ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 24-03-2021

at 00:00 hrs to 24:00 hrs

 

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 05/2021, ಕಲಂ: 420 ಐಪಿಸಿ ಹಾಗೂ ಕಲಂ: 66(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಯಾರೋ ಆರೋಪಿತರು ಅಪರಿಚಿರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ದಿನಾಂಕ: 17-03-2021 ರಂದು ತನ್ನ INSTGRAM ಬಳಸುತ್ತಿರುವಾಗ theonline.shopping ಎಂಬ ಹೆಸರಿನ ಜಾಹೀರಾತು ಪೇಜ್ ಕಾಣಿಸಿಕೊಂಡಿದ್ದು,ಅದರಲ್ಲಿ Oneplus 8T ಎಂಬ ಹೆಸರಿನ ಮೊಬೈಲ್ 13,000/- ರೂಪಾಯಿಗೆ ಮಾರಾಟಕ್ಕೆ ಇರುವ ಬಗ್ಗೆ ನಮೂದು ಇದ್ದು, ಸದರಿ ಮೊಬೈಲ್ ಹಾಲಿ ಮಾರ್ಕೆಟ್ ಬೆಲೆ 48,000/- ರೂಪಾಯಿ ಇರುವುದರಿಂದ ಒಳ್ಳೆಯ ಮೊಬೈಲ್ ಕಡಿಮೆ ಬೆಲೆಗೆ ಸಿಗುವುದೆಂದು ನಂಬಿ, ಸದರಿ ಶಾಪಿಂಗ್ ಪೇಜಿಗೆ ಒಂದು ಮೊಬೈಲ್ ಬೇಕು ಅಂತಾ INSTGRAM ನಲ್ಲಿ ಮೆಸೇಜ್ ಮಾಡಿದಾಗ, ನಮೂದಿತ ಆರೋಪಿತರು ಮೊದಲು 1,000/- ರೂಪಾಯಿ ಪೇ ಮಾಡಬೇಕೆಂದು ಹೇಳಿ ಒಂದು ಕ್ಯೂಆರ್ ಕೋಡ್ ಕಳುಹಿಸಿದ್ದು, ಪಿರ್ಯಾದಿಯವರು ತನ್ನ ಗೂಗಲ್ ಪೇ ಆ್ಯಪ್ ಮುಖಾಂತರ ಸ್ಕ್ಯಾನ್ ಮಾಡಿ 1,000/- ರೂಪಾಯಿ ಕಳುಹಿಸಿದ್ದು, ನಂತರ ಆರೋಪಿತರು ದಿನಾಂಕ: 18-03-2021 ರಂದು ಪುನಃ 12,000/- ರೂಪಾಯಿ ಹಾಕಿಸಿಕೊಂಡರು. ನಂತರದಲ್ಲಿ ಪಿರ್ಯಾದಿಗೆ ಮೊಬೈಲ್ ಡೆಲಿವರಿ ಆಗದೇ ಇರುವುದರಿಂದ ಪಿರ್ಯಾದಿಯವರು ಆರೋಪಿತರ ಬಳಿ ಕೇಳದಾಗ ಪುನಃ 5,000/- ರೂಪಾಯಿ ಹಾಕುವಂತೆ ತಿಳಿಸಿದಾಗ, ಪಿರ್ಯಾದಿಯವರು ತನಗೆ ಮೊಬೈಲ್ ಬೇಡಾ ಹಣ ರೀ-ಫಂಡ್ ಮಾಡುವಂತೆ ತಿಳಿಸಿದಾಗ ಅವರ INSTGRAM ಅಕೌಂಟ್ ಬ್ಲಾಕ್ ಮಾಡಿದ್ದು, ಆರೋಪಿತರು ಮೊಬೈಲ್ ನಂ: 7603085526 ನೇದರಿಂದ ಪಿರ್ಯಾದಿಯವರಿಗೆ ಕರೆ ಮಾಡಿ ತಾನು theonline.shopping ನಿಂದ ಕರೆ ಮಾಡುವುದಾಗಿ ತಿಳಿಸಿ, ನಿಮ್ಮ ಹಣ ರೀ-ಫಂಡ್ ಮಾಡುವುದಾಗಿ ಹೇಳಿ ತಾನು ಒಂದು ಲಿಂಕ್ ಕಳುಹಿಸುತ್ತೇನೆ. ಅದನ್ನು ತೆರೆದು ಅದರಲ್ಲಿ ಕೇಳಿರುವ ಮಾಹಿತಿಯನ್ನು ತುಂಬಿ 51/- ರೂಪಾಯಿ ಹಣವನ್ನು ತನ್ನ ಖಾತೆಗೆ ಹಾಕು. ಕೂಡಲೆ ಹಣ ರೀ-ಫಂಡ್ ಮಾಡುತ್ತೇನೆಂದು ಹೇಳಿ ಒಂದು ಲಿಂಕ್ ಕಳುಹಿಸಿಕೊಟ್ಟಿದ್ದು, ಪಿರ್ಯಾದಿಯವರು ಅದನ್ನು ಓಪನ್ ಮಾಡಿ ಅದರಲ್ಲಿ ಕೇಳಿರುವ ಬ್ಯಾಂಕ್ ಹೆಸರು, ಮೊಬೈಲ್ ನಂಬರ್, UPI PIN NUMBER