ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 24-02-2021
at 00:00 hrs to 24:00 hrs
ಮಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 04/2021, ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಡೇವಿಡ್ ನೆಲ್ಸನ್, ಪ್ರಾಯ-37 ವರ್ಷ, ಸಾ|| ಅಂತೋನಿ ಕಾಲೋನಿ, ಟಕ್ಕರಮಲಾಪುರಮ್, ತಿರುನೆಲ್ವೇಲಿ, ತಮಿಳನಾಡು. ನಮೂದಿತ ಆರೋಪಿತನು M/s: Blessing Seven Currency Trading Company ಯ ಚೀಫ್ ಮೆನೇಜಿಂಗ್ ಡೈರೆಕ್ಟರ್ ಆಗಿದ್ದು, Online Currency Trading Company ಮುಖಾಂತರ ಪರಿಚಯವಾಗಿದ್ದು, ಪಿರ್ಯಾದಿಯವರ ಹತ್ತಿರ ಸುಮಾರು 18,00,000/- ರೂಪಾಯಿ ಹಣವನ್ನು ಆರೋಪಿತನ ಎಕ್ಸಿಸ್ ಬ್ಯಾಂಕ್ ಅಕೌಂಟ್ ನಂ: 918020060388809 ನೇದಕ್ಕೆ 8,00,000/- ರೂಪಾಯಿ, ಸಿ.ಯು.ಬಿ ಬ್ಯಾಂಕ್ ಅಕೌಂಟ್ ನಂ: 510909010113947 ನೇದಕ್ಕೆ 10,00,000/- ರೂಪಾಯಿ. ಹೀಗೆ ಒಟ್ಟೂ 18,00,000/- ರೂಪಾಯಿ ಹಣವನ್ನು ಜಮಾ ಮಾಡಿಸಿಕೊಂಡು, ಅದರಲ್ಲಿ ಅಂದಾಜು 1.50,000/- ರೂಪಾಯಿ ಹಣವನ್ನು ಮರುಪಾವತಿ ಮಾಡಿ, ಉಳಿದ ಹಣದ ಬಗ್ಗೆ ವಿಚಾರಿಸಲು ಹೋದಾಗ ‘ತನಗೆ ಕಾರ್ ಅಪಘಾತದಿಂದ ಕಾಲು ಮುರಿದಿದ್ದು, ನಿಮ್ಮ ಹಣವನ್ನು ಮರುಪಾವತಿ ಮಾಡುತ್ತೇನೆ’ ಎಂದು ಹೇಳಿ ತನ್ನ ಎಲ್ಲಾ ಮೊಬೈಲ್ ನಂಬರನ್ನು ಸ್ವಿಚ್ ಆಫ್ ಮಾಡಿ ಯಾವುದೇ ಪ್ರತಿಕ್ರಿಯೆ ನೀಡದೇ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ದೀಪಕ ತಂದೆ ಗಣಪತಿ ಗಜಿನಕರ್, ಪ್ರಾಯ-55 ವರ್ಷ, ವೃತ್ತಿ-ಎನ್.ಪಿ.ಸಿ.ಐ.ಎಲ್ ನೌಕರ, ಸಾ|| ಜಿ-02, ಸೌತ್ ಟೌನಶಿಪ್, ಮಲ್ಲಾಪುರ, ಕಾರವಾರ ರವರು ದಿನಾಂಕ: 24-02-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 48/2021, ಕಲಂ: 279, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ವಾಹನದ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ತನ್ನ ವಾಹನವನ್ನು ದಿನಾಂಕ: 23-02-2021 ರಂದು 23-15 ಗಂಟೆಯಿಂದ ದಿನಾಂಕ: 24-02-2021 ರಂದು 01-30 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ಶಹರದ ಎ.ಪಿ.ಎಮ್.ಸಿ ಕಛೇರಿ ಹತ್ತಿರ ಹಳಿಯಾಳ-ಧಾರವಾಡ ಡಾಂಬರ್ ರಸ್ತೆಯಲ್ಲಿ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಸುಮಾರು 40 ರಿಂದ 45 ವರ್ಷ ಪ್ರಾಯದ ಮೃತ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸ್ಥಳದಲ್ಲಿಯೇ ಮರಣವನ್ನುಂಟು ಮಾಡಿ, ಆರೋಪಿ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ರಾಜೇಶ ವಿಠ್ಠಲ ನಾಯಕ, ಪ್ರಾಯ-42 ವರ್ಷ, ವೃತ್ತಿ-ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ್, ಸಾ|| ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 24-02-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 20/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೊಹಿದ್ದೀನ್ ತಂದೆ ಅನ್ವರ್ ಬಾಷಾಸಾಬ್ ಕಚವಿ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕುಪ್ಪಗಡ್ಡೆ, ತಾ: ಶಿರಸಿ, 2]. ಬಾಬು ತಂದೆ ಗುರಪ್ಪ ಬಗಲಿ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದನಗನಳ್ಳಿ ರಸ್ತೆ, ದಾಸನಕೊಪ್ಪ, ತಾ: ಶಿರಸಿ. ಈ ನಮೂದಿತ ಆರೋಪಿತರು ಕೂಡಿ ದಿನಾಂಕ: 24-02-2021 ರಂದು 15-10 ಗಂಟೆಗೆ ಶಿರಸಿ ತಾಲೂಕಿನ ಬದನಗೋಡ ಗ್ರಾಮದ ದಾಸನಕೊಪ್ಪದ ಸಂತೆ ಪೇಟೆಯ ದೇವದಾರ ಜಾತಿಯ ಮರದ ಕೆಳಗಿನ ಸಾರ್ವಜನಿಕ ರಸ್ತೆಯಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಓ.ಸಿ ಮಟಕಾ ಜೂಗಾರಾಟ ನಡೆಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾಗ, ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 24-02-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 24-02-2021
at 00:00 hrs to 24:00 hrs
ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======