ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 23-11-2021

at 00:00 hrs to 24:00 hrs

 

ಸಿ.ಇ.ಎನ್  ಅಪರಾಧ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 19/2021, ಕಲಂ: 420 ಐಪಿಸಿ ಹಾಗೂ ಕಲಂ: 66(ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ದಿನಾಂಕ: 12-11-2021 ರಂದು ಅಮೆಜಾನ್ ಶಾಪಿಂಗ್ ಆ್ಯಪ್ ನಲ್ಲಿ ಮಾರುತಿ ಸ್ವಿಫ್ಟ್ ಡಿಸೈರ್ ಕಾರ್ ಕವರನ್ನು ಆರ್ಡರ್ ಮಾಡಿದ್ದು, ಅದು ದಿನಾಂಕ: 22-11-2021 ರಂದು ಅವರಿಗೆ ತಲುಪಿದ್ದು ಇರುತ್ತದೆ. ನಂತರದಲ್ಲಿ ಅವರು ಸದರಿ ಕಾರ ಕವರನ್ನು ತನ್ನ ಕಾರಿಗೆ ಅಳವಡಿಸಲು ಹೋದಾಗ ಅದು ಸರಿಯಾಗಿ ಹೊಂದಾಣಿಕೆ ಆಗದೇ ಇರುವುದರಿಂದ ಪಿರ್ಯಾದಿಯವರು ಅಮೆಜಾನ್ ದಲ್ಲಿ ಖರೀದಿಸಿದ್ದ ಸದರಿ ಪ್ರೊಡಕ್ಟನ್ನು ವಾಪಸ್ ಮಾಡುವ ಕುರಿತು ಅಮೆಜಾನ್ ಪಾರ್ಸೆಲ್ ಕವರ ಒಳಗಡೆ ಇದ್ದ ಕಾರ್ ಕವರ್ ಮೇಲೆ ನಮೂದಿದ್ದ Auto Fact Car Accessories ಕಂಪನಿಯ ಕಾಂಟ್ಯಾಕ್ಟ್ ನಂಬರಾದ 07428091210 ನೇದಕ್ಕೆ ಕರೆ ಮಾಡಿ ತನಗೆ ಸಪ್ಲಾಯ್ ಮಾಡಿದ್ದ ಕಾರ್ ಕವರನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ತಿಳಿಸಿದ್ದು, ಅದಕ್ಕೆ ಅವರು 5/- ರೂಪಾಯಿಯ ಟೋಕನ್ ಅಮೌಂಟ್ ಪಾವತಿಸಬೇಕಾಗುತ್ತದೆ ಎಂದು ಹೇಳಿ ಪಿರ್ಯಾದಿಯವರ ಬ್ಯಾಂಕ್ ಖಾತೆಯ ಮಾಹಿತಿಯನ್ನು ಕೇಳಿದ್ದು, ಅದರಂತೆ ಅವರು ತನ್ನ ಐ.ಸಿ.ಐ.ಸಿ.ಐ ಬ್ಯಾಂಕ್ ಖಾತೆ ಸಂಖ್ಯೆ: 1063010XXXXX ನೇದನ್ನು ಅವರಿಗೆ ನೀಡಿದ್ದು ಇರುತ್ತದೆ. ನಂತರ ದಿನಾಂಕ: 23-11-2021 ರಂದು ಪಿಯಾದಿಯು ತನ್ನ ಐ.ಸಿ.ಐ.ಸಿ.ಐ ಬ್ಯಾಂಕ್ ಖಾತೆಯನ್ನು ಪರಿಶಿಲೀಸಿ ನೋಡಿದಾಗ ಅವರ ಬ್ಯಾಂಕ್ ಖಾತೆಯಿಂದ 7,00,026/- ರೂಪಾಯಿ ಹಣ ಡೆಬಿಟ್ ಆಗಿದ್ದು ಕಂಡುಬರುತ್ತದೆ. ಈ ಕುರಿತು ತನಗೆ ಹಣವನ್ನು ವಂಚಿಸಿದ ಆರೋಪಿತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಅರವಿಂದ ತಂದೆ ಪರಮಹಂಸ ತಿವಾರಿ, ಪ್ರಾಯ-62 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ವಿನೋದಿನಿ ನಿವಾಸ, ಗೋಟೆಗಾಳಿ, ಕಾರವಾರ ರವರು ದಿನಾಂಕ: 23-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 206/2021, ಕಲಂ: 504, 353 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಸ್ವಾತಿ ನಾಯ್ಕ @ ಹೆಗಡೆ, ಸಾ|| ಮೂರುರು, ತಾ: ಕುಮಟಾ. ಇವಳು ದಿನಾಂಕ: 23-11-2021 ರಂದು 14-00 ಗಂಟೆಯಿಂದ 15-00 ಗಂಟೆಯ ನಡುವಿನ ಅವಧಿಯಲ್ಲಿ ಮಾನ್ಯ  ಜೆ.ಎಮ್.ಎಫ್.ಸಿ ನ್ಯಾಯಾಲಯದ  ಆವರಣದಲ್ಲಿ ಮತ್ತು ಕಛೇರಿಯ ಒಳಗಡೆ ಬಂದು ತನ್ನ ಮೊಬೈಲಿನಿಂದ ವಿಡಿಯೋ ಮತ್ತು ಆಡಿಯೋ ಚಿತ್ರೀಕರಣ ಮಾಡಿದ್ದು, ಆಗ ತಾಲೂಕ ಕಾನೂನು ಸೇವಾ ಸಮಿತಿಯ ಸಿಬ್ಬಂದಿಗಳು ಅವಳಿಗೆ ನ್ಯಾಯಾಲಯದ ಒಳಗಡೆ ಚಿತ್ರೀಕರಣ ಮಾಡಬಾರದಾಗಿ ತಿಳಿಸಿದರೂ ಕೂಡ ’ಆರೋಪಿತಳು ವಿಡಿಯೋ ಚಿತ್ರೀಕರಣ ಮಾಡಿ ಪಿರ್ಯಾದಿಯೊಂದಿಗೆ ಉದ್ಧಟತನದಿಂದ ನಡೆದುಕೊಂಡಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ಬೈಯ್ದು ಚೀರಾಡಿ, ಪಿರ್ಯಾದಿಯ ಹಾಗೂ ಕಾನೂನು ಸೇವಾ ಸಮಿತಿಯ ಸಿಬ್ಬಂದಿಗಳ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆತಂಕ ಪಡಿಸಿದಲ್ಲದೇ, ಈ ಹಿಂದೆಯೂ ಕೂಡ 3-4 ದಿನಗಳಿಂದ ನ್ಯಾಯಾಲಯದ ಕಛೇರಿಯ ಒಳಗೆ ಬಂದು ಕರ್ತವ್ಯ ನಿರತ ಸಿಬ್ಬಂದಿಗಳ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆತಂಕ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮಹಾಲಕ್ಷ್ಮೀ ಈಶ್ವರ ಹೆಗಡೆ, ಪ್ರಾಯ-36 ವರ್ಷ, ವೃತ್ತಿ-ಶಿರಸ್ತೇದಾರರು (ಆಡಳಿತ), ಜೆ.ಎಮ್.ಎಫ್.ಸಿ ನ್ಯಾಯಾಲಯ,  ತಾ: ಕುಮಟಾ ರವರು ದಿನಾಂಕ: 23-11-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 317/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಸಣ್ಣಕ್ಕಿ ತಂದೆ ಜಟ್ಟು ಗೌಡ, ಪ್ರಾಯ-55 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕೀಲೂರು, ಸಂಕೊಳ್ಳಿ, ಹಳದೀಪುರ, ತಾ: ಹೊನ್ನಾವರ. ಪಿರ್ಯಾದಿಯ ತಮ್ಮನಾದ ಈತನು ಮಾನಸಿಕ ಅಸ್ವಸ್ಥನಾಗಿದ್ದವನು, ದಿನಾಂಕ: 22-11-2021 ರಂದು 10-30 ಗಂಟೆಯಿಂದ ದಿನಾಂಕ: 23-11-2021 ರಂದು 09-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಹತ್ತಿರ ಇರುವ ಬೆಟ್ಟಕ್ಕೆ ಸೊಪ್ಪು ತರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವನು, ಮರಳಿ ನಮ್ಮ ಮನೆಗಾಗಲಿ ಅಥವಾ ನಮ್ಮ ಸಂಬಂಧಿಕರ ಮನೆಗಾಗಲೀ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ತಮ್ಮ ಈತನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಜಟ್ಟು