ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 23-01-2022

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2022, ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ವಿಠ್ಠಲ ತಂದೆ ತೋಕು ಹರಿಕಂತ್ರ, ಪ್ರಾಯ-63 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಿಳಿಹೊಂಯ್ಗಿ, ತಾ: ಅಂಕೋಲಾ, 2]. ಮಂಜುನಾಥ ತಂದೆ ನಾರಾಯಣ ನಾಯ್ಕ, ಸಾ|| ಮೇಲಿನ ಮಂಜಗುಣಿ, ತಾ: ಅಂಕೋಲಾ ಮತ್ತು ಇತರರು. ಈ ನಮೂದಿತ ಆರೋಪಿತರು ದಿನಾಂಕ: 23-01-2022 ರಂದು 17-00 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಬಿಳಿಹೊಂಯ್ಗಿ ಗ್ರಾಮದ ಉಪ್ಪಿನ ಆಗರದ ಖಾಲಿ ಜಾಗದಲ್ಲಿ ತಮ್ಮ ತಮ್ಮ ಲಾಭಕೋಸ್ಕರ ಕೋಳಿ ಹುಂಜಗಳ ಮೇಲೆ ಕೆಲವರು ಬಿಳಿ ಹುಂಜಕ್ಕೆ 100/- ರೂಪಾಯಿ, ಇನ್ನು ಕೆಲವರು ಕೆಂಪು ಹುಂಜಕ್ಕೆ 200/- ರೂಪಾಯಿ ಹಣವನ್ನು ಪಂಥ ಕಟ್ಟಿ ಜುಗಾರಾಟ ಆಡುತ್ತಿರುವಾಗ ದಾಳಿಯ ವೇಳೆ ಸಿಕ್ಕ ಆರೋಪಿತರ ತಾಬಾದಿಂದ ಮತ್ತು ಘಟನಾ ಸ್ಥಳದಿಂದ ರೂಪಾಯಿ 1,050/- ಮೌಲ್ಯದ ಕೋಳಿ-03, ಕೋಳಿ ಕತ್ತಿಗಳು-04, ನಗದು ಹಣ 900/- ರೂಪಾಯಿ ಮತ್ತು ಆರೋಪಿತರು ಕೋಳಿ ಅಂಕ ಜೂಗಾರಾಟ ಆಡಲು ಬರಲು ಉಪಯೋಗಿಸಿದ 35,000/- ಆರೋಪಿತರು ಮೌಲ್ಯದ 02 ಮೋಟಾರ್ ಸೈಕಲ್ ಗಳು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ-01, ಅಂಕೋಲಾ ಪೊಲೀಸ್ ಠಾಣೆ  ರವರು ದಿನಾಂಕ: 23-01-2022 ರಂದು 19-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಉಸ್ಮಾನಘನಿ ನಾಸಿಕ್ ಸಿದ್ದಿಕ್ ಬಾಪಾ, ಸಾ|| ಮುಗ್ದುಮ್ ಕಾಲೋನಿ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-2940 ನೇದರ ಸವಾರ). ಈತನು ದಿನಾಂಕ: 19-01-2022 ರಂದು 12-15 ಗಂಟೆಯ ಸುಮಾರಿಗೆ ಮಂಕಿ ಮಾವಿನಕಟ್ಟಾ ಸರ್ಕಲಿನಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-2940 ನೇದನ್ನು ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗಲು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬರುತ್ತಿದ್ದವನು, ಸರ್ಕಲಿನಲ್ಲಿ ಬಣಸಾಲೆ ರಸ್ತೆಯ ಕಡೆಗೆ ಹೋಗುತ್ತಿದ್ದ ಪಿರ್ಯಾದಿಯ ಗಂಡನಾದ ಡೊಮನಿಕ್ ಇಸ್ಟಿಬೆರೋ ಇವನ ಮೋಟಾರ್ ಸೈPಲ್ ನಂ: ಕೆ.