ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 23-06-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ಮಮತಾ ತಂದೆ ರೋಮಾ ಗೌಡ, ಪ್ರಾಯ-22 ವರ್ಷ, ವೃತ್ತಿ-ಹೊಟೇಲ್ ಉದ್ಯೋಗಿ, ಸಾ|| ಗುಳೆ, ಅವರ್ಸಾ, ತಾ: ಅಂಕೋಲಾ. ಪಿರ್ಯಾದಿಯ ಮಗಳಾದ ಇವಳು ಅರ್ಗಾದ ಮಲಬಾರ್ ಹೊಟೇಲಿನಲ್ಲಿ ತನ್ನ ತಮ್ಮನೊಂದಿಗೆ ಕೆಲಸ ಮಾಡಿಕೊಂಡು ಇದ್ದವಳು, 02 ದಿನ ರಜೆ ಇರುವುದರಿಂದ ದಿನಾಂಕ: 19-06-2021 ರಂದು ಸಾಯಂಕಾಲ ಅರ್ಗಾದಿಂದ ತನ್ನ ಅಜ್ಜಿಯ ಮನೆಯಾದ ಬೇಳೂರಿಗೆ ಬಂದಿದ್ದು, ದಿನಾಂಕ: 19-06-2021 ರಿಂದ ದಿನಾಂಕ: 22-06-2021 ರವರೆಗೆ ತನ್ನ ಅಜ್ಜಿ ಮನೆಯಲ್ಲಿ ಉಳಿದುಕೊಂಡು ದಿನಾಂಕ: 22-06-2021 ರಂದು ಬೆಳಿಗ್ಗೆ 09-00 ಗಂಟೆಗೆ ಅರ್ಗಾಕ್ಕೆ ಹೊಟೇಲ್ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವಳು,ಕೆಲಸಕ್ಕೆ ಹೋಗದೇ ವಾಪಸ್ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ರೋಮಾ ತಂದೆ ನಾಗೇಶ ಗೌಡ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗುಳೆ, ಅವರ್ಸಾ, ತಾ: ಅಂಕೋಲಾ ರವರು ದಿನಾಂಕ: 23-06-2021 ರಂದು 08-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 22-06-2021 ರಂದು ಸಾಯಂಕಾಲ 16-30 ಗಂಟೆಯಿಂದ ದಿನಾಂಕ: 23-06-2021 ರಂದು ಬೆಳಿಗ್ಗೆ 09-15 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರು ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಪ್ರಾಥಮಿಕ ಶಾಲೆ, ಹಿತ್ತಲಮಕ್ಕಿಯ ಬಿಸಿಯೂಟದ ಕೋಣೆಯ ಬಾಗಿಲಿಗೆ ಹಾಕಿದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಸದ್ರಿ ಕೋಣೆಯ ಒಳ ಹೊಕ್ಕಿ ಕೋಣೆಯಲ್ಲಿದ್ದ ಸುಮಾರು 3,000/- ರೂಪಾಯಿ ಬೆಲೆಬಾಳುವ ಇಂಡೇನ್ ಕಂಪನಿಯ ತುಂಬಿದ ಒಂದು ಸಿಲಿಂಡರ್ ಅನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಬೇಬಿ ಕೋಂ. ವಿಠೋಬಾ ನಾಯಕ, ಪ್ರಾಯ-58 ವರ್ಷ, ವೃತ್ತಿ-ಶಿಕ್ಷಕರು, ಸಾ|| ಕಿರಿಯ ಪ್ರಾಥಮಿಕ ಶಾಲೆ, ಹಿತ್ತಲಮಕ್ಕಿ, ತಾ: ಕುಮಟಾ ರವರು ದಿನಾಂಕ: 23-06-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 22-06-2021 ರಂದು ಸಾಯಂಕಾಲ 16-30 ಗಂಟೆಯಿಂದ ದಿನಾಂಕ: 23-06-2021 ರಂದು ಬೆಳಿಗ್ಗೆ 09-15 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರು ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಪ್ರಾಥಮಿಕ ಶಾಲೆ, ತೊರ್ಕೆಯ ಬಿಸಿಯೂಟದ ಉಗ್ರಾಣದ ಕೋಣೆಯ ಬಾಗಿಲಿಗೆ ಹಾಕಿದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಸದ್ರಿ ಕೋಣೆಯ ಒಳ ಹೊಕ್ಕಿ ಕೋಣೆಯಲ್ಲಿದ್ದ ಸುಮಾರು 3,000/- ರೂಪಾಯಿ ಬೆಲೆಬಾಳುವ ಇಂಡೇನ್ ಕಂಪನಿಯ ತುಂಬಿದ ಒಂದು ಸಿಲಿಂಡರ್ ಹಾಗೂ ಸುಮಾರು 2,000/- ರೂಪಾಯಿ ಬೆಲೆಬಾಳುವ ಇಂಡೇನ್ ಕಂಪನಿಯ ಒಂದು ಖಾಲಿ ಸಿಲಿಂಡರ್ ಅನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ರೇಣುಕಾ ಕೋಂ. ಪುಂಡಲಿಕ ಹೆಗಡೆ, ಪ್ರಾಯ-57 ವರ್ಷ, ವೃತ್ತಿ-ಶಿಕ್ಷಕರು, ಸಾ|| ಹಿರಿಯ ಪ್ರಾಥಮಿಕ ಶಾಲೆ, ತೊರ್ಕೆ, ತಾ: ಕುಮಟಾ ರವರು ದಿನಾಂಕ: 23-06-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 171/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಅಶೋಕ ತಂದೆ ಬಾಬು ಹರಿಕಂತ್ರ, ಪ್ರಾಯ-31 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಗೌಡಕುಳಿ, ಹಳದೀಪುರ, ತಾ: ಹೊನ್ನಾವರ. ಪಿರ್ಯಾದಿಯ ಮಗನಾದ ಈತನು ದಿನಾಂಕ: 23-06-2021 ರಂದು ಬೆಳಿಗ್ಗೆ 09-00 ಗಂಟೆಗೆ ಕೆಲಸದ ನಿಮಿತ್ತ ಹೊನ್ನಾವರಕ್ಕೆ ಹೋಗಿ ಬರುವುದಾಗಿ ತನ್ನ ಹೆಂಡತಿಯ ಹತ್ತಿರ ಹೇಳಿ ಹೋದವನು, ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಆತನ ಮೊಬೈಲ್ ಸಹ ಸ್ವಿಚ್ ಆಫ್ ಇದ್ದು, ಕಾಣೆಯಾದ ತನ್ನ ಮಗನಿಗೆ ತಮ್ಮ ಮನೆಯವರೆಲ್ಲರೂ ಸೇರಿ ಹಳದೀಪುರದ ತಮ್ಮ ಸಂಬಂಧಿಕರಲ್ಲಿ ಹಾಗೂ ಕಾಣೆಯಾದ ತನ್ನ ಮಗನ ಸ್ನೇಹಿತರಲ್ಲಿ ಮತ್ತು ಬೇರೆ ಊರಿನ ತಮ್ಮ ಸಂಬಂಧಿಕರಲ್ಲಿ ವಿಚಾರಿಸಿದ್ದರಲ್ಲಿ ಯಾವುದೇ ಮಾಹಿತಿ ಬಾರದೇ ಇದ್ದಾಗ ಸಂಜೆಯಾದರೂ ತನ್ನ ಮಗ ಅಶೊಕ ಈತನು ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಅಶೋಕ ಈತನಿಗಾಗಿ ಹೊನ್ನಾವರದ ಬಜಾರ್ ರೋಡ್, ಬಸ್ ನಿಲ್ದಾಣ ಹಾಗೂ ಮುಂತಾದ ಕಡೆಗಳಲ್ಲಿ ಹುಡುಕಾಡಿದ್ದು ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಕಾರಣ ಕಾಣೆಯಾದ ತನ್ನ ಮಗನಿಗೆ ಹುಡುಕಿ ಕೊಡಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಗಣಪಿ ಕೋಂ. ಬಾಬು ಹರಿಕಂತ್ರ, ಪ್ರಾಯ-65 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಗೌಡಕುಳಿ, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 23-06-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 94/2021, ಕಲಂ: 143, 147, 323, 341, 504 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಚೆವರಲೆಟ್ ಬೀಟ್ ಕಾರ್ ನಂ: ಕೆ.ಎ-19/ಎಮ್-5954 ನೇದರಲ್ಲಿ ಬಂದ ಇಬ್ಬರೂ ಅಪರಿಚಿತ ವ್ಯಕ್ತಿಗಳು ಹಾಗೂ ಇನ್ನಿತರರು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 23-06-2021 ರಂದು ಮಧ್ಯಾಹ್ನ ಪಿರ್ಯಾದಿಯು ಗೋಕರ್ಣದ ಶ್ರೀ ಕಾಳಿಕಾಂಬಾ ಕಮಟೇಶ್ವರ ದೇವಸ್ಥಾನದ ವಾರ್ಷಿಕ ಪೂಜಾ ಕಾರ್ಯಕ್ರಮವನ್ನು ಮುಗಿಸಿಕೊಂಡು ಗೋಕರ್ಣದಿಂದ ಉಡುಪಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಬರುತ್ತಿರುವಾಗ ಕುಮಟಾದಿಂದ 3 ಕಿ.ಮೀ ಹಿಂದೆ ಇದ್ದಾಗ ಚೆವರಲೆಟ್ ಬೀಟ್ ಕಾರ್ ನಂ: ಕೆ.ಎ-19/ಎಮ್-5954 ನೇದರಲ್ಲಿ ಬಂದ ನಮೂದಿತ ಆರೋಪಿತರು ಪಿರ್ಯಾದಿಯ ಕಾರನ್ನು ಓವರಟೇಕ್ ಮಾಡಿ ನಿಲ್ಲಿಸಿ, ಪಿರ್ಯಾದಿಯ ಕಾರ್ ಚಾಲನೆ ಮಾಡುತ್ತಿದ್ದ ಪ್ರಶಾಂತ ಶರ್ಮಾ ಇವರಿಗೆ ‘ಬೋಳಿ ಮಗನೆ, ಸೂಳಾ ಮಗನೆ, ಹಾರ್ನ್ ಹಾಕಿ ಲೈಟ್ ಫ್ಲಾಶ್ ಮಾಡಿದರೂ ಸಹ ನಮಗೆ ಯಾಕೆ ದಾರಿ ಬಿಡಲಿಲ್ಲಾ’ ಅಂತಾ ಹೇಳಿ ಹಲ್ಲೆಗೆ ಮುಂದಾಗಿ ಕಾರಿನ ಚಾವಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಲ್ಲದೇ, ಪಿರ್ಯಾದಿಯು ಕುಮಟಾದಿಂದ ಇಡಗುಂಜಿ ಕ್ರಾಸ್ ಹತ್ತಿರ ಹೈವೇ ಮೇಲೆ ಬಂದಾಗ ಸಾಯಂಕಾಲ 17-00 ಗಂಟೆಗೆ 5 ರಿಂದ 6 ಜನ ವ್ಯಕ್ತಿಗಳು ಪಿರ್ಯಾದಿಯ ಕಾರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಪಿರ್ಯಾದಿಯ ಕಾರಿನ ಬಾಗಿಲನ್ನು ತೆರೆಸಿ, ಕಾರಿನ ಚಾಲಕನಾದ ಪ್ರಶಾಂತ ಶರ್ಮಾ ಈತನಿಗೆ ಉದ್ದೇಶಿಸಿ ‘ಬೋಳಿ ಮಗನೆ, ಸೂಳಾ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ದು, ತಲೆಗೆ ಹಾಗೂ ಮುಖಕ್ಕೆ ಕೈಯಿಂದ ಹೊಡೆದಿದ್ದಲ್ಲದೇ, ಕುಮಟಾದಿಂದ ಪಿರ್ಯಾದಿಯ ಕಾರನ್ನು ಹಿಂಬಾಲಿಸಿಕೊಂಡು ಬಂದ ಬಿಳಿ ಬಣ್ಣದ ಚೆವರಲೆಟ್ ಬೀಟ್ ಕಾರ್ ನಂ: ಕೆ.