ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂ:- 25-04-2022

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 19/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಭಾಕರ ತಂದೆ ಕೃಷ್ಣಾ ಶೆಟ್ಟಿ, ಪ್ರಾಯ-55 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ (ಬ್ಯಾಡ್ಜ್ ನಂ: 1217), ಸಾ|| ಜೆ.ಎಮ್.ಜೆ ಶಾಲೆಯ ಹತ್ತಿರ, ಚಿಪಗಿ, ತಾ: ಶಿರಸಿ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1584 ನೇದರ ಚಾಲಕ), 2]. ಸುರೇಶ ತಂದೆ ನಾಗಪ್ಪ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ (ಬ್ಯಾಡ್ಜ್ ನಂ: 2029), ಸಾ|| ಗಣೇಶ ನಗರ, ತಾ: ಶಿರಸಿ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1584 ನೇದರ ನಿರ್ವಾಹಕ). ದಿನಾಂಕ: 25-04-2022 ರಂದು ಬೆಳಿಗ್ಗೆ 11-10 ಗಂಟೆಯ ಸುಮಾರಿಗೆ ಪಿರ್ಯಾದಿಯವರು ಹಾಗೂ ಅವರ ಗಂಡನಾದ ಶ್ರೀ ವಿನಯ ತಂದೆ ವಿಷ್ಣು ಬಾಡ, ಪ್ರಾಯ-64 ವರ್ಷ, ವೃತ್ತಿ-ನಿವೃತ್ತ ನೌಕರ. ಸಾ|| ಹೊಸ ಬಸ್ ನಿಲ್ದಾಣದ ಹತ್ತಿರ, ಸುಪ್ರತಾ ನಗರ, ಹುಲೇಕಲ್ ರೋಡ್, ತಾ: ಶಿರಸಿ ಇವರು ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1584 ನೇದರಲ್ಲಿ ಕಾರವಾರದಿಂದ ಶಿರಸಿಗೆ ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮುಖಾಂತರ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಬಿಣಗಾದ ಐ.ಟಿ.ಐ ಕಾಲೇಜ್ ಹತ್ತಿರ ಬಸ್ ನಿರ್ವಾಹಕನಾದ ಆರೋಪ 2 ನೇಯವನು ಬಸ್ಸಿನ ಹಿಂದಿನ ಡೋರನ್ನು ಮುಚ್ಚದೇ ಪಿರ್ಯಾದಿ ಹಾಗೂ ಪಿರ್ಯಾದಿಯ ಗಂಡನವರಿಗೆ ಬಸ್ಸಿನ ಹಿಂದಿನ ಸೀಟಿನಿಂದ ಎದ್ದು ಮುಂದೆ ಇರುವ ಸೀಟಿನಲ್ಲಿ ಕುಳಿತುಕೊಳ್ಳಿ ಅಂತಾ ತಿಳಿಸಿದರಿಂದ ಪಿರ್ಯಾದಿ ಹಾಗೂ ಪಿರ್ಯಾದಿಯ ಗಂಡನವರು ಬಸ್ಸಿನಲ್ಲಿರುವ ಹಿಂದಿನ ಸೀಟಿನಿಂದ ಮುಂದಿನ ಸೀಟಿನ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿಯವರು ಪ್ರಯಾಣಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಾದ ಆರೋಪಿ 1 ನೇಯವನು ಬಸ್ಸನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ತಿರುವಿನ ರಸ್ತೆಯಲ್ಲಿ ಬಸ್ಸನ್ನು ಒಮ್ಮೇಲೆ ಬಲಕ್ಕೆ ತಿರುಗಿಸಿ, ಪಿರ್ಯಾದಿಯ ಗಂಡನವರು ಬಸ್ಸಿನ ಹಿಂದಿನ ಡೋರಿನಿಂದ ರಸ್ತೆಯ ಮೇಲೆ ಬೀಳುವಂತೆ ಮಾಡಿ ಅಪಘಾತ ಪಡಿಸಿ, ಪಿರ್ಯಾದಿಯ ಗಂಡನಾದ ಶ್ರೀ ವಿನಯ ತಂದೆ ವಿಷ್ಣು ಬಾಡ ಇವರಿಗೆ ಹಣೆಯ ಎಡಭಾಗದಲ್ಲಿ ಗಾಯ ಹಾಗೂ ಒಳನೋವು, ಎಡಗೈ ಮೊಣಕೈ ಹತ್ತಿರ ಗಾಯ ಹಾಗೂ ಒಳನೋವು, ಎಡಗಾಲಿನ ಹಾಗೂ ಬಲಗಾಲಿನ ಮಂಡಿಯ ಮೇಲೆ ಒಳನೋವು ಹಾಗೂ ಸೊಂಟದ ಎಡಭಾಗದಲ್ಲಿ ಒಳನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸೋನಂ ಕೋಂ. ವಿನಯ ಬಾಡ, ಪ್ರಾಯ-53 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹೊಸ ಬಸ್ ನಿಲ್ದಾಣದ ಹತ್ತಿರ, ಸುಪ್ರತಾ ನಗರ, ಹುಲೇಕಲ್ ರೋಡ್, ತಾ: ಶಿರಸಿ ರವರು ದಿನಾಂಕ: 25-04-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾಗೇಶ ತಂದೆ ಕೇಶವ ಉಳ್ವೇಕರ, ಪ್ರಾಯ-57 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಪಂಚರಾಶಿವಾಡ, ಸಿ.ಎಮ್.ಸಿ ಗಾರ್ಡನ್ ಹತ್ತಿರ, ಕಾರವಾರ. ಈತನು ದಿನಾಂಕ: 25-04-2022 ರಂದು 11-30 ಘಂಟೆಯ ಸುಮಾರಿಗೆ ಕಾರವಾರದ ಕೋಡಿಬಾಗ ಸಿ.ಎಮ್.ಸಿ ಗಾರ್ಡನ್ ಹತ್ತಿರ ಪಂಚರಾಶಿವಾಡಾದ ಸಾರ್ವಜನಿಕ ಸ್ಥಳದಲ್ಲಿ ತನ್ನ ತಾಬಾ ಯಾವುದೇ ಪಾಸ್ ಅಥವಾ ಪರ್ಮಿಟ್ ಇಟ್ಟುಕೊಳ್ಳದೇ ಸುಮಾರು 1,500/- ರೂಪಾಯಿ ಬೆಲೆಬಾಳುವ ಗೋವಾ ರಾಜ್ಯ ತಯಾರಿಕೆಯ 1). GOA Special Fenny, 750 ML for sale in Goa ಅಂತಾ ನಮೂದಿರುವ 6 ಸರಾಯಿ ತುಂಬಿದ ಬಾಟಲಿಗಳು ಹಾಗೂ 2). KINGFISHER STRONG PREMIUM BEER, 500 ML For sale in Goa ಅಂತಾ ನಮೂದಿರುವ 6 ಬಿಯರ್ ತುಂಬಿದ ಸೀಲ್ಡ್ ಟಿನ್ ಗಳನ್ನು ತನ್ನ ತಾಬಾ ಇಟ್ಟುಕೊಂಡಿರುವಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ನಡೆಸಿ ಸದರಿ ಅಬಕಾರಿ ಸ್ವತ್ತುಗಳೊಂದಿಗೆ ಆರೋಪಿತನನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕೃಷ್ಣಗೌಡ ಅರಕೇರಿ, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 25-04-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2022, ಕಲಂ: 279, 337 ಐಪಿಸಿ ಹಾಗೂ ಕಲಂ: 134(ಎ)(ಬಿ) ಸಹಿತ 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ವಾಹನದ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 25-04-2022 ರಂದು ಪಿರ್ಯಾದಿಯ ಅಣ್ಣ ದೀಪಕ ಕಾಶಿನಾಥ ನಾಯ್ಕ ರವರು ಪುರುಷೋತ್ತಮ ಹಾಲ್ ನಲ್ಲಿ ತನ್ನ ಪರಿಚಯದವರ ಮದುವೆ ಮುಗಿಸಿ ಹೊಸಾಳಿ ಕ್ರಾಸ್ ಹತ್ತಿರ ಬಂದಿದ್ದು, ಮನೆಗೆ ಬರುತ್ತಿರುವುದಾಗಿ ತನ್ನ ಹೆಂಡತಿಗೆ ಪೋನ್ ಮಾಡಿ ತಿಳಿಸಿದ್ದು, ತನ್ನ ಸ್ಕೂಟರ್ ನಂ: ಕೆ.