ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 22-09-2021

at 00:00 hrs to 24:00 hrs

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 126/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಜಯಂತ ತಂದೆ ನಾರಾಯಣ ನಾಯ್ಕ, ಪ್ರಾಯ-40 ವರ್ಷ, ಸಾ|| ಕೆಳಗಿನಕೇರಿ, ಮೇಲಿನ ಇಡಗುಂಜಿ, ತಾ: ಹೊನ್ನಾವರ. ಈತನು ದಿನಾಂಕ: 22-09-2021 ರಂದು 16-10 ಗಂಟೆಗೆ ಮೇಲಿನ ಇಡಗುಂಜಿಯ ತನ್ನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಬದಿಯ ಸ್ಥಳದಲ್ಲಿ ನಿಂತು ತನ್ನ ಲಾಭಕ್ಕಾಗಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ ಅ||ಕಿ|| 2,106/- ರೂಪಾಯಿ ಮೌಲ್ಯದ 180 ML ಅಳತೆಯ HAYWARDS FINE WHISKEY ಅಂತಾ ಬರೆದ ಸರಾಯಿ ಇದ್ದ 81 ಬಾಟಲಿಗಳನ್ನು ಪಾಲಿಥಿನ್ ಚೀಲದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದವನು, ದಾಳಿಯ ವೇಳೆ ಸರಾಯಿ ಬಾಟಲಿಗಳಿದ್ದ ಪಾಲಿಥಿನ್ ಚೀಲವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 22-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 89/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ದಿನಾಂಕ: 15-09-2021 ರಂದು ಸಾಯಂಕಾಲ 17-00 ಗಂಟೆಗೆ ಆರಾಮ ಇಲ್ಲದೇ ಇದ್ದಿದ್ದರಿಂದ ಮನೆಗೆ ಬೀಗ ಹಾಕಿ ತನ್ನ ಮಕ್ಕಳೊಂದಿಗೆ ತನ್ನ ತಾಯಿಯ ಮನೆಯಾದ ಭಟ್ಕಳದ ಬೆಳ್ನಿಗೆ ಹೋಗಿದ್ದು, ದಿನಾಂಕ: 21-09-2021 ರಂದು ಸಾಯಂಕಾಲ 17-00 ಗಂಟೆಗೆ ಪಿರ್ಯಾದಿಯ ಮನೆಯ ಪಕ್ಕದವರು ಫೊನ್ ಮಾಡಿ ‘ನಿಮ್ಮ ಮನೆ ಬಾಗಿಲು ತೆರೆದಿದೆ’ ಅಂತಾ ತಿಳಿಸಿದಾಗ ಆಗ ಪಿರ್ಯಾದಿಯು ತನ್ನ ತಮ್ಮನೊಂದಿಗೆ ಮನೆಗೆ ಬಂದು ನೋಡಲು ಆರೋಪಿತ ಕಳ್ಳರು ವಾಸದ ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿ, ಮಲಗುವ ಕೋಣೆಯಲ್ಲಿದ್ದ ಕಪಾಟನ್ನು ನೆಲಕ್ಕೆ ಮಲಗಿಸಿ, ಅದರ ಬೀಗ ಮುರಿದು ಕಪಾಟಿನಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದು ಮತ್ತು ಅದರಲ್ಲಿದ್ದ 1). ಸುಮಾರು 7 ಗ್ರಾಂ ತೂಕದ ಬಂಗಾರದ ಡಿಸ್ಕೋ ಚೈನ್, ಅ||ಕಿ|| 20,000/- ರೂಪಾಯಿ, 2). ಸುಮಾರು 3 ಗ್ರಾಂ ತೂಕದ ಬಂಗಾರದ 1 ಜೊತೆ ಕಿವಿಯ ಓಲೆ, ಅ||ಕಿ|| 10,000/- ರೂಪಾಯಿ, 3). 6 ಗ್ರಾಂ ತೂಕದ ಬಂಗಾರದ 2 ಉಂಗುರ, ಅ||ಕಿ|| 10,000/- ರೂಪಾಯಿ, 4). ನಗದು ಹಣ 8,000/- ರೂಪಾಯಿ. ಹೀಗೆ ಒಟ್ಟೂ 48,000/- ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ನಾಗವೇಣಿ ಕೋಂ. ತಿಮ್ಮಯ್ಯಾ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಗರಡಿ ಮನೆ, ಹೆರಾಡಿ, ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 22-09-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 152/2021, ಕಲಂ: 8, 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಖಲಂದರ್ ತಂದೆ ಹಜರತಸಾಬ್ ಮುಜಾವರ್, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಜೀದ್ ಗಲ್ಲಿ, ಭಾಗವತಿ, ತಾ: ಹಳಿಯಾಳ. ಈತನು ದಿನಾಂಕ: 22-09-2021 ರಂದು 10-00 ಗಂಟೆಗೆ ಹಳಿಯಾಳ ತಾಲೂಕಿನ ನೀಲವಾಣಿ ಕ್ರಾಸ್ ಹತ್ತಿರ ಡಾಂಬರ್ ರಸ್ತೆಯ ಬದಿಯಲ್ಲಿ ತನ್ನ ಅಕ್ರಮ ಲಾಭಕ್ಕಾಗಿ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾಗ, ದಾಳಿಯ ಕಾಲಕ್ಕೆ 1), 130 ಗ್ರಾಂ ತೂಕದ ಗಾಂಜಾ, ಅ||ಕಿ|| 1.400/- ರೂಪಾಯಿ, 2). ಹಸಿರು ಬಣ್ಣದ ಪ್ಲಾಸ್ಟಿಕ್ ಚೀಲ-01, 3). ಪೇಪರ್-01, 4). ನಗದು ಹಣ 200/- ರೂಪಾಯಿ ನೇದವುಗಳೊಂದಿಗೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಎಲ್&ಓ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 22-09-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 90/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಲಕ್ಷ್ಮಣ ತಂದೆ ಹುಲಿಯಾ ಗೌಡ, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಳ್ಳಿಕೊಪ್ಪ, ಪೋ: ಕೊರ್ಲಕಟ್ಟಾ, ತಾ: ಶಿರಸಿ, 2]. ವೀರೇಂದ್ರ ತಂದೆ ಮಂಜಪ್ಪ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಂಡ್ರಾಜಿ, ಪೋ: ಕೊರ್ಲಕಟ್ಟಾ, ತಾ: ಶಿರಸಿ, 3]. ಬಸವರಾಜ ತಂದೆ ಪಾಂಡುರಂಗ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಂಡ್ರಾಜಿ, ಪೋ: ಕೊರ್ಲಕಟ್ಟಾ, ತಾ: ಶಿರಸಿ, 4]. ಶಿವರಾಜ್ ತಂದೆ ಮಂಜುನಾಥ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಂಡ್ರಾಜಿ, ಪೋ: ಕೊರ್ಲಕಟ್ಟಾ, ತಾ: ಶಿರಸಿ, 5]. ಕೇಶವ ತಂದೆ ಭರ್ಮಾ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಂಡ್ರಾಜಿ, ಪೋ: ಕೊರ್ಲಕಟ್ಟಾ, ತಾ: ಶಿರಸಿ, 6]. ಗಣೇಶ ತಂದೆ ವಾಸುದೇವ ಗೌಡ, ಪ್ರಾಯ-26 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಳ್ಳಿಕೊಪ್ಪ, ಪೋ: ಕೊರ್ಲಕಟ್ಟಾ, ತಾ: ಶಿರಸಿ. ಈ ನಮೂದಿತ ಆರೋಪಿತರುಗಳು ದಿನಾಂಕ: 21-09-2021 ರಂದು 23-50 ಗಂಟೆಗೆ ಶಿರಸಿ ತಾಲೂಕಿನ ಕಂಡ್ರಾಜಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಅಕ್ರಮ ಲಾಭಕ್ಕೋಸ್ಕರ ಅನಧೀಕೃತವಾಗಿ ಹಣವನ್ನು ಪಂಥವನ್ನಾಗಿ ಕಟ್ಟಿ ಇಸ್ಪೀಟ್ ಎಲೆಗಳ ಮೇಲೆ ಅಂದರ್-ಬಾಹರ್ ಜೂಗಾರಾಟ ನಡೆಸಿ, ನಗದು ಹಣ 17,330/- ರೂಪಾಯಿ ಹಾಗೂ ಅಂದರ್-ಬಾಹರ್ ಜೂಗಾರಾಟದ ಸಲಕರಣೆಗಳೊಂದಿಗೆ ಆರೋಪಿತರೆಲ್ಲರೂ ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗೇಂದ್ರ ನಾಯ್ಕ ಎಚ್, ಪಿ.ಎಸ್.ಐ (ತನಿಖೆ), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 22-09-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುಬ್ರಹ್ಮಣ್ಯ ತಂದೆ ಕೃಷ್ಣಾ ನಾಯ್ಕ, 2]. ಗಣಪತಿ ತಂದೆ ಕೃಷ್ಣಾ ನಾಯ್ಕ, 3]. ಶ್ರೀನಿವಾಸ ತಂದೆ ಸಂತೋಷ ಬಳೆಗಾರ, ಸಾ: (ಎಲ್ಲರೂ) ಕೊರ್ಲಕಟ್ಟಾ, ತಾ: ಶಿರಸಿ. ಪಿರ್ಯಾದುದಾರರ ಭಾವನವರಾದ ರಾಘವೇಂದ್ರ ಇವರು ಕೊರ್ಲಕಟ್ಟಾದಲ್ಲಿ ಅಂಗಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಈ ಅಂಗಡಿಯ ಲಗ್ತದಾರರಾದ ಚಂದ್ರಪ್ಪ ಶಿವಪ್ಪ ಕಬ್ಬೇರ ಇವರು ಅಂಗಡಿ ಕಟ್ಟಡ ಕಟ್ಟಲು ಅಡ್ಡಿ ಆತಂಕ ಪಡಿಸುತ್ತಾ ಬಂದಿರುತ್ತಾರೆ. ಹೀಗಿದ್ದು ದಿನಾಂಕ: 22-09-2021 ರಂದು 14-30 ಗಂಟೆಗೆ ಪಿರ್ಯಾದಿ ಮತ್ತು ಆತನ ಭಾವ ರಾಘವೇಂದ್ರ ಇವರು ಅಂಗಡಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿರುವಾಗ ನಮೂದಿತ ಆರೋಪಿತರು ಚಂದ್ರಪ್ಪ ಇವರ ಪರವಾಗಿ ಬಂದವರು ಪಿರ್ಯಾದುದಾರರನ್ನು ಉದ್ದೇಶಿಸಿ ‘ಬೋಳಿ ಮಗನೇ, ಸೂಳೆ ಮಗನೇ, ಇಲ್ಲಿ ಯಾಕೆ ಅಂಗಡಿ ಕಟ್ಟುತ್ತಿದ್ದೀರಿ? ಈ ಜಾಗ ನಿಮ್ಮದಲ್ಲ’ ಅಂತಾ ಹೇಳಿದವರೇ, ಒಮ್ಮೇಲೆ ಮೈಮೇಲೆ ಏರಿ ಕೈಯಿಂದ ಹೊಡೆಬಡೆ ಮಾಡಿ, ಕಾಲಿನಿಂದ ಒದ್ದು, ನೆಲಕ್ಕೆ ಕೆಡವಿದ್ದು, ಆರೋಪಿ 2 ನೇಯವನು ಪಿರ್ಯಾದುದಾರರಿಗೆ ಕಲ್ಲಿನಿಂದ ಎಡಗಣ್ಣಿನ ಕೆಳಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದಲ್ಲದೇ, ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿಯವರಿಗೆ ‘ಇನ್ನೊಮ್ಮೆ ಅಂಗಡಿ ಕೆಲಸ ಮಾಡಿದ್ದಲ್ಲಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ಈಶ್ವರ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮನೆ ನಂ: 76, ಕೊರ್ಲಕಟ್ಟಾ, ತಾ: ಶಿರಸಿ ರವರು ದಿನಾಂಕ: 22-09-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 22-09-2021

at 00:00 hrs to 24:00 hrs

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 29/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪುಟ್ಟ ತಂದೆ ಲಿಂಗು ಗೌಡ, ಪ್ರಾಯ-55 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಶಿರಗುಣಿ, ಪೋ: ಕಕ್ಕಳ್ಳಿ, ತಾ: ಶಿರಸಿ. ಪಿರ್ಯಾದಿಯ ಗಂಡನಾದ ಇವರು ಕಳೆದ ಎರಡು ವರ್ಷಗಳ ಹಿಂದೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದರು, ಅದರಿಂದ ಅವರಿಗೆ ಸರಿಯಾಗಿ ಮಾತನಾಡಲು ನಡೆಯಲು ಬರುತ್ತಿರಲಿಲ್ಲ. ಆ ವಿಷಯದ ಬಗ್ಗೆ ಆವಾಗಾವಾಗ ನಮ್ಮ ಮುಂದೆ ಹೇಳುತ್ತಿದ್ದರು, ಮೊದಲಿನಿಂದಲೂ ಸಾರಾಯಿ ಕುಡಿಯುವ ಚಟವನ್ನು ಹೊಂದಿದ್ದವರು, ಅವರಿಗೆ ಪಾರ್ಶ್ವವಾಯು ಕಾಯಿಲೆ ಆದಾಗಿನಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಆವಾಗಿನಿಂದ ವಿಪರೀತ ಸರಾಯಿಯನ್ನು ಕುಡಿಯುತ್ತಿದ್ದವರು, ದಿನಾಂಕ: 22-09-2021 ರಂದು 09-00 ಗಂಟೆಯಿಂದ 11-45 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಆಚಾರಿ ಕೆಲಸದ ಕೋಣೆಯ ಮೇಲ್ಛಾವಣಿಗೆ ಅಳವಡಿಸಿದ್ದ ಗೌರಿ ಮುಂಡಿಗೆ ಹಗ್ಗವನ್ನು ಕಟ್ಟಿ ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ. ಇದರ ಹೊರತು ತನ್ನ ಗಂಡನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಗೌರಿ ಪುಟ್ಟ ಗೌಡ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರಗುಣಿ, ಪೋ: ಕಕ್ಕಳ್ಳಿ, ತಾ: ಶಿರಸಿ ರವರು ದಿನಾಂಕ: 22-09-2021 ರಂದು 14-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 23-09-2021 01:45 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080