ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 24-12-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 34/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಕ್ಷಯ ತಂದೆ ಜಗದೀಶ ರಜಪೂತ, ಪ್ರಾಯ-22 ವರ್ಷ, ವೃತ್ತಿ-ಜೊಮೆಟೋ ಕಂಪನಿಯಲ್ಲಿ ಕೆಲಸ, ಸಾ|| ಕಾಡರುದ್ರೇಶ್ವರ ದೇವಸ್ಥಾನದ ಹತ್ತಿರ, ಗಿಡ್ಡಾ ರೋಡ್, ಕಾರವಾರ (ಬಜಾಜ್ ಸಿಟಿ100 ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-4671 ನೇದರ ಸವಾರ). ದಿನಾಂಕ: 24-12-2021 ರಂದು ಬೆಳಗ್ಗೆ 11-00 ಗಂಟೆಯಿಂದ 11-15 ಗಂಟೆಯ ಅವಧಿಯಲ್ಲಿ ಪಿರ್ಯಾದಿಯ ತಾಯಿಯವರಾದ ಶ್ರೀಮತಿ ಮಾದೇವಿ ಕೋಂ. ಶೇಖರ  ಕರಿಬಣ್ಣನವರ, ಪ್ರಾಯ-65 ವರ್ಷ, ವೃತ್ತಿ-ಮನೆಯಲ್ಲಿ ಕೆಲಸ, ಸಾ|| ಕನ್ನಡ ಶಾಲೆಯ ಹಿಂದೆ, ಸರ್ವೋದಯ ನಗರ, ಕಾರವಾರ, ಇವರು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ವಿವೇಕಾನಂದ ನಗರ ಕ್ರಾಸ್ ಹತ್ತಿರ ಸದಾಶಿವಗಡ ಕಡೆಯಿಂದ ಕಾರವಾರ ಕಡೆಗೆ ಬರುವ ರಸ್ತೆಯ ಪಕ್ಕ ತೀರಾ ಎಡಬದಿಯಲ್ಲಿ ನಿಂತಿರುವಾಗ ಬಜಾಜ್ ಸಿಟಿ100 ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-4671 ನೇದರ ಆರೋಪಿ ಸವಾರನು  ತನ್ನ ಮೋಟಾರ್ ಸೈಕಲನ್ನು ಸದಾಶಿವಗಡ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ತಾಯಿಯವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ತಾಯಿಯವರಿಗೆ ಎಡಗಾಲಿನ ಮಂಡಿಯ ಕೆಳಗೆ ಮೂಳೆ ಮುರಿತವಾಗಿ ಭಾರೀ ರಕ್ತಗಾಯ, ಎಡಗೈ ತೋಳಿನ ಹತ್ತಿರ ಮೂಳೆ ಮುರಿತವಾಗಿ ಭಾರೀ ಒಳನೋವು, ಎಡಗೈ ಮೊಣಕೈ ಕೆಳಭಾಗದಲ್ಲಿ ಮೂಳೆ ಮುರಿತವಾಗಿ ಭಾರೀ ಒಳನೋವು, ಎಡಗಣ್ಣಿನ ಕೆಳಗೆ ತೆರಚಿದ ಗಾಯ ಹಾಗೂ ಒಳನೋವು, ಎಡಗಣ್ಣಿನ ಮೇಲೆ ಗಾಯ ಪಡಿಸಿದ್ದಲ್ಲದೇ, ಆರೋಪೊ ಮೋಟಾರ್ ಸೈಕಲ್ ಸವಾರನು ತನಗೂ ಸಹ ಬಲಗಾಲಿನ ಮಂಡಿಯ ಮೇಲೆ ತೆರಚಿದ ಗಾಯ, ಬಲ ಮೊಣಕೈಗೆ ತೆರಚಿದ ಗಾಯ, ಎಡಗೈ ಮೊಣಕೈಗೆ ತೆರಚಿದ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ಶೇಖರ ಕರಿಬಣ್ಣನವರ, ಪ್ರಾಯ-31 ವರ್ಷ, ವೃತ್ತಿ-ಖಾಸಗೀ ಕೆಲಸ ಸಾ|| ಕನ್ನಡ ಶಾಲೆಯ ಹಿಂದೆ ಸರ್ವೋದಯ ನಗರ, ಕಾರವಾರ ರವರು ದಿನಾಂಕ: 24-12-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನು ಹೀರೋ ಕಂಪನಿಯ ಮೋಟಾರ್ ಸೈಕಲ್ ನಂ: 13ಂ ↑068 156ಏ ನೇದರ ಸವಾರನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 23-12-2021 ರಂದು 18-45 ಗಂಟೆಯ ಸಮಯಕ್ಕೆ ತನ್ನ ಮೋಟಾರ್ ಸೈಕಲ್ ನಂ: 13ಂ ↑068 156ಏ ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಕಾರವಾರದಿಂದ ಅರ್ಗಾ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರೈಟ್ ಇಂಡಿಕೇಟರ್ ಹಾಕದೇ ತನ್ನ ಮೋಟಾರ್ ಸೈಕಲನ್ನು ಒಮ್ಮೇಲೇ ನೇವಲ್ ಬೇಸ್ ಮುಖ್ಯ ಗೇಟ್ ಕಡೆಗೆ ತಿರುಗಿಸಿದ್ದು, ಪಿರ್ಯಾದಿಯವರು ತನ್ನ ಮೋಟಾರ್ ಸೈಕಲ ನಂ: ಕೆ.ಎ-0/ಎಸ್-3226 ರ ಮೇಲಾಗಿ ಕಾರವಾರದಿಂದ ಅಮದಳ್ಳಿ ಕಡೆಗೆ ಅವನ ಹಿಂದಿನಿಂದ ಹೋಗುತ್ತಿದ್ದವರು, ಸದರ ಮೋಟಾರ್ ಸೈಕಲಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿ, ಪಿರ್ಯಾದಿಯವರಿಗೆ ಕಾಲಿಗೆ ಗಾಯನೋವು ಉಂಟಾದ ಬಗ್ಗೆ ಪಿರ್ಯಾದಿ ಶ್ರೀ ಸುದೇಶ ತಂದೆ ಕೃಷ್ಣ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಯ್ಯನಬಾಗ, ಅಮದಳ್ಳಿ, ಕಾರವಾರ ರವರು ದಿನಾಂಕ: 24-12-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 61/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀಕಾಂತ ತಂದೆ ಹನುಮಂತ ಜೋಗಿ, ಪ್ರಾಯ-19 ವರ್ಷ, ವೃತ್ತಿ-ಐಟಿಐ ವಿದ್ಯಾರ್ಥಿ, ಸಾ|| ಚಿಂಚಲಕಟ್ಟೆ, ಹೊಸೂರು, ತಾ: ಬಾದಮಿ, ಜಿ: ಬಾಗಲಕೋಟ, ಹಾಲಿ ಸಾ|| ಪಿಂಪಲಕಟ್ಟಾ, ಸದಾಶಿವಗಡ, ಕಾರವಾರ. ಪಿರ್ಯಾದಿಯವರ ಮಗನಾದ ಈತನು ಉಳಗಾದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದು, ಸರಿಯಾಗಿ ಮನೆಯಲ್ಲಿ ವ್ಯಾಸಾಂಗ ಮಾಡದೇ ಇದ್ದಾಗ ‘ಓದು, ಜಾಸ್ತಿ ಓಡಾಡಬೇಡ’ ಅಂತಾ ಬೈಯ್ದಿದ್ದು ಇರುತ್ತದೆ ಇದರಿಂದ ಆತನು ತಾನು ಎಲ್ಲರ ಜೊತೆಗೆ ಆರಾಮಾಗಿ ಸುತ್ತಾಡಬೇಕು ಅಂತಾ ಹೇಳಿ ಎರಡು-ಮೂರು ಬಾರಿ ಮನೆ ಬಿಟ್ಟು ಹೋಗಿದ್ದನು ಹಾಗೂ ಸ್ವಲ್ಪ ಸಮಯದ ಬಳಿಕ ಅಥವಾ ಒಂದೆರಡು ದಿನಗಳಲ್ಲಿ ವಾಪಸ್ ಬರುತಿದ್ದನು. ನಾವು ಆತನಿಗೆ ‘ಈ ರೀತಿ ಮಾಡಬೇಡ’ ಅಂತಾ ಬುದ್ಧಿವಾದ ಹೇಳಿದ್ದೆವು. ದಿನಾಂಕ: 21-12-2021 ರಂದು ರಾತ್ರಿ ನಾವು ಮನೆಯವರೆಲ್ಲgರೂ ಊಟ ಮಾಡಿ ಮಲಗಿದ್ದೆವು. ದಿನಾಂಕ: 22-12-2021 ರಂದು ಬೆಳಿಗ್ಗೆ. ನಾನು ಹಾಗೂ ನನ್ನ ಹೆಂಡತಿ ಕದ್ರಾ ಕ್ರಾಸ ಹತ್ತಿರ ಇರುವ ನಮ್ಮ ಕಾಮಾಕ್ಷಿ ಹೊಟೇಲನಲ್ಲಿ ಕೆಲಸ ಮುಗಿಸಿ ಸಾಯಂಕಾಲ ಮನಗೆ ಬಂದಾಗ ಶ್ರೀಕಾಂತ ಈತನು ಮನೆಯಲ್ಲಿರಲಿಲ್ಲ. ನಾನು ನನ್ನ ಹಿರಿಯ ಮಗ ನಾಗಪ್ಪನಿಗೆ ವಿಚಾರಿಸಿದಾಗ ಶ್ರೀಕಾಂತ ಈತನು ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಮನೆಗೆ ಬಂದವನು, ಕಾಲೇಜಿನ ಬ್ಯಾಗನ್ನು ಹಾಕಿಕೊಂಡು ಓದಲು ಕಾರವಾರದ ಗೆಳೆಯರ ಮನೆಗೆ ಹೋಗಿ ಬರುತ್ತೇನೆ ಅಂತಾ ಹೋಗಿದ್ದಾನೆ ಅಂತಾ ಹೇಳಿದನು. ಶ್ರೀಕಾಂತ ಈತನು ಈ ಹಿಂದೆಯು ಎರಡು-ಮೂರು ಬಾರಿ ಮನೆ ಬಿಟ್ಟು ಹೋಗಿ ವಾಪಸ್ ಬಂದಿದ್ದರಿಂದ ಆತನು ವಾಪಸ್ ಬರಬಹುದು ಅಂತಾ ನಾವು ಸುಮ್ಮನಾದೆವು. ರಾತ್ರಿಯಾದರು ಬರದೇ ಇದ್ದುದ್ದರಿಂದ ಸದಾಶಿವಗಡ ಹಾಗೂ ಕಾರವಾರ ಮಾಜಾಳಿಯ ಬಸ್ ಸ್ಟ್ಯಾಂಡ್ ಕಡೆಗಳಲ್ಲಿ ಹುಡುಕಾಡಿ ನೋಡಿದರು ಸಿಗಲಿಲ್ಲ. ನಮ್ಮ ಸಂಬಂಧಿಕರ ಮನೆಗೆ ಏನಾದರೂ ಹೋಗಿದ್ದಾನೋ ಹೇಗೆ ಅಂತಾ ವಿಚಾರಿಸಲಾಗಿ ಅಲಿಯೂ ಹೋಗಿಲ್ಲ ಅಂತಾ ತಿಳಿಸಿದರು. ನಮ್ಮ ಮನೆಯಲ್ಲಿ ನೋಡಲಾಗಿ ನಮ್ಮ ಮನೆಯ ಕಪಾಟಿನಲಿಟ್ಟಿದ್ದ ಸ್ವಲ್ಪ ಹಣ ಇರಲಿಲ್ಲ ಹಾಗೂ ಶ್ರೀಕಾಂತ ಈತನ ಆಧಾರ್ ಕಾರ್ಡ್ ಹಾಗೂ ಶಾಲಾ ದಾಖಲಾತಿ ಇರಲಿಲ್ಲ. ಶ್ರೀಕಾಂತ ಈತನು ದಿನಾಂಕ: 22-12-2021 ರಂದು ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಕಾರವಾರಕ್ಕೆ ಓದಲು ಹೋಗುತ್ತೇನೆ ಅಂತಾ ಹೇಳಿ ಕಾಲೇಜಿನ ಬ್ಯಾಗ್ ಹಾಕಿಕೊಂಡು ಮನೆಯಲ್ಲಿದ್ದ ಹಣವನ್ನು ಹಾಗೂ ಆತನ ಆಧಾರ್ ಕಾರ್ಡ್ ಮತ್ತು ಶಾಲಾ ದಾಖಲಾತಿಯನ್ನು ತೆಗೆದುಕೊಂಡು ಕಾರವಾರಕ್ಕೆ ಹೋಗುತ್ತೇನೆ ಅಂತಾ ಹೇಳಿ ಎಲ್ಲಯೋ ಹೋಗಿ ಕಾಣೆಯಾಗಿರುತ್ತಾನೆ. ನನ್ನ ಮಗ ಕಾಣೆಯಾದಾಗಿನಿಂದ ಇಲ್ಲಿಯವರೆಗೂ ಹುಡುಕಾಡಿ ಸಿಗದೇ ಇದ್ದುದ್ದರಿಂದ ಸದ್ರಿ ಕಾಣೆಯಾದ ನನ್ನ ಮಗನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಹನುಮಂತ ತಂದೆ ಅಡಿಯಪ್ಪ ಜೋಗಿ, ಪ್ರಾಯ-55 ವರ್ಷ, ವೃತ್ತಿ-ಹೋಟೆಲ್ ಬಿಸಿನೆಸ್, ಸಾ|| ಚಿಂಚಲಕಟ್ಟೆ, ಹೊಸೂರು, ತಾ: ಬಾದಮಿ, ಜಿ: ಬಾಗಲಕೋಟ, ಹಾಲಿ ಸಾ|| ಪಿಂಪಲಕಟ್ಟಾ, ಸದಾಶಿವಗಡ, ಕಾರವಾರ ರವರು ದಿನಾಂಕ: 24-12-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ವಿನೋದ ತಂದೆ ಬಾಲಚಂದ್ರ ಅಂಬಿಗ, ಸಾ|| ತಾರಿವಾಡ, ಸದಾಶಿವಗಡ, ಕಾರವಾರ. ಈತನು ದಿನಾಂಕ: 24-12-2021 ರಂದು ಮಧ್ಯಾಹ್ನ 19-00 ಘಂಟೆಗೆ ತನ್ನ ತಾಬಾ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಗೋವಾ ರಾಜ್ಯ ತಯಾರಿಕೆಯ McDOWELLS NO-1 RESERVE WHISKY ORIGINAL, 180 ML for sale in goa ಅಂತಾ ನಮೂದಿದ್ದ 24 ಬಾಟಲಿಗಳನ್ನು ಹಾಗೂ ಘಾಟು ಸಾರಾಯಿ ವಾಸನೆ ಇರುವ ಸಾರಾಯಿ ತುಂಬಿದ ಹಳದಿ ಬಣ್ಣದ ಕ್ಯಾನ್ ಅನ್ನು ಯಾವುದೇ ಪಾಸ್ ಅಥವಾ ಪರ್ಮಿಟ ಇಲ್ಲದೇ ಗೋವಾ ಸಾರಾಯಿಯನ್ನು ತೆಗೆದುಕೊಂಡು ಬಂದು ಮಾರಾಟ ಮಾಡುವ ಉದ್ದೇಶದಿಂದ ತಾರಿವಾಡಾದ ದಕ್ಕೆಯಿಂದ ಸುಮಾರು 60 ಮೀಟರ್ ಉತ್ತರಕ್ಕೆ ಸದಾಶಿವಗಡ ರಸ್ತೆಯ ಪಕ್ಕ ಇರುವ ಮಿನಿ ವಾಟರ್ ಟ್ಯಾಂಕಿನ ಪಕ್ಕ ಇರುವ ಹಳದಿ ಬಣ್ಣದ ಪ್ಲಾಸ್ಟಿಕ್ ಹೊದಿಕೆ ಇರುವ ಹಳೆಯ ಶ್ರೀ ರಿಯಾಜ್ ಶೇಖ್, ಸಾ|| ಹುಬ್ಬಳ್ಳಿ ರವರಿಗೆ ಸೇರಿದ ಕಟ್ಟಡ/ಶೆಡ್ ನಲ್ಲಿ ನಮೂದಿತ ಆರೋಪಿತನು ಸುಮಾರು ವರ್ಷದಿಂದ ಸದರ ಶೆಡ್ ನಲ್ಲಿ ವಾಸವಾಗಿದ್ದು, ಆ ಶೆಡ್ ನಲ್ಲಿ ತನ್ನ ವಶದಲ್ಲಿಟ್ಟುಕೊಂಡಾಗ ದಾಳಿ/ಶೋಧನೆ ಮಾಡುವ ಸಮಯದಲ್ಲಿ ಆರೋಪಿತನು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂಪತ ಇ. ಸಿ, ಪಿ.ಎಸ್.ಐ (ಕಾ&ಸು), ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 24-12-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 223/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಬಾಬು ತಂದೆ ಜಟ್ಟಪ್ಪಾ ಪಟಗಾರ, ಪ್ರಾಯ-40 ವರ್ಷ, ವೃತ್ತಿ-ಪೆಂಡಲ್ ಹಾಕುವ ಕೆಲಸ, ಸಾ|| ಹೊಸ್ಕೇರಿ, ಮಾಸೂರು, ತಾ: ಕುಮಟಾ. ಈತನು ದಿನಾಂಕ: 24-12-2021 ರಂದು 10-40 ಗಂಟೆಗೆ ಕುಮಟಾ ತಾಲೂಕಿನ ಮಾಸೂರು ಆಡುಮಕ್ಕಳ ದೇವಸ್ಥಾನ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಅದನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ನಗದು ಹಣ 2,230/- ರೂಪಾಯಿ ಹಾಗೂ ಓ.