ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 23-10-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 177/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಶೇಖರ ತಂದೆ ಬೊಮ್ಮಯ್ಯ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಹೊಟೇಲಿನಲ್ಲಿ ಸಪ್ಲಾಯರ್ ಕೆಲಸ, ಸಾ|| ಕಡ್ಲೆ, ಹೊಲನಗದ್ದೆ, ತಾ: ಕುಮಟಾ. ಪಿರ್ಯಾದುದಾರ ಗಂಡನಾದ ಇವರು 2003 ನೇ ಸಾಲಿನಲ್ಲಿ ಕುಮಟಾದ ಕಾಮತ್ ಹೊಟೇಲಿನಲ್ಲಿ ಸಪ್ಲಾಯರ್ ಕೆಲಸವನ್ನು ಮಾಡಿಕೊಂಡಿದ್ದವನು, ದಿನಾಂಕ: 24-05-2003 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ಸುಮಾರು 17 ವರ್ಷದ ಹಿಂದೆ ಹೊಟೇಲ್ ಕೆಸಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಹೊಟೇಲ್ ಕೆಲಸಕ್ಕೆ ಹೋಗದೇ ಈವರೆಗೂ ಪರತ್ ಮನೆಗೆ ಬಾರದೇ ಎಲ್ಲಿಯೂ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದವನನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಕುಸುಮಾ ಶೇಖರ ನಾಯ್ಕ ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಡ್ಲೆ, ತಾ: ಕುಮಟಾ ರವರು ದಿನಾಂಕ: 23-10-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 124/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ಮಂಜಪ್ಪ ನಾಯ್ಕ, ಪ್ರಾಯ-40 ವರ್ಷ, ಸಾ|| ಹೆಬಳೆ, ತಾ: ಭಟ್ಕಳ (ಪ್ಯಾಸೆಂಜರ್ ಆಟೋ ರಿಕ್ಷಾ ನಂ: ಕೆ.ಎ-47/1349 ನೇದರ ಚಾಲಕ). ಈತನು ದಿನಾಂಕ: 23-10-2021 ರಂದು ಮಧ್ಯಾಹ್ನ 12-20 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಪ್ಯಾಸೆಂಜರ್ ಆಟೋ ರಿಕ್ಷಾ ನಂ: ಕೆ.ಎ-47/1349 ನೇದನ್ನು ಬೇಲೆಗದ್ದೆ ಕಡೆಯಿಂದ ಹೆಬಳೆ-ತೆಂಗಿನಗುಂಡಿ ಮುಖ್ಯ ರಸ್ತೆ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಬೇಲೆಗದ್ದೆಯ 2 ನೇ ಕ್ರಾಸ್ ಹತ್ತಿರ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಪ್ಯಾಸೆಂಜರ್ ಆಟೋ ರಿಕ್ಷಾ ನಂ: ಕೆ.ಎ-47/ಎ-0950 ನೇದನ್ನು ನೋಡಿಯೂ ಸಹ ಒಮ್ಮೇಲೆ ಬಂದು ಪಿರ್ಯಾದಿಯವರ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಡಿಕ್ಕಿ ಹೊಡೆದ ರಭಸಕ್ಕೆ ಪಿರ್ಯಾದಿಯವರ ಆಟೋ ರಿಕ್ಷಾ ಪ್ರಯಾಣಿಕರ ಸಮೇತ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಈ ಅಪಘಾತದಲ್ಲಿ ಪಿರ್ಯಾದಿಯವರ ತಲೆಯ ಎಡಭಾಗಕ್ಕೆ ಪೆಟ್ಟಾಗಿರುತ್ತದೆ ಮತ್ತು ಪ್ರಯಾಣಿಕರಾದ 1). ಲೀಲಾ ಲಕ್ಷ್ಮಣ ನಾಯ್ಕ, ಪ್ರಾಯ-40 ವರ್ಷ, ಸಾ|| ಗಾಂಧಿನಗರ, ಹೆಬಳೆ, ತಾ: ಭಟ್ಕಳ ಇವರಿಗೆ ಕಾಲಿಗೆ, 2). ಬವಿತಾ ವೆಂಕಟರಮಣ ನಾಯ್ಕ, ಪ್ರಾಯ-3 ವರ್ಷ, ಸಾ|| ಸೊಡಿಗದ್ದೆ, ತಾ: ಭಟ್ಕಳ ಇವರಿಗೆ ಕಾಲಿಗೆ ಮತ್ತು 3). ಗಾನಿಕಾ ಲಕ್ಷ್ಮಣ ನಾಯ್ಕ, ಸಾ|| ಮೂಡಶಿರಾಲಿ, ತಾ: ಭಟ್ಕಳ ಇವರಿಗೆ ತಲೆಗೆ ಮತ್ತು ಕಾಲಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನಾಗಪ್ಪ ತಂದೆ ಮಾಸ್ತಿ ನಾಯ್ಕ ಪ್ರಾಯ-54 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ತೆಂಗಿನಗುಂಡಿ, ತಾ: ಭಟ್ಕಳ ರವರು ದಿನಾಂಕ: 23-10-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮುಗುಡಸಾಬ್ ತಂದೆ ಇಸ್ಮಾಯಿಲ್ ಸಾಬ್ ತಿಗರೊಳ್ಳಿ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪೋಸ್ಟ್ ಆಫೀಸ್ ಮುಂದೆ, ಬಾಂಬೂ ಗೇಟ್ ಹತ್ತಿರ, ತಾ: ದಾಂಡೇಲಿ, 2]. ಜೊಸೇಫ್ ತಂದೆ ಅಂತೋನಿ ಹಡಗಲಿ, ಪ್ರಾಯ-33 ವರ್ಷ, ವೃತ್ತಿ-ಚಾಲಕ, ಸಾ|| ಅಳ್ನಾವರ, ತಾ&ಜಿ: ಧಾರವಾಡ, 3]. ಗಣೇಶ ಗೊಂದಳಿ, 4]. ಮಾಂತೇಶ ಗೌಡರ, 5]. ಬಾಬು, 6]. ಮಂಜು, ಸಾ|| (ಎಲ್ಲರೂ) ಅಳ್ನಾವರ, ತಾ&ಜಿ: ಧಾರವಾಡ. ಈ ನಮೂದಿತ ಆರೋಪಿತರು ದಿನಾಂಕ: 23-10-2021 ರಂದು 17-10 ಗಂಟೆಗೆ ದಾಂಡೇಲಿ ತಾಲೂಕಿನ ನಾನಾಕೆಸರೋಡಾ ಗ್ರಾಮದಿಂದ ಸುಮಾರು 1 ಕೀ.ಮೀ ದೂರದಲ್ಲಿ ತಾವರಗಟ್ಟಿ ಕಡೆಗೆ ಹೋಗುವ ಡಾಂಬರ್ ರಸ್ತೆಗೆ ಅಡ್ಡಲಾಗಿ ಇರುವ ಬ್ರಿಡ್ಜ್ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಅಂದರ್-ಬಾಹರ್ ಎಂಬ ಜೂಗಾರಾಟವನ್ನು ಆಡುತ್ತಿದ್ದಾಗ ದಾಲಿಯ ವೇಳೆ ಆರೋಪಿ 1 ರಿಂದ 2 ನೇಯವರು ಸ್ಥಳದಲ್ಲಿಯೇ ಸಲಕರಣೆಗಳಾದ 1). ನಗದು ಹಣ 17,340/- ರೂಪಾಯಿ, 2). ಇಸ್ಪೀಟ್ ಎಲೆಗಳು-52, ಅ||ಕಿ|| 00.00/- ರೂಪಾಯಿ, 3). ದಿನಪತ್ರಿಕೆ ಮಂಡ-1, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕಿದ್ದು ಹಾಗೂ ಆರೋಪಿ 3 ರಿಂದ 6 ನೇಯವರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಐ. ಆರ್. ಗಡ್ಡೇಕರ್, ಪಿ.ಎಸ್.ಐ (ಕಾ&ಸು), ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 23-10-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 189/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗೋಪಾಲ ತಂದೆ ಯದುನಂದನ್ ಸಿಂಗ್, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಚುಹಾನ್, ತಾ: ಕರಘಹರ್, ಜಿ: ರೂಹಸ್ತಸತಮ್ಮ, ಬಿಹಾರ ರಾಜ್ಯ (ಟ್ರಕ್ ವಾಹನ ನಂ: ಜಿ.ಎ-12/ಟಿ–0387 ನೇದರ ಚಾಲಕ). ಈತನು ದಿನಾಂಕ: 23-10-2021 ರಂದು 15-45 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಟ್ರಕ್ ವಾಹನ ನಂ: ಜಿ.ಎ-12/ಟಿ–0387 ನೇದನ್ನು ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಅದೇ ವೇಳೆ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ತನ್ನ ರಸ್ತೆಯ ಸೈಡಿನಿಂದ ಹೋಗುತ್ತಿದ್ದ ಕಾರ್ ನಂ: ಕೆ.ಎ-25/ಝೆಡ್-5926 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಕೇಶವ ತಂದೆ ವೆಂಕಟ ಪೂಜಾರಿ, ಪ್ರಾಯ-42 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಅಧ್ಯಾಪಕನಗರ, ಸಿದ್ರಾಮೇಶ್ವರ ನಗರ, ತಾ: ಹುಬ್ಬಳ್ಳಿ, ಜಿ: ಧಾರವಾಡ ರವರು ದಿನಾಂಕ: 23-10-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 379, 511 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಿನನ್ ಫರ್ನಾಂಡೀಸ್, 2]. ಗುರುದಾಸ ಮಾಪ್ಸೇಕರ ಹಾಗೂ ಇನ್ನೂ ಇಬ್ಬರು, ಸಾ|| (ಎಲ್ಲರೂ) ರಾಮನಗರ, ತಾ: ಜೋಯಿಡಾ. ಪಿರ್ಯಾದಿಯವರು ತಮ್ಮ ಬಾಬ್ತು 05 ಟಿಪ್ಪರ್ ವಾಹನಗಳನ್ನು ಹೊಂದಿದ್ದು, ಅವರು ಟ್ರಾನ್ಸಪೋರ್ಟ್ ವ್ಯವಹಾರ ಮಾಡಿಕೊಂಡಿದ್ದವರು, ತಮ್ಮ 05 ಟಿಪ್ಪರ್ ವಾಹನಗಳನ್ನು ರಾಮನಗರದ ಇಂದಿರಾ ಕಾಲೋನಿಯಲ್ಲಿರುವ ತಮ್ಮ ಮನೆಯ ಎದುರುಗಡೆ ನಿಲ್ಲಿಸಿಕೊಂಡಿರುವಾಗ ಕಳೆದ ದಿನಾಂಕ: 02-09-2021 ರಿಂದ 19-09-2021 ನಡುವಿನ ಅವಧಿಯಲ್ಲಿ ಹಂತ ಹಂತವಾಗಿ ಸದರಿ ಟಿಪ್ಪರ್ ವಾಹನಗಳಿಂದ ಒಟ್ಟು 330 ಲೀಟರ್ ಡೀಸೆಲ್ ಕಳ್ಳತನವಾಗಿದ್ದು, ಕಳ್ಳರನ್ನು ಹಿಡಿಯಬೇಕು ಅಂತಾ ಇರುವಾಗ ದಿನಾಂಕ: 23-10-2021 ರಂದು ಬೆಳಗಿನ ಜಾವ 04-00 ಗಂಟೆಯ ಸುಮಾರಿಗೆ ಪಿರ್ಯಾದಿಯವರು ತಮ್ಮ ಮನೆಯಲ್ಲಿ ಮಲಗಿಕೊಂಡಿರುವಾಗ ಯಾರೋ ಸಣ್ಣಗೆ ಮಾತನಾಡುತ್ತಿರುವುದನ್ನು ಕೇಳಿ ಬ್ಯಾಟರಿ ಬೆಳಕು ಹಾಕಿಕೊಂಡು ಹೊರಗೆ ಬಂದು ನೋಡಿದಾಗ ನಮೂದಿತ ಆರೋಪಿತರು ಅವರನ್ನು ಕಂಡು ತಾವು ತಂದಿದ್ದ ಮೋಟಾರ್ ಸೈಕಲ್ ಮೇಲೆ ಪರಾರಿಯಾದಾಗ ಪಿರ್ಯಾದಿಯವರು ಟಿಪ್ಪರ್ ವಾಹನಗಳ ಹತ್ತಿರ ಹೋಗಿ ನೋಡಿದಾಗ ಟಿಪ್ಪರ್ ವಾಹನ ನಂ: ಕೆ.