ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 25-08-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 12/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸತೀಶ ತಂದೆ ದಾಮೋದರ ಕಾಮತ್, ಪ್ರಾಯ-63 ವರ್ಷ, ವೃತ್ತಿ-ಬಿಲ್ಟ್ ನಿವೃತ್ತ ನೌಕರ, ಸಾ|| ಪಂಚರಸಿವಾಡಾ, ಕಾರವಾರ (ಮೋಟಾರ್ ಸೈಕಲ್ ನಂ: ಕೆ.ಎ-30/ವಿ-5491 ನೇದರ ಸವಾರ). ದಿನಾಂಕ: 25-08-2021 ರಂದು ರಾತ್ರಿ 20-45 ಗಂಟೆಗೆ ಪಿರ್ಯಾದಿಯು ತನ್ನ ಬಾಬ್ತು ಕಾರ್ ನಂ: ಕೆ.ಎಲ್-43/ಡಿ-3855 ನೇದನ್ನು ತಾನು ಚಲಾಯಿಸಿಕೊಂಡು ಹೋಗುತ್ತಾ ತನ್ನ ಪಕ್ಕದ ಸೀಟಿನಲ್ಲಿ ತನ್ನ ತಂದೆ: ಸೆಬಾಸ್ಟಿನ್ ಜೋಸೆಫ್ ರುಜಾರಿಯೋ ಹಾಗೂ ಕಾರಿನ ಹಿಂದಿನ ಸೀಟಿನಲ್ಲಿ ತನ್ನ ತಮ್ಮ: ಜೈನೆ ಎಂಜಲಿನ್ ಹಾಗೂ ತನ್ನ ತಾಯಿ: ಆಲ್ಟಿನ್ ಫ್ರಾನ್ಸಿಸ್ ಇವರನ್ನು ಕೂಡ್ರಿಸಿಕೊಂಡು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮುಖಾಂತರ ಕಾರವಾರ ಕಡೆಯಿಂದ ಅರ್ಗಾ ಕಡೆಗೆ ಕಾರ್ ಮೇಲಾಗಿ ಹೋಗುತ್ತಿರುವಾಗ ಬೈತಕೋಲ್ ಘಟ್ಟದ ಪೆಟ್ರೋಲ್ ಪಂಪ್ ಹತ್ತಿರ ಅಂಕೋಲಾ ಕಡೆಯಿಂದ ಬಂದಂತಹ ಮೋಟಾರ್ ಸೈಕಲ್ ನಂ: ಕೆ.ಎ-30/ವಿ-5491 ನೇದರ ಸವಾರನಾದ ನಮೂದಿತ ಆರೋಪಿತನು ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸದೇ ಒಮ್ಮೇಲೆ ರಸ್ತೆಯ ತೀರಾ ಬಲಕ್ಕೆ ತನ್ನ ಮೋಟಾರ್ ಸೈಕಲನ್ನು ಚಲಾಯಿಸಿ, ತನ್ನ ಮುಂದಿನಿಂದ ಬರುತ್ತಿದ್ದ ಪಿರ್ಯಾದಿಯ ಕಾರಿನ ಮುಂದಿನ ಭಾಗಕ್ಕೆ ತನ್ನ ಮೋಟಾರ್ ಸೈಕಲಿನ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತನ್ನ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ತನಗೆ ಹಣೆಯ ಮೇಲೆ ಗಾಯ, ಹಣೆಯ ಬಲಭಾಗ, ಬಲಗಣ್ಣಿನ ಮೇಲ್ಭಾಗ, ಹುಬ್ಬಿನ ಮೇಲೆ ಭಾರೀ ಗಾಯ, ಬಲಗಣ್ಣಿಗೆ ಗಾಯ, ಮೂಗಿನ ಮೇಲೆ ಗಾಯ, ಬಲಗಾಲಿನ ಮೊಣಕಾಲಿನ ಹತ್ತಿರ ಹಾಗೂ ಮೊಣಕಾಲಿನ ಕೆಳ ಭಾಗದಲ್ಲಿ ಗಾಯ ಮತ್ತು ಎಡಗಾಲಿನ ತೊಡೆಯ ಭಾಗಗಲ್ಲಿ ಒಳನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಅಕ್ಷಯ ಜೂಡ್ ರುಜಾರಿಯೋ ತಂದೆ ಸೆಬಾಸ್ಟಿನ್ ರುಜಾರಿಯೋ, ಪ್ರಾಯ-26 ವರ್ಷ, ವೃತ್ತಿ: ನೇವಿಯಲ್ಲಿ ಲೆಫ್ಟಿನೆಂಟ್ ಆಫೀಸರ್, ಐ.ಎನ್.ಎಸ್. ವಿಕ್ರಮಾದಿತ್ಯ, ಸಾ|| ಐ.ಎನ್.ಎಸ್ ಕದಂಬಾ, ಅರ್ಗಾ ನೇವಲ್ ಬೇಸ್, ಕಾರವಾರ ರವರು ದಿನಾಂಕ: 25-08-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 126/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗೋಪಾಲಕೃಷ್ಣ ತಂದೆ ಸಂಜೀವಕುಮಾರ ಪೂಜಾರಿ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಸಾಧನಕೇರಿ, ಯಲಿಗಾರ, ಧಾರವಾಡ (ಟಾಟಾ ಟಿಯಾಗೋ ಕಾರ್ ನಂ: ಕೆ.ಎ-16/ಎನ್-8657 ನೇದರ ಚಾಲಕ). ಈತನು ದಿನಾಂಕ: 25-08-2021 ರಂದು 07-20 ಗಂಟೆಗೆ ಅಂಕೋಲಾ ತಾಲೂಕಿನ ಹೆಬ್ಬುಳದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಮೇಲೆ ಬಾಬ್ತು ಟಾಟಾ ಟಿಯಾಗೋ ಕಾರ್ ನಂ: ಕೆ.ಎ-16/ಎನ್-8657 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಕಾರ್ ಮೇಲಿನ ನಿಯಂತ್ರಣ ಕಳೆದುಕೊಂಡು ಕಾರನ್ನು ರಸ್ತೆಯ ಬಲಬದಿಯ ಗಟಾರದಲ್ಲಿ ಪಲ್ಟಿ ಪಡಿಸಿ ಅಪಘಾತ ಪಡಿಸಿದ್ದು, ಈ ಅಪಘಾತದಿಂದ ಪಿರ್ಯಾದಿಗಾಗಲಿ ಹಾಗೂ ತನ್ನ ಕಾರ್ ಚಾಲಕನಾದ ಆರೋಪಿತನಿಗಾಗಲಿ ಯಾವುದೇ ಗಾಯನೋವು ಆಗಿರುವುದಿಲ್ಲ. ಅಪಘಾತದ ಸ್ಥಳದಲ್ಲಿ ಸೇರಿದ ಜನರು ಕಾರನ್ನು ಎತ್ತಿ ನಿಲ್ಲಿಸಿದಾಗ ಕಾರಿನ ಇಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ನೋಡುತ್ತಿದ್ದಂತೆಯೆ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶ್ರೀಹರಿ ಬಿ. ಆರ್. ತಂದೆ ಋಷ್ಯಶೃಂಗ, ಪ್ರಾಯ-30 ವರ್ಷ, ವೃತ್ತಿ-ರೀಜನಲ್ ಮ್ಯಾನೇಜರ್, ಸಾ|| ತಾಳವಟ್ಟಿ, ತಾ: ಹಿರಿಯೂರು, ಜಿ: ಚಿತ್ರದುರ್ಗ ರವರು ದಿನಾಂಕ: 25-08-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 98/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀನಿವಾಸ ತಂದೆ ತಿಮ್ಮಯ್ಯ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಪಾನಶಾಪ್ ಅಂಗಡಿ, ಸಾ|| ರಘುನಾಥ ರೋಡ್, ಮಣ್ಕುಳಿ, ತಾ: ಭಟ್ಕಳ. ಈತನು ದಿನಾಂಕ: 25-08-2021 ರಂದು 16-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಬಂದರ್ ರಸ್ತೆಯ ಈದ್ಗಾ ಮೈದಾನದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 2,100/- ರೂಪಾಯಿ ಮತ್ತು ಓ.ಸಿ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 25-08-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 99/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸೋಮಪ್ಪ @ ಸೋಮಯ್ಯ ತಂದೆ ಮಂಜಪ್ಪ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜಾಲಿ, ತಾ: ಭಟ್ಕಳ, 2]. ನಾಗರಾಜ ತಂದೆ ಅಣ್ಣಪ್ಪ ಮೊಗೇರ, ಸಾ|| ಮುಂಡಳಿ, ತಾ: ಭಟ್ಕಳ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 25-08-2021 ರಂದು 18-30 ಗಂಟೆಗೆ ಭಟ್ಕಳ ಶಹರದ ಬಂದರ್ ರಸ್ತೆಯ ಈದ್ಗಾ ಮೈದಾನದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 820/- ರೂಪಾಯಿ ಮತ್ತು ಓ.ಸಿ ಜೂಗಾರಾಟದ ಸಲಕರಣೆಗಳ ಸಮೇತ ಪಿರ್ಯಾದಿಗೆ ಸೆರೆ ಸಿಕ್ಕಿದ್ದು, ಆರೋಪಿ 1 ನೇಯವನು ಆ ಎಲ್ಲಾ ಹಣ ಮತ್ತು ಓ.ಸಿ ಚೀಟಿಯನ್ನು ಓ.