ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 23-02-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ವಾಮನ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ವ್ಯಾಪಾರ, ಸಾ|| ಮಾಳಸಾವಾಡಾ, ಬಿಣಗಾ, ಕಾರವಾರ. ನಮೂದಿತ ಆರೋಪಿತನು ದಿನಾಂಕ: 22-02-2021 ರಂದು 20-45 ಗಂಟೆಗೆ ಕಾರವಾರದ  ಕಾಜುಬಾಗದ ಸೇಂಟ್ ಜೋಸೆಫ್ ಸ್ಕೂಲ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭದ ಸಲುವಾಗಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಅದೃಷ್ಠದ ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿ ಜನರಿಂದ ಹಣ ಪಡೆದು ಓ.ಸಿ ಮಟಕಾ ಜೂಜಾಟ ನಡೆಸುತ್ತಿರುವಾಗ ಪಿರ್ಯಾದಿಯವರು ದಾಳಿ ಮಾಡಿ ನಗದು ಹಣ 2,220/- ರೂಪಾಯಿಯನ್ನು ಹಾಗೂ ಜೂಜಾಟಕ್ಕೆ ಬಳಸಿದ ಸ್ವತ್ತುಗಳನ್ನು ಮತ್ತು ಆರೋಪಿತನನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 23-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಸುರೇಶ ಆಗೇರ, ಪ್ರಾಯ-24 ವರ್ಷ, ಸಾ|| ಶಿರೂರು, ತಾ: ಅಂಕೋಲಾ (ಸ್ಕೂಟಿ ನಂ: ಕೆ.ಎ-30/ವಿ-5519 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 22-02-2021 ರಂದು 14-25 ಗಂಟೆಗೆ ಅಂಕೋಲಾ ತಾಲೂಕಿನ ಶೆಟಗೇರಿ ಕ್ರಾಸ್ ಹತ್ತಿರ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯ ಮೇಲೆ ತನ್ನ ಸ್ಕೂಟಿ ನಂ: ಕೆ.ಎ-30/ವಿ-5519 ನೇದನ್ನು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತನ್ನ ಬದಿಯಿಂದಲೇ ಅಂಕೋಲಾ ಕಡೆಯಿಂದ ಶೆಟಗೇರಿ ಕಡೆಗೆ ಹೋಗುತ್ತಿದ್ದ ಸೈಕಲ್ ಸವಾರನಾದ ವೆಂಕಟ್ರಮಣ ತಂದೆ ದಾದಿ ಗುನಗಾ, ಪ್ರಾಯ-65 ವರ್ಷ, ಸಾ|| ಹಡವ, ಶೆಟಗೇರಿ, ತಾ: ಅಂಕೋಲಾ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಸ್ಕೂಟಿ ಸವಾರನು ತನಗೂ ಕೂಡ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಪೊಕ್ಕಾ ತಂದೆ ಪೇಟು ಗೌಡ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ತಳಗದ್ದೆ, ತಾ: ಅಂಕೋಲಾ ರವರು ದಿನಾಂಕ: 23-02-2021 ರಂದು 14-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣಾ ತಂದೆ ಚಂದ್ರು ನಾಯಕ, ಪ್ರಾಯ-43 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ದಾವಣಗೇರಿ (ಟ್ಯಾಂಕರ್ ಲಾರಿ ನಂ: ಕೆ.ಎ-51/ಸಿ-2256 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 23-02-2021 ರಂದು 12-30 ಗಂಟೆಗೆ ಅಂಕೋಲಾ ತಾಲೂಕಿನ ಕಾಮತ್ ಉಪಚಾರ ಹೊಟೇಲ್ ಎದುರಿಗೆ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯ ಮೇಲೆ ತನ್ನ ಟ್ಯಾಂಕರ್ ಲಾರಿ ನಂ: ಕೆ.ಎ-51/ಸಿ-2256 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಯಾವುದೇ ಸಂಚಾರಿ ಸೂಚನೆಗಳನ್ನು ನೀಡದೇ ಒಮ್ಮೇಲೆ ಹಿಂಬದಿಗೆ ಚಲಾಯಿಸಿ, ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಪಿರ್ಯಾದಿಯವರ ಗಂಡನಾದ ದಿನೇಶ ತಂದೆ ನರಸಿಂಹ ಮಾಳ್ಸೇಕರ ಇವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟಿ ನಂ: ಕೆ.ಎ-30/ಯು-5506 ನೇದಕ್ಕೆ ಅಪಘಾತ ಪಡಿಸಿ, ಸ್ಕೂಟಿ ಸವಾರನಾದ ದಿನೇಶ ಮತ್ತು ಪಿರ್ಯಾದಿ ಶ್ರೀಮತಿ ಅನಿಶಾ ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಅನಿಶಾ ಗಂಡ ದಿನೇಶ ಮಾಳ್ಸೇಕರ, ಪ್ರಾಯ-29 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹೊಟ್ಟೆಗಾಳಿ, ಅಸ್ನೋಟಿ, ಕಾರವಾರ ರವರು ದಿನಾಂಕ: 23-02-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 87 ಕರ್ನಾಟಕ ಪೊಲಿಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ 1]. ಉಲ್ಲಾಸ ತಂದೆ ಧರ್ಮ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊಯಿನೀರು, ಧರ್ಬೆಜಡ್ಡಿ, ತಾ: ಹೊನ್ನಾವರ, 2]. ಸೋನು ತಂದೆ ಸಾಂತಾ ಫರ್ನಾಂಡಿಸ್, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅನ್ನೆರಾಮನಕೇರಿ, ಕೆರೆಕೋಣ, ತಾ: ಹೊನ್ನಾವರ, 3]. ಲೋಕೇಶ ತಂದೆ ಶಿವಪ್ಪ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಠಾರಾ, ಪೋ: ಸಾಲ್ಕೋಡ, ತಾ: ಹೊನ್ನಾವರ, 4]. ಗಜು ಕೊಡಿಯಾ, ಪ್ರಾಯ-40 ವರ್ಷ, ಸಾ|| ಕೆರೆಕೋಣ, ತಾ: ಹೊನ್ನಾವರ, 5]. ಮಹೇಶ ತಂದೆ ಧರ್ಮಾ ನಾಯ್ಕ, ಸಾ|| ಹೊಯಿನೀರು, ಧರ್ಬೆಜಡ್ಡಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರೆಲ್ಲರೂ ದಿನಾಂಕ: 23-02-2021 ರಂದು 00-45 ಗಂಟೆಗೆ ಹೊನ್ನಾವರ ತಾಲೂಕಿನ ಅಠಾರಾ ಗ್ರಾಮದ ಕರಡಿಬೆಟ್ಟದ ಖುಲ್ಲಾ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಜುಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ 1). ನೆಲಕ್ಕೆ ಹಾಸಿದ ಪ್ಲಾಸ್ಟಿಕ್ ಚೀಲ-01, ಅ||ಕಿ|| 00.00/- ರೂಪಾಯಿ, 2). ವಿವಿಧ ಮುಖ ಬೆಲೆಯ ಒಟ್ಟು ನಗದು ಹಣ 3,200/- ರೂಪಾಯಿ, 3). ಇಸ್ಪೀಟ್ ಎಲೆಗಳು ಒಟ್ಟು 52, ಅ||ಕಿ|| 00.00/- ರೂಪಾಯಿ, 4). ಅರ್ಧ ಉರಿದ ಮೇಣದ ಬತ್ತಿ ತುಂಡುಗಳು-04, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 23-02-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 279, 304(ಎ) ಐಪಿಸಿ ಮತ್ತು ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ವಾಹನದ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ದಿನಾಂಕ: 23-02-2021 ರಂದು ಬೆಳಗಿನ ಜಾವ 03-30 ಗಂಟೆಯಿಂದ 03-45 ಗಂಟೆಯ ನಡುವಿನ ಅವಧಿಯಲ್ಲಿ ಭಟ್ಕಳ ಶಹರದ ಕಾಮಾಕ್ಷಿ ಪೇಟ್ರೋಲ್ ಬಂಕ ಎದುರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತನ್ನ ವಾಹನವನ್ನು ಕುಂದಾಪುರ ಬದಿಯಿಂದ ಶಿರಾಲಿ ಕಡೆಗೆ ಅಥವಾ ಶಿರಾಲಿ ಬದಿಯಿಂದ ಕುಂದಾಪುರದ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಶಿರಾಲಿ ಬದಿಯಿಂದ ಭಟ್ಕಳದ ಶಂಷುದ್ದೀನ್ ಸರ್ಕಲ್ ಕಡೆಗೆ ನಡೆದುಕೊಂಡು ಬರುತ್ತಿದ್ದ ಸಯ್ಯದ್ ಆಫಿಸ್ ತಂದೆ ಪೀರಸಾಬ್, ಪ್ರಾಯ-65 ವರ್ಷ, ವೃತ್ತಿ-ಸೆಕ್ಯೂರಿಟಿ ಕೆಲಸ, ಸಾ|| ಜನ್ನತ್ ಗಲ್ಲಿ, ತಾ: ಸಾಗರ, ಜಿ: ಶಿವಮೊಗ್ಗ, ಹಾಲಿ ಸಾ|| ದೇವಿನಗರ, ಜಾಲಿ ರೋಡ್, ತಾ: ಭಟ್ಕಳ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸ್ಥಳದಲ್ಲಿಯೇ ಮರಣವನ್ನುಂಟು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮೊಹಮ್ಮದ್ ಶಫಿ ತಂದೆ ಹಸನ್ ಸಾಬ್, ಪ್ರಾಯ-39 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ದೇವಿನಗರ, ಜಾಲಿ ರೋಡ್, ತಾ: ಭಟ್ಕಳ ರವರು ದಿನಾಂಕ: 23-02-2021 ರಂದು 04-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 279, 337, 283 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಿವಯೋಗಿ ತಂದೆ ಈರಪ್ಪಾ ಮುರಗೋಡ್, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಮದಿಹಾಳ, ಧಾರವಾಡ (ಮಹೀಂದ್ರಾ ಪಿಕಪ್ ವಾಹನ ನಂ: ಕೆ.ಎ-25/ಎ.ಎ-9276 ನೇದರ ಚಾಲಕ), 2]. ಶ್ರೀ ಮಹಾಂತೇಶ ತಂದೆ ಶಂಕ್ರಪ್ಪಾ ಹಗೆದಾಳ, ಪ್ರಾಯ-38 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ರಾಮೋಡ್ಗಿ ಗ್ರಾಮ, ತಾ: ಹುನಗುಂದ, ಜಿ: ಬಾಗಲಕೋಟ (ಕೆ.ಎಸ್.ಆರ್.ಟಿ ಬಸ್ ನಂ: ಕೆ.