುಂಬಿದ್ದ ಮದ್ಯದ ಬಾಟಲಿಗಳು ಒಡೆದು ಹೋಗಿ ಲುಕ್ಸಾನ್ ಆದ ಬಗ್ಗೆ ಪಿರ್ಯಾದಿ ಶ್ರೀ ವಿನೋದ ಯಾದವ ಎಮ್. ತಂದೆ ಜೆ. ಮಂಜುನಾಥ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| #4, 5 ನೇ ಕ್ರಾಸ್, ಎಚ್.ಎಮ್.ಟಿ ಮುಖ್ಯ ರಸ್ತೆ, ದಿವಾನರ ಪಾಳ್ಯ, ಯಶ್ವಂತಪುರ, ಬೆಂಗಳೂರು ನಾರ್ಥ್-560022, ಹಾಲಿ ಸಾ|| ಬಾಲಪ್ಪ ತೋಟ, ಧ್ವಾರಕಾ ನಗರ ಹತ್ತಿರ, ಅರಿಶಿಣಗುಂಟೆ, ಬೆಂಗಳೂರು ಗ್ರಾಮಾಂತರ ರವರು ದಿನಾಂಕ: 22-11-2021 ರಂದು 10-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 22-11-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 59/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಜಾನನ ತಂದೆ ನಾರಾಯಣ ನಾಯಕ, ಪ್ರಾಯ-25 ವರ್ಷ, ಸಾ|| ಲಕ್ಷ್ಮೇಶ್ವರ, ತಾ: ಅಂಕೋಲಾ. ಪಿರ್ಯಾದಿಯ ಮಗನಾದ ಈತನು ಮನೆಯಲ್ಲಿಯೇ ಉಳಿದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದವನು, ತನಗೆ ನೌಕರಿ ಸಿಗಲಿಲ್ಲ ಅಂತಾನೋ ಅಥವಾ ಇನ್ನಾವುದೋ ಕಾರಣದಿಂದ ದಿನಾಂಕ: 22-11-2021 ರಂದು 10-30 ಗಂಟೆಯಿಂದ 13-30 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ ಶಹರದ ಲಕ್ಷ್ಮೇಶ್ವರದಲ್ಲಿರುವ ತನ್ನ ಮನೆಯ ಹಾಲ್ ನಲ್ಲಿ ಫ್ಯಾನಿನ ಹುಕ್ಕಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ಇದರ ಹೊರತು ತನ್ನ ಮಗನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಗೋವಿಂದ ನಾಯಕ, ಪ್ರಾಯ-70 ವರ್ಷ, ವೃತ್ತಿ-ನಿವೃತ್ತ ಅರಣ್ಯ ಇಲಾಖೆ ಅಧಿಕಾರಿ, ಸಾ|| ಲಕ್ಷ್ಮೇಶ್ವರ, ತಾ: ಅಂಕೋಲಾ ರವರು ದಿನಾಂಕ: 22-11-2021 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 30/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಘುನಂದನ ತಂದೆ ಕೃಷ್ಣಪ್ಪ, ಪ್ರಾಯ-21 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಾಡುಜಕ್ಕಸಂದ್ರ ಗ್ರಾಮ, ಗೊಟ್ಟಿಗೆಹಳ್ಳಿ ಪೋಸ್ಟ್, ಹಾರೋಳ್ಳಿ ಹೋಬಳಿ, ತಾ: ಕನಕಪುರ, ಜಿ: ರಾಮನಗರ. ದಿನಾಂಕ: 20-11-2021 ರಂದು ಪಿರ್ಯಾದಿಯು ರಾತ್ರಿ ತನ್ನ ಸ್ನೇಹಿತರೊಂದಿಗೆ ಒಂದು ಟೆಂಪೋ ಟ್ರಾವೆಲರ್ ವಾಹನದಲ್ಲಿ ಪ್ರವಾಸಕ್ಕೆ ಹೊರಟು, ಹೊರನಾಡು ಶೃಂಗೇರಿ ಕಡೆಗಳಲ್ಲಿ ಪ್ರವಾಸ ಮುಗಿಸಿ, ದಿನಾಂಕ: 21-11-2021 ರಂದು ರಾತ್ರಿ ಮುರ್ಡೇಶ್ವರಕ್ಕೆ ಬಂದು ವಾಸ್ತವ್ಯ ಮಾಡಿ, ದಿನಾಂಕ: 22-11-2021 