ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 24-09-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 40/2021, ಕಲಂ: 279, 337 ಐಪಿಸಿ ಸಹಿತ ಕಲಂ: 134(ಎ&ಬಿ), 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಮಹೀಂದ್ರಾ ಥಾರ್ ಜೀಪ್ ನಂ: ಡಿ.ಎಲ್-1ಸಿ/ಎ.ಎ-8677 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 24-09-2021 ರಂದು 16-30 ಗಂಟೆಯ ಸಮಯಕ್ಕೆ ತಾನು ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ಜೀಪ್ ನಂ: ಡಿ.ಎಲ್-1ಸಿ/ಎ.ಎ-8677 ನೇದನ್ನು ಕಾರವಾರ-ಕೈಗಾ ರಾಜ್ಯ ಹೆದ್ದಾರಿ ಕ್ರಾಸಿನಿಂದ ಸಿದ್ಧರ ಬಾಂದಾಬಳ ಬಸ್ ಸ್ಟಾಪ್ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಸಿದ್ಧರದ ಬಾಬನಾಯ್ಕ ವಾಡಾ ಕಡೆಯಿಂದ ಕಾರವಾರ ಕಡೆಗೆ ಬರುತ್ತಿದ್ದ ಪಿರ್ಯಾದಿಯವರ ಬಾಬ್ತು ಮಾರುತಿ ಎರ್ಟಿಗಾ ಕಾರ್ ನಂ: ಕೆ.ಎ-30/ಎಮ್-7856 ನೇದಕ್ಕೆ ಸಿದ್ಧರದ ಬಾಂದಾಬಳ ಬಸ್ ಸ್ಟಾಪ್ ಹತ್ತಿರ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ ಪಿರ್ಯಾದಿಯವರ ಅಕ್ಕಂದಿರಾದ 1). ಶ್ರೀಮತಿ ದೀಪಾ @ ಅನಿತಾ ಕೋಂ. ನರೇಂದ್ರ ದೇಸಾಯಿ ಮತ್ತು 2). ಶ್ರೀಮತಿ ವರ್ಮಿಲಾ ಕೋಂ. ಶಿವಾನಂದ ಶೇಟ್ ರವರಿಗೆ ಮುಖಕ್ಕೆ, ತಲೆಗೆ, ಬೆನ್ನಿಗೆ, ಕೈ ಭುಜದ ಹತ್ತಿರ ಗಾಯನೋವು ಪಡಿಸಿ, ಆರೋಪಿ ಚಾಲಕನು ತನ್ನ ವಾಹವನ್ನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ತಂದೆ ರಾಯಾ ನಾಯ್ಕ, ಪ್ರಾಯ-53 ವರ್ಷ, ವೃತ್ತಿ-ಇಲೆಕ್ಟಿಕಲ್ ಕಾಂಟ್ರ್ಯಾಕ್ಟರ್, ಸಾ|| ಬಾಬನಾಯ್ಕ ವಾಡಾ, ಸಿದ್ದರ, ಕಾರವಾರ ರವರು ದಿನಾಂಕ: 24-09-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 140/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಂಕಿತ ತಂದೆ ಮಂಜುನಾಥ ದೇವಳಿ, ಸಾ|| ಇಡಗುಂದಿ, ತಾ: ಯಲ್ಲಾಪುರ (ಟಿಪ್ಪರ್ ಲಾರಿ ನಂ: ಕೆ.ಎ-25/ಸಿ-4312 ನೇದರ ಚಾಲಕ). ದಿನಾಂಕ: 22-09-2021 ರಂದು ಪಿರ್ಯಾದುದಾರರು ಅಂಕೋಲಾ ತಾಲೂಕಿನ ಅಡ್ಲೂರಿನ ಠಾಕೂರ ಡಾಬಾ ಬಳಿ ಊಟ ಮಾಡುವ ಸಲುವಾಗಿ ತನ್ನ ಲಾರಿ ನಂ: ಕೆ.