ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 24-07-2021

at 00:00 hrs to 24:00 hrs

 

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ, ಕಾರವಾರ

ಅಪರಾಧ ಸಂಖ್ಯೆಃ 13/2021, ಕಲಂ: 66(ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಹಾಗೂ ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಯಾರೋ ಆರೋಪಿತರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 22-07-2021 ರಂದು ಸುಮಾರು 10-00 ಗಂಟೆಗೆ ಪಿರ್ಯಾದಿಯವರ ಮೊಬೈಲ ನಂ: 9449193247 ನೇದಕ್ಕೆ ಆರೋಪಿತನು ತನ್ನ ಮೊಬೈಲ್ ನಂ: 9339193192 ನೇದರಿಂದ ಕರೆ ಮಾಡಿ ತಾನು ಎಸ್.ಬಿ.ಐ ಬ್ಯಾಂಕ್ ಅಧಿಕಾರಿ ಇರುವುದಾಗಿ ಹೇಳಿ ಪಿರ್ಯಾದಿಯವರ ಬ್ಯಾಂಕ್ ಖಾತೆಯ ಕೆವೈಸಿ ಅಪಡೆಟ್ ಮಾಡಿಸುವುದು ಅವಶ್ಯಕವಿದ್ದು, ಮಾಡಿಸದಿದ್ದಲ್ಲಿ ಬ್ಯಾಂಕ್ ಖಾತೆಯು ಸ್ಥಗಿತಗೊಳಿಸುವುದಾಗಿ ಹೇಳಿ ಪಿರ್ಯಾದಿಯವರಿಗೆ ಆತನ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೇಳಿ, ಪಿರ್ಯಾದಿಯವರ ಮೊಬೈಲಿಗೆ ಬಂದಿರುವ ಓ.ಟಿ.ಪಿ ಸಂಖ್ಯೆಯನ್ನು ತಿಳಿಸುವಂತೆ ಹೇಳಿದ್ದು, ಅದರಂತೆ ಪಿರ್ಯಾದಿಯವರು ಅವರ ಮೊಬೈಲಿಗೆ ಬಂದಂತಹ ಓ.ಟಿ.ಪಿ ಸಂಖ್ಯೆಯನ್ನು 4 ಬಾರಿ ಆರೋಪಿತನಿಗೆ ತಿಳಿಸಿದ್ದು, ಕೂಡಲೆ ಆರೋಪಿತನು ಕರೆ ಕಟ್ ಮಾಡಿದ್ದು, ಆ ವೇಳೆಗೆ ಪಿರ್ಯಾದಿಯವರ ಎಸ್.ಬಿ.ಐ ಅಕೌಂಟಿನಿಂದ ಹಂತ ಹಂತವಾಗಿ 2,91,100/- ರೂಪಾಯಿ ಹಣ ಕಡಿತವಾದ ಬಗ್ಗೆ ಪಿರ್ಯಾದಿಯವರ ಗಮನಕ್ಕೆ ಬಂದಿದ್ದು ಇರುತ್ತದೆ. ಆರೋಪಿತನು ಪಿರ್ಯಾದಿಯವರಿಗೆ ತಾನು ಬ್ಯಾಂಕ್ ಅಧಿಕಾರಿ ಅಂತಾ ನಂಬಿಸಿ, ಪಿರ್ಯಾದಿಯವರ ಅಕೌಂಟಿನಿಂದ ಹಣವನ್ನು ತನ್ನ ಖಾತೆಗೆ ಮೋಸತನದಿಂದ ಹಣ ವರ್ಗಾವಣೆ ಮಾಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಪರಮೇಶ್ವರ ತಂದೆ ಅನಂತ ಭಟ್ಟ, ಪ್ರಾಯ-46 ವರ್ಷ, ವೃತ್ತಿ-ಪುರೋಹಿತ, ಸಾ|| ಪುಟ್ಟನಮನೆ, ತಾ: ಶಿರಸಿ ರವರು ದಿನಾಂಕ: 24-07-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 113/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಬೀರು ಗಂಡ ಮೋರು ಗೌಡ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೂಲಿ ಕೆಲಸ, ಸಾ|| ದಂಡೆಭಾಗ, ಶಿರೂರು, ತಾ: ಅಂಕೋಲಾ. ಪಿರ್ಯಾದುದಾರರ ತಾಯಿಯಾದ ಇವರು ದಿನಾಂಕ: 23-07-2021 ರಂದು ಬೆಳಿಗ್ಗೆ 08-85 ಗಂಟೆಗೆ ಅಂಕೋಲಾ ತಾಲೂಕಿನಶಿ ಗ್ರಾಮದ ದಂಡೆಭಾಗದ ತನ್ನ ಮನೆಯ ಹತ್ತಿರದಿಂದ ನೆರೆ ಹಾವಳಿಯಿಂದ ಅತಿಯಾಗಿ ನೀರು ಬಂದಿದ್ದರಿಂದ ನೀರಿನಲ್ಲಿ ಕೊಚ್ಚಿ ಹೋಗಿ ಮುಳುಗಿ ಕಾಣೆಯಾಗಿರುತ್ತಾರೆ. ಕಾಣೆಯಾದ ಇವರನ್ನು ಹುಡುಕಿ ಪತ್ತೆ ಮಾಡಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸುಕ್ರು