ಎ-19/ಎಮ್-5954 ನೇದರಲ್ಲಿ ಬಂದ ಇಬ್ಬರೂ ಅಪರಿಚಿತ ಆರೋಪಿತ ವ್ಯಕ್ತಿಗಳು ಸಹ ಹಲ್ಲೆ ಮಾಡಿದ 5 ರಿಂದ 6 ಜನರ ಜೊತೆಯಲ್ಲಿ ಏಕೋದ್ದೇಶದಿಂದ ಅಕ್ರಮಕೂಟ ಸೇರಿಕೊಂಡು, ಪ್ರಶಾಂತ ಶರ್ಮಾ ಈತನಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿ ದುಃಖಾಪತ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅಕ್ಷಯ ತಂದೆ ಎನ್ ಶ್ರೀಧರ ಪುರೋಹಿತ ಶರ್ಮಾ, ಪ್ರಾಯ-36 ವರ್ಷ, ವೃತ್ತಿ-ಪೂಜಾರಿ, ಸಾ|| ಶ್ರೀ ಗುರುಕೃಪಾ, ಕಟಪಾಡಿ, ತಾ: ಉಡುಪಿ ರವರು ದಿನಾಂಕ: 23-06-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 95/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಂದನ ಕೆ. ತಂದೆ ಕಾಂತರಾಜು ವಿ, ಸಾ|| 4 ನೇ ಕ್ರಾಸ್, ಮೇನ್ ರೋಡ್, ವಿಜಯಾ ಬ್ಯಾಂಕ್ ಕಾಲೋನಿ, ನೆಲಮಂಗಲ, ಬೆಂಗಳೂರು ಗ್ರಾಮೀಣ, 2]. ಶ್ರೇಯಸ್ ತಂದೆ ಚಂದ್ರಶೇಖರಯ್ಯ, ಸಾ|| 6829, 4 ನೇ ಕ್ರಾಸ್, 1 ನೇ ಮೇನ್ ರೋಡ್, ವಿಜಯಾ ಬ್ಯಾಂಕ್ ಕಾಲೋನಿ, ನೆಲಮಂಗಲ, ಬೆಂಗಳೂರು ಗ್ರಾಮೀಣ. ಈ ನಮೂದಿತ ದಾದ ಆರೋಪಿತರು ದಿನಾಂಕ: 23-06-2021 ರಂದು ಬೆಳಿಗ್ಗೆ 07-20 ಗಂಟೆಗೆ ಮಂಕಿಯ ರೈಲ್ವೆ ಸ್ಟೇಶನದಲ್ಲಿ ಟ್ರೇನ್ ನಂ: 06585 ಯಶ್ವಂತಪುರದಿಂದ ಕಾರವಾರ ಕೋವಿಡ್ ಸ್ಪೇಶನ್ ರೈಲಿನ D/2 ಕೋಚಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಹಸೀನಾ ಇವಳು ಚಾರ್ಜಿಗೆ ಹಾಕಿಟ್ಟ ಅಂದಾಜು 12,000/- ರೂಪಾಯಿ ಮೌಲ್ಯದ ರೆಡ್ಮಿ ನೋಟ್ 7 ಎಸ್ ಮೊಬೈಲ್-1 ಹಾಗೂ ಮೊಬೈಲ್ ಕವರಿನಲ್ಲಿದ್ದ ಹಸೀನಾ ಇವಳ ಬ್ಯಾಂಕ ಆಫ್ ಬರೋಡಾ ವಿಸಾ ಕಾರ್ಡ್-1 ನೇದನ್ನು ಕಳುವು ಮಾಡಿಕೊಂಡು ಹೋಗುವಾಗ ಪಿರ್ಯಾದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಶಿಶುಪಾಲಸಿಂಗ್ ತಂದೆ ನವರಂಗಲಾಲ್ ದಾಯಲ್, ಪ್ರಾಯ-45 ವರ್ಷ, ವೃತ್ತಿ-ಸಬ್ ಇನ್ಸಪೆಕ್ಟರ್ ರೈಲ್ವೆ ಪ್ರೊಟೆಕ್ಷನ್ ಫೋರ್ಸ್, ಸಾ|| ರೈಲ್ವೆ ಸ್ಟೇಶನ್, ತಾ: ಭಟ್ಕಳ ರವರು ದಿನಾಂಕ: 23-06-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 192(ಎ) ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಇಬ್ರಾಹಿಂ ಖಲೀಲ್ ತಂದೆ ಮೊಹಮ್ಮದ್ ಗೌಸ್ ಕುಮಶೇಖ್, ಪ್ರಾಯ-38 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಸಿದ್ಧಿಕ್ ಸ್ಟ್ರೀಟ್, ತಾ: ಭಟ್ಕಳ ಹಾಗೂ ಇತರರು. ಈತನು ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಜಾನುವಾರವನ್ನು ವಧೆ ಮಾಡಿ ಅದರ ಸುಮಾರು 14,000/- ರೂಪಾಯಿ ಮೌಲ್ಯದ ಸುಮಾರು 70 ಕೆ.ಜಿ ಆಗುವಷ್ಟು ಮಾಂಸವನ್ನು ತನ್ನ ಆಟೋ ರಿಕ್ಷಾ ನಂ: ಕೆ.ಎ-47/ಎ-0329 ನೇದರಲ್ಲಿ ತುಂಬಿಕೊಂಡು ಸಾಗಾಟ ಮಾಡಿಕೊಂಡು ಹೋಗುವಾಗ ದಿನಾಂಕ: 23-06-2021 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಡೊಂಗರಪಳ್ಳಿ ಕ್ರಾಸ್ ಹತ್ತಿರ ದಾಳಿಯ ಕಾಲಕ್ಕೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 23-06-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 87/2021, ಕಲಂ: 143, 147, 307, 323, 504, 506, 511 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಕಾಂತ ನಾಯ್ಕ, 2]. ವಿವೇಕ ನಾಯ್ಕ, 3]. ಈಶ್ವರ ಕೆ. ನಾಯ್ಕ ದಮ್ಮನಮನೆ, ಸಾ|| (ಮೂವರೂ) ಭಟ್ಕಳ, 4]. ಪಾಂಡು ನಾಯ್ಕ, ಸಾ|| ಆಸರಕೇರಿ, ತಾ: ಭಟ್ಕಳ, 5]. ಈಶ್ವರ ನಾಯ್ಕ, ಸಾ|| ಆಸರಕೇರಿ, ತಾ: ಭಟ್ಕಳ. ಪಿರ್ಯಾದಿಯವರು ಕರಾವಳಿ ಸಮಾಚಾರ ನ್ಯೂಸ್ 24X7 ಸುದ್ದಿ ವಾಹಿನಿಯ ಪ್ರಧಾನ ಸಂಪಾದಕರಿದ್ದು, ಕಳೆದ ಎರಡು ವರ್ಷಗಳಿಂದ ಸಮಾಜದಲ್ಲಿ ನಡೆಯುತ್ತಿರುವ ಹಿತಕರ ಮತ್ತು ಅಹಿತಕರ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದು, ಈಗ ಕೋವಿಡ್-19 ಸಂದರ್ಭದಲ್ಲಿ ಭಟ್ಕಳ ತಾಲೂಕಿನ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ಸವಿತಾ ಕಾಮತ್ ಇವರು ತಮ್ಮ ಹುಟ್ಟುಹಬ್ಬವನ್ನು ತಮ್ಮ ಕಛೇರಿಯಲ್ಲಿ ಆಚರಿಸಿದ್ದು, ಇದರ ದೃಶ್ಯಾವಳಿ ಮತ್ತು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಪಿರ್ಯಾದಿಯು ತಮ್ಮ ಕರಾವಳಿ ಸಮಾಚಾರ ನ್ಯೂಸ್ ಸುದ್ದಿ ವಾಹಿನಿಯಲ್ಲಿ ದಿನಾಂಕ: 21-06-2021 ರಂದು ಪ್ರಸಾರ ಮಾಡಿದ್ದು, ದಿನಾಂಕ: 21-06-2021 ರಂದು ತಾಲೂಕಾಶ ಆಸ್ಪತ್ರೆ ಹೆಸರಿನ ವಾಟ್ಸಪ್ ಗ್ರೂಪಿನಲ್ಲಿ ಆರೋಪಿ 1 ನೇಯವನು ಪಿರ್ಯಾದಿಗೆ ನಕಲಿ ಪತ್ರಕರ್ತ ಹಾಗೂ ಅನಧೀಕೃತ ಯೂಟ್ಯೂಬ್ ಚಾನಲ್ ಎಂದು ಪೋಸ್ಟ್ ಮಾಡಿದ್ದಲ್ಲದೇ, ಆರೋಪಿ 1 ನೇಯವನು ಪಿರ್ಯಾದಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಧಮಕಿ ಹಾಕಿ, ದಿನಾಂಕ: 22-06-2021 ರಂದು ಸಾಯಂಕಾಲ 05-30 ರಿಂದ 05-45 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತರೆಲ್ಲರೂ ಸಂಗನಮತ ಮಾಡಿಕೊಂಡು ಪಿರ್ಯಾದಿಯ ಮನೆಯ ಎದುರುಗಡೆ ಬಂದು ಪಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಏಕಾಏಕಿ ಆರೋಪಿ 1 ನೇಯವನು ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವನ್ನು ಪಿರ್ಯಾದಿಯ ಮೈಮೇಲೆ ಹಾಯಿಸಿ ದಾಳಿ ಮಾಡಲು ಪ್ರಯತ್ನಿಸಿದಾಗ ಪಿರ್ಯಾದಿಯು ತಪ್ಪಿಸಿಕೊಂಡಿದ್ದು, ನಂತರ ಆರೋಪಿ 2 ಮತ್ತು 3 ನೇಯವರು ಪಿರ್ಯಾದಿಯ ಕುತ್ತಿಗೆ ಒತ್ತುವ ಪ್ರಯತ್ನ ಮಾಡಿ ಹಾಗೂ ಆರೋಪಿ 4 ಮತ್ತು 5 ನೇಯವರು ಪಿರ್ಯಾದಿಗೆ ತುಳಿದಿದಲ್ಲದೇ, ಬಿಡಿಸಲು ಬಂದ ಪಿರ್ಯಾದಿಯ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಗೆ ‘ನೀನು ತಾಲೂಕಾ ಆಸ್ಪತ್ರೆಯ ಸುದ್ದಿಯನ್ನು ಪ್ರಸಾರ ಮಾಡಿದ್ದಲ್ಲಿ ಎಲ್ಲರೂ ಸೇರಿಕೊಂಡು ನಿನ್ನನ್ನು ಕೊಲ್ಲುತ್ತೇವೆ. ಬೋಳಿ ಮಗನೇ, ಸೂಳಾ ಮಗನೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೊಲೆ ಮಾಡುವುದಾಗಿ ಜೀವದ ಬೆದರಿಕೆ ಹಾಕಿ ‘ದಲಿತರ ಮೂಲಕ ಅಟ್ರಾಸಿಟಿ ಕೇಸ್ ಹಾಕಿಸುತ್ತೇವೆ’ ಅಂತಾ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಅರ್ಜುನ ತಂದೆ ಮಾಧವ ಮಲ್ಯ, ಪ್ರಾಯ-30 ವರ್ಷ, ವೃತ್ತಿ-ಕರಾವಳಿ ಸಮಾಚಾರ ವಾಹಿನಿಯ ಪ್ರಧಾನ ಸಂಪಾದಕರು, ಸಾ|| ಕಂಚಿಕೇರಿ, ಬೆಳಕೆ, ತಾ: ಭಟ್ಕಳ ರವರು ದಿನಾಂಕ: 23-06-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 88/2021, ಕಲಂ: 307, 323, 341, 506, 511 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀ ಅರ್ಜುನ ತಂದೆ ಮಾಧವ ಮಲ್ಯ, 2]. ಮಾಧವ ಮಲ್ಯ, ಸಾ|| (ಇಬ್ಬರೂ) ಕಂಚಿಕೇರಿ, ಬೆಳಕೆ, ತಾ: ಭಟ್ಕಳ. ಪಿರ್ಯಾದಿಯವರು ದಿನಾಂಕ: 22-06-2021 ರಂದು ಸಾಯಂಕಾಲ ಸುಮಾರು 05-45 ಗಂಟೆಯ ಸಮಯಕ್ಕೆ ತನ್ನ ಗೆಳಯರಾದ ಪಾಂಡುರಂಗ ಸಣ್ಣಯ್ಯ ನಾಯ್ಕ, ಈಶ್ವರ ನಾಗಪ್ಪ ನಾಯ್ಕ, ಈಶ್ವರ ಕೃಷ್ಣ ನಾಯ್ಕ ಮತ್ತು ವಿವೇಕಾನಂದ ದುರ್ಗಪ್ಪ ನಾಯ್ಕ ಇವರೊಂದಿಗೆ ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಕೃಷಿ ಚಟುವಟಿಕೆಯ ಬಗ್ಗೆ ಮಾಹಿತಿ ಪಡೆಯಲು ಶಿರೂರಿನ ತಮ್ಮ ಪರಿಚಯದವರ ಮನೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೋಗುತ್ತಿದ್ದಾಗ ಬೆಳಕೆಯ ಕಂಚಿಕೇರಿ ಕ್ರಾಸ್ ಹತ್ತಿರ ತಲುಪಿದಾಗ ಆರೋಪಿ 1 ಮತ್ತು 2 ನೇಯವರು ಪಿರ್ಯಾದಿ ಹಾಗೂ ಪಿರ್ಯಾದಿಯ ಗೆಳಯರ ಮೋಟಾರ ಸೈಕಲನ್ನು ಅಡ್ಡಗಟ್ಟಿ ತಡೆದು, ಆರೋಪಿ 1 ನೇಯವನು ಆರೋಪಿ 2 ನೇಯವನ ಕೈಯಲ್ಲಿ ಇದ್ದ ಕತ್ತಿಯನ್ನು ಹಿಡಿದು ಬಂದವನು, ಪಿರ್ಯಾದಿ ಹಾಗೂ ಪಿರ್ಯಾದಿ ಗೆಳಯರಿಗೆ ಕೊಲೆ ಮಾಡುವ ಉದ್ದೇಶದಿಂದಲೇ ಕತ್ತಿಯನ್ನು ಪಿರ್ಯಾದಿಯ ಕುತ್ತಿಗೆ ಹಾಗೂ ತಲೆಯ ಭಾಗಕ್ಕೆ ಜೋರಾಗಿ ಬೀಸಿದ್ದರಿಂದ ಪಿರ್ಯಾದಿಯು ತಪ್ಪಿಸಿಕೊಂಡಾಗ ಅದು ತಪ್ಪಿ ಕೆಳಗೆ ಬಿದ್ದಿದ್ದು, ನಂತರ ಆರೋಪಿ 1 ನೇಯವನು ಪಿರ್ಯಾದಿಯ ಮೈ ಮೇಲೆ ಏರಿ ಬಂದು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿಯ ಕುತ್ತಿಗೆಯನ್ನು ಹಿಡಿದು ಜೋರಾಗಿ ಒತ್ತಿದ್ದು, ಆಗ ಪಿರ್ಯಾದಿಯು ಕೂಗಿಕೊಂಡಾಗ ಆತನ ಜೊತೆಯಲ್ಲಿದ್ದ ಗೆಳಯರು ಬಂದು ಬಿಡಿಸಿದ್ದು, ಆಗ ಇಬ್ಬರು ಆರೋಪಿತರು ಮುಂದಿನ ದಿನಗಳಲ್ಲಿ ‘ನಿಮ್ಮನ್ನು ಕೊಲೆ ಮಾಡದೇ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ್ದಲ್ಲದೇ, ಪುನಃ ಅದೇ ದಿನ ರಾತ್ರಿ 09-34 ಗಂಟೆಗೆ ಆರೋಪಿ 1 ನೇಯವನು ತನ್ನ ಮೊಬೈಲ್ ನಂ: 7975658689 ನೇದರಿಂದ ಪಿರ್ಯಾದಿಯ ವಾಟ್ಸಪ್ ನಂ: 7760901212 ನೇದಕ್ಕೆ ಧ್ವನಿ ಸುರುಳಿ ಕಳುಹಿಸಿ, ಅದರಲ್ಲಿ ಪಿರ್ಯಾದಿಗೆ ‘ನೀವು ಸರಕಾರಿ ಆಸ್ಪತ್ರೆಯಲ್ಲಿ ಬಕೆಟ್ ಹಿಡಿಯುತ್ತಿರಿ. ತನ್ನ ವಿಚಾರಕ್ಕೆ ಬಂದರೆ ವೈಯಕ್ತಿಕವಾಗಿ ನಿಮ್ಮ ಬುಡಕ್ಕೆ ಕೈ ಹಾಕುತ್ತೇವೆ’ ಅಂತಾ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಶ್ರೀಕಾಂತ ತಂದೆ ನಾರಾಯಣ ನಾಯ್ಕ, ಪ್ರಾಯ-39 ವರ್ಷ, ಸಾ|| ವಿ.ಟಿ ರೋಡ್, ಆಸರಕೇರಿ, ತಾ: ಭಟ್ಕಳ ರವರು ದಿನಾಂಕ: 23-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಅನಿತಾ ಕೋಂ. ಅನಂತ ಎಲ್ಲೇಕರ, ಪ್ರಾಯ-48 ವರ್ಷ, ವೃತ್ತಿ-ಅಂಗನವಾಡಿ ಸಹಾಯಕಿ, ಸಾ|| ಭೀಮಗಾಳಿ, ಯರಮುಖ, ತಾ: ಜೋಯಿಡಾ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 21-06-2021 ರಂದು ಬೆಳಿಗ್ಗೆ 08-30 ಗಂಟೆಗೆ ಎಂದಿನಂತೆ ಅಂಗನವಾಡಿ ಶಾಲೆಗೆ ಕೆಲಸಕ್ಕೆ ಹೋದವಳು, ನಂತರ ನಾನು ಮತ್ತು ನನ್ನ ಮಗಳು ಪೂರ್ಣಿಮಾ, ಪ್ರಾಯ-22 ವರ್ಷ, ಇಬ್ಬರು ಕೂಡಿ ನಮ್ಮ ಮನೆಯಿಂದ 10-00 ಗಂಟೆಯ ಸುಮಾರಿಗೆ ಕೊರೋನಾ ವ್ಯಾಕ್ಸಿನ್ ತೆಗೆದುಕೊಳ್ಳುವ ಸಲುವಾಗಿ ನಮ್ಮ ಊರಿನ ಹತ್ತಿರ ಇರುವ ನಂದಿಗದ್ದೆಗೆ ಹೋಗಿದ್ದೆವು, ನಂತರ ಮಧ್ಯಾಹ್ನ 01-30 ಗಂಟೆಗೆ ನಾನು ಮತ್ತು ನನ್ನ ಮಗಳು ಮರಳಿ ಮನೆಗೆ ಬಂದಿರುತ್ತೇವೆ. ನನ್ನ ಹೆಂಡತಿ ದಿನಾಲೂ ಸಂಜೆ 04-30 ಗಂಟೆಯ ಸುಮಾರಿಗೆ ಅಂಗನವಾಡಿ ಶಾಲೆಯಿಂದ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಳು, ಆದರೆ ದಿನಾಂಕ: 21-06-2021ರಂದು ಸಂಜೆ 05-00 ಗಂಟೆಯಾದರೂ ಸಹ ಮನೆಗೆ ಬರಲಿಲ್ಲ. ಆಗ ನಾವು ಪ್ರತಿ ದಿವಸದಂತೆ ಅಕ್ಕ ಪಕ್ಕದ ಮನೆಯ ಹತ್ತಿರ ಹೋಗಿರಬಹುದು ಅಂತಾ ತಿಳಿದು ನಾನು ಮನೆಯಲ್ಲಿಯೇ ಇದ್ದೆನು, ರಾತ್ರಿ ಆದರೂ ಸಹ ನನ್ನ ಹೆಂಡತಿ ಮನೆಗೆ ಬರಲಿಲ್ಲ. ಆಗ ನಾವು ಗಾಬರಿಗೊಂಡು ನಮ್ಮ ಅಕ್ಕಪಕ್ಕದ ಮನೆಯವರಲ್ಲಿ ಮತ್ತು ನಮ್ಮ ಸಂಬಂಧಿಕರಲ್ಲಿ ವಿಚಾರಿಸಿದಾಗ ಅವರು ಯಾರೂ ಸಹ ನನ್ನ ಹೆಂಡತಿ ಅನಿತಾ ಇವಳಿಗೆ ಕಂಡಿಲ್ಲವಾಗಿ ತಿಳಿಸಿದ್ದು, ನಂತರ ನನ್ನ ಹೆಂಡತಿಗೆ ಎಲ್ಲಾ ಕಡೆ ಹುಡುಕಾಡಿದರು ಈವರೆಗೂ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ನನ್ನ ಹೆಂಡತಿ ನಮ್ಮ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಕಾರಣ ಕಾಣೆಯಾದ ನನ್ನ ಹೆಂಡತಿಯನ್ನು ಹುಡುಕಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅನಂತ ತಂದೆ ಬಾಬು ಎಲ್ಲೇಕರ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಭೀಮಗಾಳಿ, ಯರಮುಖ, ತಾ: ಜೋಯಿಡಾ ರವರು ದಿನಾಂಕ: 23-06-2021 ರಂದು 13-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 8C, 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ಗೋಪಾಲ ಪಾಠಣಕರ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಅಂಬೇಡ್ಕರ್ ಓಣಿ, ತಾ: ಯಲ್ಲಾಪುರ, ಹಾಲಿ ಸಾ|| ಅಯ್ಯಪ್ಪನಗರ, ತಾ: ಶಿರಸಿ, 2]. ಹರೀಶ ತಂದೆ ಮಂಜುನಾಥ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಹೊಟೇಲ್ ನಲ್ಲಿ ಕ್ಯಾಷಿಯರ್ ಕೆಲಸ, ಸಾ|| ಮಾರ್ಕೆಟ್ ರಸ್ತೆ, ಸಿ.