ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 25-12-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಅವನೀಶ್ ಕುಮಾರ ಯಾದವ ತಂದೆ ಲಕ್ಷ್ಮಣ ಯಾದವ, ಪ್ರಾಯ-22 ವರ್ಷ, ವೃತ್ತಿ-ಮೆಕ್ಯಾನಿಕ್ ಇಂಜಿನಿಯರ್ ಪಸ್ಟ್ ಕ್ಲಾಸ್ ಐ.ಎನ್.ಎಸ್. ವಿಕ್ರಮಾದಿತ್ಯ ಪಿ. ನಂ: 249191-ಡಬ್ಲ್ಯೂ, ಸಾ|| ಡಿಯೋಸಿಯಾ ಪೋಸ್ಟ್, ತಾ: ಬರಹಾಜ, ಜಿ: ಡಿಯೋರಿಯಾ, ಉತ್ತರ ಪ್ರದೇಶ ರಾಜ್ಯ, ಹಾಲಿ ಸಾ|| ಐ.ಎನ್.ಎಸ್ ವಿಕ್ರಮಾದಿತ್ಯ, ನೇವಲ್ ನೇಸ್, ಕಾರವಾರ. ಈತನು ಐ.ಎನ್.ಎಸ್. ವಿಕ್ರಮಾದಿತ್ಯದಲ್ಲಿ ಮೆಕ್ಯಾನಿಕ್ ಇಂಜಿನಿಯರ್ ಪಸ್ಟ್ ಕ್ಲಾಸ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವನು, ರಜೆಯನ್ನು ಪಡೆದುಕೊಂಡು ಮರಳಿ ದಿನಾಂಕ: 06-07-2021 ರಂದು ಪುನಃ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಕುರಿತು ದಿನಾಂಕ: 26-06-2021 ರಂದು ತನ್ನ ಸ್ವಂತ ಊರಾದ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಬರಹಾಜ ತಾಲೂಕಿನ ಡಿಯೋಸಿಯಾ ಗ್ರಾಮದಿಂದ ಹೊರಟವನು, ಕರ್ತವ್ಯಕ್ಕೆ ಮರಳಿ ಹಾಜರಾಗದೇ ಕಲಂ: 83 ನೇವಿ ಎಕ್ಟ್-1957 ನೇದರ ಪ್ರಕಾರ ಬಂಧನದ ವಾರೆಂಟಗೂ ಸಿಗದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಆದಿತ್ಯ ಪ್ರಕಾಶ, ಪ್ರಾಯ-35 ವರ್ಷ, ವೃತ್ತಿ-ಲೆಪ್ಟಿನೆಂಟ್ ಕಮಾಂಡರ್ ಎಟ್ ಆಮ್ರ್ಸ್, ರೆಗ್ಯೂಲೆಟಿಂಗ್ ಆಫೀಸರ್ ಪೊರ್ ಕಮಾಂಡಿಂಗ್ ಆಫೀಸರ್, ಸಾ|| ಐ.ಎನ್.ಎಸ್ ವಿಕ್ರಮಾದಿತ್ಯ, ನೇವಲ್ ನೇಸ್, ಕಾರವಾರ ರವರು ದಿನಾಂಕ: 25-12-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಗೋವಿಂದ್ ಸಿಂಗ್ ತಂದೆ ರಮೇಶ ಚಂದ್ರ, ಪ್ರಾಯ-24 ವರ್ಷ, ವೃತ್ತಿ-ಸೀ ಮ್ಯಾನ್ ಪಸ್ಟ್ ಕ್ಲಾಸ್ (ರಡಾರ್ ಎಂಡ್ ಪ್ಲೋಟ್ಸ್) ಐ.ಎನ್.ಎಸ್ ವಿಕ್ರಮಾದಿತ್ಯ ಪಿ. ನಂ: 250589-ವಾಯ್, ಸಾ|| ನಾಗ್ಲಾತ್ರೀಲೋಕ ಗ್ರಾಮ, ಭೌತ್ ಪೋಸ್ಟ್, ತಾ: ಜಶ್ವಂತನಗರ, ಜಿ: ಇತ್ವಾ, ಉತ್ತರ ಪ್ರದೇಶ ರಾಜ್ಯ, ಹಾಲಿ ಸಾ|| ಐ.ಎನ್.ಎಸ್ ವಿಕ್ರಮಾದಿತ್ಯ, ನೇವಲ್ ನೇಸ್, ಕಾರವಾರ. ಈತನು ಐ.ಎನ್.ಎಸ್. ವಿಕ್ರಮಾದಿತ್ಯದಲ್ಲಿ ಸೀ-ಮ್ಯಾನ್ ಪಸ್ಟ್ ಕ್ಲಾಸ್ (ರಡಾರ್ ಎಂಡ್ ಪ್ಲೋಟ್ಸ್) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವನು, ರಜೆಯನ್ನು ಪಡೆದುಕೊಂಡು ಮರಳಿ ದಿನಾಂಕ: 25-07-2021 ರಂದು ಪುನಃ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಕುರಿತು ದಿನಾಂಕ: 23-07-2021 ರಂದು ತನ್ನ ಸ್ವಂತ ಊರಾದ ಉತ್ತರ ಪ್ರದೇಶದ ಇತ್ವಾ ಜಿಲ್ಲೆಯ ಜಶ್ವಂತನಗರ ತಾಲೂಕಿನ ನಾಗ್ಲಾತ್ರೀಲೋಕ ಗ್ರಾಮದಿಂದ ಹೊರಟವನು ಕರ್ತವ್ಯಕ್ಕೆ ಮರಳಿ ಹಾಜರಾಗದೇ ಕಲಂ: 83 ನೇವಿ ಎಕ್ಟ್-1957 ನೇದರ ಪ್ರಕಾರ ಬಂಧನದ ವಾರೆಂಟಗೂ ಸಿಗದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಆದಿತ್ಯ ಪ್ರಕಾಶ, ಪ್ರಾಯ-35 ವರ್ಷ, ವೃತ್ತಿ-ಲೆಪ್ಟಿನೆಂಟ್ ಕಮಾಂಡರ್ ಎಟ್ ಆಮ್ರ್ಸ್, ರೆಗ್ಯೂಲೆಟಿಂಗ್ ಆಫೀಸರ್ ಪೊರ್ ಕಮಾಂಡಿಂಗ್ ಆಫೀಸರ್, ಸಾ|| ಐ.ಎನ್.ಎಸ್ ವಿಕ್ರಮಾದಿತ್ಯ, ನೇವಲ್ ನೇಸ್, ಕಾರವಾರ ರವರು ದಿನಾಂಕ: 25-12-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 90/2021, ಕಲಂ: 8(c), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಮೋತಿಲಾಲ್ ಬದ್ದಿ, ಪ್ರಾಯ-49 ವರ್ಷ, ಸಾ|| ಪ್ರಶಾಂತ ನಗರ, ಹಳೇ ಹುಬ್ಬಳ್ಳಿ, ಹುಬ್ಬಳ್ಳಿ. ಈತನು ದಿನಾಂಕ: 25-12-2021 ರಂದು ಸಾಯಂಕಾಳ 18-00 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಸಾಣಿಕಟ್ಟಾ ಮೂಡಂಗಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಸುಮಾರು 40,000/- ರೂಪಾಯಿ ಮೌಲ್ಯದ 02 ಕೆ.ಜಿ 46 ಗ್ರಾಂ ತೂಕದ ಗಾಂಜಾ ಮಾದಕ ವಸ್ತುಗಳನ್ನು ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡಲು ಹೋಗುತ್ತಿದ್ದವನಿಗೆ ಪಿರ್ಯಾದಿಯವರು ಮಾಹಿತಿ ಬಂದ ಮೇರೆಗೆ ದಾಳಿ ಮಾಡಿದ ಕಾಲಕ್ಕೆ ಗಾಂಜಾ ಹಾಗೂ ಇನ್ನಿತರ ಸಲಕರಣೆಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಸಂತ ಆರ್. ಆಚಾರ್, ಪೊಲೀಸ್ ನಿರೀಕ್ಷಕರು, ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 25-12-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 224/2021, ಕಲಂ: 279, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಕಾರ್ ನಂ: ಕೆ.ಎ-03/ಡಿ-8370 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ. ಈತನು ದಿನಾಂಕ: 25-12-2021 ರಂದು 14-00 ಗಂಟೆಯ ಸುಮಾರಿಗೆ ಮಿರ್ಜಾನ ರಿಕ್ಷಾ ಸ್ಟ್ಯಾಂಡ್ ಹತ್ತಿರ ಲಕ್ಷ್ಮೀ ನಾರಾಯಣ ದೇವಸ್ಥಾನದ ಎದುರಿಗೆ ತನ್ನ ಕಾರ್ ನಂ: ಕೆ.ಎ-03/ಡಿ-8370 ನೇದನ್ನು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೆಲೇ ರಸ್ತೆಯ ಎಡಬದಿಗೆ ಬಂದು ರಸ್ತೆಯ ಬದಿಯಲ್ಲಿ ನಿಂತ ಪಿರ್ಯಾದಿಯ ತಾಯಿ ಶ್ರೀಮತಿ ದೇವಿ ಜನ್ನು ಪಟಗಾರ, ಪ್ರಾಯ-65 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೋಡ್ಕಣಿ, ಬಾಳೇರಿ ಕೇರಿ, ತಾ: ಕುಮಟಾ, ಇವಳಿಗೆ ವಾಹನ ಬಡಿಯುವಂತೆ ಮಾಡಿ ಅಪಘಾತ ಪಡಿಸಿ, ರಸ್ತೆಯ ಮೇಲೆ ಬೀಳುವಂತೆ ಮಾಡಿ, ಅವಳ ತಲೆಗೆ ಮತ್ತು ಬಲಗಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿಯುವಂತೆ ಮಾಡಿ ಗಂಭೀರ ಸ್ವರೂಪದ ಗಾಯ ಪಡಿಸಿ, ಆರೋಪಿ ಕಾರ್ ಚಾಲಕನು ತನ್ನ ಕಾರನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಹಾಬಲೇಶ್ವರ ತಂದೆ ಜನ್ನು ಪಟಗಾರ, ಪ್ರಾಯ-49 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೋಡ್ಕಣಿ, ಬಾಳೇರಿ ಕೇರಿ, ತಾ: ಕುಮಟಾ ರವರು ದಿನಾಂಕ: 25-12-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 154/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಜಯಂತ ತಂದೆ ಗಣಪತಿ ನಾಯ್ಕ, ಪ್ರಾಯ-46 ವರ್ಷ, ಸಾ|| ಜಲವಳ್ಳಿ, ಕರ್ಕಿ, ತಾ: ಹೊನ್ನಾವರ. ಈತನು ಪಿರ್ಯಾದಿ ಹಾಗೂ ಸತೀಶ ನಾಯ್ಕ ಇವರೊಂದಿಗೆ ಕೂಡಿ ದಿನಾಂಕ: 24-12-2021 ರಂದು ಬಳ್ಕೂರಿನ ಹಾಮಕ್ಕಿಯಲ್ಲಿ ಎಂಗೇಜಮೆಂಟ್ ಕಾರ್ಯಕ್ರಮದ ಅಡುಗೆ ಕೆಲಸಕ್ಕೆ ಹೋಗಿ, ಕೆಲಸ ಮುಗಿಸಿ ಮರಳಿ ಶರಾವತಿ ನದಿ ದಾಟಿ ಜಲವಳ್ಳಿ ಕರ್ಕಿಯಲ್ಲಿರುವ ಮನೆಗೆ ಹೋಗಲು ಪಿರ್ಯಾದಿ ಹಾಗೂ ಸತೀಶ ನಾಯ್ಕ ಇವರ ಜೊತೆಯಲ್ಲಿ ಬಳ್ಕೂರಿನ ಶರಾವತಿ ನದಿ ದಡಕ್ಕೆ ಬಂದು ಧರ್ಮ ಗಣೇಶ ನಾಯ್ಕ ಇವರ ದೋಣಿಯಲ್ಲಿ ಹತ್ತುತ್ತಿದ್ದಾಗ ಮಧ್ಯಾಹ್ನ 16-15 ಗಂಟೆಯ ಸುಮಾರಿಗೆ ಆಕಸ್ಮಾತ್ ಆಗಿ ಕಾಲು ಜಾರಿ ದೋಣಿಯ ಮೇಲಿನಿಂದ ನದಿಯ ನೀರಿನಲ್ಲಿ ಬಿದ್ದು ಮುಳುಗಿ ಕಾಣೆಯಾಗಿದ್ದವನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರದೀಪ ತಂದೆ ಗಣಪತಿ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಅಡುಗೆ ಕೆಲಸ, ಸಾ|| ಜಲವಳ್ಳಿ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 25-12-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 114/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಐ.ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ನು ಲಾರಿ ನಂ: ಟಿ.ಎನ್-47/ಎ.ಎಫ್-1244 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 25-12-2021 ರಂದು 17-30 ಗಂಟೆಗೆ ಬಸ್ತಿ ಉತ್ತರಕೊಪ್ಪ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ತನ್ನ ಲಾರಿ ನಂ: ಟಿ.ಎನ್-47/ಎ.ಎಫ್-1244 ನೇದನ್ನು ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿಯ ಮೋಟಾರ್ ಸೈಕಲನ್ನು ಓವರಟೇಕ್ ಮಾಡಿ ಮುಂದೆ ಹೋಗುತ್ತಿದ್ದವನು, ಮುಂದೆ ಐ.