ಎ-25/ಎಫ್-3008 ನೇದರ ಚಾಲಕ). ಈ ನಮೂದಿತ  ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 23-02-2021 ರಂದು ಬೆಳಿಗ್ಗೆ 08-15 ಗಂಟೆಗೆ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹುಬ್ಬಳ್ಳಿ ರಸ್ತೆಯ ರುದ್ರಭೂಮಿ ಎದುರಿನ ತಿರುವಾದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಮಹೀಂದ್ರಾ ಪಿಕಪ್ ವಾಹನ ನಂ: ಕೆ.ಎ-25/ಎ.ಎ-9276 ನೇದನ್ನು ಹೆದ್ದಾರಿಯ ಮೇಲೆ ಓಡಾಡುವ ಇತರೇ ವಾಹನಗಳಿಗೆ ಅಡೆತಡೆಯಾಗುವಂತೆ ನಿಲ್ಲಿಸಿದಾಗ ಆರೋಪಿ 2 ನೇಯವರು ಅದೇ ಮಾರ್ಗದಲ್ಲಿ ಕಲಘಟಗಿ ಕಡೆಯಿಂದ ಯಲ್ಲಾಪುರ ತನ್ನ ಕಡೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-25/ಎಫ್-3008 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಿರುವಿನಲ್ಲಿ ವೇಗ ನಿಯಂತ್ರಿಸದೇ ಮಹೀಂದ್ರಾ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮಹೀಂದ್ರಾ ಪಿಕಪ್ ವಾಹನ ಚಾಲಕನಾದ ಆರೋಪಿ 1 ನೇಯವರಿಗೆ ಮುಖದ ಎಡಗಡೆಗೆ, ಎರಡು ಕೈಗಳಿಗೆ ಹಾಗೂ ಎಡಗಾಲಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿ, ಎರಡು ವಾಹನಗಳು ಮತ್ತು ಮಹೀಂದ್ರಾ ಪಿಕಪ್ ವಾಹನದಲ್ಲಿದ್ದ ಪೇಂಟಿನ ಡಬ್ಬಿಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಪುಟ್ಟೇಗೌಡಾ ತಂದೆ ಶೀನಪ್ಪಾ, ಪ್ರಾಯ-57 ವರ್ಷ, ವೃತ್ತಿ-ಎ.ಎಸ್.ಐ, ಸಾ|| ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 23-02-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಜೈನುಲ್ಲಾಭಿದ್ದೀನ್ ತಂದೆ ಅಬ್ದುಲ್ ಗನಿ ಯಲ್ಲೂರ, ಪ್ರಾಯ-53 ವರ್ಷ, ವೃತ್ತಿ-ಪಾನಶಾಪ್ ವ್ಯಾಪಾರ, ಸಾ|| ಸುಭಾಷ ನಗರ, ದಾಂಡೇಲಿ. ನಮೂದಿತ ಆರೋಪಿತನು ದಿನಾಂಕ: 23-02-2021 ರಂದು 17-30 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಸೋಮಾನಿ ಸರ್ಕಲ್ ಹತ್ತಿರದ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತಮ್ಮ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ಅಂಕೆ-ಸಂಖ್ಯೆ ಬರೆದಿರುವ ಚೀಟಿ ಹಾಗೂ ನಗದು ಹಣ 1,355/- ರೂಪಾಯಿ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರಭು ಆರ್. ಗಂಗನಹಳ್ಳಿ, ಪೊಲೀಸ್ ವೃತ್ತ ನಿರೀಕ್ಷಕರು, ದಾಂಡೇಲಿ ವೃತ್ತ, ದಾಂಡೇಲಿ ರವರು ದಿನಾಂಕ: 23-02-2021 ರಂದು 20-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 06/2021, ಕಲಂ: 279, 338 ಐಪಿಸಿ ಮತ್ತು ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ವಿಠ್ಠಲ್ ತಂದೆ ಗೋಪಾಲಕೃಷ್ಣ ಪಂಡಿತ, ಪ್ರಾಯ-45 ವರ್ಷ, ವೃತ್ತಿ-ಕಿರಾಣಿ ವ್ಯಾಪಾರ, ಸಾ|| ನಗರಸಭೆ ಸಂಕೀರ್ಣ, ಶಿವಾಜಿ ಚೌಕ, ತಾ: ಶಿರಸಿ (ಹೀರೋ ಹೋಂಡಾ ಮೋಟಾರ್ ಸೈಕಲ್ ನಂ: ಕೆ.