ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 23-09-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 139/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-25/ಎಫ್-1011 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 21-09-2021 ರಂದು ಬಾಬ್ತು ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-25/ಎಫ್-1011 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಮಧ್ಯಾಹ್ನ 15-30 ಗಂಟೆಗೆ ಅಂಕೋಲಾದ ಬಾಳೇಗುಳಿ  ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಹತ್ತಿರ ಎದುರಿನಿಂದ ಯಾವುದೋ ವಾಹನವನ್ನು ಬರುತ್ತಿರುವುದನ್ನು ನೋಡಿಯೂ ಕೂಡಾ ಬಸ್ಸಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳದೇ, ಬಸ್ಸಿನ ಬಲಬದಿಯ ಕೊನೆಯ ಸೀಟಿನ ಕಿಡಕಿಯ ಹತ್ತಿರ ಕುಳಿತ ಪಿರ್ಯಾದಿಯ ಅಣ್ಣ ಶ್ರೀ ನದೀಮ್ ತಂದೆ ಬಸೀರ್ ಅಹಮ್ಮದ್ ತಾವರಗಿ, ಪ್ರಾಯ-33 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಟಿಪ್ಪುನಗರ, ತಾ: ಹಿರೇಕೆರೂರು, ಜಿ: ಹಾವೇರಿ, ಇವನ ಬಲಗೈಗೆ ಎದುರಿನಿಂದ ಬರುತ್ತಿರುವ ಯಾವುದೋ ಲಾರಿ ತಾಗುವಂತೆ ಮಾಡಿ ಅಪಘಾತ ಪಡಿಸಿ, ಪಿರ್ಯಾದಿಯ ಅಣ್ಣ ನದೀಮ್ ಇವನ ಬಲಗೈ ಮುರಿದು ಭಾರೀ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಹಬಾಜ್ ತಂದೆ ಬಸೀರ್ ಅಹಮ್ಮದ್ ತಾವರಗಿ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಟಿಪ್ಪುನಗರ, ತಾ: ಹಿರೇಕೆರೂರು, ಜಿ: ಹಾವೇರಿ ರವರು ದಿನಾಂಕ: 23-09-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 246/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಅನಿತಾ ಕೋಂ. ಅನಂತ ಪೈ, ಪ್ರಾಯ-48 ವರ್ಷ, ವೃತ್ತಿ-ಗೃಹಿಣಿ, ಸಾ|| ನಡುವಿನಕೇರಿ, ಹಳದೀಪುರ, ತಾ: ಹೊನ್ನಾವರ. ಪಿರ್ಯಾದುದಾರರ ಹೆಂಡತಿಯಾದ ಇವರು ದಿನಾಂಕ: 22-09-2021 ರಂದು ಮಧ್ಯಾಹ್ನ 14-15 ಗಂಟೆಗೆ ‘ತಾನು ಕುಮಟಾದ ಸರಕಾರಿ ಆಸ್ಪತ್ರೆಗೆ ಹೋಗಿ ಬರುತ್ತೇನೆ‘ ಅಂತ ಹೇಳಿ ಹೋದವರು, ಈವರೆಗೆ ವಾಪಸ್ ಮನೆಗೆ ಬಾರದೇ ತನ್ನ ಇರುವಿಕೆಯ ಬಗ್ಗೆಯೂ ಸಹ ತಿಳಿಸದೆ ಕಾಣೆಯಾದ ಬಗ್ಗೆ ಪಿರ್ಯಾದಿ ಶ್ರೀ ಅನಂತ ತಂದೆ ಗೋಪಾಲ ಪೈ, ಪ್ರಾಯ-61 ವರ್ಷ, ವೃತ್ತಿ-ಎಲೆ ಅಡಿಕೆ ವ್ಯಾಪಾರ, ಸಾ|| ನಡುವಿನಕೇರಿ, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 23-09-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 117/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಶ ಬಾಯ್ ತಂದೆ ಬಿಲಾ ಬಾಯ್ ಬೂರಿಯಾ, ಸಾ|| ಗುಜರಾತ (ಜೆ.ಸಿ.ಬಿ ವಾಹನ ನಂ: ಜಿ.ಜೆ-10/ಸಿ.ಇ-0745 ನೇದರ ಚಾಲಕ). ಈತನು ದಿನಾಂಕ: 22-09-2021 ರಂದು ರಾತ್ರಿ 08-45 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಜೆ.ಸಿ.ಬಿ ವಾಹನ ನಂ: ಜಿ.ಜೆ-10/ಸಿ.ಇ-0745 ನೇದನ್ನು ಭಟ್ಕಳ ಕಡೆಯಿಂದ ಶಿರಾಲಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಶಿರಾಲಿಯ ಸರ್ಕಲಿನಲ್ಲಿ ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಲಾರಿ ನಂ: ಎಚ್.ಆರ್-55/ಎ.ಜಿ-0998 ನೇದು ಬರುತ್ತಿರುವುದನ್ನು ನೋಡಿಯೂ ಸಹ ಒಮ್ಮೇಲೆ ತನ್ನ ಜೆ.ಸಿ.ಬಿ ವಾಹನವನ್ನು ಯು-ಟರ್ನ್ ತೆಗೆದುಕೊಂಡಾಗ ಜೆ.ಸಿ.ಬಿ ವಾಹನದ ಹಿಂಬದಿಯ ಭಾಗ ಲಾರಿಯ ಮುಂದಿನ ಬಂಪರಿಗೆ ತಾಗಿದ ಪರಿಣಾಮ ಡಿಕ್ಕಿಯ ರಭಸಕ್ಕೆ ಜೆ.ಸಿ.ಬಿ ವಾಹನ ತಿರುಗಿ ರಸ್ತೆ ದಾಟಲು ನಿಂತುಕೊಂಡಿದ್ದ ಪಾದಚಾರಿ ಶ್ರೀಮತಿ ಸುಜಾತಾ ಶ್ರೀಧರ ಮೊಗೇರ, ಪ್ರಾಯ-38 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಮುಂಗ್ರಿ ಮನೆ, ಅಳ್ವೆಕೋಡಿ, ಶಿರಾಲಿ, ತಾ: ಭಟ್ಕಳ ಇವಳ ಎರಡು ಕಾಲುಗಳಿಗೆ ಬಡಿದು ತೀವ್ರ ರಕ್ತಗಾಯವಾಗಿ ಹೆಚ್ಚಿನ ಉಪಚಾರಕ್ಕೆ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಬಗ್ಗೆ ಪಿರ್ಯಾದಿ ಶ್ರೀ ಭಾಸ್ಕರ ತಂದೆ ವೆಂಕಟ್ರಮಣ ಮೊಗೇರ, ಪ್ರಾಯ-48 ವರ್ಷ, ವೃತ್ತಿ-ಮೀನುಗಾರಿಕೆ ಕೆಲಸ, ಸಾ|| ಮುಂಗ್ರಿ ಮನೆ, ಅಳ್ವೆಕೋಡಿ, ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 23-09-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 127/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರಾಘವೇಂದ್ರ @ ಬಾಬು ತಂದೆ ರಾಮಾ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಕಾರಗದ್ದೆ, 2 ನೇ ಕ್ರಾಸ್, ತಾ: ಭಟ್ಕಳ. ಈತನು ದಿನಾಂಕ: 23-09-2021 ರಂದು 17-30 ಗಂಟೆಯ ಸಮಯಕ್ಕೆ ಭಟ್ಕಳ ಶಹರದ ಸಾಗರ ರಸ್ತೆಯ ತಾಲೂಕಾ ಸರಕಾರಿ ಆಸ್ಪತ್ರೆಗೆ ಹೋಗುವ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪಾಸ್ ಯಾ ಪರ್ಮಿಟ್ ಇಲ್ಲದೇ 1). BAGPIPER WHISKY ಎಂಬ ಹೆಸರಿನ ಸರಾಯಿ ಪ್ಯಾಕೆಟ್ ಗಳು-20 (ಅ|||ಕಿ|| 2,120/- ರೂಪಾಯಿ), 2). 180 ML ನ OLD TAVERN Whisky ಎಂಬ ಹೆಸರಿನ ಸರಾಯಿ ಪ್ಯಾಕೆಟ್ ಗಳು-15 (ಅ|||ಕಿ|| 1,290/- ರೂಪಾಯಿ), 3). 90 ML ನ Haywards Whisky ಎಂಬ ಹೆಸರಿನ ಸರಾಯಿ ಪ್ಯಾಕೆಟ್ ಗಳು-25 (ಅ|||ಕಿ|| 875/- ರೂಪಾಯಿ), 4). 