ಎ-19/ಎ.ಬಿ-1134 ನೇದನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿಟ್ಟಾಗ ಎದುರಿನಿಂದ ಅಂದರೆ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಆರೋಪಿ ಚಾಲಕನು ತಾನು ಚಲಾಯಿಸಿಕೊಂಡು ಬಂದ ಟಿಪ್ಪರ್ ಲಾರಿ ನಂ: ಕೆ.ಎ-19/ಎ.ಬಿ-1134 ನೇದನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಲಾರಿಯ ಮೇಲಿನ ವೇಗದಲ್ಲಿ ನಿಯಂತ್ರಣ ಕಳೆದುಕೊಂಡು ಪಿರ್ಯಾದುದಾರರ ಲಾರಿಗೆ ಡಿಕ್ಕಿ ಹೊಡೆದು ಡ್ಯಾಮೇಜ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಇಸ್ಮಾಯಿಲ್ ತಂದೆ ಬಾಬಾಜಾನ್ ಸಾಬ್, ಪ್ರಾಯ-43, ವರ್ಷ, ವೃತ್ತಿ-ಚಾಲಕ, ಸಾ|| ಹೌಸ್ ನಂ: 19, 1 ನೇ ಕ್ರಾಸ್, ಲೇಬರ್ ಕಾಲೋನಿ, ತುಮಕೂರು ರವರು ದಿನಾಂಕ: 24-09-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 302, 354(ಎ), 448, 509, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆಕಾಶ ಓರಮ್ ತಂದೆ ಮಾಸ್ಟರ್ ಓರಮ್, ಪ್ರಾಯ-28 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಸರಬೇರನಾ, ಪಂಚಪದ, ಜರಸುಗುಡಾ, ಪಂಚಪರಾ, ಓರಿಸ್ಸಾ ರಾಜ್ಯ, ಹಾಲಿ ಸಾ|| ತದಡಿ, ಗೋಕರ್ಣ, ತಾ: ಕುಮಟಾ. ದಿನಾಂಕ: 24-09-2021 ರಂದು ಬೆಳಿಗ್ಗೆ 05-00 ಗಂಟೆಯ ಸುಮಾರಿಗೆ ಪಿರ್ಯಾದಿಯವರು ತದಡಿ ಗ್ರಾಮದ ತಮ್ಮ ಮನೆಯ ಹಿಂಬದಿಯಲ್ಲಿ ಕಟ್ಟೆಯ ಮೇಲೆ ಬಟ್ಟೆಗಳನ್ನು ಒಗೆಯುತ್ತಿದ್ದಾಗ ನಮೂದಿತ ಆರೋಪಿತನು ಕೆಟ್ಟ ದೃಷ್ಟಿಯಿಂದ ಯಾವುದೋ ದುರುದ್ದೇಶದಿಂದ ಪಿರ್ಯಾದಿಯವರನ್ನು ನೋಡುತ್ತಾ ಇದ್ದವನನ್ನು ಪಿರ್ಯಾದಿಯವರು ನೋಡಿ ಹೆದರಿ ಮನೆಯ ಕಡೆಗೆ ಹೋದಾಗ ಆರೋಪಿತನು ಅಕ್ರಮ ಪ್ರವೇಶ ಮಾಡಿ, ಮನೆಯ ಮಾಳಿಗೆ ಮೇಲೆ ಹೋದವನಿಗೆ ಪಿರ್ಯಾದಿಯವರ ತಂದೆಯವರಾದ ಶ್ರೀ ವಿವೇಕಾನಂದ ತಂದೆ ಪುತ್ತು ಶಾನಭಾಗ ಇವರು ಆರೋಪಿತನಿಗೆ ‘ಇಲ್ಲಿ ಯಾಕೆ ಬಂದಿ?’ ಅಂತಾ ವಿಚಾರಿಸಲು ಹೋದಾಗ ಆರೋಪಿತನು ವಿವೇಕಾನಂದ ಶಾನಭಾಗ ಇವರಿಗೆ ಸಿಟ್ಟಿನಿಂದ ಹರಿತವಾದ ಕಬ್ಬಿಣದ ಪಟ್ಟಿಯಿಂದ ತಲೆಗೆ 05-06 ಭಾರೀ ಹೊಡೆದು ಗಂಭೀರ ಸ್ವರೂಪದ ಗಾಯನೋವು ಪಡಿಸಿದಲ್ಲದೇ, ಪಿರ್ಯಾದಿಯವರಿಗೂ ಸಹ ಕೊಲೆ ಮಾಡುತ್ತೇನೆ ಅಂತಾ ಹರಿತವಾದ ಕಬ್ಬಿಣದ ಪಟ್ಟಿಯಿಂದ ಬೆದರಿಸಿದ್ದಲ್ಲದೇ, ಗಾಯಾಳು ವಿವೇಕಾನಂದ ಶಾನಭಾಗ ಇವರಿಗೆ ಉಪಚಾರಕ್ಕೆ ಒಯ್ಯುತ್ತಿರುವಾಗ ಅವರು ಕುಮಟಾದ ದಿವಗಿ ಸೇತುವೆಯ ಹತ್ತಿರ ಬೆಳಿಗ್ಗೆ 06-30 ಗಂಟೆಗೆ ಮೃತಪಡುವಂತೆ ಮಾಡಿ ಅವರ ಕೊಲೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀಮತಿ ರಾಜಲಕ್ಷ್ಮೀ ರಮಾಕಾಂತ ನಾಯಕ, ಪ್ರಾಯ-36 ವರ್ಷ, ವೃತ್ತಿ-ಮನೆ ಕೆಲಸ, ಸಾ|| ರಿಲಾಯನ್ಸ್ ಟವರ್ ಹತ್ತಿರ, ತದಡಿ, ತಾ: ಕುಮಟಾ ರವರು ದಿನಾಂಕ: 24-09-2021 ರಂದು 08-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 165/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಾಂತಪ್ಪ ತಂದೆ ರಾಮ ಗೌಡ, ಪ್ರಾಯ-35 ವರ್ಷ, ವೃತ್ತಿ-ಪಂಚಾಯತನಲ್ಲಿ ಕೆಲಸ, ಸಾ|| ಕಲಕೇರಿ, ವಾಲ್ಗಳ್ಳಿ, ತಾ: ಕುಮಟಾ (ಸ್ಕೂಟರ್ ನಂ: ಕೆ.ಎ-47/ವಿ-4740 ನೇದರ ಚಾಲಕ). ಈತನು ಪಿರ್ಯಾದಿಯ ಅಣ್ಣನಿದ್ದು, ಅಂಗವಿಕಲನಾಗಿರುತ್ತಾನೆ. ಈತನು ದಿನಾಂಕ: 22-09-2021 ರಂದು 19-15 ಗಂಟೆಗೆ ರಾಜ್ಯ ಹೆದ್ದಾರಿ ಸಂಖ್ಯೆ-48 ನೇದರಲ್ಲಿ ಕುಮಟಾ-ಚಂದಾವರ ಡಾಂಬರ್ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ನಾಲ್ಕು ಚಕ್ರದ ಸ್ಕೂಟರ್ ನಂ: ಕೆ.ಎ-47/ವಿ-4740 ನೇದನ್ನು ಕುಮಟಾ ಕಡೆಯಿಂದ ಚಂದಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಕುಮಟಾದ ಹೆರವಟ್ಟಾ ರೈಲ್ವೇ ಬ್ರಿಡ್ಜ್ ಹತ್ತಿರ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ನಿಷ್ಕಾಳಜಿತನದಿಂದ ಒಮ್ಮೇಲೆ ಎಡಕ್ಕೆ ಚಲಾಯಿಸಿ, ನಾಲ್ಕು ಚಕ್ರದ ಸ್ಕೂಟರಿನ ಎಡ ಚಕ್ರವನ್ನು ಕಾಲುವೆಯಲ್ಲಿ ಕೆಡವಿ ಒಮ್ಮೇಲೆ ಬ್ರೇಕ್ ಹಾಕಿ ಸ್ಕೂಟರನ್ನು ಪಲ್ಟಿ ಮಾಡಿಕೊಂಡು, ರಸ್ತೆಯಲ್ಲಿ ಬಿದ್ದು ತನ್ನ ಎಡಗಣ್ಣಿನ ಹುಬ್ಬಿಗೆ ಭಾರೀ ಗಾಯವಾಗಿ ಪ್ರಜ್ಞೆ ತಪ್ಪಿರುವುದ್ದಲ್ಲದೇ ಹಾಗೂ ಕಾಲಿಗೂ ತೆರಚಿದ ಗಾಯ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಜಟ್ಟು ತಂದೆ ನಾಗು ಗೌಡ, ಪ್ರಾಯ-30 ವರ್ಷ, ವೃತ್ತಿ-ಮೆಕ್ಯಾನಿಕ, ಸಾ|| ಕಲಕೇರಿ, ವಾಲ್ಗಳ್ಳಿ, ತಾ: ಕುಮಟಾ ರವರು ದಿನಾಂಕ: 24-09-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 128/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಹೊನ್ನಪ್ಪ ನಾಯ್ಕ, ಪ್ರಾಯ-31 ವರ್ಷ, ಸಾ|| ಹನುಮಾನ ನಗರ, ತಾ: ಭಟ್ಕಳ (ಆಟೋ ರಿಕ್ಷಾ ನಂ: ಕೆ.ಎ-47/ಎ-2080 ನೇದರ ಚಾಲಕ). ಈತನು ದಿನಾಂಕ: 22-09-21 ರಂದು ರಾತ್ರಿ 23-00 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಶಂಷುದ್ದೀನ್ ಸರ್ಕಲಿನಲ್ಲಿ ತನ್ನ ಆಟೋ ರಿಕ್ಷಾ ನಂ: ಕೆ.ಎ-47/ಎ-2080 ನೇದನ್ನು ಬಂದರ ಕಡೆಯಿಂದ ಶಂಷುದ್ದೀನ್ ಸರ್ಕಲ್ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೂಲಕ ರಂಗಿನಕಟ್ಟಾ ಕಡೆಯಿಂದ ಭಟ್ಕಳದ ಹೊಸ ಬಸ್ ನಿಲ್ದಾಣದ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರ್ ನಂ: ಕೆ.ಎ-47/ಎನ್-0169 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರ ಕಾರ್ ನಂ: ಕೆ.ಎ-47/ಎನ್-0169 ನೇದನ್ನು ಮತ್ತು ತನ್ನ ಆಟೋ ರಿಕ್ಷಾ ನಂ: ಕೆ.ಎ-47/ಎ-2080 ನೇದನ್ನು ಡ್ಯಾಮೇಜ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಹಿಸ್ಕಿಯಾಲ್ ಹಸನ್ ತಂದೆ ಮೊಹಮ್ಮದ್ ಹನೀಪ್ ಜಬ್ಬಾರ್ ಅಲಿ, ಪ್ರಾಯ-32 ವರ್ಷ, ವೃತ್ತಿ-ವ್ಯವಹಾರ, ಸಾ|| ಮಸ್ಕತ್ ಕಾಲೋನಿ, ಬಂದರ್ ರೋಡ್, 1 ನೇ ಕ್ರಾಸ್, ತಾ: ಭಟ್ಕಳ ರವರು ದಿನಾಂಕ: 24-09-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 151/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 19-09-2021 ರಂದು ರಂದು ಸಾಯಂಕಾಲ 04-00 ಗಂಟೆಯಿಂದ ದಿನಾಂಕ: 23-09-2021 ರಂದು ಬೆಳಿಗ್ಗೆ 11-00 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರದ ಸುಣಜೋಗದಲ್ಲಿರುವ ಪಿರ್ಯಾದಿಯ ಮನೆಯ ಮೇಲ್ಛಾವಣಿಯ ಹಂಚನ್ನು ತೆಗೆದು ಮನೆಯ ಒಳಗಡೆ ಇಳಿದು ಮನೆಯಲ್ಲಿ ಕಟ್ಟಿಗೆಯ ಡ್ರಾವರದಲ್ಲಿರುವ 1). ಚಿಲ್ಲರೆ ಹಣ 5,000/- ರೂಪಾಯಿ, 2). ಹಳೆಯ ಬಂಗಾರದ ಗುಂಡು ಮತ್ತು ತಾಳಿ, 02 ಗ್ರಾಂ, ಅ||ಕಿ|| 5,000/- ರೂಪಾಯಿ, 3). ಬ್ಯಾಟರಿ ಹಾಗೂ ಇನ್ವರ್ಟರ್, ಅ||ಕಿ|| 15,000/- ರೂಪಾಯಿ, 4). ಸಿಪ್ಪೆ ಇರುವ ಒಣ ಅಡಿಕೆ-01 ಕ್ವಿಂಟಾಲ್, ಅ||ಕಿ|| 30,000/- ರೂಪಾಯಿ, 