ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 22-10-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 420, 380 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 22-10-2021 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿಯವರ ಬಳಿ ಹಣವಿದ್ದ ವಿಷಯ ತಿಳಿದು, ಹಣವನ್ನು ಲಪಟಾಯಿಸುವ ಇರಾದೆಯಿಂದ ಉದ್ದೇಶಪೂರ್ವಕವಾಗಿ ಪಿರ್ಯಾದಿಯವರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಅವರ ಬೆನ್ನಿಗೆ ಯಾವುದೋ ಅಂಟನ್ನು ಲೇಪಿಸಿ ಅದನ್ನು ತೊಳೆಸುವ ನೆಪದಲ್ಲಿ ಸಮಯ ಸಾಧಿಸಿ ಪಿರ್ಯಾದಿಯವರು ಜನತಾ ಬಜಾರಿನ ಒಳಗಡೆ ಟೇಬಲ್ ಮೇಲೆ ಇಟ್ಟಿದ್ದ 65,000/- ರೂಪಾಯಿ ಹಾಗೂ ಅವರ ಬಾಬ್ತು ಕೆನರಾ ಬ್ಯಾಂಕ್ ಪಾಸಬುಕ್ ಮತ್ತು ಇತರೇ ಕಾಗದ ಪತ್ರಗಳು ಇದ್ದ ಕೆಂಪು ಬಣ್ಣ ಹ್ಯಾಂಡ್ ಬ್ಯಾಗ್ ಇದ್ದ ಪ್ಲಾಸ್ಟಿಕ್ ಬ್ಯಾಗನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಪಿರ್ಯಾದಿ ಶ್ರೀ ಉಮೇಶ ತಂದೆ ವಿಶ್ರಾಮ ಸಾವಂತ, ಪ್ರಾಯ-69 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಸಾವಂತವಾಡಾ, ಬಾಡ, ಕಾರವಾರ ರವರು ದಿನಾಂಕ: 22-10-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 176/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಲೆನ್ಸಿ ಇಲಿಯಾಸ್ ರೊಡ್ರಗೀಸ್, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಕೊಡಾಣಿ, ತಾ: ಹೊನ್ನಾವರ (ಬೊಲೆರೋ ಪಿಕಪ್ ವಾಹನ ನಂ: ಕೆ.ಎ-31/ಎ-0800 ನೇದರ ಚಾಲಕ). ಈತನು ದಿನಾಂಕ: 22-10-2021 ರಂದು 17-00 ಗಂಟೆಗೆ ರಾಜ್ಯ ಹೆದ್ದಾರಿ ಸಂಖ್ಯೆ-48 ರಲ್ಲಿ ಕುಮಟಾ-ಸಿದ್ದಾಪುರ ಡಾಂಬರ್ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಬೊಲೆರೋ ಪಿಕಪ್ ವಾಹನ ನಂ: ಕೆ.ಎ-31/ಎ-0800 ನೇದನ್ನು ಬಡಾಳ ಕಡೆಯಿಂದ ಸಂತೆಗುಳಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು ಬಾಸೊಳ್ಳಿಯ ಕೀರ್ತಿಗದ್ದೆ ನರ್ಸರಿ ಹತ್ತಿರದಲ್ಲಿ ರಸ್ತೆಯನ್ನು ದಾಟುತ್ತಿದ್ದ ವಿದ್ಯಾರ್ಥಿಯನ್ನು ನೋಡಿಯೂ ಸಹ ಪಿಕಪ್ ವಾಹನದ ವೇಗವನ್ನು ನಿಯಂತ್ರಿಸದೇ, ವಿದ್ಯಾರ್ಥಿ ಶ್ರೀ ಸಚಿನ ತಂದೆ ರಾಜೇಂದ್ರ ಕುಮಟಾ, ಪ್ರಾಯ-13 ವರ್ಷ, ಸಾ|| ಬಾಸೊಳ್ಳಿ, ಬಡಾಳ, ತಾ: ಕುಮಟಾ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ರಸ್ತೆಯಲ್ಲಿ ಬಿದ್ದು ಆತನ ತಲೆಗೆ, ಹಣೆಯ ಎಡಭಾಗಕ್ಕೆ ಗಾಯವಾಗಲು ಹಾಗೂ ಎಡಗಾಲು ಮೂಳೆಯು ಮುರಿದು ತೀವ್ರ ಗಾಯನೋವಾಗಲು ಬೊಲೆರೋ ಪಿಕಪ್ ವಾಹನದ ಆರೋಪಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಶ್ರೀನಿವಾಸ ತಂದೆ ನಾಗಪ್ಪ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೀರ್ತಿಗದ್ದೆ, ಬಾಸೊಳ್ಳಿ, ತಾ: ಕುಮಟಾ ರವರು ದಿನಾಂಕ: 22-10-2021 ರಂದು 18-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 130/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ದೇವಾ ಗೌಡ, ಪ್ರಾಯ-61 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನೀಲವಂಕಿ, ಗುಣವಂತೆ, ತಾ: ಹೊನ್ನಾವರ. ಈತನು ದಿನಾಂಕ: 22-10-2021 ರಂದು 12-25 ಗಂಟೆಗೆ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಣವಂತೆ ಸರ್ಕಲ್ ಹತ್ತಿರ ದಾಮೋದರ ಮಡಿವಾಳ ಇವರ ಅಂಗಡಿಯ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಕೂಗಿ ಕೂಗಿ ಕರೆದು ಅವರಿಂದ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿಸಿ, ಹಣ ಪಡೆದು ಅವರಿಗೆ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಯ ಚೀಟಿಯನ್ನು ಬರೆದು ಕೊಡುತ್ತಾ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ ದಾಳಿಯ ವೇಳೆ ಒಟ್ಟೂ ನಗದು ಹಣ 1,750/- ರೂಪಾಯಿ, ಓ.ಸಿ ಮಟಕಾ ಜೂಗಾರಾಟದ ಸಂಖ್ಯೆಗಳನ್ನು ಬರೆದ ಚೀಟಿ-1, ಬಾಲ್ ಪೆನ್-1. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಎಮ್. ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 22-10-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 106/2021, ಕಲಂ: 406, 419, 420, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರದೀಪ ನಾಗಪತಿ ಹೆಗಡೆ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಲ್ಕುಣಿ, ತಾ: ಶಿರಸಿ, 2]. ಶ್ರೀಪಾದ ದೇವರು ಹೆಗಡೆ, ಸಾ|| ಶಾಂತಿನಗರ, ಹುತ್ಗಾರ್ ರಸ್ತೆ, ತಾ: ಶಿರಸಿ, 3]. ರಂಗನಾಥ ವಿಶ್ವೇಶ್ವರ ಹೆಗಡೆ, ಸಾ|| ಬಾಳೆಗದ್ದೆ, ತಾ: ಶಿರಸಿ, ಹಾಲಿ ಸಾ|| ಮುಂಬೈ, ಮಹಾರಾಷ್ಟ್ರ. ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ಮತ್ತು 2 ನೇಯವರು ದಿನಾಂಕ: 220-06-2020 ರ ಅವಧಿಯಲ್ಲಿ ಪಿರ್ಯಾದಿಗೆ ಹುಲೇಕಲ್ ಹೋಬಳಿಯ ಬಾಳೆಗದ್ದೆ ಗ್ರಾಮದಲ್ಲಿರುವ ಆರೋಪಿ 3 ನೇಯವನಿಗೆ ಸೇರಿದ ಒಂದುವರೆ ಎಕರೆ ಕೃಷಿ ಜಮೀನನ್ನು ತೋರಿಸಿ ಅದನ್ನು 45 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ತಿಳಿಸಿ, ಪಿರ್ಯಾದಿಯೊಂದಿಗೆ 41 ಲಕ್ಷ ರೂಪಾಯಿಗಳಿಗೆ ಬೆಲೆಯನ್ನು ನಿಗದಿ ಪಡಿಸಿಕೊಂಡಿದ್ದು, ಸದ್ರಿ ಜಮೀನಿನ ಸಂಪೂರ್ಣ ವ್ಯವಹಾರದ ಜಮೀನಿನ ಮಾಲಿಕನಾದ ಆರೋಪಿ 3 ನೇಯವನು ತನಗೆ ಜಿ.