ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 24-06-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಕಮಲಾಕ್ಷ ಭಿಕಾರಿ ಕೊಳಂಬಕರ್, ಸಾ|| ದೇವಬಾಗ, ಕಾರವಾರ, 2]. ತುಳಸಿಬಾಯಿ ಪ್ರೇಮರಾಜ, ಪ್ರಾಯ-61 ವರ್ಷ, ಸಾ|| ಕೆ.ಪಿ.ಸಿ ಕಾಲೋನಿ, ಕದ್ರಾ, ಕಾರವಾರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 2 ನೇಯವರು ಕಾರವಾರ ಸದಾಶಿವಗಡದ ದತ್ತಮಂದಿರದ ಹತ್ತಿರ ಖರೀದಿಸಿದ ಹಳೆಯ ಮನೆಯ ನವೀಕರಣ ಕೆಲಸವನ್ನು ಗುತ್ತಿಗೆದಾರರಾದ ಆರೋಪಿ 1 ನೇಯವರು ಕೂಲಿ ಕಾರ್ಮಿಕರಿಂದ ನಡೆಸುತ್ತಿದ್ದರು, ದಿನಾಂಕ: 24-06-2021 ರಂದು 13-45 ಘಂಟೆಗೆ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಾದ ಹುಚ್ಚಪ್ಪ ತಂದೆ ಸಂಗಪ್ಪ ಸುಣಗಾರ ಹಾಗೂ ಪಿರ್ಯಾದಿಯವರ ಸುರಕ್ಷತೆಯ ಬಗ್ಗೆ ಯಾವುದೇ ಮುನ್ನೆಚ್ಚರಿಕೆಯನ್ನು ಕೈಗೊಳ್ಳದೇ, ನಿರ್ಲಕ್ಷ್ಯತನದಿಂದ ಕಟ್ಟಡ ನವೀಕರಣ ಕೆಲಸಕ್ಕೆ ನೇಮಿಸಿ, ಕಟ್ಟಡದ ಕಿಡಕಿಯ ಮೇಲ್ಬಾಗದ ಛಾವಣಿ ಕುಸಿದು ಕಾರ್ಮಿಕ ಹುಚ್ಚಪ್ಪ ತಂದೆ ಸಂಗಪ್ಪ ಸುಣಗಾರ ಇವರು ಸ್ಥಳದಲ್ಲೇ ಮರಣ ಪಡಲು ಕಾರಣನಾಗಿದ್ದಲ್ಲದೇ, ಮತ್ತೊಬ್ಬ ಕಾರ್ಮಿಕನಾದ ಪಿರ್ಯಾದಿಯವರಿಗೆ ಭುಜ ಹಾಗೂ ಎದೆಯ ಭಾಗಕ್ಕೆ ಒಳ ನೋವಾಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಬೇಲೂರಪ್ಪಾ ತಂದೆ ಮಾಗೊಂಡಪ್ಪಾ ಕೋಟಿಕಲ್, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಾಂದಾಳ, ಗುಡೂರು, ತಾ: ಹುನಗುಂದ, ಜಿ: ಬಾಗಲಕೋಟ, ಹಾಲಿ ಸಾ|| ಗಿಂಡಿ ದೇವಸ್ಥಾನದ ಹತ್ತಿರ, ಹಬ್ಬುವಾಡಾ, ಕಾರವಾರ ರವರು ದಿನಾಂಕ: 24-06-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 120/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 11(1)(A)(D)(E), Prevention Of Cruelty to Animals Act-1960 ಹಾಗೂ ಕಲಂ: 192(A) ಐ.ಎಮ್.