ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 23-05-2021

at 00:00 hrs to 24:00 hrs

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 269, 270 ಐಪಿಸಿ ಹಾಗೂ 51(ಬಿ) ವಿಪತ್ತು ನಿರ್ವಹಣಾ ಕಾಯ್ದೆ-2005 ನೇದ್ದರ ವಿವರ...... ನಮೂದಿತ ಆರೋಪಿತ ಮಹ್ಮದ್ ಇಲಿಯಾಸ್ ತಂದೆ ಮೀರಾಸಾಬ್ ಗುರ್ಕರ್, ಪ್ರಾಯ-60 ವರ್ಷ, ವೃತ್ತಿ-ಚಿಕನ್ ಅಂಗಡಿ ವ್ಯಾಪಾರ, ಸಾ|| ಗುರ್ಕರ ಗಲ್ಲಿ, ಸಿದ್ದಾಪುರ ಪಟ್ಟಣ. ಕೊರೋನಾ ಕೋವಿಡ್-19 ಸಾಂಕ್ರಾಮಿಕ ರೋಗವು ವಿಪರೀತವಾಗಿ ಹರಡುತ್ತಿರುವುದರಿಂದ ಸಾಂಕ್ರಾಮಿಕ ರೋಗವು ಮತ್ತೂ ವ್ಯಾಪಿಸದಂತೆ ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉತ್ತರ ಕನ್ನಡ ಜಿಲ್ಲಾ ಆಡಳಿತದಿಂದ ದಿನಾಂಕ: 07-06-2021 ರವರೆಗೆ ಲಾಕಡೌನ್ ಆದೇಶ ಮಾಡಿ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಮಾಡದಂತೆ ಆದೇಶ ಹೊರಡಿದ್ದರೂ ಸಹ ನಮೂದಿತ ಆರೋಪಿತನು ಸದರ ಅದೇಶಗಳನ್ನು ಪಾಲಿಸದೆ ಅದೇಶಗಳನ್ನು ಉಲ್ಲಂಘನೆ ಮಾಡಿ, ದಿನಾಂಕ: 23-05-2021 ರಂದು 10-20 ಗಂಟೆಯ ಸುಮಾರಿಗೆ ಸಿದ್ದಾಪುರ ಪಟ್ಟಣದ ಕಾಳಿದಾಸ ಗಲ್ಲಿಯಲ್ಲಿ ಇರುವ ಅವನ ಬಾಬ್ತು ‘ಅಲ್ ರಝಾ ಚಿಕನ್ ಸೆಂಟರ್’ ಎಂಬ ಹೆಸರಿನ ಚಿಕನ್ ಅಂಗಡಿಯನ್ನು ತೆರೆದಿಟ್ಟುಕೊಂಡು ವ್ಯಾಪಾರ ಮಾಡಿ ನಿರ್ಲಕ್ಷ್ಯತನ ತೋರಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 23-05-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 269, 270 ಐಪಿಸಿ ಹಾಗೂ 51(ಬಿ) ವಿಪತ್ತು ನಿರ್ವಹಣಾ ಕಾಯ್ದೆ-2005 ನೇದ್ದರ ವಿವರ...... ನಮೂದಿತ ಆರೋಪಿತ ಕೇಶವ ತಂದೆ ಅನಂತ ಮಡಿವಾಳ, ಪ್ರಾಯ-40 ವರ್ಷ, ವೃತ್ತಿ-ಚಿಕನ್ ಅಂಗಡಿ ವ್ಯಾಪಾರ, ಸಾ|| ಕೊಂಡ್ಲಿ, ಸಿದ್ದಾಪುರ ಪಟ್ಟಣ. ಕೊರೋನಾ ಕೋವಿಡ್-19 ಸಾಂಕ್ರಾಮಿಕ ರೋಗವು ವಿಪರೀತವಾಗಿ ಹರಡುತ್ತಿರುವುದರಿಂದ ಸಾಂಕ್ರಾಮಿಕ ರೋಗವು ಮತ್ತೂ ವ್ಯಾಪಿಸದಂತೆ ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉತ್ತರ ಕನ್ನಡ ಜಿಲ್ಲಾ ಆಡಳಿತದಿಂದ ದಿನಾಂಕ: 07-06-2021 ರವರೆಗೆ ಲಾಕಡೌನ್ ಆದೇಶ ಮಾಡಿ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಮಾಡದಂತೆ ಆದೇಶ ಹೊರಡಿದ್ದರೂ ಸಹ ನಮೂದಿತ ಆರೋಪಿತನು ಸದರ ಅದೇಶಗಳನ್ನು ಪಾಲಿಸದೆ ಆದೇಶಗಳನ್ನು ಉಲ್ಲಂಘನೆ ಮಾಡಿ ದಿನಾಂಕ: 23-05-2021 ರಂದು 12-15 ಗಂಟೆಯ ಸುಮಾರಿಗೆ ಸಿದ್ದಾಪುರ ಪಟ್ಟಣದ ಕೊಂಡ್ಲಿಯಲ್ಲಿ ಇರುವ ಅವನ ಬಾಬ್ತು ‘ಶ್ರೀ ಕಾಳಿಕಾಂಬಾ ಚಿಕನ್ ಸೆಂಟರ್’ ಎಂಬ ಹೆಸರಿನ ಚಿಕನ್ ಅಂಗಡಿಯನ್ನು ತೆರೆದಿಟ್ಟುಕೊಂಡು ವ್ಯಾಪಾರ ಮಾಡಿ ನಿರ್ಲಕ್ಷ್ಯತನ ತೋರಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 23-05-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-05-2021

