ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 23-12-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 108/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ವಜ್ರನಾಥ ತಂದೆ ಕೃಷ್ಣಪ್ಪ ಕಳಸ, ಪ್ರಾಯ-55 ವರ್ಷ, ವೃತ್ತಿ-ತೆಂಗಿನಕಾಯಿ ವ್ಯಾಪಾರ, ಸಾ|| ಕಳಸವಾಡಾ, ಕಾರವಾರ. ಈತನು ದಿನಾಂಕ: 23-12-2021 ರಂದು ಸಾಯಂಕಾಲ 18-30 ಘಂಟೆಗೆ ತನ್ನ ಲಾಭದ ಸಲುವಾಗಿ ಕಾರವಾರ ಗಾಂಧಿ ಮಾರ್ಕೆಟಿನ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಓ.ಸಿ ಮಟಕಾ ಜೂಜಾಟದ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದುಕೊಟ್ಟು ಓ.ಸಿ ಮಟಕಾ ಜೂಜಾಟ ನಡೆಸುತ್ತಿರುವಾಗ ದಾಳಿ ನಡೆಸಿ, ಆರೋಪಿತನಿಂದ ಅಂಕೆ-ಸಂಖ್ಯೆ ಬರೆದ ಕಾಗದ-1, ಬಾಲ್ ಪೆನ್-1 ಮತ್ತು ನಗದು ಹಣ 5,725/- ರೂಪಾಯಿಗಳನ್ನು ವಶಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್. ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 23-12-2021 ರಂದು 20-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 189/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಭಿಷೇಕ ತಂದೆ ಮಂಜುನಾಥ, ಪ್ರಾಯ-22 ವರ್ಷ, ವೃತ್ತಿ-ಚಾಲಕ, ಸಾ|| ಹರಗುವಳ್ಳಿ, ಮೇಲಿನಕೇರಿ, ಸಂಡ, ತಾ: ಶಿಕಾರಿಪುರ, ಜಿ: ಶಿವಮೊಗ್ಗ, 2]. ಚಂದ್ರಶೇಖರ ತಂದೆ ಪುಟ್ಟ ಮಡಿವಾಳ @ ಸಾಲಿಯಾನ್, ಪ್ರಾಯ-52 ವರ್ಷ, ವೃತ್ತಿ-ಕಲಾಲ್ ಬಾರಿನಲ್ಲಿ ಕ್ಯಾಶಿಯರ್, ಸಾ|| ಸಾಸ್ಥಾನ, ಐರೋಡಿ ಗ್ರಾಮ, ಕಾರಂತರ ಬೆಟ್ಟ, ಉಡುಪಿ. 3]. ಸಂಕೇತ ತಂದೆ ಬೊಮ್ಮಯ್ಯ ನಾಯಕ, ಪ್ರಾಯ-20 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸುಂಕಸಾಳ, ತಾ: ಅಂಕೋಲಾ. ಈ ನಮೂದಿತ ಆರೋಪಿತರು ದಿನಾಂಕ: 23-12-2021 ರಂದು 19-45 ಗಂಟೆಯ ಸುಮಾರಿಗೆ ಫೋರ್ಡ್ ಕಂಪನಿಯ ಕಾರ್ ನಂ: ಕೆ.ಎ-19/ಎಮ್.ಇ-1342 ನೇದರಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೆ ಸುಮಾರು 35,499/- ರೂಪಾಯಿ ಮೌಲ್ಯದ ಕರ್ನಾಟಕ ರಾಜ್ಯದ ಸರಾಯಿಯ 180 ML ನ OLD TAVERN WHISKY ಸ್ಯಾಚೆಟ್ ಗಳು-22, 180 ML ನ BAGPIPER DELUXE WHISKY ಸ್ಯಾಚೆಟ್ ಗಳು-12, 90 ML ನ Original choice ಸ್ಯಾಚೆಟ್ ಗಳು-336, 90 ML ನ HAYWARDS CHEERS WHISKY ಸ್ಯಾಚೆಟ್ ಗಳು-480, 500 ML ನ KINGFISHER STRONG PREMIUM BEER ಟಿನ್ ಡಬ್ಬಿಗಳು-10, 500 ML ನ UB EXPORT STRONG PREMIUM BEER ಟಿನ್ ಡಬ್ಬಿಗಳು-24. ಇವುಗಳನ್ನು ಅಕ್ರಮವಾಗಿ ಅಂಕೋಲಾ ಕಡೆಯಿಂದ ಸುಂಕಸಾಳ ಕಡೆಗೆ ಸಾಗಾಟ ಮಾಡುತ್ತಿದ್ದಾಗ ದಾಳಿಯ ಕಾಲಕ್ಕೆ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಶೆಟ್ಟಿ, ಪೊಲೀಸ್ ನಿರೀಕ್ಷಕರು, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 23-12-2021 ರಂದು 23-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 89/2021, ಕಲಂ: 436 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಆರೋಪಿತರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 11-12-2021 ರಂದು 22-30 ಗಂಟೆಯಿಂದ ದಿನಾಂಕ: 12-12-2021 ರಂದು 00-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಬಾಬ್ತು ಗೋಕರ್ಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹಿಂಬದಿಯ ರಸ್ತೆಗೆ ಹೊಂದಿಕೊಂಡಿರುವ ವನಶ್ರೀ ವೈನ್ ಶಾಪ ಕಟ್ಟಡಕ್ಕೆ ಹಿಂಬದಿಯಲ್ಲಿ ಪಿರ್ಯಾದಿಗೆ ಲುಕ್ಸಾನ್ ಮಾಡಿ ಕೇಡನ್ನು ಉಂಟು ಮಾಡುವ ಉದ್ದೇಶದಿಂದ ನಮೂದಿತ ಆರೋಪಿತರು ಬೆಂಕಿ ಹಾಕಿ ವೈನ್ ಶಾಪ್ ದಲ್ಲಿರುವ ಕ್ಯಾಶ್ ಡ್ರಾವರಿನಲ್ಲಿಟ್ಟಿದ್ದ 5 ಲಕ್ಷ ರೂಪಾಯಿ ನಗದು ಹಣ ಹಾಗೂ ಟೇಬಲ್ ಕೌಂಟರ್, ಮದ್ಯದ ಬಾಟಲಿಗಳಿದ್ದ ಶೋಕೇಸ್, 05 ರೆಫ್ರಿಜರೇಟರ್, ವಿದ್ಯುತ್ ಉಪಕರಣಗಳು ಸೇರಿ ಸುಮಾರು 34 ರಿಂದ 35 ಲಕ್ಷ ರೂಪಾಯಿ ಅಂದಾಜಿನ ಸ್ವತ್ತುಗಳನ್ನು ಲುಕ್ಸಾನ್ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ನಾರಾಯಣ ನಾಯಕ, ಪ್ರಾಯ-67 ವರ್ಷ ವೃತ್ತಿ-ಬಿಜಿನೆಸ್, ಸಾ|| ತಲಗೇರಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 23-12-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 222/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಘವೇಂದ್ರ ತಂದೆ ವೆಂಕಟದಾಸ ಶಾನಭಾಗ, ಸಾ|| ಕೊಡ್ಕಣಿ, ತಾ: ಕುಮಟಾ (ಹೋಂಡಾ ಎಕ್ಟಿವಾ ಸ್ಕೂಟರ್ ನಂ: ಕೆ.ಎ-47/ಎಚ್-4576 ನೇದರ ಚಾಲಕ). ಈತನು ದಿನಾಂಕ: 23-12-2021 ರಂದು-15-42 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಕುಮಟಾ-ಅಂಕೋಲಾ ಡಾಂಬರ್ ರಸ್ತೆಯ ಮೇಲೆ ತನ್ನ ಹೋಂಡಾ ಎಕ್ಟಿವಾ ಸ್ಕೂಟರ್ ನಂ: ಕೆ.ಎ-47/ಎಚ್-4576 ನೇದನ್ನು ಮಿರ್ಜಾನ ಕೋಟೆಯ ಕ್ರಾಸ್ ಕಡೆಯಿಂದ ಕುಮಟಾ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಕೋಟೆ ಕ್ರಾಸ್ ಹತ್ತಿರ ತನ್ನ ಸ್ಕೂಟರಿನ ವೇಗವನ್ನು ನಿಯಂತ್ರಿಸದೇ ನಿಷ್ಕಾಳಜಿತನದಿಂದ ಒಮ್ಮೆಲೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯನ್ನು ಕ್ರಾಸ್ ಮಾಡಲು ಹೋಗಿ ಒಮ್ಮೆಲೇ ಸ್ಕೂಟರನ್ನು ರಸ್ತೆಗೆ ನುಗ್ಗಿಸಿ, ಗೋಕರ್ಣ ಕಡೆಯಿಂದ ಕುಮಟಾ ಕಡೆಗೆ ತನ್ನ ಮಾರ್ಗದಲ್ಲಿ ಬರುತ್ತಿದ್ದ ಪಿರ್ಯಾದಿಯು ಪ್ರಯಾಣಿಸುತ್ತಿದ್ದ ಟೊಯೋಟಾ ಇಟಿಯೋಸ್ ಕಾರ್ ನಂ: ಕೆ.