ಸಿ ಬುಕ್ಕಿಯಾದ ಆರೋಪಿ 2 ನೇಯವನಿಗೆ ನೀಡುವ ಕುರಿತು ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 25-08-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಬಾಬುರಾವ್ ಸುತಾರ, ಪ್ರಾಯ-47 ವರ್ಷ, ವೃತ್ತಿ-ಚಾಲಕ, ಸಾ|| ನ್ಯೂಟೌನ್ ಶಿಪ್, ದಾಂಡೇಲಿ (ಓಮಿನಿ ಕಾರ್ ನಂ: ಕೆ.ಎ-65/ಎಮ್-0726 ನೇದರ ಚಾಲಕ). ಈತನು ದಿನಾಂಕ: 25-08-2021 ರಂದು 14-30 ಗಂಟೆಯ ಸುಮಾರಿಗೆ ತನ್ನ ಓಮಿನಿ ಕಾರ್ ನಂ: ಕೆ.ಎ-65/ಎಮ್-0726 ನೇದನ್ನು ಉಳವಿ ಕಡೆಯಿಂದ ಪೋಟೋಳಿ-ದಾಂಡೇಲಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹುಡಸಾ ಕ್ರಾಸ್ ಹತ್ತಿರ ದಾಂಡೇಲಿ-ಪೋಟೋಳಿ-ಉಳವಿ ರಸ್ತೆಯ ಮೇಲೆ, ದಾಂಡೇಲಿ-ಪೋಟೋಳಿ ಕಡೆಯಿಂದ ಉಳವಿಗೆ ಹೋಗುತ್ತಿದ್ದ ಗಾಯಾಳು ಸುರೇಶ ತಂದೆ ಯಲ್ಲಪ್ಪ ತೋಟಗಿ, ಪ್ರಾಯ-52 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ದೇವರಸಿಗೆಹಳ್ಳಿ, ತಾ: ಕಿತ್ತೂರು, ಜಿ: ಬೆಳಗಾವಿ ಈತನು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-22/ಇ.ಬಿ-9275 ನೇದಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ, ಮೋಟಾರ್ ಸೈಕಲ್ ನಂ: ಕೆ.ಎ-22/ಇ.ಬಿ-9275 ನೇದರ ಸವಾರ ಸುರೇಶ ತಂದೆ ಯಲ್ಲಪ್ಪ ತೋಟಗಿ ಹಾಗೂ ಹಿಂಬದಿಯ ಸವಾರ ಮಲ್ಲೇಶ ತಂದೆ ಬಸಪ್ಪ ಗುಂಡಗಾವಿ, ಪ್ರಾಯ-44 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ದೇವರಸಿಗೆಹಳ್ಳಿ, ತಾ: ಕಿತ್ತೂರು, ಜಿ: ಬೆಳಗಾವಿ ಇವರಿಬ್ಬರಿಗೆ ಬಲಗಾಲಿಗೆ ಹಾಗೂ ಬಲಗೈಗೆ ರಕ್ತಗಾಯ ಉಂಟು ಪಡಿಸಿ, ಎರಡು ವಾಹನಗಳನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಲ್ಲಪ್ಪ ತಂದೆ ನಿಂಗಪ್ಪ ಬಾವಿ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ದೇವರಸಿಗೆಹಳ್ಳಿ, ತಾ: ಕಿತ್ತೂರು, ಜಿ: ಬೆಳಗಾವಿ ರವರು ದಿನಾಂಕ: 25-08-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 87/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ಗಣಪತಿ ಹೆಗಡೆ, ಪ್ರಾಯ-57 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗಾಣಗಿ,  ತಾ: ಶಿರಸಿ, 2]. ಅನಂತ ಗೋಪಾಲ ಭಟ್, ಪ್ರಾಯ-58 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೊಪ್ಪನಳ್ಳಿ, ತಾ: ಶಿರಸಿ, 3]. ರಘುಪತಿ ವರದೇಶ್ವರ ಭಟ್, ಪ್ರಾಯ-67 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೊಪ್ಪನಳ್ಳಿ, ತಾ: ಶಿರಸಿ, 4]. ಕೃಷ್ಣಮೂರ್ತಿ ರಾಮಾ ಹೆಗಡೆ, ಪ್ರಾಯ-58 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬಿಸಲಕೊಪ್ಪ, ತಾ: ಶಿರಸಿ, 5]. ಗಜಾನನ ಗೋಪಾಲ ಹೆಗಡೆ, ಪ್ರಾಯ-70 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಿಗೇಹಳ್ಳಿ, ತಾ: ಶಿರಸಿ, 6]. ನಾರಾಯಣ ವೆಂಕಟರಮಣ ಭಟ್, ಪ್ರಾಯ-62 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗೋಸೆ, ಶಿವಳ್ಳಿ ಗ್ರಾಮ, ತಾ: ಶಿರಸಿ, 7]. ಮಹಾಬಲೇಶ್ವರ ರಾಮಕೃಷ್ಣ ಭಟ್, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗೋಳಿಕೊಪ್ಪ, ತಾ: ಶಿರಸಿ, 8]. ವಿಘ್ನೇಶ್ವರ ಗಜಾನನ ಹೆಗಡೆ, ಪ್ರಾಯ-54 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೊಪ್ಪನಳ್ಳಿ, ತಾ: ಶಿರಸಿ, 9]. ಗೋಪಾಲಕೃಷ್ಣ ರಘುಪತಿ ಭಟ್, ಪ್ರಾಯ-59 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೊಪ್ಪನಳ್ಳಿ, ತಾ: ಶಿರಸಿ, 10]. ವೆಂಕಟರಮಣ ನಾರಾಯಣ ಹೆಗಡೆ, ಪ್ರಾಯ-73 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಸದಕುಣಿ, ಬೆಳಲೆ ಗ್ರಾಮ, ತಾ: ಶಿರಸಿ, 11]. ಚಂದ್ರಶೇಖರ ರಾಮಚಂದ್ರ ಹೆಗಡೆ, ಪ್ರಾಯ-53 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೆಡಸಗಾಂವ, ತಾ: ಶಿರಸಿ, 12]. ನಾರಾಯಣ ಗಂಗಾಧರ ಹೆಗಡೆ, ಪ್ರಾಯ-58 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ರಾಗಿಹೊಸಳ್ಳಿ, ತಾ: ಶಿರಸಿ, 13]. ಮೋಹನ ಗಣಪತಿ ಹೆಗಡೆ, ಪ್ರಾಯ-60 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೊಪ್ಪನಳ್ಳಿ, ತಾ: ಶಿರಸಿ, 14]. ಶಂಭು ಗಣಪತಿ ಹೆಗಡೆ, ಪ್ರಾಯ-60 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೊಪ್ಪನಳ್ಳಿ, ತಾ: ಶಿರಸಿ, 15]. ವೆಂಕಟ್ರಮಣ ಮಂಜುನಾಥ ಹೆಗಡೆ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬಿಸಲಕೊಪ್ಪ, ತಾ: ಶಿರಸಿ, 16]. ಮಧುಕೇಶ್ವರ ಗಣಪತಿ ಭಟ್, ಪ್ರಾಯ-58 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೊಪ್ಪನಳ್ಳಿ, ತಾ: ಶಿರಸಿ, 17]. ಬಾಲಚಂದ್ರ ನಾಗಪತಿ ಭಟ್, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗೋಳಿಕೊಪ್ಪ, ತಾ: ಶಿರಸಿ, 18]. ಶಾಂತಾರಾಮ ಮಹಾಬಲೇಶ್ವರ ಭಟ್, ಪ್ರಾಯ-69 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗೋಳಿಕೊಪ್ಪ, ತಾ: ಶಿರಸಿ, 19]. ಮಹಾಬಲೇಶ್ವರ ಶಂಭುಲಿಂಗ ಭಟ್, ಪ್ರಾಯ-57 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೊಪ್ಪನಳ್ಳಿ, ತಾ: ಶಿರಸಿ, 20]. ಲಕ್ಷ್ಮೀನಾರಾಯಣ ಮಹಾಬಲೇಶ್ವರ ಹೆಗಡೆ, ಪ್ರಾಯ-62 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಸಲಕುಣಿ, ಬೆಳಲೆ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 25-08-2021 ರಂದು 00-15 ಗಂಟೆಗೆ ಶಿರಸಿ ತಾಲೂಕಿನ ಬೊಪ್ಪನಳ್ಳಿಯ ಆರೋಪಿ 19 ನೇಯವನ ಮನೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅದೃಷ್ಟದ ಆಟವಾದ ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಜುಗಾರಾಟದ ಮೇಲೆ ತಮ್ಮ ತಮ್ಮ ಲಾಭಕ್ಕಾಗಿ ಹಣವನ್ನು ಪಂಥ ಕಟ್ಟಿ ಆಡುತ್ತಿದ್ದಾಗ ಜುಗಾರಾಟದ ಸಲಕರಣೆಗಳಾದ 1). ಇಸ್ಪೀಟ್ ಎಲೆಗಳು-52, ಅ||ಕಿ|| 00.00/- ರೂಪಾಯಿ, 2). ನಗದು ಹಣ 87,205/- ರೂಪಾಯಿ, 3). ಹಳೆ ಕಂಬಳಿ-2, ಅ||ಕಿ|| 00.00/- ರೂಪಾಯಿ, 4). ಬ್ಯಾಟರಿ-2, ಅ||ಕಿ|| 00.00/- ರೂಪಾಯಿ ಇವುಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಮಚಂದ್ರ ನಾಯಕ್, ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ ವೃತ್ತ, ಶಿರಸಿ ರವರು ದಿನಾಂಕ: 25-08-2021 ರಂದು 04-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 99/2021, ಕಲಂ: 87 ಕರ್ನಾಟಪ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಮಾಕಾಂತ ಮಂಜ್ಯಾ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, 2]. ರವೀಂದ್ರ ದೊಡ್ಡಯ್ಯಾ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, 3]. ಸುಧಾಕರ ಕನ್ನಾ ಮಡಿವಾಳ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, 4]. ಅಣ್ಣಪ್ಪಾ ತಂದೆ ವೆಂಕಟೆಶ ಗೌಡ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, 5]. ಮಂಜುನಾಥ ಶ್ರೀಧರ ಪೂಜಾರಿ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, 6]. ರಾಮಚಂದ್ರ ಗೋವಿಂದ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, 7]. ಗಜಾನನ ದುರ್ಗಪ್ಪಾ ಬಳೆಗಾರ, ಪ್ರಾಯ-48 ವರ್ಷ, ವೃತ್ತಿ-ಬಳೆ ವ್ಯಾಪಾರ, ಸಾ|| (ಎಲ್ಲರೂ) ಬಿಳಗಿ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 24-08-2021 ರಂದು ರಾತ್ರಿ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳಗಿ ಶಾಲೆಯ ಹತ್ತಿರ ಆರೋಪಿ 1 ನೇಯವನ ಮನೆಯ ಹತ್ತಿರದ ಸಾರ್ವಜನಿಕ ಕಚ್ಚಾ ರಸ್ತೆಯಲ್ಲಿ ಮೇಲೆ ಆರೋಪಿತರೆಲ್ಲರೂ ಸೇರಿಕೊಂಡು ತಮ್ಮ ತಮ್ಮ ಲಾಭಕ್ಕೋಸ್ಕರ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ಸಮಯ 19-15 ಗಂಟೆಗೆ ದಾಳಿಯ ಕಾಲಕ್ಕೆ ನಗದು ಹಣ 1,250/- ರೂಪಾಯಿ, ಇಸ್ಪೀಟ್ ಎಲೆಗಳು-52, ಮಂಡಕ್ಕೆ ಹಾಸಿದ ಟವೆಲ್-1 ಹಾಗೂ ಅರ್ಧ ಉರಿದ ಮೇಣದ ಬತ್ತಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 25-08-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 25-08-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 47/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾಗೇಶ ತಂದೆ ನಾರಾಯಣ ನಾಯ್ಕ, ಪ್ರಾಯ-68 