ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 25-02-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪಂಕಜ ತಂದೆ ಆನಂದು ನಾಯ್ಕ, 2]. ಪ್ರದೀಪ್ ತಂದೆ ಮಿರಿಯಾ ನಾಯ್ಕ, 3]. ಆನಂದು ತಂದೆ ಸಣ್ಣಬಾಬು ನಾಯ್ಕ, 4]. ಉಮೇಶ ತಂದೆ ನಾಗು ನಾಯ್ಕ, 5]. ನಾರಾಯಣ ತಂಧೆ ವಿಠ್ಠಲ ಗಿರಫ್, ಸಾ|| (ಎಲ್ಲರೂ) ನಂದನಗದ್ದಾ, ಕಾರವಾರ. ಈ ನಮೂದಿತ ಆರೋಪಿತರು ದಿನಾಂಕ: 24-02-2021 ರಂದು 19-05 ಗಂಟೆಗೆ ಕಾರವಾರ ನಂದನಗದ್ದಾದ ಗಣಪತಿ ದೇವಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗುಂಪಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ದಾಳಿಯ ಕಾಲಕ್ಕೆ ಇಸ್ಪೀಟ್ ಜುಗಾರಾಟದಲ್ಲಿ ಬಳಸಿದ ನಗದು ಹಣ 8,470/- ರೂಪಾಯಿ, ಇಸ್ಪೀಟ್ ಎಲೆಗಳು-52, ಮಂಡಕ್ಕೆ ಬಳಸಿದ ಪ್ಲಾಸ್ಟಿಕ್ ಚೀಲದ ತುಂಡು ಹಾಗೂ 2 ಮೇಣದ ಬತ್ತಿಗಳೊಂದಿಗೆ ಆರೋಪಿತರು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 25-02-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಗೋವಿಂದ ತಂದೆ ತಿಮ್ಮಪ್ಪ ನಾಯ್ಕ, ಪ್ರಾಯ-63 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೀರೆಗುತ್ತಿ, ತಾ; ಕುಮಟಾ. ನಮೂದಿತ ಆರೋಪಿತನು ದಿನಾಂಕ: 24-02-2021 ರಂದು 18-25 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಹೀರೆಗುತ್ತಿ ಗ್ರಾಮದ ನುಶಿಕೋಟೆ ಕ್ರಾಸ್ ರಸ್ತೆಯ ಮೇಲೆ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ, ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು, ಅವರು ಹೇಳಿದ ಅಂಕೆ ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ ನಗದು ಹಣ 930/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್ ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 25-02-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಂತೋನ್ ತಂದೆ ಮರಿಯಾನ್ ಡಿಸೋಜಾ, ಪ್ರಾಯ-62 ವರ್ಷ, ವೃತ್ತಿ-ಕೂಲಿ ಕೆಲಸ, ಸಾ||  ತುಂಬೊಳ್ಳಿ, ಜಲವಳ್ಳಿ, ತಾ: ಹೊನ್ನಾವರ, 2]. ರುಜಾರ್ ತಂದೆ ಸಾಂತಾ ಗೋನ್ಸಾಲಿಸ್, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆರವಳ್ಳಿ, ತಾ: ಹೊನ್ನಾವರ, 3]. ಡೊಮಿನಿಕ್ ತಂದೆ ಸಲ್ವಾದರ್ ಡಿಸೋಜಾ, ಪ್ರಾಯ-40 