ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂ:- 23-04-2022

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 17/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಕು: ಶಬಾನಾ ತಂದೆ ಹಬಿಬುರ್ ರೆಹಮಾನ್, ಪ್ರಾಯ-42 ವರ್ಷ, ವೃತ್ತಿ-ಸೇಂಟ್ ಮೈಕೆಲ್ ಶಾಲೆಯಲ್ಲಿ ಶಿಕ್ಷಕಿ, ಸಾ|| ಸಣ್ಣ ಮಸೀದಿ ಹತ್ತಿರ, ನಂದನಗದ್ದಾ, ಕಾರವಾರ (ಮೋಟಾರ್ ಸ್ಕೂಟರ್ ನಂ: ಜಿ.ಎ-08/ಡಬ್ಲ್ಯೂ-3581 ನೇದರ ಸವಾರಳು). ದಿನಾಂಕ: 21-04-2022 ರಂದು ಸಾಯಂಕಾಲ 16-15 ಗಂಟೆಯ ಸುಮಾರಿಗೆ ಪಿರ್ಯಾದಿಯು ತನ್ನ ತಂದೆಯವರಾದ ಶ್ರೀ ಬಾಬು ತಂದೆ ಇಲ್ಲೆಲೋ ಗುನಗಿ, ಪ್ರಾಯ-80 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಭೈರೆ, ಕಾರವಾರ ಇವರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಕಾರವಾರದ ಮಾರುತಿ ಗಲ್ಲಿಯ ರಸ್ತೆಯ ತೀರಾ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿಯ ಹಿಂದಿನಿಂದ ಸುಭಾಶ್ ಸರ್ಕಲ್ ಕಡೆಯಿಂದ ಬಂದಂತ ಮೋಟಾರ್ ಸ್ಕೂಟರ್ ನಂ: ಜಿ.ಎ-08/ಡಬ್ಲ್ಯೂ-3581 ನೇದರ ಆರೋಪಿತೆ ಸವಾರಳು ತನ್ನ ಮೋಟಾರ್ ಸ್ಕೂಟರನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಾರವಾರದ ಮಾರುತಿ ಗಲ್ಲಿ ರಸ್ತೆಯಲ್ಲಿರುವ ಅಫ್ತಾಬ್ ಮೊಬೈಲ್ ಕೇರ್ ಅಂಗಡಿಯ ಎದುರುಗಡೆ ರಸ್ತೆಯ ತೀರಾ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಯ ತಂದೆಯವರ ಬಲಗಾಲಿನ ಹಿಂದಿನ ಭಾಗಕ್ಕೆ ತನ್ನ ಮೋಟಾರ್ ಸ್ಕೂಟರಿನ ಮುಂದಿನ ಭಾಗದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ತಂದೆಯವರಿಗೆ ಬಲಗಾಲಿನ ಹಿಂದಿನ ಭಾಗದಲ್ಲಿ ಮಂಡಿಯ ಕೆಳಗೆ ಗಾಯ ಹಾಗೂ ಒಳನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸುವರ್ಣ ಕೋಂ. ಕೃಷ್ಣಾನಂದ ಗುನಗಿ, ಪ್ರಾಯ-39 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಡಿಯಾ ಕೆರವಡಿ, ಕಾರವಾರ ರವರು ದಿನಾಂಕ: 23-04-2022 ರಂದು 13-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 18/2022, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂಜಯ ತಂದೆ ರಾಮೇಶ್ವರ ದಾಸ, ಪ್ರಾಯ-47 ವರ್ಷ, ವೃತ್ತಿ-ಚಾಲಕ, ಸಾ|| ಕರ್ಮಾ, ಪೋ: ಕರ್ಮಾ, ಥಾಣಾ ತಿಲೈಯಾ, ಜುರ್ಮಿ ಕೊಡೆರ್ಮಾ, ಜಾರ್ಖಂಡ್-825409 (ಟಿಪ್ಪರ್ ಲಾರಿ ನಂ: ಟಿ.ಎಸ್-07/ಯು.ಎಚ್-3659 ನೇದರ ಚಾಲಕ). ದಿನಾಂಕ: 23-04-2022 ರಂದು ಸಾಯಂಕಾಲ 16-50 ಗಂಟೆಯ ಸುಮಾರಿಗೆ ಪಿರ್ಯಾದಿಯವರು ನೌಕರಿ ಮಾಡುವ ನಾಗಾರ್ಜುನ ಕನ್ಸಟ್ರಕ್ಷನ್ ಕಂಪನಿಯ ಟಿಪ್ಪರ್ ಲಾರಿ ನಂ: ಟಿ.ಎಸ್-07/ಯು.ಎಚ್-3659 ನೇದರ ಆರೋಪಿ ಚಾಲಕನು ತನ್ನ ಟಿಪ್ಪರ್ ಲಾರಿಯನ್ನು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಕಾರವಾರ ಕಡೆಯಿಂದ ಅರ್ಗಾ ಕಡೆಗೆ ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋದವನು, ಕಾರವಾರದ ಬಿಣಗಾ ಘಟ್ಟದ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಹತ್ತಿರ ಮುಂದೆ ರಸ್ತೆ ತಿರುವು ಇದೆ ಅಂತಾ ನೋಡಿಯೂ ಸಹ ತಾನು ಚಲಾಯಿಸುತ್ತಿದ್ದ ಲಾರಿಯ ವೇಗವನ್ನು ನಿಯಂತ್ರಿಸಲಾಗದೇ ತಾನು ಚಲಾಯಿಸುತ್ತಿದ್ದ ಲಾರಿಯನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿ, ಭಾರತೀಯ ನೌಕಾ ನೆಲೆ ಕಾರವಾರ ರವರಿಗೆ ಸೇರಿದ ಕಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ತಾನೇ ಅಪಘಾತ ಪಡಿಸಿ, ತಾನು ಚಲಾಯಿಸುತ್ತಿದ್ದ ಲಾರಿಯ ಮುಂದಿನ ಭಾಗದಲ್ಲಿ ಜಖಂ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮುರಳಿಕೃಷ್ಣ ತಂದೆ ಸುಬ್ರಮಣ್ಯಂ ಸಿರಿಪುರಪು, ಪ್ರಾಯ-30 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಮನೆ ನಂ: 2-237, ಮೂದುನೂರು, ಕೃಷ್ಣಾ, ಆಂಧ್ರಪ್ರದೇಶ ರವರು ದಿನಾಂಕ: 23-04-2022 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2022, ಕಲಂ: 8(C), 20(B)(II)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಜೇಶ ರಾಯಪ್ಪಾ ವಡ್ಡರ, ಪ್ರಾಯ-27 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಶಿರವಾಡ, ಬಂಗಾರಪ್ಪ ನಗರ, ಕಾರವಾರ, 2]. ಮಣಿಕಂಠ ಬಾಬು ರಾಥೋಡ, ಪ್ರಾಯ-18 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜಾಂಬಾ ಕ್ರಾಸ್, ಶಿರವಾಡ, ಕಾರವಾರ. ಈ ನಮೂದಿತ ಆರೋಪಿತರು ದಿನಾಂಕ: 23-04-2022 ರಂದು 16-40 ಘಂಟೆಗೆ ಕಾರವಾರ ಅಜ್ವಿ ಹೊಟೇಲ್ ಹಿಂಭಾಗದ ಗಾಳಿ ಮರದ ಬಳಿ ತಮ್ಮ ತಾಬಾ ಯಾವುದೇ ಪಾಸ್ ಅಥವಾ ಪರ್ಮಿಟ್ ಇಟ್ಟುಕೊಳ್ಳದೇ ತಮ್ಮ ಯಮಹಾ ಕಂಪನಿಯ ಕಪ್ಪು/ಬಿಳಿ/ಕೆಂಪು ಬಣ್ಣದ ಸ್ಕೂಟರ್ ನಂ: ಕೆ.ಎ-30/ವಿ-8355 ನೇದರ ಡಿಕ್ಕಿಯಲ್ಲಿ ಸುಮಾರು 10,000/- ರೂಪಾಯಿ ಮೌಲ್ಯದ ಸುಮಾರು 210 ಗ್ರಾಂ ಆಗುವಷ್ಟು ನಿಷೇಧಿತ ಒಣಗಿದ ಗಾಂಜಾ ಮಾದಕ ಪದಾರ್ಥವನ್ನು ಅನಧೀಕೃತವಾಗಿ ಮಾರಾಟ ಮಾಡಿ ಹಣ ಗಳಿಸಲು ತಮ್ಮ ತಾಬಾ ಇಟ್ಟುಕೊಂಡಿದ್ದ ವೇಳೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 23-04-2022 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ರೋಷನ್ ತಂದೆ ವಿನಾಯಕ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಪೇಂಟಿಂಗ್, ಸಾ|| ಕೆರವಡಿ ಬಸ್ ಸ್ಟ್ಯಾಂಡ್ ಹತ್ತಿರ, ಕೆರವಡಿ, ಕಾರವಾರ. ಈತನು ದಿನಾಂಕ: 23-04-2022 ರಂದು 13-00 ಗಂಟೆಗೆ ಮಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆರವಡಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಸೇರಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಸಮಯ 13-55 ಗಂಟೆಗೆ ಪಂಚರು ಹಾಗೂ ಸಿಬ್ಬಂದಿಗಳೊಡನೆ ಸೇರಿ ದಾಳಿ ಮಾಡಿದಾಗ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಅಂಕೆ-ಸಂಖ್ಯೆ ಬರೆದ ಚೀಟಿ-01, ನಗದು ಹಣ 1,020/- ರೂಪಾಯಿ ಹಾಗೂ ಬಾಲ್ ಪೆನ್-01 ನೇದರ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಗುಡಿ, ಪಿ.