ಎ-30/ಆರ್-9759 ನೇದನ್ನು ಚಲಾಯಿಸಿಕೊಂಡು ಹೊಸಾಳಿ ಕಡೆಗೆ ತಮ್ಮ ಮನೆಗೆ ಹೋಗುತ್ತಿರುವಾಗ ಹೊಸಾಳಿಯ ಅಗರ ನಾಯ್ಕ ರವರ ಮನೆಯ ಮುಂದೆ ಗ್ರಾಮೀಣ ರಸ್ತೆಯ ಮೇಲೆ ಯಾವುದೋ ವಾಹನದ ಆರೋಪಿ ಚಾಲಕನು ಮಧ್ಯಾಹ್ನ 14-45 ಗಂಟೆಯಿಂದ 15-15 ಘಂಟೆಯ ಒಳಗೆ ಅಪಘಾತ ಪಡಿಸಿ, ದೀಪಕ ಕಾಶಿನಾಥ ನಾಯ್ಕ ಈತನಿಗೆ ರಸ್ತೆಯ ಮೇಲೆ ಬೀಳಿಸಿ, ಆತನ ತಲೆಗೆ ಗಂಭೀರ ಗಾಯವಾಗಲು ಕಾರಣನಾಗಿದ್ದಲ್ಲದೇ, ಅಪಘಾತದ ವಿಷಯನ್ನು ಪೊಲೀಸರಿಗೂ ಹೇಳದೇ ಗಾಯಾಳುವಿಗೆ ಉಪಚರಿಸದೇ ಆರೋಪಿ ವಾಹನದ ಚಾಲಕನು ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ಸಂದೀಪ ತಂದೆ ಕಾಶಿನಾಥ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ಖಾಸಗಿ ನೌಕರ, ಸಾ|| ಸಾಯಿ ಮಂದಿರ ಹತ್ತಿರ, ಕೊಳಗೆ, ಅಸ್ನೋಟಿ, ಕಾರವಾರ ರವರು ದಿನಾಂಕ: 25-04-2022 ರಂದು 17-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2022, ಕಲಂ: 8(c), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಸಿದ್ದೇಶ ತಂದೆ ಸುರೇಶ ದೇಸಾಯಿ, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ನಂ: 121/3, ಬಂಡೇಕರವಾಡೋ, ಕಾಕೋಲಿಯಮ್, ಸೌತ್ ಗೋವಾ, ಗೋವಾ. ಈತನು ದಿನಾಂಕ: 25-04-2022 ರಂದು 11-40 ಗಂಟೆಗೆ ಅಂಕೋಲಾ ಶಹರದ ಜಿ.ಸಿ ಸರ್ಕಲ್ ಹತ್ತಿರ ಪ್ಲೈ ಓವರ್ ಕೆಳಗೆ ಯಾವುದೇ ಪಾಸ್ ಮತ್ತು ಪರ್ಮಿಟ್ ಇಲ್ಲದೇ ಅಕ್ರಮ ಲಾಭಕ್ಕಾಗಿ ಅ||ಕಿ|| 2,300/- ರೂಪಾಯಿ ಮೌಲ್ಯದ 156 ಗ್ರಾಂ. ತೂಕದ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುವ ಉದ್ದೇಶದಿಂದ ತಮ್ಮ ವಶದಲ್ಲಿಟ್ಟುಕೊಂಡಿದ್ದಾಗ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ (ಕಾ&ಸು), ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 25-04-2022 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ದಯಾನಂದ ತಂದೆ ಬಲೀಂದ್ರ ಗೌಡ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ಬಾವಿಕೊಡ್ಲ, ಪೋ: ದುಗ್ಗನಸಶಿ, ತಾ: ಕುಮಟಾ, ಹಾಲಿ ಸಾ|| ಬೈಲಕೇರಿ, ಅಗ್ರಗೋಣ, ತಾ: ಅಂಕೋಲಾ. ಈತನು ದಿನಾಂಕ: 25-04-2022 ರಂದು 10-05 ಗಂಟೆಯ ಸುಮಾರಿಗೆ ಅಂಕೋಲಾ ಶಹರದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಕ್ರಾಸಿನ ಸಾರ್ವಜನಿಕ ರಸ್ತೆಯ ಬದಿಯಲ್ಲಿ,ನಿಂತು ತನ್ನ ಲಾಭಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ ನಗದು ಹಣ 870/- ರೂಪಾಯಿ ಹಾಗೂ ಇತರೆ ಓ.