ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 24-11-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 22-11-2021 ರಂದು ಸಾಯಂಕಾಲ 04-00 ಗಂಟೆಯ ಸುಮಾರಿಗೆ ಪಿರ್ಯಾದಿ ಮತ್ತು ಪಿರ್ಯಾದಿಯ ಮಗ ಹಾಗೂ ಸೊಸೆ ಸೇರಿಕೊಂಡು ಗೋವಾದ ಮಡಗಾಂವ್ ದಲ್ಲಿ ಕೆಲಸ ಇದ್ದುದ್ದರಿಂದ ಗೋವಾಕ್ಕೆ ಹೋದಾಗ ದಿನಾಂಕ: 22-11-2021 ರಂದು 16-00 ಗಂಟೆಯಿಂದ 23-11-2021 ರಂದು 22-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರ  ಮನೆಯ ಮುಖ್ಯ ಬಾಗಿಲನ್ನು ಗಟ್ಟಿಯಾದ ವಸ್ತುವಿನಿಂದ ಮೀಟಿ ತೆಗೆದು ಒಳಗೆ ಪ್ರವೇಶಿಸಿ, ಪಿರ್ಯಾದಿಯ ಮನೆಯ ಬೆಡರೂಮಿನಲ್ಲಿದ್ದ ಕಬ್ಬಿಣದ ಕಪಾಟನ್ನು ಗಟ್ಟಿಯಾದ ವಸ್ತುವಿನಿಂದ ಮೀಟಿ ಅದರೊಳಗಡೆಯಿದ್ದ ಬಟ್ಟೆ ಮತ್ತು ಇತರೆ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಪಾಟಿನಲ್ಲಿದ್ದ ಮೆಹಂದಿ ಬಣ್ಣದ ಚಿಕ್ಕ ಬ್ಯಾಗಿನಲ್ಲಿದ್ದ ಸುಮಾರು 18,000/- ರೂಪಾಯಿ ಹಣವನ್ನು ತೆಗೆದು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಅಶ್ವಿನಿ ಕೋಂ. ಅಶೋಕ ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ನಿವೃತ ನೌಕರ, ಸಾ|| ಮುಕಣಾಭಾಗ, ಮುಡಗೇರಿ ಕಾರವಾರ ರವರು ದಿನಾಂಕ: 24-11-2021 ರಂದು 00-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಮೃತ ತಂದೆ ಉಮೇಶ ಬಾಂದೇಕರ, ಸಾ|| ಹಿಂದೂವಾಡಾ, ಮಲ್ಲಾಪುರ, ಕಾರವಾರ (ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-2886 ನೇದರ ಚಾಲಕ). ಈತನು ದಿನಾಂಕ: 24-11-2021 ರಂದು ಖಾರ್ಗಾ, ನೈತಿಸಾವರ ಜಾತ್ರೆಯಿಂದ ಮರಳಿ ಬರುತ್ತಿರುವಾಗ ರಾತ್ರಿ 01-00 ಗಂಟೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-2886 ನೇದರ ಮೇಲೆ ಹಿಂಬದಿಯಲ್ಲಿ ದೀಪಾಲಿ ತಂದೆ ದೀಪಕ ಅಸ್ನೋಟಿಕರ ಇವಳನ್ನು ಕೂರಿಸಿಕೊಂಡು ನೈತಿಸಾವರ ಕಡೆಯಿಂದ ಕಡಿಯೇ ಕಡೆಗೆ ಬರಲು ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಕಡಿಯೇ ಬ್ರಿಡ್ಜ್ ಹತ್ತಿರ ತನ್ನ ಮೋಟಾರ್ ಸೈಕಲನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದರಿಂದ ಹಿಂಬದಿಯಲ್ಲಿ ಕುಳಿತ ದೀಪಾಲಿ ಇವಳಿಗೆ ಕೆಳಗೆ ಕೆಡವಿ ಅಪಘಾತ ಪಡಿಸಿ, ಅವಳ ತಲೆಗೆ ಮತ್ತು ಮೈಕೈಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದೀಪಕ ತಂದೆ ವಿಷ್ಣು ಅಸ್ನೋಟಿಕರ ಪ್ರಾಯ 45 ವರ್ಷ, ವೃತ್ತಿ- ಕೂಲಿ ಕೆಲಸ, ಸಾ|| ಜೋಶಿವಾಡಾ, ಕೇರವಡಿ, ದೇವಳಮಕ್ಕಿ, ಕಾರವಾರ ರವರು ದಿನಾಂಕ: 24-11-2021 ರಂದು 04-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 207/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರದೀಪ ತಂದೆ ದತ್ತು ಪಟಗಾರ, ಪ್ರಾಯ-29 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಹಂದಿಗೋಣ, ತಾ: ಕುಮಟಾ, 2]. ಬಾಲು @ ಬಾಲಕೃಷ್ಣ ತಂದೆ ಜನಾರ್ಧನ ನಾಯ್ಕ, ಸಾ|| ಕೊಪ್ಪಳಕರವಾಡಿ, ತಾ: ಕುಮಟಾ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 24-11-2021 ರಂದು 18-10 ಗಂಟೆಗೆ ಕುಮಟಾ ತಾಲೂಕಿನ ಹಂದಿಗೋಣ ಕನ್ನಡ ಶಾಲೆಯ ಎದುರಿಗೆ ಸಾರ್ವಜನಿಕ ಸ್ಥಳದಲ್ಲ್ಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಅದನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ನಗದು ಹಣ 1,820/- ರೂಪಾಯಿ ಹಾಗೂ ಓ.