ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 24-08-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 465, 468, 471, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರವಿ ತಂದೆ ಡಿಂಗಾ ಅಂಕೋಲೆಕರ, ಪ್ರಾಯ-50 ವರ್ಷ, ವೃತ್ತಿ-ನಿವೃತ್ತ ನೇವಿ ನೌಕರ, ಸಾ|| ಮುದಗಾ, ಅಮದಳ್ಳಿ, ಕಾರವಾರ. ಈತನು ದಿನಾಂಕ: 07-01-1991 ರಿಂದ ಭಾರತೀಯ ನೇವಿಯಲ್ಲಿ Rank-CPO ಹುದ್ದೆಯಲ್ಲಿದ್ದವನು, 2011 ನೇ ಸಾಲಿನಲ್ಲಿ ನೇವಲ್ ಬೇಸ್ ಕಾರವಾರದಲ್ಲಿ ಮಾಸ್ಟರ್ ಗ್ರೇಡ್-2 ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಅದರಲ್ಲಿ (a). Age limit: 18 to 40 years, (b). Educational qualification: Matriculation/Equivalent from recognized institute/Board, (c). Work Experience: Certificate of Master-II Class ISV for atleast 2 years independent handling a craft of 20 HP ಅಂತಾ ಇದ್ದು, ಆರೋಪಿತನು ಸದರ ಹುದ್ದೆಗೆ ಆಯ್ಕೆಯಾಗುವ ವೇಳೆ 1990 ನೇ ಸಾಲಿನಲ್ಲಿ Shri Belneer Bant Jyoti Fisheries, Amadalli ಎನ್ನುವ ತನ್ನ ತಾಯಿಯ ಹೆಸರಿನಲ್ಲಿರುವ ಬೋಟಿನಲ್ಲಿ ದಿನಾಂಕ: 15-08-1988 ರಿಂದ 30-11-1990 ರ ವರೆಗೆ ತಾನು ಅಪ್ರಾಪ್ತ ವಯಸ್ಕನಿದ್ದಾಗಲೇ ಸರ್ವೀಸ್ ಮಾಡಿದ ಬಗ್ಗೆ ತನ್ನ ತಾಯಿಯಿಂದ ಅನುಭವ ಪ್ರಮಾಣ ಪತ್ರ ಪಡೆದ ಬಗ್ಗೆ ಮತ್ತು Shri Belneer Bant Jyoti Fisheries, Near Sea Beach, Mudga, Amadalli, Karwar (UK), Karnataka, Post Reg No: KUM 4252, Email: bantjyoti@ gmail.com, Ref: SB/E/18, Date: 10-12-1990 ಎನ್ನುವ ದಿನಾಂಕ: 07-07-2009 ರಂದು ಚಾಲ್ತಿಗೆ ಬಂದಿರುವ bantjyoti@gmail.com ಎನ್ನುವ Email ಅನ್ನು ತಾನು ನೀಡಿದ 1990 ರ ದಾಖಲೆಯಲ್ಲಿ ನಮೂದಿಸಿಕೊಂಡು ಸುಳ್ಳು ದಾಖಲೆಯನ್ನು ಸೃಷ್ಟಿಸಿ, ಅದನ್ನು ದಿನಾಂಕ: 03-04-2014 ರಂದು ಸಂಬಂಧಪಟ್ಟ ನೇವಲ್ ಬೇಸ್ ರವರಿಗೆ ನೀಡಿ, ಮಾಸ್ಟರ್ ಗ್ರೇಡ್-2 ಹುದ್ದೆ ನೀಡುವಂತೆ ಭಾರತೀಯ ನೇವಿಗೆ ಮೋಸ ವಂಚನೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀಮತಿ ರಶ್ಮಿ ಆರ್. ಪಾಟೀಲ್, Staff Officer (Civilian) for Flag Officer Commanding, HEAD QUARTERS, KARNATAKA, NAVAL AREA, ARGA, KARWAR ರವರು ದಿನಾಂಕ: 24-08-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಪ್ರಭಾಕರ ತಂದೆ ಮುಕ್ಕಣ್ಣ ಮಡಿವಾಳ, ಪ್ರಾಯ-30 ವರ್ಷ, ವೃತ್ತಿ-ಸೆಕ್ಯುರಿಟಿ ಗಾರ್ಡ್, ಸಾ|| ಕುಂಠಿ ಮಹಾಮಾಯಾ ದೇವಸ್ಥಾನದ ಹತ್ತಿರ, ಹಬ್ಬುವಾಡಾ, ಕಾರವಾರ. ಪಿರ್ಯಾದಿಯ ಮಗನಾದ ಈತನು ಹಬ್ಬುವಾಡಾದ ವರ್ಚುವಲ್ ಪ್ಯಾರಡೈಸ್ ಅಪಾರ್ಟಮೆಂಟಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದವನು, ದಿನಾಂಕ: 13-08-2021 ರಂದು ಮಧ್ಯಾಹ್ನ 13-30 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾದವನು, ಇದುವರೆಗೂ ಮರಳಿ ಮನೆಗೆ ಬಂದಿರುವುದಿಲ್ಲ. ಕಾಣೆಯಾದ ತನ್ನ ಮಗನನ್ನು ನಮ್ಮ ಸಂಬಂಧಿಕರು ಹಾಗೂ ತನ್ನ ಮಗನ ಹೆಂಡತಿಯ ಮನೆಯಲ್ಲಿ ವಿಚಾರಿಸಿದರೂ ಸಹ ಪತ್ತೆಯಾಗಿರುವುದಿಲ್ಲ. ಸದ್ರಿ ಕಾಣೆಯಾದ ತನ್ನ ಮಗನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮುಕ್ಕಣ್ಣ ತಂದೆ ರಂಗಪ್ಪ ಮಡಿವಾಳ, ಪ್ರಾಯ-65 ವರ್ಷ, ವೃತ್ತಿ-ದೋಬಿ, ಸಾ|| ಕುಂಠಿ ಮಹಾಮಾಯಾ ದೇವಸ್ಥಾನದ ಹತ್ತಿರ, ಹಬ್ಬುವಾಡಾ, ಕಾರವಾರ ರವರು ದಿನಾಂಕ: 24-08-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 117/2021, ಕಲಂ: 5, 8, 9, 11 ಕರ್ನಾಟಕ ಪ್ರಾಣಿ ಹತ್ಯೆ ಮತ್ತು ಪ್ರಾಣಿ ಸಂರಕ್ಷಣಾ ಕಾಯ್ದೆ-1964 ಹಾಗೂ ಕಲಂ: 11(1)(D) ಪ್ರಾಣಿ ಹಿಂಸಾ ಪರಿರಕ್ಷಣಾ ಕಾಯ್ದೆ-1960 ಮತ್ತು ಕಲಂ: 192(A) ಐ.ಎಮ್.ವಿ ಎಕ್ಟ್-1988 ಹಾಗೂ ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 03-08-2021 ರಂದು ಬೆಳಗಿನ ಜಾವ 04-42 ಗಂಟೆಗೆ ಮಂಕಿಯ ಮಾವಿನಕಟ್ಟಾದಲ್ಲಿರುವ ಅಲ್ಲಾವುದ್ದೀನ್ ಇಬ್ರಾಹಿಂ ಮನಸೆ ಇವರ ಟಾಯರ್ ಪಂಕ್ಚರ್ ಅಂಗಡಿಯ ಮುಂದೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನದ ಮೇಲೆ ಬಂದು ನಿಂತು ಅಲ್ಲಾವುದ್ದೀನ್ ಇವರ ಅಂಗಡಿಯ ಹತ್ತಿರ ನಿಂತಿರುವ ದನಗಳನ್ನು ಬೆನ್ನಟ್ಟಿ, ಅದರಲ್ಲಿ ಪಿರ್ಯಾದಿಯ ದನವನ್ನು ಹಿಡಿದು, ಗೋ ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಪಾಸ್ ಯಾ ಪರ್ಮಿಟ್ ಇಲ್ಲದೇ ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ತಳ್ಳಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಅಣ್ಣಪ್ಪ ತಂದೆ ಗುಮ್ಮಯ್ಯ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗುಳದಕೇರಿ, ತಾ: ಹೊನ್ನಾವರ ರವರು ದಿನಾಂಕ: 24-08-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ಅಶ್ವಿನಿ ತಂದೆ ಪುಟ್ಟಪ್ಪ ಈರಗಾರ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಚಾಕಲಬ್ಬಿ, ತಾ: ಕುಂದಗೋಳ, ಜಿ: ಧಾರವಾಡ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 16-08-2021 ರಂದು 13-00 ಗಂಟೆಗೆ ತಾನು ವ್ಯಾಸಂಗ ಮಾಡುತ್ತಿದ್ದ ಶಿರಸಿಯ ತೋಟಗಾರಿಕಾ ಕಾಲೇಜಿನ ಹಾಸ್ಟೆಲಿನಿಂದ ತನ್ನ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ರಜೆ ಅರ್ಜಿ ಬರೆದು ಅವಳ ಕೋಣೆಯಲ್ಲಿ ಇಟ್ಟು ಹಾಸ್ಟೆಲಿನಿಂದ ಹೋದವಳು, ಈವರೆಗೂ ಮನೆಗೂ ಹೋಗದೇ, ಹಾಸ್ಟೆಲಿಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪುಟ್ಟಪ್ಪ ತಂದೆ ಹನುಮಂತಪ್ಪ ಈರಗಾರ, ಪ್ರಾಯ-47 ವರ್ಷ, ವೃತ್ತಿ-ಕೆ.ಸ್.ಆರ್.ಟಿ.ಸಿ ಬಸ್ ನಿರ್ವಾಹಕ, ಸಾ|| ಚಾಕಲಬ್ಬಿ, ತಾ: ಕುಂದಗೋಳ, ಜಿ: ಧಾರವಾಡ ರವರು ದಿನಾಂಕ: 24-08-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಧರ ತಂದೆ ನಾರಾಯಣ ಪೂಜಾರಿ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಂಜುನಾಥ ಕಾಲೋನಿ, ಗಣೇಶನಗರ, ತಾ: ಶಿರಸಿ. ಈತನು ದಿನಾಂಕ: 24-08-2021 ರಂದು 18-00 ಗಂಟೆಯ ಸುಮಾರಿಗೆ ಶಿರಸಿ ಶಹರದ ಹೊಸ ಬಸ್ ಸ್ಟ್ಯಾಂಡ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜುಗಾರಾಟದ ಸಲಕರಣೆಗಳಾದ ನಗದು ಹಣ ಒಟ್ಟೂ 1,225/- ರೂಪಾಯಿ, ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01, ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಉಕ್ಕಲಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 24-08-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಹರೀಶ ತಂದೆ ಕೇಶವ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಅಡಿಕೆ ವ್ಯಾಪಾರ, ಸಾ|| ಸಣ್ಣಕೇರಿ, ಪೋ: ಇಸಳೂರು, ತಾ: ಶಿರಸಿ. ಈತನು ದಿನಾಂಕ: 24-08-2021 ರಂದು 14-00 ಗಂಟೆಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಂಬಿ ಬಸ್ ನಿಲ್ದಾಣದ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಬರ-ಹೋಗುವ ಸಾರ್ವಜನಿಕರಿಗೆ ಕೂಗಿ ಕರೆದು ಓ.ಸಿ ಮಟಕಾ ಜೂಗಾರಾಟದ ಅಂಕೆಗಳ ಮೇಲೆ ಹಣ ಪಂಥ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಬಂದ ಜನರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದು ಕೊಡುವಾಗ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ನಗದು ಹಣ 1,835/- ರೂಪಾಯಿ, 2). ಬಾಲ್ ಪೆನ್-1, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, 4). ಚೀಟಿ ಬರೆದು ಕೊಡಲು ತುಂಡು ಮಾಡಿ ಇಟ್ಟುಕೊಂಡಿದ್ದ 6 ಸಣ್ಣ ಸಣ್ಣ ಚೀಟಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶ್ಯಾಮ್ ವಿ. ಪಾವಸ್ಕರ್, ಪಿ.ಎಸ್.ಐ (ತನಿಖೆ), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 24-08-2021 ರಂದು 16-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 429 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಭಾಸ್ಕರ ತಂದೆ ವೆಂಕಟರಮಣ ಹೆಗಡೆ, ಪ್ರಾಯ-61 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅರಸಾಪುರ, ತಾ; ಶಿರಸಿ. ಈತನು ತಮ್ಮ ಬೆಟ್ಟದಲ್ಲಿರುವ ಮಾವಿನ ಮತ್ತು ಹೊನ್ನೆ ಗಿಡದ ಸುತ್ತಲು ಬುಡಕ್ಕೆ ಜಾನುವಾರುಗಳು ತಿನ್ನುವ ಹಿಂಡಿಯ ಜೊತೆಗೆ ಯೂರಿಯಾ ಗೊಬ್ಬರವನ್ನು ಮಿಶ್ರಣ ಮಾಡಿ ಹಾಕಿದ್ದಲ್ಲಿ, ಅದನ್ನು ಪ್ರಾಣಿಗಳು ತಿಂದು ಸಾಯುತ್ತವೆ ಎಂದು ಗೊತ್ತಿದ್ದೂ ಸಹ, ಗೊಬ್ಬರವನ್ನು ಗಿಡದ ಬುಡಕ್ಕೆ ಹಾಕಿ ಮಣ್ಣು ಮುಚ್ಚದೇ ಉದ್ದೇಶಪೂರ್ವಕವಾಗಿ ಗಿಡದ ಬುಡಕ್ಕೆ ಮೇಲ್ಗಡೆ ಹಾಕಿದ್ದರಿಂದ, ದಿನಾಂಕ: 24-08-2021 ರಂದು ತಾನು ಮೇಯಲು ಬಿಟ್ಟು ತಮ್ಮ ಆಕಳು ಮತ್ತು ಆಕಳು ಕರು ಬೆಳಿಗ್ಗೆ 08-30 ಗಂಟೆಯಿಂದ ಮಧ್ಯಾಹ್ನ 01-00 ಗಂಟೆಯ ನಡುವಿನ ಅವಧಿಯಲ್ಲಿ ಹಿಂಡಿಯನ್ನು ತಿನ್ನುವ ಭರದಲ್ಲಿ ಹಿಂಡಿಯ ಜೊತೆಗೆ ಮಿಶ್ರಣವಾಗಿದ್ದ ಯೂರಿಯಾ ಗೊಬ್ಬರವನ್ನು ತಿಂದು ಅಸ್ವಸ್ಥಗೊಂಡು ಮೃತಪಟ್ಟಿದ್ದರಿಂದ ನಮೂದಿತ ಆರೋಪಿತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಮುಪ್ಪನ್ನ ಚಲವಾದಿ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಳಲೆ, ಪೋ; ಅರಸಾಪುರ, ತಾ: ಶಿರಸಿ ರವರು ದಿನಾಂಕ: 24-08-2021 ರಂದು 16-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                       

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 324, 341, 447, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಣು ಗುಂಡು ಕಾಲಕುಂದ್ರಿ, 2]. ಗಣಪತಿ ಗುಂಡು ಕಾಲಕುಂದ್ರಿ, 3]. ಶಂಭಾಜಿ ಗುಂಡು ಕಾಲಕುಂದ್ರಿ, 4]. ಧರ್ಮರಾಜ ಗುಂಡು ಕಾಲಕುಂದ್ರಿ, 5]. ಶಿವಾಜಿ ಗುಂಡು ಕಾಲಕುಂದ್ರಿ ಹಾಗೂ ಅವರ ಮನೆಯ ಹೆಂಗಸರು ಹಾಗೂ ಮಕ್ಕಳು, ಸಾ|| (ಎಲ್ಲರೂ) ಸಾ|| ಹಳೇ ಕೊಣಪಾ, ತಾ: ಜೋಯಿಡಾ. ದಿನಾಂಕ: 24-08-2021 ರಂದು 09-00 ಗಂಟೆಗೆ ಜೋಯಿಡಾ ತಾಲೂಕಿನ ಹಳೇ ಕೊಣಪಾ ಗ್ರಾಮದಲ್ಲಿ ಪಿರ್ಯಾದಿಯ ಜಮೀನಿಗೆ ಹೋಗಿ, ಜಮೀನಿನ ಬೇಲಿಯನ್ನು ರಿಪೇರಿ ಮಾಡುತ್ತಿರುವ ಪಿರ್ಯಾದಿ ಹಾಗೂ ಪಿರ್ಯಾದಿಯ ತಮ್ಮನನ್ನು ಉದ್ದೇಶಿಸಿ ‘ನಿಮ್ಮ ಜಮೀನಿನಲ್ಲಿ ನಮ್ಮದು ಹಕ್ಕಿರುತ್ತದೆ. ಇಲ್ಲಿ ಬೇಲಿ ಹಾಕಬೇಡಿರಿ’ ಅಂತಾ ಹೇಳಿ ಮನೆಗೆ ಹೋಗಿ ಬೆತ್ತದ ಬಡಿಗೆಯನ್ನು ತೆಗೆದುಕೊಂಡು ಬಂದು ಬೇಲಿಯನ್ನು ಹಾಕುತ್ತಿದ್ದ ಪಿರ್ಯಾದಿಗೆ ತಲೆಯ ಹಿಂಬದಿಗೆ ಹಾಗೂ ಎಡಗೈಗೆ ಹೊಡೆದು, ತಪ್ಪಿಸಲು ಮಧ್ಯ ಬಂದಿದ್ದ ಪಿರ್ಯಾದಿಯ ತಮ್ಮ ಕೌಶಿಕ ತಂದೆ ಮಿಲಿಂದ ಕೊಡಕಣಿ, ಈತನಿಗೆ ಬೆತ್ತದ ಬಡಿಗೆಯಿಂದ ತಲೆಗೆ ಮತ್ತು ಕುತ್ತಿಗೆಗೆ ಬಡಿಗೆಯಿಂದ ಹೊಡೆದು ‘ಸೂಳೆ ಮಕ್ಕಳಾ, ಮತ್ತೇ ಬೇಲಿ ಹಾಕಿದರೆ ನಿಮ್ಮ ಕೈ ಕಾಲು ಮುರಿದು ಹಾಕುತ್ತೇನೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವದ ಬೆದರಿಕೆ ಹಾಕಿ, ನಂತರ ಆರೋಪಿ 1 ರಿಂದ 5 ನೇಯವರು ಅವರ ಮನೆಯ ಹೆಂಗಸರು ಹಾಗೂ ಮಕ್ಕಳು ಕೂಡಿಕೊಂಡು ಹೋಗುತ್ತಿದ್ದ ಪಿರ್ಯಾದಿಯ ಬೊಲೆರೋ ಜೀಪನ್ನು ಅಡ್ಡಗಟ್ಟಿ, ರಸ್ತೆಯ ಮೇಲೆ ಮರದ ಕಟ್ಟಿಗೆಯನ್ನು ಅಡ್ಡ ಹಾಕಿ ‘ಸೂಳೆ ಮಕ್ಕಳಾ, ಬೋಳಿ ಮಕ್ಕಳಾ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ‘ಇನ್ನೊಂದು ಸಲ ಜಮೀನಿಗೆ ಬಂದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಕಾರ್ತಿಕ ತಂದೆ ಮಿಲಿಂದ ಕೊಡಕಣಿ, ಪ್ರಾಯ-23 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಕ್ಲಬ್ ರೋಡ್, ಹಳೇ ದಾಂಡೇಲಿ, ದಾಂಡೇಲಿ ರವರು ದಿನಾಂಕ: 24-08-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: 324, 504, 506, 109 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಕಾರ್ತಿಕ ತಂದೆ ಮಿಲಿಂದ ಕೊಡಕಣಿ, 2]. ಕೌಶಿಕ ತಂದೆ ಮಿಲಿಂದ ಕೊಡಕಣಿ, 3]. ಸದ್ದಾಂ ಅಬ್ದುಲ್ ಹಮೀದ್ ಅತ್ತಾರ್, 4]. ಸಮೀರ್ ಅಬ್ದುಲ್ ಖಾದರ್ ನದಾಫ್, 5]. ಸುಭಾನಿ ಅಬ್ದುಲ್ ಖಾದರ್ ಸವಣೂರ, 6]. ಸೈಯದ್, ಸಾ|| ಕೊಣಪಾ, ತಾ|| ಜೋಯಿಡಾ. ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ಮತ್ತು 2 ನೇಯವರು ಕೊಣಪಾ ಗ್ರಾಮದಲ್ಲಿರುವ ಜಮೀನಿನ ವಿಷಯಕ್ಕೆ ಸಂಬಂಧಿಸಿ ಮೊದಲಿನಿಂದಲೂ ಗಾಯಾಳು ರಾಣು ಕಾಲಕುಂದ್ರಿ ಇವನೊಂದಿಗೆ ತಂಟೆ ತಕಾರಾರು ಮಾಡುತ್ತಾ ಬಂದವರು, ದಿನಾಂಕ: 24-08-2021 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ಗಾಯಾಳು ಜಮೀನಿನ ಬೇಲಿಯ ವಿಷಯಕ್ಕೆ ಸಂಬಂಧಿಸಿ ಆರೋಪಿ 1 ಮತ್ತು 2 ನೇಯವರಿಗೆ ‘ಯಾಕೆ ಜಮೀನಿನ ಬೇಲಿ ಸರಿ ಮಾಡುತ್ತಿದ್ದಿರಿ? ಈ ಜಮೀನಿನ ವಿಷಯಕ್ಕೆ ಸಂಬಂಧಿಸಿ ಮಾನ್ಯ ದಾಂಡೇಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಅದು ಮುಗಿದ ನಂತರ ನೀವು ಬೇಲಿ ಹಾಕಿಕೊಳ್ಳಿ’ ಅಂತಾ ಹೇಳಿದ್ದಕ್ಕೆ ಒಮ್ಮೇಲೆ ಸಿಟ್ಟಾದ ಆರೋಪಿ 1 ಮತ್ತು 2 ನೇಯವರು ಗಾಯಾಳು ರಾಣು ಕಾಲಕುಂದ್ರಿ ಯನ್ನು ಉದ್ದೇಶಿಸಿ ‘ಬೋಳಿ ಮಗನೆ, ಸೂಳೆ ಮಗನೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಿರುವುದಲ್ಲದೇ ಗಾಯಾಳು ‘ಯಾಕೆ ಬೈಯ್ತುತ್ತಿದ್ದಿರಿ?’ ಅಂತಾ ಕೇಳಿದ್ದಕ್ಕೆ ಆರೋಪಿ 2 ನೇಯವನು ಗಾಯಾಳುವನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದು ಆರೋಪಿ 1 ನೇಯವನಿಗೆ ಗಾಯಾಳುವಿಗೆ ‘ಹೊಡೆ’ ಅಂತಾ ಪ್ರಚೋದಿಸಿದ್ದರಿಂದ ಅದಕ್ಕೆ ಆರೋಪಿ 1 ನೇಯವನು ಅಲ್ಲಿಯೇ ಇದ್ದ ಬಡಿಗೆಯಿಂದ ಗಾಯಾಳುವಿಗೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ಆರೋಪಿ 1 ಮತ್ತು 2 ನೇಯವರ ಜೊತೆ ಇದ್ದ ಆರೋಪಿ 3 ರಿಂದ 4 ನೇಯವರು ಸಹ ಆರೋಪಿ 1 ನೇಯವನಿಗೆ ಗಾಯಾಳು ರಾಣು ಕಾಲಕುಂದ್ರಿಗೆ ‘ಹೊಡೆ’ ಅಂತಾ ಪ್ರಚೋದಿಸಿರುತ್ತಾರೆ. ಹಾಗೂ ಆರೋಪಿ 1 ಮತ್ತು 2 ನೇಯವರು ಸೇರಿ ಗಾಯಾಳುವನ್ನು ಉದ್ದೇಶಿಸಿ ‘ಈ ದಿವಸ ಉಳಿದುಕೊಂಡಿದ್ದಿ. ಇನ್ನೊಂದು ದಿನ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಶಿವಾಜಿ ತಂದೆ ಗುಂಡು ಕಾಲಕುಂದ್ರಿ, ಪ್ರಾಯ-44 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗಾಂವಠಾಣ, ತಾ: ಹಳಿಯಾಳ ರವರು ದಿನಾಂಕ: 24-08-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 138/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಕೇದಾರಿ ತೊರ್ಲೇಕರ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಂದಿಗದ್ದಾ ಗ್ರಾಮ, ತಾ: ಹಳಿಯಾಳ. ಈತನು ದಿನಾಂಕ: 24-08-2021 ರಂದು 16-40 ಗಂಟೆಗೆ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಅಕ್ರಮ ಲಾಭಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ನಿಂತು ಬರ-ಹೋಗುವ ಜನರಿಗೆ ಕರೆದು, ಅದೃಷ್ಟ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುತ್ತೇನೆ ಅಂತ ಜನರ ಮನವೊಲಿಸಿ, ಅವರಿಂದ ಹಣ ಪಡೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ, ದಾಳಿಯ ಕಾಲಕ್ಕೆ ಜೂಗಾರಾಟದ ಸಾಮಗ್ರಿಗಳಾದ 1). ನಗದು ಹಣ 1,150/- ರೂಪಾಯಿ, 2). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, ಇವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಎಲ್&ಓ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 24-08-2021 ರಂದು 20-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಲೀಂ ತಂದೆ ಅಬ್ದುಲ್ ಮಜೀದ್ ನಾಯಿಕ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನವಗ್ರಾಮ ಕಾಲೋನಿ, ಸೀತಾವಾಡಾ, ರಾಮನಗರ, ತಾ: ಜೋಯಿಡಾ. ಈತನು ರಾಮನಗರದ ಬೆಳಗಾವಿ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕಾಗಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ದಿನಾಂಕ: 24-08-2021 ರಂದು 18-50 ಗಂಟೆಗೆ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ನಗದು