5). ಬೆಳ್ಳಿಯ ಉಡಿದಾರ, ಅ;ತೂ; 20 ಗ್ರಾಂ, ಅ||ಕಿ|| 1,000/- ರೂಪಾಯಿ, 6). ಬಂಗಾರದ ತಾಳಿ, ಅ;ತೂ;01 ಗ್ರಾಂ, ಅ||ಕಿ|| 2,500/- ರೂಪಾಯಿ, 7). ಸಿಪ್ಪೆ ಇರುವ ಒಣ ಅಡಿಕೆ 1.5 ಕ್ವಿಂಟಾಲ್, ಅ||ಕಿ|| 45,000/- ರೂಪಾಯಿ. ಹೀಗೆ ಒಟ್ಟೂ 1,03,500/- ರೂಪಾಯಿ ಬೆಲೆಯ ಸ್ವತ್ತನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ವೆಂಕಟ್ರಮಣ ಭಟ್ಟ, ಪ್ರಾಯ-36 ವರ್ಷ, ವೃತ್ತಿ-ಕೃಷಿ ಮತ್ತು ಕೇಟರಿಂಗ್ ಕೆಲಸ, ಸಾ||  ಸುಣಜೋಗ, ತಾ: ಯಲ್ಲಾಪುರ, ಹಾಲಿ ಸಾ|| ಕಾಳಮ್ಮನಗರ, ಗ್ರೌಂಡ್ ಹತ್ತಿರ, ತಾ: ಯಲ್ಲಾಪುರ ರವರು ದಿನಾಂಕ: 24-09-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 18-09-2021 ರಂದು ಸಾಯಂಕಾಲ 06-00 ಗಂಟೆಯಿಂದ ದಿನಾಂಕ 20-09-2021 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಪೇಪರ್ ಮಿಲ್ ಆವರಣದಲ್ಲಿರುವ ಪಿ.ಸಿ.ಸಿ ಪ್ಲಾಂಟಿನ ಕಂಟೇನರ್ ಹತ್ತಿರ ಇಟ್ಟಿರುವ ಸುಮಾರು 14,800/- ರೂಪಾಯಿ ಕಿಮ್ಮತ್ತಿನ 15.2 ಎಮ್.ಎಮ್ ಅಳತೆಯ ಹಾಗೂ 6.2 ಎಮ್ ಎಮ್ ಅಳತೆಯ ತಲಾ 16 ಮೀಟರ್ ತಾಮೃದ ಕೊಳವೆ (ಕಾಪರ್ ಟ್ಯೂಬ್) ಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಕುಶಾಲಪ್ಪಾ ತಂದೆ ಸುಬ್ಬೇಗೌಡ, ಪ್ರಾಯ-50 ವರ್ಷ, ವೃತ್ತಿ-ಅಸಿಸ್ಟೆಂಟ್ ಸೆಕ್ಯೂರಿಟಿ ಮ್ಯಾನೇಜರ್, ಸಾ|| ಹಿರಿಸಾವೆ ಹೋಬಳಿ, ತಾ: ಚೆನ್ನರಾಯಪಟ್ಟಣ, ಜಿ: ಹಾಸನ, ಹಾಲಿ ಸಾ|| ಬ್ಲಾಕ್ ನಂ: 33, ರೂಮ್ ನಂ: 276, ನ್ಯೂ ಡಿ.ಆರ್.ಟಿ, ಬಂಗೂರನಗರ, ತಾ: ದಾಂಡೇಲಿ ರವರು ದಿನಾಂಕ: 24-09-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 121/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಪುಂಡಲೀಕ ತಂದೆ ಗೋವಿಂದ ಅಂಬಿಗ, ಪ್ರಾಯ-32 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ರವೀಂದ್ರನಗರ, ಗಂಗಾಂಬಿಕಾ ದೇವಸ್ಥಾನದ ಹತ್ತಿರ, ತಾ: ಸಿದ್ದಾಪುರ. ಪಿರ್ಯಾದಿ ಮಗನಾದ ಈತನು ದಿನಾಂಕ: 22-09-2021 ರಂದು ಮಧ್ಯಾಹ್ನ 11-30 ಗಂಟೆಯ ಸುಮಾರಿಗೆ ಮೊಬೈಲಿಗೆ ಕರೆನ್ಸಿ ಹಾಕಿಕೊಂಡು ಬರುತ್ತೇನೆ ಅಂತಾ ಹೇಳಿ ನನ್ನ ಬಳಿ 