ಗೌಡ, ಪ್ರಾಯ-63 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೀಲೂರು, ಸಂಕೊಳ್ಳಿ, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 23-11-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 318/2021, ಕಲಂ: 78(3)(ಎ) ಕರ್ನಾಟಕ ಪೊಲೀಸ್ ಕಾಯ್ದೆ-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಿರೀಶ ತಂದೆ ರಾಮಾ ಗೌಡ, ಪ್ರಾಯ-35 ವರ್ಷ, ವೃತ್ತಿ-ಪಾನಬೀಡಾ ಅಂಗಡಿ ವ್ಯಾಪಾರ, ಸಾ|| ಸಾಲೀಕೇರಿ, ಹಳದಿಪುರ, ತಾ: ಹೊನ್ನಾವರ, 2]. ವಿನಾಯಕ ರಾಮ ಗೌಡ, ಸಾ|| ಕೊಳಗದ್ದೆ, ಖರ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 23-11-2021 ರಂದು 11-45 ಗಂಟೆಗೆ ಹೊನ್ನಾವರ ತಾಲೂಕಿನ ಹೊನ್ನಾವರ ಪಟ್ಟಣದ ಗಂಧದಹಿತ್ಲ ರಸ್ತೆಯ ನಾಗರಕಟ್ಟೆಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡುತ್ತಿದ್ದಾಗ ದಾಳಿ ವೇಳೆ ತಾಬಾದಲ್ಲಿ 1). ಒಟ್ಟು ನಗದು ಹಣ 1,510/- ರೂಪಾಯಿ, 2). ಬಾಲ್ ಪೆನ್-01, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01 ನೇದವುಗಳೊಂದಿಗೆ ಸಿಕ್ಕಿದ್ದು, ಹೀಗೆ ಒಟ್ಟಾದ ಹಣವನ್ನು ಹಾಗೂ ಓ.ಸಿ ಚೀಟಿಯನ್ನು ಓ.ಸಿ ಬುಕ್ಕಿಯಾದ ಆರೋಪಿ 2 ನೇಯವರಿಗೆ ನೀಡುತ್ತಿದ್ದುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು, ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 23-11-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 140/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಸ್ಲಾಂ ರಜಾಕ್ ಉಸ್ತಾದ್, ಪ್ರಾಯ-50 ವರ್ಷ, ಸಾ|| ನಿಪ್ಪಾಣಿ, ಮಾಹಾರಾಷ್ಟ್ರ (ಲಾರಿ ನಂ: ಕೆ.ಎ-49/3491 ನೇದರ ಚಾಲಕ). ಈತನು ದಿನಾಂಕ: 22-11-2021 ರಂದು 23-45 ಗಂಟೆಯ ಸುಮಾರಿಗೆ ಮಂಕಿಯ ಹಕ್ಕಲಕೇರಿ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಬದಿಯಲ್ಲಿ ತಾನು ಚಲಾಯಿಸುತ್ತಿದ್ದ ಲಾರಿ ನಂ: ಕೆ.