ಹಣ 700/- ರೂಪಾಯಿ, ಓಸಿ ಮಟಕಾ ಚೀಟಿ-1, ಬಾಲ್ ಪೆನ್-1 ನೇದವುಗಳೊಂದಿಗೆ ಆರೋಪಿತನು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಿನೋದ ಎಸ್. ಕೆ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 24-08-2021 ರಂದು 19-55 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಇಸ್ಮಾಯಿಲ್ ತಂದೆ ಗೌಸಸಾಬ್ ಮುಲ್ಲಾ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲ್ಮೇಶ್ವರ ಗಲ್ಲಿ, ಲೋಂಡಾ, ತಾ: ಖಾನಾಪುರ, ಜಿ: ಬೆಳಗಾವಿ, ಹಾಲಿ ಸಾ|| ರೈಲ್ವೇ ನಿಲ್ದಾಣದ ಹತ್ತಿರ, ತಿನೈಘಾಟ್, ತಾ: ಜೋಯಿಡಾ. ಈತನು ತಿನೈಘಾಟ್ ರೈಲ್ವೇ ನಿಲ್ದಾಣಕ್ಕೆ ಹೊಗುವ ಸಾರ್ವಜನಿಕ ರಸ್ತೆಯಲ್ಲಿ ಮರದ ಕೆಳಗೆ ನಿಂತುಕೊಂಡು ತನ್ನ  ಲಾಭಕ್ಕಾಗಿ ಓ.ಸಿ ಮಟಕಾ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ನಡೆಸುತ್ತಿರುವಾಗ ದಿನಾಂಕ: 24-08-2021 ರಂದು 19-10 ಗಂಟೆಗೆ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ನಗದು ಹಣ 870/- ರೂಪಾಯಿ, ಓ.ಸಿ ಮಟಕಾ ಚೀಟಿ-1, ಬಾಲ್ ಪೆನ್-1 ನೇದವುಗಳೊಂದಿಗೆ ಆರೋಪಿತನು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಪ್ಪ ಕೆ. ದೊಡ್ಡಮನಿ, ಎ.ಎಸ್.ಐ, ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 24-08-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 24-08-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 23/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಾರುತಿ ತಂದೆ ಪಿ. ವೆಂಕಟೇಶ, ಪ್ರಾಯ-21 ವರ್ಷ, ವೃತ್ತಿ-ಬಳ್ಳಾರಿಯಲ್ಲಿ ಎಮ್.ಜಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸ, ಸಾ|| ಮಧುನಿವಾಸ, ದುರ್ಗಮ್ಮ ದೇವಸ್ಥಾನದ ಹತ್ತಿರ, ಸಾಯಿ ಆಸ್ಪತ್ರೆ ಎದುರುಗಡೆಗೆ, ಎಸ್.ಜಿ ಕಾಲೇಜ್ ರಸ್ತೆ, ಬಳ್ಳಾರಿ. ಈತನು ಬಳ್ಳಾರಿಯಲ್ಲಿ ಎಮ್.ಜಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುಕೊಂಡಿದ್ದವನು, ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೊರಟು ಬಂದು ದಿನಾಂಕ: 20-08-2021 ರಂದು ಕಾರವಾರ ಕುಟಿನ್ಹೋ ರಸ್ತೆಯಲ್ಲಿರುವ ಬಿ.