ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 23-07-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 196/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಗೋವಿಂದ ತಂದೆ ಜೋಗಿ ಗೌಡ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಯಿಶಶಿ, ಹಳದೀಪುರ, ತಾ: ಹೊನ್ನಾವರ. ಪಿರ್ಯಾದಿಯ ಅಣ್ಣನಾದ ಈತನು ದಿನಾಂಕ: 22-07-2021 ರಂದು ಬೆಳಿಗ್ಗೆ 09-00 ಗಂಟೆಗೆ ಕೆಲಸದ ನಿಮಿತ್ತ ಹಳದೀಪುರದ ತನ್ನ ಮನೆಯಿಂದ ಹೊರಗಡೆ ಹೋದವನು ಈವರೆಗೂ ವಾಪಸ್ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಪಿರ್ಯಾದಿ ಹಾಗೂ ಪಿರ್ಯಾದಿಯ ಮನೆಯವರೆಲ್ಲರೂ ಸೇರಿ ಕಾಣೆಯಾದ ತನ್ನ ಅಣ್ಣನಿಗಾಗಿ ಈವರೆಗೆ ಹಳದೀಪುರದ ತಮ್ಮ ಸಂಬಂಧಿಕರ ಮನೆಗಳಲ್ಲಿ ಹಾಗೂ ಉರಿನಲ್ಲಿ ಹುಡುಕಾಡಿ ತನ್ನ ಅಣ್ಣನ ಸ್ನೇಹಿತರಲ್ಲಿ ವಿಚಾರಿಸಿ, ಹಳದೀಪುರ, ಕರ್ಕಿ ಹಾಗೂ ಹೊನ್ನಾವರ ಪಟ್ಟಣದ ಬಜಾರ್ ರಸ್ತೆ, ಮಾಸ್ತಿಕಟ್ಟಾ ಮುಂತಾದ ಕಡೆಗಳಲ್ಲಿ ಹುಡುಕಾಡಿ ತನ್ನ ಅಣ್ಣ ಎಲ್ಲಿಯೂ ಸಿಗದೇ ಇದ್ದುದರಿಂದ ಕಾಣೆಯಾದ ತನ್ನ ಅಣ್ಣನನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ಜೋಗಿ ಗೌಡ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಯಿಶಶಿ, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 23-07-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 95/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಜಟ್ಟಾ ನಾಯ್ಕ, ಸಾ|| ಮೂಡಶಿರಾಲಿ, ಬೆಂಗ್ರೆ, ಶಿರಾಲಿ, ತಾ: ಭಟ್ಕಳ (ಟಿ.ವಿ.ಎಸ್ ಜ್ಯುಪಿಟರ್ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-9724 ನೇದರ ಸವಾರ). ಈತನು ದಿನಾಂಕ: 23-07-2021 ರಂದು ಮಧ್ಯಾಹ್ನ 12-30 ಗಂಟೆಯ ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಟಿ.ವಿ.