ಎ-30/ಎ-2177 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಇದನ್ನು ತಪ್ಪಿಸಲು ಕಾರ್ ಚಾಲಕ ನಾಗಪ್ಪ ತಂದೆ ತಿಮ್ಮಪ್ಪ ಗೌಡ, ಈತನು ಸದ್ರಿ ಕಾರನ್ನು ರಸ್ತೆಯ ಎಡಕ್ಕೆ ಚಲಾಯಿಸಿದ್ದರಿಂದ ರಸ್ತೆಯ ಅಂಚಿನಲ್ಲಿರುವ ಕಲ್ಲಿಗೆ ಕಾರ್ ಗುದ್ದಿಕೊಂಡು ಕಾರ್ ಜಖಂಗೊಂಡಿರುವ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಹ್ಮಣ್ಯ ತಂದೆ ನರಸಿಂಹ ಜೋಶಿ, ಪ್ರಾಯ-41 ವರ್ಷ, ವೃತ್ತಿ-ವೈದಿಕ ಕೆಲಸ, ಸಾ|| ರಥಬೀದಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 23-12-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 232/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ಸಿದ್ದಿ, ಸಾ|| ಬಿರಗದ್ದೆ, ಇಡಗುಂದಿ, ತಾ: ಯಲ್ಲಾಪುರ (ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-9030 ನೇದರ ಸವಾರ). ಈತನು ದಿನಾಂಕ: 21-12-2021 ರಂದು ಸಾಯಂಕಾಲ 07-30 ಗಂಟೆಗೆ ಯಲ್ಲಾಪುರ ತಾಲೂಕಿನ ಇಡಗುಂದಿಯ ಜನತಾ ಕಾಲೋನಿಯ ಕ್ರಾಸದಲ್ಲಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-9030 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಎದುರಿನಿಂದ ಅಂದರೆ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಪಿರ್ಯಾದಿಯನ್ನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-6594 ನೇದರ ಮೇಲೆ ಕೂರಿಸಿಕೊಂಡು ನಿಧಾನವಾಗಿ ರಸ್ತೆಯ ಎಡಬದಿಯಿಂದ ಮೋಟಾರ್ ಸೈಕಲ್ ಸವಾರಿ ಮಾಡಿಕೊಂಡು ಹೊರಟ ಸಾಕ್ಷಿದಾರ ಶ್ರೀ ಮಂಜುನಾಥ ಕುಣಬಿ, ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಬಲಗೈ ಮೊಣಗಂಟಿಗೆ, ಸೊಂಟಕ್ಕೆ ಹಾಗೂ ಸಾಕ್ಷಿದಾರ ಶ್ರೀ ಮಂಜುನಾಥ ಕುಣಬಿಯವರಿಗೆ ಹಣೆಗೆ, ತಲೆಗೆ ಹಾಗೂ ಕುತ್ತಿಗೆಗೆ ಸಾದಾ ಗಾಯನೋವು ಪಡಿಸಿ, ಎರಡೂ ಮೋಟಾರ್ ಸೈಕಲಗಳನ್ನು ಜಖಂಗೊಳಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ತಲೆಗೆ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀಮತಿ ಚಂದಾ ಮಂಜುನಾಥ ಕುಣಬಿ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾರೆ, ಮಲವಳ್ಳಿ, ತಾ: ಯಲ್ಲಾಪುರ ರವರು ದಿನಾಂಕ: 23-12-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 233/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಮಾರುತಿ ವಡ್ಡರ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ರಾಮನಕೊಪ್ಪ, ಪೋ: ಸಹಸ್ರಹಳ್ಳಿ, ತಾ: ಯಲ್ಲಾಪುರ (ಟಿಪ್ಪರ್ ಲಾರಿ ನಂ: ಕೆ.