ನೇದನ್ನು ನಮೂದಿಸಿ 1/- ರೂಪಾಯಿ ಕಳುಹಿಸಿ, ತಾನು ನಿಮ್ಮ ಹಣ ರೀ-ಫಂಡ್ ಮಾಡುವುದಾಗಿ ಹೇಳಿ ಆತನು ಒಂದು ಲಿಂಕ್ ಕಳುಹಿಸಿದ್ದು, ಪಿರ್ಯಾದಿಯವರು ಅದರಲ್ಲಿ ಕೇಳಿದ ಮಾಹಿತಿ ತುಂಬಿ 1/- ರೂಪಾಯಿ ಪೇ ಮಾಡಿದ್ದು, ಕೂಡಲೇ ಪಿರ್ಯಾದಿಯ ಖಾತೆಯಿಂದ 49,000/- ರೂಪಾಯಿಯಂತೆ 2 ಸಲ ಒಟ್ಟು 98,000/- ನಂತರ 2,000/- ರೂಪಾಯಿಯ ಖಾತೆಯಿಂದ ಡೆಬಿಟ್ ಆಗಿದ್ದು, ಹೀಗೆ ಪಿರ್ಯಾದಿಗೆ ಮೊಬೈಲ್ ಕಳುಹಿಸಿದೇ theonline.shopping ಕಂಪನಿಯವರೆಂದು ನಂಬಿಸಿ ಒಟ್ಟು 1,13,000/- ರೂಪಾಯಿ ಹಣವನ್ನು ವಂಚಿಸಿ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಚಿನ್ಮಯ ತಂದೆ ರವಿ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ಇಂಜಿನಿಯರ್, ಸಾ|| ಚಿತ್ರಗಿ, ತಾ: ಕುಮಟಾ ರವರು ದಿನಾಂಕ: 24-03-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 07/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣೇಶ ತಂದೆ ಹನ್ಮಂತ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಚಾಲಕ, ಸಾ|| ದೊಡ್ಡ ಅಲಗೇರಿ, ತಾ: ಅಂಕೋಲಾ (ಮಹೀಂದ್ರಾ ಇಂಪಿರಿಯೋ ಪಿಕಅಪ್ ವಾಹನ ನಂ: ಕೆ.ಎ-30/ಎ-2100 ನೇದರ ಚಾಲಕ). ದಿನಾಂಕ: 24-03-2021 ರಂದು ಬೆಳಗ್ಗೆ 09-10 ಗಂಟೆಯಲ್ಲಿ ಪಿರ್ಯಾದಿಯ ತಮ್ಮನಾದ ಮಂಗಲದಾಸ ತಂದೆ ವಿಠ್ಠಲ ಪೆಡ್ನೇಕರ ಈತನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ಯು-1404 ನೇದರ ಮೇಲಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮುಖಾಂತರ ಕೋಡಿಭಾಗ ಕಡೆಯಿಂದ ಕಾರವಾರ ಕಡೆಗೆ ಬರುತ್ತಿರುವಾಗ ಕಾರವಾರದ ಡಿ.ಸಿ ಕಛೇರಿ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66ರ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಬರುವ ರಸ್ತೆಯ ಮುಖಾಂತರ ಬಂದಂತ ಮಹೀಂದ್ರಾ ಇಂಪಿರಿಯೋ ಪಿಕಅಪ್ ವಾಹನ ನಂ: ಕೆ.ಎ-30/ಎ-2100 ನೇದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಕಾರವಾರದ ಪೇಟೆಗೆ ಹೋಗುವ ಫ್ಲೈಓವರ್ ಕೆಳಗಿನ ರಸ್ತೆಯನ್ನು ದಾಟಿ ಬಂದು ತನ್ನ ವಾಹನದ ವೇಗವನ್ನು ನಿಯಂತ್ರಿಸಲಾಗದೇ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮುಖಾಂತರ ಕಾರವಾರ ಕಡೆಗೆ ಬರುತ್ತಿರುವ ಪಿರ್ಯಾದಿಯ ತಮ್ಮನ ಮೋಟಾರ್ ಸೈಕಲಿಗೆ ತನ್ನ ಮಹೀಂದ್ರಾ ಇಂಪಿರಿಯೋ ಪಿಕಅಪ್ ವಾಹನದ ಮುಂದಿನ ಎಡಭಾಗದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಪಿರ್ಯಾದಿಯ ತಮ್ಮನಾದ ಮಂಗಲದಾಸ ತಂದೆ ವಿಠ್ಠಲ ಪೆಡ್ನೇಕರ ಈತನು ರಸ್ತೆಯ ಮೇಲೆ ಬೀಳುವಂತೆ ಮಾಡಿ, ಆತನಿಗೆ ಹಣೆಯ ಭಾಗದಲ್ಲಿ ಗಾಯ ಹಾಗೂ ಒಳನೋವು ಹಾಗೂ ಮೂಗಿನ ಎಡಭಾಗದಲ್ಲಿ ತೆರಚಿದ ಗಾಯ, ಬಲಗೈ ಮೊಣಕೈ ಹತ್ತಿರ ತೆರಚಿದ ಗಾಯ, ಎಡಗೈ ಮೊಣಕೈ ಹಾಗೂ ಮುಷ್ಠಿಯ ಹತ್ತಿರ ತೆರಚಿದ ಗಾಯ ಹಾಗೂ ಒಳನೋವು, ಎಡಗಾಲಿನ ಹೆಬ್ಬೆರಳಿನ ಹತ್ತಿರ ತೆರಚಿದ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಜೇಂದ್ರ ತಂದೆ ವಿಠ್ಠಲ ಪೆಡ್ನೇಕರ, ಪ್ರಾಯ-51 ವರ್ಷ, ವೃತ್ತಿ-ಪ್ಯಾಸೆಂಜರ್ ರಿಕ್ಷಾ ಚಾಲಕ, ಸಾ|| ಅಳಿವೆವಾಡಾ, ಕೋಡಿಭಾಗ, ಕಾರವಾರ ರವರು ದಿನಾಂಕ: 24-03-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸೂರ್ಯಕಾಂತ ಮಂಜು ಹರಿಕಂತ್ರ, ಪ್ರಾಯ-39 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಹಿರೇಗುತ್ತಿ, ಗೋಕರ್ಣ, ತಾ: ಕುಮಟಾ, 2]. ಅಶೋಕ ರಾಮಚಂದ್ರ ಪಡ್ತಿ,ಪ್ರಾಯ-46 ವರ್ಷ, ವೃತ್ತಿ:-ಹೋಟೆಲ್ ಕೆಲಸ, ಸಾ|| ಹಿರೇಗುತ್ತಿ, ಗೋಕರ್ಣ, ತಾ: ಕುಮಟಾ, 3]. ಕೇಶವ ನುನ್ನಾ ಪಡ್ತಿ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹಿರೇಗುತ್ತಿ, ಗೋಕರ್ಣ, ತಾ: ಕುಮಟಾ, 4]. ಗುರು ಸುಬ್ರಾಯ ಪಡ್ತಿ, ಪ್ರಾಯ-39 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮಧ್ಯ ಹಿರೇಗುತ್ತಿ, ಗೋಕರ್ಣ, ತಾ: ಕುಮಟಾ, 5]. ಸಾಯಿನಾಥ ಗಣಪತಿ ಭಂಡಾರಿ, ಪ್ರಾಯ-50 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಮಧ್ಯ ಹಿರೇಗುತ್ತಿ, ಗೋಕರ್ಣ, ತಾ: ಕುಮಟಾ, 6]. ರಾಜೇಶ ಸುರೇಶ ಹರಿಕಂತ್ರ, ಪ್ರಾಯ-25 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಧ್ಯ ಹಿರೇಗುತ್ತಿ, ಗೋಕರ್ಣ, ತಾ: ಕುಮಟಾ, 7]. ಮಾರುತಿ ನಾರಾಯಣ ಪಟಗಾರ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಹಿರೇಗುತ್ತಿ, ಗೋಕರ್ಣ, ತಾ: ಕುಮಟಾ, 8]. ನಾಗರಾಜ ಬೊಮ್ಮಯ್ಯ ಪಟಗಾರ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೋಳಿ ಮಂಜುಗುಣಿ, ಗೋಕರ್ಣ, ತಾ: ಕುಮಟಾ, 9]. ಗಜಾನನ ಕಾಂತಾ ಪಡ್ತಿ, ಸಾ|| ಹಿರೇಗುತ್ತಿ, ಗೋಕರ್ಣ, ತಾ: ಕುಮಟಾ, 10]. ಗೋಪಾಲ ಕೃಷ್ಣಾ ಹರಿಕಂತ್ರ, ಸಾ|| ನವಗ್ರಾಮ, ಹಿರೇಗುತ್ತಿ, ಗೋಕರ್ಣ, ತಾ: ಕುಮಟಾ, 11]. ಪ್ರದೀಪ ನಾರಾಯಣ ಪಟಗಾರ, ಸಾ|| ಕೋಳಿ ಮಂಜುಗುಣಿ, ತಾ: ಕುಮಟಾ, 12]. ಮಹಾದೇವ ಶಿವು ಪಟಗಾರ, ಸಾ|| ಕೋಳಿಮಂಜುಗುಣಿ, ತಾ: ಕುಮಟಾ, 13]. ರಾಘು ಶಿವು ಪಟಗಾರ, ಸಾ|| ಕೋಳಿ ಮಂಜುಗುಣಿ, ತಾ: ಕುಮಟಾ, ಈ ನಮೂದಿತ ಆರೋಪಿತರು ದಿನಾಂಕ: 23-03-2021 ರಂದು ರಾತ್ರಿ 23-30 ಗಂಟೆಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಕೋಳಿ ಮಂಜುಗುಣಿ ಗ್ರಾಮದ ಬೆಟ್ಟಕ್ಕೆ ಹೋಗುವ ಕಚ್ಚಾ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ, ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ತಮ್ಮ ಸಿಬ್ಬಂದಿಗಳೊಂದಿಗೆ ಮಾಡಿದ ದಾಳಿಯ ಕಾಲಕ್ಕೆ 1). ನಗದು ಹಣ 6,360/- ರೂಪಾಯಿ, 2). ಮೊಬೈಲಗಳು-08, 3). ಇಸ್ಪೀಟ್ ಎಲೆಗಳು-52, 5). ಪ್ಲಾಸ್ಟಿಕ್ ಚೀಲ್, ಟವೆಲ್-01 ಹಾಗೂ ಅರ್ಧ ಉರಿದ 3 ಮೇಣದ ಬತ್ತಿ ಸ್ವತ್ತಿನೊಂದಿಗೆ ಸಿಕ್ಕ ಆರೋಪಿ 1 ರಿಂದ 8 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 9 ರಿಂದ 12 ನೇಯವರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 24-03-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 61/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟೇಶ ತಂದೆ ಉಮೇಶ ನಾಯಕ, ಪ್ರಾಯ-52 ವರ್ಷ, ವೃತ್ತಿ-ವ್ಯಾಪಾರ, ಸಾ|| ರಾಮದೇವಸ್ಥಾನ ರೋಡ, ಚಿತ್ರಗಿ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 23-03-2021 ರಂದು-11-40 ಗಂಟೆಗೆ ಕುಮಟಾ ಚಿತ್ರಗಿಯ ಹಳಕಾರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯಲ್ಲಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲ 1). ನಗದು ಹಣ 2,230/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿಯ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು-1), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 24-03-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಲಕ್ಷ್ಮೀಶ ತಂದೆ ತಿಮ್ಮಪ್ಪಾ ಪಟಗಾರ, ಪ್ರಾಯ-37 