ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 25-07-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಜಾರಾಮ, ಸಾ|| ಕಾರವಾರ, 2]. ಸಂತೋಷ ಶಾಂತಾರಾಮ ಕೋಠಾರಕರ, 3]. ಶ್ಯಾಮ ಶಾಂತಾರಾಮ ಕೋಠಾರಕರ, 4]. ಸುನೀಲ ಶಾಂತಾರಾಮ ಕೋಠಾರಕರ, ಸಾ|| (ಮೂವರು) ಅಂಬೆಜೂಗ್, ಕಿನ್ನರ, ಕಾರವಾರ. ಈ ನಮೂದಿತ ಆರೋಪಿತರು ಸೇರಿಕೊಂಡು ದಿನಾಂಕ: 25-07-2021 ರಂದು 12-00 ಗಂಟೆಗೆ ಕಾರವಾರ ತಾಲೂಕಿನ ಕಿನ್ನರದ ಅಸಲವಾಡಾದಲ್ಲಿರುವ ಪಿರ್ಯಾದಿಯವರ ಪಕ್ಕದ ಮನೆಯವರಾದ ಶ್ರೀಮತಿ ಸುವರ್ಣಾ ಸುರೇಂದ್ರ ತಳೇಕರ ಹಾಗೂ ಪಿರ್ಯಾದಿಯವರಿಗೆ ಈ ಹಿಂದಿನಿಂದಲೂ ಜಮೀನಿನ ತಂಟೆ, ತಕರಾರಿನ ವಿಷಯದಲ್ಲಿ ಪಿರ್ಯಾದಿಯವರ ಮನೆಯ ಕಂಪೌಂಡ್ ಗೇಟ್ ಎದುರಿನ ರಸ್ತೆಯಲ್ಲಿ ಬಂದು ಪಿರ್ಯಾದಿಯವರನ್ನು ‘ಅವೈ ಜವಣ್ಯಾ’ ಅಂತಾ ಕೆಟ್ಟದಾಗಿ ಬೈಯ್ದು ಜೀವದ ಬೆದರಿಕೆಯನ್ನು ಹಾಕಿ, ಕಟ್ಟಿಗೆಯ ರೀಪಿನಿಂದ ಪಿರ್ಯಾದಿಯ ಬಲಗಣ್ಣಿನ ಮೇಲ್ಬದಿಗೆ ಹಾಗೂ ಎಡಗೈ ಮಧ್ಯದ ಬೆರಳಿಗೆ ಗಾಯನೋವು ಪಡಿಸಿದ್ದಲ್ಲದೇ, ಬಿಡಿಸಲು ಬಂದ ಪಿರ್ಯಾದಿಯವರ ಹೆಂಡತಿ ತನುಜಾ ಇವಳು ಕೂಡಾ ದೂಡಾಡಿದಾಗ ಕೆಳಗೆ ಬಿದ್ದು ನೋವುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸಾಯಿನಾಥ ತಂದೆ ಧಾಮು ಕೋಠಾರಕರ, ಪ್ರಾಯ-49 ವರ್ಷ, ವೃತ್ತಿ-ಕೃಷಿಕ ಹಾಗೂ ಚಾಲಕ, ಸಾ|| ಅಸಲವಾಡಾ, ಕಿನ್ನರ, ಕಾರವಾರ ರವರು ದಿನಾಂಕ: 25-07-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 323, 504 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಾಯಿನಾಥ ಕೋಠಾರಕರ, 2]. ಸಾಯಿನಾಥ ಕೋಠಾರಕರ ಇವರ ಹೆಂಡತಿ, 3]. ಸಾಯಿನಾಥ ಕೋಠಾರಕರ ಇವರ ಅಣ್ಣ, ಸಾ|| (ಮೂವರು) ಅಸಲವಾಡಾ, ಕಿನ್ನರ, ಕಾರವಾರ. ಪಿರ್ಯಾದಿಯವರು ತನ್ನ ಭಾವನವರಾದ ಸಂತೋಷ ಕೋಠಾರಕರ ಇವರೊಂದಿಗೆ ದಿನಾಂಕ: 25-07-2021 ರಂದು ಬೆಳಿಗ್ಗೆ 11-30 ಗಂಟೆಗೆ ಕಾರವಾರ ತಾಲೂಕಿನ ಕಿನ್ನರದ ಅಸಲವಾಡಾದಲ್ಲಿರುವ ಸದ್ರಿ ಪಿರ್ಯಾದಿಯವರ ಅತ್ತೆಯ ಮನೆಯು ನೆರೆ ಹಾವಳಿಯಿಂದ ಮುಳುಗಡೆಯಾಗಿದ್ದರಿಂದ ಅಲ್ಲಿ ಕ್ಲೀನ್ ಮಾಡಲೆಂದು ಹೋದಾಗ ಮನೆಯ ಕಂಪೌಂಡ್ ಗೇಟ್ ಹತ್ತಿರದಲ್ಲಿರುವಾಗ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಗೆ ಹಾಗೂ ಪಿರ್ಯಾದಿಯವರ ಭಾವನವರಿಗೆ ಅವಾಚ್ಯ ಶಬ್ಬದಿಂದ ‘ಈಗ ನೀವು ಇಲ್ಲಿಗೆ ಬಂದಿದ್ದೀರಿ’ ಅಂತಾ ಬೈಯ್ದು ಕೈಯಿಂದ ಕೆನ್ನೆಯ ಮೇಲೆ ಹೊಡೆದುದ್ದಲ್ಲದೇ, ಆರೋಪಿ 2 ಮತ್ತು 3 ನೇಯವರು ಕೂಡಾ ಅವಾಚ್ಯ ಶಬ್ದದಿಂದ ಬೈಯ್ದು ತೊಂದರೆ ಕೊಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಜಾರಾಮ ತಂದೆ ರಮಾಕಾಂತ ತಳೇಕರ, ಪ್ರಾಯ-34 ವರ್ಷ, ವೃತ್ತಿ-ಪ್ರೊಜೆಕ್ಟ್ ಮ್ಯಾನೇಜರ್, ಸಾ|| ಹಿರೇಶಿಟ್ಟಾ, ಬಾಡ, ಕಾರವಾರ ರವರು ದಿನಾಂಕ: 25-07-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮಾ ತಂದೆ ಬೀರಪ್ಪ ಹರಿಕಂತ್ರ, ಸಾ|| ಹೀರೆಗುತ್ತಿ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-47/ವಿ-7252 ನೇದರ ಸವಾರ). ಈತನು ದಿನಾಂಕ: 25-07-2021 ರಂದು ಬೆಳಿಗ್ಗೆ 11-30 ಗಂಟೆಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ನುಶಿಕೋಟೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-7252 ನೇದನ್ನು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿಯ ಬಲಬದಿಯ ರಸ್ತೆಯ ಮೇಲೆ ಅಂದರೆ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಬರುವ ರಸ್ತೆಯ ಪಥದ ಮೇಲೆ ಅತೀವೇಗದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-1185 ನೇದರ ಹಿಂಬದಿಗೆ ತನ್ನ ಹೆಂಡತಿ ಆರತಿ ನಾಯ್ಕ ಇವಳನ್ನು ಕೂಡ್ರಿಸಿಕೊಂಡು ಚಲಾಯಿಸಿಕೊಂಡು ಬರುತ್ತಿದ್ದ ರಾಜೇಶ ತಂದೆ ಶಿವಾನಂದ ನಾಯ್ಕ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ರಾಜೇಶ ನಾಯ್ಕ ಮತ್ತು ಆರತಿ ನಾಯ್ಕ ಇವರ ತಲೆಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಹರೀಶ ತಂದೆ ದೇವು ಪಟಗಾರ, ಪ್ರಾಯ-33 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಕಾರೆಬೈಲ್, ತಾ: ಅಂಕೋಲಾ ರವರು ದಿನಾಂಕ: 25-07-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 25-07-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 39/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಬೀರು ಗಂಡ ಮೋರು ಗೌಡ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೂಲಿ ಕೆಲಸ, ಸಾ|| ದಂಡೆಭಾಗ, ಶಿರೂರು, ತಾ: ಅಂಕೋಲಾ. ಸುದ್ಧಿದಾರರ ತಾಯಿಯಾದ ಇವರು ದಿನಾಂಕ: 23-07-2021 ರಂದು ಬೆಳಿಗ್ಗೆ 08-45 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಶಿರೂರಿನ ದಂಡೆಭಾಗದಲ್ಲಿರುವ ತನ್ನ ಮನೆಯಿಂದ ಬರುತ್ತಿದ್ದಾಗ ನೆರೆ ಹಾವಳಿಯ ಅತೀಯಾದ ನೀರಿನಿಂದ ಕೊಚ್ಚಿ ಹೋಗಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದವಳು, ದಿನಾಂಕ: 25-07-2021 ರಂದು ಬೆಳಿಗ್ಗೆ 08-30 ಗಂಟೆಗೆ ಶಿರೂರು ಗ್ರಾಮದ ವೆಂಕಟ್ರಮಣ ಕೆ. ನಾಯ್ಕ ರವರ ಗದ್ದೆ ಜಮೀನಿನಲ್ಲಿ ಮೃತಪಟ್ಟು ಸಿಕ್ಕಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಂಡು ಮೃತದೇಹವನ್ನು ಬಿಟ್ಟು ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಕ್ರು ತಂದೆ ಮೋರು ಗೌಡ, ಪ್ರಾಯ-46 ವರ್ಷ, ವೃತ್ತಿ-ಗ್ರಾಮ ಸಹಾಯಕ, ತಿರ್ಕ, ಬೆಳಸೆ, ಸಾ|| ಶಿರೂರು, ತಾ: ಅಂಕೋಲಾ ರವರು ದಿನಾಂಕ: 25-07-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 21/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಫ್ರಾನ್ಸಿಸ್ @ ಫ್ರಾನ್ಸಿಸ್ಕೋ ತಂದೆ ದುವಾಡ್ತ್ ಗೋಮ್ಸ್, ಪ್ರಾಯ-56 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಂದ್ರಹಿತ್ಲ, ಮಾವಳ್ಳಿ-2, ಮುರ್ಡೇಶ್ವರ, ತಾ: ಭಟ್ಕಳ. ಪಿರ್ಯಾದಿಯ ಯಜಮಾನರ ಹಿರಿಯ ಅಣ್ಣನಾದ ಈತನು ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದವನು, ಕಳೆದ 8 ವರ್ಷಗಳ ಹಿಂದೆ ಹೆರಾಡಿಯ ಸಂಕದಿಂದ ಕೆಳಗೆ ಬಿದ್ದು ತೊಡೆ ಮತ್ತು ಸೊಂಟದ ಮೂಳೆ ಮುರಿದಿರುವುದರಿಂದ ಎಲ್ಲಿಯೂ ಕೆಲಸಕ್ಕೆ ಹೋಗದೇ ಮುರ್ಡೇಶ್ವರದ ದೇವಸ್ಥಾನದಲ್ಲಿ ಚಪ್ಪಲಿ ಕಾಯುವುದು ಹಾಗೂ ಸಾರ್ವಜನಿಕರಿಂದ ಹಣ ಬೇಡಿ ಸರಾಯಿ ಕುಡಿಯುತ್ತಿದ್ದವನು, ದಿನಾಂಕ: 21-07-2021 ರಂದು ಮಧ್ಯಾಹ್ನ 03-00 ಗಂಟೆಗೆ ಅತಿಯಾಗಿ ಸರಾಯಿ ಕುಡಿದು ಮನೆಯಿಂದ ಹೊರಗೆ ಹೋದವನು, ದಿನಾಂಕ: 25-07-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಚಂದ್ರಹಿತ್ಲದ ಗೋಮ್ಸ್ ಯಾತ್ರಿ ನಿವಾಸದ ಲಾಡ್ಜ್ ಪಕ್ಕದಲ್ಲಿರುವ ಗಟಾರದಲ್ಲಿ ಬಿದ್ದು