ಸಿ ಆಟದ ಸಲಕರಣೆಗಳೊಂದಿಗೆ ದಾಳಿಯ ವೇಳೆ ಸೆರೆ ಸಿಕ್ಕಿದ್ದು ಹಾಗೂ ಓ.ಸಿ ಮಟಕಾ ಜುಗಾರಾಟದಿಂದ ಸಂಗ್ರಹವಾದ ಹಣವನ್ನು 2 ನೇಯವನಿಗೆ ನೀಡುತ್ತಿದ್ದುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ (ತನಿಖೆ-1), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 321/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಕೃಷ್ಣ ಶೆಟ್ಟಿ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರಾಮತೀರ್ಥ ಕ್ರಾಸ್, ವಡಗೇರಿ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-31/ಕೆ-2448 ನೇದರ ಸವಾರ). ಈತನು ದಿನಾಂಕ: 13-11-2021 ರಂದು ಬೆಳಗ್ಗೆ 09-15 ಗಂಟೆಯ ಸುಮಾರಿಗೆ ಹೊನ್ನಾವರದ ವಡಗೇರಿ ರಸ್ತೆಯ ವಡಗೇರಿ ರೈಲ್ವೇ ಸುರಂಗ ಮಾರ್ಗದ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಕೆ-2448 ನೇದನ್ನು ವಡಗೇರಿ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು, ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು, ಮೋಟಾರ್ ಸೈಕಲ್ ಸ್ಕಿಡ್ಡಾಗಿ ಮೋಟಾರ್ ಸೈಕಲ್ ಸಮೇತ ರಸ್ತೆಯ ರಸ್ತೆಯ ಬಿದ್ದು, ತನ್ನ ತಲೆಗೆ ಹಾಗೂ ಮುಖಕ್ಕೆ ಗಂಭೀರ ಗಾಯ ಪಡಿಸಿಕೊಂಡವನಿಗೆ ಹೊನ್ನಾವರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಪಡಿಸಿದ್ದು, ನಂತರ ಉಡುಪಿಯ ಆದರ್ಶ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಪಡಿಸಿದ್ದು. ಸದರಿಯವನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವನು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 24-11-2021 ರಂದು 17-30 ಗಂಟೆಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀಕಾಂತ ತಂದೆ ನಾರಾಯಣ ಶೆಟ್ಟಿ, ಪ್ರಾಯ-41 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ರಾಮತೀರ್ಥ ಕ್ರಾಸ್, ವಡಗೇರಿ, ತಾ: ಹೊನ್ನಾವರ ರವರು ದಿನಾಂಕ: 24-11-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 150/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ವಿಜಯರಾಜ, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| 2/65, ಸೈಬರ್ ಕಟ್ಟೆ, ಹೆಡತಾಡಿ ಗ್ರಾಮ, ತಾ: ಬ್ರಹ್ಮಾವರ, ಜಿ: ಉಡುಪಿ (ಟಿಪ್ಪರ್ ಲಾರಿ ನಂ: ಕೆ.ಎ-13/ಬಿ-7241 ನೇದರ ಚಾಲಕ). ಈತನು ದಿನಾಂಕ: 23-11-2021 ರಂದು ರಾತ್ರಿ 21-00 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಕಾಮಾಕ್ಷಿ ಪೆಟ್ರೋಲ್ ಬಂಕ್ ಎದುರಿಗೆ ತನ್ನ ಟಿಪ್ಪರ್ ಲಾರಿ ನಂ: ಕೆ.ಎ-13/ಬಿ-7241 ನೇದನ್ನು ಶಿರಾಲಿ ಬದಿಯಿಂದ ಭಟ್ಕಳ ಬದಿಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಪಿರ್ಯಾದಿಯವರು ಶ್ರೀ ಮೋಹನ ತಂದೆ ಶನಿಯಾರ ನಾಯ್ಕ, ಪ್ರಾಯ-43 ವರ್ಷ, ಸಾ|| ಗುರ್ಕನ ಮನೆ, ತೆಂಗಿನಗುಂಡಿ, ಹೆಬಳೆ, ತಾ: ಭಟ್ಕಳ ಇವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಭಟ್ಕಳ ಬದಿಯಿಂದ ಶಿರಾಲಿ ಬದಿಗೆ ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-4124 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಬಲಗಾಲಿಗೆ, ತುಟಿಗೆ, ಹಣೆಗೆ ಹಾಗೂ ಮೋಟಾರ ಸೈಕಲ್ ಹಿಂಬದಿಯ ಸವಾರರಾದ ಮೋಹನ ಇವರಿಗೆ ಬಲಗಾಲಿನ ಮೂಳೆಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಜಯಂತ ತಂದೆ ಶನಿಯಾರ ನಾಯ್ಕ, ಪ್ರಾಯ-39 ವರ್ಷ, ವೃತ್ತಿ -ಪೇಂಟಿಂಗ್ ಕೆಲಸ, ಸಾ|| ಗಿಡ್ಡಿ ಮನೆ, ತೆಂಗಿನಗುಂಡಿ, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 24-11-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 210/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುಕ್ತಂಸಾಬ್ ತಂದೆ ಹಜರತಸಾbf ದೊಡ್ಮನಿ, ಪ್ರಾಯ-56 ವರ್ಷ, ಸಾ|| ನರಗುಂದ ಬಸ್ ಡಿಪೋ, ತಾ: ಧಾರವಾಡ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-26/ಎಫ್-1094 ನೇದರ ಚಾಲಕ). ಈತನು ದಿನಾಂಕ: 24-11-2021 ರಂದು ಮಧ್ಯಾಹ್ನ 12-15  ಗಂಟೆಯ ಸುಮಾರಿಗೆ ಬಾಬ್ತು ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-26/ಎಫ್-1094 ನೇದನ್ನು ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಮಾರುತಿ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ತನ್ನ ಎದುರಿನಿಂದ ಅಂದರೆ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ನಿಧಾನವಾಗಿ ರಸ್ತೆಯ ಎಡಬದಿಯಿಂದ ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿದ್ದ ಲಾರಿ ನಂ: ಜಿ.ಎ-04/ಟಿ-5249 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ವಾಹನಗಳ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಲಲಿತ ತಂದೆ ಶ್ರೀಹರಿನಾಥ ಚೌಧರಿ, ಪ್ರಾಯ-32 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಬೈರಾ, ಬಾಲಾಪಟ್ಟಿ, ಶಿರಕೊಡ ಸ್ಕೂಲ್ ಸಮೀಪ, ಪೋಸ್ಟ್ ಬೈರಾ ಠಾಣಾ, ಜಯನಗರ, ಮದುಬನ್ನಿ, ಬಿಹಾರ, ಹಾಲಿ ಸಾ|| ಅಮೊನಾ ನವೇಲಿ, ಮೊಹಿತೆಸ್ಪಾಥ, ಕಂಪಣಿ, ಪ್ಲಾಟ್ ನಂ: 01, ಗೋವಾ ರವರು ದಿನಾಂಕ: 24-11-2021 ರಂದು 17-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 93/2021, ಕಲಂ: 420 ಐಪಿಸಿ ಹಾಗೂ ಕಲಂ: 66(ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 24-11-2021 ರಂದು 11-26 ಗಂಟೆಯಿಂದ 11-43 ಗಂಟೆಯ ನಡುವಿನ ಅವಧಿಯಲ್ಲಿ ನಮೂದಿತ ಆರೋಪಿತರು ಮೊಬೈಲ್ ನಂ: 08637565846, 9337239530 ನೇದರಿಂದ ಪಿರ್ಯಾದಿಯ ಮೊಬೈಲ್ ನಂ: 73385XXXXX ನೇದಕ್ಕೆ ಕರೆ ಮಾಡಿ ‘ಎನಿಡೆಸ್ಕ್ ಆ್ಯಪ್’ ಅನ್ನು ಡೌನಲೋಡ್ ಮಾಡಿಕೊಳ್ಳಲು ತಿಳಿಸಿ, ಪಿರ್ಯಾದಿಯ ಅಕೌಂಟಿನಿಂದ ಒಟ್ಟೂ 74,500/-ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ ಬಗ್ಗೆ ಪಿರ್ಯಾದಿ ಕುಮಾರಿ: ತನ್ವಿ ತಂದೆ ವಿಕಾಸ ಕುಲಕರ್ಣಿ, ಪ್ರಾಯ-24 ವರ್ಷ, ವೃತ್ತಿ-ಇಂಜಿನೀಯರ್, ಸಾ|| ವಾಯ್ ಟೈಪ್, ಸಿ/2, 148, ಬಂಗೂರನಗರ, ತಾ: ದಾಂಡೇಲಿ ರವರು ದಿನಾಂಕ: 24-11-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 27(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಅಭೀದ್ ತಂದೆ ಮೊಹಮ್ಮದ್ ರಫೀಕ್, ಪ್ರಾಯ-19 ವರ್ಷ, ವೃತ್ತಿ-ವಾಟರ್ ಸರ್ವೀಸ್ ಕೆಲಸ, ಸಾ|| ಇಂದಿರಾನಗರ, ತಾ: ಶಿರಸಿ, ಹಾಲಿ ಸಾ|| ಕೆ.ಎಚ್.ಬಿ ಕಾಲೋನಿ, ತಾ: ಶಿರಸಿ. ಈತನಿಗೆ ದಿನಾಂಕ: 22-11-2021 ರಂದು 08-20 ಗಂಟೆಗೆ ಶಿರಸಿ ನಗರದ ಕೆ.ಎಚ್.