ಎಸ್.ಐ, ಮಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 23-04-2022 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 160/2022, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ವೆಂಕಟೇಶ ತಂದೆ ನಾರಾಯಣ ಗೌಡ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊಂಡದಗದ್ದೆ, ಮಾವಿನಕುರ್ವಾ, ತಾ: ಹೊನ್ನಾವರ, 2]. ಗೋಪಾಲ ತಂದೆ ತಿಮ್ಮಪ್ಪ ಗೌಡ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಾಲೆಹಿತ್ತಲ, ಮಾವಿನಕುರ್ವಾ, ತಾ: ಹೊನ್ನಾವರ, 3]. ಗಣೇಶ ತಂದೆ ಮಾದೇವ ಗೌಡ, ಪ್ರಾಯ-28, ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂಗಡಿಹಿತ್ತಲು, ಮಾವಿನಕುರ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 23-04-2022 ರಂದು 01-00 ಗಂಟೆಗೆ ಹೊನ್ನಾವರ ತಾಲೂಕಿನ ಮಾವಿನಕುರ್ವಾ ಗ್ರಾಮದ ಗೋಪಾಲಕೃಷ್ಣ ದೇವಸ್ಥಾನದ ಹಿಂದಿನ ಗದ್ದೆ ಬಯಲಿನ ಸಾರ್ವಜನಿಕ ಪ್ರದೇಶದಲ್ಲಿ ತಮ್ಮ-ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ದಾಳಿಯ ಕಾಲಕ್ಕೆ 1). ನೆಲಕ್ಕೆ ಹಾಸಿದ ನೀಲಿ ಬಣ್ಣದ ಪ್ಲಾಸ್ಟಿಕ್ ತಾಡಪಾಲ ಮಂಡಾ-01, ಅ||ಕಿ|| 00.00/- ರೂಪಾಯಿ, 2). ವಿವಿಧ ಮುಖಬೆಲೆಯ ಒಟ್ಟು ನಗದು ಹಣ ಒಟ್ಟು 1,690/- ರೂಪಾಯಿ, 3). ಒಟ್ಟು ಇಸ್ಪೀಟ್ ಎಲೆಗಳು-52, ಅ||ಕಿ|| 00.00/- ರೂಪಾಯಿ, 4). ಅರ್ಧ ಉರಿದ ಮೇಣದ ಬತ್ತಿ-02, ಅ||ಕಿ|| 00.00/- ರೂಪಾಯಿ, 5). ಸ್ಯಾಮ್ಸಂಗ್ ಕಂಪನಿಯ ಕೀಪ್ಯಾಡ್ ಮೊಬೈಲ್-1, ಅ||ಕಿ|| 300/- ರೂಪಾಯಿ, 6). ಹೀರೋ ಕಂಪನಿಯ ಕೀಪ್ಯಾಡ್ ಮೊಬೈಲ್-1, ಅ||ಕಿ|| 300/- ರೂಪಾಯಿ, 7). ಎಮ್.ಐ ಕಂಪನಿಯ ಎಂಡ್ರಾಯ್ಡ್ ಮೊಬೈಲ್-1, ಅ||ಕಿ|| 1,000/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಯು ನಾಯಕ, ಪಿ.ಎಸ್.ಐ (ಕಾ&ಸು, ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 23-04-2022 ರಂದು 03-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 161/2022, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಂಕರ ತಂದೆ ಈರು ಚಂದಾವರ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಂದಾವರ ನಾಕಾ, ಜನತಾ ಕಾಲೋನಿ, ತಾ: ಹೊನ್ನಾವರ, 2]. ಚಂದ್ರಹಾಸ ತಂದೆ ರಾಮಚಂದ್ರ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| ಕರ್ಕಿ ನಾಕಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 23-04-2022 ರಂದು 12-30 ಗಂಟೆಗೆ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದ ಜನತಾ ಕಾಲೋನಿಯ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಒಂದು ಗೂಡಂಗಡಿಯ ಎದುರಿಗೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು, ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಿದ್ದಾಗ ದಾಳಿಯ ವೇಳೆ ಸಿಕ್ಕ ಆರೋಪಿತನ ತಾಬಾದಲ್ಲಿ 1). ಒಟ್ಟು ನಗದು ಹಣ 1,650/- ರೂಪಾಯಿ, 2). ಬಾಲ್ ಪೆನ್-01, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01 ನೇದವುಗಳೊಂದಿಗೆ ಸಿಕ್ಕಿದ್ದು, ಸದರಿ ಆರೋಪಿ 1 ನೇಯವನು ಒಟ್ಟಾದ ಹಣವನ್ನು ಹಾಗೂ ಓ.ಸಿ ಚೀಟಿಯನ್ನು ಓ.ಸಿ ಬುಕ್ಕಿಯಾದ ಆರೋಪಿ 2 ನೇಯವನಿಗೆ ನೀಡುತ್ತಿದ್ದುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ತನಿಖೆ-2), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 23-04-2022 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 162/2022, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಿಲಾಗ್ರೀಸ್ ತಂದೆ ಅಂತೋನ್ ಘರ್ನಾಂಡೀಸ್, ಪ್ರಾಯ-51 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಜನತಾ ಕಾಲೋನಿ, ಚಂದಾವರ, ತಾ: ಹೊನ್ನಾವರ, 2]. ಚಂದ್ರಹಾಸ ತಂದೆ ರಾಮಚಂದ್ರ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| ಕರ್ಕಿ ನಾಕಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 23-04-2022 ರಂದು 13-00 ಗಂಟೆಗೆ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದ ಚಂದಾವರ ನಾಕಾ ಕಡೆಯಿಂದ ಅರೇಂಗಡಿ ಕಡೆಗೆ ಹೋಗುವ ಡಾಂಬರ್ ರಸ್ತೆಯ ಮೋರಿ ಕಟ್ಟೆಯ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು, ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಿದ್ದಾಗ ದಾಳಿಯ ವೇಳೆ ಸಿಕ್ಕ ಆರೋಪಿತನ ತಾಬಾದಲ್ಲಿ 1). ಒಟ್ಟು ನಗದು ಹಣ 1,010/- ರೂಪಾಯಿ, 2). ಬಾಲ್ ಪೆನ್-01, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01. ಇವುಗಳೊಂದಿಗೆ ಸಿಕ್ಕಿದ್ದು, ಸದರಿ ಆರೋಪಿ 1 ನೇಯವನು ಒಟ್ಟಾದ ಹಣವನ್ನು ಹಾಗೂ ಓ.ಸಿ ಚೀಟಿಯನ್ನು ಓ.ಸಿ ಬುಕ್ಕಿಯಾದ ಆರೋಪಿ 2 ನೇಯವನಿಗೆ ನೀಡುತ್ತಿದ್ದುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸಾವಿತ್ರಿ ಆನಂದು ನಾಯಕ, ಪಿ.ಎಸ್.ಐ (ತನಿಖೆ-3), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 23-04-2022 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2022, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಣ್ಣಪ್ಪ ತಂದೆ ಮಂಜುನಾಥ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಅಳ್ವೆಕೋಡಿ, ಹಾಲಿ ಸಾ|| ತೆರ್ನಮಕ್ಕಿ, ಜನತಾ ಕಾಲೋನಿ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-1941 ನೇದರ ಸವಾರ). ಪಿರ್ಯಾದಿಯು ದಿನಾಂಕ: 23-04-2022 ರಂದು ಉಡುಪಿಯಿಂದ ಕಾರ್ ಮೇಲೆ ಮುಂಬೈಗೆ ಹೊರಟಿದ್ದು, ಪಿರ್ಯಾದಿಯ ಕಾರ್ ಮುಂದೆ ಇವರ ಸಂಬಂಧಿಕರಾದ ಕುಣಾಲ ತಂದೆ ಶ್ರೀಧರ ಶೆಟ್ಟಿ, ಸಾ|| ವಾಸುದೇವ ಪಾರ್ಕ್, ಟಿ.