ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 24-05-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 269, 271 ಐಪಿಸಿ ಹಾಗೂ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಪಾಂಡುರಂಗ ದುರ್ಗೇಕರ, ಪ್ರಾಯ-42 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಐ.ಎನ್.ಪಿ ರೋಡ್, ಬೈತಖೊಲ್, ಕಾರವಾರ. ಈತನು ದಿನಾಂಕ: 24-05-2021 ರಂದು 15-20 ಗಂಟೆಗೆ ಕೋವಿಡ್-19 ಖಾಯಿಲೆ ಸಂಬಂಧ ಲಾಕಡೌನ್ ಆದೇಶ ಜಾರಿಯಲ್ಲಿದ್ದರೂ ಸಹ ಸಾರ್ವಜನಿಕವಾಗಿ ಸಾಂಕ್ರಾಮಿಕ ಕೋವಿಡ್-19 ಕೊರೋನಾ ಖಾಯಿಲೆ ಇತರರಿಗೆ ಹರಡುವ ಸಂಭವ ಇರುವಂತೆ ಸಾಂಕ್ರಾಮಿಕ ರೋಗದ ಬಗ್ಗೆ ನಿರ್ಲಕ್ಷ್ಯತನ ತೋರಿ ತನ್ನ ಲಾಭದ ಸಲುವಾಗಿ ಇತರರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವವಿರುವಂತೆ ಮಾಸ್ಕ್ ವಗೈರೆ ಧರಿಸದೇ ಸಾರ್ವಜನಿಕವಾಗಿ ಓಡಾಡುತ್ತಾ ರೋಗ ನಿರೋಧಕ ನಿರ್ಬಂಧ ನಿಯಮದ ಆದೇಶವನ್ನು ಉಲ್ಲಂಘನೆ ಮಾಡಿ ಗೋವಾ ರಾಜ್ಯದಲ್ಲಿ ತಯಾರಾದ 1). LIGHT HORSE WHISKEY-750 ML ಅಂತಾ ಲೇಬಲ್ ಇರುವ  ಸರಾಯಿ ಬಾಟಲಿ-04  ಹಾಗೂ 2). GOA’s SPECAIL PALM FENNY-750 ML ಅಂತಾ ಲೇಬಲ್ ಇರುವ ಪ್ಲಾಸ್ಟಿಕ್ ಸರಾಯಿ ಬಾಟಲಿ-16. ಇವುಗಳನ್ನು ಗೋವಾ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಅನಧೀಕೃತವಾಗಿ ಯಾವುದೇ ಅಧಿಕೃತ ಪಾಸ್ ಯಾ ಪರ್ಮಿಟ್ ಇಲ್ಲದೆಯೇ ತಂದು ತನ್ನ ತಾಬಾದಲ್ಲಿ ಇಟ್ಟುಕೊಂಡು ಮಾರಾಟಕ್ಕೆ ನಿಂತುಕೊಂಡಿದ್ದಾಗ ದಾಳಿಯ ಕಾಲ ಆರೋಪಿತನು ಪರಾರಿಯಾಗಿ ಅಬಕಾರಿ ಸ್ವತ್ತುಗಳು ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ಕುಮಾರ ಎಮ್, ಪಿ.ಎಸ್.ಐ (ಕಾ&ಸು), ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 24-05-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 269, 270 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಮದ್ ಸುಹೇಲ್ ತಂದೆ ಮಹಮ್ಮದ್ ಸಲೀಮ್ ಮಲಬಾರಿ, ಪ್ರಾಯ-28 ವರ್ಷ, ವೃತ್ತಿ-ಚಿಕನ್ ವ್ಯಾಪಾರ, ಸಾ|| 