ಪಿ.ಎ ನೀಡಿರುವ ಬಗ್ಗೆ ಆರೋಪಿ 1 ನೇಯವನನು ಪಿರ್ಯಾದಿಗೆ ತಿಳಿಸಿ, ಈ ಬಗ್ಗೆ ಖಾತ್ರಿ ಪಡಿಸಲು ಪಿರ್ಯಾದಿಯ  ಸಮಕ್ಷಮ ಆರೋಪಿ 3 ನೇಯವನೊಂದಿಗೆ ಫೋನಿನಲ್ಲಿ ಮಾತನಾಡಿ, ಜಮೀನಿನ ಖರೀದಿ ವ್ಯವಹಾರದ ಬಗ್ಗೆ ಶಿರಸಿಯ ನೋಟರಿ ವಕೀಲರಲ್ಲಿ ಕ್ರಯ ಪತ್ರ ಮಾಡಿಸಿ, ಜಮೀನು ಖರೀದಿಗೆ ಮುಂಗಡವಾಗಿ 20,00,000/- ರೂಪಾಯಿ ನೀಡಿ, ಜಮೀನು ನೋಂದಣಿ ಸಮಯದಲ್ಲಿ ಇನ್ನುಳಿದ ಬಾಕಿ ಹಣ ನೀಡುವುದು ಎಂದು ನಿರ್ಧರಿಸಿ, ದಿನಾಂಕ: 20-06-2020 ರಂದು ಪಿರ್ಯಾದಿಯ ಕುಮಟಾ ಎಸ್.ಬಿ.ಐ ಬ್ಯಾಂಕ್ ಖಾತೆ ಸಂಖ್ಯೆ: 54016988717 ನೇದರ ಚೆಕ್ ನಂ: 066348 ನೇದರ ಮೂಲಕ 5,00,000/- ರೂ ಹಣವನ್ನು ಹಾಗೂ ದಿನಾಂಕ: 10-07-2020 ರಂದು ನೆಫ್ಟ್ ಮೂಲಕ 10,00,000/- ರೂಪಾಯಿ ಹಣವನ್ನು ಹಾಗೂ ನಗದಾಗಿ 3,50,000/- ರೂಪಾಯಿ ಹಾಗೂ ಪಿರ್ಯಾದಿಯ ಮಗನ ಕುಮಟಾ ಎಸ್.ಬಿ.ಐ ಬ್ಯಾಂಕ್ ಖಾತೆ ಸಂಖ್ಯೆ; 64140768930 ನೇದರಿಂದ ಫೋನ ಪೇ ಮೂಲಕ 1,50,000/- ರೂಪಾಯಿಯಂತೆ ಹೀಗೆ ಒಟ್ಟೂ 20,00,000/- ರೂಪಾಯಿ ಹಣವನ್ನು ನಂಬಿಸಿ ಪಡೆದುಕೊಂಡು ಕೊಟ್ಟ ಮಾತಿನಂತೆ ಜಮೀನಿನ ಕ್ರಯ ದಸ್ತಿಗೆ ಬರದೇ ಕೋವಿಡ ನೆಪ ಹೇಳುತ್ತಾ ದಿನ ದೂಡುತ್ತಾ ಕ್ರಮೇಣ ‘ಸದ್ರಿ ಜಿಮೀನನ್ನು ನಿಮಗೆ ಮಾರಾಟ ಮಾಡುವುದಿಲ್ಲ’ ಎಂದು ಹೇಳಿ ಪಿರ್ಯಾದಿಯು ನೀಡಿದ ಮುಂಗಡ ಹಣವನ್ನೂ ಹಿಂದಿರುಗಿಸದೇ, ನೀಡಿದ ಹಣ ಮರಳಿ ಕೇಳಿದ ಪಿರ್ಯಾದಿಗೆ ಅವಾಚ್ಯವಾಗಿ ಬೈಯ್ದು, ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಗಜಾನನ ಭಟ್ಟ, ಪ್ರಾಯ-54 ವರ್ಷ, ವೃತ್ತಿ-ಪೌರೋಹಿತ್ಯ, ಸಾ|| ಮೇಲಿನಕೇರಿ, ಹೆಗಡೆ, ತಾ: ಕುಮಟಾ ರವರು ದಿನಾಂಕ: 22-10-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 136/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಫಕ್ಕೀರಗೌಡ ತಂದೆ ಹನುಮಂತಗೌಡ ಮಳಲಿ, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ|| ನಂದಿಗಟ್ಟಾ, ತಾ: ಮುಂಡಗೋಡ (ಮಾರುತಿ ಇಕೋ ವಾಹನ ನಂ: ಕೆ.ಎ-25/ಎಮ್.ಸಿ-4481 ನೇದರ ಚಾಲಕ). ಈತನು ದಿನಾಂಕ: 17-10-2021 ರಂದು 16-30 ಗಂಟೆಯ ಸುಮಾರಿಗೆ ತನ್ನ ಮಾರುತಿ ಇಕೋ ವಾಹನ ನಂ: ಕೆ.ಎ-25/ಎಮ್.