ಬಿ ಕಾಲೋನಿಯ ಹೊಸ ಬಡಾವಣೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ವಶಕ್ಕೆ ಪಡೆದು, ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ಜರುಗಿಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಮುಖ್ಯಾಧಿಕಾರಿಗಳು, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಮ್.ಸಿ ಮಣಿಪಾಲ ಇವರ ಬಳಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಿನಾಂಕ: 24-11-2021 ರಂದು ಸದ್ರಿಯವನ ವೈದ್ಯಕೀಯ ವರದಿ ಪಡೆದುಕೊಂಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವುದಾಗಿ ನಮೂದಿರುತ್ತದೆ. ಆದ್ದರಿಂದ ಆರೋಪಿತನ ವಿರುದ್ಧ ಸರ್ಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 27(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಮೊಹಮ್ಮದ್ ಮೊಸೀನ್ ತಂದೆ ನಜೀರ್ ಅಹ್ಮದ್ ಶೇಖ್, ಪ್ರಾಯ-23 ವರ್ಷ, ವೃತ್ತಿ-ಗ್ಯಾರೇಜ್ ಕೆಲಸ, ಸಾ|| ಕಸ್ತೂರಬಾ ನಗರ, ತಾ: ಶಿರಸಿ. ಈತನಿಗೆ ದಿನಾಂಕ: 22-11-2021 ರಂದು 08-25 ಗಂಟೆಗೆ ಶಿರಸಿ ನಗರದ ಕಸ್ತೂರಬಾ ನಗರದ ಬೃಂದಾವನ ಕಾಲೋನಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ವಶಕ್ಕೆ ಪಡೆದು, ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ಜರುಗಿಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಮುಖ್ಯಾಧಿಕಾರಿಗಳು, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಮ್.ಸಿ ಮಣಿಪಾಲ ಇವರ ಬಳಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಿನಾಂಕ: 24-11-2021 ರಂದು ಸದ್ರಿಯವನ ವೈದ್ಯಕೀಯ ವರದಿ ಪಡೆದುಕೊಂಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವುದಾಗಿ ನಮೂದಿರುತ್ತದೆ. ಆದ್ದರಿಂದ ಆರೋಪಿತನ ವಿರುದ್ಧ ಸರ್ಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 01-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 27(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಮೊಹಮ್ಮದ್ ಯಾಸೀನ್ ತಂದೆ ನಜೀರ್ ಅಹ್ಮದ್ ಶೇಖ್, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ಕಸ್ತೂರಬಾ ನಗರ ತಾ: ಶಿರಸಿ. ಈತನಿಗೆ ದಿನಾಂಕ: 22-11-2021 ರಂದು 08-30 ಗಂಟೆಗೆ ಶಿರಸಿಯ ಕಸ್ತೂರಬಾ ನಗರದ ಬೇಕರಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ವಶಕ್ಕೆ ಪಡೆದು, ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ಜರುಗಿಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಮುಖ್ಯಾಧಿಕಾರಿಗಳು, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಮ್.ಸಿ ಮಣಿಪಾಲ ಇವರ ಬಳಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಿನಾಂಕ: 24-11-2021 ರಂದು ಸದ್ರಿಯವನ ವೈದ್ಯಕೀಯ ವರದಿ ಪಡೆದುಕೊಂಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವುದಾಗಿ ನಮೂದಿರುತ್ತದೆ. ಆದ್ದರಿಂದ ಆರೋಪಿತನ ವಿರುದ್ಧ ಸರ್ಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 87/2021, ಕಲಂ: 27(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಪೈಜಲ್ ಖಾನ್ ತಂದೆ ಅಬ್ದುಲ್ ರವೂಪ್ ಖಾನ್ ಪ್ರಾಯ-26 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಕಸ್ತೂರಾಬಾ ನಗರ, ತಾ: ಶಿರಸಿ. ಈತನಿಗೆ ದಿನಾಂಕ: 22-11-2021 ರಂದು 08-35 ಗಂಟೆಗೆ ಶಿರಸಿಯ ಕಸ್ತೂರಾಬಾ ನಗರದ ಟೀಚರ್ಸ್ ಕಾಲೋನಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ವಶಕ್ಕೆ ಪಡೆದು, ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ಜರುಗಿಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಮುಖ್ಯಾಧಿಕಾರಿಗಳು, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಮ್.