ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 24-10-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 3, 7 ಅಗತ್ಯ ವಸ್ತುಗಳ ಅಧಿನಿಯಮ-1955 ನೇದ್ದರ ವಿವರ...... ನಮೂದಿತ ಆರೋಪಿತ ದಿನೇಶ ತಂದೆ ನಾರಾಯಣ ನಾಯ್ಕ, ಸಾ|| ಅಂಕೋಲಾ. ಈತನು ಸಾರ್ವಜನಿಕ ವಿತರಣಾ ಪದ್ದತಿ ಅಡಿ ಚೀಟಿದಾರರಿಗೆ ವಿತರಿಸಬೇಕಾದ ಅ||ಕಿ|| 21,000/- ರೂಪಾಯಿ ಬೆಲೆಬಾಳುವ ಅಜಮಾಸು 10 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಬಿಣಗಾದಲ್ಲಿ ಅನಧೀಕೃತವಾಗಿ ಸಂಗ್ರಹಿಸಿಕೊಂಡು ಬಾಬ್ತು ಟಾಟಾ ಏಸ್ ವಾಹನ ನಂ: ಕೆ.ಎ-47/3310 ನೇದರಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಬಿಣಗಾದಿಂದ ಅಂಕೋಲಾ ಕಡೆಗೆ ಸಾಗಾಟ ಮಾಡುತ್ತಿದ್ದಾಗ ದಿನಾಂಕ: 24-10-2021 ರಂದು 12-00 ಗಂಟೆಯ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಬಿಣಗಾದ ಬಿರ್ಲಾ ಕೆಮಿಕಲ್ಸ್ ಕಂಪನಿಯ ಎದುರುಗಡೆ ಸಿಕ್ಕಿದ್ದು, ವಿಚಾರಣೆಯ ವೇಳೆ ವಾಹನವನ್ನು ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ದೀಪಕ ಗಣಪತಿ ನಾಯ್ಕ, ಪ್ರಾಯ-44 ವರ್ಷ, ವೃತ್ತಿ-ಆಹಾರ ಶಿರಸ್ತೇದಾರರು, ಸಾ|| ತಹಶೀಲ್ದಾರ್ ಕಛೇರಿ, ಕಾರವಾರ ರವರು ದಿನಾಂಕ: 24-10-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 156/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಕಂಟೇನರ್ ಲಾರಿ ನಂ: ಆರ್.ಜೆ-14/ಜಿ.ಜೆ-7879 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 24-10-2021 ರಂದು ರಾತ್ರಿ 03-00 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ರಾಮನಗುಳಿಯಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಮೇಲೆ ತನ್ನ ಕಂಟೇನರ್ ಲಾರಿ ನಂ: ಆರ್.ಜೆ-14/ಜಿ.ಜೆ-7879 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜೀತನದಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದವನು, ತನ್ನ ಮುಂದಿನಿಂದ ಹೋಗುತ್ತಿದ್ದ ಯಾವುದೋ ಒಂದು ಲಾರಿಯನ್ನು ಓವರಟೇಕ್ ಮಾಡಿಕೊಂಡು ರಸ್ತೆಯ ತನ್ನ ಸೈಡ್ ಬಿಟ್ಟು ಬಲಕ್ಕೆ ಬಂದವನು, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಪಿರ್ಯಾದಿಯು ರಸ್ತೆಯ ತನ್ನ ಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿ ನಂ: ಕೆ.ಎ-20/ಸಿ-1198 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಬಲಗೈಗೆ, ಎರಡು ಕಾಲುಗಳಿಗೆ ಮತ್ತು ಬಲಗಣ್ಣಿನ ಹತ್ತಿರ ಸಾದಾ ಸ್ವರೂಪದ ಗಾಯನೋವು ಪಡಿಸಿ, ಆರೋಪಿ ಕಂಟೇನರ್ ಲಾರಿ ಚಾಲಕನು ತನ್ನ ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಶರಣಪ್ಪ ಹಟ್ಟಿ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ದುರ್ಗಾದೇವಿ ದೇವಸ್ಥಾನದ ಹತ್ತಿರ, ಶಾದಲಗೇರಾ ಗ್ರಾಮ, ಪೋ: ತುಗ್ಗಲದೋಣಿ, ತಾ: ಕುಷ್ಟಗಿ, ಜಿ: ಕೊಪ್ಪಳ ರವರು ದಿನಾಂಕ: 24-10-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 127/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀನಿವಾಸ ತಂದೆ ಸಂಗಪ್ಪ ಮಹೀಶವಾಡಗಿ, ಸಾ|| ಹಾರುಗೇರಿ, ತಾ: ರಾಯಭಾಗ, ಜಿ: ಬೆಳಗಾವಿ (ಕಾರ್ ನಂ: ಎಮ್.ಎಚ್-12/ಎಚ್‍ಎಫ್-9653 ನೇದರ ಚಾಲಕ). ಈತನು ದಿನಾಂಕ: 24-10-2021 ರಂದು 17-00 ಗಂಟೆಗೆ ಕಾರ್ ನಂ: ಎಮ್.ಎಚ್-12/ಎಚ್‍ಎಫ್-9653 ನೇದನ್ನು ಶಿರೂರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಗೊರಟೆ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯ ಮೇಲೆ ತನ್ನ ಮುಂದೆ ಅಂದರೆ ಶಿರೂರ ಕಡೆಯಿಂದ ಭಟ್ಕಳ ಕಡೆಗೆ ಗಾಯಾಳು ರೋಗೆ ಅಬ್ದುಲ್ ಲತೀಫ್ ತಂದೆ ರೋಗೆ ಅಬ್ದುಲ್ ಕಾದೀರ್, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಳಿಹಿತ್ಲು, ಶಿರೂರ, ತಾ: ಬೈಂದೂರ, ಜಿ: ಉಡುಪಿ ಈತನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಬಿ-3414 ನೇದರ ಮೇಲೆ ಹೋಗುತ್ತಿದ್ದವನಿಗೆ ಹಿಂದುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದರ ಪರಿಣಾಮ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ, ಅವನ ಬಲಗಾಲಿಗೆ ಭಾರೀ ಗಾಯ ಮತ್ತು ತಲೆಗೆ ಹಾಗೂ ಮೂಗಿಗೆ ಗಾಯವಾಗಿ ರಕ್ತ ಬಂದ ಬಗ್ಗೆ ಪಿರ್ಯಾದಿ ಶ್ರೀ ಕಾಫ್ಸಿ ನೂರಮೊಹಮ್ಮದ್ ತಂದೆ ಕಾಫ್ಸಿ ಅಬ್ದುಲ್ ರಹೀಮ್, ಪ್ರಾಯ-58 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ನೂರಮೊಹಲ್ಲಾ, ಹಡವಿನಕೋಣೆ, ಶಿರೂರ, ತಾ: ಬೈಂದೂರ, ಜಿ: ಉಡುಪಿ ರವರು ದಿನಾಂಕ: 24-10-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಕುಮಾರಿ: ಹಸೀನಾ ತಂದೆ ಮಹಮ್ಮದಅಲಿ ಶೇಖ್, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಪ್ರಧಾನಿ, ತಾ: ಜೋಯಿಡಾ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 21-10-2021 ರಂದು ರಾತ್ರಿ 10-00 ಗಂಟೆಗೆ ಊಟ ಮಾಡಿ ಮನೆಯ ಬೆಡ್ ರೂಮಿನಲ್ಲಿ ಮಲಗಿದ್ದವಳು, ದಿನಾಂಕ: 22-10-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮಾಜುಬಿ ಮಹಮ್ಮದಅಲಿ ಶೇಖ್, ಪ್ರಾಯ-42 ವರ್ಷ, ವೃತ್ತಿ-ಗೃಹಿಣಿ, ಸಾ|| ಪ್ರಧಾನಿ, ತಾ: ಜೋಯಿಡಾ ರವರು ದಿನಾಂಕ: 24-10-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ 1]. ಶಿವಾಜಿ ತಂದೆ ನಾರಾಯಣ ಮೊಗ್ರಿ, 2]. ಪ್ರಕಾಶ ತಂದೆ ಬೂದಪ್ಪ ಮೊಗ್ರಿ, 3]. ಗಣಪತಿ ತಂದೆ ಪ್ರಕಾಶ ಮೊಗ್ರಿ, 4]. ಅರ್ಜುನ ತಂದೆ ನಾರಾಯಣ ಮೊಗ್ರಿ, ಸಾ|| (ಎಲ್ಲರೂ) ಜಾವಳ್ಳಿ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ಹಾಗೂ ಪಿರ್ಯಾದಿ ಮತ್ತು ಪಿರ್ಯಾದಿಯ ಅಣ್ಣಂದಿರು ಸಂಬಂಧಿಕರಿದ್ದು, ದಿನಾಂಕ: 23-10-2021 ರಂದು ರಾತ್ರಿ ಫಾರೆಸ್ಟ್ ಇಲಾಖೆಯವರ ಕೆಲಸಕ್ಕೆ ಮನೆಯಿಂದ ಒಬ್ಬರು ಹೋಗಬೇಕು ಅಂತಾ ಜಾವಳ್ಳಿ ಗ್ರಾಮದ ಹನುಮಂತ ದೇವಸ್ಥಾನದಲ್ಲಿ ಊರ ಹಿರಿಯರೊಂದಿಗೆ ಮೀಟಿಂಗಿಗೆ ಸೇರಿದ್ದವರು, ರಾತ್ರಿ 10-30 ಗಂಟೆಯ ಸಮಯಕ್ಕೆ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವನು ಜಮೀನಿಗೆ ಸಂಬಂಧಿಸಿ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಇಟ್ಟಂಗಿಯಿಂದ ಮುಖದ ಭಾಗಕ್ಕೆ ಹೊಡೆದಿರುವುದಲ್ಲದೇ, ಆರೋಪಿ 2 ಮತ್ತು 3 ನೇಯವರು ಸಹ ಪಿರ್ಯಾದಿಗೆ ಕೈಯಿಂದ ಮುಖಕ್ಕೆ ಹಾಗೂ ಮೈಮೇಲೆ ಅಲ್ಲಲ್ಲಿ ಹೊಡೆದು ಒಳನೋವು ಪಡಿಸಿದ್ದಲ್ಲದೇ, ಈ ಗಲಾಟೆಯನ್ನು ಬಿಡಿಸಲು ಬಂದ ಪಿರ್ಯಾದಿಯ ಅಣ್ಣಂದಿರಿಗೂ ಸಹ ಆರೋಪಿ 1 ಮತ್ತು 4 ನೇಯವರರು ಸೇರಿ ಕೈಯಿಂದ ಮೈಮೇಲೆ ಹೊಡೆದು ಒಳನೋವು ಪಡಿಸಿದ್ದಲ್ಲದೇ, ಆರೋಪಿತರೆಲ್ಲರೂ ಸೇರಿ ಪಿರ್ಯಾದಿ ಮತ್ತು ಪಿರ್ಯಾದಿಯ ಅಣ್ಣಂದಿರಿಗೆ ‘ಈ ದಿವಸ ಉಳಿದಕೊಂಡಿದ್ದಿರಿ. ಇನ್ನೊಂದು ದಿವಸ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿ ಆರೋಪಿ 1 ನೇಯವನು ತನ್ನ ಕೈಯಲ್ಲಿದ್ದ ಇಟ್ಟಂಗಿಯನ್ನು ಸ್ಥಳದಲ್ಲಿಯೇ ಬಿಸಾಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಬಳಿರಾಮ ತಂದೆ ಬೂದಪ್ಪ ಮೊಗ್ರಿ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಜಾವಳ್ಳಿ, ತಾ: ಹಳಿಯಾಳ ರವರು ದಿನಾಂಕ: 