at 00:00 hrs to 24:00 hrs

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದೀಪಕ ತಂದೆ ದೀಲಿಪ ಕರಗುಪ್ಪಿಕರ, ಪ್ರಾಯ-ಅಜಮಾಸ 40 ವರ್ಷ, ಸಾ|| ದೇಸಾಯಿ ಗಲ್ಲಿ, ಕಾಕತಿ, ಬೆಳಗಾವಿ. ಇವರು ಬೆಳಗಾವಿ ಭಾಗದ ಪ್ರವಾಸಿಗರನ್ನು ಹಾರ್ನಬಿಲ್ ರೆಸಾರ್ಟಿಗೆ ಕರೆದುಕೊಂಡು ಬರುತ್ತಿದ್ದವರು, ಕಳೆದ 10 ದಿನಗಳ ಹಿಂದೆ ಗಣೇಶಗುಡಿಗೆ ಬಂದವರು ಇಲ್ಲಿ ಉಳಿದುಕೊಳ್ಳಲು ಬಾಡಿಗೆ ಮನೆ ಹುಡುಕಿದಾಗ ಸಿಗದೇ ಇರುವಾಗ ಗಣೇಶಗುಡಿ ಇಳವಾದ ‘ಅಲ್ಫಾ ವಾಟರ್ ಎಕ್ಟಿವಿಟಿಸ್’ ಹತ್ತಿರ ಇರುವ ಒಂದು ಓಪನ್ ರೂಮಿನಲ್ಲಿ ಉಳಿದುಕೊಂಡಿದ್ದು, ಕಳೆದ 3-4 ದಿನಗಳ ಹಿಂದೆ ಗಣೇಶಗುಡಿಯಿಂದ ಇಳವಾಕ್ಕೆ ಬರುತ್ತಿರುವಾಗ ನೋಡಿದ ಪಿರ್ಯಾದಿಯವರು ದಿನಾಂಕ: 22-05-2021 ರಂದು ಮಧ್ಯಾಹ್ನ 15-00 ಗಂಟೆಗೆ ಕಾಳಿ ನದಿಗೆ ಮೀನು ಹಿಡಿಯಲು ಹೋಗುತ್ತಿರುವಾಗ ದೀಪಕ ಕರಗುಪ್ಪಿಕರ ಇವರು ಒಂದು ವಿಚಿತ್ರ ಶೈಲಿಯಲ್ಲಿ ಮಲಗಿಕೊಂಡಿದ್ದನ್ನು ನೋಡಿದ್ದನ್ನು ನಾವು ‘ಸರ್, ಸರ್’ ಅಂತಾ ಕೂಗಿದಾಗ ಏಳದೇ ಇರುವಾಗ ಸಮೀಪ ಹೋಗಿ ನೋಡಿದಾಗ ಅವರ ಕಣ್ಣು, ಬಾಯಿ ತೆರೆದುಕೊಂಡಿತ್ತು. ಮುಖದ ಭಾಗದಲ್ಲಿ ಇರುವೆಗಳು ಓಡಾಡಿಕೊಂಡಿದ್ದವು. ಅವರು ಸೆಟೆದುಕೊಂಡು ಬಿದ್ದಕೊಂಡಿದ್ದರು. ಅವರಿಗೆ ಇಲ್ಲಿ ಉಳಿಯಲು ಹಾಗೂ ಊಟ ವ್ಯವಸ್ಥೆ ಸರಿಯಾಗಿ ಆಗದೇ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅಥವಾ ಇನ್ಯಾವುದಾದರೂ ಬೇರೆ ಕಾರಣದಿಂದ ಸತ್ತಿರುವಂತೆ ಕಂಡು ಬರುತ್ತದೆ. ಇದರ ಹೊರತು ಅವರ ಸಾವಿನಲ್ಲಿ ಬೇರೇ ಯಾರ ಮೇಲೂ ನನ್ನ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಲಾಲ್ ತಂದೆ ಜೈಲಾನಿ ಮುಜಾವರ್, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಇಳವಾ ಗ್ರಾಮ, ಗಣೇಶಗುಡಿ, ತಾ: ಜೋಯಿಡಾ ರವರು ದಿನಾಂಕ: 23-05-2021 ರಂದು 08-55 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 24-05-2021 06:04 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080