ಸಿ ಮಣಿಪಾಲ ಇವರ ಬಳಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಿನಾಂಕ: 24-11-2021 ರಂದು ಸದ್ರಿಯವನ ವೈದ್ಯಕೀಯ ವರದಿ ಪಡೆದುಕೊಂಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವುದಾಗಿ ನಮೂದಿರುತ್ತದೆ. ಆದ್ದರಿಂದ ಆರೋಪಿತನ ವಿರುದ್ಧ ಸರ್ಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 02-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 88/2021, ಕಲಂ: 27(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಸನ್ನ ತಂದೆ ಗಣಪತಿ ಕುರುಬರ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಗಣೇಶನಗರ, 1 ನೇ ಕ್ರಾಸ್, ತಾ: ಶಿರಸಿ. ಈತನಿಗೆ ದಿನಾಂಕ: 22-11-2021 ರಂದು 08-45 ಗಂಟೆಗೆ ಶಿರಸಿ ನಗರದ ಶಿರಸಿ-ಹುಬ್ಬಳ್ಳಿ ರಸ್ತೆಯ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ವಶಕ್ಕೆ ಪಡೆದು, ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ಜರುಗಿಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಮುಖ್ಯಾಧಿಕಾರಿಗಳು, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಮ್.ಸಿ ಮಣಿಪಾಲ ಇವರ ಬಳಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಿನಾಂಕ: 24-11-2021 ರಂದು ಸದ್ರಿಯವನ ವೈದ್ಯಕೀಯ ವರದಿ ಪಡೆದುಕೊಂಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವುದಾಗಿ ನಮೂದಿರುತ್ತದೆ. ಆದ್ದರಿಂದ ಆರೋಪಿತನ ವಿರುದ್ಧ ಸರ್ಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 03-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 89/2021, ಕಲಂ: 27(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ರೋಷನ ತಂದೆ ಪ್ರದೀಪ ಪಾಲೇಕರ, ಪ್ರಾಯ-19 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಅಯ್ಯಪ್ಪನಗರ, ತಾ: ಶಿರಸಿ. ಈತನಿಗೆ ದಿನಾಂಕ: 22-11-2021 ರಂದು 08-20 ಗಂಟೆಗೆ ಶಿರಸಿಯ ಅಯ್ಯಪ್ಪ ನಗರದ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ವಶಕ್ಕೆ ಪಡೆದು, ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ಜರುಗಿಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಮುಖ್ಯಾಧಿಕಾರಿಗಳು, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಮ್.