ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 24-04-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೈಭವ ತಂದೆ ಗೋವಿಂದ ಮಾಂಡ್ಲೇಕರ, ಸಾ|| ಇಂಡಸ್ಟ್ರಿಯಲ್ ಏರಿಯಾ, ಜಾಂಬಾ ಕ್ರಾಸ್, ಶಿರವಾಡ, ಕಾರವಾರ (ಮೋಟಾರ್ ಸೈಕಲ್ ನಂ: ಕೆ.ಎ-30/ವಿ-5882 ನೇದರ ಸವಾರ). ಈತನು ದಿನಾಂಕ: 23-04-2021 ರಂದು 19-30 ಗಂಟೆಯ ಸಮಯಕ್ಕೆ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-30/ವಿ-5882 ನೇದನ್ನು ಕಾರವಾರ–ಕೈಗಾ ರಾಜ್ಯ ಹೆದ್ದಾರಿಯ ಮೇಲೆ ಶಿರವಾಡ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶೇಜವಾಡ ಬ್ರಿಡ್ಜ್ ಹತ್ತಿರ ಸೈಕಲ್ ಮೇಲೆ ಹೋಗುತ್ತಿದ್ದ ಪಿರ್ಯಾದಿಯವರ ತಂದೆಯವರಾದ ಶ್ರೀ ವಿನಾಯಕ ತಂದೆ ಬಾಬನಿ ಶೇಜವಾಡಕರ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರ ಬಲಗೈಗೆ, ಮುಖಕ್ಕೆ ಹಾಗೂ ತಲೆಗೆ ತೀವೃ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದೀಪಕ ತಂದೆ ವಿನಾಯಕ ಶೇಜವಾಡಕರ, ಪ್ರಾಯ-39 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಶೇಜವಾಡ, ಕಾರವಾರ ರವರು ದಿನಾಂಕ: 24-04-2021 ರಂದು 20-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 96/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂಗಯ್ಯ ತಂದೆ ಮಲ್ಲಯ್ಯ ಸಾಲಿಮಠ, ಪ್ರಾಯ-39 ವರ್ಷ, ವೃತ್ತಿ-ಚಾಲಕ, ಸಾ|| ರಟ್ಟೆಹಳ್ಳಿ, ಹಾವೇರಿ (ಕಾರ್ ನಂ: ಕೆ.ಎ-50/ಎ-2581 ನೇದರ ಚಾಲಕ). ಈತನು ದಿನಾಂಕ: 24-04-2021 ರಂದು ಮುಂಜಾನೆ 04-00 ಗಂಟೆಗೆ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-50/ಎ-2581 ನೇದನ್ನು ರಾಜ್ಯ ಹೆದ್ದಾರಿ ಸಂಖ್ಯೆ-69 ನೇದರಲ್ಲಿ ಶಿರಸಿ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ದೇವಿಮನೆ ಘಟ್ಟದ ಇಳಿಜಾರಿನ ತಿರುವಿನಲ್ಲಿ ತಾನು ಚಲಾಯಿಸುತ್ತಿದ್ದ ಕಾರಿನ ವೇಗವನ್ನು ನಿಯಂತ್ರಿಸಲಾಗದೇ, ಕಾರನ್ನು ಒಮ್ಮೇಲೆ ಬಲಕ್ಕೆ ಚಲಾಯಿಸಿ ರಸ್ತೆಯ ಬದಿಯಲ್ಲಿರುವ ಮಣ್ಣಿನ ದಿಬ್ಬಕ್ಕೆ (ಧರೆಗೆ) ಗುದ್ದಿ ಅಪಘಾತ ಪಡಿಸಿ ಕಾರ್ ಜಖಂಗೊಳಿಸಿದ್ದಲ್ಲದೇ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಕಾಶ ಗೌಡ ತಂದೆ ಕೆರೆಗೌಡ, ಪ್ರಾಯ-36 ವರ್ಷ, ಸಾ|| ರಟ್ಟೆಹಳ್ಳಿ, ಹಾವೇರಿ ಇವರ ತಲೆಗೆ ಗಾಯನೋವು ಪಡಿಸಿ, ಆರೋಪಿ ಚಾಲಕನು ತನ್ನ ಕಾಲಿಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ಸಜ್ಜನರಾವ್ ಸೂರ್ಯವಂಶಿ, ಪ್ರಾಯ-37 ವರ್ಷ, ವೃತ್ತಿ-ಚಾಲಕ, ಸಾ|| ಭಗತಸಿಂಗ್ ಸರ್ಕಲ್, ರಟ್ಟೆಹಳ್ಳಿ, ಹಾವೇರಿ ರವರು ದಿನಾಂಕ: 24-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 123/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಯಶ್ವಂತ ತಂದೆ ರಂಗಪ್ಪ ಗೌಡ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಕಟ್ಟಿಕೇರಿ, ಶೆಟ್ಟಿ ಹಳ್ಳಿ, ಶಿವಮೊಗ್ಗ (ಮಹೀಂದ್ರಾ ಕ್ಸೈಲೋ ಕಾರ್ ನಂ: ಕೆ.ಎ-51/ಎ.ಬಿ-2242 ನೇದರ ಚಾಲಕ). ಈತನು ದಿನಾಂಕ: 24-04-2021 ರಂದು 10-00 ಗಂಟೆಗೆ ಹೊನ್ನಾವರ ಕರ್ಕಿ ಪಾವಿನಕುರ್ವಾ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ತಾನು ಚಲಾಯಿಸುತ್ತಿದ್ದ ಮಹೀಂದ್ರಾ ಕ್ಸೈಲೋ ಕಾರ್ ನಂ: ಕೆ.ಎ-51/ಎ.ಬಿ-2242 ನೇದನ್ನು ಹೊನ್ನಾವರ ಕಡೆಯಿಂದ ಹಳದೀಪುರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತೆಯಿಂದ ಚಲಾಯಿಸಿಕೊಂಡು ಬಂದವನು, ತಾನು ಚಲಾಯಿಸುತ್ತಿದ್ದ ಕಾರಿನ ವೇಗವನ್ನು ನಿಯಂತ್ರಿಸಲಾಗದೇ, ತನ್ನ ಎದುರಿನಿಂದ ಹೋಗುತ್ತಿದ್ದ ಪಿರ್ಯಾದಿಯು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-30/ಎಮ್-9300 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಕಾರನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಗಣಪತಿ ಮೇಸ್ತಾ, ಪ್ರಾಯ-36 ವರ್ಷ, ವೃತ್ತಿ-ಸರ್ಕಾರಿ ಉದ್ಯೋಗಿ, ಸಾ|| ದುರ್ಗಾದೇವಿ ರೋಡ್, ಶಾಂತಿ ನಗರ, ತಾ: ಹೊನ್ನಾವರ ರವರು ದಿನಾಂಕ: 24-04-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕಿರಣ ಕೆ. ಎಸ್. ತಂದೆ ಶಿವರಾಮಾಚಾರಿ, ಪ್ರಾಯ-26 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಮನೆ ನಂ: 31, 2 ನೇ ಮೇನ್, 5 ನೇ ಕ್ರಾಸ್, ವಿರಾಟ ಕಾಲೋನಿ, ದಾಸನಪುರ ಹೋಬಳಿ, ಅಡಕಮಾರನಹಳ್ಳಿ, ತಾ: ನೆಲಮಂಗಲ, ಜಿ: ಬೆಂಗಳೂರು ಗ್ರಾಮಾಂತರ (ಲಾರಿ ನಂ: ಕೆ.ಎ-27/ಎ-1339 ನೇದರ ಚಾಲಕ). ಈತನು ದಿನಾಂಕ: 24-04-2021 ರಂದು 15-45 ಗಂಟೆಗೆ ಆಲೂರು ಕ್ರಾಸಿನಿಂದ ಕರ್ಕಾ ಬದಿಗೆ 1 ಕಿ.ಮೀ ದೂರದಲ್ಲಿ ಪೋಲ್ಸ್ ಲೋಡ್ ತುಂಬಿದ ತನ್ನ ಲಾರಿ ನಂ: ಕೆ.ಎ-27/ಎ-1339 ನೇದನ್ನು ಹಳಿಯಾಳ ಕಡೆಯಿಂದ ದಾಂಡೇಲಿ ಕಡೆಗೆ ತಿರುವಿನ ರಾಜ್ಯ ಹೆದ್ದಾರಿಯ ಮೇಲೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ಲಾರಿಯ ವೇಗವನ್ನು ನಿಯಂತ್ರಿಸಲಾಗದೇ, ರಾಜ್ಯ ಹೆದ್ದಾರಿಯ ಪಕ್ಕದ ಕಚ್ಚಾ ರಸ್ತೆಯ ಮೇಲೆ ಪಲ್ಟಿ ಪಡಿಸಿ, ಅಪಘಾತ ಪಡಿಸಿ, ತನ್ನ ಬೆನ್ನಿನ ಹಿಂದೆ, ಸೊಂಟದ ಹತ್ತಿರ ಹಾಗೂ ಎಡಗೈ ಕಿರುಬೆರಳಿಗೆ ತೆರಚಿದ ಗಾಯನೋವು ಪಡಿಸಿಕೊಂಡು, ಲಾರಿಯನ್ನು ಡ್ಯಾಮೆಜ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಜೋಸೆಫ್ ತಂದೆ ಸ್ಯಾಮ್ಯುಯೆಲ್ ಬಂಗಾರಿ, ಪ್ರಾಯ-52 ವರ್ಷ, ವೃತ್ತಿ-ಗ್ಯಾರೇಜ್ ಕೆಲಸ, ಸಾ|| ಪಟೇಲ್ ಸರ್ಕಲ್ ಹತ್ತಿರ, ದಾಂಡೇಲಿ ರವರು ದಿನಾಂಕ: 24-04-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೀರಬಸಪ್ಪ ತಂದೆ ಬಸವರಾಜ ಗೌಡ, ಪ್ರಾಯ-23 ವರ್ಷ, ಸಾ|| ಕಂತ್ರಾಜಿ, ತಾ: ಶಿರಸಿ (ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-8243 ನೇದರ ಸವಾರ). ಈತನು ದಿನಾಂಕ: 23-04-2021 ರಂದು 17-00 ಗಂಟೆಗೆ ತನ್ನ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-8243 ನೇದರಲ್ಲಿ ಪಿರ್ಯಾದಿಯನ್ನು ಕೂಡ್ರಿಸಿಕೊಂಡು ಬನವಾಸಿ-ಶಿರಸಿ ರಸ್ತೆಯ ಮಾರ್ಗವಾಗಿ ನವಣಗೇರಿಗೆ ಹೋಗುತ್ತಿದ್ದಾಗ ಕಂತ್ರಾಜಿ ಗ್ರಾಮದ ರವೂಫ್ ಸಾಹೇಬರ ತೋಟದ ಬಳಿಯ ತಿರುವಿನ ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರ್ ಸೈಕಲ್ ಸಮೇತ ಪಲ್ಟಿ ಪಡಿಸಿ ಅಪಘಾತ ಪಡಿಸಿ, ಪಿರ್ಯಾದಿಯ ಮುಖಕ್ಕೆ ಸಾದಾ ಸ್ವರೂಪದ ರಕ್ತಗಾಯ ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಮುಖಕ್ಕೆ ರಕ್ತಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಚಾಲಚಂದ್ರ ತಂದೆ ನಾಗರಾಜ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗುಡ್ನಾಪುರ, ತಾ: ಶಿರಸಿ ರವರು ದಿನಾಂಕ: 24-04-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 24-04-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಬಾಲಕೃಷ್ಣ ತಂದೆ ಆತ್ಮಾರಾಮ ಮಾಂಜ್ರೇಕರ, ಪ್ರಾಯ-53 ವರ್ಷ, ವೃತ್ತಿ-ಕ್ಯಾಶಿಯರ್, ಸಾ|| ಕಲಭಾಗ, ತಾ: ಅಂಕೋಲಾ, ಹಾಲಿ ಸಾ|| ಅಜ್ವೀ ರೆಸ್ಟೋರೆಂಟ್, ಆರ್.ಟಿ.ಓ ಕಚೇರಿ ಹತ್ತಿರ, ಕಾರವಾರ. ಮೃತ ಈತನು ಕಳೆದ 2021 ರ ಜನವರಿ ತಿಂಗಳಿನಿಂದ ಕಾರವಾರದ ಅಜ್ವೀ ರೆಸ್ಟೋರೆಂಟಿನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡು ಅಲ್ಲಿಯೇ ಉಳಿದುಕೊಂಡಿದ್ದವನು, ದಿನಾಂಕ: 24-04-2021 ರಂದು ಸಾಯಂಕಾಲ 17-00 ಗಂಟೆಯ ಸಮಯಕ್ಕೆ ತನ್ನ ರೂಮಿನಲ್ಲಿ ಕುಳಿತುಕೊಂಡವನು ಒಮ್ಮೆಲೆ ವಾಂತಿ ಮಾಡಿಕೊಂಡು ಮೂರ್ಛೆ ಹೋದವನನ್ನು ಅಲ್ಲಿರುವ ಸಿಬ್ಬಂದಿಗಳು ಕೂಡಲೇ ಆತನನ್ನು ಜಿಲ್ಲಾ ಸರಕಾರಿ ಆಸ್ಪತ್ರೆ ಕಾರವಾರಕ್ಕೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕೃಷ್ಣ ಈತನು ಚಿಕಿತ್ಸೆಗೆ ತರುವ ಪೂರ್ವದಲ್ಲಿಯೇ ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ. ಸದರಿ ಮೃತನು ಅಸಜವಾಗಿ ಮೃತಪಟ್ಟಿದ್ದರಿಂದ ಮೃತನ ಹೆಂಡತಿಯಾದ ಪಿರ್ಯಾದಿಯು ಶವವನ್ನು ನೋಡಿ ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಪೂರ್ಣಿಮಾ ಕೋಂ. ಬಾಲಕೃಷ್ಣ ಮಾಂಜ್ರೇಕರ, ಪ್ರಾಯ-40 ವರ್ಷ, ವೃತ್ತಿ-ಗೃಹಿಣಿ, ಸಾ|| ಕಲಭಾಗ, ತಾ: ಅಂಕೋಲಾ ರವರು ದಿನಾಂಕ: 