ಎ-22/ಡಿ-3425 ನೇದರ ಡೀಸೆಲ್ ಟ್ಯಾಂಕಿನ ಮುಚ್ಚಳ ತೆಗೆಯಲಾಗಿತ್ತು. ಡೀಸೆಲ್ ಟ್ಯಾಂಕ್ ಹತ್ತಿರ ಒಂದು ಪ್ಲಾಸ್ಟಿಕ್ ಕ್ಯಾನ್, ಪೈಪ್, ಸ್ಕ್ರ್ಯೂ ಡ್ರೈವರ್ ಮತ್ತು ಸ್ಪ್ಯಾನರ್ ಗಳು ಬಿದ್ದುಕೊಂಡಿರುವುದನ್ನು ನೋಡಿ ಅವರು ಡೀಸೆಲ್ ಕಳ್ಳತನ ಮಾಡಿಕೊಂಡು ಹೋಗಲು ಬಂದಿರುವ ಬಗ್ಗೆ ಖಾತ್ರಿಯಾಗಿ ತಮ್ಮ ಗೆಳೆಯವರನ್ನು ಕರೆದುಕೊಂಡು ಕಳ್ಳತನ ಮಾಡಲು ಬಂದಿದ್ದ ಆರೋಪಿತರ ಪತ್ತೆಗೆ ಪ್ರಯತ್ನಿಸಿ ಸಿಗದೇ ಇರುವ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ದಿಗಂಬರ ಗಾಂಧಳೆ, ಪ್ರಾಯ-34 ವರ್ಷ, ವೃತ್ತಿ-ಟ್ರಾನ್ಸಪೋರ್ಟ್ ವ್ಯವಹಾರ, ಸಾ|| ಇಂದಿರಾ ಕಾಲೋನಿ, ಸರ್ಕಾರಿ ಹೈಸ್ಕೂಲ್ ಹತ್ತಿರ, ರಾಮನಗರ, ತಾ: ಜೋಯಿಡಾ ರವರು ದಿನಾಂಕ: 23-10-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-10-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 34/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಜನಾಬಾಯಿ ಕೋಂ. ಖಾನು ಶಳಕೆ, ಪ್ರಾಯ-46 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಖಾರೆವಾಡಾ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದಿಯವರ ಹೆಂಡತಿಯಾದ ಇವರು ತನ್ನ ಗಂಡ ಮತ್ತು ನಾಲ್ಕು ಜನ ಮಕ್ಕಳೊಂದಿಗೆ ಕೃಷಿ/ಕೂಲಿ ಕೆಲಸ  ಮಾಡಿಕೊಂಡು ಇದ್ದವಳು, ದಿನಾಂಕ: 23-10-2021 ರಂದು ಮಧ್ಯಾಹ್ನ ತನ್ನ ಗಂಡನೊಂದಿಗೆ ತನ್ನ ಗ್ರಾಮದ ಸಮೀಪ ಇರುವ ತಮ್ಮ ಅತಿಕ್ರಮಣ ಜಮೀನಿನಿಂದ ದನಗಳಿಗೆ ಹುಲ್ಲು ತರಲು ಹೋಗಿ ತನ್ನ ಅತಿಕ್ರಮಣ ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿರುವಾಗ ಮಳೆ ಹನಿ ಬೀಳಲು ಪ್ರಾರಂಭವಾಗಿದ್ದರಿಂದ ಕೊಯ್ದ ಹುಲ್ಲು ಕಟ್ಟಿಕೊಂಡು ಮರಳಿ ತನ್ನ ಅತಿಕ್ರಮಣ ಹೊಲದಿಂದ ಖಾರೆವಾಡಾ ಗ್ರಾಮದ ತನ್ನ ಮನೆಗೆ ನಡೆದುಕೊಂಡು ಬರುತ್ತಿರುವಾಗ ಸಾಯಂಕಾಲ 04-30 ಗಂಟೆಗೆ ಶ್ರೀ ಬೀರು ಪಾಂಡ್ರಮಿಸೆ ರವರ ಹೊಲದ ಸಮೀಪ ತಲುಪಿದಾಗ ಸುರಿದ ಭಾರೀ ಮಳೆಯಲ್ಲಿ ಮೃತಳಿಗೆ ಸಿಡಿಲು ಬಡಿದು ಬಲಗೆನ್ನೆ ಮತ್ತು ಎಡ ಪಕ್ಕೆಲಬುಗಳ ಕೆಳಗೆ ಆದ ಭಾರೀ ಸುಟ್ಟ ಗಾಯದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಖಾನು ತಂದೆ ಸಿದ್ದು ಶಳಕೆ, ಪ್ರಾಯ-48 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಖಾರೆವಾಡಾ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 23-10-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 25-10-2021 06:36 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080