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಕಲಕೋಡ, ಹೆಗಡೆ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 23-03-2021 ರಂದು 18-15 ಗಂಟೆಗೆ ಕುಮಟಾ ತಾಲೂಕಿನ ಹೆಗಡೆ ಮಚ್ಚಗೋಣದ ರಣಭಂಟ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಅನ್ಯಾಯದ ಲಾಭಕ್ಕಾಗಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಅದನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ನಗದು ಹಣ 1,040/- ರೂಪಾಯಿ ಹಾಗೂ ಓ.ಸಿ ಆಟದ ಸಲಕರಣೆಗಳೊಂದಿಗೆ ದಾಳಿಯ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು-1), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 24-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುನಿಲ ತಂದೆ ದೇವಿದಾಸ ಗುಡಿಗಾರ, ಪ್ರಾಯ-46 ವರ್ಷ, ವೃತ್ತಿ-ಗುಡಿಗಾರಿಕೆ ಕೆಲಸ, ಸಾ|| ಮಾಸ್ತಿಕಟ್ಟೆ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-30/ಜೆ-9398 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 24-03-2020 ರಂದು 20-00 ಗಂಟೆಯ ಸುಮಾರಿಗೆ ಹೊನ್ನಾವರ ಪಟ್ಟಣದ ಶರಾವತಿ ಸರ್ಕಲ್ ಕಡೆಯಿಂದ ಗೇರುಸೋಪ್ಪಾ ಸರ್ಕಲ್ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ಜೆ-9398 ನೇದನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದವನು, ಹೊನ್ನಾವರದ ಸರ್ಕಾರಿ ಪಶು ಆಸ್ಪತ್ರೆಯ ಎದುರಿಗೆ ಪಿರ್ಯಾದಿ ಮತ್ತು ಪಿರ್ಯಾದಿಯ ತಂದೆ ಹನಮಂತ ತಂದೆ ರುಕ್ಕು ಮೇಸ್ತಾ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆಳಗಿನಪಾಳ್ಯ, ತಾ: ಹೊನ್ನಾವರ ಇವರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಮೋಟಾರ್ ಸೈಕಲ್ ಸವಾರನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ಒಮ್ಮೆಲೆ ನಿರ್ಲಕ್ಷ್ಯತನದಿಂದ ರಸ್ತೆಯ ಎಡಕ್ಕೆ ಚಲಾಯಿಸಿ, ರಸ್ತೆಯ ಎಡಬದಿಯ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಯ ತಂದೆ ಹನಮಂತ ರುಕ್ಕು ಮೇಸ್ತಾ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿ ತಂದೆಯ ತಲೆಗೆ, ಎಡಗಾಲಿನ ಪಾದದ ಹತ್ತಿರ ಹಾಗೂ ಮೈ ಮೇಲೆ ಅಲ್ಲಲ್ಲಿ ತೆರಚಿದ ಗಾಯವಾಗಲು ಕಾರಣನಾಗಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ಹನಮಂತ ಮೇಸ್ತಾ, ಪ್ರಾಯ-28 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಕೆಳಗಿನಪಾಳ್ಯ, ತಾ: ಹೊನ್ನಾವರ ರವರು ದಿನಾಂಕ: 24-03-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 23-03-2021 ರಂದು 19-00 ಗಂಟೆಯಿಂದ ದಿನಾಂಕ: 24-03-2021 ರಂದು ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರ ಮನೆಯ ಮುಂದಿನ ಬಾಗಿಲಿನ ಇಂಟರಲಾಕ್ ಅನ್ನು ಯಾವುದೋ ಗಟ್ಟಿಯಾದ ಆಯುಧದಿಂದ ಮುರಿದು ಮನೆಯ ಒಳ ಹೊಕ್ಕು, ಒಳಬದಿಯ ದೇವರ ಕೋಣೆಯನ್ನು ತೆಗೆದು ಅಲ್ಲಿದ್ದ ಕಾಣಿಕೆಯ ಡಬ್ಬಿಯಲ್ಲಿದ್ದ 200/- ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿ, ಬೆಡ್ ರೂಮಿನಲ್ಲಿದ್ದ ಗೊದ್ರೇಜ್ ಕಪಾಟಿನ ಚಾವಿಯನ್ನು ತೆಗೆದು ಬಟ್ಟೆಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿಸಾಡಿ, ಅದರಲ್ಲಿದ್ದ 1). 8 ಗ್ರಾಂ ನ 1 ಜೊತೆ ಬಂಗಾರದ ಕುಡುಕು ಜುಮಕಿ ಸೆಟ್, ಅ||ಕಿ|| 20,000/- ರೂಪಾಯಿ, 2). 3 ಗ್ರಾಂ ನ 1 ಕಿವಿಯ ಬಂಗಾರದ ಬುಟ್ಟಿ ರಿಂಗ್ ಸೆಟ್, ಅ||ಕಿ|| 10,000/- ರೂಪಾಯಿ, 3). 6 ಗ್ರಾಂ ನ 1 ಸೆಟ್ ಕಿವಿಯ ಬಂಗಾರದ ಹವಳದ ಕುಡುಕು, ಅ||ಕಿ|| 12,000/- ರೂಪಾಯಿ, 4). 6 ಗ್ರಾಂ ನ ಬಂಗಾರದ ಉಂಗುರ 1, ಅ||ಕಿ|| 30,000/- ರೂಪಾಯಿ, 5). 4 ಗ್ರಾಂ ನ ಬಂಗಾರದ ಉಂಗುರ 1, ಅ||ಕಿ|| 20,000/- ರೂಪಾಯಿ ನೇದವುಗಳನ್ನು ಸ್ಟೀಲ್ ಡಬ್ಬದಲ್ಲಿಟ್ಟಿದ್ದನ್ನು ಕಳುವು ಮಾಡಿ, ಡಬ್ಬವನ್ನು ಅಲ್ಲಿಯೇ ಬಿಸಾಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ಮಂಜುನಾಥ ಶೆಟ್ಟಿ, ಪ್ರಾಯ-53 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ಕುಂಬಾರಕೇರಿ ರಸ್ತೆ, ಬಸ್ತಿ, ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 24-03-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮೋಹನ ತಂದೆ ತಿಮ್ಮಯ್ಯ ನಾಯ್ಕ, ಪ್ರಾಯ-27 ವರ್ಷ, ಸಾ|| ಗಲ್ಫ್ ಕ್ರಾಸ್, ತೆರ್ನಮಕ್ಕಿ, ಕಾಯ್ಕಿಣಿ, ತಾ: ಭಟ್ಕಳ. ಪಿರ್ಯಾದಿಯವರು ದಿನಾಂಕ: 17-03-2021 ರಂದು ಸಾಯಂಕಾಲ 16-30 ಗಂಟೆಯ ಸುಮಾರಿಗೆ ಭಟ್ಕಳ ತಾಲೂಕಿನ ಮುರ್ಡೇಶ್ವರದ ಉತ್ತರಕೊಪ್ಪ ರಸ್ತೆ, ಬಿಡ್ಕಿಬೈಲ್ ಕ್ರಾಸ್ ಹತ್ತಿರ ತನ್ನ ಕಾರಿನಲ್ಲಿ ಹೋಗುತ್ತಿದ್ದಾಗ, ನಮೂದಿತ ಆರೋಪಿತನು