ಎಮ್.ಸಿ ಕಾಂಪ್ಲೆಕ್ಸ್ ಎದುರು, ತಾ: ಶಿರಸಿ, 3]. ವೀರೇಶ @ ಕಾರ್ತಿಕ ತಂದೆ ಶನಿಯಾ ಶಿರ್ಸಿಕರ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪೌರ ಕಾರ್ಮಿಕರ ಕೇರಿ, ರಾಜೀವ ನಗರ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 23-06-2021 ರಂದು 11-50 ಗಂಟೆಯ ಸಮಯಕ್ಕೆ ಶಿರಸಿ ಕೆ.ಎಚ್.ಬಿ ಕಾಲೋನಿಯ ಹೊಸ ಬಡಾವಣೆಯ ಶಾಂತರಾಮ ವೈದ್ಯ ಇವರ ಮನೆಯ ಎದುರಿನ ಕಾಂಕ್ರೀಟ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡಲು ತಮ್ಮ ವಶದಲ್ಲಿಟ್ಟುಕೊಂಡಿರುವಾಗ ಪಿರ್ಯಾದಿಯವರು ಪಂಚರು ಮತ್ತು ಪತ್ರಾಂಕಿತ ಅಧಿಕಾರಿಗಳ ಸಮಕ್ಷಮ ನಡೆಸಿದ ದಾಳಿಯ ಕಾಲಕ್ಕೆ 1). 228 ಗ್ರಾಂ ತೂಕದ ಗಾಂಜಾ ಮಾದಕ ವಸ್ತು, ಅ||ಕಿ|| 5,500/- ರೂಪಾಯಿ, 2). ಸಣ್ಣ ಪ್ಲಾಸ್ಟಿಕ್ ಕವರುಗಳು-28, ಅ||ಕಿ|| 00.00/- ರೂಪಾಯಿ, 3). ಕೆಂಪು ಬಣ್ಣದ ನಾನ್ ಪ್ಲಾಸ್ಟಿಕ್ ಕೈ ಚೀಲ-01, ಅ||ಕಿ|| 00.00/- ರೂಪಾಯಿ, 4). ನಗದು ಹಣ 1,250/- ರೂಪಾಯಿ, 5). I KALL ಕಂಪನಿಯ ಕೀಪ್ಯಾಡ್ ಮೊಬೈಲ್ ಪೋನ್ ಸಿಮ್ ಸಹಿತ-01, ಅ||ಕಿ|| 200/- ರೂಪಾಯಿ, 6). ವಿವೋ ಕಂಪನಿಯ ಮೊಬೈಲ್ ಪೋನ್ ಸಿಮ್ ಸಹಿತ-01, ಅ||ಕಿ|| 500/- ರೂಪಾಯಿ, 7). ರಿಯಲ್ ಮಿ ಕಂಪನಿಯ ಮೊಬೈಲ್ ಪೋನ್ ಸಿಮ್ ಸಹಿತ-01, ಅ||ಕಿ|| 500/-ರೂಪಾಯಿ, 8). ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-8668, ಅ||ಕಿ|| 25,000/- ರೂಪಾಯಿ ಮೌಲ್ಯದ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಮಚಂದ್ರ ನಾಯಕ, ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ ವೃತ್ತ, ಶಿರಸಿ ರವರು ದಿನಾಂಕ: 23-06-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 269, 270 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ನೂರ್ ಅಹಮ್ಮದ್ ತಂದೆ ಮಹಮ್ಮದ್ ಹನೀಫ್ ಭಟ್ಕಳ, ಪ್ರಾಯ-27 ವರ್ಷ, ವೃತ್ತಿ-ಹಮಾಲಿ ಕೆಲಸ, ಸಾ|| ಇಂದಿರಾ ನಗರ, ತಾ: ಶಿರಸಿ, 2]. ಇದಾಯತ್ ತಂದೆ ತಸಲುಲ್ಲಾ ಖಾಜಿ, ಪ್ರಾಯ-31 ವರ್ಷ, ವೃತ್ತಿ-ವ್ಯವಹಾರ, ಸಾ|| ಕಸ್ತೂರಬಾ ನಗರ, ತಾ: ಶಿರಸಿ, 3]. ಮೊಹಮ್ಮದ್ ಯಾಸೀನ್ ತಂದೆ ಹಬೀಬ್ ರೆಹಮಾನ್ ಭಟ್ಕಳ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ಕಸ್ತೂರಬಾ ನಗರ, ತಾ: ಶಿರಸಿ, 4]. ಅಪ್ರೀದ್ ತಂದೆ ಮಹಮ್ಮದ್ ಹನೀಫ್ ಭಟ್ಕಳ, ಪ್ರಾಯ-23 ವರ್ಷ, ವೃತ್ತಿ-ಹಮಾಲಿ ಕೆಲಸ, ಸಾ|| ಇಂದಿರಾ ನಗರ, ತಾ: ಶಿರಸಿ, 5]. ಹುಸೇನ್ ತಂದೆ ಫಾರೂಕ್ ಮೀರಾಪುರ, ಪ್ರಾಯ-37 ವರ್ಷ, ವೃತ್ತಿ-ಹಮಾಲಿ ಕೆಲಸ, ಸಾ|| ಎರಂಗಡಿ, ತಾ: ಹೊನ್ನಾವರ, ಹಾಲಿ ಸಾ|| ಕಸ್ತೂರಾಬಾ ನಗರ, ತಾ: ಶಿರಸಿ, 6]. ಅಬ್ದುಲ್ ಖಾದರ್ ತಂದೆ ಪರೀದ್ ಹಸನ್, ಪ್ರಾಯ-30 ವರ್ಷ, ವೃತ್ತಿ-ಅಡಿಕೆ ವ್ಯಾಪಾರ, ಸಾ|| ಇಂದಿರಾ ನಗರ, ತಾ: ಶಿರಸಿ, 7]. ಮಹಮ್ಮದ್ ತಂದೆ ಇಮ್ರಾನ್ ಶೇಖ್, ಪ್ರಾಯ-32 ವರ್ಷ, ವೃತ್ತಿ-ವ್ಯಾಪಾರ, ಸಾ|| ಕಸ್ತೂರಬಾ ನಗರ, ತಾ: ಶಿರಸಿ. ಕೊರೋನಾ ರೋಗ ಹರಡದಂತೆ ತಡೆಯಲು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಜೆ 05-00 ಗಂಟೆಯಿಂದ ಲಾಕಡೌನ್ ಆದೇಶ ಹೊರಡಿಸಿದ್ದು, ಅದರಲ್ಲಿ ಜನರು ಮನೆಯಿಂದ ಹೊರಗಡೆ ಬಂದು ಅನಾವಶ್ಯಕವಾಗಿ ತಿರುಗಾಡದಂತೆ ಮತ್ತು ಗುಂಪುಗೂಡದಂತೆ ಸೂಚಿಸಿದರು ಸಹ ನಮೂದಿತ ಆರೋಪಿತರೆಲ್ಲರೂ ಸೇರಿಕೊಂಡು ದಿನಾಂಕ: 23-06-2021 ರಂದು 20-15 ಗಂಟೆಗೆ ಶಿರಸಿ ನಗರದ ಆರ್.