24-10-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: 323, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ 1]. ಬಳಿರಾಮ ತಂದೆ ಬೂದಪ್ಪ ಮೊಗ್ರಿ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, 2]. ಮಂಜುನಾಥ ತಂದೆ ಬೂದಪ್ಪ ಮೊಗ್ರಿ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, 3]. ಸುರೇಶ ತಂದೆ ಬೂದಪ್ಪ ಮೊಗ್ರಿ, ಪ್ರಾಯ-38 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| (ಎಲ್ಲರೂ) ಜಾವಳ್ಳಿ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ಹಾಗೂ ಪಿರ್ಯಾದಿ ಮತ್ತು ಪ್ರಕಾಶ ಮೊಗ್ರಿ, ಗಣಪತಿ ಮೊಗ್ರಿ, ಅರ್ಜುನ ಮೊಗ್ರಿ ಯವರು ಸಂಬಂಧಿಕರಿದ್ದು, ದಿನಾಂಕ: 23-10-2021 ರಂದು ರಾತ್ರಿ ಫಾರೆಸ್ಟ್ ಇಲಾಖೆಯವರ ಕೆಲಸಕ್ಕೆ ಮನೆಯಿಂದ ಒಬ್ಬರು ಹೋಗಬೇಕು ಅಂತಾ ಜಾವಳ್ಳಿ ಗ್ರಾಮದ ಹನುಮಂತ ದೇವಸ್ಥಾನದಲ್ಲಿ ಊರ ಹಿರಿಯರೊಂದಿಗೆ ಮೀಟಿಂಗಿಗೆ ಸೇರಿದ್ದವರು, ರಾತ್ರಿ 10-30 ಗಂಟೆಯ ಸಮಯಕ್ಕೆ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವನು ಜಮೀನಿನ ಹಾಗೂ ಗಣಪತಿಯನ್ನು ದತ್ತು ಪಡೆದ ವಿಷಯಕ್ಕೆ ಸಂಬಂಧಿಸಿ ಪಿರ್ಯಾದಿಗೆ ಏಕಾಏಕಿ ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಮೈಮೇಲೆ ಹೊಡೆ ಬಡೆ ಮಾಡಿದ್ದಲ್ಲದೇ, ಈ ಗಲಾಟೆಯನ್ನು ಬಿಡಿಸಲು ಬಂದ ಪ್ರಕಾಶ ಮೊಗ್ರಿ, ಗಣಪತಿ ಮೊಗ್ರಿ, ಮತ್ತು ಅರ್ಜುನ ಮೊಗ್ರಿ ಇವರಿಗೆ ಆರೋಪಿ 1 ರಿಂದ 3 ನೇಯವರು ಸೇರಿ ಕೈಯಿಂದ ಮೈಮೇಲೆ ಹೊಡೆಬಡೆ ಮಾಡಿದ್ದಲ್ಲದೇ, ಆರೋಪಿತರೆಲ್ಲರೂ ಸೇರಿ ಪಿರ್ಯಾದಿ ಮತ್ತು ಇನ್ನೂಳಿದ 03 ಜನರಿಗೆ ಉದ್ದೇಶಿಸಿ ‘ಈ ದಿವಸ ಉಳಿದಕೊಂಡಿದ್ದಿರಿ. ಇನ್ನೊಂದು ದಿವಸ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಶಿವಾಜಿ ತಂದೆ ನಾರಾಯಣ ಮೊಗ್ರಿ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಜಾವಳ್ಳಿ, ತಾ: ಹಳಿಯಾಳ ರವರು ದಿನಾಂಕ: 24-10-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಾವೂ ತಂದೆ ಸೋನು ಕೊಕ್ಕರೆ, ಪ್ರಾಯ-23 ವರ್ಷ, ಸಾ|| ಆಲೂರ ಗ್ರಾಮ, ಕೆರವಾಡ, ತಾ: ದಾಂಡೇಲಿ (ಟ್ರಕ್ ವಾಹನ ನಂ: ಕೆ.ಎ-47/3491 ನೇದರ ಚಾಲಕ). ಈತನು ದಿನಾಂಕ: 24-10-2021 ರಂದು ರಾತ್ರಿ 01-30 ಗಂಟೆಯ ಸುಮಾರಿಗೆ ಶಿರಸಿ ಶಹರದ ಶಿವಾಜಿ ಚೌಕನಲ್ಲಿ ಹಾಯ್ದ ತಡಸ-ಕುಮಟಾ ರಾಜ್ಯ ಹೆದ್ದಾರಿ ಸಂಖ್ಯೆ-69 ರ ರಸ್ತೆಯಲ್ಲಿ ತಾನು ಚಲಾಯಿಸುತ್ತಿದ್ದ ಟ್ರಕ್ ವಾಹನ ನಂ: ಕೆ.