ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂ:- 24-04-2022

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2022, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅನೀಲ ತಂದೆ ಕಾಶಿನಾಥ ಕಾಂಬಳೆ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೋಟೆಗಾಳಿ, ಬಂದರವಾಡ, ಕಾರವಾರ, 2]. ರಾಜೇಶ ಬಾಬು ಪಡುವಳಕರ, ಸಾ|| ಹೋಟೆಗಾಳಿ, ಕಾರವಾರ ಹಾಗೂ ಇತರರು. ಈ ನಮೂದಿತ ಆರೋಪಿತರು ನಮೂದಾದ ಆರೋಪಿತನು ದಿನಾಂಕ: 23-04-2022 ರಂದು 22-30 ಘಂಟೆಗೆ ಹೋಟೆಗಾಳಿ ಬಂದರವಾಡ ರಸ್ತೆಯ ಪಕ್ಕ ಬ್ರಹ್ಮದೇವ ದೇವಸ್ಥಾನದ ಹತ್ತಿರ ರಸ್ತೆಯ ಪಕ್ಕ ತನ್ನ ಎದುರಿಗೆ ಒಂದು ನೀಲಿ ಬಣ್ಣದ ಬ್ಯಾನರನ್ನು ತನ್ನ ಎದುರಿಗೆ ಹಾಸಿಕೊಂಡು ಸಾರ್ವಜನಿಕರನ್ನು ಬನ್ನಿ ಬನ್ನಿ ಅಂತಾ ಕರೆದು ತನ್ನ ಮುಂದೆ ಇದ್ದ ಬ್ಯಾನರನ ಮೇಲೆ ಇದ್ದ ನಂಬರಗಳಿಗೆ ಹಣವನ್ನು ಪಂಥ ಕಟ್ಟಿ ತಿರುಗುಣಿಯು ತಿರುಗಿಸಿದ ನಂತರ ನೀವು ಹಣವನ್ನು ಕಟ್ಟಿದ ನಂಬರಿಗೆ ನಿಂತರೆ 10/- ರೂಪಾಯಿಗೆ 50/- ರೂಪಾಯಿ ಕೊಡುವುದಾಗಿ ಹೇಳುತ್ತಾ ಜನರನ್ನು ಕರೆಯುತ್ತಿರುವಾಗ ಈತನು ಗುಡಗುಡಿ/ಗಡಗಡ ಮಂಡಲ/ಪಿರಕಿ ಆಡಿಸುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿ 1 ನೇಯವನ ಹತ್ತಿರ ಬಿಳಿ ಬಟ್ಟೆ ಚೀಲದಲ್ಲಿದ್ದ ನಗದು ಹಣ 4,190/- ರೂಪಾಯಿ ಹಾಗೂ ಬ್ಯಾನರ್ ಮತ್ತು ತಿರುಗುಣಿ ಹಾಗೂ ಎರಡು ಪೆಟ್ರೋಮ್ಯಾಕ್ಸ್ ಸಮೇತ ವಶಕ್ಕೆ ಪಡೆದುಕೊಂಡಿದ್ದು ಹಾಗೂ ಆರೋಪಿ 2 ಮತ್ತು ಇತರರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಕಲ್ಪನಾ ಬಿ. ಆರ್, ಡಬ್ಲ್ಯೂ.ಪಿ.ಎಸ್.ಐ, ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 24-04-2022 ರಂದು 10-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2022, ಕಲಂ: 279, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಕಾರ್ ನಂ: ಎಮ್.ಎಚ್-03/ಬಿ.ಸಿ-2617 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 24-04-2022 ರಂದು ಸಂಜೆ 16-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಬಾಳೇಗುಳಿಯಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯಲ್ಲಿ ತನ್ನ ಕಾರ್ ನಂ: ಎಮ್.ಎಚ್-03/ಬಿ.ಸಿ-2617 ನೇದನ್ನು ಬಾಳೇಗುಳಿ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಾಲನೆ ಮಾಡಿಕೊಂಡು ಬಂದವನು, ಕಾರನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದೇ ತನ್ನ ಮುಂದಿನಿಂದ ಹೋಗುತ್ತಿದ್ದ ಹೋಂಡಾ ಡಿಯೋ ಮೋಟಾರ್ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಶ್ರೀ ಗಾಂಧಿ ತಂದೆ ನಾರಾಯಣ ಶೆಟ್ಟಿ, ಪ್ರಾಯ-60 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಅವರ್ಸಾ, ಬೀದಿಬೀರ ದೇವಸ್ಥಾನದ ಹತ್ತಿರ, ತಾ: ಅಂಕೋಲಾ ಇವರಿಗೆ ರಸ್ತೆಯ ಮಧ್ಯದ ಡಿವೈಡರ್ ಮೇಲೆ ಕೆಡವಿ ತಲೆಗೆ, ಹಣೆಗೆ ಹಾಗೂ ಕಾಲಿಗೆ ಗಂಭೀರ ಗಾಯನೋವು ಪಡಿಸಿ ಕಿವಿಯಿಂದ, ಮೂಗಿಂದ ಮತ್ತು ಬಾಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮರಣವನ್ನುಂಟು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನ್ನ ಕಾರನ್ನು ಅಪಘಾತದ ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಭಾಸ್ಕರ ತಂದೆ ಕಾಶಿನಾಥ ನಾರ್ವೇಕರ, ಪ್ರಾಯ-60 ವರ್ಷ, ವೃತ್ತಿ-ವ್ಯವಹಾರ, ಸಾ|| ಶಾಂತಾದುರ್ಗಾ ದೇವಸ್ಥಾನದ ಹತ್ತಿರ, ತಾ: ಅಂಕೋಲಾ ರವರು ದಿನಾಂಕ: 24-04-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಹಮ್ಮು ಹರಿಕಂತ್ರ, ಪ್ರಾಯ-45 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮೊರಬಾ, ತಾ: ಕುಮಟಾ. ಈತನು ದಿನಾಂಕ: 23-04-2022 ರಂದು 16-45 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಮೊರಬಾ ಗ್ರಾಮದ ಮೊರಬಾ ಕ್ರಾಸ್ ರಸ್ತೆಯ ಎದುರಿನ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥವನ್ನು ಜನರಿಂದ ಕಟ್ಟಿಸಿಕೊಂಡು ಅವರಿಗೆ ಓ.ಸಿ ಚೀಟಿ ಬರೆದುಕೊಡುವಾಗ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ 1). ಅಂಕೆ-ಸಂಖ್ಯೆ ಬರೆದ ಚೀಟಿ-01, 2). ಅಂಕೆ-ಸಂಖ್ಯೆ ಬರೆದು ಕೊಡಲು ಇಟ್ಟುಕೊಂಡಿದ್ದ ಖಾಲಿ ಚೀಟಿಗಳು-06, 3). ಬಾಲ್ ಪೆನ್-01, 4). ವಿವಿಧ ಮೌಲ್ಯದ ನಗದು ಹಣ 1,240/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಎಮ್. ಬಿರಾದಾರ, ಪಿ.ಎಸ್.ಐ, ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 24-04-2022 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2022, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕುಣಾಲ ತಂದೆ ಶ್ರೀಧರ ಶೆಟ್ಟಿ, ಪ್ರಾಯ-33 ವರ್ಷ, ವೃತ್ತಿ-ಫೈನಾನ್ಸ್ ಸರ್ವೀಸ್, ಸಾ|| ವಾಸುದೇವ ಪಾರ್ಕ್, ಎ-15, ಟಿ.ಎಮ್.ಸಿ ಗಾರ್ಡನ್ ಹಿಂಭಾಗ, ಖಾರೆಗಾಂವ್ ನಾಕಾ, ಕಲ್ವಾ ಠಾಣೆ, ಮಹಾರಾಷ್ಟ್ರ (ಕಾರ್ ನಂ: ಎಮ್.ಎಚ್-04/ಜೆ.ಬಿ-2984 ನೇದರ ಚಾಲಕ). ದಿನಾಂಕ: 23-04-2022 ರಂದು ಬೆಳಿಗ್ಗೆ ಪಿರ್ಯಾದಿ ಮತ್ತು ಪಿರ್ಯಾದಿಯ ಗಂಡ ಶ್ರೀ ಅಣ್ಣಪ್ಪ ತಂದೆ ಮಂಜುನಾಥ ನಾಯ್ಕ ರವರು ಸೇರಿಕೊಂಡು ಅಳ್ವೆಕೋಡಿಯಿಂದ ತೆರ್ನಮಕ್ಕಿಯಲ್ಲಿರುವ ಪಿರ್ಯಾದಿಯ ತವರು ಮನೆಗೆ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-1941 ನೇದರಲ್ಲಿ ಬಂದವರು, ಮರಳಿ ಅಳ್ವೆಕೋಡಿಗೆ ಹೋಗಲು ಪಿರ್ಯಾದಿಯ ಗಂಡ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-1941 ನೇದರ ಹಿಂದಿನ ಸೀಟಿನಲ್ಲಿ ಪಿರ್ಯಾದಿಯನ್ನು ಕೂರಿಸಿಕೊಂಡು ತೆರ್ನಮಕ್ಕಿಯಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊರಟಿದ್ದು, ಬೆಳಿಗ್ಗೆ 10-30 ಗಂಟೆಗೆ ತೆರ್ನಮಕ್ಕಿ ಸಬಾತಿ ಕ್ರಾಸ್ ಅನ್ನು ದಾಟುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬರ-ಹೋಗುವ ವಾಹನಗಳನ್ನು ಗಮನಿಸುತ್ತಾ ನಿಧಾನವಾಗಿ ದಾಟಲು ಮುಂದಾದಾಗ ಭಟ್ಕಳ ಕಡೆಯಿಂದ ಮುರ್ಡೇಶ್ವರ ಕಡೆಗೆ ಕಾರ್ ನಂ: ಎಮ್.ಎಚ್-04/ಜೆ.ಬಿ-2984 ನೇದರ ಆರೋಪಿ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಬಂದ ವೇಗದಲ್ಲಿ ಪಿರ್ಯಾದಿಯ ಗಂಡನು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಬಲಬದಿಯಲ್ಲಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅಪಘಾತದಿಂದ ಪಿರ್ಯಾದಿಯ ಬಲಗೈಗೆ ಮತ್ತು ಬೆನ್ನಿಗೆ ಗಾಯನೋವು ಪಡಿಸಿ, ಪಿರ್ಯಾದಿಯ ಗಂಡನ ತಲೆಗೆ ಗಂಭೀರ ಸ್ವರೂಪದ ಗಾಯ ಹಾಗೂ ಮುಖಕ್ಕೆ ತೆರಚಿದ ನಮೂನೆಯ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಶೋಭಾ ಕೋಂ. ಅಣ್ಣಪ್ಪ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಟೇಲರಿಂಗ್ ಕೆಲಸ, ಸಾ|| ಅಳ್ವೆಕೋಡಿ, ಬಿಳಿಯನ ಮನೆ, ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 24-04-2022 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2022, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುರೇಶ ತಂದೆ ನಿಂಗಣ್ಣ ಬಿರಾದಾರ, ಸಾ|| ಮುಂಡಗೋಡ, ಹಾಲಿ ಸಾ|| ಶಿರಾಲಿ, ತಾ: ಭಟ್ಕಳ (ಕಾರ್ ನಂ: ಕೆ.ಎ-28/ಪಿ-8526 ನೇದರ ಚಾಲಕ). ಪಿರ್ಯಾದಿಯು ದಿನಾಂಕ: 24-04-2022 ರಂದು ಮಧ್ಯಾಹ್ನ 12-30 ಗಂಟೆಗೆ ತನ್ನ ಕಾರ್ ನಂ: ಕೆ.ಎ-19/ಎಮ್.ಸಿ-9545 ನೇದರಲ್ಲಿ ತನ್ನ ಮಗನಾದ ಅಶ್ವಿನ ತಂದೆ ಮಂಜುನಾಥ ಸಾನು, ಇವನಿಗೆ ಕರೆದುಕೊಂಡು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಮಂಗಳೂರು ಕಡೆಯಿಂದ ಹೊನ್ನಾವರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಮುರ್ಡೇಶ್ವರ ಬಸ್ತಿಮಕ್ಕಿಯ ಬೆಂಜ್ ಹೊಟೇಲ್ ಎದುರು ನಮೂದಿತ ಆರೋಪಿತನು ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-28/ಪಿ-8526 ನೇದನ್ನು ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೇ, ಬಂದ ವೇಗದಲ್ಲಿ ರಸ್ತೆಯ ಮಧ್ಯದ ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದು ಡಿವೈಡರ್ ದಾಟಿಸಿ, ಪಿರ್ಯಾದಿಯ ಕಾರಿನ ಬಲಭಾಗಕ್ಕೆ ಅಪ್ಪಳಿಸಿದಾಗ, ಆ ರಭಸಕ್ಕೆ ಪಿರ್ಯಾದಿಯ ಕಾರ್ ಹೆದ್ದಾರಿಯನ್ನು ಬಿಟ್ಟು ಎಡಭಾಗದ ಸರ್ವೀಸ್ ರಸ್ತೆಗೆ ಬಂದು ನಿಂತಿದ್ದು, ಅಪಘಾತದಲ್ಲಿ ಪಿರ್ಯಾದಿಯ ಕಾರ್ ಬಲಭಾಗಕ್ಕೆ ಜಖಂಗೊಂಡು ಪಿರ್ಯಾದಿಯ ಹಣೆಗೆ, ಬಲಗಾಲ ಮೊಣಗಂಟಿನ ಕೆಳಗೆ, ಬಲಗೈ ಮಧ್ಯದ ಬೆರಳಿಗೆ ಹಾಗೂ ಬಲಭುಜಕ್ಕೆ ಗಾಯನೋವು ಮತ್ತು ಪಿರ್ಯಾದಿಯ ಮಗನಾದ ಅಶ್ವಿನ ಇವನಿಗೆ ಹಣೆಯ ಬಲಬದಿಗೆ ಮತ್ತು ಮುಖಕ್ಕೆ ಗಾಯನೋವಾಗಿದ್ದು, ಆರೋಪಿ ಕಾರ್ ಚಾಲಕನು ತನ್ನ ಕಾರನ್ನು ಪಲ್ಟಿ ಮಾಡಿಕೊಂಡು, ತನಗೆ ತಾನೇ ಗಾಯನೋವು ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಗೋವಿಂದ ಸಾನು, ಪ್ರಾಯ-51 ವರ್ಷ, ವೃತ್ತಿ-ವ್ಯವಹಾರ, ಸಾ|| ಮಣ್ಣಾಗುಡ್ಡ, ದುರ್ಗಾಮಹಲ್ ಹೊಟೇಲ್ ಸಮೀಪ, ಕೃತಿಸಾಗರ ಮನೆ, ಕುದ್ರೊಳ್ಳಿ ರಸ್ತೆ, ಮಂಗಳೂರು ರವರು ದಿನಾಂಕ: 24-04-2022 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2022, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕುಮಾರ ತಂದೆ ವಿಠ್ಠಲ ಬಾಬರಿ, ಪ್ರಾಯ-35 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಸಂಗಮೇಶ್ವರ, ತಾ: ಕಲಘಟಗಿ, ಜಿ: ಧಾರವಾಡ (ಮೋಟಾರ್ ಸೈಕಲ್ ನಂ: ಕೆ.ಎ-25/ಇ.ಎಸ್-3702) ನೇದರ ಸವಾರ). ಈತನು ದಿನಾಂಕ: 24-04-2022 ರಂದು 16-00 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-25/ಇ.ಎಸ್-3702 ನೇದರ ಹಿಂಬದಿಯಲ್ಲಿ ಪಿರ್ಯಾದಿಯವರಿಗೆ ಕೂರಿಸಿಕೊಂಡು ಸದರ ಮೋಟಾರ್ ಸೈಕಲನ್ನು ಹಳಿಯಾಳ ಕಡೆಯಿಂದ ಕಲಘಟಗಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಹಳಿಯಾಳ ತಾಲೂಕಿನ ಹೊಸಹಡಗಲಿ ಗ್ರಾಮದ ಹತ್ತಿರ ಹಳಿಯಾಳ-ಕಲಘಟಗಿ ಡಾಂಬರ್ ರಸ್ತೆಯಲ್ಲಿ ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ತನಗೆ ತಾನೇ ಮೋಟಾರ್ ಸೈಕಲ್ ಪಲ್ಟಿ ಕೆಡವಿ ಅಪಘಾತ ಪಡಿಸಿಕೊಂಡು ಮೋಟಾರ್ ಸೈಕಲ್ ಹಿಂಬದಿ ಕುಳಿತಿದ್ದ ಪಿರ್ಯಾದಿಯವರಿಗೆ ಬಲಗೈ ಮೊಣಗಂಟಿಗೆ, ಗದ್ದಕ್ಕೆ, ಬಲ ಹಾಗೂ ಎಡಗಾಲಿನ ಮೊಣಗಂಟಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೆ ತಾನೇ ಸ್ವಯಂಕೃತ ಅಪಘಾತದಿಂದ ಎಡಗೈ ಮೊಣಗಂಟಿಗೆ, ತಲೆಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡು ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದಾಗ 18-45 ಗಂಟೆಗೆ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಪಾರ್ವತಿ ಕೋಂ. ತುಕರಾಮ ಪವಾರ, ಪ್ರಾಯ-54 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮುಂಡವಾಡ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 24-04-2022 ರಂದು 20-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 24-04-2022

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 20/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತರು 1]. ಕು: ಪೂಜಾ ತಂದೆ ಮಹೇಶ ನಾಯ್ಕ, ಪ್ರಾಯ-17 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಕಡಕಾರ, ಹಿಲ್ಲೂರು, ತಾ: ಅಂಕೋಲಾ, 2]. ಕು: ನಾಗೇಂದ್ರ ತಂದೆ ದಾಸು ನಾಯ್ಕ, ಪ್ರಾಯ-16 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಅಘನಾಶಿನಿ, ತಾ: ಕುಮಟಾ, 3]. ದಿಲೀಪ ತಂದೆ ಜನಾರ್ಧನ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಕೋನಳ್ಳಿ, ತಾ: ಕುಮಟಾ. ಈ ನಮೂದಿತ ಮೃತರಲ್ಲಿ 1 ನೇಯವಳು ಪಿರ್ಯಾದಿಯ ಅಣ್ಣನ ಮಗಳಾಗಿದ್ದು ಹಾಗೂ ಮೃತ 2 ಹಾಗೂ 3 ನೇಯವರು ಪಿರ್ಯಾದಿಯ ಸಂಬಂಧಿಕರಾಗಿರುತ್ತಾರೆ. ಈ ನಮೂದಿತ ಮೃತರು ಕೂಡಿಕೊಂಡು ದಿನಾಂಕ: 24-04-2022 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದ ಕರಿಕಲ್ ನಲ್ಲಿ ಹರಿಯುತ್ತಿರುವ ಗಂಗಾವಳಿ ನದಿಯಲ್ಲಿ ಚಿಪ್ಪೆಕಲ್ಲನ್ನು ತೆಗೆಯಲು ಹೋದವರು, ಚಿಪ್ಪೆಕಲ್ಲನ್ನು ತೆಗೆಯುತ್ತಿರಬೇಕಾದರೆ ಮಧ್ಯಾಹ್ನ 12-15 ಗಂಟೆಯಿಂದ 13-30 ಗಂಟೆಯ ನಡುವಿನ ಅವಧಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ತೋಕು ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಡಕಾರ, ಹಿಲ್ಲೂರು, ತಾ: ಅಂಕೋಲಾ ರವರು ದಿನಾಂಕ: 24-04-2022 ರಂದು 14-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 15/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶ್ರೀಕಾಂತ ತಂದೆ ನಾಮದೇವ ಗಾವಡೆ, ಪ್ರಾಯ-44 ವರ್ಷ, ವೃತ್ತಿ-ಚಾಲಕ, ಸಾ|| ಕಬ್ಬಿನಗುಳಿ, ಪೋ: ಸಹಸೃಳ್ಳಿ, ತಾ: ಯಲ್ಲಾಪುರ. ಈತನು ವಿಪರೀತ ಸಾರಾಯಿ ಕುಡಿಯುವ ಚಟ ಬೆಳೆಸಿಕೊಂಡಿದ್ದವನು, ಕಳೆದ ಒಂದು ವರ್ಷದಿಂದ ಮೂಲವ್ಯಾಧಿ ಕಾಯಿಲೆಯಿಂದ ಬಳಲುತ್ತಿದ್ದವನಿಗೆ ಸುಮಾರು ಒಂದು ತಿಂಗಳ ಹಿಂದೆ ಶಿರಸಿಯ ಆಸ್ಪತ್ರೆಯಲ್ಲಿ ಮೂಲವ್ಯಾಧಿಗೆ ಶಸ್ತ್ರಚಿಕಿತ್ಸೆ ಪಡೆದುಕೊಂಡಿದ್ದರೂ ಸಹ ಗುಣಮುಖನಾಗದೇ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 24-04-2022 ರಂದು ಸಾಯಂಕಾಲ 16-30 ಗಂಟೆಯ ಸುಮಾರಿಗೆ ತನ್ನ ಮನೆಯ ಸಮೀಪದ ಕಬ್ಬಿನಗುಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡು ಜಾತಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಮದೇವ ತಂದೆ ರಾಮಾ ಗಾವಡೆ, ಪ್ರಾಯ-65 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಬ್ಬಿನಗುಳಿ, ಪೋ: ಸಹಸೃಳ್ಳಿ, ತಾ: ಯಲ್ಲಾಪುರ ರವರು ದಿನಾಂಕ: 24-04-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 14-05-2022 04:55 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080