ಪಿರ್ಯಾದಿಯ ಕಾರನ್ನು ಅಡ್ಡಗಟ್ಟಿ, ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಳಿ ಮಗನೆ, ಸೂಳೆ ಮಗನೆ, ನಿನ್ನದು ಅತಿಯಾಯಿತು. ನಿನಗೆ ಒಂದು ದಿವಸ ಕೊಲೆ ಮಾಡಿ ತಾನು ಜೈಲಿಗೆ ಹೋಗುತ್ತೇನೆ. ಅಲ್ಲಿಯವರೆಗೆ ನನಗೆ ಸಮಾಧಾನ ಇಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ನಾಗಪ್ಪ @ ಸಣ್ಣತಮ್ಮ ತಂದೆ ನಾಗಪ್ಪ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ವ್ಯವಹಾರ, ಸಾ|| ಮಿಡ್ಲಹೊಳೆ, ಪೋ: ಗೋಳಿಕುಂಬ್ರಿ, ಉತ್ತರಕೊಪ್ಪ ರಸ್ತೆ, ತಾ: ಭಟ್ಕಳ ರವರು ದಿನಾಂಕ: 24-03-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ವೆಂಕ್ಟಾ ಬಿಲ್ಲವ, ಪ್ರಾಯ-49 ವರ್ಷ, ವೃತ್ತಿ-ಅಟೋ ಚಾಲಕ, ಸಾ|| ಕಲ್ಲಾರಿ ಜಡ್ಡಿ, ಚವತ್ತಿ, ತಾ: ಯಲ್ಲಾಪುರ. ನಮೂದಿತ ಆರೋಪಿತನು ತನ್ನ ಲಾಭಕ್ಕಾಗಿ ದಿನಾಂಕ: 23-03-2021 ರಂದು 18-30 ಗಂಟೆಗೆ ಯಲ್ಲಾಪುರ ತಾಲೂಕಿನ ಚವತ್ತಿ ತುಡಗುಣಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ದಳದಲ್ಲಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ  ಆಡಿಸುತ್ತಿರುವಾಗ 1,175/- ರೂಪಾಯಿ ಹಣ ಮತ್ತು ಓ.ಸಿ ಮಟಕಾ ಅಂಕೆ-ಸಂಖ್ಯೆ ಬರೆದ ಪೇಪರ್-01 ಹಾಗೂ ಬಾಲ್ ಪೆನ್-01 ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭೀಮಸಿಂಗ್ ಜಿ. ಲಮಾಣಿ, ಪಿ.ಎಸ್.ಐ-2, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 24-03-2021 ರಂದು 06-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಶಿವಾನಂದ ತಂದೆ ರಾಮ ಮಡಿವಾಳ, ಪ್ರಾಯ-49 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ದೊಂಬೆಕೈ, ಪೋ: ಗುಂಜಗೋಡ, ತಾ: ಸಿದ್ದಾಪುರ. ನಮೂದಿತ ಆರೋಪಿತನು ದಿನಾಂಕ: 24-03-2021 ರಂದು 18-30 ಗಂಟೆಗೆ ಸಿದ್ದಾಪುರ ತಾಲೂಕಿನ ದಂಬೆಕೈಯಲ್ಲಿ ಇರುವ ತನ್ನ ಮನೆಯ ಎದುರಿನ ಅಂಗಳದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 4 ಟೆಟ್ರಾ ಪ್ಯಾಕೆಟ್ ಗಳು, 2). 