ಎ-47/3491 ನೇದನ್ನು ಶಿರಸಿ ಶಹರದ ಬಿಡ್ಕಿ ಸರ್ಕಲ್ ಕಡೆಯಿಂದ ಶಿವಾಜಿ ಚೌಕ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ತನ್ನ ವಾಹನವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಶಿವಾಜಿ ಚೌಕನಲ್ಲಿರುವ ನಗರಸಭೆ ಶಿರಸಿ ರವರ ಸಾರ್ವಜನಿಕ ಬೀದಿ ದೀಪದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೀದಿ ದೀಪದ ಕಂಬ ಜಖಂಗೊಂಡ ಬಗ್ಗೆ ಪಿರ್ಯಾದಿ ಶ್ರೀ ಹರೀಶ ತಂದೆ ರಾಮೇಗೌಡಾ, ಪ್ರಾಯ-38 ವರ್ಷ, ವೃತ್ತಿ-ಇಂಜಿನಿಯರ್, ನಗರಸಭೆ ಶಿರಸಿ, ಸಾ|| ಕೆ.ಎಚ್.ಬಿ ಕಾಲೋನಿ, ತಾ: ಶಿರಸಿ ರವರು ದಿನಾಂಕ: 24-10-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 24-10-2021

at 00:00 hrs to 24:00 hrs

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 29/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಶಾಂತವ್ವಾ ಕೋಂ. ವೆಂಕಟೇಶ ಸೊಲ್ಲಾಪುರ, ಪ್ರಾಯ-67 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಭಜಂತ್ರಿ ಗಲ್ಲಿ, ತಾ: ಹಳಿಯಾಳ. ಪಿರ್ಯಾದಿಯವರ ತಾಯಿಯಾದ ಇವರು ಕಳೆದ 4-5 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿದ್ದವರು, ಧಾರವಾಡದ ಪಾಂಡುರಂಗಿ ಆಸ್ಪತ್ರೆಯಲ್ಲಿ ಮಾನಸಿಕತೆಗೆ ಉಪಚಾರ ಕೊಡಿಸಿದ್ದರೂ ಕೂಡಾ ಮಾನಸಿಕತೆಯಿಂದ ಬಳಲುತ್ತಿದ್ದವರು, ದಿನಾಂಕ: 24-10-2021 ರಂದು 12-00 ಗಂಟೆಯಿಂದ 12-30 ಗಂಟೆಯ ನಡುವಿನ ಅವಧಿಯಲ್ಲಿ ಮೃತ ಶಾಂತವ್ವಾ ಇವರು ತಾವು ವಾಸವಾಗಿರುವ ಹಳಿಯಾಳ ಶಹರದ ಭಜಂತ್ರಿ ಗಲ್ಲಿಯಲ್ಲಿರುವ ತಮ್ಮ ಮನೆಯಲ್ಲಿ ಕಟ್ಟಿಗೆಯ ತೊಲೆಗೆ ಸೀರೆಯಿಂದ ಕಟ್ಟಿ ತನ್ನ ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇದರ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಕುಮಾರಿ: ಪ್ರೇಮಾ ತಂದೆ ವೆಂಕಟೇಶ ಸೊಲ್ಲಾಪುರ, ಪ್ರಾಯ-40 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಭಜಂತ್ರಿ ಗಲ್ಲಿ, ತಾ: ಹಳಿಯಾಳ ರವರು ದಿನಾಂಕ: 24-10-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 25-10-2021 06:37 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080