90 ML ನ OLD TAVERN Whisky ಎಂಬ ಹೆಸರಿನ ಸರಾಯಿ ಪ್ಯಾಕೆಟ್ ಗಳು-10 (ಅ|||ಕಿ|| 530/- ರೂಪಾಯಿ), 5). 180 ML ನ Haywards Whisky ಎಂಬ ಹೆಸರಿನ ಸರಾಯಿ ಪ್ಯಾಕೆಟ್ ಗಳು-14 (ಅ|||ಕಿ|| 980/- ರೂಪಾಯಿ) ಹಾಗೂ 6). ಪಾಲಿಥಿನ್ ಚೀಲ-02 (ಅ|||ಕಿ|| 00.00/- ರೂಪಾಯಿ) ಹೀಗೆ ಸುಮಾರು 5,795/- ರೂಪಾಯಿ ಕಿಮ್ಮತ್ತಿನ ಕರ್ನಾಟಕ ರಾಜ್ಯದ ಸರಾಯಿ ಪ್ಯಾಕೆಟ್ ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ತಾಬಾದಲ್ಲಿ ಇಟ್ಟುಕೊಂಟು ಸಾಗಾಟ ಮಾಡುವ ತಯಾರಿಯಲ್ಲಿದ್ದಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕು: ಸುಮಾ ಬಿ, ಡಬ್ಲ್ಯೂ.ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 23-09-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92/2021, ಕಲಂ: 323, 324, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮುಕುಂದ ಬೀರಪ್ಪ ನಾಯ್ಕ, 2]. ಆದರ್ಶ ಮುಕುಂದ ನಾಯ್ಕ, ಸಾ|| (ಇಬ್ಬರೂ) ಕಲಕರಡಿ, ತಾ: ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯ ಸ್ವಂತ ಅಣ್ಣನಿರುತ್ತಾನೆ. ಆರೋಪಿತರ ಮನೆಯಲ್ಲಿ ಈಗ ಕಳೆದ 15 ದಿನಗಳ ಹಿಂದೆ ಕೆಲವು ನೀರಿನ ಪೈಪ್ ಗಳು ಕಾಣೆಯಾಗಿದ್ದು, ಅದನ್ನು ಪಿರ್ಯಾದಿಯ ಮಕ್ಕಳಾದ ಗಾಯಾಳು ಚೇತನ ಮತ್ತು ಮದನ ಇವರುಗಳೇ ತೆಗೆದುಕೊಂಡಿರುತ್ತಾರೆ ಅಂತಾ ಆರೋಪಿತರು ಪಿರ್ಯಾದಿಯ ಮಕ್ಕಳ ಮೇಲೆ ದ್ವೇಷದಿಂದ ಇದ್ದವರು, ದಿನಾಂಕ: 23-09-2021 ರಂದು ಮಧ್ಯಾಹ್ನ 03-00 ಗಂಟೆಗೆ ಚೇತನ ಮತ್ತು ಮದನ ಇವರುಗಳು ಕೂಡಿಕೊಂಡು ರೇಷನ್ ತರಲು ಅಂಗಡಿಗೆ ಹೋಗುತ್ತಿರುವಾಗ ಹನಮಂತ ದೇವಸ್ಥಾನ ಎದುರು ನಮೂದಿತ ಆರೋಪಿತರುಗಳು ಪಿರ್ಯಾದಿಯ ಮಕ್ಕಳನ್ನು ಅಡ್ಡಗಟ್ಟಿ ತಡೆದು, ‘ನಮ್ಮ ಪೈಪ್ ಗಳನ್ನು ಯಾಕೆ ತೆಗೆದುಕೊಂಡೀರಿ?’ ಅಂತಾ ಹೇಳಿದವರೇ ಒಮ್ಮೇಲೆ ಮೈಮೇಲೆ ಏರಿ ಬಂದು ಕೈಯಿಂದ ಹೊಡೆದರು. ಆಗ ಪಿರ್ಯಾದಿಯ ಮಕ್ಕಳು ಸಮಾಧಾನದಿಂದ ‘ಯಾಕೆ ಈ ರೀತಿ ಮಾಡುತ್ತಿದ್ದೀರಿ?’ ಅಂತಾ ಕೇಳುತ್ತಿರುವಾಗಲೇ ಆರೋಪಿ 2 ನೇಯವನು ಕುಡುಗೋಲಿನಿಂದ ಚೇತನ ಈತನಿಗೆ ಎಡಗೈಗೆ, ತಲೆಗೆ ಮತ್ತು ಬಲಭುಜದ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಮತ್ತು ಆರೋಪಿ 1 ನೇಯವನು ಮದನ ಈತನಿಗೆ ಕುಡುಗೋಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದಲ್ಲದೇ, ಕಾಲಿನಿಂದ ಒದ್ದು ನೆಲಕ್ಕೆ ದೂಡಿ ಕೆಡವಿ, ಕಾಲಿನಿಂದ ತುಳಿದು ‘ಇವತ್ತು ನೀವು ತಪ್ಪಿಸಿಕೊಂಡಿರಿ. ಇನ್ನೊಮ್ಮೆ ಒಬ್ಬರೇ ಸಿಕ್ಕಲ್ಲಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ಭೈರಪ್ಪ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಲಕರಡಿ, ಪೋ: ಅಂಡಗಿ, ತಾ: ಶಿರಸಿ ರವರು ದಿನಾಂಕ: 23-09-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 23-09-2021