ಎಮ್.ಸಿ ಗಾರ್ಡನ್, ಖಾರೆಗಾಂವ್, ಕಲ್ವಾ ಠಾಣೆ, ಮುಂಬೈ ಇವರು ಇನ್ನೊಂದು ಕಾರ್ ನಂ: ಎಮ್.ಎಚ್-04/ಜೆ.ಬಿ-2984 ನೇದನ್ನು ಚಲಾಯಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊರಟಿದ್ದು, ಶಿರಾಲಿ ದಾಟಿ ಮುರ್ಡೇಶ್ವರ ಕಡೆಗೆ ಹೋಗುತ್ತಿದ್ದಾಗ ಕಾರನ ಮುಂದೆ ಎಡ ಬದಿಯಲ್ಲಿ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-1941 ನೇದರ ಸವಾರನಾದ ನಮೂದಿತ ಆರೋಪಿತನು ಬೆಳಿಗ್ಗೆ 10-30 ಗಂಟೆಗೆ ತೆರ್ನಮಕ್ಕಿ, ಸಭಾತಿ ಕ್ರಾಸ್ ಹತ್ತಿರ ಮೋಟಾರ್ ಸೈಕಲನ್ನು ನಿರ್ಲಕ್ಷ್ಯತನದಿಂದ ಒಮ್ಮೇಲೆ ಬಲಕ್ಕೆ ತೆಗೆದುಕೊಂಡು ಕಾರ್ ನಂ: ಎಮ್.ಎಚ್-04/ಜೆ.ಬಿ-2984 ನೇದ್ದರ ಎಡಬದಿಯಲ್ಲಿ ಮೋಟಾರ್ ಸೈಕಲನ್ನು ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಆರೋಪಿ ಚಾಲಕನು ತನಗೆ ತಲೆಗೆ ಗಂಭೀರ ಸ್ವರೂಪದ ಗಾಯನೋವು ಮಾಡಿಕೊಂಡು ಮೋಟಾರ್ ಸೈಕಲ್ ಹಿಂದೆ ಕುಳಿತುಕೊಂಡಿದ್ದ ಶ್ರೀಮತಿ ಶೋಭಾ ಕೋಂ. ಅಣ್ಣಪ್ಪ ನಾಯ್ಕ, ಸಾ|| ತೆರ್ನಮಕ್ಕಿ, ಜನತಾ ಕಾಲೋನಿ, ತಾ: ಭಟ್ಕಳ ಇವಳಿಗೆ ಬಲಗೈಗೆ ಮತ್ತು ಬೆನ್ನಿಗೆ ಗಾಯನೋವು ಪಡಿಸಿದ್ದು, ಆರೋಪಿ ಮೋಟಾರ್ ಸೈಕಲ್ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೋಹನದಾಸ ತಂದೆ ಸಂಜೀವ ಶೆಟ್ಟಿ, ಪ್ರಾಯ-53 ವರ್ಷ, ವೃತ್ತಿ-ಖಾಸಗಿ ನೌಕರ, ಸಾ|| ಬೆಳ್ಳಂಪಳ್ಳಿ, ಉಡುಪಿ, ಹಾಲಿ ಸಾ|| ನೆರುಲ್, ಸೀವುಡ್ ಸ್ಟೇಷನ್ ಸಮೀಪ, ಪ್ಲಾಟ್ ನಂ: 41, ಮನೆ ನಂ: ಎ-301, ಅಂಬಿಕಾ ನಿವಾಸ, ನ್ಯೂ ಮುಂಬೈ-400706 ರವರು ದಿನಾಂಕ: 23-04-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಅಣ್ಣಪ್ಪ ತಂದೆ ಗೋವಿಂದಪ್ಪ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕಿರಾಣಿ ಅಂಗಡಿಯ ವ್ಯಾಪಾರ, ಸಾ|| ಕಾಯ್ಕಿಣಿ ಗ್ರಾಮ, ಸಭಾತಿ ಕ್ರಾಸ್, ಪೀಓ: ತೆರ್ನಮಕ್ಕಿ, ತಾ: ಭಟ್ಕಳ. ಈತನು ದಿನಾಂಕ: 23-04-2022 ರಂದು 19-00 ಗಂಟೆಗೆ ಮುರ್ಡೇಶ್ವರದ ತೆರ್ನಮಕ್ಕಿ, ಕಾಯ್ಕಿಣಿಯ ಚುಂಡನ ಮನೆ ಹತ್ತಿರ ಯಾರೋ 3 ಜನರೊಂದಿಗೆ ಸೇರಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸರಾಯಿ ಕುಡಿಯುತ್ತಾ ಕುಳಿತ್ತಿದ್ದು, ದಾಳಿಯ ಸಮಯ 3 ಜನರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ದೇವರಾಜ ಸಿದ್ಧಣ್ಣ ಬಿರಾದಾರ, ಪಿ.ಎಸ್.ಐ (ತನಿಖೆ), ಮುರ್ಡೇಶ್ವರ ಪೋಲಿಸ್ ಠಾಣೆ ರವರು ದಿನಾಂಕ: 23-04-2022 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಮಾದೇವ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಕೆ.ಬಿ ರೋಡ್, ಚೌಥಣಿ, ತಾ: ಭಟ್ಕಳ. ಈತನು ದಿನಾಂಕ: 23-04-2022 ರಂದು 14-30 ಗಂಟೆಯ ಸಮಯಕ್ಕೆ ಮಾವಿನಕುರ್ವಾ ಬಂದರ್ ಧಕ್ಕೆಯ ಹತ್ತಿರ ಕರಿಕಲ್ ಹೋಗುವ ರಸ್ತೆಯಲ್ಲಿ ತನ್ನ ಅಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅ||ಕಿ|| 25,000/- ರೂಪಾಯಿ ಮೌಲ್ಯದ ಸುಜುಕಿ ಎಕ್ಸೆಸ್ ಮೋಟಾರ್ ಸ್ಕೂಟರ್ ನಂ: ಕೆ.ಎ-47/ಡಬ್ಲ್ಯೂ-7442 ನೇದರಲ್ಲಿ 1). OLD TAVERN WHISKY-180 ML ನ ಪ್ಯಾಕೆಟ್ ಗಳು–25, 2). BAGPIPER WHISKY-180 ML ನ ಪ್ಯಾಕೆಟ್ ಗಳು–08, 3). HAYWARDS WHISKY-90 ML ನ ಪ್ಯಾಕೆಟ್ ಗಳು–22, 4). ORIGINAL CHOICE WHISKY-90 ML ನ ಪ್ಯಾಕೆಟ್ ಗಳು–17, 5). McDOWELS WHISKY-90 ML ನ ಪ್ಯಾಕೆಟ್ ಗಳು–05. ಹೀಗೆ ಒಟ್ಟು 4860.56/- ರೂಪಾಯಿ ಮೌಲ್ಯದ ಅಬಕಾರಿ ಸ್ವತ್ತುಗಳನ್ನು ಒಂದು ಚೀಲದಲ್ಲಿ ತುಂಬಿ ಅದನ್ನು ವಾಹನದಲ್ಲಿ ಇಟ್ಟುಕೊಂಡು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಮಾರಾಟ ಮಾಡುತ್ತಿದ್ದಾಗ ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 23-04-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2022, ಕಲಂ: 406, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅನುಪ್ ಪೈ ತಂದೆ ದಿನಕರ ಪೈ, ವೃತ್ತಿ-ಶಾಖಾ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್, ತಾ: ಭಟ್ಕಳ, ಸಾ|| ಶ್ರೀ ಪ್ರಸಾದ, ನಂ: ಇ-67/5-1, ಬೋಳಪು ಗುಡ್ಡೆ, ಕಾವೂರು, ಮಂಗಳೂರು-575015, ಹಾಲಿ ಸಾ|| ಚಂದ್ರು ನಾಯ್ಕ ಕಂಪೌಂಡ್, ಜೀವನ ನಿಲಯ, ರೈಲ್ವೇ ಸ್ಟೇಶನ್ ಹತ್ತಿರ, ತಾ: ಭಟ್ಕಳ. ಈತನು ಭಟ್ಕಳ ಶಹರದ ಎಸ್.ಬಿ.ಐ ಬಜಾರ್ ಶಾಖೆಯಲ್ಲಿ ದಿನಾಂಕ: 28-02-2019 ರಿಂದ ದಿನಾಂಕ: 11-04-2022 ರ ಅವಧಿಯಲ್ಲಿ ಶಾಖಾ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಸದ್ರಿ ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ಬ್ಯಾಂಕಿನ ಗ್ರಾಹಕರೊಂದಿಗೆ ಒಳ ಸಂಚು ಮಾಡಿಕೊಂಡು ಸದ್ರಿ ಬ್ಯಾಂಕಿನ ಸಿಸ್ಟಮ್ ಸಸ್ಪೆನ್ಸ್ ಖಾತೆಗೆ ಖರ್ಚು ಹಾಕಿ, ಬ್ಯಾಂಕಿನ ಗ್ರಾಹಕರ ಖಾತೆಗೆ ಜಮಾ ಮಾಡುವ ಮೂಲಕ ಬ್ಯಾಂಕಿನ ಸುಮಾರು 1,50,00,000/- ರೂಪಾಯಿಯನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕಿಗೆ ಮೋಸ ಮಾಡಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ಎ. ತಂದೆ ವೆಂಕಟೇಶ ಎ, ಪ್ರಾಯ-34 ವರ್ಷ, ವೃತ್ತಿ-ಶಾಖಾ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್ ಆಪ್ ಬಜಾರ್ ಶಾಖೆ, ತಾ: ಭಟ್ಕಳ ರವರು ದಿನಾಂಕ: 23-04-2022 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ವೆಂಕಟ್ರಮಣ ಭಟ್ಟ, ಪ್ರಾಯ-72 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಜಿಗಳೆಮನೆ, ಬೇಗಾರ ಗ್ರಾಮ, ತಾ: ಸಿದ್ದಾಪುರ. ಈತನು ದಿನಾಂಕ: 22-04-2022 ರಂದು 22-30 ಗಂಟೆಗೆ ಸಿದ್ದಾಪುರ ತಾಲೂಕಿನ ಬೇಗಾರ ಗ್ರಾಮದ ಜಿಗಳೆಮನೆ ಊರಿನಲ್ಲಿ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 04 ಟೆಟ್ರಾ ಪ್ಯಾಕೆಟ್ ಗಳು, 2). Original Choice Deluxe Whisky 90 ML ಅಂತಾ ಬರೆದ ಖಾಲಿ 2 ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಮತ್ತು 3). 2 ಪ್ಲಾಸ್ಟಿಕ್ ಗ್ಲಾಸುಗಳು. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 23-04-2022 ರಂದು 00-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ 