ಆರ್.ಬಿ ರಸ್ತೆ ನಿರ್ಮಾಣದ ಪ್ರಯುಕ್ತ ಐ.ಆರ್.ಬಿ ಕಂಪನಿಯವರು ತಮ್ಮ ಕಂಪನಿಯ ಬ್ಯಾರಿಕೇಡ್ ಗಳನ್ನು ಅಳವಡಿಸಿ ರಸ್ತೆಯನ್ನು ಬಂದ್ ಮಾಡಿದ್ದರಿಂದ ಅಲ್ಲಿ ರಸ್ತೆ ಅಗಲ ಕಡಿಮೆ ಇದ್ದು, ಆರೋಪಿ ಲಾರಿ ಚಾಲಕನು ಮುಂದೆ ಭಟ್ಕಳ ಕಡೆಗೆ ಹೋಗುತ್ತಿದ್ದ ಪ್ಲೆಸರ್ ಸ್ಕೂಟಿ ನಂ: ಕೆ.ಎ-47/ಆರ್-7160 ನೇದಕ್ಕೆ ಓವರಟೇಕ್ ಮಾಡಿಕೊಂಡು ಮುಂದೆ ಹೋಗುವಾಗ ಲಾರಿಯ ಹಿಂಭಾಗದ ಎಡತುದಿಯ ಯಾವುದೋ ಭಾಗವನ್ನು ಪಿರ್ಯಾದಿಯ ತಂಗಿ ಮಗಳಾದ ಸೋನಿ ಸತೀಶ ನಾಯ್ಕ, ಇವಳು ಚಲಾಯಿಸುತ್ತಿದ್ದ ಪ್ಲೆಸರ್ ಸ್ಕೂಟಿ ನಂ: ಕೆ.ಎ-47/ಆರ್-7160 ನೇದಕ್ಕೆ ತಾಗಿಸಿದ್ದರಿಂದ ಸ್ಕೂಟಿ ಚಾಲಕಿಯು ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಹಿಂಬದಿ ಸವಾರಳೊಂದಿಗೆ ರಸ್ತೆಯ ಮೇಲೆ ಬಿದ್ದು, ಸ್ಕೂಟಿ ಹಿಂಬದಿ ಸವಾರಳಾದ ಪಿರ್ಯಾದಿಯ ತಂಗಿ ಕವಿತಾ ಸತೀಶ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಅಂಗನವಾಡಿ ಕಾರ್ಯಕರ್ತೆ, ಸಾ|| ಮಣ್ಕುಳಿ, ತಾ: ಭಟ್ಕಳ ಇವಳಿಗೆ ಬಲಬದಿಯ ತಲೆಯ ಭಾಗಕ್ಕೆ, ಎಡಬದಿಯ ಕಣ್ಣಿನ ಹತ್ತಿರ, ಎಡಗಾಲಿನ ಮೊಣಗಂಟಿನ ಕೆಳಗೆ ಗಾಯನೋವು ಪಡಿಸಿ, ತನ್ನ ಲಾರಿಯನ್ನು ನಿಲ್ಲಿಸದೇ ಮುಂದೆ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗಂಗಾಧರ ತಂದೆ ತಿಮ್ಮಪ್ಪ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ವ್ಯವಹಾರ, ಸಾ|| ಮಂಕಿ, ದೇವರಗದ್ದೆ, ತಾ: ಹೊನ್ನಾವರ ರವರು ದಿನಾಂಕ: 25-12-2021 ರಂದು 20-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 237/2021, ಕಲಂ: 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಉಲ್ಲಾಸ ತಂದೆ ರಾಮಚಂದ್ರ ಗಾಂವಕರ, ಪ್ರಾಯ-61 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮಾದೇವಕೊಪ್ಪಾ, ತಾ: ಯಲ್ಲಾಪುರ. ಈತನು ದಿನಾಂಕ: 25-12-2021 ರಂದು ರಾತ್ರಿ 08-30 ಗಂಟೆಯ ಸುಮಾರಿಗೆ ತನಗೆ ಸಂಬಂಧಿಸಿದ ಯಲ್ಲಾಪುರ ತಾಲೂಕಿನ ಮಾದೇವಕೊಪ್ಪಾ ಗ್ರಾಮದ ತನ್ನ ಮನೆಯ ಮುಂದೆ ಇರುವ ತಾತ್ಕಾಲಿಕ ಶೆಡ್ಡಿನಲ್ಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾದಿಯವರು ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಸ್ಭೆರಿ ದಾಳಿ ಮಾಡಿದಾಗ 1). ಖಾಲಿ ಪ್ಲಾಸ್ಟಿಕ್ ಗ್ಲಾಸ್-02, 2). 0RIGINAL CHOICE-90 ML ಅಂತಾ ಲೇಬಲ್ ಇರುವ ಮದ್ಯದ ಖಾಲಿ ಪೌಚ್ ಗಳು-02, 3). 