2 ಪ್ಲಾಸ್ಟಿಕ್ ಗ್ಲಾಸುಗಳು, 3). Original Choice Deluxe Whisky 90 ML ಅಂತಾ ಬರೆದ 2 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 24-03-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 24-03-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಕೇಶವ ತಂದೆ ನಾರಾಯಣ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾವೂರು, ಪೋ: ಹಡಿನಬಾಳ, ತಾ: ಹೊನ್ನಾವರ. ಪಿರ್ಯಾದಿಯ ತಂದೆಯಾದ ಇವರು ದಿನಾಂಕ: 24-03-2021 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಹೊನ್ನಾವರ ಪಟ್ಟಣದ ದುರ್ಗಾಕೇರಿಯ ದೀಪಕ ತಂದೆ ಹರಿಶ್ಚಂದ್ರ ನಾಯ್ಕ ಇವರ ಮನೆಯ ಮುಂದಿನ ತೆಂಗಿನ ತೋಟದಲ್ಲಿ ತೆಂಗಿನ ಕಾಯಿ ಕೊಯ್ಯುವ ಕೆಲಸಕ್ಕೆಂದು ಹೋಗಿದ್ದವರು, ತೆಂಗಿನ ಕಾಯಿ ಕೊಯ್ಯುತ್ತಿದ್ದಾಗ 07-00 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಕಾಲು ಜಾರಿ ತೆಂಗಿನ ಮರದಿಂದ ಬಿದ್ದು ಚಿಕಿತ್ಸೆಗೆಂದು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟ ಕುರಿತು ತಿಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಪ್ರವೀಣ ತಂದೆ ಕೇಶವ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಕಾವೂರು, ಪೋ: ಹಡಿನಬಾಳ, ತಾ: ಹೊನ್ನಾವರ ರವರು ದಿನಾಂಕ: 24-03-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಕೃಷ್ಣ ಮಲಬಾರಿ, ಪ್ರಾಯ-58 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೇರಳ ರಾಜ್ಯ, ಹಾಲಿ ಸಾ|| ಹಾಡಗೇರಿ, ಪೋ: ನಗರಬಸ್ತಿಕೇರಿ, ತಾ: ಹೊನ್ನಾವರ. ಈತನು ಸುಮಾರು 20 ವರ್ಷಗಳ ಹಿಂದೆ ಕೇರಳದಿಂದ ಬಂದು ಹೊನ್ನಾವರ ತಾಲೂಕಿನ ಹಾಡಗೇರಿ ಗ್ರಾಮದಲ್ಲಿ ಅಡಿಕೆ/ಬಾಳೆ ತೋಟ ಮಾಡಿಕೊಂಡಿದ್ದವನು ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದವನು, ದಿನಾಂಕ: 23-03-2021 ರಂದು 18-30 ಗಂಟೆಯಿಂದ 20-40 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಜಗುಲಿಯ ಮೇಲೆ ಮಲಗಿಕೊಂಡಿದ್ದವನು, ಮಲಗಿದಲ್ಲಿಯೇ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣ ತಂದೆ ಶಿವು ಮರಾಠಿ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಾಡಗೇರಿ, ಪೋ: ನಗರಬಸ್ತಿಕೇರಿ, ತಾ: ಹೊನ್ನಾವರ ರವರು ದಿನಾಂಕ: 24-03-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 27-03-2021 11:30 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080