ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 24-01-2022

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2022, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಜಾನನ ತಂದೆ ತೋಕು ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಚಾಲಕ, ಸಾ|| ಚಿಟ್ಟಿಕಂಬಿ, ಹೆಗಡೆ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-0731 ನೇದರ ಚಾಲಕ). ಈತನು ದಿನಾಂಕ: 24-01-2022 ರಂದು ಬೆಳಿಗ್ಗೆ 07-30 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-0731 ನೇದನ್ನು ತನ್ನ ಮನೆಯಾದ ಹೆಗಡೆ ಕಡೆಯಿಂದ ಮಾಸೂರ ಕಡೆಗೆ ಹೋಗಲು ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಕೊಂಡು ಬಂದವನು, ಚಿಟ್ಟಿಕಂಬಿಯ ಹತ್ತಿರ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ಒಮ್ಮೆಲೇ ಬಲಕ್ಕೆ ಚಲಾಯಿಸಿ ಮಾಸೂರ ಕಡೆಯಿಂದ ಹೆಗಡೆ ಕಡೆಗೆ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-0661 ನೇದರಲ್ಲಿ ಹೋಗುತ್ತಿದ್ದ ರಾಜೀವ ತಂದೆ ಸಿಣ್ಣು ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಪೊಲೀಸ್ ಕಾನ್ಸಟೇಬಲ್, ಸಾ|| ಸಣ್ಣಕುಳಿ, ಮಾಸೂರು, ತಾ: ಕುಮಟಾ ಈತನ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸಮೇತ ಬೀಳುವಂತೆ ಮಾಡಿ, ಮೋಟಾರ್ ಸೈಕಲ್ ಸವಾರ ರಾಜೀವ ನಾಯ್ಕ ಈತನಿಗೆ ಎಡಗಣ್ಣಿಗೆ, ಮೂಗಿಗೆ, ಬಲಗಾಲ ಮಂಡಿಗೆ ತೆರಚಿದ ಗಾಯವಾಗಲು ಹಾಗೂ ಆತನ ಮೋಟಾರ್ ಸೈಕಲ ಹಿಂಬದಿಯಲ್ಲಿ ಕುಳಿತ ಆತನ ಅಕ್ಕಳಾದ ಶ್ರೀಮತಿ ಜಯಂತಿ ಸಿಣ್ಣು ನಾಯ್ಕ ಇವಳಿಗೆ ಮೂಗಿಗೆ, ಹಣೆಗೆ ಹಾಗೂ ಮುಂಭಾಗದ ಹಲ್ಲು ಮುರಿಯುವಂತೆ ತೀವೃ ಸ್ವರೂಪದ ಗಾಯನೋವಾಗಲು ಕಾರಣವಾಗಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ಕೈ ಕಾಲುಗಳಿಗೆ ತೆರಚಿದ ಗಾಯ ಹಾಗೂ ಬಲಭುಜಕ್ಕೆ ಒಳನೋವು ಗಾಯ ಪಡಿಸಿ ಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಧುಕರ ತಂದೆ ಬೊಬ್ಬು ಪಟಗಾರ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾಸೂರು, ತಾ: ಕುಮಟಾ ರವರು ದಿನಾಂಕ: 24-01-2022 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2022, ಕಲಂ: 143, 147, 447, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಮತಿ ರೇಣುಕಾ ಗಂಡ ಗಣಪತಿ ತಾಂಡೇಲ, 2]. ಸುಧಾ ಸಂಜಯ ತಾಂಡೇಲ, 3]. ಪಾರ್ವತಿ ಗಂಡ ದತ್ತಾ ತಾಂಡೇಲ, 4]. ಸುಶೀಲ ಗಂಡ ಮಹೇಶ ಬಾನಾವಳಿ, 5]. ನಾಗವೇಣಿ ಗಂಡ ದೀಪಕ ಮೇಸ್ತಾ, 6]. ಪ್ರಣಿತಾ ಗಂಡ ಹರಿ ತಾಂಡೇಲ, 7]. ಮಂಗಲಾ ಗಂಡ ನಾಗರಾಜ ತಾಂಡೇಲ, 8]. ರೇಖಾ ಗಂಡ ರಾಜೇಶ ತಾಂಡೇಲ, 9]. ಮಂಗಲಾ ಗಂಡ ಶೇಷಗಿರಿ ಮೇಸ್ತಾ, 10]. ಪಾರ್ವತಿ ಗಂಡ ಮಾದೇವ ತಾಂಡೇಲ, 11]. ಸುನಿತಾ ಗಂಡ ಸಂತೋಷ ತಾಂಡೇಲ, 12]. ಸರಸ್ವತಿ ವಿಷ್ಣು ತಾಂಡೇಲ, 13]. ಸುನಿತಾ ಗಂಡ ರವಿ ತಾಂಡೇಲ, 14]. ಸಚಿನ ತಂದೆ ಸಂತೋಷ ತಾಂಡೇಲ, 15]. ಜೀವನ ತಂದೆ ಗಣಪತಿ ಖಾರ್ವಿ, 16]. ರಾಹುಲ ತಂದೆ ದತ್ತಾ ತಾಂಡೇಲ ಹಾಗೂ ಇನ್ನೂ ಇತರರು, ಸಾ|| (ಎಲ್ಲರೂ) ಕಾಸರಕೋಡ, ಟೊಂಕಾ-1, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಹಾಗೂ ಪಿಯಾದಿಯವರು ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಗ್ರಾಮದವರಿದ್ದು, ದಿನಾಂಕ: 24-01-2022 ರಂದು ಸಾಯಂಕಾಲ 19-45 ಗಂಟೆಯ ಸುಮಾರಿಗೆ ನಮೂದಿತ ಆರೋಪಿತರೆಲ್ಲರೂ ಸೇರಿ ಅಕ್ರಮಕೂಟ ರಚಿಸಿಕೊಂಡು, ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ-1 ರಲ್ಲಿ ಇರುವ ಪಿರ್ಯಾದಿಯ ಮನೆಯ ಮುಂದಿನ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿ ಮತ್ತು ಪಿರ್ಯಾದಿಯ ಮನೆಯವರನ್ನು ಉದ್ದೇಶಿಸಿ, ಕೊಂಕಣಿ ಭಾಷೆಯಲ್ಲಿ ‘ರಂಡಿ ಪೂತಾ, ಸೂಳಾ ಮಕ್ಕಳಾ, ಚೋರ್ ನನ್ನ ಮಕ್ಕಳಾ, ನೀವು ಹೊನ್ನಾವರ ಬಂದರು ಕಾಮಗಾರಿ ಹೋರಾಟಕ್ಕೆ ನೀವು ಯಾಕೆ ಬರಲಿಲ್ಲಾ. ನೀವು ಕಂಪನಿಯವರ ದುಡ್ಡು ತಿಂದಿದ್ದಿರಿ. ನಿಮ್ಮ ಮಕ್ಕಳಿಗೆ ಕಂಪನಿಯಲ್ಲಿ ನೌಕರಿ ನೀಡುತ್ತಾರೆ ಅಂತಾ ನೀವು ಬಂದಿಲ್ಲ. ಇಂತವರಾದ ನೀವು ನಮ್ಮ ಊರಿನವರೇ, ನಿಮ್ಮಂತವರು ನಮ್ಮ ಊರಿನಲ್ಲಿರುವುದಕ್ಕಿಂತ ಊರು ಬಿಟ್ಟು ತೊಲಗಿ. ಇಲ್ಲ್ಲವಾದಲ್ಲಿ ನಿಮಗೊಂದು ಗತಿ ಕಾಣಿಸುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿದ್ದಲ್ಲದೇ, ಆರೋಪಿ 14 ನೇಯವನು ಪಿರ್ಯಾದಿಯ ಗಂಡನನ್ನು ಉದ್ದೇಶಿಸಿ ‘ತುಗೆಲೆ ಅಬ್ಬಾ ಜಗ್ಗೋ ರಾಂಡಿ ಪುತಾ' ಅಂತಾ ಅವಾಚ್ಯವಾಗಿ ಬೈಯ್ದು ಹೊಡೆಯಲು ಮೈಮೇಲೆ ಬಂದಿದ್ದಲ್ಲದೇ, ಆರೋಪಿತರೆಲ್ಲರೂ ಅಲ್ಲಿಂದ ಹೋಗುವಾಗ ಪಿರ್ಯಾದಿಯ ಮನೆಯ ಮುಂದಿನ ಮಣ್ಣನ್ನು ಕೈಯಲ್ಲಿ ಹಿಡಿದು ಹಾರಿಸಿ ಶಾಪ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಶಾಂತಿ ಗಂಡ ಗೋವಿಂದ ತಾಂಡೇಲ, ಪ್ರಾಯ-41 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಾಸರಕೊಡ, ಟೊಂಕಾ-1, ತಾ: ಹೊನ್ನಾವರ ರವರು ದಿನಾಂಕ: 24-01-2022 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 06/2022, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಅಧಿನಿಯಮ-2021 ನೇದ್ದರ ವಿವರ...... ನಮೂದಿತ ಆರೋಪಿತ ಆನಂದು ತಂದೆ ಚಂದು ಪ್ರಜಾರಿ, ಪ್ರಾಯ-70 ವರ್ಷ, ವೃತ್ತಿ-ವ್ಯಾಪಾರ, ಸಾ|| ಜೋಡುಕಟ್ಟೆ ಹಿಂದೆ, ಮರಾಠಿಕೊಪ್ಪ, ತಾ: ಶಿರಸಿ. ಈತನು ದಿನಾಂಕ: 24-01-2022 ರಂದು 11-30 ಗಂಟೆಗೆ ಶಿರಸಿ ನಗರದ ಶಿರಸಿ-ಯಲ್ಲಾಪುರ ರಸ್ತೆಯ ಪವನ ಬಾರ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 840/- ರೂಪಾಯಿ ಹಾಗೂ ಓ.