ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 23-03-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮೋಹನದಾಸ ತಂದೆ ಸುಬ್ರಹ್ಮಣ್ಯ ಶೆಟ್ಟರ್, ಪ್ರಾಯ-53 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಐ.ಎನ್.ಪಿ ರೋಡ, ಬೈತಖೋಲ್, ಕಾರವಾರ. ನಮೂದಿತ ಆರೋಪಿತನು ದಿನಾಂಕ: 22-03-2021 ರಂದು 18-30 ಗಂಟೆಗೆ ಕಾರವಾರದ ಬೈತಖೋಲ್ ಐ.ಎನ್.ಪಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭದ ಸಲುವಾಗಿ 01/- ರೂಪಾಯಿಗೆ 80/- ರೂಪಾಯಿ ಕೊಡುವ ಶರತ್ತಿನ ಮೇಲೆ ಅದೃಷ್ಠದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಜನರಿಂದ ಹಣ ಪಡೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವ ಕಾಲಕ್ಕೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿ ಹಿಡಿದು ದಾಳಿಯ ಕಾಲ ಆರೋಪಿತನಿಂದ 1). ಒಟ್ಟೂ ನಗದು ಹಣ 1,595/- ರೂಪಾಯಿ, 2). ಓ.ಸಿ. ಮಟಕಾ ಜೂಗಾರಾಟದ ಅಂಕೆ-ಸಂಖ್ಯೆ ಬರೆದ ಚೀಟಿ-01, 3). ಬಾಲ್ ಪೆನ್–01. ಇವುಗಳನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 23-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 22-03-2021 ರಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ತಾರಿವಾಡದ ಶ್ರೀ ದುರ್ಗಾದೇವಿ ಜಾತ್ರೆಯ ನಿಮಿತ್ತ ತಮ್ಮ ಸಂಬಂಧಿಕರ ಮನೆಗೆ ತಾರಿವಾಡಕ್ಕೆ ಹೋದಾಗ ಆರೋಪಿತರು ದಿನಾಂಕ: 22-03-2021 ರಂದು 19-00 ಗಂಟೆಯಿಂದ ದಿನಾಂಕ: 23-03-2021 ರಂದು 07-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಬಾಗಿಲನ್ನು ಗಟ್ಟಿಯಾದ ವಸ್ತುವಿನಿಂದ ಮೀಟಿ ತೆಗೆದು ಒಳಗೆ ಪ್ರವೇಶಿಸಿ, ಪಿರ್ಯಾದಿಯ ಮನೆಯ ಕಬ್ಭಿಣದ ಕಪಾಟಿನಲ್ಲಿಟ್ಟಿದ್ದ 5 ಗ್ರಾಂ ನ ಬಂಗಾರದ ಚೈನ್, ಅ||ಕಿ|| 22,000/- ರೂಪಾಯಿ ಹಾಗೂ ನಗದು ಹಣ 10,000/- ರೂಪಾಯಿಯನ್ನು ಕಬ್ಭಿಣದ ಕಪಾಟಿನ ಬಾಗಿಲು ಮೀಟಿ ತೆಗೆದು ಅದರಲ್ಲಿದ್ದ ಡ್ರಾವರ್ ಅನ್ನು ಮೀಟಿ ತೆಗೆದು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ರಸಿಕಾ ಕೋಂ. ರಾಜೇಂದ್ರ ಗಜನಿಕರ, ಪ್ರಾಯ-43 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮಾರುತಿ ದೇವಸ್ಥಾನ ಹತ್ತಿರ, ಬಿಡ್ತುಲಭಾಗ, ಸದಾಶಿವಗಡ, ಕಾರವಾರ ರವರು ದಿನಾಂಕ: 23-03-2021 ರಂದು 08-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ತಕ್ಕು ತಂದೆ ವೆಂಕಟ್ರಮಣ ಗೌಡ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಂಗೆಕೊಳ್ಳ, ಗೋಕರ್ಣ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 22-03-2021 ರಂದು 12-30 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೆಕೊಳ್ಳ ಗ್ರಾಮದ ಗಂಗೆಕೊಳ್ಳ ಕ್ರಾಸ್ ರಸ್ತೆಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಮೇಲೆ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ, ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು, ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ-ಜೂಗಾರಾಟ ಆಡಿಸುತ್ತಿದ್ದಾಗ ಪಿರ್ಯಾದಿಯವರು ಮಾಡಿದ ದಾಳಿ ಮಾಡಿದ ಕಾಲಕ್ಕೆ ನಗದು ಹಣ 1,670/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 23-03-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣೇಶ ತಂದೆ ರಾಮಾ ಗೌಡ, ಪ್ರಾಯ-28 ವರ್ಷ, ಸಾ|| ಗುಣವಂತೆ, ಮುಗಳಿ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-5881 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 23-03-2021 ರಂದು ಬೆಳಿಗ್ಗೆ 08-20 ಗಂಟೆಗೆ ತಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-5881 ನೇದನ್ನು ಕುಮಟಾ ಕಡೆಯಿಂದ ಶಿರಸಿ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಹೊರಟು ಕುಮಟಾ ತಾಲೂಕಿನ ಹರಿಟಾ ಕೊಡಂಬಳೆ ಶಾಲೆಯ ಹತ್ತಿರ ರಸ್ತೆಯು ತಿರುವಿನಿಂದ ಕೂಡಿದ್ದರೂ ಸಹ ವೇಗವನ್ನು ನಿಯಂತ್ರಿಸದೇ ತನ್ನ ಮುಂದಿನಿಂದ ಹೋಗುತ್ತಿದ್ದ ಇನ್ನೊಂದು ವಾಹನಕ್ಕೆ ಓವರಟೇಕ್ ಮಾಡಲು ಹೋಗಿ ನಿಷ್ಕಾಳಜಿಯಿಂದ ಮೋಟಾರ್ ಸೈಕಲನ್ನು ರಸ್ತೆಯ ಬಲಕ್ಕೆ ಚಲಾಯಿಸಿ, ಅದೇ ವೇಳೆಗೆ ಶಿರಸಿ ಕಡೆಯಿಂದ ಕುಮಟಾ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಹೊರಟ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-21/ಎಫ್-0104 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೆ ಬಲಗಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿದು ಭಾರೀ ಗಾಯ ಹಾಗೂ ಮುಖಕ್ಕೆ ಸಾದಾ ಗಾಯನೋವು ಆಗಲು ಮತ್ತು ಎರಡೂ ವಾಹನ ಜಖಂ ಆಗಲು ಆರೋಪಿ ಮೋಟಾರ್ ಸೈಕಲ್ ಸವಾರನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಗಂಗಾಧರ ಎನ್. ತಂದೆ ಕೃಷ್ಣಪ್ಪಾ ಗೌಡ, ಪ್ರಾಯ-47 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ನಂದಿಲ್ ಮನೆ, ಮಿತ್ತಬಾಗಿಲ್ ಗ್ರಾಮ, ಪೋ: ಕಿಲ್ಲೂರು, ತಾ: ಬೆಳ್ತಂಗಡಿ, ದಕ್ಷಿಣ ಕನ್ನಡ ರವರು ದಿನಾಂಕ: 23-03-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 03-12-2020 ರಂದು ರಾತ್ರಿ 08-00 ಗಂಟೆಯಿಂದ 04-12-2020 ರಂದು 08-00 ಗಂಟೆಯ ನಡುವಿನ ಅವಧಿಯಲ್ಲಿ ಕುಮಟಾ ತಾಲೂಕಿನ ದೀವಗಿಯಲ್ಲಿರುವ ನಾರಾಯಣ ಪ್ರಭು ಇವರ ಮನೆಯ ಗೇಟ್ ಹತ್ತಿರ ನಿಲ್ಲಿಸಿಟ್ಟಿದ್ದ ಪಿರ್ಯಾದಿಯವರ ಯಮಹಾ ವೈ.ಬಿ.ಆರ್ 125 ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-8870 ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಪವನಕುಮಾರ ತಂದೆ ವಿನೋದ ಪ್ರಭು, ಪ್ರಾಯ-27 ವರ್ಷ, ವೃತ್ತಿ ಬ್ಯುಸಿನೆಸ್, ಸಾ|| ಹಳಗೇರಿ, ಹೆಗಡೆ, ತಾ: ಕುಮಟಾ ರವರು ದಿನಾಂಕ: 23-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 279, 337, 338, 283, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಬಿಳಿ ಬಣ್ಣದ ಲಾರಿ ನಂ: ಕೆ.