ವರ್ಷ, ವೃತ್ತಿ-ಬೇಕರಿ ಕೆಲಸ, ಸಾ|| ಮೂಡ್ಕಣಿ, ತಾ: ಹೊನ್ನಾವರ, 4]. ನಾರಾಯಣ ತಂದೆ ಸಣ್ಣಕೂಸ ನಾಯ್ಕ, ಪ್ರಾಯ-67 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆರವಳ್ಳಿ, ತಾ: ಹೊನ್ನಾವರ, 5]. ಸ್ಟೀವನ್ ತಂದೆ ಮರಿಯಾನ್ ಡಿಸೋಜಾ, ಪ್ರಾಯ-28 ವರ್ಷ, ವೃತ್ತಿ-ಬೇಕರಿ ಕೆಲಸ, ಸಾ|| ಕೆಳಗಿನ ಮೂಡ್ಕಣಿ, ತಾ: ಹೊನ್ನಾವರ, 6]. ಈಶ್ವರ ತಂದೆ ನಾರಾಯಣ ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆರವಳ್ಳಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 24-02-2021 ರಂದು 23-50 ಗಂಟೆಗೆ ಹೊನ್ನಾವರ ತಾಲೂಕಿನ ಕೆರವಳ್ಳಿಯ ಸುಳಗೋಡ ಕ್ರಾಸ್ ಕಚ್ಚಾ ರಸ್ತೆಯ ಪಕ್ಕದ ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಜುಗಾರಾಟ ಆಡುತ್ತಿದ್ದಾಗ, ದಾಳಿಯ ವೇಳೆ 1). ನಗದು ಹಣ 2,000/- ರೂಪಾಯಿ, 2). ಇಸ್ಪೀಟ ಎಲೆಗಳು ಒಟ್ಟು-52 ಅ||ಕಿ|| 00.00/- ರೂಪಾಯಿ, 3). ಅರ್ಧ ಉರಿದ ಮೇಣದ ಬತ್ತಿ ತುಂಡುಗಳು-02, ಅ||ಕಿ|| 00.00/- ರೂಪಾಯಿ, 4). ಪೇಪರ್ ಮಂಡ-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 25-02-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಮ್ಮದ್ ರಾಫಿ ತಂದೆ ಹಮೀದ್ ಕೆ. ಎಮ್, ಸಾ|| ಕೇರಳಾ (ಲಾರಿ ನಂ: ಎಮ್.ಎಚ್-43/ಬಿ.ಪಿ-3053 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 25-02-2021 ರಂದು 11-30 ಗಂಟೆಗೆ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅನಂತವಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತನ್ನ ಲಾರಿ ನಂ: ಎಮ್.ಎಚ್-43/ಬಿ.ಪಿ-3053 ನೇದನ್ನು ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-4507 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಲಂಬೋದರನಿಗೆ ಮುಖಕ್ಕೆ ಮತ್ತು ಮೈಕೈಗೆ ತೆರಚಿದ ಗಾಯನೋವು ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂಬದಿಯ ಸೀಟಿನಲ್ಲಿ ಕುಳಿತ ಪಿರ್ಯಾದಿಯ ಹಣೆಗೆ ರಕ್ತಗಾಯ, ಬಲಗಾಲಿಗೆ ಒಳನೋವು ಮತ್ತು ಮೇಲಿನ ದವಡೆಯ ಮುಂದಿನ ಒಂದು ಹಲ್ಲು ಮುರಿದು ಭಾರೀ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ದೇವಕಿ ಕೋಂ. ಮಂಜುನಾಥ  ಮರಾಠಿ, ಪ್ರಾಯ-29 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬ್ಯಾಣದಳ್ಳಿ, ಬ್ರಹ್ಮೂರ, ತಾ: ಅಂಕೋಲಾ ರವರು ದಿನಾಂಕ: 25-02-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೀರಭದ್ರಪ್ಪ ತಂದೆ ವೀರಸಂಗಪ್ಪ ಚಿನಿವಾಲರ, ಪ್ರಾಯ-33 ವರ್ಷ, ವೃತ್ತಿ-ಚಾಲಕ, ಸಾ|| ಅಶೋಕ ನಗರ, ಬೆಳಗಾವಿ (ಜೆಸ್ಟ್ ಎಕ್ಸ್ಇ ಕಾರ್ ನಂ: ಕೆ.