ಎ-47/ಡಬ್ಲ್ಯೂ-7522 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಗಂಡನ ಕೈ ಮತ್ತು ಮುಖಕ್ಕೆ ತೆರಚಿದ ಗಾಯ ಮತ್ತು ಬಲಗೈ ಭುಜಕ್ಕೆ ಒಳನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಜಸಿಂತಾ ಕೋಂ. ಡೊಮನಿಕ್ ಪಿಂಟೋ, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| ಜನತಾ ಕಾಲೋನಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 23-01-2022 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 08/2022, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯು ದಿನಾಂಕ: 22-01-2022 ರಂದು ಮಧ್ಯಾಹ್ನ 14-00 ಗಂಟೆಗೆ ತನ್ನ ತಾಯಿಯ ಮನೆ ಮಂಕಿಗೆ ತನ್ನ ಮಗ ಹಾಗೂ ಮಗಳನ್ನು ಕರೆದುಕೊಂಡು ಮನೆಗೆ ಹಾಗೂ ಮನೆಯ ಮುಂದಿನ ಕಂಪೌಂಡಿಗೆ ಚಾವಿ ಹಾಕಿ ಹೋಗಿದ್ದು, ದಿನಾಂಕ: 23-01-2022 ಬೆಳಿಗ್ಗೆ 07-00 ಗಂಟೆಗೆ ಮರಳಿ ಮುರ್ಡೇಶ್ವರದ ತನ್ನ ಮನೆಗೆ ಬಂದು ಬಾಗಿಲು ತೆರೆಯಲು ನೋಡಿದಾಗ ಮನೆಯ ಮುಂಬಾಗಿಲಿನ ಇಂಟರ್ ಲಾಕ್ ಅನ್ನು ನಮೂದಿತ ಆರೋಪಿತರು ಯಾವುದೋ ಗಟ್ಟಿ ವಸ್ತುವಿನಿಂದ ಮೀಟಿ ಮುರಿದು ಬಾಗಿಲು ತೆಗೆದು ಒಳ ಹೋಗಿ ಪಿರ್ಯಾದಿಯವರು ಮಲಗುವ ಕೊಣೆಯ ಬಾಗಿಲನ್ನು ಸಹ ಅದೇ ಗಟ್ಟಿ ವಸ್ತುವಿನಿಂದÀ ಮೀಟಿ ಮುರಿದು ತೆಗೆದು ಕೋಣೆಯಲ್ಲಿಯ ಕಪಾಟುಗಳನ್ನು ಅಲ್ಲಿಯೇ ಸಿಕ್ಕ ಅವುಗಳ ಚಾವಿ ಬಳಸಿ ತೆಗೆದು ಕಪಾಟಿನಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಪಿರ್ಯಾದಿಯ ಮಗ ನಿಹಾಲ್ ಮಲಗುವ ಕೋಣೆಯ ಬಾಗಿಲ ಚಾವಿ ತೆಗೆದು ಅಲ್ಲಿ ಕಪಾಟಿನ ಡ್ರಾವರ್ ದಲ್ಲಿರುವ 25,000/- ರೂಪಾಯಿಗಳನ್ನು ಕಳ್ಳತನ ಮಾಡಿ ಕಪಾಟಿನಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಮೇಲಿನ ಮಾಳಿಗೆಯಲ್ಲಿ ಹೋದ ಆರೋಪಿತ ಕಳ್ಳರು ಅಲ್ಲಿಯ ಎರಡು ಮಲಗುವ ಕೋಣೆಯಲ್ಲಿರುವ ಕಪಾಟುಗಳನ್ನು ತೆಗೆದು ಅವುಗಳಲ್ಲಿರುವ ವಸ್ತುಗಳನ್ನು ಚೆÀಲ್ಲಾಪಿಲ್ಲಿ ಮಾಡಿ ಮತ್ತು ಸ್ಟೋರ್ ರೂಮಿನಲ್ಲಿರುವ ಎರಡು ಕಪಾಟುಗಳನ್ನು ತೆರೆದು  ಬಂಗಾರ, ಹಣ ಹುಡುಕಾಡಿದ್ದು ಇರುತ್ತದೆ. ಅಲ್ಲಿ ಯಾವುದೇ ಬಂಗಾರ ಮತ್ತು ಹಣ ಇಟ್ಟಿರುವುದಿಲ್ಲಾ. ಹೀಗೆ ನಮೂದಿತ ಆರೋಪಿತ ಕಳ್ಳರು ಮನೆಯ ಬಾಗಿಲು ಮುರಿದು ಒಳ ಹೋಗಿ ಕಳ್ಳತನ ಮಾಡಿದ ಬಗ್ಗೆ ಪಿರ್ಯಾದಿ ಶ್ರೀಮತಿ ಹಾಫಿಜಾಗುಲಶನ್ ಕೋಂ. ಮಹಮ್ಮದ್ ಬಾಷಾ ಹಾಜಿಕೋಲಾ, ಪ್ರಾಯ-42 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನ್ಯಾಷನಲ್ ಕಾಲೋನಿ, ಮಾವಳ್ಳಿ-1, ಬಸ್ತಿಮಕ್ಕಿ, ತಾ: ಭಟ್ಕಳ ರವರು ದಿನಾಂಕ: 23-01-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2022, ಕಲಂ: 279, 353, 307 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರ್ ನಂ: ಕೆ.