ಅಪರಾಧ ಸಂಖ್ಯೆಃ 61/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಅನಂತ ತಂದೆ ಕೃಷ್ಣ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ಪಾಸ್ಟ್ ಪುಡ್ ಅಂಗಡಿ ವ್ಯಾಪಾರ, ಸಾ|| ಘಟ್ಟಿಕೈ, ತಾ: ಸಿದ್ದಾಪುರ. ಈತನು ದಿನಾಂಕ: 23-04-2022 ರಂದು ಬೆಳಿಗ್ಗೆ 10-00 ಗಂಟೆಗೆ ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿರುವ ಕಾಳಿಕಾ ಭವಾನಿ ಪಾಸ್ಟ್ ಪುಡ್ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕರಿಗೆ ಅನಧೀಕೃತವಾಗಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). HAYWARDS CHEERS WHISKY 90 ML ಅಂತಾ ಬರೆದ ಮದ್ಯ ತುಂಬಿದ 6 ಟೆಟ್ರಾ ಪ್ಯಾಕೆಟ್ ಗಳು, 2). 2 ಪ್ಲಾಸ್ಟಿಕ್ ಗ್ಲಾಸುಗಳು ಹಾಗೂ 3). HAYWARDS CHEERS WHISKY 90 ML ಅಂತಾ ಬರೆದ 2 ಮದ್ಯದ ಖಾಲಿ ಟೆಟ್ರಾ ಪ್ಯಾಕೆಟ್. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 23-04-2022 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2022, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತ ಗಣೇಶ ತಂದೆ ರಾಮಾ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ದೊಂಬೆ, ಹೆರೂರು, ತಾ: ಸಿದ್ದಾಪುರ. ಈತನು ದಿನಾಂಕ: 23-04-2022 ರಂದು ಬೆಳಿಗ್ಗೆ 11-15 ಗಂಟೆಗೆ ಸಿದ್ದಾಪುರ ತಾಲೂಕಿನ ಹೆರೂರಿನ ದೊಂಬೆ ಹೋಗುವ ಕಚ್ಚಾ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಅದೃಷ್ಟದ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಅವರಿಗೆ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಚೀಟಿಯನ್ನು ಬರೆದುಕೊಟ್ಟು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ, ದಾಳಿಯ ಕಾಲಕ್ಕೆ ಓ.ಸಿ ಜುಗಾರಾಟದ ಸಲಕರಣೆಗಳಾದ 1). ಬಾಲ್ ಪೆನ್-1, 2). ಓ.ಸಿ ಚೀಟಿ-1 ಮತ್ತು 3). ನಗದು ಹಣ 2,530/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕುಮಾರ ಕೆ, ಪೊಲೀಸ್ ನಿರೀಕ್ಷಕರು, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 23-04-2022 ರಂದು 13-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಕೃಷ್ಣ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಪಾಸ್ಟ್ ಪುಡ್ ಅಂಗಡಿ, ಸಾ|| ಕಾನಸೂರು, ತಾ: ಸಿದ್ದಾಪುರ. ಈತನು ದಿನಾಂಕ: 23-04-2022 ರಂದು 09-45 ಗಂಟೆಗೆ ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿ ತನ್ನ ಪಾಸ್ಟ್ ಪುಡ್ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 10 ಟೆಟ್ರಾ ಪ್ಯಾಕೆಟ್ ಗಳು, 2). Original Choice Deluxe Whisky 90 ML ಅಂತಾ ಬರೆದ ಖಾಲಿ 2 ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಮತ್ತು 3). 