ಎ-22/ಸಿ-8362 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 24-02-2021 ರಂದು 17-00 ಗಂಟೆಗೆ ತನ್ನ ಜೆಸ್ಟ್ ಎಕ್ಸ್ಇ ಕಾರ್ ನಂ: ಕೆ.ಎ-22/ಸಿ-8362 ನೇದನ್ನು ಶಿರಸಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಶಿರಸಿ-ಹುಬ್ಬಳ್ಳಿ ರಸ್ತೆಯ ಎಕ್ಕಂಬಿ ಬಾಪುನಗರ ಹತ್ತಿರ ತನ್ನ ಮುಂದಿನಿಂದ ಹೊರಟಿದ್ದ ಒಂದು ಕಾರನ್ನು ಹಿಂದಿಕ್ಕಿ ಓವರಟೇಕ್ ಮಾಡಿದಾಗ, ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನ ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸೂರಜ ತಂದೆ ಮಹಾವೀರ ಡೊರಲೇ, ಪ್ರಾಯ-44 ವರ್ಷ, ವೃತ್ತಿ-ಟೂರ್ಸ್ & ಟ್ರಾವೆಲ್ಸ್, ಸಾ|| ಮನೆ ನಂ: 783 ಚನ್ನಮ್ಮ ನಗರ, 2 ನೇ ಕ್ರಾಸ್, ಬೆಳಗಾವಿ ರವರು ದಿನಾಂಕ: 25-02-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 25-02-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸುಬ್ರಾಯ ತಂದೆ ವಾಟು ನಾಯ್ಕ, ಪ್ರಾಯ-80 ವರ್ಷ, ಸಾ|| ತುರಿಭಾಗ, ತೋಡುರ, ಕಾರವಾರ. ಇವರು ವಯಸ್ಸಾದವರಿದ್ದು ಆಗಾಗ ಬಿ.ಪಿ ಕಡಿಮೆ ಆದಾಗ ಕುಸಿದು ಬೀಳುತ್ತಿದ್ದು, ದಿನಾಂಕ: 23-02-2021 ರಂದು ಮಧ್ಯಾಹ್ನ 12-00 ಗಂಟೆಯ ಸಮಯಕ್ಕೆ ಮನೆಯ ಮುಂದಿನ ಬಾಗಿಲ ಹತ್ತಿರ ನಿಂತಿದ್ದಾಗ ಆಕಸ್ಮಾತ್ ಬಿ.ಪಿ ಕಡಿಮೆಯಾಗಿ ಕುಸಿದು ನೆಲದ ಮೇಲೆ ಬಿದ್ದಿದ್ದು, ಅವರ ತಲೆ ನೆಲಕ್ಕೆ ತಾಗಿ ಒಳನೋವಾದವರಿಗೆ ಸುದ್ದಿದಾರರು ಹಾಗೂ ಅವರ ಸಂಬಂಧಿಕರು ಕೂಡಲೇ ಚಿಕಿತ್ಸೆಯ ಕುರಿತು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲು ಮಾಡಿ, ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಗೋವಾದ ಬಾಂಬೋಲಿಮ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ದಿನಾಂಕ: 24-02-2021 ರಂದು 17-08 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದಿಗಂಬರ ತಂದೆ ಸುಬ್ರಾಯ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತುರಿಭಾಗ, ತೋಡುರ, ಕಾರವಾರ ರವರು ದಿನಾಂಕ: 25-02-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಮಹಾಲಕ್ಷ್ಮಿ ತಂದೆ ಯಲ್ಲಪ್ಪ ಸುನಗಾರ, ಪ್ರಾಯ-15 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಹಬ್ಬುವಾಡಾ, ಕಾರವಾರ. ಪಿರ್ಯಾದಿಯ ಮಗಳಾದ ಇವಳು 8 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಮೊಬೈಲಿನಲ್ಲಿ ಹಾಗೂ ಕಾಯಿನ್ ಬಾಕ್ಸಿನಿಂದ ತನ್ನ ಪ್ರಿಯಕರ ಶೇಷಾ ಈತನೊಂದಿಗೆ ಅತಿಯಾಗಿ ಮಾತನಾಡುತ್ತಿದ್ದವಳಿಗೆ ಆಕೆಯ ತಾಯಿಯು ತನ್ನ ಮಗಳಿಗೆ ಅವಳು ಮಾಡುತ್ತಿರುವುದು ಸರಿಯಿಲ್ಲ ಅಂತಾ ಬುದ್ಧಿವಾದ ಹೇಳಿ ಸುಧಾರಿಸುವಂತೆ ಬೈಯ್ದಿದ್ದು, ದಿನಾಂಕ: 24-02-2021 ರಂದು ಸಹ ಮೃತಳು ತಾಯಿಯ ಮಾತು ಕೇಳದೇ ಪುನಃ ಕಾಯಿನ್ ಬಾಕ್ಸಿನಿಂದ ತನ್ನ ಪ್ರಿಯಕರನೊಂದಿಗೆ ಮಾತನಾಡುತ್ತಿದ್ದಾಗ ಪಿರ್ಯಾದಿಯು ನೋಡಿ ಮಗಳಿಗೆ ಬೈಯ್ದು ಬುದ್ಧಿವಾದ ಹೇಳಿ ಸಂಜೆ 06-00 ಗಂಟೆಗೆ ಮನೆಗೆ ಕಳುಹಿಸಿದ್ದು, ಮೃತಳು ಮನೆಗೆ ಬಂದು ತನ್ನ ತಾಯಿ ಬುದ್ಧಿವಾದ ಹೇಳಿ ಬೈಯ್ದಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ರಾತ್ರಿ 22-00 ಗಂಟೆಯ ಪೂರ್ವದಲ್ಲಿ ಮನೆಯ ಮೇಲ್ಛಾವಣಿಯ ಪಕಾಸಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀಮತಿ ಶೋಭಾ ಕೋಂ. ಯಲ್ಲಪ್ಪ ಸುನಗಾರ, ಪ್ರಾಯ-35 ವರ್ಷ, ವೃತ್ತಿ-ಬಾಳೆಹಣ್ಣು ವ್ಯಾಪಾರ, ಸಾ|| ಶ್ರೀಜಿ ಹೌಸ್ ಹತ್ತಿರ, ಹಬ್ಬುವಾಡ, ಕಾರವಾರ ರವರು ದಿನಾಂಕ: 25-02-2021 ರಂದು 01-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ  ನೇದ್ದರ ವಿವರ...... ಮೃತನಾದ ಜೋಸೆಫ್, ಪ್ರಾಯ-ಅಂದಾಜು 50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೇರುಸೊಪ್ಪಾ, ತಾ: ಹೊನ್ನಾವರ. ಇವರು ಹೊನ್ನಾವರ ತಾಲೂಕಿನ ಗೇರುಸೊಪ್ಪಾದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದವರು, ದಿನಾಂಕ: 21-02-2021 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಗೇರುಸೊಪ್ಪಾ ಸರ್ಕಲ್ ಹತ್ತಿರ ರಸ್ತೆಯ ಪಕ್ಕದಲ್ಲಿ ಅನಾರೋಗ್ಯದಿಂದ ಕುಸಿದು ಬಿದ್ದವರಿಗೆ ಪಿರ್ಯಾದಿಯು 108 ಆಂಬುಲೆನ್ಸ್ ವಾಹನದ ಮೇಲೆ ತಾಲೂಕಾ ಆಸ್ಪತ್ರೆ ಹೊನ್ನಾವರಕ್ಕೆ ಚಿಕಿತ್ಸೆಯ ಕುರಿತು ಕಳುಹಿಸಿದ್ದು, ಸದರಿ ಜೋಸೆಫ್ ಇವರಿಗೆ ತಾಲೂಕಾ ಆಸ್ಪತ್ರೆ ಹೊನ್ನಾವರದಿಂದ ಹೆಚ್ಚಿನ ಚಿಕಿತ್ಸೆಯ ಕುರಿತು ದಿನಾಂಕ: 