ಮೃತಪಟ್ಟಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದು ನೋಡಿದ್ದು, ಮೃತನು ಸರಾಯಿ ಕುಡಿದು ಸಂಕದ ಮೇಲೆ ಕುಳಿತಾಗ ಆಯ ತಪ್ಪಿ ಗಟಾರಕ್ಕೆ ಬಿದ್ದು ಮೃತಪಟ್ಟ ಬಗ್ಗೆ ಸಂಶಯ ವ್ಯಕ್ತಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸರಿತಾ ಕೋಂ. ಜೆರಿ ಗೋಮ್ಸ್, ಪ್ರಾಯ-43 ವರ್ಷ, ವೃತ್ತಿ-ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್, ಸಾ|| ಚಂದ್ರಹಿತ್ಲ, ಮಾವಳ್ಳಿ-2, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 25-07-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಸೌಜನ್ಯ ತಂದೆ ನಾಗರಾಜ ದೊಡ್ಮನಿ @ ಚನ್ನಯ್ಯ, ಪ್ರಾಯ-13 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಅಂಡಗಿ, ತಾ: ಶಿರಸಿ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 25-07-2021 ರಂದು ಬೆಳಿಗ್ಗೆ ತನ್ನ ಭಾವನ ಮಗುವನ್ನು ಕರೆದುಕೊಂಡು ಮನೆಗೆ ಬಂದಿದ್ದು, ಆಗ ಮಗುವನ್ನು ಮೃತಳ ಅಕ್ಕ ಸಿಂಚನಾ ಎತ್ತುಕೊಳ್ಳುತ್ತೇನೆ ಅಂತಾ ಹೇಳುತ್ತಿದ್ದವಳು, ಆಗ ಮೃತಳ ತಾಯಿ ಸೌಜನ್ಯ ಎತ್ತಿಕೊಂಡ ಮಗುವನ್ನು ಸಿಂಚನಾಳಿಗೆ ಕೊಟ್ಟು, ಸೌಜನ್ಯಳಿಗೆ ‘ನೀನು ಮನೆಯಲ್ಲಿ ಹೇಳಿದ ಮಾತು ಕೇಳುವುದಿಲ್ಲ’ ಅಂತಾ ಸಿಟ್ಟಿನಿಂದ ಹೊಡೆದು, ಬುದ್ಧಿವಾದ ಹೇಳಿದ್ದಕ್ಕೆ ಮನಸ್ಸಿಗೆ ಹಚ್ಚಿಕೊಂಡು ಸೌಜನ್ಯ ಇವಳು ದಿನಾಂಕ: 25-07-2021 ರಂದು ಬೆಳಿಗ್ಗೆ 11-00 ಗಂಟೆಯಿಂದ 11-15 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಹಾಲಿನ ಅಟ್ಟದ ಜಂತಿಗೆ ಮಗುವನ್ನು ಆಡಿಸಲು ಕಟ್ಟಿದ ಸೀರೆಗೆ ನೇಣು ಕುಣಿಕೆ ಮಾಡಿ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆಯೇ ಹೊರತು ಅವಳ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಬಡಿಯಪ್ಪ ದೊಡ್ಮನಿ @ ಚನ್ನಯ್ಯ, ಪ್ರಾಯ-50 ವರ್ಷ, ವೃತ್ತಿ-ಶ್ರೀ ಬಸವೇಶ್ವರ ಪ್ರೌಢಶಾಲೆ, ಅಂಡಗಿಯಲ್ಲಿ ಜವಾನ ಕೆಲಸ, ಸಾ|| ಅಂಡಗಿ, ತಾ: ಶಿರಸಿ ರವರು ದಿನಾಂಕ: 25-07-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 26-07-2021 04:08 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080