ಎ-49/3491 ನೇದರಲ್ಲಿ ಪಾರ್ಸೆಲ್ ಬಾಕ್ಸ್ ಗಳನ್ನು ಲೋಡ್ ಮಾಡಿಕೊಂಡು ಗುಜರಾತಿನಿಂದ ಮಂಗಳೂರಿಗೆ ಹೋಗಲು ಹೊರಟು ಹೊನ್ನಾವರ ಮಾರ್ಗವಾಗಿ ಲಾರಿಯನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ಲಾರಿಯ ವೇಗವನ್ನು ನಿಯಂತ್ರಿಸಲಾಗದೇ  ರಸ್ತೆಯ ಬದಿಯಲ್ಲಿನ ಹೊಂಡದಲ್ಲಿ ಲಾರಿಯನ್ನು ಇಳಿಸಿ ಪಲ್ಟಿ ಪಡಿಸಿ, ಲಾರಿಯಲ್ಲಿದ್ದ ಪಿರ್ಯಾದಿಗೆ ಸಣ್ಣಪುಟ್ಟ ಮೈಕೈಗೆ ಗಾಯನೋವು ಪಡಿಸಿದ್ದಲ್ಲದೇ, ತನಗೂ ಸಹ ತಲೆಗೆ, ಮೈಕೈಗೆ ಹಾಗೂ ಬಲಗಾಲಿಗೆ ಗಾಯನೋವು ಪಡಿಸಿಕೊಂಡು, ವಾಹನವನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಜುಕುಮಾರ ತಂದೆ ರಾಮಶಿವ, ಪ್ರಾಯ-20 ವರ್ಷ, ವೃತ್ತಿ-ಕ್ಲೀನರ್, ಸಾ|| ಲಲಗಂಜ್, ಮಿರ್ಜಾಪುರ, ಉತ್ತರ ಪ್ರದೇಶ, ಹಾಲಿ ಸಾ|| ಉಜಲವಾಡಿ, ಕೊಲ್ಲಾಪುರ, ಮಹಾರಾಷ್ಟ್ರ ರವರು ದಿನಾಂಕ: 23-11-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 144/2021, ಕಲಂ: 78(3) ಕರ್ನಾಟಕ ಪೊಲೀಸ್ ಕಾಯ್ದೆ-1963 ನೇದ್ದರ ವಿವರ...... ನಮೂದಿತ ಆರೋಪಿತರು ಜೀತೇಂದ್ರ ತಂದೆ ಶ್ರೀಧರ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ವ್ಯಾಪಾರ, ಸಾ|| ತಲಾಂದ, ತಾ: ಭಟ್ಕಳ. ಈತನು ದಿನಾಂಕ: 23-11-2021 ರಂದು 12-00 ಗಂಟೆಯ ಸಮಯಕ್ಕೆ ಭಟ್ಕಳದ ಸರ್ಪನಕಟ್ಟಾ ಕವೂರ ಕ್ರಾಸಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 80/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜೂಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 670/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸಿಕ್ಕ ಬಗ್ಗೆ ಸ||ತ|| ಕು: ರತ್ನಾ ಎಸ್. ಕುರಿ, ಪಿ.ಎಸ್.ಐ (ತನಿಖೆ), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 23-11-2021 ರಂದು 13-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 209/2021, ಕಲಂ: 8(c) ಸಹಿತ 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ರತನಲಾಲ್ ಯಾನೆ ರತನ್ ತಂದೆ ರಾಮಚಂದ್ರ ಶರ್ಮಾ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿತ್ತೂರಘರ್, ಬಡೇತಾಲಾಬ್ ಹತ್ತಿರ, ತಾ: ಕಪ್ಪಾಸನ, ಜಿ: ಉದಯಪುರ, ರಾಜಸ್ಥಾನ್ ರಾಜ್ಯ, ಹಾಲಿ ಸಾ|| ಮಂಚಿಕೇರಿ ಹೈಸ್ಕೂಲ್ ಹತ್ತಿರ, ತಾ: ಯಲ್ಲಾಪುರ. ಈತನು ಯಲ್ಲಾಪುರ ತಾಲೂಕಿನ ಬಿದ್ರಳ್ಳಿ ಬಸ್ ತಂಗುದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಯಾ ಪರವಾನಗಿ ಇಲ್ಲದೇ ಅನಧೀಕೃತವಾಗಿ ತನ್ನ ಲಾಭಕ್ಕೋಸ್ಕರ ಸುಮಾರು 