ರಂದು ಮಧ್ಯಾಹ್ನ ಮುರ್ಡೇಶ್ವರದ ಅರಬ್ಬಿ ಸಮುದ್ರಕ್ಕೆ ಹೋಗಿ, ಅರಬ್ಬಿ ಸಮುದ್ರದ ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ, ಸ್ನೇಹಿತರಾದ ಬಸವರಾಜ ಮತ್ತು ರಘುನಂದನ ಇವರು ಸಮುದ್ರದ ನೀರಿನಲ್ಲಿ ಮುಂದೆ ಹೋದಾಗ 14-30 ಗಂಟೆಯ ಸುಮಾರಿಗೆ ದೊಡ್ಡದಾಗಿ ಬಂದ ಸಮುದ್ರದ ನೀರಿನ ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದು, ಬಸವರಾಜ ಈತನಿಗೆ ಸ್ಥಳೀಯರು ರಕ್ಷಿಸಿದ್ದು, ರಘುನಂದನ ಈತನು ನೀರಿನಲ್ಲಿ ಮುಳಗಿ ಕಾಣೆಯಾಗಿರುತ್ತಾನೆ. ಕಾಣೆಯಾದ ರಘುನಂದನ ಈತನಿಗೆ ಹುಡುಕುತ್ತಿದ್ದಾಗ, ರಘುನಂದನ ಈತನ ಮೃತದೇಹವು 16-00 ಗಂಟೆಗೆ ತೂದಳ್ಳಿ ಸಮುದ್ರದ ತೀರದಲ್ಲಿ ದೊರೆತಿದ್ದು, ಮೃತನು ಸ್ನಾನಕ್ಕೆ ಅಂತಾ ಸಮುದ್ರ ನೀರಿನಲ್ಲಿ ಇಳಿದಾಗ ಸಮುದ್ರ ನೀರಿನ ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಆದರ್ಶ ತಂದೆ ಕೆಂಪಯ್ಯ, ಪ್ರಾಯ-23 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾಡುಜಕ್ಕಸಂದ್ರ ಗ್ರಾಮ, ಗೊಟ್ಟಿಗೆಹಳ್ಳಿ ಪೋಸ್ಟ್, ಹಾರೋಳ್ಳಿ ಹೋಬಳಿ, ತಾ: ಕನಕಪುರ, ಜಿ: ರಾಮನಗರ ರವರು ದಿನಾಂಕ: 22-11-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಂಜುನಾಥ ತಂದೆ ಮಂಜು ಚಂದನ್, ಪ್ರಾಯ-56 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೊಡ್ಡಾಡಿ ಬೆಟ್ಟ, ಹೊಸಹಿತ್ಲು, ಪೋ: ನಾಗೂರ, ತಾ: ಬೈಂದೂರ, ಜಿ: ಉಡುಪಿ. ಪಿರ್ಯಾದಿಯ ಚಿಕ್ಕಪ್ಪನಾದ ಇವರು ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು, ದಿನಾಲೂ ಸರಾಯಿಯನ್ನು ಕುಡಿಯುತ್ತಿದ್ದರು. ಹಾಗೂ ಅವರಿಗೆ ಮೂರ್ಛೆ ರೋಗವು ಕೂಡಾ ಇತ್ತು. ದಿನಾಂಕ: 22-11-2021 ರಂದು 16-00 ಗಂಟೆಯ ಸುಮಾರಿಗೆ ಸರಾಯಿ ಕುಡಿತದಿಂದ ಭಟ್ಕಳ ಶಹರದ ರಬೀತಾ ಸೊಸೈಟಿ ಹತ್ತಿರ ಮರಣ ಹೊಂದಿದ್ದು, ಇದರ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮವಾಗಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಘವೆಂದ್ರ ತಂದೆ ದೇವಾ ಮೊಗವೀರ, ಪ್ರಾಯ-40 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಕಂಟದ ಹಿತ್ಲು, ಕಳ್ಳಿಹಿತ್ಲು, ಪೋ: ಬಿಜ್ಜೂರ, ತಾ: ಬೈಂದೂರ, ಜಿ: ಉಡುಪಿ ರವರು ದಿನಾಂಕ: 22-11-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 23-11-2021 03:34 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080