ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 25-04-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 126/2021, ಕಲಂ: ಹುಡುಗ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗ ಕುಮಾರ: ರೋಹಿತ ತಂದೆ ಬಾಬುರಾಯ ತಾಂಡೇಲ, ಪ್ರಾಯ-17 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಟೊಂಕಾ, ಕಾಸರಕೋಡ, ತಾ: ಹೊನ್ನಾವರ. ಪಿರ್ಯಾದಿಯ ತಮ್ಮನ ಮಗನಾದ ಈತನು ದಿನಾಂಕ: 25-04-2021 ಮನೆಯಿಂದ ಆಟ ಆಡಲು ಸ್ನೆಹಿತರೊಂದಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವನು, ಕಾಸರಕೋಡ ಟೊಂಕಾದ ಅರಬ್ಬೀ ಸಮುದ್ರದಲ್ಲಿ ಸಾಯಂಕಾಲ 04-30 ಗಂಟೆಗೆ ಸ್ನೆಹಿತರೊಂದಿಗೆ ಈಜಾಡುತ್ತಿರುವಾಗ ಸಮುದ್ರದ ಅಲೆಗೆ ಹಾಗೂ ಕಡಲಿನ ಒತ್ತಡಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಕಾಣೆಯಾದವನಿಗೆ ಸಮುದ್ರದ ನೀರಿನಲ್ಲಿ ಹುಡುಕಾಡಿದರೂ ಈವರೆಗೂ ಪತ್ತೆಯಾಗದೇ ಇರುವುದರಿಂದ ಕಾಣೆಯಾದ ಈತನನ್ನು ಹುಡುಕಿ ಕೊಡಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಷ್ಣು ತಂದೆ ರಾಮಾ ತಾಂಡೇಲ, ಪ್ರಾಯ-45 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಟೊಂಕಾ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 25-04-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಿನೇಶ ತಂದೆ ರಾಮ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ತಲಾನ, ತಾ: ಭಟ್ಕಳ (ಬಜಾಜ್ ಆಟೋ ರಿಕ್ಷಾ ನಂ: ಕೆ.ಎ-47/0926 ನೇದರ ಚಾಲಕ). ಈತನು ದಿನಾಂಕ: 23-04-2021 ರಂದು 11-45 ಗಂಟೆಯ ಸಮಯಕ್ಕೆ ತನ್ನ ಬಜಾಜ್ ಆಟೋ ರಿಕ್ಷಾ ನಂ: ಕೆ.ಎ-47/0926 ನೇದನ್ನು ಭಟ್ಕಳ ಕಡೆಯಿಂದ ತೆಂಗಿನಗುಂಡಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಭಟ್ಕಳದ ತೆಂಗಿನಗುಂಡಿಯ ಡಾಂಬರ್ ರಸ್ತೆಯ ಮೇಲೆ ಶೇಡಬರಿ ದೇವಸ್ಥಾನದ ಕ್ರಾಸ್ ಹತ್ತಿರ ತನ್ನ ಎದುರುಗಡೆಯಿಂದ ಅಂದರೆ ತೆಂಗಿನಗುಂಡಿ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಪಿರ್ಯಾದಿಯ ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-7737 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದರ ಪರಿಣಾಮ ಪಿರ್ಯಾದಿಯು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಪಿರ್ಯಾದಿಯ ಬಲಗಾಲಿಗೆ ಹಾಗೂ ಎಡಗೈಗೆ ಸಾದಾ ಗಾಯ ಮತ್ತು ಪಿರ್ಯಾದಿಯ ತಂದೆಯ ತಲೆಗೆ, ಎರಡು ಕಾಲಿಗೆ ಮತ್ತು ಕೈಗೆ ಸಾದಾ ಸ್ವರೂಪದ ಗಾಯವಾದ ಬಗ್ಗೆ ಪಿರ್ಯಾದಿ ಶ್ರೀ ಮೊಹ್ಮಮದ್ ಫರಹಾನ್ ತಂದೆ ಅಬ್ದುಲ್ ಗನಿ, ಪ್ರಾಯ-20 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ತೆಂಗಿನಗುಂಡಿ, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 25-04-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 93/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 03-04-2021 ರಂದು 09-00 ಗಂಟೆಯಿಂದ 17-30 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ಶಹರದ ಲಾಡ್ ಕಣ್ಣಿನ್ ಆಸ್ಪತ್ರೆ ಎದುರುಗಡೆ ನಿಲ್ಲಿಸಿಟ್ಟಿದ್ದ ಪಿರ್ಯಾದಿಯವರ ಬಾಬ್ತು ಸುಮಾರು 30,000/- ರೂಪಾಯಿ ಮೌಲ್ಯದ ಕಪ್ಪು ಬಣ್ಣದ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-31/ಕ್ಯೂ-9863 ನೇದನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗಿರಿಧರ ತಂದೆ ನಾಗೇಂದ್ರ ಗೌಡ, ಪ್ರಾಯ-35 ವರ್ಷ, ವೃತ್ತಿ-ಮುತ್ತೂಟ್ ಫಿನ್ ಕಾರ್ಪ್ ನಲ್ಲಿ ಕ್ಲರ್ಕ್ ಕೆಲಸ, ಸಾ|| ನಾಗಶೆಟ್ಟಿಕೂಪ್ಪ, ತಾ: ಹಳಿಯಾಳ ರವರು ದಿನಾಂಕ: 25-04-2021 ರಂದು 14-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 94/2021, ಕಲಂ: 143, 147, 148, 323, 324, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಲಕ್ಷ್ಮಣ ತಂದೆ ಭರಮಾಣಿ ಶಿರೋಡಕರ, ಪ್ರಾಯ-55 ವರ್ಷ, ವೃತ್ತಿ-ರೈತಾಬಿ ಕೆಲಸ, 2]. ವಿಠ್ಠಲ ತಂದೆ ಲಕ್ಷ್ಮಣ ಶಿರೋಡಕರ ಪ್ರಾಯ-26 ವರ್ಷ, ವೃತ್ತಿ-ಗೌಂಡಿ ಕೆಲಸ, 3]. ದೇಮಾಣಿ ತಂದೆ ಭರಮಾಣಿ ಶಿರೋಡಕರ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, 4]. ಬಸವರಾಜ ತಂದೆ ಲಕ್ಷ್ಮಣ ಶಿರೋಡಕರ, ಪ್ರಾಯ-22 ವರ್ಷ, ವೃತ್ತಿ-ಗೌಂಡಿ ಕೆಲಸ, 5]. ಪವನ ತಂದೆ ದೇಮಾಣಿ ಶಿರೋಡಕರ, ಪ್ರಾಯ-22 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| (ಎಲ್ಲರೂ) ರಾಮಾಪುರ (ಹಂದಲಿ), ದಾಂಡೇಲಿ. ಈ ನಮೂದಿತ ಆರೋಪಿತರು ಮತ್ತು ಪಿರ್ಯಾದಿಯು ಸಹೋದರ ಸಂಬಂಧಿಗಳಾಗಿದ್ದು, ಹಳಿಯಾಳ ತಾಲೂಕಿನ ಹವಗಿ ಗ್ರಾಮದ ಸಾಮೂಹಿಕ ಜಮೀನನ್ನು ಹೊಂದಿರುತ್ತಾರೆ. ಸದರ ಜಮೀನಿನ ಸಿವಿಲ್ ದಾವಾ ಮಾನ್ಯ ನ್ಯಾಯಾಲಯದಲ್ಲಿ ಚಾಲ್ತಿ ಇರುತ್ತದೆ. ಪಿರ್ಯಾದಿಯು ‘ಅದು ನಿಕಾಲಿ ಆಗುವವರೆಗೆ ಕೃಷಿ ಕೆಲಸ ಮಾಡಬೇಡಿ’ ಅಂತಾ ದಿನಾಂಕ: 25-04-2021 ರಂದು 12-30 ಗಂಟೆಗೆ ಹೇಳಿದ್ದಕ್ಕೆ ಆರೋಪಿ 1 ಮತ್ತು 5 ನೇಯವರು ಪಿರ್ಯಾದಿಗೆ ದೂಡಿ ಹಾಕಿದ್ದರಿಂದ, ಪಿರ್ಯಾದಿಯವರನ್ನು ಬಿಡಿಸಿಕೊಳ್ಳಲು ಬಂದ ಗಾಯಾಳು 2). ಕೃಷ್ಣ ತಂದೆ ಓಮಣ್ಣ ಶಿರೋಡಕರ, 3). ಸುರೇಶ ತಂದೆ ಓಮಣ್ಣ ಶಿರೋಡಕರ, 4). ಅನಂತ ತಂದೆ ಓಮಣ್ಣ ಶಿರೋಡಕರ, 5). ರೋಹನ ತಂದೆ ಓಮಣ್ಣ ಶಿರೋಡಕರ, ಸಾ|| (ಎಲ್ಲರೂ) ಹವಗಿ, ತಾ: ಹ:ಳಿಯಾಳ ಹಾಗೂ ಶ್ರೀಮತಿ ಮಹಾದೇವಿ ಶಿರೋಡಕರ ಇವರು ಬಂದಾಗ ಆರೋಪಿ 2 ನೇಯವನು ಗಾಯಾಳು 2 ನೇಯವರಿಗೆ ಬಿಗಿಯಾಗಿ ಹಿಡಿದುಕೊಂಡಾಗ ‘ನಿಮ್ಮ ತಾಯಿನಾ ಹಡಾ’ ಅಂತಾ ಅವಾಚ್ಯವಾಗಿ ಬೈಯ್ದು, ಆರೋಪಿ 1 ಮತ್ತು 3 ನೇಯವರು ಬಿದಿರು ಬಡಿಗೆಯಿಂದ ತಲೆ, ಮೈ ಕೈ ಹಾಗೂ ಕಾಲಿಗೆ ಹೊಡೆ-ಬಡೆ ಮಾಡಿ ರಕ್ತಗಾಯ ಪಡಿಸಿದ್ದಲ್ಲದೇ, ಗಾಯಾಳು 3, 4 ಮತ್ತು 5 ನೇಯವರಿಗೆ ಬಡಿಗೆಯಿಂದ ಹಾಗೂ ಕೈಯಿಂದ ಹೊಡೆ-ಬಡೆ ಮಾಡಿ ಮೈ ಕೈ ಹಾಗೂ ಕಾಲಿಗೆ ಗಾಯನೋವು ಪಡಿಸಿದ್ದಲ್ಲದೇ, ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ರಾಧಾ ಕೋಂ. ಕೃಷ್ಣ ಶಿರೋಡಕರ, ಪ್ರಾಯ-35 ವರ್ಷ, ವೃತ್ತಿ-ಮನೆ ಕೆಲಸ ಮತ್ತು ರೈತಾಬಿ ಕೆಲಸ, ಸಾ|| ಹವಗಿ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 25-04-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 93/2021, ಕಲಂ: 143, 147, 148, 323, 324, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುರೇಶ ತಂದೆ ಓಮಣ್ಣ ಶಿರೋಡಕರ, ಪ್ರಾಯ-55 ವರ್ಷ, ವೃತ್ತಿ-ರೈತಾಬಿ ಕೆಲಸ, 2]. ಕೃಷ್ಣಾ ತಂದೆ ಓಮಣ್ಣ ಶಿರೋಡಕರ, ಪ್ರಾಯ-46 ವರ್ಷ, ವೃತ್ತಿ-ರೈತಾಬಿ ಕೆಲಸ, 3]. ಶಾಂತಾರಾಮ ತಂದೆ ಓಮಣ್ಣ ಶಿರೋಡಕರ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, 4]. ಅನಂತ ತಂದೆ ಓಮಣ್ಣ ಶಿರೋಡಕರ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, 5]. ಶ್ರೀಮತಿ ರಾಧಾ ಕೋಂ. ಕೃಷ್ಣಾ ಶಿರೋಡಕರ, ಪ್ರಾಯ-35 ವರ್ಷ, ವೃತ್ತಿ-ಮನೆ ಕೆಲಸ 6]. ಶ್ರೀಮತಿ ಮಹಾದೇವಿ ಕೋಂ. ಸುರೇಶ ಶಿರೋಡಕರ, ಪ್ರಾಯ-50 ವರ್ಷ, ವೃತ್ತಿ-ಮನೆ ಕೆಲಸ, ಸಾ|| (ಎಲ್ಲರೂ) ಹವಗಿ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ಮತ್ತು ಪಿರ್ಯಾದಿಯು ಸಹೋದರ ಸಂಬಂDiಗಳಾಗಿದ್ದು, ಸದರಿಯವರು ಹಳಿಯಾಳ ತಾಲೂಕಿನ ಹವಗಿ ಗ್ರಾಮದಲ್ಲಿ ಸಾಮೂಹಿಕ ಜಮೀನು ಹೊಂದಿರುತ್ತಾರೆ. ಹೀಗಿರುತ್ತಾ ದಿನಾಂಕ: 25-04-2021 ರಂದು 12-00 ಗಂಟೆಗೆ ಪಿರ್ಯಾದಿ ಹಾಗೂ ಅವರ ಅಣ್ಣ ಲಕ್ಷ್ಮಣ ಇವರು ಸಾಮೂಹಿಕ ಜಮೀನಿನಲ್ಲಿ ಕೃಷಿ ಕೆಲಸ ಮಾಡಲು ಎತ್ತುಗಳನ್ನು ತೆಗೆದುಕೊಂಡು ಹೋಗಿ ಗಳೆ ಹೊಡಿಯುತ್ತಿದ್ದಾಗ ಆರೋಪಿತರು ಸಂಗನಮತ ಮಾಡಿಕೊಂಡು ಬಂದು ಗಳೆ ಹೊಡೆಯುವುದನ್ನು ತಡೆದು ನಿಲ್ಲಿಸಿದಾಗ ಪಿರ್ಯಾದಿಯು ‘ನಮ್ಮ ಹೊಲ ಇದು. ನಾವು ಗಳೆ ಹೊಡಿತೇವು’ ಅಂತಾ ಹೇಳಿದ್ದಕ್ಕೆ ಆರೋಪಿ 2, 3 ಮತ್ತು 4 ನೇಯವರು ತನಗೆ ಹಾಗೂ ಗಾಯಾಳು ಲಕ್ಷ್ಮಣ ತಂದೆ ಭರಮಾಣಿ ಶಿರೋಡಕರ ರವರಿಗೆ ಅವಾಚ್ಯವಾಗಿ ಬೈಯ್ದು, ಬಿದಿರಿನ ಬಡಿಗೆಯಿಂದ ಹೊಡೆದಿದ್ದಲ್ಲದೇ, ಇನ್ನುಳಿದವರು ಕೈಯಿಂದ ಹೊಡೆದಿದ್ದಲ್ಲದೇ, ತಮಗೆ ಬಿಡಿಸಿಕೊಂಡು ಹೋಗಲು ಬಂದ ಗಾಯಾಳು ವಿಠ್ಠಲ ತಂದೆ ಲಕ್ಷ್ಮಣ ಶಿರೋಡಕರ ಮತ್ತು ಬಸವರಾಜ ತಂದೆ ಲಕ್ಷ್ಮಣ ಶಿರೋಡಕರ ರವರಿಗೆ ಆರೋಪಿ 3, 4 ಮತ್ತು 5 ನೇಯವರು ಬಡಿಗೆಯಿಂದ ಹಾಗೂ ಕೈಯಿಂದ ಹೊಡೆ-ಬಡೆ ಮಾಡಿ ಸಾದಾ ಸ್ವರೂಪದ ಗಾಯನೋವು ಪಡಿಸಿ, ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ದೇಮಾಣಿ ತಂದೆ ಭರಮಾಣಿ ಶಿರೋಡಕರ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ರಾಮಾಪುರ (ಹಂದಲಿ), ದಾಂಡೇಲಿ ರವರು ದಿನಾಂಕ: 25-04-2021 ರಂದು 16-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 25-04-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಹಾಬಳೇಶ್ವರ ತಂದೆ ಸೋಮಾ ಗೌಡ, ಪ್ರಾಯ-28 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ತಾರಮಕ್ಕಿ, ಗೋಕರ್ಣ, ತಾ: ಕುಮಟಾ. ಮೃತ ಈತನು ದಿನಾಂಕ: 23-04-2021 ರಂದು ರಾತ್ರಿ ಸುಮಾರು 22-00 ಗಂಟೆಯಿಂದ ದಿನಾಂಕ: 25-04-2021 ರಂದು ಬೆಳಿಗ್ಗೆ 06-30 ಗಂಟೆಯ ನಡುವಿನ ಅವಧಿಯಲ್ಲಿ ಗೋಕರ್ಣದ ರಾಮತೀರ್ಥ ದೇವಸ್ತಾನದ ಪಕ್ಕದ ಸಮುದ್ರದ ದಡದಲ್ಲಿ ಕಲ್ಲು ಬಂಡೆಗಳ ಮೇಲೆ ಕುಳಿತು ಮೀನು ಹಿಡಿಯಲು ಗಾಳ ಹಾಕುತ್ತಿದ್ದಾಗ ಆಕಸ್ಮಿಕವಾಗಿ ಆಯ ತಪ್ಪಿ ಅಥವಾ ಸಮುದ್ರದ ಅಲೆಗೆ ಸಿಲುಕಿ ಸಮುದ್ರದ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟು ಶವವಾಗಿ ಸಿಕ್ಕಿರುತ್ತಾನೆ. ಇದರ ಹೊರತು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಸೋಮಾ ಗೌಡ, ಪ್ರಾಯ-24 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ತಾರಮಕ್ಕಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 25-04-2021 ರಂದು 07-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮೋಹನ ತಂದೆ ಅಂಬಾಜಿ ದೇಸಾಯಿ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆ.ಪಿ.ಸಿ ಕಾಲೋನಿ, ರಾಮನಗರ, ತಾ: ಜೋಯಿಡಾ. ಪಿರ್ಯಾದಿಯ ಅಣ್ಣನಾದ ಈತನು ಸರಾಯಿ ಕುಡಿತದ ಚಟ ಹೊಂದಿದ್ದನು, ಹೀಗಿರುವಾಗ ದಿನಾಂಕ: 24-04-2021 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಮೋಹನ ಈತನು ರಾಮನಗರದ ಅವನ ಗೆಳೆಯರ ಸಂಗಡ ಇಳವಾದಾಬೆಯ ವಜ್ರಾ ಫಾಲ್ಸಿಗೆ ಪಾರ್ಟಿ ಮಾಡಲು ಹೋದಾಗ, ಅದೇ ದಿವಸ ಮೋಹನ ಈತನು ಸರಾಯಿ ಕುಡಿದು ಮದ್ಯಾಹ್ನ 02-30 ಗಂಟೆಯ ಸುಮಾರಿಗೆ ವಜ್ರಾ ಫಾಲ್ಸ್ ನದಿ ನೀರಿನ ಹರಿವಿನ ಕಡೆಗೆ ಅಡ್ಡಾಡುತ್ತಾ ಹೋಗಿದ್ದು, ಅವನು ಸಂಗಡಿಗರು ಅವನಿಗಾಗಿ ಎಷ್ಟೇ ಹುಡುಕಾಡಿದರೂ ಸಿಗದೇ ಇದ್ದಾಗ, ಇಳವಾದಾಬಾದಲ್ಲಿ ಮೋಹನ ಈತನ ಸಂಬಂಧಿಕರ ಮನೆಗೆ ಹೋದ ಬಗ್ಗೆ ದಿನಾಂಕ: 25-04-2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ವಿಚಾರಿಸಲಾಗಿ ಅಲ್ಲಿಗೂ ಬಂದಿಲ್ಲವಾಗಿ ತಿಳಿಸಿದ ನಂತರ, ಮೃತ ಮೋಹನ ಈತನ ಸಂಗಡ ಪಾರ್ಟಿಗೆ ಹೋದ ಇವನ ಸಂಗಡಿಗರೆಲ್ಲರೂ ಸೇರಿಕೊಂಡು ಪುನಃ ವಜ್ರಾ ಫಾಲ್ಸಿಗೆ ಹೋಗಿ ಹುಡುಕಾಡಿದಾಗ ಮೃತ ಮೋಹನ ಈತನ ದೇಹವು ವಜ್ರಾ ಫಾಲ್ಸ್ ನದಿ ನೀರಿನ ಮೇಲೆ ತೇಲುತ್ತಿದ್ದು, ಮೃತ ಮೋಹನ ಈತನು ಸರಾಯಿ ಕುಡಿತದ ನಶೆಯಲ್ಲಿ ವಜ್ರಾ ಫಾಲ್ಸ್ ನದಿ ನೀರಿಗಳಿದು ಸತ್ತಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮನೋಹರ ತಂದೆ ಅಂಬಾಜಿ ದೇಸಾಯಿ, ಪ್ರಾಯ-44 ವರ್ಷ, ವೃತ್ತಿ-ವ್ಯಾಪಾರ, ಸಾ|| ಕೆ.ಪಿ.ಸಿ ಕಾಲೋನಿ, ರಾಮನಗರ, ತಾ: ಜೋಯಿಡಾ ರವರು ದಿನಾಂಕ: 25-04-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 26-04-2021 05:56 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080