ಸಿ-4481 ನೇದನ್ನು ಶಿಂಗನಳ್ಳಿ ಗ್ರಾಮದಲ್ಲಿ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿ, ರಿವರ್ಸ್ ತೆಗೆದುಕೊಳ್ಳುಲು ಹೋಗಿ ಹಿಂದೆ ನಿಂತಿದ್ದ ಪಿರ್ಯಾದಿಯ ಅಣ್ಣ ಶ್ರೀ ಪರಶುರಾಮ ತಂದೆ ಫಕ್ಕೀರಗೌಡ ಪಾಟೀಲ, ಪ್ರಾಯ-55 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಉಗ್ಗಿನಕೇರಿ, ತಾ: ಮುಂಡಗೋಡ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮಾರಣಾಂತಿಕ ಗಾಯನೋವು ಪಡಿಸಿದ್ದು, ಸದ್ರಿಯವನನ್ನು ಚಿಕಿತ್ಸೆಗಾಗಿ ಮುಂಡಗೋಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದವನಿಗೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದವನಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 22-10-2021 ರಂದು 10-00 ಗಂಟೆಗೆ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದ್ಯಾಮಣ್ಣ ತಂದೆ ಪಕ್ಕಿರಗೌಡ ಪಾಟೀಲ್, ಪ್ರಾಯ-43 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಉಗ್ಗಿನಕೇರಿ, ತಾ: ಮುಂಡಗೋಡ ರವರು ದಿನಾಂಕ: 22-10-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 22-10-2021

at 00:00 hrs to 24:00 hrs

 

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 50 ರಿಂದ 52 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಈತನು ದಿನಾಂಕ: 17-10-2021 ರಂದು ಬೆಳಿಗ್ಗೆ 07-45 ಗಂಟೆಯ ಪೂರ್ವದಲ್ಲಿ ಮಳಲಗಾಂವ ಊರಿನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ರಸ್ತೆಯಲ್ಲಿ ಪಿಡ್ಸ್ ಕಾಯಿಲೆಯಿಂದ ಅಥವಾ ಸರಾಯಿ ಕುಡಿದ ನಶೆಯಲ್ಲಿ ಜೋಲಿ ಹೋಗಿ ಬಿದ್ದ ಪರಿಣಾಮ ತಲೆಯು ಡಾಂಬರ್ ರಸ್ತೆಗೆ ತಾಗಿ ರಕ್ತ ಗಾಯಗೊಂಡವನಿಗೆ ಶಿರಸಿಯ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರಕ್ಕೆ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಿಸಿದ್ದು, ಕಾರವಾರ ಆಸ್ಪತ್ರೆಯಲ್ಲಿ ಉಪಚಾರ ಫಲಿಸದೇ ದಿನಾಂಕ: 21-10-2021 ರಂದು ಸಾಯಂಕಾಲ 05-00 ಗಂಟೆಯ ಪೂರ್ವದಲ್ಲಿ ಮೃತಪಟ್ಟಿರುತ್ತಾನೆ. ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಕಂಡು ಬಂದಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಬೆನಕಾ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಳಲಗಾಂವ, ತಾ: ಶಿರಸಿ ರವರು ದಿನಾಂಕ: 22-10-2021 ರಂದು 07-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 25-10-2021 06:36 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080