24-04-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಕೋಟೆಪ್ಪ ತಂದೆ ನಿಂಗಪ್ಪ ದೊಡಮನಿ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅರಶಿಣಗೇರಿ, ತಾ: ಮುಂಡಗೋಡ. ಸುದ್ದಿದಾರನ ಮಗನಾದ ಈತನು ದಿನಾಂಕ: 24-04-2021 ರಂದು ಮಧ್ಯಾಹ್ನ 02-20 ಗಂಟೆಯ ಸುಮಾರಿಗೆ ಥಾಮಸ್ ಮ್ಯಾಥ್ಯೂ ಇವರ ಹೊಲದಲ್ಲಿ ಶೇಂಗಾ ಮಷೀನಿನ ಮೇಲೆ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಜೋಲಿ ಹೋಗಿ ಮಷೀನಿನ ಒಳಗೆ ಬಿದ್ದು ಆತನ ಎದೆಯ ಬಲಭಾಗ ಹಾಗೂ ಎಡಗೈಗೆ ಭಾರೀ ಗಾಯವಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ತನಗಾದ ಗಾಯನೋವಿನಿಂದ ಮೃತಪಟ್ಟಿದ್ದು, ಇದರ ಹೊರತು ಆತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಪಿರ್ಯಾದಿಯ ಮಗನ ಮೃತದೇಹವು ಮುಂಡಗೋಡಿನ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ನಿಂಗಪ್ಪ ತಂದೆ ಯಲ್ಲಪ್ಪ ದೊಡಮನಿ, ಪ್ರಾಯ-60 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಅರಶಿಣಗೇರಿ, ತಾ: ಮುಂಡಗೋಡ ರವರು ದಿನಾಂಕ: 24-04-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ದಿವ್ಯಾ ತಂದೆ ಮಂಜುನಾಥ ಕೊಡಿಯಾ, ಪ್ರಾಯ-19 ವರ್ಷ, ಸಾ|| ಶ್ರೀಮನೆ, ನಿಲ್ಕುಂದ ಗ್ರಾಮ, ತಾ: ಸಿದ್ದಾಪುರ. ಸುದ್ದಿದಾರನ ಮಗಳಾದ ಇವಳಿಗೆ ಮನೆಯಲ್ಲಿನ ಆರ್ಥಿಕ ಸಮಸ್ಯೆಯಿಂದ ಅವಳನ್ನು ಮುಂದೆ ಕಾಲೇಜಿಗೆ ಕಳಿಸದೇ ಮನೆಯಲ್ಲಿ ಇಟ್ಟುಕೊಂಡಿದ್ದಕ್ಕೋ ಹಾಗೂ ಅವಳ ತಮ್ಮನಿಗೆ ಮೊಬೈಲ್ ಕೊಡಿಸಿ ತನಗೆ ಕೊಡಿಸದೇ ಇದ್ದುದ್ದಕ್ಕೋ ಅಥವಾ ಇನ್ನಾವುದೋ ಕಾರಣಕ್ಕಾಗಿ ದಿನಾಂಕ: 23-04-2021 ರಂದು ರಾತ್ರಿ ಮನೆಯಲ್ಲಿ ಮಲಗಿದ್ದವಳು ರಾತ್ರಿ 23-00 ಗಂಟೆಯಿಂದ 23-45 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಮೂತ್ರ ವಿಸರ್ಜನೆಗೆಂದು ಹೋದವಳು, ಮನೆಯ ಹಿಂದಿರುವ ಬಚ್ಚಲು ಮನೆಯ ಪಕ್ಕದಲ್ಲಿರುವ ಗೇರುಗಿಡದ ಅಡ್ಡ ಟೊಂಗೆಗೆ ಸೀರೆಯಿಂದ ನೇಣು ಹಾಕಿಕೊಂಡು ನೇತಾಡುತ್ತಿದ್ದವಳನ್ನು ಕೂಡಲೇ ನೋಡಿ ಬದುಕಿರಬಹುದು ಅಂತಾ ಸೀರೆ ಕತ್ತರಿಸಿ ಕೆಳಗೆ ಇಳಿಸಿ ನೋಡಲು ಅವಳ ಉಸಿರಾಟ ನಿಂತುಹೋಗಿತ್ತು. ತನ್ನ ಮಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಇದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಗೋವಿಂದ ಕೊಡಿಯಾ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶ್ರೀಮನೆ, ನಿಲ್ಕುಂದ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 24-04-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 26-04-2021 02:09 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080