100/- ರೂಪಾಯಿ ಪಡೆದುಕೊಂಡು ನಮ್ಮ ಮನೆಯಿಂದ ಹೋಗಿದ್ದವನು, ಈವರೆಗೂ ವಾಪಸ್ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಮಗನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗೋವಿಂದ ತಂದೆ ರಾಮ ಅಂಬಿಗ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರವೀಂದ್ರನಗರ, ಗಂಗಾಬಿಕಾ ದೇವಸ್ಥಾನದ ಹತ್ತಿರ, ತಾ: ಸಿದ್ದಾಪುರ ರವರು ದಿನಾಂಕ: 24-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 93/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಮಧುಕೇಶ್ವರ ತಂದೆ ಶಶಿಧರ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಮನೆ ನಂ: 56, ಚಿಕ್ಕಬೆಂಗಳೆ, ಪೋ: ಗುಡ್ನಾಪುರ, ತಾ: ಶಿರಸಿ. ಈತನು ಪಿರ್ಯಾದಿಯ ಮಗನಾಗಿದ್ದು, ಈತನು ಶಿರಸಿಯಲ್ಲಿ ಕಲಕರಡಿಯ ಕುಮಾರ ನಾಯ್ಕ ಇವರ ಗ್ಯಾರೇಜಿನಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ: 20-09-2021 ರಂದು ಬೆಳಿಗ್ಗೆ 08-00 ಗಂಟೆಗೆ ಎಂದಿನಂತೆ ಮನೆಯಲ್ಲಿ ಶಿರಸಿಯಲ್ಲಿರುವ ಗ್ಯಾರೇಜಿಗೆ ಕೆಲಸಕ್ಕೆ ಹೋಗುತ್ತೇನೆ ಅಂತಾ ಮನೆಯಿಂದ ಹೇಳಿ ಹೋದವನು ಸಂಜೆಯಾದರೂ ಮನಗೆ ಬಾರದಿದ್ದರಿಂದ, ಮನೆಯ ಜನರು ಮಧುಕೇಶ್ವರ ಈತನ ಮೊಬೈಲಿಗೆ ಕರೆ ಮಾಡಿದಾಗ ಶಿವಮೊಗ್ಗಕ್ಕೆ ಹೋಗಿ ಬೆಳಿಗ್ಗೆ ಬರುತ್ತೇನೆ ಅಂತಾ ಹೇಳಿರುತ್ತಾನೆ. ಮರುದಿವಸ ಪೋನ್ ಮಾಡಿದಾಗ ಮಗನ ಪೋನ್ ಸ್ವಿಚ್ ಆಫ್ ಆಗಿರುತ್ತದೆ. ಕಾರಣ ಕಾಣೆಯಾದ ತನ್ನ ಮಗನನ್ನು ಹುಡುಕಿ ಕೊಡಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಶಶಿಧರ ತಂದೆ ರಾಮಾ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮನೆ ನಂ: 56, ಚಿಕ್ಕಬೆಂಗಳೆ, ಪೋ: ಗುಡ್ನಾಪುರ, ತಾ: ಶಿರಸಿ ರವರು ದಿನಾಂಕ: 24-09-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 24-09-2021

at 00:00 hrs to 24:00 hrs

 

No Cases Reported....

 

======||||||||======

 

 

 

 

ಇತ್ತೀಚಿನ ನವೀಕರಣ​ : 25-09-2021 01:27 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080