ವಿ ರೆಸಿಡೆನ್ಸಿ ಲಾಡ್ಜ್ ನಲ್ಲಿ ರೂಮ್ ನಂ: 109 ನೇದರಲ್ಲಿ ವಾಸವಾಗಿದ್ದವನು, ದಿನಾಂಕ: 21-08-20212 ರಂದು ಬೆಳಿಗ್ಗೆ 10-00 ಗಂಟೆಗೆ ರೂಮಿನಿಂದ ಹೊರಗೆ ಬಂದು ಪುನಃ ರೂಮಿನೊಳಗೆ ಹೋಗಿ ಬಾಗಿಲು ಹಾಕಿಕೊಂಡವನು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು, ಜೀವನದಲ್ಲಿ ಜಿಗುಪ್ಸೆಗೊಂಡು ರೂಮಿನಲ್ಲಿದ್ದ ಸೀಲಿಂಗ್ ಫ್ಯಾನಿಗೆ ಬೆಡ್ ಶೀಟಿನಿಂದ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇದರ ಹೊರತು ತನ್ನ ಮಗನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪಿ. ವೆಂಕಟೇಶ ತಂದೆ ಭೀಮಣ್ಣಾ, ಪ್ರಾಯ-48 ವರ್ಷ, ಸಾ|| ಮಧುನಿವಾಸ, ದುರ್ಗಮ್ಮ ದೇವಸ್ಥಾನದ ಹತ್ತಿರ, ಸಾಯಿ ಆಸ್ಪತ್ರೆ ಎದುರುಗಡೆಗೆ, ಎಸ್.ಜಿ ಕಾಲೇಜ್ ರಸ್ತೆ, ಬಳ್ಳಾರಿ ರವರು ದಿನಾಂಕ: 24-08-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವಿಕ್ರಮ್ ತಂದೆ ಪ್ರಭುದಾಸ್ ಜಾಧವ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಮಾಳೆಗಾಂವ ತಾಂಡಾ, ಔರಾದ್, ಬೀದರ್. ಈತನು ದಿನಾಂಕ: 24-08-2021 ರಂದು ಸಾಯಂಕಾಲ 06-00 ಗಂಟೆಯ ಸುಮಾರಿಗೆ ಗೋಕರ್ಣದ ಕುಡ್ಲೇ ಬೀಚ್ ಕಡಲ ತೀರದಲ್ಲಿ ಈಜಾಡುತ್ತಿದ್ದಾಗ ಆಕಸ್ಮಿಕವಾಗಿ ಬಂದ ಸಮುದ್ರದ ಅಲೆಯ ಸೆಳತಕ್ಕೆ ಸಿಲುಕಿ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿರುತ್ತಾನೆ. ಇದರ ಹೊರತು ಆತನ ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಜಭಕ್ಷ ತಂದೆ ಶರೀಫಸಾಬ್ ಕಳ್ಳಿಮನಿ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಉಕ್ಕುಂದ, ತಾ: ರಾಣೆಬೆನ್ನೂರು, ಜಿ: ಹಾವೇರಿ ರವರು ದಿನಾಂಕ: 24-08-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 32/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವಿಜಯ ತಂದೆ ಗಜಾನನ ಹೆಗಡೆ, ಪ್ರಾಯ-65 ವರ್ಷ, ಸಾ|| ನಡುಚಿಟ್ಟೆ, ಕರ್ಕಿ, ತಾ: ಹೊನ್ನಾವರ. ಪಿರ್ಯಾದುದಾರರ ಮಾವನಾದ ಇವರು ಅವಿವಾಹಿತರಾಗಿದ್ದು, ಕಳೆದ 5 ವರ್ಷಗಳಿಂದ ಅಶಕ್ತರಾಗಿದ್ದು, ಅಲ್ಲಿ ಇಲ್ಲಿ ತಿರುಗಾಡಿಕೊಂಡಿದ್ದವರು, ಯಾವುದೋ ಕಾರಣಕ್ಕೆ ದಿನಾಂಕ: 23-08-2021 ರಂದು 00-00 ಗಂಟೆಯಿಂದ ದಿನಾಂಕ: 24-08-2021 ರಂದು 18-00 ಗಂಟೆಯ ನಡುವಿನ ಅವಧಿಯಲ್ಲಿ ಹೈಗರಮಕ್ಕಿ ಹೊಳೆಯ ಹತ್ತಿರ ಹೋದವರು, ಅಕಸ್ಮಾತ್ ಆಗಿ ಕಾಲು ಜಾರಿ ಹೊಳೆಯ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದು, ಇದರ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ವಿಶ್ವನಾಥ ತಂದೆ ಮಹಾಬಲೇಶ್ವರ ಹೆಗಡೆ, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಲಭಾಗ, ಅರೇಅಂಗಡಿ, ತಾ: ಹೊನ್ನಾವರ ರವರು ದಿನಾಂಕ: 24-08-2021 ರಂದು 21-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 26-08-2021 02:18 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080