0RIGINAL CHOICE-90 ML ನ ಸೀಲ್ಡ್ ಪೌಚ್ ಗಳು-04, ಅ||ಕಿ|| 144/- ರೂಪಾಯಿ. ಇವುಗಳೊಂದಿಗೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಪ್ರಿಯಾಂಕಾ ನ್ಯಾಮಗೌಡ, ಡಬ್ಲ್ಯೂ.ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 25-12-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 238/2021, ಕಲಂ: 279, 283, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನೋದಕುಮಾರ ಜಿ. ಎ. ತಂದೆ ಆನಂದ, ಪ್ರಾಯ-25 ವರ್ಷ, ವೃತ್ತಿ-ಲಾರಿ ಚಾಲಕ. ಸಾ|| ಗುಟ್ಟಹಳ್ಳಿ, ಕಾರಮಂಗಲ. ತಾ: ಬಂಗಾರಪೇಟಿ, ಜಿ: ಕೋಲಾರ (ಅಶೋಕ ಲೈಲ್ಯಾಂಡ್ ಲಾರಿ ನಂ: ಕೆ.ಎ-53/ಡಿ-5886 ನೇದರ ಚಾಲಕ). ಈತನು ದಿನಾಂಕ: 25-12-2021 ರಂದು ರಾತ್ರಿ 08-40 ಗಂಟೆಯ ಸುಮಾರಿಗೆ ತನ್ನ ಬಾಬ್ತು ಲಾರಿ ನಂ: ಕೆ.ಎ-53/ಡಿ-5886 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ಯಲ್ಲಾಪುರ ಪಟ್ಟಣದಲ್ಲಿ ಕುಬೇರಾ ಹೋಟೆಲ್ ಎದುರಿಗೆ  ಹಾಯ್ದು ಹೋದ ಕಾರವಾರ-ಬಳ್ಳಾರಿ ರಾಷ್ಟ್ರಿಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯಲ್ಲಿ ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳದೆ ಯಾವುದೇ ಸಿಗ್ನಲ್ ಲೈಟ್ ಹಚ್ಚದೇ ರಸ್ತೆಯ ಮೇಲೆ ಓಡಾಡುವ ಇತರೇ ವಾಹನಗಳಿಗೆ ಅಡೆತಡೆ ಉಂಟಾಗುವಂತೆ ಒಮ್ಮಿಂದೊಮ್ಮಿಲೇ ತನ್ನ ಲಾರಿಯನ್ನು ನಿಲ್ಲಿಸಿದ್ದರಿಂದಲೇ ಹಿಂದಿನಿಂದ ನಿಧಾನವಾಗಿ ಚಲಾಯಿಸಿಕೊಂಡು ಬರುತ್ತಿದ್ದ ಗಾಯಾಳು ಅಂಗವಿಕಲ ಲಕ್ಷ್ಮಣ ತಂದೆ ನಾಗಪ್ಪ ಗೌಡಾ, ಇವರ ಬಾಬ್ತು ಸ್ಕೂಟಿ ಮೋಟಾರ್ ಸೈಕಲ್ ನಂ: ಕೆ.ಎ-30/ವಿ-2964 ನೇದು ಹಿಂದಿನಿಂದ ಡಿಕ್ಕಿಯಾಗಿ ಈ ಅಪಘಾತವಾಗಿ, ಸ್ಕೂಟಿ ಹಿಂಬದಿ ಸವಾರ ಪ್ರಾನ್ಸಿಸ್ ತಂದೆ ಜಾಕಿ ಫರ್ನಾಂಡೀಸ್, ಇವನಿಗೆ ಬಾಯಿಗೆ, ಮೂಗಿಗೆ ಹಾಗೂ ತಲೆಗೆ ಭಾರೀ ಪೆಟ್ಟು ಬಿದ್ದು ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದಲ್ಲದೇ, ಸ್ಕೂಟಿ ಸವಾರ  ಅಂಗವಿಕಲ ಲಕ್ಷ್ಮಣ ತಂದೆ ನಾಗಪ್ಪ ಗೌಡಾ, ಇವನಿಗೆ ಎಡಗೈಗೆ ಹಾಗೂ ಮುಖಕ್ಕೆ ಭಾರೀ ಸ್ವರೂಪದ ಗಾಯಪೆಟ್ಟು ಆಗಿ, ಸ್ಕೂಟಿಯ ಮುಂದಿನ ಭಾಗ ಪೂರ್ಣ ಜಖಂ ಆಗಿದ್ದರ ಬಗ್ಗೆ ಪಿರ್ಯಾದಿ ಶ್ರೀ ಅಂತೋನಿ ತಂದೆ ಕೈತಾನ್ ಗೋಮ್ಸ್, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಾಯ್ಕನ ಕೇರಿ, ಬಾಳಿಗಿಮನೆ, ತಾ: ಯಲ್ಲಾಪುರ ರವರು ದಿನಾಂಕ: 25-12-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನಿಯ ತಂದೆ ನಂಜುಂಡೇಗೌಡಾ, ಪ್ರಾಯ-36 ವರ್ಷ, ಸಾ|| ಕಾರೆಹಳ್ಳಿ, ತಾ: ಚನ್ನರಾಯಪಟ್ಟಣ, ಜಿ: ಹಾಸನ (ಕಾರ್ ನಂ: ಕೆ.ಎ-16/ಎನ್-8476 ನೇದರ ಚಾಲಕ). ಈತನು ದಿನಾಂಕ: 25-12-2021 ರಂದು 19-45 ಗಂಟೆಗೆ ದಾಂಡೇಲಿ ತಾಲೂಕಿನ ಕರ್ಕಾ- ಬರ್ಚಿ ಮದ್ಯದ ರಾಜ್ಯ ಹೆದ್ದಾರಿಯ ಮೇಲೆ ತನ್ನ ಕಾರ್ ನಂ: ಕೆ.ಎ-16/ಎನ್-8476 ನೇದನ್ನು ಬರ್ಚಿ ಕಡೆಯಿಂದ ಕರ್ಕಾ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ, ಎದುರಿನಿಂದ ಅಂದರೆ ಕರ್ಕಾ ಕಡೆಯಿಂದ ಬರ್ಚಿ ಕಡೆಗೆ ಪಿರ್ಯಾದಿಯು ತನ್ನ ಹೆಂಡತಿ ಹಾಗೂ ಮಗನನ್ನು ಕೂರಿಸಿಕೊಂಡು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-3529 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಬಲಬದಿಗೆ ಹುಬ್ಬಿಗೆ, ತುಟಿಗೆ, ಬಾಯಿಗೆ, ಗದ್ದಕ್ಕೆ, ಬಲ ಮೊಣಕಾಲಿಗೆ, ಬಲಗಾಲಿನ ಪಾದಕ್ಕೆ, ಎರಡು ಕೈಗಳ ಹಸ್ತಕ್ಕೆ ತೆರಚಿದ ಗಾಯ ಹಾಗೂ ಪಿರ್ಯಾದಿಯ ಹೆಂಡತಿ ಶ್ರೀಮತಿ ಸುನಿತಾ ಇವರಿಗೆ ಗದ್ದಕ್ಕೆ ಹಾಗೂ ಪಿರ್ಯಾದಿಯ ಮಗ ಕು: ದೂಳು, ಪ್ರಾಯ-13 ವರ್ಷ, ಇವನಿಗೆ ಬಲಗಾಲ ಮೊಣಕಾಲಿಗೆ ಫ್ರ್ಯಾಕ್ಚರ್ ಪಡಿಸಿ, ಹೀಗೆ ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಹೆಂಡತಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿ, ಪಿರ್ಯಾದಿಯ ಮಗನಿಗೆ ತೀವೃ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಗಂಗಾರಾಮ ತಂದೆ ಬೊಮ್ಮು ಬೋಡೇಕರ್, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಡಿಕೆ ಹೊಸೂರು, ಪೋ: ತಟ್ಟಿಗೇರಾ, ತಾ: ಹಳಿಯಾಳ ರವರು ದಿನಾಂಕ: 25-12-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 168/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಇಸ್ಮಾಯಿಲಸಾಬ್ ತಂದೆ ಮಾಬೂಬಸಾಬ್ ಸುಲ್ಲಳ್ಳಿ, ಪ್ರಾಯ-21 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕಾಳಗಿನಕೊಪ್ಪ, ತಾ: ಮುಂಡಗೋಡ (ಹೋಂಡಾ ಶೈನ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-8444 ನೇದರ ಸವಾರ). ಈತನು ದಿನಾಂಕ: 23-12-2021 ರಂದು ಮಧ್ಯಾಹ್ನ 04-15 ಗಂಟೆಯ ಸುಮಾರಿಗೆ ಮುಂಡಗೋಡ ತಾಲೂಕಿನ ಮರಗಡಿ ಗ್ರಾಮವನ್ನು ದಾಟಿ ಸುಮಾರು 0.5 ಕಿ.