ಎ-27/5155 ನೇದರ ಚಾಲಕ). ಈತನು ದಿನಾಂಕ: 23-12-2021 ರಂದು 16-45 ಗಂಟೆಯ ಸುಮಾರಿಗೆ ಯಲ್ಲಾಪುರ ಪಟ್ಟಣದ ಅಂಬೇಡ್ಕರ್ ಸರ್ಕಲ್ ಹತ್ತಿರ ಹಾದು ಹೋದ ರಾಜ್ಯ ಹೆದ್ದಾರಿ ಸಂಖ್ಯೆ-93 ರಲ್ಲಿ ತನ್ನ ಬಾಬ್ತು ಟಿಪ್ಪರ್ ಲಾರಿ ನಂ: ಕೆ.ಎ-27/5155 ನೇದನ್ನು ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಜಯ ತಂದೆ ಶಂಕ್ರು (ನಾಯ್ಕ) ಜಾಧವ, ಪ್ರಾಯ-29 ವರ್ಷ, ವೃತ್ತಿ-ಪೊಲೀಸ್ ಕಾನ್ಸ್‍ಟೇಬಲ್, ಸಾ|| ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 23-12-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 103/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಾಧಿಕ್ ತಂದೆ ಅಬ್ದುಲ್ ಅಜೀಜ್ ಶೇಖ್, ಸಾ|| ಕಸ್ತೂರಾಬಾ ನಗರ, ತಾ: ಶಿರಸಿ (ಕಾರ್ ನಂ: ಕೆ.ಎ-31/ಎನ್-8324 ನೇದರ ಚಾಲಕ). ದಿನಾಂಕ: 03-12-2021 ರಂದು 15-00 ಗಂಟೆಗೆ ಪಿರ್ಯಾದಿಯವರ ಗಂಡನವರಾದ ಗಾಯಾಳು ನಜಮುದ್ದೀನ್ ತಂದೆ ಅಬ್ಬಾಸ ಮುಲ್ಲಾ, ಇವರು ಶಿರಸಿಯ ಕಸ್ತೂರಾಬಾ ನಗರದ ಮನೆಯಿಂದ ಮಂಗಳೂರು ಹೋಟೆಲ್ ಕ್ರಾಸ್ ಹತ್ತಿರ ಇರುವ ಅವರು ಕೆಲಸ ಮಾಡುವ ಮೊಬೈಲ್ ಅಂಗಡಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-9063 ನೇದನ್ನು ಚಲಾಯಿಸಿಕೊಂಡು ಹೋಗುತ್ತಾ ಕರಿಗುಂಡಿ ರಸ್ತೆಯಲ್ಲಿ ಹನುಮಗಿರಿ ಕ್ರಾಸ್ ಹತ್ತಿರ ದಿನಾಂಕ: 03-12-2021 ರಂದು 15-15 ಗಂಟೆಗೆ ತಲುಪಿದಾಗ ನಮೂದಿತ ಆರೋಪಿತನು ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-31/ಎನ್-8324 ನೇದನ್ನು ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತಲೆಗೆ ಗಾಯವನ್ನುಂಟು ಮಾಡಿದ್ದು, ಪಿರ್ಯಾದಿಯ ಗಂಡನವರಿಗೆ ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಬೀಬಿ ಖೈರುನ್ನಿಸಾ ನಜಮುದ್ದೀನ್, ಮುಲ್ಲಾ ಪ್ರಾಯ-65 ವರ್ಷ ವೃತ್ತಿ-ಮನೆವಾರ್ತೆ, ಸಾ|| 2 ನೇ ಅಡ್ಡ ರಸ್ತೆ, ಕಸ್ತೂರಾಬಾ ನಗರ, ತಾ: ಶಿರಸಿ ರವರು ದಿನಾಂಕ: 23-12-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-12-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 41/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪ್ರಶಾಂತ ತಂದೆ ಉಮೇಶ ಹೊಳಗುಂದಿ, ಪ್ರಾಯ-19 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಇರೋಡಗಿ, ತಾ: ಮುಂಡರಗಿ, ಜಿ: ಗದಗ, ಹಾಲಿ ಸಾ|| ಕೆ.ಎಚ್.