at 00:00 hrs to 24:00 hrs

 

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 21/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾಗರಾಜ ತಂದೆ ದಾಮೋದರ ಪೈ, ಪ್ರಾಯ-61 ವರ್ಷ, ವೃತ್ತಿ-ಹೊಟೇಲ್ ಅಡುಗೆ ಕೆಲಸ, ಸಾ|| ಬಿಜ್ಜೂರು, ಗೋಕರ್ಣ, ತಾ: ಕುಮಟಾ. ಈತನು ಪಿರ್ಯಾದಿಯ ಹೆಂಡತಿಯ ಸಹೋದರನಾಗಿದ್ದು, ದಿನಾಂಕ: 23-09-2021 ರಂದು ಮಧ್ಯರಾತ್ರಿಯಿಂದ ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಕುಡಿದ ನಶೆಯಲ್ಲಿ ಕುಮಟಾ ತಾಲೂಕಿನ ಬಿಜ್ಜೂರ ಗ್ರಾಮದ ತನ್ನ ಮನೆ ಪಕ್ಕದಲ್ಲಿ ಹಾಯ್ದು ಹೋಗಿರುವ ನೀರು ನಿಂತಿರುವ ಕಾಲು ದಾರಿಯಲ್ಲಿ ಹೋಗುತ್ತಿದ್ದಾಗ ಆಯ ತಪ್ಪಿ ಬಿದ್ದು ಮೃತಪಟ್ಟಿರುತ್ತಾನೆ, ಇದರ ಹೊರತು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ರಾಜಾರಾಮ ಪೈ, ಪ್ರಾಯ-62 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಚಿನ್ನದಕೇರಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 23-09-2021 ರಂದು 09-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 35/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಸುಮಾರು 45 ರಿಂದ 50 ವರ್ಷದ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ಹೊನ್ನಾವರದ ಬಂದರ್ ರಸ್ತೆಯಲ್ಲಿರುವ ತನ್ನ ಬಾಬ್ತು ತುಳಸಿ ಫಾರ್ಮ್ ಮೆಡಿಕಲ್ ಶಾಫ್ ಎದುರು ಮೆಟ್ಟಿಲಿನ ಮೇಲೆ ದಿನಾಂಕ: 22-09-2021 ರಂದು 21-30 ಗಂಟೆಯಿಂದ ದಿನಾಂಕ: 23-09-2021 ರಂದು 09-30 ಗಂಟೆಯ ನಡುವಿನ ಅವಧಿಯಲ್ಲಿ ಸುಮಾರು 45 ರಿಂದ 50 ವರ್ಷದ ಅಪರಿಚಿತ ಗಂಡಸು ಈತನು ಅನಾರೋಗ್ಯದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಮೃತಪಟ್ಟಿದ್ದು, ಸದರಿ ಮೃತದೇಹದ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸುವ ಬಗ್ಗೆ ಪಿರ್ಯಾದಿ ಶ್ರೀ ನಾಗೇಶ ತಂದೆ ರಘುನಾಥ ಫ್ರಭು, ಪ್ರಾಯ-50 ವರ್ಷ, ವೃತ್ತಿ-ವ್ಯಾಪಾರ, ಸಾ|| ಬಂದರ್ ರೋಡ್, ತಾ: ಹೊನ್ನಾವರ ರವರು ದಿನಾಂಕ: 23-09-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 24-09-2021 12:57 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080