7,000/- ರೂಪಾಯಿ ಮೌಲ್ಯದ 166 ಗ್ರಾಂ ಒಣಗಿದ ಗಾಂಜಾವನ್ನು ತನ್ನ ತಾಬಾದಲಿಟ್ಟುಕೊಂಡು ಮಾರಾಟ ಮಾಡಲು ನಿಂತಿದ್ದಾಗ ದಿನಾಂಕ: 23-11-2021 ರಂದು ಮಧ್ಯಾಹ್ನ 12-03 ಗಂಟೆಗೆ ಸರ್ಕಾರದ ಪರವಾಗಿ ಪಿರ್ಯಾದುದಾರರು ಪಂಚರು ಮತ್ತು ಠಾಣಾ ಸಾಕ್ಷಿದಾರ ಸಿಬ್ಬಂದಿಯವರು ಹಾಗೂ ಮಾನ್ಯ ಪ್ರಾಂಶುಪಾಲರು ಸರಕಾರಿ ಪದವಿಪೂರ್ವ ಕಾಲೇಜ್ ಮಂಚಿಕೇರಿ (ಪತ್ರಾಂಕಿತ ಅಧಿಕಾರಿ) ರವರೊಂದಿಗೆ ಕೂಡಿ ದಾಳಿ ಮಾಡಿ ಹಿಡಿದು, ಆರೋಪಿತನು ಗಾಂಜಾ ಮಾರಾಟದಿಂದ ಸಂಪಾದಿಸಿದ ನಗದು ಹಣ 730/- ರೂಪಾಯಿ ಮತ್ತು ಗಾಂಜಾ ಮಾರಾಟಕ್ಕೆ ಬಳಸಿದ ಸ್ವತ್ತಿನೊಂದಿಗೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಗೌಡರ, ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 23-11-2021 ರಂದು 13-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 115/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಗುತ್ಯ ಗೌಡ, ಪ್ರಾಯ-28 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಬಂಕನಾಳ, ತಾ: ಶಿರಸಿ. ಈತನು ದಿನಾಂಕ: 23-11-2021 ರಂದು 17-25 ಗಂಟೆಗೆ ಶಿರಸಿ ತಾಲೂಕಿನ ಬಂಕನಾಳ ಗ್ರಾಮದಲ್ಲಿರುವ ತನ್ನ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿರುವಾಗ ದಾಳಿ ಮಾಡಿದಾಗ 1). HAYWARDS CHEERS WHISKY, 90 ML ಅಂತಾ ಲೇಬಲ್ ಇರುವ ಸೀಲ್ಡ್ ಟೆಟ್ರಾ ಪ್ಯಾಕ್ ಗಳು-10, ಅ||ಕಿ|| 351.3/- ರೂಪಾಯಿ, 2). HAYWARDS CHEERS WHISKY, 90 ML ಅಂತಾ ಲೇಬಲ್ ಇದ್ದ ಮದ್ಯದ ಖಾಲಿ ಟೆಟ್ರಾ ಪ್ಯಾಕ್ ಗಳು-04, ಅ||ಕಿ|| 00.00/- ರೂಪಾಯಿ, 3). ನಗದು ಹಣ 210/- ರೂಪಾಯಿ, 4). ಪ್ಲಾಸ್ಟಿಕ್ ಗ್ಲಾಸುಗಳು-02, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಎಸ್. ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 23-11-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-11-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 37/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದಿವಾಕರ ತಂದೆ ಚಂದ್ರಶೇಖರ ಅಂಬಿಗ, ಪ್ರಾಯ-28 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಹರಿಕಂತ್ರವಾಡಾ, ಐ.