1 ನೇ ಕ್ರಾಸ್, ನ್ಯಾಶನಲ್ ಕಾಲೋನಿ, ಹಮ್ಜಾ ಮಸೀದಿ ಹತ್ತಿರ, ಮಾವಳ್ಳಿ-01, ಮುರ್ಡೇಶ್ವರ, ತಾ: ಭಟ್ಕಳ. ದೇಶದಾದ್ಯಂತ ಕೊರೋನಾ ಸಾಂಕ್ರಾಮಿಕ ರೋಗವು ತೀವೃವಾಗಿ ಹರಡುತ್ತಿದ್ದು, ಅದನ್ನು ತಡೆಗಟ್ಟುವ ಉದ್ದೇಶದಿಂದ ಸುರಕ್ಷತಾ ಕ್ರಮವನ್ನು ಕೈಗೊಳ್ಳಲು ಘನ ಕರ್ನಾಟಕ ಸರಕಾರದ ಪರವಾಗಿ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದಂತೆ ಯಾರೂ ಮನೆಯಿಂದ ಹೊರೆಗೆ ಬಾರದಂತೆ ಲಾಕಡೌನ್ ಆದೇಶವನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸಿದ ವಿಷಯ ಗೊತ್ತಿದ್ದರೂ ಸಹ ನಮೂದಿತ ಆರೋಪಿತನು ದಿನಾಂಕ: 24-05-2021 ರಂದು ಬೆಳಿಗ್ಗೆ 10-30 ಗಂಟೆಗೆ ಸೋನಾರಕೇರಿಯಲ್ಲಿರುವ ತನ್ನ ‘ಉಮ್ಮತಿ ಚಿಕನ್ ಸೆಂಟರ್’ ಅನ್ನು ತೆರೆದು, ತಾನು ಮುಖಕ್ಕೆ ಯಾವುದೇ ಮಾಸ್ಕ್ ಅನ್ನು ಧರಿಸದೇ, ಯಾವುದೇ ರಕ್ಷಣೆಯನ್ನು ಹೊಂದದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗವನ್ನು ಹರಡುವ ಉದ್ದೇಶದಿಂದ ಚಿಕನ್ ಅಂಗಡಿಯನ್ನು ತೆರೆದು ಸಾರ್ವಜನಿಕರಿಗೆ ಚಿಕನ್ ಮಾರಾಟ ಮಾಡಿ ನಿರ್ಲಕ್ಷ್ಯತನ ತೋರಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಎಮ್. ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 24-05-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 4,12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1) (D) PREVENTION OF CRUELTY TO ANIMALS ACT-1960 ವಿವರ...... ನಮೂದಿತ ಆರೋಪಿತರು 1]. ಇಬ್ರಾಹಿಂ ಮಹ್ಮದಹುಸೇನ್ ಹವಾ, ಸಾ|| ಹನೀಫಾಬಾದ್ ಹೆಬಳೆ, ತಾ: ಭಟ್ಕಳ, 2]. ಇನೋವಾ ವಾಹನ ನಂ: ಕೆ.ಎ-19/ಎಂ.ಸಿ-7649 ನೇದರ ಚಾಲಕ ಮತ್ತು ಇತರರು (ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನ ಸಹಯೋಗದಲ್ಲಿ ಇನ್ನೂ ಕೆಲವು ಆರೋಪಿತರು ಸೇರಿಕೊಂಡು ದಿನಾಂಕ: 24-05-2021 ರಂದು ಬೆಳಿಗ್ಗೆ 07-30 ಗಂಟೆಯ ಸಮಯಕ್ಕೆ ಭಟ್ಕಳದ ಹನೀಫಾಬಾದ್ 5 ನೇ ಕ್ರಾಸಿನಲ್ಲಿ ಮುನೀರ್ ಮಸೀದಿ ಹತ್ತಿರ ಇರುವ ತನ್ನ ಮನೆಯ ಹತ್ತಿರ ಇರುವ ಒಂದು ಹಳೆ ಕೊಟ್ಟಿಗೆಯ ಪಕ್ಕದಲ್ಲಿ ಸುಮಾರು 5,00,000/- ರೂಪಾಯಿ ಬೆಲೆಯ ಟೊಯೋಟಾ ಇನೋವಾ ವಾಹನ ನಂ: ಕೆ.