ಎಸ್ ಜ್ಯುಪಿಟರ್ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-9724 ನೇದನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು ಭಟ್ಕಳ-ಹೊನ್ನಾವರ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಶಾರಾದಾ ಹೊಳೆಯ ಹತ್ತಿರ ಹನುಮಂತ ದೇವಸ್ಥಾನದ ಎದುರುಗಡೆ ಹೋಂಡಾ ಶೈನ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-6241 ನೇದರಲ್ಲಿ ಪಿರ್ಯಾದಿಯು ತನ್ನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಮಾರಿ: ದಿವ್ಯಾ ತಂದೆ ಗೋವಿಂದ ಮರಾಠೆ, ಪ್ರಾಯ-11 ವರ್ಷ, ಹಾಗೂ ಕುಮಾರಿ: ಸಾವಿತ್ರಿ ತಂದೆ ಗೋವಿಂದ ಮರಾಠೆ, ಪ್ರಾಯ-18 ವರ್ಷ, ಸಾ|| (ಇಬ್ಬರೂ) ಗೊಳಿಕುಂಬ್ರಿ, ಕೊಳಕಿ, ಉತ್ತರಕೊಪ್ಪ, ಮುರ್ಡೇಶ್ವರ, ತಾ: ಭಟ್ಕಳ ಇವರನ್ನು ಕೂಡ್ರಿಸಿಕೊಂಡು ಬರುತ್ತಿರುವಾಗ ಆರೋಪಿತನು ತನ್ನ ಮೋಟಾರ್ ಸೈಕಲನ್ನು ಬಲಕ್ಕೆ ತಿರುಗಿಸಿದರಿಂದ ಆರೋಪಿತನ ಮೋಟಾರ್ ಸೈಕಲ್ ಪಿರ್ಯಾದಿಯ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಹಾಗೂ ಹಿಂಬದಿಯ ಎರಡು ಜನ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ, ಈ ಅಪಘಾತದಲ್ಲಿ ಪಿರ್ಯಾದಿಯ ಎಡಗೆನ್ನೆಯ ಭಾಗಕ್ಕೆ ಮತ್ತು ಕೈಗೆ ಹಾಗೂ ಮೋಟಾರ್ ಸೈಕಲ ಮಧ್ಯದಲ್ಲಿ ಕುಳಿತುಕೊಂಡಿದ್ದ ಕುಮಾರಿ: ದಿವ್ಯಾ ಗೋವಿಂದ ಮರಾಠೆ, ಇವಳಿಗೆ ತಲೆಯ ಹಣೆಯ ಭಾಗಕ್ಕೆ ಮತ್ತು ಹಲ್ಲಿನ ಭಾಗಕ್ಕೆ ಮತ್ತು ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತುಕೊಂಡ ಕುಮಾರಿ: ಸಾವಿತ್ರಿ ತಂದೆ ಗೋವಿಂದ ಮರಾಠೆ, ಇವಳಿಗೆ ಕಾಲಿಗೆ ಪೆಟ್ಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಜನಾರ್ಧನ ಮರಾಠೆ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಾಗೊರ, ತಾ: ಕುಮಟಾ ರವರು ದಿನಾಂಕ: 23-07-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-07-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 36/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪ್ರದೀಪ ತಂದೆ ಪ್ರಭಾಕರ ಬಾನಾವಳಿಕರ, ಪ್ರಾಯ-38 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬೆಲೇಕೇರಿ, ಖಾರ್ವಿವಾಡಾ, ತಾ: ಅಂಕೋಲಾ. ಈತನು ದಿನಾಂಕ: 23-07-2021 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ತನ್ನ ನಾಡದೋಣಿಯಲ್ಲಿ ಬೆಲೇಕೇರಿ ಸಮುದ್ರದ ದಡದಲ್ಲಿ ಬೀಸುವ ಬಲೆ ಮೀನುಗಾರಿಕೆ ಮಾಡುತ್ತಿದ್ದಾಗ ಸಮಯ 16-30 ಗಂಟೆಯ ಸುಮಾರಿಗೆ ಮಳೆಯ ನೆರೆ ಹಾವಳಿಯ ರಭಸಕ್ಕೆ ಆಕಸ್ಮಾತ್ ಆಯ ತಪ್ಪಿ ದೋಣಿಯ ಮೇಲಿಂದ ಸಮುದ್ರದಲ್ಲಿ ಬಿದ್ದು ಬಲೆಯೊಳಗೆ ಸಿಕ್ಕಿ, ಬಲೆಯ ರೋಪಿನ ಹಗ್ಗದಲ್ಲಿ ಕುತ್ತಿಗೆ ಬಿಗಿದು ನೀರಿನಲ್ಲಿ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರಮೇಶ ತಂದೆ ಪ್ರಭಾಕರ ಪಾಗಿ, ಪ್ರಾಯ-27 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಸದಾಶಿವಗಡ, ನಾಕುತಾ ಮುಲ್ಲಾ, ಮನೆ ನಂ: 1163, ಕಾರವಾರ ರವರು ದಿನಾಂಕ: 23-07-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಮಾದೇವಿ ಸುಬ್ರಾಯ ಅಂಬಿಗ, ಪ್ರಾಯ-46 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮೊಳ್ಕೋಡ, ತಾರಿಬಾಗಿಲು, ತಾ: ಹೊನ್ನಾವರ. ಇವಳು ದಿನಾಂಕ: 23-07-2021 ರಂದು ಬೆಳಿಗ್ಗೆ 04-30 ಗಂಟೆಯ ಸುಮಾರಿಗೆ ತನ್ನ ಗಂಡನೊಂದಿಗೆ ದೋಣಿಯಲ್ಲಿ ಶರಾವತಿ ನದಿಯಲ್ಲಿ ಮೀನುಗಾರಿಕೆಗೆ ಹೋದವಳು, ನದಿಯಲ್ಲಿ ಹಾಕಿದ ಮೀನಿನ ಬಲೆಯನ್ನು ತೆಗೆದು ಮರಳಿ ಬರುತ್ತಿರುವಾಗ 05-30 ಗಂಟೆಯ ಸುಮಾರಿಗೆ ಅಡಕುರಿ ಸಮೀಪ ನದಿಯ ನೀರಿನಲ್ಲಿ ವಿಪರೀತ ಮಳೆ ಗಾಳಿಯಿಂದಾಗಿ ದೋಣಿ ಒಮ್ಮೇಲೆ ಒರೆಯಾಗಿ, ನೀರು ತುಂಬಿ ಆಕಸ್ಮಾತ್ ಆಯ ತಪ್ಪಿ ದೋಣಿಯ ಮೇಲಿನಿಂದ ತನ್ನ ಗಂಡನೊಂದಿಗೆ ನದಿಯ ನೀರಿನಲ್ಲಿ ಬಿದ್ದು ಮುಳುಗಿದವಳು, ನೀರಿನಿಂದ ಮೇಲೆ ಬರಲಾಗದೇ ಮುಳುಗಿ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಶ್ರೀಧರ ತಂದೆ ಶಿವಯ್ಯ ಅಂಬಿಗ, ಪ್ರಾಯ-42 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕೆಳಗಿನ ಇಡಗುಂಜಿ, ಮೋಟೆಕೇರಿ, ತಾ: ಹೊನ್ನಾವರ ರವರು ದಿನಾಂಕ: 23-07-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 24/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಂಗಾಧರ ತಂದೆ ತಿಮ್ಮಾ ಗೌಡ, ಪ್ರಾಯ-29 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಬಸ್ ಸ್ಟಾಪ್ ಹಿಂದುಗಡೆ, ಹುಸರಿ, ತಾ: ಶಿರಸಿ. ಪಿರ್ಯಾದಿಯ ಅಣ್ಣನ ಮಗನಾದ ಈತನು ದಿನಾಂಕ: 22-07-2021 ರಂದು ಸಾಯಂಕಾಲ ಮನೆಯಿಂದ ತನ್ನ ಮೋಟಾರ್ ಸೈಕಲ್ ನಂ; ಕೆ.ಎ-31/ಇ.