ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 23-04-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಶಶಿಕಾಂತ ತಂದೆ ಅನಂತ ಕಡವಾಡಕರ, ಪ್ರಾಯ-64 ವರ್ಷ, ವೃತ್ತಿ-ವ್ಯಾಪಾರ, ಸಾ|| ಶಾಬಾವಾಡಾ, ನಂದವಾಳ, ಕಡವಾಡ, ಕಾರವಾರ. ಈತನು ದಿನಾಂಕ: 23-04-2021 ರಂದು 15-00 ಗಂಟೆಯ ಸುಮಾರಿಗೆ ಕಾರವಾರ ತಾಲೂಕಿನ ಕಡವಾಡ, ನಂದವಾಳ, ಶಾಬಾವಾಡಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಮಟಕಾ ಜೂಗರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ನಗದು ಹಣ 1,600/- ರೂಪಾಯಿ ಹಾಗೂ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ಅಂಕೆ-ಸಂಖ್ಯೆ ಬರೆದ ಚೀಟಿ-1, 2). ಖಾಲಿ ಹಾಳೆಗಳು-03, 3). ಬಾಲ್ ಪೆನ್-1 ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ವಿಜಯಲಕ್ಷ್ಮೀ ಕಟಕದೊಂಡ, ಪಿ.ಎಸ್.ಐ (ಕ್ರೈಂ), ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 23-04-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 95/2021, ಕಲಂ: 8(C), 20(b)(ii)(A) ಎನ್.ಡಿ.ಪಿ.ಎಸ್. ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಸಯ್ಯದ್ ಮೂಸಾ ತಂದೆ ಸಯ್ಯದ್ ಅಹಮ್ಮದ್, ಪ್ರಾಯ-22 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಹನೀಪಾಬಾದ್, ತಲಹಾ ಕಾಲೋನಿ, ತಾ: ಭಟ್ಕಳ. ಈತನು ದಿನಾಂಕ: 23-04-2021 ರಂದು 14-35 ಗಂಟೆಗೆ ಕುಮಟಾ ಪಟ್ಟಣದ ಮಣಕಿ ಮೈದಾನದ ಪೆವಿಲಿಯನ್ ಕಟ್ಟಡದ ಹತ್ತಿರ ಅನಧೀಕೃತವಾಗಿ ಸುಮಾರು 10,000/- ರೂಪಾಯಿ ಬೆಲೆಬಾಳುವ 440 ಗ್ರಾಂ ಗಾಂಜಾವನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡಲು ನಿಂತಿದ್ದಾಗ, ನಗದು ಹಣ 730/- ರೂಪಾಯಿ, ಬ್ಯಾಗ್-01 ಮತ್ತು ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-30/ಕೆ-0505, ಅ||ಕಿ|| 10,000/- ರೂಪಾಯಿ ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ (ಕಾ&ಸು-2), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 23-04-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 122/2021, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಪೀರು ನಾಯಕ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಡೋರ್ ನಂ: 443, ವೆಂಕಟಗಿರಿ ತಾಂಡಾ, ಸುಶೀಲಾನಗರ, ತಾ: ಸೊಂಡೂರ, ಜಿ: ಬಳ್ಳಾರಿ (ಟ್ರಕ್ ನಂ: ಕೆ.