ಎ 19/ಎಂ.ಸಿ-7649 ನೇದರ ಮಧ್ಯದ ಸೀಟ್ ಅನ್ನು ತೆಗೆದು, ಅದರಲ್ಲಿ ನೀಲಿ ಬಣ್ಣದ ತಾಡಪತ್ರೆಯನ್ನು ಹಾಸಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಬಂದು ಅವುಗಳಿಗೆ ಆಹಾರ ನೀರು ಕೊಡದೇ ಅವುಗಳನ್ನು ವಧೆ ಮಾಡುವ ಉದ್ದೇಶದಿಂದ ಇನೋವಾ ವಾಹನದಿಂದ ಒಂದೊಂದಾಗಿ ಇಳಿಸಿ, ಸ್ಥಳದಲ್ಲಿ ಕಟ್ಟುತ್ತಿರುವಾಗ 1). ಕಪ್ಪು ಬಣ್ಣದ ಎತ್ತಿನ ಗುಡ್ಡ-01, ಅ||ಕಿ|| 2,500/- ರೂಪಾಯಿ, 2). ಕಂದು ಮತ್ತು ಕಪ್ಪು ಬಣ್ಣದ ಆಕಳು-01, ಅ||ಕಿ|| 5,000/- ರೂಪಾಯಿ, 3). ಕಂದು ಮತ್ತು ಕಪ್ಪು ಬಣ್ಣದ ಆಕಳು-01, ಅ||ಕಿ| 3,000/- ರೂಪಾಯಿ (ಇದರ ಬಲಕಿವಿಗೆ ಟ್ಯಾಗ್ ಅಳವಡಿಸಿದ್ದು, ಅದರ ಮೇಲೆ 890071/268081 ಅಂತಾ ಬರೆದಿರುತ್ತಾರೆ). 4). ಕಪ್ಪು ಬಣ್ಣದ ಎತ್ತಿನ ಗುಡ್ಡ-01, ಅ||ಕಿ|| 2,000/- ರೂಪಾಯಿ, (ಇದಕ್ಕೆ ಟ್ಯಾಗ್ ಅಳವಡಿಸಿದ್ದು, ಅದರ ಮೇಲೆ 100354/949332 ಅಂತಾ ಬರೆದಿರುತ್ತಾರೆ). 5). ಕಪ್ಪು ಬಣ್ಣದ ಎತ್ತು-01, ಅ||ಕಿ|| 3.000/- ರೂಪಾಯಿ, 6). ಕಪ್ಪು ಬಣ್ಣದ ಆಕಳು-01, ಅ||ಕಿ|| 1,000/- ರೂಪಾಯಿ. ಇವುಗಳು ಸ್ಥಳದಲ್ಲಿ ಸಿಕ್ಕಿದ್ದು ಹಾಗೂ ಟೊಯೋಟಾ ಇನೋವಾ ವಾಹನ ನಂ: ಕೆ.ಎ-19/ಎಂ.ಸಿ-7649 ನೇದರ ಚಾಲಕನಾದ ಆರೋಪಿ 2 ನೇಯವನು ಪೊಲೀಸ್ ವಾಹನವನ್ನು ನೋಡಿ ಓಡಿ ಹೋಗಿ ವಾಹನವನ್ನು ವೆಂಕ್ಟಾಪುರದ ನೀರಕಂಠ ಕ್ರಾಸ್ ಹತ್ತಿರ ಬಿಟ್ಟು ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 24-05-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 379 ಐಪಿಸಿ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 27-04-2021 ರಂದು ಸಾಯಂಕಾಲ 06-05 ಗಂಟೆಯಿಂದ ದಿನಾಂಕ: 29-04-2021 ರ ಬೆಳಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಭಟ್ಕಳ ತಾಲೂಕಿನ ವೆಂಕ್ಟಾಪುರದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಎದುರಿನಲ್ಲಿಟ್ಟ ಪಿರ್ಯಾದುದಾರರ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-0150 ನೇದನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಕಾಂತರಾಜ ತಂದೆ ಪುರುಷೋತ್ತಮ ಮೊಗೇರ, ಪ್ರಾಯ-36 ವರ್ಷ, ವೃತ್ತಿ-ಶಿಕ್ಷಕ, ಸಾ|| ಬಂಡಾರಿ ಮನೆ, ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಹತ್ತಿರ, ವೆಂಕ್ಟಾಪುರ, ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 24-05-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 143, 147, 269, 271, 427, 504, 506 ಸಹಿತ 149 ಐಪಿಸಿ ವಿವರ...... ನಮೂದಿತ ಆರೋಪಿತರು 1]. ಈಶ್ವರ ಬಸಪ್ಪಾ ಮೂಶಪ್ಪನವರ, 2]. ರಾಹುಲ ಸತೀಷ ಸಾಳುಂಕೆ, 3]. ದಶರಥ ಮಹೇಶ ಮೇದಾರ, 4]. ಓಂಕಾರ ಶಾಂತಾರಾಮ ಮೇದಾರ, 5]. ಪ್ರಶಾಂತ ಬಸವರಾಜ ಮೇದಾರ, 6]. ಉದಯ ಶಿವಬಸು ಮೇದಾರ, 7]. ಗಣೇಶ ಲಕ್ಷ್ಮಣ ಮೇದಾರ, 8]. ಸಂತೋಷ ಸುರೇಶ ಜಾದವ, 9]. ಆಕಾಶ ಸುರೇಶ ಮೇದಾರ, 10]. ಪ್ರವೀಣ ಬಸವರಾಜ ಮೇದಾರ, 11]. ಮುಸ್ತಫಾ ರಫೀಖ್ ಶೇಖ್, 12]. ಅಭಿಷೇಕ ಮಹೇಶ ಮೇದಾರ, 13]. ಹನುಮಂತ ಸುರೇಶ ಜಾದವ, 14]. ಫರಾನ್ ಮೊಹ್ಮದ ಶೇಖ್, 15]. ಪರಶುರಾಮ ಸುರೇಶ ಜಾದವ, ಸಾ; (ಎಲ್ಲರೂ) ಜನತಾ ಕಾಲೋನಿ, ತಾ: ಜೋಯಿಡಾ. ಈ ನಮೂದಿತ ಆರೋಪಿತರು ದಿನಾಂಕ: 24-05-2021 ರಂದು ಸಂಜೆ ಜೋಯಿಡಾ ತಾಲೂಕಿನ ಜನತಾ ಕಾಲೋನಿ ಗ್ರಾಮದ ಹನುಮಂತ ದೇವಸ್ಥಾನ ಹತ್ತಿರ ಇರುವ ಮೈದಾನದಲ್ಲಿ ಕೊರೋನಾ  ಸಾಂಕ್ರಾಮೀಕ ರೋಗ ತಡೆಗಟ್ಟುವ ಕುರಿತು ಸರ್ಕಾರ ಮಾಡಿದ ಲಾಕಡೌನ್ ಆದೇಶದ ಉಲ್ಲಂಘನೆ ಮಾಡಿ, ಮನೆಯಿಂದ ಹೊರಗೆ ಬಂದು, ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಎಲ್ಲರು ಸೇರಿ ಕ್ರಿಕೆಟ್ ಆಡುತ್ತಿದ್ದು, ಈ ವಿಷಯವನ್ನು ಪಿರ್ಯಾದಿಯವರು ಪೋನ್ ಮಾಡಿ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಇದರಿಂದ ಆರೋಪಿತರೆಲ್ಲರೂ ಪಿರ್ಯಾದಿಯ ಮೇಲೆ ಸಿಟ್ಟಿನಿಂದ ಇದ್ದವರು, ದಿನಾಂಕ: 24-05-2021 ರಂದು ಸಂಜೆ 07-00 ಗಂಟೆಗೆ ಎಲ್ಲರೂ ಸೇರಿ ಅಕ್ರಮಕೂಟ ಕಟ್ಟಿಕೊಂಡು ಪಿರ್ಯಾದಿಯ ಮನೆಯ ಮುಂದಿನ ಸಿಮೆಂಟ್ ರಸ್ತೆಯ ಮೇಲೆ ಹೋಗಿ, ಪಿರ್ಯಾದಿಯನ್ನು ಉದ್ದೇಶಿಸಿ ‘ನಾವು ಕ್ರಿಕೆಟ್ ಆಡುತ್ತಿದ್ದರೆ ನಿನಗೆ ಏನು ಸಮಸ್ಯೆ, ಯಾಕೆ ಪೊಲೀಸರಿಗೆ ಪೋನ್ ಮಾಡಿ ಹೇಳಿರುತ್ತೀ? ನೀನು ಪೋನ್ ಮಾಡಿ ಹೇಳಿದ್ದರಿಂದಲೇ ಪೊಲೀಸರು ನಮ್ಮ ಊರಿಗೆ ಬಂದು ಕ್ರಿಕೆಟ್ ಆಡುತ್ತಿದ್ದ ನಮಗೆ ಓಡಿಸಿರುತ್ತಾರೆ. ಬೋಳಿ ಮಗನೆ, ಸೂಳೆ ಮಗನೆ ಮನೆಯಿಂದ ಹೊರಗೆ ಬಾ’ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ಮನೆಯ ಮುಂದೆ ನಿಲ್ಲಿಸಿಟ್ಟಿದ್ದ ಪಿರ್ಯಾದಿಯ ಬಾಬ್ತು ಸುಜುಕಿ ಎರ್ಟಿಗಾ ಕಾರ್ ನಂ: ಕೆ.ಎ-37/ಎಮ್-6405 ನೇದರ ಗ್ಲಾಸ್ ಅನ್ನು ಕಲ್ಲಿನಿಂದ ಹೊಡೆದು ಒಡೆದು ಪಿರ್ಯಾದಿಗೆ ಸುಮಾರು 8,000/- ರೂಪಾಯಿಯಷ್ಟು ಲುಕ್ಸಾನ್ ಪಡಿಸಿ, ಪಿರ್ಯಾದಿಗೆ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಹುಸೇನ್ ತಂದೆ ಅಬ್ದುಲ್ ಸತ್ತಾರ್ ಶೇಖ್, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ತಾ: ಜೋಯಿಡಾ ರವರು ದಿನಾಂಕ: 24-05-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ನಾರಾಯಣ ಮಡಿವಾಳ, ಪ್ರಾಯ-35 ವರ್ಷ, ವೃತ್ತಿ-ವ್ಯಾಪಾರ, ಸಾ|| ಗುಡ್ನಾಪುರ, ತಾ: ಶಿರಸಿ. ಈತನು ದಿನಾಂಕ: 24-05-2021 ರಂದು ಸಾಯಂಕಾಲ 06-30 ಗಂಟೆಗೆ ಗುಡ್ನಾಪುರದ ಶ್ರೀ ಮಾರಿಕಾಂಬಾ ದೇವಸ್ಥಾನದ ಹತ್ತಿರ ತನ್ನ ಮನೆಯ ಹತ್ತಿರದ ರಸ್ತೆಯ ಮೇಲೆ ಒಂದು ಕೈ ಚೀಲದಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ, ಅನಧಿಕೃತವಾಗಿ 1,437.48/- ರೂಪಾಯಿ ಬೆಲೆಬಾಳುವ ‘8 PM' ಎಂಬ ಹೆಸರಿನ 750 ML ಅಳತೆಯ 4 ಸರಾಯಿ ಬಾಟಲಿಗಳನ್ನು ವಶದಲ್ಲಿಟ್ಟುಕೊಂಡು ಸಾಗಾಟ ಮಾಡುತ್ತಿದ್ದವನು, ಪೊಲೀಸರನ್ನು ಕಂಡು ಸರಾಯಿ ಬಾಟಲಿಗಳಿರುವ ಚೀಲವನ್ನು ರಸ್ತೆಯಲ್ಲಿ ಬಿಟ್ಟು ಓಡಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 24-05-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 24-05-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174(ಸಿ)( IV) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ತಿಮ್ಮಪ್ಪಾ ತಂದೆ ಶಿವು