2 ಪ್ಲಾಸ್ಟಿಕ್ ಗ್ಲಾಸುಗಳು. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 23-04-2022 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಉದಯ ತಂದೆ ಕಾಳಪ್ಪ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಾಳಂಜಿ, ತಾ: ಶಿರಸಿ. ಈತನು ದಿನಾಂಕ: 23-04-2022 ರಂದು 18-00 ಗಂಟೆಗೆ ಮಾಳಂಜಿ ಗ್ರಾಮದ ತನ್ನ ಮನೆಯ ಪಕ್ಕದ ಸಾರ್ವಜನಿಕ ಸ್ಥಳದ ತಾತ್ಕಾಲಿಕ ಶೆಡ್ಡಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಡುತ್ತಿರುವಾಗ ಅಬಕಾರಿ ಸ್ವತ್ತುಗಳಾದ 1). Haywards Cheers Whisky 90 ML ಟೆಟ್ರಾ ಪ್ಯಾಕೆಟ್ ಗಳು-08, ಅ||ಕಿ|| 281.04/- ರೂಪಾಯಿ, 2). Haywards Cheers Whisky 90 ML ಅಂತಾ ಲೇಬಲ್ ಇರುವ ಮದ್ಯದ ಖಾಲಿ ಟೆಟ್ರಾ ಪ್ಯಾಕ್-02, ಅ||ಕಿ|| 00.00/- ರೂಪಾಯಿ, 3). ನಗದು ಹಣ 200/- ರೂಪಾಯಿ, 4). ಪ್ಲಾಸ್ಟಿಕ್ ಲೋಟ-02, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 23-04-2022 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ವಿಠೋಬಾ @ ಬಾಳು ತಂದೆ ರಾಮಚಂದ್ರ ದೇಸಾಯಿ, ಪಾಯ-52 ವರ್ಷ, ವೃತ್ತಿ-ಪಾನಶಾಪ್ ವ್ಯಾಪಾರ, ಸಾ || ಮಾರುತಿ ಗಲ್ಲಿ, ಜಗಲಬೇಟೆ, ತಾ: ಜೋಯಿಡಾ. ಈತನು ದಿನಾಂಕ: 23-04-2022 ರಂದು ಬೆಳಿಗ್ಗೆ 08-55 ಗಂಟೆಗೆ ಜಗಲಬೇಟದ ಶ್ರೀ ಮಾರುತಿ ದೇವಸ್ಥಾನದ ಎದುರುಗಡೆ ಇರುವ ತನ್ನ ಪಾನ್ ಅಂಗಡಿಯಲ್ಲಿ ಯಾರೋ 04 ಜನ ಅಪರಿಚಿತ ವ್ಯಕ್ತಿಗಳಿಗೆ ಅವರಲ್ಲಿದ್ದ Original Choice Whisky ಯ ಸರಾಯಿಯನ್ನು ಕುಡಿಯಲು ಅನುವು ಮಾಡಿಕೊಟ್ಟು ತನ್ನಲ್ಲಿಯ ಪ್ಲಾಸ್ಟಿಕ್ ಗ್ಲಾಸು, ನೀರಿನ ಬಾಟಲಿ ಹಾಗೂ ತಿನಿಸುಗಳನ್ನು ಕೊಟ್ಟು ತನ್ನ ಅಂಗಡಿಯಲ್ಲಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). 90 ML ನ Original Choice Whisky ಯ ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್‍ ಗಳು-02, 2). 90 ML ನ Original Choice Whisky ಯ ಖಾಲಿ ಟೆಟ್ರಾ ಪ್ಯಾಕೆಟ್‍ ಗಳು-02, 3). ಪ್ಲಾಸ್ಟಿಕ್ ಗ್ಲಾಸುಗಳು-02 4). ನೀರಿನ ಬಾಟಲಿ-01 ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಿನೋದ ಎಸ್. ಕೆ,  ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 23-04-2022 ರಂದು 10-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-04-2022

at 00:00 hrs to 24:00 hrs

 

ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

ಇತ್ತೀಚಿನ ನವೀಕರಣ​ : 14-05-2022 11:22 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080