ಸಿ ಮಟಕಾ ಜೂಗಾರಾಟದ ಸಾಮಗ್ರಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಶೆಟ್ಟಿ, ಪೊಲೀಸ್ ನೀರೀಕ್ಷಕರು, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 25-04-2022 ರಂದು 20-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 165/2022, ಕಲಂ: 279, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ವಾಹನ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯ ಮಾವನಾದ ಶ್ರೀ ನಾಗೇಶ ತಂದೆ ಹಮ್ಮಜ್ಜ ಹಳ್ಳೇರ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಸಕಲಮಕ್ಕಿ, ಹಡಿನಬಾಳ, ತಾ: ಹೊನ್ನಾವರ ಇವರು ದಿನಾಂಕ: 24-04-2022 ರಂದು ರಾತ್ರಿ 20-00 ಗಂಟೆಗೆ ತನ್ನ ಮನೆಯಿಂದ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದವರಿಗೆ, ಹಡಿನಬಾಳ ಮಸಕಲಮಕ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ದಿನಾಂಕ: 24-04-2022 ರಂದು ರಾತ್ರಿ 20-00 ಗಂಟೆಯಿಂದ ದಿನಾಂಕ: 25-04-2022 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಾಹನದ ಆರೋಪಿ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಡಿಕ್ಕಿ ಪಡಿಸಿ, ನಾಗೇಶ ತಂದೆ ಹಮ್ಮಜ್ಜ ಹಳ್ಳೇರ ಇವರಿಗೆ ಸ್ಥಳದಲ್ಲೇ ಮರಣವನ್ನುಂಟು ಪಡಿಸಿ, ಅಪಘಾತದ ನಂತರ ಆರೋಪಿ ವಾಹನ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ಗಣಪ ಹಳ್ಳೇರ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಸಕಲಮಕ್ಕಿ, ತಾ: ಹೊನ್ನಾವರ ರವರು ದಿನಾಂಕ: 25-04-2022 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹರೀಶ ತಂದೆ ಮಾರುತಿ ಮಲ್ಲೂರ, ಪ್ರಾಯ-28 ವರ್ಷ, ಸಾ|| ಕೆ.ಎಚ್.ಬಿ ಕಾಲೋನಿ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಡಿ-7086 ನೇದರ ಸವಾರ). ಪಿರ್ಯಾದಿಯ ಅಣ್ಣನಾದ ಗಾಯಾಳು ಇಸ್ಮಾಯಿಲ್ ತಂದೆ ಅಬ್ದುಲ್ ಗಫಾರ್ ಈತನು ದಿನಾಂಕ: 24-04-2022 ರಂದು ರಾತ್ರಿ ಇಂದಿರಾ ನಗರದಲ್ಲಿರುವ ನೂರಾನಿ ಮಸೀದಿಗೆ ಹೋಗಿ ರಾತ್ರಿ ನಮಾಜ್ ಮುಗಿಸಿ ಮರಳಿ ತನ್ನ ಮನೆಯಾದ ನೆಹರೂ ನಗರಕ್ಕೆ ಹೋಗಲು ನಡೆದುಕೊಂಡು ಹೋಗುತ್ತಾ ಕೋಟೆಕೆರೆ ಕ್ರಾಸ್ ತಲುಪಿದಾಗ ರಾತ್ರಿ 22-00 ಗಂಟೆಯ ಸುಮಾರಿಗೆ ನಮೂದಿತ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಇಡಿ-7086 ನೇದನ್ನು ಮಂಗಳೂರು ಹೊಟೇಲ್ ಕ್ರಾಸ್ ಕಡೆಯಿಂದ ಅಯ್ಯಪ್ಪ ನಗರದ ಮಾರ್ಗವಾಗಿ ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಗಾಯಾಳುವಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಗಾಯಾಳುವಿನ ತಲೆಗೆ, ಮೂಗಿಗೆ ಮತ್ತು ಕೈಕಾಲುಗಳಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನಾಸೀರ್ ತಂದೆ ಅಬ್ದುಲ್ ಗಫಾರ್, ಪ್ರಾಯ-37 ವರ್ಷ, ವೃತ್ತಿ-ಬ್ಯಾಂಕ್ ಕ್ಲರ್ಕ್, ಸಾ|| ನಾಗಲಿಂಗೇಶ್ವರ ದೇವಸ್ಥಾನದ ಹತ್ತಿರ, ರಾಮನಬೈಲ್, ತಾ: ಶಿರಸಿ ರವರು ದಿನಾಂಕ: 25-04-2022 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಧರ ತಂದೆ ತಿಮ್ಮಾ ಹಸ್ಲರ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊಪ್ಪಲಕೇರಿ, ದೊಡ್ಮನೆ, ತಾ: ಸಿದ್ದಾಪುರ. ಈತನು ದಿನಾಂಕ: 25-04-2022 ರಂದು 10-30 ಗಂಟೆಗೆ ಸಿದ್ದಾಪುರ ತಾಲೂಕಿನ ಕೊಪ್ಪಲಕೇರಿಯ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 10 ಟೆಟ್ರಾ ಪ್ಯಾಕೆಟ್ ಗಳು, 2). Original Choice Deluxe Whisky 90 ML ಅಂತಾ ಬರೆದ ಖಾಲಿ 2 ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಮತ್ತು 2 ಪ್ಲಾಸ್ಟಿಕ್ ಗ್ಲಾಸುಗಳು ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕುಮಾರ್ ಕೆ, ಪೊಲೀಸ್ ನಿರೀಕ್ಷಕರು, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 25-04-2022 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಅನಂತ ತಂದೆ ಪುಟ್ಟಾ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಾರ್ಸಿಕಟ್ಟಾ, ತಾ: ಸಿದ್ದಾಪುರ. ಈತನು ದಿನಾಂಕ: 25-04-2022 ರಂದು 11-30 ಗಂಟೆಗೆ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿರುವ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನದೀüಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 06 ಟೆಟ್ರಾ ಪ್ಯಾಕೆಟ್ ಗಳು, 2). Original Choice Deluxe Whisky 90 ML ಅಂತಾ ಬರೆದ ಖಾಲಿ 2 ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಮತ್ತು 2 ಪ್ಲಾಸ್ಟಿಕ್ ಗ್ಲಾಸುಗಳು ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 25-04-2022 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 25-04-2022

at 00:00 hrs to 24:00 hrs

 

ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

ಇತ್ತೀಚಿನ ನವೀಕರಣ​ : 14-05-2022 07:36 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080