ಮೀ ಸಿಂಗನಳ್ಳಿ ಕಡೆಗೆ ದೇವಸ್ಥಾನದ ಹತ್ತಿರ ರಸ್ತೆಯ ತಿರುವಿನಲ್ಲಿ ತನ್ನ ಹೋಂಡಾ ಶೈನ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-8444 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ, ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ಬಿದ್ದು, ತನ್ನ ಸ್ವಯಂಕೃತ ಅಪಘಾತದಿಂದ ತನ್ನ ಬಲಹಣೆಯ ಮೇಲೆ, ಬಲಪಕ್ಕೆಯ ಹತ್ತಿರ ಹಾಗೂ ಬಲತೊಡೆಗೆ ಭಾರೀ ಸ್ವರೂಪದ ಗಾಯನೋವು ಪಡಿಸಿಕೊಂಡವನನ್ನು ಚಿಕಿತ್ಸೆಗಾಗಿ ಕಿಮ್ಸ್ ಹುಬ್ಬಳ್ಳಿಯಲ್ಲಿ ದಾಖಲಿಸಿದವನಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಖಾಜಾಮೈನುದ್ದಿನ್ ತಂದೆ ಮಹಮ್ಮದ್ ಹನೀಪ್ ತಂಡೂರ್, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ವರ್ದಿ, ತಾ: ಹಾನಗಲ್, ಜಿ: ಹಾವೇರಿ ರವರು ದಿನಾಂಕ: 25-12-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಬಿಕಾನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 13/2021, ಕಲಂ: 324, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಂಗಾರಾಮ ತಂದೆ ದೂಂಡು ಎಡಗೆ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಡೊಂಕನಾಳ, ಬಾಳಶೆಟ್ಟಿಕೊಪ್ಪ, ತಾ: ಹಳಿಯಾಳ. ಈತನು ಪಿರ್ಯಾದಿಯವರ ತಂಗಿಯ ಗಂಡನಾಗಿದ್ದು, ಡೊಂಕನಾಳ ಊರಿನ ಶ್ರೀ ವಿಠ್ಠಲ್ ರುಕಮಾಯಿ ದೇವಸ್ಥಾನದ ಪ್ರತಿಷ್ಠಾಪನಾ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ದ್ವೇಷದಿಂದ ಇದ್ದವನು, ದಿನಾಂಕ: 25-12-2021 ರಂದು ಮಧ್ಯಾಹ್ನ 13-30 ಗಂಟೆಗೆ ಪಿರ್ಯಾದಿಯವರ ಜಮೀನಿನÀ ಹತ್ತಿರ ತನ್ನ ಕೈಯಲ್ಲಿ ಕುಡುಗೋಲು ಹಿಡಿದುಕೊಂಡು ಬಂದು ಪಿರ್ಯಾದಿಯವರಿಗೆ ಮತ್ತು ಅವರ ತಮ್ಮನಾದ ಸಾಕ್ಷಿದಾರ ಬಾಗು ತಾಟೆ ಇವರಿಗೆ ಉದ್ದೇಶಿಸಿ ‘ರಾಂಡೀಚಾ, ಪೋದ್ರಿಚ್ಚಾ, ತುಮ್ಹಿ ಚ್ಹೋರ್, ತುಮ್ಹಾನಿ ಫೂಡೇ ದಾಕೌವ್ತೊ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಯವರಿಗೆ ಅಡ್ಡಗಟ್ಟಿ ತನ್ನ ಕೈಯಲ್ಲಿರುವ ಕುಡುಗೋಲಿನಿಂದ ಪಿರ್ಯಾದಿಯವರ ತಮ್ಮನ ತಲೆಗೆ ಹೊಡೆದು ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪದ್ದು ತಂದೆ ರಾಮು ತಾಟೆ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಡೊಂಕನಾಳ, ತಾ: ಹಳಿಯಾಳ ರವರು ದಿನಾಂಕ: 25-12-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಅಪರಿಚಿತ ಕಾರ್ ಚಾಲಕನಾಗಿದ್ದು, ಕಾರ್ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಿಂಪ್ಳೆ ಗ್ರಾಮದ ಶಾಲೆಯ ಶಿಕ್ಷಕರಾಗಿರುವ ಶ್ರೀ ಲಕ್ಷ್ಮಪ್ಪ ಯಲ್ಲಪ್ಪ ತಳವಾರ ರವರು ದಿನಾಂಕ: 11-12-2021 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ತಮ್ಮ ಶಾಲಾ ಕರ್ತವ್ಯ ಮುಗಿಸಿಕೊಂಡು ಲೊಂಡಾ ಗ್ರಾಮದ ಗಣಪತಿ ಮಂದಿರಕ್ಕೆ ಹೋಗಿ ಮರಳಿ ಮನೆಗೆ ಬರಲು ಖಾನಾಪುರ ರಸ್ತೆಯಿಂದ ರಾಮನಗರಕ್ಕೆ ಬರುವಾಗ ಮಧ್ಯಾಹ್ನ 01-00 ಗಂಟೆಯಿಂದ 02-00 ಗಂಟೆಯ ಸಮಯದಲ್ಲಿ ತನ್ನ ಎಡಬದಿಯಿಂದ ಬರುವಾಗ ರಾಜ ಪ್ಯಾಲೇಸ್ ಹತ್ತಿರ ನಮೂದಿತ ಆರೋಪಿತನು ತನ್ನ ಕಾರನ್ನು ಚಲಾಯಿಸಿಕೊಂಡು ಒಂದು ಓವರಟೇಕ ಮಾಡಿಕೊಂಡು ಹೋಗುವಾಗ ಗಾಯಾಳು ಲಕ್ಷ್ಮಪ್ಪ ತಳವಾರ ರವರ ಮೋಟಾರ್ ಸೈಕಲ್ ನಂ: ಕೆ.ಎ-24/ಯು-3345 ನೇದಕ್ಕೆ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವೃ ಗಾಯಗೊಂಡಿದ್ದು, ಚಿಕಿತ್ಸೆಯಲ್ಲಿದ್ದ ಅವರು ದಿನಾಂಕ: 24-12-2021 ರಂದು ರಾತ್ರಿ 10-30 ಗಂಟೆಗೆ ಪ್ರಜ್ಞೆಗೆ ಬಂದ ಬಗ್ಗೆ ಪಿರ್ಯಾದಿ ಶ್ರೀಮತಿ ಭಾರತಿ ಲಕ್ಷ್ಮಪ್ಪ ತಳವಾರ, ಪ್ರಾಯ-35 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಸಾಯಿ ಗಲ್ಲಿ, ರಾಮನಗರ, ತಾ: ಜೋಯಿಡಾ ರವರು ದಿನಾಂಕ: 25-12-2021 ರಂದು 13-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 25-12-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 36/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಲಕ್ಷ್ಮಣ ತಂದೆ ಲಿಂಗಪ್ಪಾ ದೇಶಭಂಡಾರಿ, ಪ್ರಾಯ-65 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹರಿಟಾ, ಕತಗಾಲ, ತಾ: ಕುಮಟಾ. ಪಿರ್ಯಾದಿಯ ತಂದೆಯಾದ ಇವರು ದಿನಾಂಕ: 25-12-2021 ರಂದು ಬೆಳಿಗ್ಗೆಯಿಂದ ಪಿರ್ಯಾದಿ, ಪಿರ್ಯಾದಿಯ ಅಣ್ಣ ಅಣ್ಣಪ್ಪಾ ಇವರೊಂದಿಗೆ ಸೇರಿ ತಮ್ಮ ಮನೆಯ ಪಕ್ಕದಲ್ಲಿಯೇ ಇರುವ ಅಡಿಕೆ ತೋಟದಲ್ಲಿ ರೈತಾಬಿ ಕೆಲಸ ಮಾಡುತ್ತಾ ಅಲ್ಯೂಮಿನಿಯಂ ಏಣಿಯನ್ನು ಬಳಸಿ ಅಡಿಕೆ ಮರ ಹತ್ತಿ ಅಡಿಕೆ ಗೊನೆಯನ್ನು ಕೊಯ್ಯುತ್ತಾ ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ಪಿರ್ಯಾದಿಯ ತಂದೆಯವರು ಅಡಿಕೆ ಮರ ಹತ್ತಲು ಮರಕ್ಕೆ ಏಣಿ ಚಾಚುತ್ತಿದ್ದಾಗ ಆಕಸ್ಮಾತ್ ಆಗಿ ಅಲ್ಯೂಮಿನಿಯಂ ಏಣಿ ತೋಟದಲ್ಲಿ ಮೇಲ್ಗಡೆ ಹಾಯ್ದಿರುವ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಸ್ಪರ್ಶದಿಂದ ಪಿರ್ಯಾದಿಯವರ ತಂದೆಯವರು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಶ್ರೀಧರ ತಂದೆ ಲಕ್ಷ್ಮಣ ದೇಶಭಂಡಾರಿ, ಪ್ರಾಯ-35 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹರಿಟಾ, ಕತಗಾಲ, ತಾ: ಕುಮಟಾ ರವರು ದಿನಾಂಕ: 25-12-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 28-12-2021 09:36 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080