ಎನ್.ಪಿ ರಸ್ತೆ, ಬೈತಕೋಲ, ಕಾರವಾರ. ಪಿರ್ಯಾದಿಯ ಅಣ್ಣನಾದ ಈತನು ಬೈತಕೋಲದಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದವನು, ದಿನಾಂಕ: 22-11-2021 ರಂದು ರಾತ್ರಿ 21-00 ಘಂಟೆಗೆ ಬೀಸುವ ಬಲೆ ತೆಗೆದುಕೊಂಡು ಮೀನು ಹಿಡಿಯಲು ಅರಬ್ಬಿ ಸಮುದ್ರಕ್ಕೆ ಹೋದವನು, ಆಕಸ್ಮಾತ್ ಆಗಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು, ದಿನಾಂಕ: 23-11-2021 ರಂದು ಬೆಳಿಗ್ಗೆ 10-15 ಘಂಟೆಯ ಸಮಯಕ್ಕೆ ಬೈತಕೋಲ ಗಣಪತಿ ವಿಸರ್ಜನೆ ಮಾಡುವ ಸ್ಥಳದಲ್ಲಿ ಸಮುದ್ರದ ದಡದ ಬಳಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುತ್ತಾನೆ. ತನ್ನ ಅಣ್ಣನು ಸಮುದ್ರದಲ್ಲಿ ಬಲೆ ಬೀಸಿ ಮೀನು ಹಿಡಿಯುವಾಗ ಆಕಸ್ಮಾತ್ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ಕಂಡುಬರುತ್ತಿದ್ದು, ಇದರ ಹೊರತು ತನ್ನ ಅಣ್ಣನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸೂರಜ ತಂದೆ ಚಂದ್ರಶೇಖರ ಅಂಬಿಗ, ಪ್ರಾಯ-26 ವರ್ಷ, ವೃತ್ತಿ-ಹೋಮಗಾರ್ಡ್, ಸಾ|| ಹರಿಕಂತ್ರವಾಡಾ, ಐ.ಎನ್.ಪಿ ರಸ್ತೆ, ಬೈತಕೋಲ, ಕಾರವಾರ ರವರು ದಿನಾಂಕ: 23-11-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 33/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸುಬ್ರಹ್ಮಣ್ಯ ತಂದೆ ನಾರಾಯಣ ಸ್ವಾಮಿ, ಪ್ರಾಯ-60 ವರ್ಷ, ಸಾ|| ಸಿದ್ದನಬಾವಿ, ತಾ: ಕುಮಟಾ. ಪಿರ್ಯಾದಿಯ ತಂದೆಯಾದ ಇವರು ವಿಪರೀತ ಸರಾಯಿ ಕುಡಿಯುವ ಚಟದವರಿದ್ದು, ಅವರು ಕಳೆದ 7 ವರ್ಷದಿಂದ ಅನಾರೋಗ್ಯದಿಂದ ಚಿಕಿತ್ಸೆ ಸಹ ಪಡೆಯುತ್ತಿದ್ದು, ಅವರು ದಿನಾಂಕ: 23-11-2021 ರಂದು 12-30 ಗಂಟೆಯಿಂದ 16-00 ಗಂಟೆಯ ನಡುವಿನ ಅವಧಿಯಲ್ಲಿ ಕುಮಟಾ ಹೊಸ ಬಸ್ ಸ್ಟ್ಯಾಂಡ್ ಹತ್ತಿರ ಇರುವ ಪ್ರೀಮಿಯರ್ ವೈನ್ ಶಾಪ್ ಎದುರಿಗೆ ಅನಾರೋಗ್ಯದಿಂದಲೋ ಅಥವಾ ಹೃದಯಾಘಾತದಿಂದಲೋ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಸುಬ್ರಹ್ಮಣ್ಯ ಸ್ವಾಮಿ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಸಿದ್ದನಬಾವಿ, ತಾ: ಕುಮಟಾ ರವರು ದಿನಾಂಕ: 23-11-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 24-11-2021 02:30 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080