ತಂದೆ ಮೋರು ಗೌಡ, ಪ್ರಾಯ-46 ವರ್ಷ, ವೃತ್ತಿ-ಗ್ರಾಮ ಸಹಾಯಕ, ತಿರ್ಕ, ಬೆಳಸೆ, ಸಾ|| ಶಿರೂರು, ತಾ: ಅಂಕೋಲಾ ರವರು ದಿನಾಂಕ: 24-07-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 118/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಆನಂದ ತಂದೆ ನಾಗಾ ಮೊಗೇರ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಬ್ಬಿನಗದ್ದೆ, ಆಲವಾಡ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದುದಾರರ ಗಂಡನಾದ ಇವರು ದಿನಾಂಕ: 23-07-2021 ರಂದು 17-30 ಗಂಟೆಗೆ ಯಲ್ಲಾಪುರ ತಾಲೂಕಿನ  ಆಲವಾಡ ಗ್ರಾಮದ ಕಬ್ಬನಗದ್ದೆ ಊರಿನಲ್ಲಿ ಕೂಲಿ ಕೆಲಸಕ್ಕೆ ಹೋದವರು, ವಾಪಸ್ ಮನೆಗೆ ಬರುವಾಗ ತನ್ನ ಮನೆಯ ಹತ್ತಿರ ಇರುವ ಹಳ್ಳದ ಬ್ರಿಡ್ಜ್ ದಾಟುತ್ತಿರುವಾಗ ವಿಪರೀತವಾದ ಮಳೆ ಬಿದ್ದರಿಂದ ಮಳೆಯ ನೀರು ಹಳ್ಳದಲ್ಲಿ ತುಂಬಿ ಹರಿಯುತ್ತಿದ್ದರಿಂದ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಕಾಣೆಯಾಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ರೇಣುಕಾ ಕೋಂ. ಆನಂದ ಮೊಗೇರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಬ್ಬಿನಗದ್ದೆ, ಆಲವಾಡ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 24-07-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 24-07-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 37/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾರಾಯಣ ತಂದೆ ಹೊನ್ನಾ ಗೌಡ, ಪ್ರಾಯ-82 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಸಿಂಗನಮಕ್ಕಿ, ತಾ: ಅಂಕೋಲಾ. ಇವರ ಮನೆಯು ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಗೆ ದಿನಾಂಕ: 23-07-2021 ರಂದು ನೆರೆ ಹಾವಳಿ ಬಂದು ಮನೆಯೊಳಗೆ ನೀರು ಬಂದಿದ್ದರಿಂದ ಮಧ್ಯಾಹ್ನ ಸದ್ರಿಯವರಿಗೆ ಸಿಂಗನಮಕ್ಕಿ ಕನ್ನಡ ಶಾಲೆಯ ಕಾಳಜಿ ಕೇಂದ್ರಕ್ಕೆ ದಾಖಲಿಸಿದ್ದು, ಅವರು ಬಿ.ಪಿ ಗುಳಿಗೆಯನ್ನು ತರಲು ಸಾಯಂಕಾಲ ತಮ್ಮ ಮನೆಗೆ ನೀರಿನಲ್ಲಿ ಹಾದು ಹೋದಾಗ ಸಮಯ 19-00 ಗಂಟೆಯ ಸುಮಾರಿಗೆ ತನ್ನ ಮನೆಯ ಹತ್ತಿರ ನೀರಿನಲ್ಲಿ ಕುಸಿದು ಬಿದ್ದವರಿಗೆ ಕಾಳಜಿ ಕೆಂದ್ರಕ್ಕೆ ಕರೆದುಕೊಂಡು ಹೋಗಿ ಉಪಚರಿಸಿ, ನಂತರ ಅಲ್ಲಿಂದ ಕಮಲಾ ಮೆಡಿಕಲ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆತನನ್ನು ಪರೀಕ್ಷಿಸಿದ ವೈದ್ಯರು 20-00 ಗಂಟೆಗೆ ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ. ಮೃತದೇಹವು ಅಂಕೋಲಾದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಚಂದ್ರಾವತಿ ತಂದೆ ನಾರಾಯಣ ಗೌಡ, ಪ್ರಾಯ-32 