ಸಿ ಆಟದ ಸಲಕರಣೆಗಳೊಂದಿಗೆ ದಾಳಿಯ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಪದ್ಮಾ ದೇವಳಿ, ಡಬ್ಲ್ಯೂ.ಪಿ.ಎಸ್.ಐ (ತನಿಖೆ-2), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 24-12-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 112/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ವಿದ್ಯಾ ಕೋಂ. ಸಂದೀಪ ಹರಿಜನ, ಪ್ರಾಯ-23 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮನೆ ನಂ: 443, ಗುರುದ್ವಾರ ರೋಡ್, ಮಂಗೊರ ಹಿಲ್, ವಾಸ್ಕೋಡಗಾಮ, ಬೈನಾ, ದಕ್ಷಿಣ ಗೋವಾ, ಗೋವಾ. ಪಿರ್ಯಾದಿಯ ಹೆಂಡತಿಯಾದ ಇವಳು ಕಳೆದ ಒಂದು ವರ್ಷದ ಹಿಂದೆ ಪಿರ್ಯಾದಿಯವರನ್ಮ್ನ ಗುರು ಹಿರಿಯರ ಒಪ್ಪಿಗೆಯಂತೆ ರಜಿಸ್ಟರ್ ಆಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ಮದುವೆ ಕಾರ್ಯ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ದಿನಾಂಕ: 21-11-2021 ರಂದು ಶಾಸ್ತ್ರೋಕ್ತವಾಗಿ ಮದುವೆಯಾಗಿ ಪಿರ್ಯಾದಿಯೊಂದಿಗೆ  ಚೆನ್ನಾಗಿಯೇ ಇದ್ದವಳು, ದಿನಾಂಕ: 24-12-2021 ರಂದು ಪ್ರವಾಸಕ್ಕೆ ಅಂತಾ ಪಿರ್ಯಾದಿಯೊಂದಿಗೆ ಕಾರಿನಲ್ಲಿ ಮುರ್ಡೇಶ್ವರಕ್ಕೆ ಬಂದು ಪಿರ್ಯಾದಿಯು ಕಾರನ್ನು ಮುರ್ಡೇಶ್ವರ ದೇವಸ್ಥಾನದ ಆವರಣದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ 14-30 ಗಂಟೆಗೆ ಪಿರ್ಯಾದಿಯು ರೂಮ್ ನೋಡಲು ಅಂತಾ ಆರ್.ಎನ್.ಎಸ್ ಗೆಸ್ಟ್ ಹೌಸಿಗೆ ಹೋಗಿದ್ದು, ವಿದ್ಯಾ ಇವಳು ಪಾರ್ಕಿಗ್ ಸ್ಥಳದ ಹತ್ತಿರ ಕಟ್ಟೆ ಮೇಲೆ ಕುಳಿತುಕೊಂಡಿದ್ದವಳು, ಮರಳಿ ಪಿರ್ಯಾದಿಯು 15-00 ಗಂಟೆಗೆ ಕಾರ್ ನಿಲ್ಲಿಸಿದ ಸ್ಥಳಕ್ಕೆ ಬಂದಾಗ ವಿದ್ಯಾ ಇವಳು ಅಲ್ಲಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಈವರೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಕಾರಣ ಕಾಣೆಯಾದ ವಿದ್ಯಾ ಇವಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸಂದೀಪ ತಂದೆ ಶ್ರೀಮಂತ ಹರಿಜನ, ಪ್ರಾಯ-33 ವರ್ಷ, ವೃತ್ತಿ-ಟ್ಯಾಕ್ಸಿ ಚಾಲಕ, ಸಾ|| ಮನೆ ನಂ: 443, ಗುರುದ್ವಾರ ರೋಡ್, ಮಂಗೊರ ಹಿಲ್, ವಾಸ್ಕೋಡಗಾಮ, ಬೈನಾ, ದಕ್ಷಿಣ ಗೋವಾ, ಗೋವಾ ರವರು ದಿನಾಂಕ: 24-12-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 235/2021, ಕಲಂ: 283 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಭೀಷೇಕ ಕುಮಾರ ತಂದೆ ರಾಮಪ್ರವೇಶ್ ಯಾದವ್, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಪುರಿ, ಉದಯರಾಮ, ಶಿವಪುರ, ಕೊಹಂದರ್ ಪಟ್ಟಿ, ಪ್ರತಾಪ್ ಗಡ್, ನಾಗಾಲ್ಯಾಂಡ್ (ಟ್ಯಾಂಕರ್ ಲಾರಿ ನಂ: ಎನ್.ಎಲ್-01/ಎ.ಬಿ-4980 ನೇದರ ಚಾಲಕ). ಈತನು ದಿನಾಂಕ: 24-12-2021 ರಂದು ಮಧ್ಯಾಹ್ನ 03-15 ಗಂಟೆಗೆ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಲೇ ಫಾಲ್ಸ್ ಸಮೀಪ ತಿರುವಾದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಟ್ಯಾಂಕರ್ ಲಾರಿ ನಂ: ಎನ್.ಎಲ್-01/ಎ.ಬಿ-4980 ನೇದನ್ನು ಯಲ್ಲಾಪುರ ಕಡೆ ಮುಖ ಮಾಡಿ ನಿಲ್ಲಿಸಿ, ಹೆದ್ದಾರಿಯ ಮೇಲೆ ಓಡಾಡುವ ಇತರೇ ವಾಹನಗಳಿಗೆ ಅಡೆತಡೆ ಉಂಟು ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ದೀಪಕ ಕೃಷ್ಣಾ ನಾಯ್ಕ, ಎ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 24-12-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 24-12-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 29/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪ್ರಭಾತ ಸಾ ತಂದೆ ಹೇಮಂತ ಸಾ, ಪ್ರಾಯ-25 ವರ್ಷ, ಸಾ|| ಬುದೇಲ್ಕನಿ, ಸುನಮುಂಡ, ಮಜಾಪೊಡ ಪಂಚಾಯತ್, ಸುಂದರಗರ, ಒರಿಸ್ಸಾ. ಈತನು ದಿನಾಂಕ: 21-12-2021 ರಂದು SEA BLESSIA DORITA-II ಬೋಟ್ ನಂ: IND-GA-01-MM-2684 ನೇದರ ಮೇಲೆ ಮೀನು ಹಿಡಿಯಲು ಹೋದಾಗ, ದಿನಾಂಕ: 24-12-2021 ರಂದು ಬೆಳಗಿನ ಜಾವ 06-00 ಗಂಟೆಯ ಸಮಯಕ್ಕೆ ಮೀನಿನ ಬಲೆಯಲ್ಲಿ ಬಿದ್ದ ವಿಷಪೂರಿತ ಸಮುದ್ರದ ಹಾವೊಂದು ಎಡಗೈಗೆ ಕಚ್ಚಿದ್ದರಿಂದ, ಸದ್ರಿಯವನಿಗೆ ಉಪಚಾರದ ಕುರಿತು ಕಾರವಾರದ ಸಿವಿಲ್ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಿದಾಗ, ಚಿಕಿತ್ಸೆ ಫಲಕಾರಿಯಾಗದೇ ಹಾವಿನ ವಿಷದ ಪರಿಣಾಮದಿಂದಲೇ 11-30 ಗಂಟೆಯ ಮರಣ ಪಟ್ಟಿರುತ್ತಾನೆ. ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಮೃತನ ಮರಣೋತ್ತರ ಪರೀಕ್ಷೆ ಮಾಡಿಸಿ ಶವವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಬಿರತ್ನ ಸಾ ತಂದೆ ಉಪೇಂದ್ರ ಸಾ, ಪ್ರಾಯ-25 ವರ್ಷ, ವೃತ್ತಿ-ಮೀನುಗಾರಿಕೆ ಕೆಲಸ, ಸಾ|| ಬುದೇಲ್ಕನಿ, ಸುನಮುಂಡ, ಮಜಾಪೊಡ ಪಂಚಾಯತ್, ಸುಂದರಗರ, ಒರಿಸ್ಸಾ ರವರು ದಿನಾಂಕ: 24-12-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 32/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 40 ರಿಂದ 45 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದುದಾರರು ಮುರ್ಡೇಶ್ವರದ ಭದ್ರಾಂಬಿಕೇಶ್ವರ ರೆಸಿಡೆನ್ಸಿಯಲ್ಲಿ ರೂಮಬಾಯ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 24-12-2021 ರಂದು ಸಾಯಂಕಾಲ ರೆಸಿಡೆನ್ಸಿಗೆ ಬಂದು ಕೆಲಸದಲ್ಲಿರುತ್ತಾ ಸಾಯಂಕಾಲ 06-00 ಗಂಟೆಯ ಸುಮಾರಿಗೆ ಲಾಡ್ಜ್ ಹೊರಗಡೆಗೆ ಯಾರೋ ಗ್ರಾಹಕರು ಮಾತನಾಡುತ್ತಿರುವ ಶಬ್ದ ಕೇಳಿ ಹೊರಗೆ ಬಂದು ನೊಡಲಾಗಿ ಸುಮಾರು 40 ರಿಂದ 45 ವರ್ಷ, ಪ್ರಾಯದ ಮೃತ ಅಪರಿಚಿತ ಗಂಡಸು ಭದ್ರಾಂಬಿಕೇಶ್ವರ ರೆಸಿಡೆನ್ಸಿ ಎದುರಿನಲ್ಲಿ ಸರಾಯಿ ಕುಡಿದ ನಶೆಯಲ್ಲಿ ಇದ್ದವನು, ಲಾಡ್ಜ್ ಮುಂದೆ ನಿಂತ ಒಂದು ಕಾರಿಗೆ ಬಲಬದಿಯ ಕನ್ನಡಿಯ ಹತ್ತಿರ ತಾಗಿ ನಿಂತು ಕನ್ನಡ ಮತ್ತು ಕೊಂಕಣಿ ಮಿಶ್ರಿತ ಭಾಷೆ ಮಾತನಾಡುತ್ತಿದ್ದವನು, ಸಾಯಂಕಾಲ 06-15 ಗಂಟೆಯ ಸುಮಾರಿಗೆ ಕುಸಿದು ಬಿದ್ದು ಮೃತಪಟ್ಟಿದ್ದು, ಮೃತನು ತಿಳಿ ಕಂದು ಬಣ್ಣದ ಅರ್ಧ ತೋಳಿನ ಟೀ-ಶರ್ಟ್, ಕೆಂಪು ಚುಕ್ಕಿ ಇರುವ ನೀಲಿ ಬಣ್ಣದ ಹಾಫ್ ಚಡ್ಡಿ ಧರಿಸಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ನಾಗೇಶ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ರೂಮಬಾಯ್ ಕೆಲಸ, ಸಾ|| ಕಾಫಿಮನೆ, ದಿವಗೇರಿ ಕನ್ನಡ ಶಾಲೆ, ತಾ: ಭಟ್ಕಳ ರವರು ದಿನಾಂಕ: 24-12-2021 ರಂದು 18-55 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 26-12-2021 05:27 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080