ಎ-47/ಎಮ್-3737 ನೇದರ ಚಾಲಕ ಹಾಗೂ ಇನ್ನು ಇಬ್ಬರು (ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ). ಈ ನಮೂದಿತ ಆರೋಪಿತರು ದಿನಾಂಕ: 23-01-2022 ರಂದು ಬೆಳಗಿನ ಜಾವ 04-00 ಗಂಟೆ ಸಮಯಕ್ಕೆ ತಮ್ಮ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ತುಂಬಿಕೊಂಡು ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಶಿರಾಲಿ ಚೆಕ್ ಪೋಸ್ಟಿನÀಲ್ಲಿ ಕರ್ತವ್ಯದಲ್ಲಿದ್ದ ಸಿ.ಪಿ.ಸಿ-591, ನಾರಾಯಣ ತಂದೆ ಸುಕ್ರು ಗೌಡ ಹಾಗೂ ಹಾಗೂ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಸಿ.ಪಿ.ಸಿ-1774, ವಿನಯ ಮುಬ್ರುಮಕರ ಹಾಗೂ ಎಚ್.ಜಿ-344, ಕುಮಾರ ನಾಯ್ಕ ರವರು ಶಿರಾಲಿ ಚೆಕ್ ಪೋಸ್ಟಿನÀಲ್ಲಿ ವಾಹನವನ್ನು ಕೈ ಸನ್ನೆ ಮಾಡಿ ನಿಲ್ಲಿಸಲು ಮುಂದಾದಾಗ, ವಾಹನದ ಚಾಲಕನು ವಾಹನವನ್ನು ನಿಲ್ಲಿಸದೇ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಆತಂಕವನ್ನುಂಟು ಪಡಿಸಿದ್ದಲ್ಲದೇ, ಸದರಿಯವರ ಮೇಲೆ ವಾಹನವನ್ನು ಹಾಯಿಸಿ ಕೊಲೆ ಮಾಡಲು ಪ್ರಯತ್ನಿಸಿ ರಸ್ತೆಗೆ ಅಡ್ಡಲಾಗಿ ಹಾಕಿದ ಬ್ಯಾರಿಕೇಡಗಳಿಗೆ ಡಿಕ್ಕಿ ಹೊಡೆದು ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಸುಕ್ರು ಗೌಡ (ಸಿ.ಪಿ.ಸಿ-591), ಪ್ರಾಯ-34 ವರ್ಷ, ವೃತ್ತಿ-ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್, ಸಾ|| ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 23-01-2022 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2022, ಕಲಂ: 447, 307, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಹನುಮಂತ ತಂದೆ ತಿಪ್ಪಣ್ಣಾ ಪಾಟೀಲ್, ಸಾ|| ಅಜ್ಜಳ್ಳಿ, ತಾ: ಮುಂಡಗೋಡ, 2]. ಪ್ರವೀಣ ತಂದೆ ಹನುಮಂತ ಪಾಟೀಲ್, ಸಾ|| ಅಜ್ಜಳ್ಳಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರುಗಳು ಸೇರಿ ಪಿರ್ಯಾದಿಯವರ ಅಜ್ಜಳ್ಳಿ ಗ್ರಾಮ ಸರ್ವೇ ನಂ: 33 ರಲ್ಲಿಯ ಜಾಗದ ಹಕ್ಕಿನ ವಿಷಯದಲ್ಲಿ 2016 ರಿಂದಲೂ ಪಿರ್ಯಾದಿಯವರೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದವರು, ದಿನಾಂಕ: 23-01-2022 ರಂದು 17-00 ಗಂಟೆಗೆ ಆರೋಪಿತರಿಬ್ಬರೂ ಸೇರಿ ಪಿರ್ಯಾದಿಯವರ ತೋಟದಲ್ಲಿ ಆಕ್ರಮ ಪ್ರವೇಶ ಮಾಡಿ ಬಂದು, ಪಿರ್ಯಾದಿ ಮತ್ತು ಅವರ ತಂದೆಯವರನ್ನು ಉದ್ದೇಶಿಸಿ ‘ಬೋಳಿ ಮಗನೇ, ಸೂಳಾ ಮಗನೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಕೂಗಾಡಿ ಕೊಲೆ ಮಾಡುವ ಉದ್ದೇಶದಿಂದ ಆರೋಪಿ 1 ನೇಯವನು ಪಿರ್ಯಾದಿಯ ತಂದೆ ವೆಂಕಟೇಶ ಪಾಟೀಲ್ ಇವರಿಗೆ ಕುಡುಗೋಲಿನಿಂದ ಕಡಿಯಲು ಬಂದಾಗ ಅವರು ತಪ್ಪಿಸಿಕೊಂಡಾಗ, ಕುಡುಗೋಲಿನ ಹೊಡೆತವು ಅವರ ಕುತ್ತಿಗೆಯ ಹಿಂಭಾಗದಲ್ಲಿ ತಾಗಿ ಗಾಯವಾಗಿದ್ದು, ಆರೋಪಿ 2 ನೇಯವನು ಕಬ್ಬಿಣದ ವಾಲಿನಿಂದ ವೆಂಕಟೇಶ ಇವರ ತಲೆಯ ಮೇಲೆ ಹೊಡೆದು ಭಾರೀ ಗಾಯ ಪಡಿಸಿದ್ದು, ಆರೋಪಿ 2 ನೇಯವನು ಅದೇ ಕಬ್ಬಿಣದ ವಾಲಿನಿಂದ ಪಿರ್ಯಾದಿಯ ತಲೆಯ ಹಿಂಭಾಗದಲ್ಲಿ ಹೊಡೆದು ಗಾಯ ಪಡಿಸಿದ್ದಲ್ಲದೇ, ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಹರೀಶ ತಂದೆ ವೆಂಕಟೇಶ ಪಾಟೀಲ್, ಪ್ರಾಯ-33 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅಜ್ಜಳ್ಳಿ, ತಾ: ಮುಂಡಗೋಡ ರವರು ದಿನಾಂಕ: 23-01-2022 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-01-2022

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಗಂಗವ್ವ ಕೋಂ. ಇಂದ್ರಪ್ಪಾ ಇಂಗಳೆ, ಪ್ರಾಯ-60 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕೆನರಾ ಬ್ಯಾಂಕ್ ಓಣಿ, ಪಾಳಾ, ತಾ: ಮುಂಡಗೋಡ. ಪಿರ್ಯಾದಿಯ ಹೆಂಡತಿಯಾದ ಇವಳು ಕಳೆದ 17 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವಳು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 19-01-2022 ರಂದು ಬೆಳಿಗ್ಗೆ 10-40 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ತಂದಿಟ್ಟಿದ್ದ ಅಡಿಕೆ ಗಿಡಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಅಸ್ವಸ್ಥನಾದವಳಿಗೆ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ದಿನಾಂಕ: 23-01-2022 ರಂದು ಮಧ್ಯಾಹ್ನ 02-50 ಗಂಟೆಗೆ ಮೃತಪಟ್ಟಿರುತ್ತಾಳೆ. ಇದರ ಹೊರತು ತನ್ನ ಹೆಂಡತಿಯ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಮೃತದೇಹವು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇದ್ದು, ಈ ಕುರಿತು ಮುಂದಿನ ತನಿಖೆ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಇಂದ್ರಪ್ಪ ತಂದೆ ಮಲ್ಲಪ್ಪ ಇಂಗಳೆ, ಪ್ರಾಯ-77 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೆನೆರಾ ಬ್ಯಾಂಕ್ ಓಣಿ, ಪಾಳಾ, ತಾ: ಮುಂಡಗೋಡ ರವರು ದಿನಾಂಕ: 23-01-2022 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 02-04-2022 01:38 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080