ವಿ ಎಕ್ಟ್-1988 ಮತ್ತು ಕಲಂ: 429 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಹೀಂ ಎಸ್. ತಂದೆ ಎಮ್. ಡಿ. ಮಹಮ್ಮದ್, ಪ್ರಾಯ-38 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ನಂ: 4/139, ಶಾಂತಿಗುಡ್ಡೆ 62, ತೋಕೂರ, ಪೋ: ಜೋಕಟ್ಟೆ, ಬೈಕಂಪಾಡಿ, ಮಂಗಳೂರು, 2]. ಮಹಮ್ಮದ್ ಆಪ್ರೀದ್ ತಂದೆ ಅಬ್ದುಲ್ ಹಕೀಮ್, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಂ: 4/104(ಎ), ಶಾಂತಿಗುಡ್ಡೆ, ಸಂಕದಡ್ಡಿ ಹೌಸ್, ಪೋ: ಜೋಕಟ್ಟೆ, ಕೆಂಜಾರ, ಬೈಕಂಪಾಡಿ, ಮಂಗಳೂರು, 3]. ಮಹಮ್ಮದ್ ಹುಸೇನ್ ತಂದೆ ಮೊವರಿಯಬ್ಬ, ಪ್ರಾಯ-42 ವರ್ಷ, ವೃತ್ತಿ-ಜಾತ್ರೆಯಲ್ಲಿ ಚಪ್ಪಲಿ ವ್ಯಾಪಾರ, ಸಾ|| ಸರ್ಕಾರಿ ಶಾಲೆಯ ಹತ್ತಿರ, ಆರಿಕೇರಿ ಹೌಸ್, ಪೋ: ಜೋಕಟ್ಟೆ, ಮಂಗಳೂರು, 4]. ಮುಜೀಬ್ @ ಮುಜಾಮಿಲ್ ಬೇಪಾರಿ, ಸಾ|| ಸಂಪಗಾಂವ್, ತಾ: ಬೈಲಹೊಂಗಲ್, ಜಿ: ಬೆಳಗಾವಿ, 5]. ಈಚರ್ ಕಂಪನಿಯ ಲಾರಿ ನಂ: ಕೆ.ಎ-19/ಎ.ಸಿ-4708 ನೇದರ ಮಾಲಕ, 6]. ಸಂಬಂಧಪಟ್ಟ ಇನ್ನು ಕೆಲವರು. ಈ ನಮೂದಿತ ಆರೋಪಿತರೆಲ್ಲರೂ ಸೇರಿ ದಿನಾಂಕ: 24-06-2021 ರಂದು 09-15 ಗಂಟೆಗೆ ಈಚರ್  ಕಂಪನಿಯ ಲಾರಿ ನಂ: ಕೆ.ಎ-19/ಎ.ಸಿ-4708 ನೇದರಲ್ಲಿ 80,000/- ರೂಪಾಯಿ ಬೆಲೆಯ ಬಿಳಿ ಬಣ್ಣದ ಎತ್ತುಗಳು-7 ಮತ್ತು ಬಿಳಿ-ಕಪ್ಪು ಬಣ್ಣದ ಎತ್ತು-01, ಒಟ್ಟೂ-08 ಎತ್ತುಗಳನ್ನು (ಜಾನುವಾರುಗಳನ್ನು) ತುಂಬಿಕೊಂಡು ಜಾನುವಾರುಗಳಿಗೆ ನಿಂತುಕೊಳ್ಳಲು, ಮಲಗಲು ಕಂಪಾರ್ಟಮೆಂಟಿನ ವ್ಯವಸ್ಥೆ ಮಾಡದೇ ಹಾಗೂ ಮೇವು ಮತ್ತು ನೀರಿನ ವ್ಯವಸ್ಥೆ ಇಲ್ಲದೇ ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ಸರಕು ಸಾಗಣೆಯ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾಗ, ಆರೋಪಿತರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿದ್ದರಿಂದಲೇ ಅವುಗಳಲ್ಲಿ ಒಂದು ಎತ್ತು ಲಾರಿಯಲ್ಲೇ ಮೃತಪಟ್ಟಿದ್ದು, 3 ಜನ ಆರೋಪಿತರು ಸೆರೆ ಸಿಕ್ಕಿದ್ದು ಹಾಗೂ ಇತರರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು-01). ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 24-06-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 102/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರವಿ ತಂದೆ ಪಾಪಯ್ಯ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ತುಮಕೂರು (ಲಾರಿ ನಂ: ಕೆ.ಎ-01/ಎ.ಜೆ-4077 ನೇದರ ಚಾಲಕ). ಈತನು ದಿನಾಂಕ: 23-06-2021 ರಂದು 16-00 ಗಂಟೆಗೆ ಯಲ್ಲಾಪುರ ತಾಲೂಕಿನ ಇಡಗುಂದಿ ಊರಿನಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಕಬ್ಬಿಣದ ಕಂಬಗಳನ್ನು ಲೋಡ್ ಮಾಡಿದ ಲಾರಿ ನಂ: ಕೆ.ಎ-01/ಎ.ಜೆ-4077 ನೇದನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತಿರುವಿನ ರಸ್ತೆಯಲ್ಲಿ ಲಾರಿಯ ಮೇಲಿನ ನಿಯಂತ್ರಣ ತಪ್ಪಿ ತನ್ನ ಸೈಡ್ ಬಿಟ್ಟು ರಸ್ತೆಯ ಬಲಕ್ಕೆ ಬಂದಿದ್ದರಿಂದ ಲಾರಿಯಲ್ಲಿ ತುಂಬಿದ ಕಬ್ಬಿಣದ ಕಂಬಗಳು ಸಿಡಿದು ಹೋಗಿ ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ರಸ್ತೆಯ ತನ್ನ ಸೈಡಿನಿಂದ ಹೋಗುತ್ತಿದ್ದ ಲಾರಿ ನಂ: ಕೆ.ಎಲ್-16/ಟಿ-6937 ನೇದರ ಮೇಲೆ ಬಿದ್ದು ಡಿಕ್ಕಿಯಾಗಿದ್ದರಿಂದ ಸದರ ಲಾರಿಯು ರಸ್ತೆಯ ಬದಿಯಲ್ಲಿ ಪಲ್ಟಿಯಾಗಿ ಬಿದ್ದಿದ್ದಲ್ಲದೇ, ಆರೋಪಿತನು ತಾನು ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯನ್ನು ಸಹ ರಸ್ತೆಯ ಬದಿಯಲ್ಲಿ ಪಲ್ಟಿಯಾಗಿ ಬೀಳಿಸಿದ್ದು, ಈ ಅಪಘಾತದಿಂದ ಎರಡು ಲಾರಿಗಳು ಜಖಂಗೊಂಡಿದ್ದಲ್ಲದೇ ಲಾರಿ ನಂ: ಕೆ.ಎಲ್-16/ಟಿ-6937 ನೇದರ ಚಾಲಕನಾದ ಮುಫೀಜ್ ಮುಸ್ತಫಾ, ಸಾ|| ಕಜ್ಜಿಕೊಂಡ, ಕೇರಳಾ ಹಾಗೂ ಇನ್ನೊಬ್ಬ ಚಾಲಕ ಅಬ್ದುಲ್ ಸಲೀಮ್ ಕೆ, ತಂದೆ ಮೊಹಿದ್ದೀನ್ ಕೆ, ಸಾ|| ಮಲ್ಲಿಪುರಂ, ಕೇರಳಾ ಹಾಗೂ ಆರೋಪಿತನ ಲಾರಿಯ ಕ್ಲೀನರ್ ವಿಜಯಕುಮಾರ ಪಾಪಯ್ಯ, ಸಾ|| ತುಮಕೂರು ಇವರಿಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಲಾರಿ ಚಾಲಕನು ತಾನು ಸಹ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಾಮನ ತಂದೆ ಗೋಪಾಲ ದೇವಳಕರ, ಪ್ರಾಯ-49 ವರ್ಷ, ವೃತ್ತಿ-ಚಾಲಕ, ಸಾ|| ಚಿನ್ನಾಪುರ ಕ್ರಾಸ್, ಇಡಗುಂದಿ, ತಾ: ಯಲ್ಲಾಪುರ ರವರು ದಿನಾಂಕ: 24-06-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸೈಬಾಜ್ ತಂದೆ ನಿಸ್ಸಾರ್ ಅಹ್ಮದ್ ದಪೇದಾರ್, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಲಮಾಣಿ ಚಾಳ, ಹಳೇ ದಾಂಡೇಲಿ, ದಾಂಡೇಲಿ (ಸ್ಕೂಟರ್ ನಂ: ಕೆ.ಎ-65/ಎಚ್-0099 ನೇದರ ಸವಾರ). ಈತನು ದಿನಾಂಕ: 22-06-2021 ರಂದು 10-15 ಗಂಟೆಯ ಸುಮಾರಿಗೆ ತಾನು ಸವಾರಿ ಮಾಡುತ್ತಿದ್ದ ಸ್ಕೂಟರ್ ನಂ: ಕೆ.ಎ-65/ಎಚ್-0099 ನೇದನ್ನು ದಾಂಡೇಲಿ ಕಡೆಯಿಂದ ಜೋಯಿಡಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕಾರಿಯಾಗುವಂತೆ ಸವಾರಿ ಮಾಡಿಕೊಂಡು ಹೋಗುತ್ತಾ ಬಿರಂಪಾಲಿ ಗ್ರಾಮದ ಕ್ರಾಸ್ ದಾಟಿದ ನಂತರ ಸ್ಕೂಟರ್ ಮೇಲಿನ ವೇಗವನ್ನು ನಿಯಂತ್ರಿಸಲಾಗದೇ ಸ್ಕೂಟರ್ ಸ್ಕಿಡ್ ಆಗಿದ್ದರಿಂದ ಸ್ಕೂಟರ್ ಹಿಂದೆ ಕುಳಿತಿದ್ದ ತೌಸೀಫ್ ತಂದೆ ಹುಸೇನ್ ಶೇಖ್, ಪ್ರಾಯ-17 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಸೀದಿ ಗಲ್ಲಿ, ಹಳೇ ದಾಂಡೇಲಿ, ದಾಂಡೇಲಿ ಈತನಿಗೆ ಬಲ ಮೊಣಕಾಲಿನ ಕೆಳಗೆ ಎಲುಬು ಮುರಿಯುವಂತೆ ಭಾರೀ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಹುಸೇನ್ ತಂದೆ ಅಹ್ಮದ್ ಶೇಖ್, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಸೀದಿ ಗಲ್ಲಿ, ಹಳೇ ದಾಂಡೇಲಿ, ದಾಂಡೇಲಿ ರವರು ದಿನಾಂಕ: 24-06-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 32, 34, 38(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ಕೃಷ್ಣಾ ಮೋಗೇರ, ಪ್ರಾಯ-30 ವರ್ಷ, ವೃತ್ತಿ-ವ್ಯಾಪಾರ, ಸಾ|| ಕುದುರೆಮನೆ, ಪೋ: ಬೊಪ್ಪನಳ್ಳಿ, ತಾ: ಶಿರಸಿ, 2]. ದಯಾನಂದ ತಂದೆ ಶಿವಾ ದೇವಾಡಿಗ, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ಜಂಬೆಕೊಪ್ಪಾ, ಪೋ: ಬೊಪ್ಪನಳ್ಳಿ, ತಾ: ಶಿರಸಿ, 3]. ಸುರೇಶ ತಂದೆ ಮಂಜುನಾಥ ಆಚಾರಿ, ಸಾ|| ರಾಜೀವ ನಗರ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 24-06-2021 ರಂದು ಮಧ್ಯಾಹ್ನ 14-30 ಗಂಟೆಯ ಸುಮಾರಿಗೆ ಶಿರಸಿ ಶಹರದ ಝೂ ಸರ್ಕಲ್ ಹತ್ತಿರ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಮಾರಾಟಾ ಮಾಡುವ ಉದ್ದೇಶದಿಂದ 1). HAYWARDS CHEERS WHISKY ಅಂತಾ ಲೇಬಲ್ ಇದ್ದ 90 ML ಅಳತೆಯ ಪ್ಯಾಕೆಟ್ ಗಳು-960, ಅ||ಕಿ|| 34,080/- ರೂಪಾಯಿ, 2). KINGFISHER STRONG ಅಂತಾ ಲೇಬಲ್ ಇದ್ದ 500 ML ಅಳತೆಯ ಟಿನ್‍ ಗಳು-96, ಅ||ಕಿ|| 12,000/- ರೂಪಾಯಿ ಇವುಗಳ ಒಟ್ಟು 46,080/- ರೂಪಾಯಿ ಬೆಲೆಬಾಳುವ ಮದ್ಯದ ಪ್ಯಾಕೆಟ್ ಗಳನ್ನು ಓಮಿನಿ ಕಾರ್ ನಂ: ಕೆ.ಎ-52/ಎಮ್-9070 ದರಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿರುವಾಗ ಸ್ಥಳದಲ್ಲಿ 2 ಜನ ಆರೋಪಿತರು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಡಿ. ನಾಯ್ಕ, ಡಿ.ಎಸ್,ಪಿ, ಶಿರಸಿ ಉಪವಿಭಾಗ, ಶಿರಸಿ ರವರು ದಿನಾಂಕ: 24-06-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ಸುಮಾ ತಂದೆ ಕೆರಿಯಾ ನಾಯ್ಕ, ಪ್ರಾಯ-19 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಮನೆ ನಂ: 47, ಹಳ್ಳಿಕೊಪ್ಪ, ಪೋ: ಮಳಲಗಾಂವ, ತಾ: ಶಿರಸಿ. ಪಿರ್ಯಾದುದಾರರ ಮಗಳಾದ ಇವಳು ದ್ವಿತಿಯ ಪಿ.ಯು.ಸಿ. ವಿದ್ಯಾಭ್ಯಾಸ ಮಾಡಿ ಶಿರಸಿಯಲ್ಲಿ ಖಾಸಗಿ ಕೆಲಸ ಮಾಡಿಕೊಂಡು ಶಿರಸಿಯಲ್ಲಿ ಉಳಿಯುತ್ತಿದ್ದವಳು, ಈಗ ಕಳೆದ 20 ದಿನಗಳ ಹಿಂದೆ ಮನೆಯಾದ ಹಳ್ಳಿಕೊಪ್ಪದ ಮನೆಯಲ್ಲಿ ಬಂದು ಮನೆಯ ಜನರೊಂದಿಗೆ ಕೂಡಿಕೊಂಡು ಇದ್ದಳು. ಹೀಗಿದ್ದು ದಿನಾಂಕ: 21-06-2021 ರಂದು ಬೆಳಿಗ್ಗೆ 05-30 ಗಂಟೆಗೆ ಮಗಳಾದ ಸುಮಾ ಇವಳು ಮನೆಯಲ್ಲಿ ಮನೆ ಕೆಲಸ ಮಾಡುತ್ತಾ ಇದ್ದಳು. ಸುಮಾರು 06-30 ಗಂಟೆಗೆ ಪಿರ್ಯಾದುದಾರರು ಮಗಳಾದ ಸುಮಾ ಇವಳಿಗೆ ಕರೆದಾಗ ಸುಮಾ ಬರಲಿಲ್ಲ. ಆಗ ಪಿರ್ಯಾದುದಾರರು ಮನೆಯ ಜನರಿಗೆ ‘ಸುಮಾಗೆ ಎಷ್ಟೆ ಕರೆದರೂ ಬರುತ್ತಿಲ್ಲ. ಎಲ್ಲಿ ಹೋಗಿದ್ದಾಳೆ ನೋಡಿ’ ಅಂತಾ ಹೇಳಿದ್ದು, ಸ್ವಲ್ಪ ಹೊತ್ತಿನ ಬಳಿಕ ಪಿರ್ಯಾದಿಯ ಹೆಂಡತಿ ಲಕ್ಷ್ಮೀ ಇವಳು ‘ಸುಮಾ ಮನೆಯಲ್ಲಿ ಕಾಣುತ್ತಿಲ್ಲ’ ಅಂತಾ ಹೇಳಿದಳು. ಆಗ ಪಿರ್ಯಾದಿಯ ಮನೆಯವರು ಗಾಬರಿಯಾಗಿ ಸುಮಾ ಇವಳನ್ನು ಮನೆಯ ಅಕ್ಕ-ಪಕ್ಕದಲ್ಲಿ, ಊರಲ್ಲಿ, ಸುಮಾಳ ಸ್ನೇಹಿತರಲ್ಲಿ ಮತ್ತು ಸಂಬಂಧಿಕರ ಮನೆಯಾದ ಶಿರಸಿ, ಸಿದ್ದಾಪುರ ಕಡೆಯಲ್ಲಿ ಹುಡುಕಾಡಿದ್ದರಲ್ಲಿ ಸುಮಾ ಇವಳ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಸುಮಾ ಇವಳು ದಿನಾಂಕ: 21-06-2021 ರಂದು ಬೆಳಿಗ್ಗೆ 05-30 ಗಂಟೆಯಿಂದ 06-30 ಗಂಟೆಯ ನಡುವಿನ ಅವಧಿಯಲ್ಲಿ ಹಳ್ಳಿಕೊಪ್ಪ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಬೇಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೆರಿಯಾ ತಂದೆ ದುರ್ಗಾ ನಾಯ್ಕ, ಪ್ರಾಯ-49 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮನೆ ನಂ: 47, ಹಳ್ಳಿಕೊಪ್ಪ, ಪೋ: ಮಳಲಗಾಂವ, ತಾ: ಶಿರಸಿ ರವರು ದಿನಾಂಕ: 24-06-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 24-06-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಎಸ್. ಕೆ. ಕಮಲಾಕ್ಷ ತಂದೆ ಕರಿಯಪ್ಪ, ಪ್ರಾಯ-67 ವರ್ಷ, ವೃತ್ತಿ-ವ್ಯಾಪಾರ, ಸಾ|| ಕ್ರೈಸ್ತ ಕಾಲೇಜ್ ಹತ್ತಿರ, ಸುದ್ದಗುಂಟೆಪಾಳ್ಯ, ಬೆಂಗಳೂರು. ಈತನು ತನ್ನ ಕುಟುಂಬದವರೊಂದಿಗೆ ಗೋಕರ್ಣಕ್ಕೆ ತಿಥಿ ಕಾರ್ಯದ ನಿಮಿತ್ತ ಬಂದವನು, ದಿನಾಂಕ: 24-06-2021 ರಂದು ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ಗೋಕರ್ಣದ ಕೋಟಿತೀರ್ಥದ ಕೆರೆಯಲ್ಲಿ ತನ್ನ ಅಣ್ಣನ ಮಗನಾದ ಪಿರ್ಯಾದಿಯೊಂದಿಗೆ ಸ್ನಾನ ಮಾಡಲು ನೀರಿಗೆ ಇಳಿದವನು, ಈಜಾಡಲು ಆಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ತಿಮ್ಮಯ್ಯ, ಪ್ರಾಯ-46 ವರ್ಷ, ವೃತ್ತಿ-ಖಾಸಗಿ ವ್ಯಾಪಾರ, ಸಾ|| ಮನೆ ನಂ: 92, ಯಲ್ಲಮ್ಮ ದೇವಸ್ಥಾನದ ಮುಂಭಾಗ, 1 ನೇ ಕ್ರಾಸ್, ಜನತಾ ಕಾಲೋನಿ, ಅಂತರ ಸನಹಳ್ಳಿ, ಭೋವಿಪಾಳ್ಯ, ತುಮಕೂರು ರವರು ದಿನಾಂಕ: 24-06-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 25-06-2021 04:46 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080