ಸಿ ಮಟಕಾ ಜೂಗರಾಟಕ್ಕೆ ಬಳಸಿದ ಅಂಕೆ ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ ಮತ್ತು ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿಗಳೊಂದಿಗೆ ಸಿಕ್ಕ ಬಗೆ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಸಿ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-01-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 24-01-2022

at 00:00 hrs to 24:00 hrs

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸೌರವ ತಂದೆ ಸಿದ್ರಾಮ ಪಾತ್ರೋಟ, ಪ್ರಾಯ-21 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕೆ.ಪಿ.ಸಿ ಕಾಲೋನಿ, ಗಣೇಶಗುಡಿ, ತಾ: ಜೋಯಿಡಾ. ಪಿರ್ಯಾದಿಯ ಮಗನಾದ ಈತನು ಹುಟ್ಟಿನಿಂದ ಬುದ್ಧಿಮಾಂದ್ಯನಾಗಿದ್ದವನು, ಪಿರ್ಯಾದಿಯವರು ಸರಿಯಾದ ಚಿಕಿತ್ಸೆ ನೀಡಿ ಗುಣಮುಖನಾಗಿ 10ನೇ ತರಗತಿ ವಿದ್ಯಾಭ್ಯಾಸ ಮಾಡಿ ಮನೆಯಲ್ಲಿ ಉಳಿದುಕೊಂಡಿದ್ದವನು. ಮೃತ ಸೌರವ ಈತನು ಹಗಲಲ್ಲು ಸಹ ಮನೆ ಬಿಟ್ಟು ಹೋಗುತ್ತಿರಲ್ಲಿವಾದವನು, ದಿನಾಂಕ:13-01-2022 ರಂದು ರಾತ್ರಿ 20-00 ಗಂಟೆಗೆ ಪಿರ್ಯಾದಿಯವರ ಮನೆಯ ಹತ್ತಿರ ಇರುವ ಗಣೇಶಗುಡಿ ಕೆ.ಪಿ.ಸಿ ನಿಗಮದ ಪಂಪ್ ಹೌಸ್ ಹತ್ತಿರ ಸೇತುವೆಯ ಹತ್ತಿರ ಹೋದವನು ಕಾಲು ಜಾರಿ ಅಥವಾ ಇನ್ಯಾವುದೋ ರೀತಿಯಲ್ಲಿ ಸೇತುವೆಯ ಮೇಲಿಂದ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡವನನ್ನು ಪಿರ್ಯಾದಿಯವರು ಉಪಚಾರಕ್ಕೆಂದು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ದಾಖಲಾಗಿದ್ದವನು, ದಿನಾಂಕ: 24-01-2022 ರಂದು ಸಾಯಂಕಾಲ 17-00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಇದರ ಹೊರತು ಈತನ ಸಾವಿನಲ್ಲಿ ನಮಗೆ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗ್ಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಿದ್ರಾಮ ತಂದೆ ಫಕೀರಪ್ಪ ಪಾತ್ರೋಟ, ಪ್ರಾಯ-59 ವರ್ಷ, ವೃತ್ತಿ-ಗುತ್ತಿಗೆದಾರ, ಸಾ|| ಕೆ.ಪಿ.ಸಿ ಕಾಲೋನಿ, ಗಣೇಶಗುಡಿ, ತಾ: ಜೋಯಿಡಾ ರವರು ದಿನಾಂಕ: 24-01-2022 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 02-04-2022 05:45 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080