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರಕುಳಿ, ತಾ: ಅಂಕೋಲಾ. ಇವರು ದಿನಾಂಕ: 23-08-2021 ರಂದು ಸಾಯಂಕಾಲ 04-00 ಗಂಟೆಗೆ ಅಂಕೋಲಾ ತಾಲೂಕಿನ ಶಿರಕುಳಿಯ ತನ್ನ ಮನೆಯಿಂದ ಹೋದವರು ಗಾಳ ಹಾಕಿ ಮೀನು ಹಿಡಿಯಲೋ ಅಥವಾ ಇನ್ನಾವುದೋ ಕಾರಣಕ್ಕೆ ಅಂಕೋಲಾ ತಾಲೂಕಿನ ಬೆಲೇಕೇರಿ ಸಮುದ್ರಕ್ಕೆ ಬಂದವರು, ಗಾಳ ಹಾಕಿ ಮೀನು ಹಿಡಿಯುತ್ತಿರಬೇಕಾದರೆ ಅಥವಾ ಇನ್ನಾವುದೋ ಕಾರಣಕ್ಕೆ ಸುಮುದ್ರದ ನೀರಿನಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅವರ ಮೃತದೇಹವು ದಿನಾಂಕ: 25-08-2021 ರಂದು ಬೆಳಿಗ್ಗೆ 08-00 ಗಂಟೆಗೆ ಅಂಕೋಲಾ ತಾಲೂಕಿನ ಬೆಲೇಕೇರಿಯ ಕೋಡಿಸಾಲ ಹಳ್ಳದ ಹತ್ತಿರ ಸಮುದ್ರದ ದಡದಲ್ಲಿ ಸಿಕ್ಕಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಿರೀಶ ತಂದೆ ನಾಗೇಶ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಶಿರಕುಳಿ, ತಾ: ಅಂಕೋಲಾ ರವರು ದಿನಾಂಕ: 25-08-2021 ರಂದು 09-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 48/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಅನಿತಾ ಕೋಂ. ಪ್ರಶಾಂತ ಅಂಬಿಗ, ಪ್ರಾಯ-28 ವರ್ಷ, ವೃತ್ತಿ-ಗೃಹಿಣಿ, ಸಾ|| ಮಂಗನಖಾನ, ಮೊಗಟಾ, ತಾ: ಅಂಕೋಲಾ. ಸುದ್ದಿದಾರಳ ತಂಗಿಯಾದ ಇವಳು ದಿನಾಂಕ: 14-08-2021 ರಂದು ಸಾಯಂಕಾಲ 13-45 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಮೊಗಟಾದ ಮಂಗನಖಾನದಲ್ಲಿರುವ ತನ್ನ ಮನೆಯ ಹಿಂದುಗಡೆ ನೀರು ಕಾಯಿಸುವ ಒಲೆಯಲ್ಲಿ ಹಸಿ ಕಟ್ಟಿಗೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುತ್ತಿರುವಾಗ ಕಟ್ಟಿಗೆಯ ಮೇಲೆ ಸೀಮೆ ಎಣ್ಣೆ ಜಾಸ್ತಿ ಬಿದ್ದಿದ್ದರಿಂದ ಒಮ್ಮೇಲೆ ಬೆಂಕಿ ಜೋರಾಗಿ ಹೊತ್ತಿಕೊಂಡು ಶ್ರೀಮತಿ ಅನಿತಾ ಇವಳು ಧರಿಸಿದ ವೆಲ್ವೇಟ್ ಬಟ್ಟೆಯ ನೈಟಿಗೆ ಬೆಂಕಿ ಹತ್ತಿಕೊಂಡು ಶ್ರೀಮತಿ ಅನಿತಾ ಇವಳ ಎರಡು ಕೈ, ಕಾಲು, ಮುಖಕ್ಕೆ, ಬೆನ್ನಿಗೆ ಹಾಗೂ ಮೈಮೇಲೆ ಅಲ್ಲಲ್ಲಿ ಸುಟ್ಟ ಗಾಯ ಹೊಂದಿದ್ದವಳಿಗೆ ಚಿಕಿತ್ಸೆಗಾಗಿ ಕುಮಟಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆ.ಎಸ್ ಹೆಗಡೆ ಆಸ್ಪತ್ರೆಯಲ್ಲಿ ದಾಖಲಾದವಳು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 25-08-2021 ರಂದು ಬೆಳಗಿನ ಜಾವ 03-57 ಗಂಟೆಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀಮತಿ ಸುಮನಾ ಕೋಂ. ಗಣಪತಿ ಅಂಬಿಗ, ಪ್ರಾಯ-35 ವರ್ಷ, ವೃತ್ತಿ-ಗೃಹಿಣಿ, ಸಾ|| ಮಂಗನಖಾನ, ಮೊಗಟಾ, ತಾ: ಅಂಕೋಲಾ ರವರು ದಿನಾಂಕ: 25-08-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 26-08-2021 02:19 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080