ಸಿ ಮಣಿಪಾಲ ಇವರ ಬಳಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಿನಾಂಕ: 24-11-2021 ರಂದು ಸದ್ರಿಯವನ ವೈದ್ಯಕೀಯ ವರದಿ ಪಡೆದುಕೊಂಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವುದಾಗಿ ನಮೂದಿರುತ್ತದೆ. ಆದ್ದರಿಂದ ಆರೋಪಿತನ ವಿರುದ್ಧ ಸರ್ಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 04-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 90/2021, ಕಲಂ: 27(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ದೀಪಕ ತಂದೆ ಪರಮೇಶ್ವರ ಕೇರಳಕರ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಯ್ಯಪ್ಪನಗರ, ತಾ: ಶಿರಸಿ. ಈತನಿಗೆ ದಿನಾಂಕ: 22-11-2021 ರಂದು 09-00 ಗಂಟೆಗೆ ಶಿರಸಿಯ ಅಯ್ಯಪ್ಪನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ವಶಕ್ಕೆ ಪಡೆದು, ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ಜರುಗಿಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಮುಖ್ಯಾಧಿಕಾರಿಗಳು, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಮ್.ಸಿ ಮಣಿಪಾಲ ಇವರ ಬಳಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಿನಾಂಕ: 24-11-2021 ರಂದು ಸದ್ರಿಯವನ ವೈದ್ಯಕೀಯ ವರದಿ ಪಡೆದುಕೊಂಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವುದಾಗಿ ನಮೂದಿರುತ್ತದೆ. ಆದ್ದರಿಂದ ಆರೋಪಿತನ ವಿರುದ್ಧ ಸರ್ಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 05-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: 27(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಥ್ವಿ ತಂದೆ ಮನೋಜ ನಾರ್ವೇಕರ, ಪ್ರಾಯ-26 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ವಿವೇಕಾನಂದ ನಗರ, ತಾ: ಶಿರಸಿ. ಈತನಿಗೆ ದಿನಾಂಕ: 22-11-2021 ರಂದು 09-15 ಗಂಟೆಗೆ ಶಿರಸಿ ನಗರದ ಕೋಟೆಕೆರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ವಶಕ್ಕೆ ಪಡೆದು, ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ಜರುಗಿಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಮುಖ್ಯಾಧಿಕಾರಿಗಳು, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಮ್.ಸಿ ಮಣಿಪಾಲ ಇವರ ಬಳಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಿನಾಂಕ: 24-11-2021 ರಂದು ಸದ್ರಿಯವನ ವೈದ್ಯಕೀಯ ವರದಿ ಪಡೆದುಕೊಂಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವುದಾಗಿ ನಮೂದಿರುತ್ತದೆ. ಆದ್ದರಿಂದ ಆರೋಪಿತನ ವಿರುದ್ಧ ಸರ್ಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 05-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92/2021, ಕಲಂ: 27(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಸಮೀರ್ ಅಹ್ಮದ್ ತಂದೆ ಅಬ್ದುಲ್ ಘನಿ, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ|| ಕೋಟೆಕೆರೆ ಹತ್ತಿರ, ತಾ: ಶಿರಸಿ. ಈತನಿಗೆ ದಿನಾಂಕ: 22-11-2021 ರಂದು 09-25 ಗಂಟೆಗೆ ಶಿರಸಿ ನಗರದ ಕರಿಗುಂಡಿ ರಸ್ತೆಯ ಶ್ರೀ ಮಾಸ್ತೇಮ್ಮಾ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ವಶಕ್ಕೆ ಪಡೆದು, ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ಜರುಗಿಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಮುಖ್ಯಾಧಿಕಾರಿಗಳು, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಮ್.