22-02-2021 ರಂದು ಕಿಮ್ಸ್ ಆಸ್ಪತ್ರೆ ಕಾರವಾರಕ್ಕೆ ಕಳುಹಿಸಿದ್ದು, ಅನಾರೋಗ್ಯದಿಂದ ಚಿಕಿತ್ಸೆಯ ಕುರಿತು ಕಿಮ್ಸ್ ಆಸ್ಪತ್ರೆ ಕಾರವಾರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೋಸೆಫ್ ಇವರು ದಿನಾಂಕ: 25-02-2021 ರಂದು ಮಧ್ಯಾಹ್ನ 01-45 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ರೆ, ಕಾರವಾರದಲ್ಲಿ ಮೃತಪಟ್ಟಿದ್ದು, ಸದರಿಯವರ ಸಂಪೂರ್ಣ ಹೆಸರು ವಿಳಾಸ ತಿಳಿಯದ ಕಾರಣ ಮತ್ತು ಆತನ ವಾರಸದಾರರು ಯಾರೂ ಇಲ್ಲದ ಕಾರಣ ಜೋಸೆಫ್ ಇವರ ಮರಣದ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ತಿಲಕ ತಂದೆ ಈಶ್ವರ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ಡೆಕೋರೆಟರ್, ಸಾ|| ಬೆಳ್ಳಿಮಕ್ಕಿ, ಗೇರುಸೊಪ್ಪ, ತಾ: ಹೊನ್ನಾವರ ರವರು ದಿನಾಂಕ: 25-02-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ  ನೇದ್ದರ ವಿವರ...... ಮೃತಳಾದ ಶ್ರೀಮತಿ ಮೈಮುನಿಬಾ ಕೋಂ. ಯಾಕೂಬಸಾಬ್, ಪ್ರಾಯ-80 ವರ್ಷ, ಸಾ|| ಎಲ್.ಬಿ ನಗರ, ಹೊಸೂರು, ಸಿದ್ದಾಪುರ ಶಹರ. ಮೃತರಾದ ಇವರು ಸುದ್ದಿದಾರನ ತಾಯಿಯಾಗಿದ್ದು, ಒಬ್ಬಂಟಿಯಾಗಿ ಸುದ್ದಿದಾರನು ವಾಸವಿದ್ದ ಮನೆಯ ಪಕ್ಕದಲ್ಲಿರುವ ಹಳೆಮನೆಯಲ್ಲಿ ವಾಸವಾಗಿದ್ದವರು. ಆ ಮನೆಯ ಪಕ್ಕದಲ್ಲಿನ ಮತ್ತೊಂದು ಮನೆಯನ್ನು ಮಾರಿದ್ದರ ವಿಷಯವಾಗಿ ಹಾಗೂ ಅವರ ಹಿರಿಯ ಮಗನಿಗೆ ಇತ್ತೀಚೆಗೆ ಪಾರ್ಶ್ವವಾಯು ಆಗಿದ್ದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದವರು ಹಾಗೂ ಸಣ್ಣಪುಟ್ಟ ಕೌಟುಂಬಿಕ ಕಲಹಗಳನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 24-02-2021 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 25-02-2021 ರಂದು ಬೆಳಿಗ್ಗೆ 08-30 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಬೆಡ್ ರೂಮಿನಲ್ಲಿರುವ ಅಟ್ಟದ ಅಂಕಣದ ಕೆಳಗೆ ಇರುವ ಕಬ್ಬಿಣದ ಅಡ್ಡಪಟ್ಟಿಗೆಗೆ ಪ್ಲಾಸ್ಟಿಕ ವಾಯರ್ ನಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಬುಅಹ್ಮದ್ ತಂದೆ ಯಾಕೂಬಸಾಬ್, ಪ್ರಾಯ-55 ವರ್ಷ, ಸಾ|| ಎಲ್.ಬಿ ನಗರ, ಹೊಸೂರು, ಸಿದ್ದಾಪುರ ಶಹರ ರವರು ದಿನಾಂಕ: 25-02-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 26-02-2021 12:40 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080