ಟಿ.ಓ ಕಛೇರಿ ಪಕ್ಕದ ಕೆರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೋವಿಡ್-19 ರೋಗ ಹರಡುವುದನ್ನು ತಡೆಯಲು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳಾದ ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಗುಂಪು ಕಟ್ಟಿಕೊಂಡು ಕುಳಿತುಕೊಂಡು ಇಸ್ಪೀಟ್ ಅಂದರ್-ಬಾಹರ್ ಜೂಜಾಟವನ್ನು ಆಡುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಗಳು ಮತ್ತು ಪಂಚರ ಜೊತೆಯಲ್ಲಿ ಸೇರಿ ದಾಳಿ ಮಾಡಿದಾಗ 1). ಇಸ್ಪೀಟ್ ಎಲೆಗಳು-52, ಅ||ಕಿ|| 00.00/- ರೂಪಾಯಿ, 2). ವಿವಿಧ ಮುಖಬೆಲೆಯ ನಗದು ಹಣ 6,410/- ರೂಪಾಯಿ, 3). ಗೋಣಿ ಚೀಲ-01, ಅ||ಕಿ|| 00.00/- ರೂಪಾಯಿ, 4). ಅರ್ಧ ಉರಿದ ಮೇಣದ ಬತ್ತಿ-01, ಅ||ಕಿ|| 00.00/- ರೂಪಾಯಿ, 5). ಲೆನೊವೋ ಕಂಪನಿಯ ಮೊಬೈಲ್ ಪೋನ್-01, ಅ||ಕಿ|| 1,000/- ರೂಪಾಯಿ, 6). ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಪೋನ್-01, ಅ||ಕಿ|| 500/- ರೂಪಾಯಿ, 7). ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಪೋನ್-01, ಅ||ಕಿ|| 500/- ರೂಪಾಯಿ, 8). ರಿಯಲ್ ಮಿ ಕಂಪನಿಯ ಮೊಬೈಲ್ ಪೋನ್-01, ಅ||ಕಿ|| 1,000/- ರೂಪಾಯಿ, 9). ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಪೋನ್-01, ಅ||ಕಿ|| 500/- ರೂಪಾಯಿ, 10). ಒನ್ ಪ್ಲಸ್ ಕಂಪನಿಯ ಮೊಬೈಲ್ ಪೋನ್-01, ಅ||ಕಿ|| 1,000/- ರೂಪಾಯಿ, 11). ರೆಡ್ಮಿ ಕಂಪನಿಯ ಮೊಬೈಲ್ ಪೋನ್-01, ಅ||ಕಿ|| 1,000/- ರೂಪಾಯಿಗಳೊಂದಿಗೆ ಸಿಕ್ಕಿದ್ದು ಹಾಗೂ ಆರೋಪಿತರು ಕೋವಿಡ್-19 ರೋಗ ಹರಡದಂತೆ ತಡೆಯುವಲ್ಲಿ ನಿರ್ಲಕ್ಷ್ಯದ ಮತ್ತು ದ್ವೇಷಪೂರ್ವಕ ಕೃತ್ಯ ಎಸಗಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಡಿ. ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಶಿರಸಿ ಉಪವಿಭಾಗ, ಶಿರಸಿ ರವರು ದಿನಾಂಕ: 23-06-2021 ರಂದು 22-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಾಬಲೇಶ್ವರ ತಂದೆ ಸುಬ್ರಾಯ ಹೆಗಡೆ. ಪ್ರಾಯ-73 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಇಟಗುಳಿ, ಪೋ: ಇಟಗುಳಿ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ವ್ಹಾಯ್-2404 ನೇದರ ಸವಾರ). ಈತನು ದಿನಾಂಕ: 23-06-2021 ರಂದು 12-45 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ವ್ಹಾಯ್-2404 ನೇದರ ಹಿಂಬದಿಗೆ ತನ್ನ ಹೆಂಡತಿ ಶ್ರೀಮತಿ ವಿಮಲಾ ಮಹಾಬಲೇಶ್ವರ ಹೆಗಡೆ ಇವರನ್ನು ಕೂಡ್ರಿಸಿಕೊಂಡು ತಾರಗೋಡ ಕಡೆಯಿಂದ ಬೆಳಲೆ ಕಡೆಗೆ ಹೋಗುತ್ತಿರುವಾಗ ನೋಡ ನೋಡುತ್ತಲೇ ಚಲಾಯಿಸುತ್ತಿದ್ದ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋದವನು, ತಾರಗೋಡ ಕ್ರಾಸ್ ಹತ್ತಿರ ರಸ್ತೆಗೆ ಹಾಕಿರುವ ಹಂಪ್ ಅನ್ನು ಗಮನಿಸದೇ ಹಾಗೆಯೇ ಚಲಾಯಿಸಿಕೊಂಡು, ಮೋಟಾರ್ ಸೈಕಲ್ ಹಂಪಿಗೆ ಜಂಪಾಗಿ ಹಿಂಬದಿ ಸವಾರಳಾದ ಶ್ರೀಮತಿ ವಿಮಲಾ ಮಹಾಬಲೇಶ್ವರ ಹೆಗಡೆ ಇವರಿಗೆ ಮೋಟಾರ್ ಸೈಕಲ್ ಮೇಲಿಂದ ರಸ್ತೆಯ ಎಡಬದಿಗೆ ಕೆಳಗೆ ಬೀಳಿಸಿ, ತಲೆಯ ಹಿಂಬದಿಗೆ ಗಂಭೀರ ಸ್ವರೂಪ ಗಾಯನೋವಾಗಿ ರಕ್ತ ಸುರಿಯುತ್ತಿದ್ದವರಿಗೆ ಚಿಕಿತ್ಸೆಯ ಕುರಿತು ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಿ, ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನೋಪಚಾರದ ಕುರಿತು ಉನ್ನತ ಆಸ್ಪತ್ರೆಗೆ ಹೋಗಲು ತಿಳಿಸಿದ ಮೇರೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯುವಾಗ ಬಿಸ್ಲಕೊಪ್ಪ ಹತ್ತಿರ 18-00 ಗಂಟೆಯ ಸುಮಾರಿಗೆ ತಲೆಗಾದ ಮಾರಣಾಂತಿಕ ಗಾಯನೋವಿನಿಂದ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿರುತ್ತಾಳೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕಿರಣ ತಂದೆ ಆನಂದ ಭಟ್, ಪ್ರಾಯ-47 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕುಂಬ್ರಿಗದ್ದೆ, ತಾರಗೋಡ ಗ್ರಾಮ, ಪೋ: ತಾರಗೋಡ, ತಾ: ಶಿರಸಿ ರವರು ದಿನಾಂಕ: 23-06-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 118/2021, ಕಲಂ: ಯುವಕ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವಕ ಶ್ರೀ ಪ್ರವೀಣ ತಂದೆ ಶ್ರೀಕಾಂತ ದೊಡ್ಡಮನಿ, ಪ್ರಾಯ-26 ವರ್ಷ, ವೃತ್ತಿ-ಬಾಂಬೆಯಲ್ಲಿ ಶೇರ್ ಮಾರ್ಕೆಟಿಂಗ್, ಸಾ|| ಭಾಗವತಿ, ತಾ: ಹಳಿಯಾಳ. ಪಿರ್ಯಾದಿಯವರ ಮಗನಾದ ಈತನು ದಿನಾಂಕ: 22-06-2021 ರಂದು ಬೆಳಿಗ್ಗೆ 10-00 ಗಂಟೆಗೆ ‘ತನ್ನ ಗೆಳೆಯರು ಜಮಖಂಡಿಯಿಂದ ದಾಂಡೇಲಿಗೆ ಹೋಗಲು ಬಂದಿದ್ದಾರೆ. ಅವರೊಂದಿಗೆ ತಾನು ಕಾರಿನಲ್ಲಿ ದಾಂಡೇಲಿಗೆ ಹೋಗಿ ವಾಪಸ್ ಅದೇ ಕಾರಿನಲ್ಲಿ ಬರುತ್ತೇನೆ’ ಅಂತಾ ಹಳಿಯಾಳ ತಾಲೂಕಿನ ಭಾಗವತಿ ಗ್ರಾಮದ ತನ್ನ ಮನೆಯಲ್ಲಿ ಹೇಳಿ ಹೋದವನು, ಇಲ್ಲಿಯವರೆಗೆ ವಾಪಸ್ ಮನೆಗೆ ಬಂದಿರುವುದಿಲ್ಲ. ಅಲ್ಲದೇ ಅವನ ಮೊಬೈಲ್ ಸ್ವಿಚ್ ಆಫ್ ಇರುವುದರಿಂದ ತನ್ನ ಮಗ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ಕಾರಂಕಾಂಎಯಾದ ತನ್ನ ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಕಾಂತ ತಂದೆ ಗಿರಿಮಲ್ಲ ದೊಡ್ಡಮನಿ, ಪ್ರಾಯ-57 ವರ್ಷ, ವೃತ್ತಿ-ನಿವೃತ್ತ ಸೈನಿಕ, ಸಾ|| ಭಾಗವತಿ, ತಾ: ಹಳಿಯಾಳ ರವರು ದಿನಾಂಕ: 23-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 119/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುಬಾರಕ್ ತಂದೆ ಮಹಮ್ಮದಗೌಸ್ ಪಟ್ಟಣಕಾರಿ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಗವಿ ಓಣಿ, ಪಿ.ಬಿ ರೋಡ್, ಹುಬ್ಬಳ್ಳಿ (ಓಮಿನಿ ವಾಹನ ನಂ: ಕೆ.ಎ-25/ಎಮ್.ಬಿ-4575 ನೇದರ ಚಾಲಕ). ಈತನು ದಿನಾಂಕ: 23-06-2021 ರಂದು 18-00 ಗಂಟೆಗೆ ತನ್ನ ಓಮಿನಿ ವಾಹನ ನಂ: ಕೆ.ಎ-25/ಎಮ್.ಬಿ-4575 ನೇದನ್ನು ದಾಂಡೇಲಿ ಬದಿಯಿಂದ ಹಳಿಯಾಳ ಬದಿಗೆ ಬರುತ್ತಿರುವಾಗ ತನ್ನ ಮುಂದಿನಿಂದ ಬರುತ್ತಿದ್ದ ಯಾವುದೋ ಒಂದು ವಾಹನವನ್ನು ಓವರಟೇಕ್ ಮಾಡಿಕೊಂಡು ಬಂದು ಹಳಿಯಾಳ ಬದಿಯಿಂದ ದಾಂಡೇಲಿ ಬದಿಗೆ ಹೋಗುತ್ತಿದ್ದ ಕಾರ್ ನಂ: ಕೆ.ಎ-63/3094 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರ್ ಚಾಲಕನಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಓಮಿನಿ ಚಾಹನ ಚಾಲಕನು ತನಗೂ ಸಹ ಸಾಧಾರಣ ಸ್ವರೂಪದ ಗಾಯನೋವು ಪಡಿಸಿಕೊಂಡಿದ್ದಲ್ಲದೇ, ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಭೀಮಸಿ ಬೆಳವಡಿ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| 3 ನಂಬರ ಗೇಟ ಹತ್ತಿರ, ದಾಂಡೇಲಿ ರವರು ದಿನಾಂಕ: 23-06-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-06-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

ಇತ್ತೀಚಿನ ನವೀಕರಣ​ : 24-06-2021 01:52 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080