ಸಿ ಮಣಿಪಾಲ ಇವರ ಬಳಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಿನಾಂಕ: 24-11-2021 ರಂದು ಸದ್ರಿಯವನ ವೈದ್ಯಕೀಯ ವರದಿ ಪಡೆದುಕೊಂಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವುದಾಗಿ ನಮೂದಿರುತ್ತದೆ. ಆದ್ದರಿಂದ ಆರೋಪಿತನ ವಿರುದ್ಧ ಸರ್ಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 06-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 93/2021, ಕಲಂ: 27(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಶಿವಮೂರ್ತಿ ತಂದೆ ಈಶ್ವರ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ನೆಹರೂನಗರ, ತಾ: ಶಿರಸಿ. ಈತನಿಗೆ ದಿನಾಂಕ: 22-11-2021 ರಂದು 09-30 ಗಂಟೆಗೆ ಶಿರಸಿ ನಗರದ ನೆಹರೂನಗರ ನೀರಿನ ಟ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ವಶಕ್ಕೆ ಪಡೆದು, ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ಜರುಗಿಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಮುಖ್ಯಾಧಿಕಾರಿಗಳು, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಮ್.ಸಿ ಮಣಿಪಾಲ ಇವರ ಬಳಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಿನಾಂಕ: 24-11-2021 ರಂದು ಸದ್ರಿಯವನ ವೈದ್ಯಕೀಯ ವರದಿ ಪಡೆದುಕೊಂಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವುದಾಗಿ ನಮೂದಿರುತ್ತದೆ. ಆದ್ದರಿಂದ ಆರೋಪಿತನ ವಿರುದ್ಧ ಸರ್ಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 07-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 94/2021, ಕಲಂ: 27(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಮುಸ್ತಾಕ್ ತಂದೆ ಅಬ್ದುಲ್ ರೆಹಮಾನ್ ಹೊಸಪೇಟೆ, ಪ್ರಾಯ-24 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಇಂದಿರಾನಗರ, ತಾ: ಶಿರಸಿ. ಈತನಿಗೆ ದಿನಾಂಕ: 22-11-2021 ರಂದು 09-40 ಗಂಟೆಗೆ ಶಿರಸಿ ನಗರದ ಎ.ಪಿ.ಎಮ್.ಸಿ ಯಾರ್ಡ್ ನಲ್ಲಿರುವ ಅಬಕಾರಿ ಇಲಾಖೆಯ ಗೋಡೌನ್ ಹಿಂಭಾಗದ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ವಶಕ್ಕೆ ಪಡೆದು, ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ಜರುಗಿಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಮುಖ್ಯಾಧಿಕಾರಿಗಳು, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಮ್.ಸಿ ಮಣಿಪಾಲ ಇವರ ಬಳಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಿನಾಂಕ: 24-11-2021 ರಂದು ಸದ್ರಿಯವನ ವೈದ್ಯಕೀಯ ವರದಿ ಪಡೆದುಕೊಂಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವುದಾಗಿ ನಮೂದಿರುತ್ತದೆ. ಆದ್ದರಿಂದ ಆರೋಪಿತನ ವಿರುದ್ಧ ಸರ್ಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 08-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 95/2021, ಕಲಂ: 27(b) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಮನ್ಸೂರ್ @ ಕಲಂದರ್ ತಂದೆ ಅಬ್ದುಲ್ ಕರಿಂ ಹೊನ್ನಾವರ, ಪ್ರಾಯ-24 ವರ್ಷ, ವೃತ್ತಿ-ವ್ಯಾಪಾರ, ಸಾ|| ಇಂದಿರಾನಗರ, ತಾ: ಶಿರಸಿ. ಈತನಿಗೆ ದಿನಾಂಕ: 22-11-2021 ರಂದು 09-45 ಗಂಟೆಗೆ ಶಿರಸಿ ನಗರದ ಇಂದಿರಾನಗರ 1 ನೇ ಅಡ್ಡ ರಸ್ತೆಯ ಕ್ರಾಸ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ವಶಕ್ಕೆ ಪಡೆದು, ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ಜರುಗಿಸಿ ವರದಿ ನೀಡುವಂತೆ ಕೋರಿಕೆ ಪತ್ರದೊಂದಿಗೆ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಮುಖ್ಯಾಧಿಕಾರಿಗಳು, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಮ್.