ಎ-31/ಎಚ್-5255 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 09-12-2020 ರಂದು 10-30 ಗಂಟೆಗೆ ಶಿರಸಿ ಶಹರದ ನಟರಾಜ ರಸ್ತೆಯ ಜನತಾ ಫಾರ್ಮ್ ಔಷಧಿ ಅಂಗಡಿಯ ಹತ್ತಿರ ತನ್ನ ಬಾಬ್ತು ಹೀರೋ ಹೋಂಡಾ ಮೋಟಾರ್ ಸೈಕಲ್ ನಂ: ಕೆ.ಎ-31/ಎಚ್-5255 ನೇದನ್ನು ದೇವಿಕೆರೆಯ ಕಡೆಯಿಂದ ಹಳೇ ಬಸ್ ನಿಲ್ದಾಣದ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದವನು, ತನ್ನ ಮುಂದೆ ಹಳೇ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ಪಿರ್ಯಾದಿಯ ಬುಲೆಟ್ ಮೋಟಾರ್ ಸೈಕಲ್ ನಂ: ಕೆ.ಎ-31/ಎಕ್ಸ್-0552 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಬಲಗಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ತಂದೆ ಮಹಾಬಲೇಶ್ವರ ಪ್ರಭು, ಪ್ರಾಯ-45 ವರ್ಷ, ವೃತ್ತಿ-ಜೋನಿ ಬೆಲ್ಲ ವ್ಯಾಪಾರ, ಸಾ|| ಮೋತಿ ಚೌಕ್, ಹುಬ್ಬಳ್ಳಿ ರಸ್ತೆ, ತಾ: ಶಿರಸಿ ರವರು ದಿನಾಂಕ: 23-02-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2021, ಕಲಂ: 8, 20(b) (ii) (A) ಎನ್.ಡಿ.ಪಿ.ಎಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಖಾಲೀದ್ ತಂದೆ ಷರೀಪ್ ಸಾಬ್ ಕನವಳ್ಳಿ, ಪ್ರಾಯ-28 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಅರೆಕೊಪ್ಪ, ಬನವಾಸಿ ರಸ್ತೆ, ತಾ: ಶಿರಸಿ, 2]. ಸರ್ಫರಾಜ್ @ ಶಾರೂ ತಂದೆ ಸಮೀರ್ ಖಾನ್, ಪ್ರಾಯ-20 ವರ್ಷ, ವೃತ್ತಿ-ಕ್ಲೀನರ್, ಸಾ|| ಮಂಜುನಾಥ ಲಾಂಡ್ರಿ ಹತ್ತಿರ, ಕಸ್ತೂರಾಬಾ ನಗರ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 23-02-2021 ರಂದು 11-45 ಗಂಟೆಗೆ ಶಿರಸಿ ನಗರದ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡಲು ತಮ್ಮ ವಶದಲ್ಲಿಟ್ಟುಕೊಂಡಿರುವಾಗ ಪಿರ್ಯಾದಿಯವರು ಪಂಚರು ಮತ್ತು ಪತ್ರಾಂಕಿತ ಅಧಿಕಾರಿಗಳ ಸಮಕ್ಷಮ ನಡೆಸಿದ ದಾಳಿಯ ಕಾಲಕ್ಕೆ 1). 313 ಗ್ರಾಂ ತೂಕದ ಅ||ಕಿ|| 12,500/- ರೂಪಾಯಿ ಮೌಲ್ಯದ ಗಾಂಜಾ ಮಾದಕ ವಸ್ತು, 2). ನೀಲಿ ಬಣ್ಣದ ಪ್ಲಾಸ್ಟಿಕ್ ಕೈ ಚೀಲ-01, ಅ||ಕಿ|| 00.00/- ರೂಪಾಯಿ, 3). ನ್ಯೂಸ್ ಪೇಪರಿನ ಹಾಳೆಗಳ ತುಂಡುಗಳು-08, ಅ||ಕಿ|| 00.00/- ರೂಪಾಯಿ, 4). ಐಟೆಲ್ ಕಂಪನಿಯ ಮೊಬೈಲ್ ಪೋನ್-01, ಅ||ಕಿ|| 200/- ರೂಪಾಯಿ, 5). ಸ್ಯಾಮ್ಸಂಗ್ ಮೊಬೈಲ್ ಪೋನ್-01, ಅ||ಕಿ|| 400/- ರೂಪಾಯಿ, 6). ನಗದು ಹಣ 650/- ರೂಪಾಯಿ, 7). ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ನಂ: ಕೆ.ಎ-31/ಆರ್-6138, ಅ||ಕಿ|| 10,000/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗಪ್ಪ, ಪಿ.ಎಸ್.ಐ, ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 23-02-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ವಿಘ್ನೇಶ್ವರ ತಂದೆ ರಾಮಲಿಂಗ ಹೆಗಡೆ, ಪ್ರಾಯ-62 ವರ್ಷ, ವೃತ್ತಿ-ವ್ಯಾಪಾರ ಸಾ|| ಎಸ್.ಬಿ.ಐ ಕಾಲೋನಿ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-0576 ನೇದರ ಚಾಲಕ). ದಿನಾಂಕ: 21-02-2021 ರಂದು ರಾತ್ರಿ 20-00 ಗಂಟೆಯ ಸುಮಾರಿಗೆ ಗಾಯಾಳು ಚಂದ್ರಶೇಖರ ತಂದೆ ರಾಮಚಂದ್ರ ಹೆಗಡೆ ಇವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ವೈ-6078 ನೇದರ ಮೇಲೆ ಮುಂಡಗೋಡಕ್ಕೆ ಹೋಗಲು ಯಲ್ಲಾಪುರ ನಾಕಾದ ಮಾರ್ಗವಾಗಿ ಕಾಲೇಜ್ ರಸ್ತೆಯಲ್ಲಿ ಹೋಗುತ್ತಾ ಟಿ.ಎಸ್.ಎಸ್ ಆಸ್ಪತ್ರೆ ಎದುರು ತಲುಪಿದಾಗ ಎದರಿನಿಂದ ಮಾರಿಕಾಂಬಾ ಕ್ರೀಡಾಂಗಣದ ಕ್ರಾಸ್ ಕಡೆಯಿಂದ ಶಿರಸಿ ಶಹರದ ಕಡೆಗೆ ಬರುತ್ತಿದ್ದ ನಮೂದಿತ ಆರೋಪಿತನು ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-0576 ನೇದರ ಮೇಲೆ ಗಾಯಾಳು ಅಬ್ದುಲ್ ಖಾದರ್ ಮೊಹಿದ್ದೀನ್ ರುಸ್ತುಂ ಅಲಿ ಇವರಿಗೆ ಹಿಂಬದಿಯಲ್ಲಿ ಕೂಡ್ರಿಸಿಕೊಂಡು ತನ್ನ ಬಾಬ್ತು ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಟಿ.ಎಸ್.ಎಸ್ ಆಸ್ಪತ್ರೆಯ ಎದುರು ತನ್ನ ಸೈಡನ್ನು ಬಿಟ್ಟು ರಸ್ತೆಯ ಬಲಬದಿಗೆ ಬಂದು ಗಾಯಾಳು ಚಂದ್ರಶೇಖರ ತಂದೆ ರಾಮಚಂದ್ರ ಹೆಗಡೆ ಇವರ ಮೋಟಾರ್ ಸೈಕಲ್ ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಚಂದ್ರಶೇಖರ ತಂದೆ ರಾಮಚಂದ್ರ ಹೆಗಡೆ ಇವರಿಗೆ ಮತ್ತು ಆರೋಪಿತನ ಹಿಂಬದಿ ಸವಾರ ಅಬ್ದುಲ್ ಖಾದರ್ ತಂದೆ ಮೊಹಿದ್ದೀನ್ ರಸ್ತುಂ ಅಲಿ ಇವರಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಬಾಲಕೃಷ್ಣ ತಂದೆ ರಾಮಚಂದ್ರ ಹೆಗಡೆ, ಪ್ರಾಯ-63 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೊಪ್ಪೆಸರ, ಪೋ: ಮತ್ತಿಗಾರ, ತಾ: ಶಿರಸಿ ರವರು ದಿನಾಂಕ: 23-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 78 (3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ಮಂಕಾಳಿ ಗೌಡ, ಪ್ರಾಯ-40 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಪಡ್ತಿ ಗಲ್ಲಿ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 23-02-2021 ರಂದು 16-45 ಗಂಟೆಯ ಸಮಯಕ್ಕೆ ಶಿರಸಿ ನಗರದ ದೇವಿಕೆರೆ ಹತ್ತಿರ ಮೋರ್ ಸೂಪರ್ ಮಾರ್ಕೆಟ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಅಕ್ರಮವಾಗಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,170/- ರೂಪಾಯಿ ಹಾಗೂ ಓ.