ಮುಕ್ರಿ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗಡೆ, ಶಿವಪುರ, ತಾ: ಕುಮಟಾ. ಈತನು ಪಿರ್ಯಾದಿಯವರ ಗಂಡನಿದ್ದು, ಕಳೆದ 22 ವರ್ಷಗಳ ಹಿಂದೆ ಮದುವೆಯಾಗಿರುತ್ತದೆ. ಮೃತನು ವೀಪರೀತ ಸಾರಾಯಿ ಕುಡಿಯುವ ಚಟದವನಿದ್ದು, ಅವನು ಪಿರ್ಯಾದಿಯವರಿಗೆ ತೊಂದರೆ ಕೊಡುತ್ತಿದ್ದರಿಂದ ಪಿರ್ಯಾದಿಯವರು ಕಳೆದ 4 ವರ್ಷಗಳಿಂದ ತಮ್ಮ ಇಬ್ಬರೂ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಉಳಿದುಕೊಂಡಿರುತ್ತಾರೆ. ಕಳೆದ 2 ತಿಂಗಳಿನಿಂದ ಮಕ್ಕಳ ಕೆಲಸದ ಸಲುವಾಗಿ ಕುಮಟಾದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪಿರ್ಯಾದಿಯವರು ಉಳಿದುಕೊಂಡಿದ್ದು, ಮೃತನು ಪಿರ್ಯಾದಿಯವರ ಮನೆಗೆ ಬಂದು ಹೋಗಿ ಮಾಡುತ್ತಿದ್ದು, ದಿನಾಂಕ: 24-05-2021 ರಂದು ಬೆಳಿಗ್ಗೆ 08-00 ಗಂಟೆಗೆ ಮೃತನ ಮೃತದೇಹವು ಹೆಗಡೆಯ ಜಾನಮಕ್ಕಿಯಲ್ಲಿರುವ ನಾಗರಾಜ ತಂದೆ ಸುಕ್ರು ಮುಕ್ರಿ ಇವರ ಜಾಗದಲ್ಲಿ ಸಿಕ್ಕಿದ್ದು, ಮೃತನು ದಿನಾಂಕ: 23-05-2021 ರಂದು 17-00 ಗಂಟೆಯಿಂದ ದಿನಾಂಕ: 24-05-2021 ರಂದು ಬೆಳಿಗ್ಗೆ 08-00 ಗಂಟೆಯ ಅವಧಿಯಲ್ಲಿ ಹೆಗಡೆಯ ಜಾನಮಕ್ಕಿಯಲ್ಲಿ ಇರುವ ನಾಗರಾಜ ತಂದೆ ಸುಕ್ರು ಮುಕ್ರಿ ಇವರ ಜಾಗದ ಹತ್ತಿರದಲ್ಲಿರುವ ಮಾವಿನ ಮರವನ್ನು ಹತ್ತಿ ಮಾವಿನಹಣ್ಣು ಕೊಯ್ಯುತ್ತಿರುವಾಗ ಮರದಿಂದ ಕೆಳಗೆ ಬಿದ್ದೋ ಅಥವಾ ತನಗಿದ್ದ ಯಾವುದೋ ಖಾಯಿಲೆಯಿಂದ ಅಥವಾ ಇನ್ನಾವುದೋ ರೀತಿಯಲ್ಲಿ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮದ ಬಗ್ಗೆ ಪಿರ್ಯಾದಿ ಶ್ರೀಮತಿ ಶಾಂತಿ ತಿಮ್ಮಪ್ಪಾ ಮುಕ್ರಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗಡೆ, ಶಿವಪುರ, ತಾ: ಕುಮಟಾ ರವರು ದಿನಾಂಕ: 24-05-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಂಜುನಾಥ ತಂದೆ ಕೆರಿಯಾ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲ್ಲಿ, ಪೋ: ಉಂಬಳೆಕೊಪ್ಪ, ತಾ: ಶಿರಸಿ. ಈತನು ಕಳೆದ 15 ವರ್ಷಗಳಿಂದ ಅತಿಯಾಗಿ ಸರಾಯಿ ಕುಡಿಯುವ ಚಟಕ್ಕೆ ಬಲಿಯಾಗಿದ್ದು ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತಿದ್ದವನು, ಮನೆಯಲ್ಲಿ ಯಾರಿಗೂ ಹೇಳದೆ ಕೇಳದೇ ಎಲ್ಲೆಲ್ಲಿಯೋ ಹೋಗಿ ಕೆಲಸ ಮಾಡಿಕೊಂಡು ಉಳಿಯುವುದು ಹಾಗೂ 2-3 ತಿಂಗಳಿಗೊಮ್ಮೆ ಬಂದು ಹೋಗುವವನಾಗಿದ್ದು, ಇತ್ತಿತ್ತಲಾಗಿ ಹೆಂಡತಿ ಮಗ ವಾಸವಾಗಿರುವ ಕುಮಟಾದ ಮಾಸ್ತಿಹಳ್ಳ ಊರಿಗೂ ಹೋಗದೆ ಹಾಗೂ ಮನೆಗೂ ಬಾರದೆ ಮಾನಸಿಕವಾಗಿ ನೊಂದಿದ್ದವನು, ಜೀವನದಲ್ಲಿ ಬೇಸತ್ತು ಸುಮಾರು ಎರಡು ತಿಂಗಳ ಹಿಂದೆ ಕೆರೆಕೊಪ್ಪ ಅರಣ್ಯದಲ್ಲಿರುವ ಮರಕ್ಕೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀಮತಿ ಶಾರದಾ ಕೆರಿಯಾ ನಾಯ್ಕ, ಪ್ರಾಯ-69 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಲ್ಲಿ, ಪೋ: ಉಂಬಳೆಕೊಪ್ಪ, ತಾ: ಶಿರಸಿ, ಹಾಲಿ ಸಾ|| ಮಾವಿನಬಳ್ಳಿಕೊಪ್ಪ, ತಾ: ಸೊರಬಾ, ಜಿ: ಶಿವಮೊಗ್ಗ ರವರು ದಿನಾಂಕ: 24-05-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸುರೇಶ ತಂದೆ ಸೀಮನಿ ನಾಡರ, ಪ್ರಾಯ-50 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ದುರ್ಗಾದೇವಿ ಗಲ್ಲಿ, ರಾಮನಗರ, ತಾ: ಜೋಯಿಡಾ. ಈತನು ಖಾಯಿಲೆಯಿಂದ ಬಳಲುತ್ತಿದ್ದವನು, ತನ್ನ ಆರೋಗ್ಯದಲ್ಲಿ ಏರುಪೇರು ಆಗಿ ಕೆಲಸ ಮಾಡಲು ಆಗದಷ್ಟು ನಿಶ್ಯಕ್ತ ಸ್ಥಿತಿಗೆ ಬಂದವನು, ತನಗಿದ್ದ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸಗೊಂಡು ದಿನಾಂಕ: 23-05-2021 ರಂದು ಬೆಳಿಗ್ಗೆ 07-00 ಗಂಟೆಯಿಂದ ಮಧ್ಯಾಹ್ನ 01-00 ಗಂಟೆಯ ಅವಧಿಯಲ್ಲಿ ಅಡಾಳಿಯ ಅರಣ್ಯದಲ್ಲಿಯ ಹಳ್ಳದಲ್ಲಿಯ ಒಂದು ಮರಕ್ಕೆ ಟವೆಲ್ ಅನ್ನು ಹರಿದು ಉದ್ದ ಮಾಡಿಕೊಂಡು ಅದರಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇದರ ಹೊರತು ಅವನ ಸಾವಿನ ಬಗ್ಗೆ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮೈನಾವತಿ ಕೋಂ. ಸುರೇಶ ನಾಡರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನೆಹರು ನಗರ, ತಾ: ಶಿರಸಿ ರವರು ದಿನಾಂಕ: 24-05-2021 ರಂದು 08-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 25-05-2021 01:53 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080