ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 23-08-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 149/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 21-08-2021 ರಂದು ರಾತ್ರಿ 20-00 ಗಂಟೆಯಿಂದ ದಿನಾಂಕ: 22-08-2021 ರಂದು ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಕುಮಟಾದ ಮಣಕಿ ಮೈದಾನದ ಎದುರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಪಕ್ಕದಲ್ಲಿರುವ ಇರುವ ಹೊಟೇಲ್ ಸನ್ಮಾನ್ ಲಾಡ್ಜ್ ಎದುರಿಗೆ ಪಿರ್ಯಾದಿಯವರು ನಿಲ್ಲಿಸಿಟ್ಟ ಅ||ಕಿ|| 1,10,000/- ರೂಪಾಯಿ ಮೌಲ್ಯದ 200 ಸಿಸಿಯ ಬಜಾಜ್ ಪಲ್ಸರ್ ಎನ್.ಎಸ್ ಮೋಟಾರ್ ಸೈಕಲ್ ನಂ: ಕೆ.ಎ-02/ಕೆ.ಎ 9275 ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಧವನ್ ತಂದೆ ಉಮೇಶ ಪಟೇಲ್, ಪ್ರಾಯ-21 ವರ್ಷ, ವೃತ್ತಿ-ಇಂಜಿನಿಯರಿಂಗ್ ವಿದ್ಯಾರ್ಥಿ, ಸಾ|| #25/2, 15 ನೇ ಕ್ರಾಸ್, 2 ನೇ ಮೇನ್, ಹೆಲ್ತ್ ಲೇ-ಔಟ್, ನಾಗರಭಾವಿ, 2 ನೇ ಸ್ಟೇಜ್, ಅನ್ನಪೂರ್ಣೇಶ್ವರಿ ನಗರ, ಬೆಂಗಳೂರು 560091 ರವರು ದಿನಾಂಕ: 23-08-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 224/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ಮಾದೇವ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಹಿಮೆ, ಸರಳಗಿ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-4858 ನೇದರ ಸವಾರ). ಈತನು ದಿನಾಂಕ: 23-08-2021 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರ ತಾಲೂಕಿನ ಹಳದೀಪುರದ ಅಗ್ರಹಾರ ಗಣಪತಿ ದೇವಸ್ಥಾನದ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-4858 ನೇದನ್ನು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಹಳದೀಪುರದ ಅಗ್ರಹಾರದ ಗಣಪತಿ ದೇವಸ್ಥಾನದ ಕಡೆಯಿಂದ ರಸ್ತೆಯ ಬಲಬದಿಯಿಂದ ರಸ್ತೆಯ ಎಡಕ್ಕೆ ಹೋಗಲೆಂದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ನ್ನು ದಾಟುತ್ತಿದ್ದ ಗಾಯಾಳು ಗಣಪು ತಂದೆ ಮಾಸ್ತಿ ಗೌಡ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಗ್ರಹಾರ, ಹಳದೀಪುರ, ತಾ: ಹೊನ್ನಾವರ, ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎಡಗಾಲಿನ ಮೊಣಗಂಟಿಗೆ, ಬಲಗಾಲಿನ ಮೊಣಗಂಟಿನ ಕೆಳಗೆ ಗಾಯ ಪಡಿಸಿದ್ದಲ್ಲದೇ ತಲೆಗೆ ಪೆಟ್ಟನ್ನುಂಟು ಪಡಿಸಿ, ತಾನೂ ಸಹ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ನಾಗು ಗೌಡ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಠದಕೇರಿ, ಕರ್ಕಿನಾಕಾ, ತಾ: ಹೊನ್ನಾವರ ರವರು ದಿನಾಂಕ: 23-08-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಲಾರಿ ನಂ: ಕೆ.ಎ-02/ಎ.ಇ-4518 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 23-08-2021 ರಂದು 15-00 ಗಂಟೆಗೆ ಹಳಿಯಾಳ ತಾಲೂಕಿನ ಅಜಗಾಂವ್ ಕ್ರಾಸ್ ಹತ್ತಿರ ದಾಂಡೇಲಿ-ಹಳಿಯಾಳ ರಾಜ್ಯ ಹೆದ್ದಾರಿಯ ಮೇಲೆ ತಾನು ಚಲಾಯಿಸುತ್ತಿದ್ದ ಪೋಲ್ಸ್ ಲೋಡ್ ತುಂಬಿದ ಲಾರಿ ನಂ: ಕೆ.ಎ-02/ಎ.ಇ-4518 ನೇದನ್ನು ಹಳಿಯಾಳ ಕಡೆಯಿಂದ ದಾಂಡೇಲಿ ಕಡೆಗೆ ಬರಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕಾರಿಯಾಗುವಂತೆ ಚಲಾಯಿಸಿಕೊಂಡು ಬಂದು, ತನ್ನ ಲಾರಿಯ ವೇಗವನ್ನು ನಿಯಂತ್ರಿಸಲಾಗದೇ ಒಮ್ಮೇಲೆ ತನ್ನ ಬಲಕ್ಕೆ ರಾಜ್ಯ ಹೆದ್ದಾರಿಗೆ ಬಂದು ಎದುರಿನಿಂದ ದಾಂಡೇಲಿ ಕಡೆಯಿಂದ ಹಳಿಯಾಳ ಕಡೆಗೆ ಹೋಗುತ್ತಿದ್ದ ಪಿರ್ಯಾದಿಯ ಹೋಂಡಾ ಕಾರ್ ನಂ: ಕೆ.ಎ-31/ಎಮ್-8619 ನೇದರ ಬಲಬದಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿ ಅಜಗಾಂವ್ ಕ್ರಾಸ್ ಹತ್ತಿರ ಪ್ರಯಾಣಿಕರು ಇಳಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-42/ಎಫ್-1584 ನೇದರ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಲಾರಿಯನ್ನು ಸ್ಥಲದಲ್ಲಿಯೇ ತನ್ನ ಲಾರಿಯನ್ನು ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಜುನೈದ್ ತಂದೆ ಅಬ್ದುಲ್ ಹಾಜಿ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| 3 ನೇ ನಂಬರ್ ಗೇಟ್ ಹತ್ತಿರ, ಹಳಿಯಾಳ ರೋಡ್, ದಾಂಡೇಲಿ ರವರು ದಿನಾಂಕ: 23-08-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 8(c), 20(b)(ii)(A) NDPS Act-1985 ನೇದ್ದರ ವಿವರ...... ನಮೂದಿತ ಆರೋಪಿತ ರಾಮು ತಂದೆ ಸಕ್ಕು ಲಾಂಬೋರೆ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಂಡರನಕೊಪ್ಪ, ಪೋ: ಮದ್ನೂರ, ತಾ: ಯಲ್ಲಾಪುರ. ಈತನು ದಿನಾಂಕ: 23-08-2021 ರಂದು ಮಧ್ಯಾಹ್ನ 03-30 ಗಂಟೆಯ ಸಮಯಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲೋನಿ ಬಸ್ ನಿಲ್ದಾಣದ ಎದುರು ಸಾರ್ವಜನಿಕ ರಸ್ತೆಯ ಮೇಲೆ ಅ||ಕಿ|| 8,000/- ರೂಪಾಯಿ ಬೆಲೆಬಾಳುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸಹಿತ 856 ಗ್ರಾಂ ತೂಕದ ಗಾಂಜಾ ಮಾದಕ ವಸ್ತುವನ್ನು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ತನ್ನ ಲಾಭಕ್ಕಾಗಿ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ವ್ಹಾಯ್-2749 ನೇದರ ಪಕ್ಕ ನಿಂತು ಗಾಂಜಾವನ್ನು ಮಾರಾಟ ಮಾಡುತ್ತಿರುವಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಐ. ಆರ್. ಗಡ್ಡೇಕರ, ಪಿ.ಎಸ್.ಐ, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 23-08-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 137/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಬಸವರಾಜ ತಂದೆ ಕಲ್ಲಪ್ಪ ಸುರಕೂಡಾ, ಪ್ರಾಯ-49 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತೇರಗಾಂವ ಗ್ರಾಮ, ತಾ: ಹಳಿಯಾಳ. ಈತನು ದಿನಾಂಕ: 23-08-2021 ರಂದು 10-05 ಗಂಟೆಗೆ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಂದು ಬಿಳಿ ಬಣ್ಣದ ಚೀಲದಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ 35.13/- ರೂಪಾಯಿ ಮುಖಬೆಲೆಯ 90 ML ನ ORIGINAL CHOICE ಅಂತಾ ಲೇಬಲ್ ಇರುವ ಟೆಟ್ರಾ ಪ್ಯಾಕೆಟ್ ಗಳು-28, ಒಟ್ಟು ಅ||ಕಿ|| 3,161/- ರೂಪಾಯಿ ಮೌಲ್ಯದ ಕರ್ನಾಟಕ ರಾಜ್ಯದಲ್ಲಿ ಮಾರಾಟಕ್ಕೆ ಮಾತ್ರ ಅಂತಾ ನಮೂದಿರುವ ಸರಾಯಿ ಟೆಟ್ರಾ ಪ್ಯಾಕೆಟ್ ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಹೊತ್ತುಕೊಂಡು ಹೋಗುತ್ತಿದ್ದಾಗ ದಾಳಿಯ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಎಲ್&ಓ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 23-08-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-08-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 46/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗೌತಮ ತಂದೆ ಪ್ರಭಾಕರ ನಾಯ್ಕ, ಪ್ರಾಯ-27 ವರ್ಷ, ವೃತ್ತಿ-ಇಂಜಿನೀಯರ್, ಸಾ|| ಆಡುಕಟ್ಟೆ, ತೆಂಕಣಕೇರಿ, ತಾ: ಅಂಕೋಲಾ. ಈತನು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದವನು, ಕಳೆದ 2020 ನೇ ಸಾಲಿನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಬಂದಿದ್ದರಿಂದ ಊರಿಗೆ ಬಂದು ಮನೆಯಿಂದಲೇ ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿದ್ದವನು, ದಿನಾಂಕ: 23-08-2021 ರಂದು ಬೆಳಿಗ್ಗೆ 09-00 ಗಂಟೆಯಿಂದ ಮಧ್ಯಾಹ್ನ 12-30 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಅಥವಾ ಯಾವುದೋ ಕಾರಣಕ್ಕೆ ಮನೆಯಲ್ಲಿ ಅವನು ಕಂಪ್ಯೂಟರ್ ಕೆಲಸ ಮಾಡುವ ಕೋಣೆಯಲ್ಲಿರುವ ಫ್ಯಾನಿಗೆ ನೈಲಾನ್ ದಾರದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ನಾರಾಯಣ ನಾಯ್ಕಮ ಪ್ರಾಯ-39 ವರ್ಷ, ವೃತ್ತಿ-ಆಟೋಮೊಬೈಲ್ ಅಂಗಡಿ, ಸಾ|| ಆಡುಕಟ್ಟೆ, ತೆಂಕಣಕೇರಿ, ತಾ: ಅಂಕೋಲಾ ರವರು ದಿನಾಂಕ: 23-08-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕುಮಾರ ತಂದೆ ಶೇಖಪ್ಪ ಕಮಾಟಿ, ಪ್ರಾಯ-39 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಕಮಟಗೇರಿ ಓಣಿ,  ತಾ: ಹಾನಗಲ್, ಜಿ: ಹಾವೇರಿ. ಈತನು ದಿನಾಂಕ: 21-08-2021 ರಂದು ಮಧ್ಯಾಹ್ನ 13-45 ಗಂಟೆಯ ಸುಮಾರಿಗೆ ಗೋಕರ್ಣದ ಓಂ ಬೀಚ್ ಕಡಲ ತೀರದಲ್ಲಿ ಕಲ್ಲು ಬಂಡೆಗಳ ಮೇಲೆ ನಿಂತುಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಆಕಸ್ಮಿಕವಾಗಿ ಬಂದ ಸಮುದ್ರದ ಅಲೆಯ ಸೆಳತಕ್ಕೆ ಸಿಲುಕಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟು, ದಿನಾಂಕ: 23-08-2021 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ಓಂ ಬೀಚ್ ಕಡಲ ತೀರದಲ್ಲಿ ಶವವಾಗಿ ಸಿಕ್ಕಿರುತ್ತಾನೆ. ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅರುಣ ತಂದೆ ಗಿರಯಪ್ಪಾ ನಾಗಜ್ಜನವರ, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಮಟಗೇರಿ ಓಣಿ, ತಾ: ಹಾನಗಲ್, ಜಿ: ಹಾವೇರಿ ರವರು ದಿನಾಂಕ: 23-08-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 24/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಮೇಶ ತಂದೆ ಭರಮಾ ಉಪ್ಪಾರ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊನ್ಮಾಂವ್, ತಾ: ಕುಮಟಾ. ಪಿರ್ಯಾದಿಯ ತಮ್ಮನಾದ ಈತನು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಮೃತನು ಅನಾರೋಗ್ಯದಿಂದ ಇದ್ದವನು, ದಿನಾಂಕ: 17-08-2021 ರಂದು ಕುಮಟಾ ಹೊನ್ಮಾಂವ್ ದಲ್ಲಿ ಇರುವ ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬೆಳಿಗ್ಗೆ 09-00 ಗಂಟೆಯಿಂದ 14-00 ಗಂಟೆಯ ಅವಧಿಯಲ್ಲಿ ತನಗಿದ್ದ ಯಾವುದೋ ಕಾಯಿಲೆಯಿಂದ ಅಥವಾ ಆಕಸ್ಮಿಕವಾಗಿ ನೆಲದ ಮೇಲೆ ಬಿದ್ದು ಅಸ್ವಸ್ಥಗೊಂಡವನಿಗೆ ಆತನ ಹೆಂಡತಿ ಮಂಜುಳಾ ಉಪ್ಪಾರ ಇವರು ಕುಮಟಾ ಮತ್ತು ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಅದೇ ದಿನ ಮಂಗಳೂರು ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 22-08-2021 ರಂದು 17-20 ಗಂಟೆಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಶ್ರೀನಿವಾಸ ತಂದೆ ಭರಮಾ ಉಪ್ಪಾರ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊನ್ಮಾಂವ್, ತಾ: ಕುಮಟಾ ರವರು ದಿನಾಂಕ: 23-08-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಅಬ್ದುಲ್ ಖಾದರ್ ತಂದೆ ಅಮೀನಸಾಬ್ ಎಕ್ಕುಂಡಿ, ಪ್ರಾಯ-32 ವರ್ಷ, ವೃತ್ತಿ-ಟೈಲ್ಸ್ ಫಿಟ್ಟಿಂಗ್ ಕೆಲಸ, ಸಾ|| ನೆಹರು ನಗರ, ಕನವಳ್ಳಿ ಗಲ್ಲಿ, ತಾ: ಶಿರಸಿ. ಪಿರ್ಯಾದಿಯ ಅಣ್ಣನಾದ ಈತನು ಶಿರಸಿ ರೇವಣಕಟ್ಟಾದ ನಿವಾಸಿಯಾದ ವಿಧವೆಯೊಬ್ಬಳನ್ನು ಪ್ರೀತಿಸುತ್ತಿದ್ದವನು, ಕಳೆದ 6 ತಿಂಗಳ ಹಿಂದೆ ತನ್ನ ಮನೆಗೆ ಕರೆದುಕೊಂಡು ಬಂದು ಇಟ್ಟುಕೊಂಡಿದ್ದು, ಅವಳು ಕಳೆದ ಗುರುವಾರ ದಿನಾಂಕ: 19-08-2021 ರಂದು ಮೃತನೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋದವಳು, ಮರಳಿ ಬಾರದೇ ಇರುವುದರಿಂದ ಮತ್ತು ಅವಳ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇದ್ದುದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ದಿನಾಂಕ: 23-08-2021 ರಂದು 07-50 ಗಂಟೆಗೆ ತನ್ನ ವಾಸದ ಮನೆಯಲ್ಲಿ ಕ್ರಿಮಿನಾಶಕ ಔಷಧ ಸೇವಿಸಿ ಅಸ್ವಸ್ಥನಾದವನಿಗೆ ಚಿಕಿತ್ಸೆಯ ಕುರಿತು ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಗೆ ಸೇರಿಸಿದವನಿಗೆ ಚಿಕಿತ್ಸೆ ಫಲಕಾರಿಯಾಗದೇ 08-45 ಗಂಟೆಗೆ ಮೃತಪಟ್ಟಿದ್ದು, ಇದರ ಹೊರತು ಮೃತ ತನ್ನ ಅಣ್ಣನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಆಸಿಫ್ ತಂದೆ ಅಮೀನಸಾಬ್ ಎಕ್ಕುಂಡಿ, ಪ್ರಾಯ-29 ವರ್ಷ, ವೃತ್ತಿ-ಟೈಲ್ಸ್ ಫಿಟ್ಟಿಂಗ್ ಕೆಲಸ, ಸಾ|| ನೆಹರು ನಗರ, ಕನವಳ್ಳಿ ಗಲ್ಲಿ, ತಾ: ಶಿರಸಿ ರವರು ದಿನಾಂಕ: 23-08-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 24-08-2021 04:25 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080