ಎ-13/ಸಿ-4468 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, 2]. ಜಾಫರ್ ಸಾದಿಕ್ ತಂದೆ ದಸ್ತಗೀರ್ ಮುಜಾವರ್, ಸಾ|| ಅನಸಾರ್ ಗಲ್ಲಿ, ಫೀರನವಾಡಿ, ಬೆಳಗಾವಿ (ಲಾರಿ ನಂ: ಕೆ.ಎ-22/ಬಿ-9755 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 2 ನೇಯವನು ಚಲಾಯಿಸುತ್ತಿದ್ದ ಲಾರಿ ನಂ: ಕೆ.ಎ-22/ಬಿ-9755 ನೇದು ಕೆಟ್ಟು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಮೇಲೆ ಯಾವುದೇ ಮುಂಜಾಗೃತೆ ಹಾಗೂ ಯಾವುದೇ ಸಿಗ್ನಲ್ ಲೈಟ್ ಹಚ್ಚದೇ ನಿರ್ಲಕ್ಷ್ಯತನದಿಂದ ನಿಲ್ಲಿಸಿದ್ದರಿಂದಲೇ ಪಿರ್ಯಾದಿ ಮತ್ತು ಅವರ ಸಂಬಂಧಿಕರು ಪ್ರಯಾಣಿಸುತ್ತಿದ್ದ ನೋಂದಣಿ ಸಂಖ್ಯೆ ನಮೂದಿರದ ಹೊಸ ಬೊಲೆರೋ ವಾಹನದ ಚಾಲಕನು ತನ್ನ ಬಲಬದಿಗೆ ತೆಗೆದುಕೊಳ್ಳುವಷ್ಟರಲ್ಲಿ ಹಿಂದಿನಿಂದ ಬಂದ ಆರೋಪಿ 1 ನೇಯವನನು ತನ್ನ ಬಾಬ್ತು ಬಿಳಿ ಬಣ್ಣದ ಲಾರಿ ನಂ: ಕೆ.ಎ-13/ಸಿ-4468 ನೇದನ್ನು ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಕೊನೆಯ ತಿರುವಿನಲ್ಲಿ ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯಲ್ಲಿ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದವನು, ಪಿರ್ಯಾದಿಯವರು ಪ್ರಯಾಣಿಸುತ್ತಿದ್ದ ಬೊಲೆರೋ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಮಾಡಿಕೊಂಡು ಹೋಗಿ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ (ಎದುರಿಗೆ) ಬರುತ್ತಿದ್ದ ಟಿಪ್ಪರ್ ಲಾರಿ ನಂ: ಕೆ.ಎ-47/7640 ನೇದಕ್ಕೆ ಮುಂದಿನಿಂದ ಅಪ್ಪಳಿಸುವಂತೆ ಮಾಡಿ ಅಪಘಾತ ಪಡಿಸಿದ್ದರಿಂದಲೇ ಬೊಲೆರೋ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಜನರಿಗೆ ಸಾದಾ ಹಾಗೂ ಭಾರೀ ಸ್ವರೂಪದ ಗಾಯ ಪೆಟ್ಟು ಪಡಿಸಿದ್ದಲ್ಲದೇ, ಪಿರ್ಯಾದಿಯ ಹೆಂಡತಿ ಶ್ರೀಮತಿ ರಾಜೇಶ್ವರಿ ಇವಳು ಸ್ಥಳದಲ್ಲಿಯೇ ಮೃತ ಪಟ್ಟಿದ್ದಲ್ಲದೇ ಹಾಗೂ ಪಿರ್ಯಾದಿಯವರೊಂದಿಗೆ ಪ್ರಯಾಣಿಸುತ್ತಿದ್ದ ಬೊಲೆರೋ ವಾಹನದ ಚಾಲಕನ ಹೆಂಡತಿ ಶ್ರೀಮತಿ ಶೇಖಮ್ಮಾ ಇವಳಿಗೂ ಸಹ ಭಾರೀ ಗಾಯ ಪೆಟ್ಟು ಆಗಿ 108 ಆಂಬ್ಯುಲೆನ್ಸ್ ವಾಹನದಲ್ಲಿ ಯಲ್ಲಾಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ ಹಾಗೂ ಮೂರು ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಹನಮಂತ ತಂದೆ ಸಿದ್ದಪ್ಪ ಪರಡ್ಡಿ ಪ್ರಾಯ-40 ವರ್ಷ, ವೃತ್ತಿ-ಒಕ್ಕುಲುತನ, ಸಾ|| ಬಿದರಿ, ತಾ: ಮುಧೋಳ, ಜಿ: ಬಾಗಲಕೋಟ ರವರು ದಿನಾಂಕ: 23-03-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-03-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

ಇತ್ತೀಚಿನ ನವೀಕರಣ​ : 26-03-2021 12:29 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080