ಎ-35/ಸಿ-3272 ನೇದರ ಚಾಲಕ). ಈತನು ದಿನಾಂಕ: 23-04-2021 ರಂದು ಬೆಳಿಗ್ಗೆ 05-00 ಗಂಟೆಗೆ ಹೊನ್ನಾವರ ತಾಲೂಕಿನ ಗೇರುಸೊಪ್ಪಾದ ಸೂಳೆಮುರ್ಕಿ ಕ್ರಾಸಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ತನ್ನ ಟ್ರಕ್ ನಂ: ಕೆ.ಎ-35/ಸಿ-3272 ನೇದನ್ನು ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗೇರುಸೊಪ್ಪಾದ ಸೂಳೆಮುರ್ಕಿ ಕ್ರಾಸ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿನ ರಸ್ತೆಯ ತಿರುವಿನ ತಗ್ಗಿನಲ್ಲಿ ಬೀಳಿಸಿ ಅಪಘಾತ ಪಡಿಸಿಕೊಂಡು, ತನಗೂ ಮತ್ತು ಟ್ರಕ್ ನ ಕ್ಲೀನರ್ ಮಾರುತಿ ತಂದೆ ಕೃಷ್ಣ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ಕ್ಲೀನರ್, ಸಾ|| ಕುನಕೇರಿ ತಾಂಡಾ, ಕುನಕೇರಿ ಪೋಸ್ಟ್, ಕೊಪ್ಪಳ ಈತನಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡಿದ್ದು, ಟ್ರಕ್‍ ನ ಕ್ಲಿನರ್ ಮಾರುತಿ ತಂದೆ ಕೃಷ್ಣ ನಾಯ್ಕ, ಈತನು ಚಿಕಿತ್ಸೆಯ ಕುರಿತು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೇಲೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯ ಮೃತಪಟ್ಟಿದ್ದು, ಕ್ಲೀನರ್ ಮಾರುತಿ ಕೃಷ್ಣ ನಾಯ್ಕ ಈತನ ಮರಣಕ್ಕೆ ಆರೋಪಿ ಟ್ರಕ್ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಪರಶುರಾಮ ತಂದೆ ವಾಲ್ಯ ನಾಯಕ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಎಚ್.ಪಿ.ಸಿ, ಪೋ: ಸೀತಾರಾಮ ತಾಂಡಾ, ತಾ: ಹೊಸಪೇಟೆ, ಜಿ: ಬಳ್ಳಾರಿ ರವರು ದಿನಾಂಕ: 23-04-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೊಹಮ್ಮದ್ ತಸವ್ವರ್ ತಂದೆ ಮಹಮ್ಮದ್ ಜಮೀರ್, ಸಾ|| ನೂರಹೌಸ್, ಐಸ್ ಫ್ಯಾಕ್ಟರಿ ಹತ್ತಿರ, ತಾ: ಭಟ್ಕಳ (ಬಜಾಜ್ ಆಟೋ ರಿಕ್ಷಾ ನಂ: ಕೆ.ಎ-47/2267 ನೇದರ ಚಾಲಕ). ಈತನು ದಿನಾಂಕ: 21-04-2021 ರಂದು 18-15 ಗಂಟೆಯ ಸಮಯಕ್ಕೆ ತನ್ನ ಬಜಾಜ್ ಆಟೋ ರಿಕ್ಷಾ ನಂ: ಕೆ.ಎ-47/2267 ನೇದನ್ನು ಭಟ್ಕಳ ಕಡೆಯಿಂದ ಶಿರಾಲಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಹನೀಪಾಬಾದ್ ಕ್ರಾಸ್ ಹತ್ತಿರ ಒಮ್ಮೇಲೆ ಡಿವೈಡರ್ ಕ್ರಾಸ್ ಮಾಡಿ ತನ್ನ ಎದುರುಗಡೆಯಿಂದ ಅಂದರೆ ಶಿರಾಲಿ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಪಿರ್ಯಾದಿಯ ಗಂಡನಾದ ರವಿ ತಂದೆ ದೇವು ಗೌಡ, ಪ್ರಾಯ-40 ವರ್ಷ, ವೃತ್ತಿ-ಸೇಂಟ್ ಥಾಮಸ್ ಸ್ಕೂಲ್ ಬಸ್ ಚಾಲಕ, ಸಾ|| ಶಶಿ ನಿಲಯ, ಪಡುಶಿರಾಲಿ, ಪೋ: ಬೇಂಗ್ರೆ, ತಾ: ಭಟ್ಕಳ ಇವರ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-8679 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದರ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಪಿರ್ಯಾದಿಯ ಗಂಡನ ತಲೆಗೆ ಮತ್ತು ದೇಹದ ಮೇಲೆ ಅಲ್ಲಲ್ಲಿ ಸಣ್ಣಪುಟ್ಟ ಗಾಯ ಪಡಿಸಿದ ಬಗ್ಗೆ ಶ್ರೀಮತಿ ನಿಶಾ ಕೋಂ. ರವಿ ಗೌಡ, ಪ್ರಾಯ-32 ವರ್ಷ, ವೃತ್ತಿ-ಗೃಹಿಣಿ, ಸಾ|| ಶಶಿ ನಿಲಯ, ಪಡುಶಿರಾಲಿ, ಪೋ: ಬೇಂಗ್ರೆ, ತಾ: ಭಟ್ಕಳ ರವರು ದಿನಾಂಕ: 23-04-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: : 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಜಯ ತಂದೆ ಸಂತಾನ್ ರೊಡ್ರಿಗೀಸ್, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಜನತಾ ಕಾಲೋನಿ, ಗುಂದ, ತಾ: ಜೋಯಿಡಾ (ಹೋಂಡಾ ಎಕ್ಟಿವಾ ಸ್ಕೂಟಿ ನಂ: ಜಿ.ಎ-08/ಕ್ಯೂ-4985 ನೇದರ ಸವಾರ). ಈತನು ದಿನಾಂಕ: 23-04-2021 ರಂದು 19-30 ಗಂಟೆಯ ಸುಮಾರಿಗೆ ತನ್ನ ಹೋಂಡಾ ಎಕ್ಟಿವಾ ಸ್ಕೂಟಿ ನಂ: ಜಿ.ಎ-08/ಕ್ಯೂ-4985 ನೇದನ್ನು ದಾಂಡೇಲಿ-ಗುಂದ ರಾಜ್ಯ ರಸ್ತೆಯಲ್ಲಿ ಪೊಟೊಲಿಯಿಂದ ಗುಂದ ಕಡೆಗೆ ಹೋಗುವಾಗ ತಾನು ಚಲಾಯಿಸುತ್ತಿದ್ದ ಹೋಂಡಾ ಎಕ್ಟಿವಾ ಸ್ಕೂಟಿ ನಂ: ಜಿ.ಎ-08/ಕ್ಯೂ-4985 ನೇದನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಡಾಕುಂಡಿ ಫಾರೆಸ್ಟ್ ಚೆಕಪೋಸ್ಟ್ ಹತ್ತಿರ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯವಾಗಿ ಉಪಾಚಾರದ ಕುರಿತು ಜೋಯಿಡಾ ತಾಲೂಕಾ ಆಸ್ಪತ್ರೆಯಲ್ಲಿ ದಾಖಲಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟ ಬಗ್ಗೆ ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಿಲ್ಟನ್ ತಂದೆ ಬಾಬಯ್ಯ ಕುಲಾಸು, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ಗುಂದ, ತಾ: ಜೋಯಿಡಾ ರವರು ದಿನಾಂಕ: 23-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಪುಷ್ಪಾ ವಿಶ್ವನಾಥ ಆಚಾರಿ, ಪ್ರಾಯ-28 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಸಾತಕಂಡಾ, ಪಣಸೋಲಿ, ತಾ: ಜೋಯಿಡಾ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 19-04-2021 ರಂದು ಮಧ್ಯಾಹ್ನ 12-30 ಗಂಟೆಗೆ ಮನೆಯಿಂದ ಅಂಗಡಿಗೆ ಬಟ್ಟೆ ತೊಳೆಯುವ ಸೋಪ್ ತರುವದಾಗಿ ಪಿರ್ಯಾದಿಗೆ ಹೇಳಿ ಹೋದವಳು, ಈವರೆಗೆ ವಾಪಸ್ ಮನೆಗ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಸದ್ರಿ ಕಾಣೆಯಾದವಳಿಗೆ ಹುಡುಕಿಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ವಿಶ್ವನಾಥ ತಂದೆ ಪುರುಷೋತ್ತಮ ಆಚಾರಿ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಸಾತಕಂಡಾ, ಪಣಸೋಲಿ, ತಾ: ಜೋಯಿಡಾ ರವರು ದಿನಾಂಕ: 23-04-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: 41(d), 102 ಸಿ.