ಸಿ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ಮತ್ತು ಖಾಲಿ ಪೇಪರಿನ ತುಂಡುಗಳು-07, ಅ||ಕಿ|| 00.00/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರದೀಪ ಬಿ.ಯು, ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ ವೃತ್ತ, ಶಿರಸಿ ರವರು ದಿನಾಂಕ: 23-02-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಠ್ಠಲ್ ತಂದೆ ಕೋಮಾರಿ ನಾಯ್ಕ, ಸಾ|| ಮತ್ತಿಹಳ್ಳಿ, ಬಂಕನಾಳ, ತಾ: ಶಿರಸಿ. ನಮೂದಿತ ಆರೋಪಿತನು ಹಾಗೂ ಪಿರ್ಯಾದಿಯವರು ಅಣ್ಣ-ತಮ್ಮಂದಿರಿದ್ದು, ಜಾಗದ ವಿಷಯದಲ್ಲಿ ಆಗಾಗ್ಗೆ ತಂಟೆ-ತಕರಾರು ಮಾಡಿಕೊಳ್ಳುತ್ತಿದ್ದು, ಇದಕ್ಕೆ ಊರ ಜನರು ಸೇರಿ ಅಣ್ಣ-ತಮ್ಮಂದಿರಿಗೆ ಜಾಗವನ್ನು ಗುರುತಿಸಿ ಕೊಟ್ಟಿದ್ದು, ಇದಕ್ಕೆ ಆರೋಪಿತನು ವಿರೋಧಿಸುತ್ತಿದ್ದನು. ದಿನಾಂಕ: 23-02-2021 ರಂದು ಬೆಳಿಗ್ಗೆ 08-00 ಗಂಟೆಗೆ ಪಿರ್ಯಾದಿಯು ಮನೆಯ ಹಿಂಬಾಗಿಲಲ್ಲಿ ಕುರಿಗೆ ಮೇವು ಹಾಕುತ್ತಿರುವಾಗ ಆರೋಪಿತನು ಒಮ್ಮೇಲೆ ಪಿರ್ಯಾದಿಯನ್ನು ಉದ್ದೇಶಿಸಿ ‘ನಿನ್ನಿಂದಲೇ ಎಲ್ಲಾ ಆಗಿದ್ದು, ಬೇವರ್ಸಿನ ಹಡಾ’ ಅಂತ ಅವಾಚ್ಯವಾಗಿ ಬೈಯ್ಯತ್ತಿರುವಾಗ ಪಿರ್ಯಾದಿಯು ‘ಯಾಕೇ ಬೈಯ್ಯುತ್ತೀ?’ ಅಂತ ಕೇಳಿದ್ದಕ್ಕೇ ಕಂದ್ಲಿಯ ಎಡಬದಿಯಿಂದ ಎಡಭುಜಕ್ಕೆ ಹಾಗೂ ತಲೆಗೆ ಹೊಡೆದು, ದೂಡಿ ಕೆಡವಿ, ಕಾಲಿನಿಂದ ತುಳಿಯುತ್ತಿರುವಾಗ ಬಿಡಿಸಲು ಬಂದ ಗಾಯಾಳು ಸುರೇಶ ಈತನಿಗೂ ಸಹ ಕಂದ್ಲಿಯಿಂದ ಬೆನ್ನಿನ ಭಾಗ ಹಾಗೂ ಬಲಗೈ ಹೆಬ್ಬೆರಳು ಹತ್ತಿರ ತಾಗಿಸಿ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದೇವೇಂದ್ರ ತಂದೆ ಕೋಮಾರಿ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮತ್ತಿಹಳ್ಳಿ, ಬಂಕನಾಳ, ತಾ: ಶಿರಸಿ ರವರು ದಿನಾಂಕ: 23-02-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ದೇವೇಂದ್ರ ತಂದೆ ಕೋಮಾರಿ ನಾಯ್ಕ, 2]. ಸುರೇಶ ತಂದೆ ಕೋಮಾರಿ ನಾಯ್ಕ, ಸಾ|| (ಇಬ್ಬರೂ) ಮತ್ತಿಹಳ್ಳಿ, ತಾ: ಶಿರಸಿ. ಈ ನಮೂದಿತ ಆರೋಪಿತರು ಪಿರ್ಯಾದಿಯ ಅಣ್ಣಂದಿರಿದ್ದು, ಆಸ್ತಿಯ ಪಾಲಿನ ಹಿಸ್ಸೆ ಹಂಚಿಕೆಯ ವಿಷಯದಲ್ಲಿ ಪಿರ್ಯಾದಿಯ ಮೇಲೆ ದ್ವೇಷದಿಂದ ಇದ್ದವರು, ದಿನಾಂಕ: 23-02-2021 ರಂದು ಬೆಳಿಗ್ಗೆ 08-00 ಗಂಟೆಗೆ ಆರೋಪಿ 1 ನೇಯವನು ಪಿರ್ಯಾದಿಯನ್ನು ಉದ್ದೇಶಿಸಿ ‘ನೀನು ಅಪ್ಪನಿಗೆ ಹುಟ್ಟಿದ್ದು ಸುಳ್ಳು, ಬೇವರ್ಸಿನ ಹಡಾ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವಾಗ, ಪಿರ್ಯಾದಿಯು ‘ಯಾಕೆ ಈ ರೀತಿ ಬೈಯುತ್ತಿದ್ದೀಯಾ?’ ಅಂತಾ ಸಮಾಧಾನದಿಂದ ಕೇಳುತ್ತಿರುವಾಗ, ಆರೋಪಿ 1 ನೇಯವನು ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿಯ ಬಲಗೈಗೆ ಹಾಗೂ ಎಡಗಾಲಿಗೆ ಹೊಡದು ರಕ್ತಗಾಯ ಪಡಿಸಿದ್ದಲ್ಲದೇ, ಆರೋಪಿ 2 ನೇಯವನು ಪಿರ್ಯಾದಿಗೆ ಕೈಯಿಂದ ಮುಖಕ್ಕೆ ಹೊಡೆದು ರಕ್ತಗಾಯ ಪಡಿಸಿ, ಸದರಿ ಆರೋಪಿತರಿಬ್ಬರೂ ಪಿರ್ಯಾದಿಗೆ ನೆಲಕ್ಕೆ ದೂಡಿ ಕೆಡವಿ ಕಾಲಿನಿಂದ ತುಳಿದು ‘ಇನ್ನೊಮ್ಮೆ ಒಬ್ಬನೇ ಸಿಗು, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ವಿಠ್ಠಲ ತಂದೆ ಕೋಮಾರಿ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮತ್ತಿಹಳ್ಳಿ, ಪೋ: ಬಂಕನಾಳ, ತಾ: ಶಿರಸಿ ರವರು ದಿನಾಂಕ: 23-02-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-02-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಕೃಷ್ಣಾನಂದ ತಂದೆ ನಾರಾಯಣ ಆಚಾರಿ, ಪ್ರಾಯ-38 ವರ್ಷ, ವೃತ್ತಿ-ಆಚಾರಿ ಕೆಲಸ, ಸಾ|| ಆಚಾರಿವಾಡಾ, ಸದಾಶಿವಗಡ, ಕಾರವಾರ. ಪಿರ್ಯಾದಿಯ ಗಂಡನಾದ ಈತನು ವಿಪರೀತ ಸರಾಯಿ ಕುಡಿಯುವ ಚಟದವನಿದ್ದು, ದಿನಾಂಕ: 23-02-2021 ರಂದು ಸಾಯಂಕಾಲ 04-00 ಘಂಟೆಯಿಂದ 07-30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸರಾಯಿ ಕುಡಿದ ನಿಶೆಯಲ್ಲಿಯೋ ಅಥವಾ ಜೀವನದಲ್ಲಿ ಜಿಗುಪ್ಸೆಗೊಂಡಿಯೋ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮನೆಯಲ್ಲಿ ತಾನು ಇದ್ದ ಕೋಣೆಯಲ್ಲಿ ಮಂಚದ ಮೇಲೆ ಹತ್ತಿ, ಚೂಡಿದಾರ ದುಪ್ಪಟ್ಟಾದಿಂದ ತನ್ನ ಕುತ್ತಿಗೆಗೆ ಉರುಳು ಮಾಡಿ ಹಾಕಿಕೊಂಡು ಇನ್ನೊಂದು ತುದಿಯನ್ನು ಮನೆಯ ಮೇಲ್ಛಾವಣಿಯ ಪಕಾಸಿಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇದೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ನೀತಾ ಗಂಡ ಕೃಷ್ಣಾನಂದ ಆಚಾರಿ, ಪ್ರಾಯ-37 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಆಚಾರಿವಾಡಾ, ಸದಾಶಿವಗಡ, ಕಾರವಾರ ರವರು ದಿನಾಂಕ: 23-02-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 24-02-2021 05:00 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080