ಸಿ ಮಣಿಪಾಲ ಇವರ ಬಳಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ದಿನಾಂಕ: 24-11-2021 ರಂದು ಸದ್ರಿಯವನ ವೈದ್ಯಕೀಯ ವರದಿ ಪಡೆದುಕೊಂಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವುದಾಗಿ ನಮೂದಿರುತ್ತದೆ. ಆದ್ದರಿಂದ ಆರೋಪಿತನ ವಿರುದ್ಧ ಸರ್ಕಾರದ ಪರವಾಗಿ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 24-11-2021 ರಂದು 08-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 24-11-2021

at 00:00 hrs to 24:00 hrs

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 21/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸುಕ್ರಯ್ಯ ತಂದೆ ನಾರಾಯಣ ಬಾಗಲ, ಪ್ರಾಯ-75 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಜೋಗಿಮನೆ, ಮುಂಡಳ್ಳಿ, ತಾ: ಭಟ್ಕಳ. ಈತನು ದಿನಾಂಕ: 19-11-2021 ರಂದು ಬೆಳಗಿನ ಜಾವ 05-00 ಗಂಟೆಯಿಂದ 05-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಮಲಗುವ ಕೋಣೆಯಲ್ಲಿ ಯಾವುದೋ ವಿಷ ಸೇವನೆ ಮಾಡಿ ಅಸ್ವಸ್ಥಗೊಂಡವನಿಗೆ ಉಪಚಾರದ ಕುರಿತು ಭಟ್ಕಳದ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕೆ.ಎಮ್.ಸಿ ಮಣಿಪಾಲ ಆಸ್ಪತ್ರೆಗೆ ತಂದು ಉಪಚಾರ ಕೊಡಿಸಿ, ಅಲ್ಲಿಂದ ದಿನಾಂಕ: 21-11-2021 ರಂದು ಉಡುಪಿಯ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲಿಸಿದ್ದು, ಅಲ್ಲಿ ಉಪಚಾರದಲ್ಲಿದ್ದವನು ಉಪಚಾರ ಫಲಿಸದೇ ದಿನಾಂಕ: 24-11-2021 ರಂದು ಬೆಳಿಗ್ಗೆ 11-20 ಗಂಟೆಗೆ ಮೃತಪಟ್ಟಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಉದಯ ತಂದೆ ಸುಕ್ರಯ್ಯ ಬಾಗಲ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜೋಗಿಮನೆ, ಮುಂಡಳ್ಳಿ, ತಾ: ಭಟ್ಕಳ ರವರು ದಿನಾಂಕ: 24-11-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 31/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಅಂದಾಜು 45 ರಿಂದ 50 ವರ್ಷ ಪ್ರಾಯದ ಅಪರಿಚಿತ ಹೆಂಗಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಇವಳು ಕಳೆದ 10 ದಿನಗಳ ಹಿಂದಿನಿಂದ ದಿನಾಂಕ: 24-11-2021 ರಂದು ಮಧ್ಯಾಹ್ನ 03-00 ಗಂಟೆಯ ನಡುವಿನ ಅವಧಿಯಲ್ಲಿ ಸುರಿದ ಭಾರೀ ಮಳೆಯ ಕಾರಣದಿಂದ ತಟ್ಟಿಹಳ್ಳಕ್ಕೆ ಎಲ್ಲಿಂದಲೋ ಅಥವಾ ಯಾವುದೋ ಕಾರಣದಿಂದಲೋ ನೀರಿನಲ್ಲಿ ಕೊಚ್ಚಿಕೊಂಡು ಬಂದು ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದ ಹತ್ತಿರ ಹಾಯ್ದು ಹೋದ ತಟ್ಟಿಹಳ್ಳದ ತಿರುವಿನ ಮಡದ ಹತ್ತಿರ ಒಂದು ಮರಕ್ಕೆ ಸಿಕ್ಕಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಶ್ವನಾಥ ತಂದೆ ದೇವರಾಜ ಕೊರವರ, ಪ್ರಾಯ-30 ವರ್ಷ, ವೃತ್ತಿ-ಬುಟ್ಟಿ ಹೆಣೆಯವುದು, ಸಾ|| ಕಾಳಗಿನಕೊಪ್ಪ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 24-11-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 27-11-2021 04:29 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080