ಸಿ-6089 ನೇದರ ಮೇಲಾಗಿ ಶಿರಸಿ ಕಡೆಗೆ ಹಾಲು ಕೊಡಲು ಹೋದವನು ರಾತ್ರಿ ಮರಳಿ ಮನೆಗೆ ಬರುತ್ತಿರುವಾಗ ವಿಪರೀತ ಮಳೆಗೆ ಚೆನ್ನಾಪುರ ಕೆರೆಯಲ್ಲಿ ನೀರು ತುಂಬಿ ಕೆರೆಯ ಏರಿ ಒಡೆದು ಮೃತನು ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಸದ್ರಿಯವನ ಮೃತದೇಹವು ದಿನಾಂಕ: 23-07-2021 ರಂದು 09-00 ಗಂಟೆಗೆ ಚೆನ್ನಾಪುರ ಕೆರೆಗೆ ಲಗತ್ತಾಗಿರುವ ಅಡಿಕೆ ತೋಟದ ನೀರಿನಲ್ಲಿ ಸಿಕ್ಕಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಕಾಂತ ತಂದೆ ರಾಮಾ ಗೌಡ, ಪ್ರಾಯ-40 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಬಸ್ ಸ್ಟಾಪ್ ಹಿಂದುಗಡೆ, ಹುಸರಿ, ತಾ: ಶಿರಸಿ ರವರು ದಿನಾಂಕ: 23-07-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 28/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದ್ಯಾವಾ ತಂದೆ ರಾಮ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೊಸಗದ್ದೆ, ಪೋ: ಸಂಪಗೋಡ, ಭಂಡಾರಕೇರಿ ಗ್ರಾಮ, ತಾ: ಸಿದ್ದಾಪುರ. ಈತನು ಪಿರ್ಯಾದಿಯ ತಂದೆಯಾಗಿದ್ದು, ಸಿದ್ದಾಪುರ ತಾಲೂಕಿನ ಭಂಡಾರಕೇರಿ ಗ್ರಾಮಕ್ಕೆ ಒಳಪಡುವ ಹೊಸಗದ್ದೆಯಲ್ಲಿ ಇವರ ಹೆಸರಿನಲ್ಲಿ ಕೃಷಿ ಜಮೀನು ಇದ್ದು, ಜಮೀನು ಭಂಡಾರಕೇರಿ ಗ್ರಾಮದ ಸರ್ವೇ ನಂ: 84 ರಲ್ಲಿ ಬರುತ್ತಿದ್ದು, ಸದರ ಜಮೀನಿಗೆ ಹೊಂದಿಕೊಂಡು ಅರಣ್ಯ ಬೆಟ್ಟ (ಅರಣ್ಯ ಸರ್ವೇ ನಂ: 61) ಇರುತ್ತದೆ. ವಿಪರೀತ ಮಳೆ ಸುರಿದು ಜಮೀನಿನ ಸುತ್ತಮುತ್ತ ನೀರು ನಿಂತಿದ್ದರಿಂದ ಜಮೀನು ಪಕ್ಕದ ಕಾಲುವೆಯನ್ನು ಬಿಡಿಸಿ ನೀರು ಹರಿದು ಹೋಗಲು ದಾರಿ ಮಾಡಿಕೊಡಲೆಂದು ದಿನಾಂಕ: 23-07-2021 ರಂದು ಮಧ್ಯಾಹ್ನ 14-00 ಗಂಟೆಯ ಸುಮಾರಿಗೆ ಮೃತನು ಮನೆಯಿಂದ ತೋಟಕ್ಕೆ ಹೋಗಿ ಕಾಲುವೆ ಬಿಡಿಸಿ ಕೊಡುತ್ತಿದ್ದಾಗ ವಿಪರೀತ ಮಳೆ ಸುರಿಯುತ್ತಿದ್ದರಿಂದ ಜಮೀನಿನ ಪಕ್ಕದ ಗುಡ್ಡದ ಮಣ್ಣು ಕುಸಿದು ಮೃತನ ಮೇಲೆ ಬಿದ್ದು ಮೃತನು ಸ್ಥಳದಲ್ಲೇ ಮೃತಪಟ್ಟಿದ್ದು, ತನ್ನ ತಂದೆಯ ಮರಣವು ಪ್ರಕೃತಿಯ ವಿಕೋಪದಿಂದ ಸಂಭವಿಸಿದ ಬಗ್ಗೆ ಪಿರ್ಯಾದಿ ಶ್ರೀ ಗಂಗಾಧರ ತಂದೆ ದ್ಯಾವಾ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೊಸಗದ್ದೆ, ಪೋ: ಸಂಪಗೋಡ, ಭಂಡಾರಕೇರಿ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 23-07-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 24-07-2021 04:55 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080