ಆರ್.ಪಿ.ಸಿ ಸಹಿತ ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಿವು ತಂದೆ ಬಾಬು ಬಿಹಾರಿ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಯಲ್ಲಾಪುರ ನಾಕಾ ಹತ್ತಿರ, ತಾ: ಶಿರಸಿ, 2]. ಸದಾನಂದ ತಂದೆ ವೆಂಕಟೇಶ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುನ್ಸಿಪಲ್ ಕಾಂಪ್ಲೆಕ್ಸ್ ಹತ್ತಿರ, ತಾ: ಶಿರಸಿ. ಈ ನಮೂದಿತ ಆರೋಪಿತರು ಸೇರಿಕೊಂಡು ಸದರಿ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-1804 ನೇದನ್ನು ಕಳ್ಳತನ ಮಾಡಿ ತಂದು ಅವರೇ ಉಪಯೋಗಿಸುತ್ತಿದ್ದ ಬಗ್ಗೆ ಸಂಶಯ ಬಂದು ಹಾಗೂ ಆ ಮೋಟಾರ ಸೈಕಲಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರು ಪಡಿಸದೇ ಇರುವುದರಿಂದ ಸದರಿ ಮೋಟಾರ್ ಸೈಕಲನ್ನು ಆರೋಪಿತರಿಂದ ಪಂಚರ ಸಮಕ್ಷಮ ಜಪ್ತ ಪಡಿಸಿಕೊಂಡು, ಆರೋಪಿತರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ರಾಮಾ ಶೇರುಗಾರ, ಎ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 23-04-2021 ರಂದು 06-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-04-2021

at 00:00 hrs to 24:00 hrs

 

ದಾಂಡೇಲಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಬಸವರಾಜ ತಂದೆ ಬೋರಪ್ಪ ತಳವಾರ, ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ, ಲಮಾಣಿ ಚಾಳ, ಹಳೇ ದಾಂಡೇಲಿ. ಸುದ್ದಿದಾರರ ಗಂಡನಾದ ಈತನು ದಿನಾಲೂ ವಿಪರೀತ ಸರಾಯಿ ಕುಡಿಯುತ್ತಾ ಜಗಳ ಮಾಡುತ್ತಾ ಇದ್ದವನು, ದಿನಾಂಕ: 23-04-2021 ರಂದು ಸರಾಯಿ ಕುಡಿದಿದ್ದವನು, ಸಮಯ 11-45 ಗಂಟೆಯಿಂದ 12-00 ಗಂಟೆಯ ನಡುವಿನ ಅವಧಿಯಲ್ಲಿ ಹಳೇ ದಾಂಡೇಲಿಯಲ್ಲಿರುವ ತನ್ನ ಮನೆಯ ಮೊದಲನೇ ಕೋಣೆಯಲ್ಲಿ ಮೇಲ್ಛಾವಣಿಗೆ ಹಾಕಿರುವ ಕಟ್ಟಿಗೆಗೆ ನೈಲಾನ್ ಹಗ್ಗವನ್ನು ಕಟ್ಟಿ ಅದರಿಂದ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಪಾರ್ವತಿ ಕೋಂ. ಬಸವರಾಜ ತಳವಾರ, ಪ್ರಾಯ-35 ವರ್ಷ, ವೃತ್ತಿ-ದಾಂಡೇಲಿಯ ಸರಕಾರಿ ಆಸ್ಪತ್ರೆಯಲ್ಲಿ ಆಯಾ ಕೆಲಸ, ಸಾ|| ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ, ಲಮಾಣಿ ಚಾಳ, ಹಳೇ ದಾಂಡೇಲಿ ರವರು ದಿನಾಂಕ: 23-04-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 24-04-2021 06:27 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080