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಸಿಂಗನಮಕ್ಕಿ, ತಾ: ಅಂಕೋಲಾ ರವರು ದಿನಾಂಕ: 24-07-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 38/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಂಗಾಧರ ತಂದೆ ದೇವು ಗೌಡ, ಪ್ರಾಯ-34 ವರ್ಷ, ವೃತ್ತಿ-ಫೋರಸ್ ಫ್ಯಾಕ್ಟರಿಯಲ್ಲಿ ಕೆಲಸ, ಸಾ|| ರೈಲ್ವೇ ಬ್ರಿಡ್ಜ್ ಹತ್ತಿರ, ಶಿರೂರು, ತಾ: ಅಂಕೋಲಾ. ಪಿರ್ಯಾದುದಾರರ ಅಣ್ಣನಾದ ಈತನು ದಿನಾಂಕ: 23-07-2021 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಶಿರೂರಿನಲ್ಲಿರುವ ತನ್ನ ಮನೆಯಿಂದ ಕೆಲಸಕ್ಕೆ ಹೋಗಲು ನೀರು ತುಂಬಿದ ಗದ್ದೆಯ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಕಾಲು ಜಾರಿ ಬಿದ್ದು ಕಳೆದ ಕೆಲವು ದಿನಗಳಿಂದ ಬೀಳುತ್ತಿದ್ದ ಭಾರೀ ಮಳೆಗೆ ಉಂಟಾದ ಗಂಗಾವಳಿ ನದಿ ಪ್ರವಾಹದಿಂದ ತುಂಬಿದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದವನು, ದಿನಾಂಕ: 24-07-2021 ರಂದು 15-00 ಗಂಟೆಗೆ ಶಿರೂರಿನ ಮೊಗಳಮಕ್ಕಿಯ ಗದ್ದೆಯಲ್ಲಿ ಮೃತದೇಹವು ಸಿಕ್ಕಿರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ದೇವು ಗೌಡ, ಪ್ರಾಯ-30 ವರ್ಷ, ವೃತ್ತಿ-ಐಸ್ ಪ್ಲಾಂಟ್ ನಲ್ಲಿ ಕೆಲಸ, ಸಾ|| ರೈಲ್ವೇ ಬ್ರಿಡ್ಜ್ ಹತ್ತಿರ, ಶಿರೂರು, ತಾ: ಅಂಕೋಲಾ ರವರು ದಿನಾಂಕ: 24-07-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 25/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪ್ರಶಾಂತ ತಂದೆ ಭದ್ರಪ್ಪ ತೆಪ್ಪದವರ, ಪ್ರಾಯ-25 ವರ್ಷ, ವೃತ್ತಿ-ಜೆ.ಸಿ.ಬಿ ಚಾಲಕ, ಸಾ|| ತಲಗಡ್ಡಿ, ತಾ: ಸೊರಬಾ, ಜಿ: ಶಿವಮೊಗ್ಗ, ಹಾಲಿ ಸಾ|| ಚಿಗಳ್ಳಿ, ತಾ: ಮುಂಡಗೋಡ. ಸುದ್ದಿದಾರನ ಅಳಿಯನಾದ ಈತನು ಸರಾಯಿ ಕುಡಿದುಕೊಂಡು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 23-07-2021 ರಂದು ಸಂಜೆ 07-30 ಗಂಟೆಯ ಸುಮಾರಿಗೆ ಯಾವುದೋ ಕ್ರಿಮಿನಾಶಕ ಔಷಧಿ ಸೇವಿಸಿ ಅಸ್ವಸ್ಥನಾದವನಿಗೆ ಸರ್ಕಾರಿ ಆಸ್ಪತ್ರೆ, ಮುಂಡಗೋಡಕ್ಕೆ ದಾಖಲಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 24-07-2021 ರಂದು ಮಧ್ಯಾಹ್ನ 12-50 ಗಂಟೆಗೆ ಮೃತಪಟ್ಟಿರುತ್ತಾನೆ. ನನ್ನ ಅಳಿಯನ ಮೃತದೇಹವು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಯಲ್ಲಪ್ಪ ತಂದೆ ಶೇಖಪ್ಪ ಕ್ಯಾಸನಕೇರಿ, ಪ್ರಾಯ-48 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಚಿಗಳ್ಳಿ, ತಾ: ಮುಂಡಗೋಡ ರವರು ದಿನಾಂಕ: 24-07-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 26-07-2021 04:07 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080