ಬಿ ಕಾಲೋನಿ, ಹಬ್ಬುವಾಡ, ಕಾರವಾರ. ಪಿರ್ಯಾದಿಯ ಮಗನಾದ ಈತನಿಗೆ ದಿನಾಂಕ: 23-12-2021 ರಂದು 01-00 ಗಂಟೆಯ ಸುಮಾರಿಗೆ ನೀರಡಿಕೆಯಾದಾಗ ನೀರು ಕುಡಿಯಲೆಂದು ಹೋದವನು, ಮನೆಯಲ್ಲಿದ್ದ ಇಲಿ ಪಾಷಾಣ ಇರುವ ಬಾಟಲಿಯನ್ನು ನೀರಿನ ಬಾಟಲಿ ಎಂದು ತಿಳಿದು ಗಡಿಬಿಡಿಯಲ್ಲಿ ಆಕಸ್ಮಾತ್ ಆಗಿ ಅದನ್ನು ಕುಡಿದು ಅಸ್ವಸ್ಥಗೊಂಡವನಿಗೆ ದಿನಾಂಕ: 23-12-2021 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಚಿಕಿತ್ಸೆಯ ಕುರಿತು ಕಾರವಾರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಆತನು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 23-12-2021 ರಂದು ಸಾಯಂಕಾಲ 17-50 ಗಂಟೆಗೆ ಮೃತಪಟ್ಟಿದ್ದು, ಮಗನ ಮೃತದೇಹವು ಜಿಲ್ಲಾಸ್ಪತ್ರೆಯ ಎಮ್.ಐ.ಸಿ.ಯು ವಿಭಾಗದಲ್ಲಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಉಮೇಶ ತಂದೆ ಬಾಳಪ್ಪ ಹೊಳಗುಂದಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಇರೋಡಗಿ, ತಾ: ಮುಂಡರಗಿ, ಜಿ: ಗದಗ, ಹಾಲಿ ಸಾ|| ಕೆ.ಎಚ್.ಬಿ ಕಾಲೋನಿ, ಹಬ್ಬುವಾಡ, ಕಾರವಾರ ರವರು ದಿನಾಂಕ: 23-12-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 63/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಹಸನಖಾನ್ ತಂದೆ ಕರೀಮ್ ಖಾನ್, ಪ್ರಾಯ-46 ವರ್ಷ, ವೃತ್ತಿ-ಅಂಕೋಲಾ ಅಬಕಾರಿ ಇಲಾಖೆಯಲ್ಲಿ ಹೆಡ್ ಕಾನ್ಸಟೇಬಲ್, ಸಾ|| ಅಕ್ಬರ್ ಗಲ್ಲಿ, ತಾ: ಯಲ್ಲಾಪುರ, ಹಾಲಿ ಸಾ|| ಅಜ್ಜಿಕಟ್ಟಾ, ತಾ: ಅಂಕೋಲಾ. ಇವರು ಅಂಕೋಲಾ ಅಬಕಾರಿ ಇಲಾಖೆಯಲ್ಲಿ ಹೆಡ್ ಕಾನ್ಸಟೇಬಲ್ ಅಂತಾ ಸುಮಾರು 10 ತಿಂಗಳಿಂದ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ. ದಿನಾಂಕ: 22-12-2021 ರಂದು ಬೆಳಿಗ್ಗೆ ಸುಮಾರು 11-45 ಗಂಟೆಗೆ ತಿಂಡಿಯನ್ನು ತಿಂದು ಕರ್ತವ್ಯಕ್ಕೆ ತನ್ನ ಮೋಟಾರ್ ಸೈಕಲ್ ಮೇಲಾಗಿ ಅಬಕಾರಿ ಕಛೇರಿಗೆ ಬರುತ್ತಿರುವಾಗ ಅಂಕೋಲಾದ ಅಜ್ಜಿಕಟ್ಟಾದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಕ್ರಾಸ್ ಹತ್ತಿರ ಎಲ್ಲಿಂದಲೋ ಬಂದ ಜೇನು ನೊಣಗಳು ಕಚ್ಚಿ ಭಾರೀ ಗಾಯಗೊಂಡು ಉಪಚಾರಕ್ಕೆ ಅಂಕೋಲಾದ ಸರ್ಕಾರಿ ಆಸ್ಪತ್ರೆಗೆ ದಾಖಲಾದವರಿಗೆ ಹೆಚ್ಚಿನ ಉಪಚಾರಕ್ಕೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 23-12-2021 ರಂದು ರಾತ್ರಿ 02-45 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹ್ಮದ್ ಸಲೀಮ್ ತಂದೆ ಇಮಾಮ್ ಶೇಖ್, ಪ್ರಾಯ-63 ವರ್ಷ, ವೃತ್ತಿ-ನಿವೃತ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ಹುಲಿದೇವರವಾಡ, ತಾ: ಅಂಕೋಲಾ ರವರು ದಿನಾಂಕ: 23-12-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 26-12-2021 05:25 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080