ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 25-06-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಅಶ್ವಿನಿ ಕೋಂ. ಲಕ್ಷ್ಮಣ ಎಲಪಣ್ಣವರ, ಪ್ರಾಯ-22 ವರ್ಷ, ವೃತ್ತಿ-ಮನೆಯಲ್ಲಿ ಕೆಲಸ, ಸಾ|| ಗುಂಡಳ್ಳಿ, ತಾ: ಹಳಿಯಾಳ, ಹಾಲಿ ಸಾ|| ಲಕ್ಷ್ಮೀನಗರ, ಮಲ್ಲಾಪುರ, ಕಾರವಾರ. ಪಿರ್ಯಾದಿಯ ಮಗಳಾದ ಇವಳಿಗೆ ದಿನಾಂಕ: 25-04-2021 ರಂದು ಹಳಿಯಾಳಕ್ಕೆ ಮದುವೆ ಮಾಡಿಕೊಟ್ಟಿದ್ದು, ಸದ್ರಿಯವಳಿಗೆ ಮದುವೆ ಆದ ಹೊಸದರಲ್ಲಿ ಗಂಡನ ಮನೆಯಾದ ಹಳಿಯಾಳದಿಂದ ದಿನಾಂಕ: 15-6-2021 ತಾಯಿಯ ಮನೆಗೆ ಲಕ್ಷ್ಮೀನಗರಕ್ಕೆ ಕರೆದುಕೊಂಡು ಬಂದಿದ್ದು, ಮನೆಯಲ್ಲಿದ್ದ ಸದ್ರಿ ಶ್ರೀಮತಿ ಅಶ್ವಿನಿ ಕೋಂ. ಲಕ್ಷ್ಮಣ ಎಲಪಣ್ಣವರ ಇವಳು ದಿನಾಂಕ: 24-06-2021 ರಂದು ಬೆಳಿಗ್ಗೆ 10-35 ಗಂಟೆಯಿಂದ 10-45 ನಡುವೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮತ್ತು ಯಾರಿಗೂ ಗೊತ್ತಾಗದಂತೆ ಅವಳ ಬಟ್ಟೆ ತುಂಬಿದ ಬ್ಯಾಗ್ ಅನ್ನು ತೆಗದುಕೊಂಡು ಎಲ್ಲಿಯೋ ಹೋದವಳು, ಈವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಅವಳನ್ನು ಪತ್ತೆ ಮಾಡಿಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಗೋಪಾಳ ಚೌಗುಲೆ, ಪ್ರಾಯ-54 ವರ್ಷ, ವೃತ್ತಿ-ಎನ್.ಪಿ.ಸಿ ಕೈಗಾದಲ್ಲಿ ಗುತ್ತಿಗೆದಾರರಲ್ಲಿ ಕೆಲಸ, ಸಾ|| ಗುಂಡಳ್ಳಿ, ತಾ: ಹಳಿಯಾಳ, ಹಾಲಿ ಸಾ|| ಲಕ್ಷ್ಮೀನಗರ, ಮಲ್ಲಾಪುರ, ಕಾರವಾರ ರವರು ದಿನಾಂಕ: 25-06-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 121/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಘವೇಂದ್ರ ತಂದೆ ಚೌಡು ಪಟಗಾರ, ಪ್ರಾಯ-28 ವರ್ಷ, ಸಾ|| ಮಾಸೂರು, ತಾ: ಕುಮಟಾ (ಸ್ಕೂಟರ್ ನಂ: ಕೆ.ಎ-47/ವಿ-4963 ನೇದರ ಸವಾರ). ಈತನು ದಿನಾಂಕ: 24-06-2021 ರಂದು ರಂದು ರಾತ್ರಿ 07-30 ಗಂಟೆಗೆ ತಾನು ಚಲಾಯಿಸುತ್ತಿದ್ದ ಸ್ಕೂಟರ್ ನಂ: ಕೆ.ಎ-47/ವಿ-4963 ನೇದನ್ನು ಕುಮಟಾ ಕಡೆಯಿಂದ ಕಾಗಾಲ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಅತೀವೇಗದಲ್ಲಿದ್ದ ತನ್ನ ಸ್ಕೂಟರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದೇ ಮಾಸೂರು ಜನತಾ ಪ್ಲಾಟ್ ಕ್ರಾಸ್ ಹತ್ತಿರ ಕಾಗಾಲ ಕಡೆಯಿಂದ ಕುಮಟಾ ಕಡೆಗೆ ನಿಧಾನವಾಗಿ ತನ್ನ ಸೈಡಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-8234 ನೇದರ ಮೇಲೆ ಬರುತ್ತಿದ್ದ ಶ್ರೀ ಕಾಶಿನಾಥ ತಂದೆ ವಾಸುದೇವ ಪೈ, ಸಾ|| ಮಠದಕೇರಿ, ಕೋಡ್ಕಣಿ, ತಾ: ಕುಮಟಾ ರವರ ಮೋಟಾರ್ ಸೈಕಲಿಗೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಶ್ರೀ ಕಾಶಿನಾಥ ಪೈ ರವರ ಎಡಗೆನ್ನೆಗೆ ಗಾಯವುಂಟಾಗಲು ಕಾರಣನಾಗಿದ್ದಲ್ಲದೇ, ಆರೋಪಿ ಸ್ಕೂಟರ್ ಸವಾರನು ತನ್ನ ತಲೆಗೆ ಹಾಗೂ ಕಣ್ಣಿನ ಹುಬ್ಬಿಗೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮುಕುಂದ ತಂದೆ ಗೋಪಾಲಕೃಷ್ಣ ಶಾನಭಾಗ, ಪ್ರಾಯ-39 ವರ್ಷ, ವೃತ್ತಿ-ವ್ಯಾಪಾರ, ಸಾ|| ರಥಬೀದಿ, ತಾ: ಕುಮಟಾ ರವರು ದಿನಾಂಕ: 25-06-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 122/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರವಿ ತಂದೆ ಗಣೇಶ ನಾಯ್ಕ, ಸಾ|| ಬಗ್ಗೋಣ, ತಾ: ಕುಮಟಾ (ಹೊಸದಾದ ಕಾರ್ ಚೆಸ್ ನಂ: MZBFF813LMN058603, ಇಂಜಿನ್ ನಂ: D4FAMM195507 ನೇದರ ಚಾಲಕ). ಈತನು ದಿನಾಂಕ: 24-06-2021ರಂದು 23-45 ಗಂಟೆಗೆ ತಾನು ಚಲಾಯಿಸುತ್ತಿದ್ದ ಹೊಸದಾದ ಕಾರನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಹೋಗಿ, ಕುಮಟಾ ತಾಲೂಕಿನಕಾ ಹಂದಿಗೋಣ ಹತ್ತಿರ ಒಮ್ಮೇಲೆ ನಿಷ್ಕಾಳಜಿಯಿಂದ ಬ್ರೇಕ್ ಹಾಕಿ ಕಾರನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ಕಾರು ಜಖಂ ಆಗಲು ಆರೋಪಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಶಬರೀಶ ತಂದೆ ಗಣಪತಿ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ವ್ಯವಹಾರ, ಸಾ|| ಕಲಭಾಗ, ಪೋಸ್ಟ್ ಆಫೀಸ್ ಹತ್ತಿರ, ತಾ: ಕುಮಟಾ ರವರು ದಿನಾಂಕ: 25-06-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 89/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ತಿರುಮಲ ತಂದೆ ಗಣಪತಿ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ವ್ಯಾಪಾರ, ಸಾ|| ಸತ್ಯನಾರಾಯಣ ನಗರ, ಮುಂಡಳ್ಳಿ, ತಾ: ಭಟ್ಕಳ. ಈತನು ದಿನಾಂಕ: 25-06-2021 ರಂದು 11-30 ಗಂಟೆಯ ಸಮಯಕ್ಕೆ ಮುಂಡಳ್ಳಿಯ ಮಾರುತಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 2,820/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 25-06-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಹರಿದಾಸ ತಂದೆ ಕೇಳಪ್ಪ ಆಚಾರ್ಯ, ಪ್ರಾಯ-60 ವರ್ಷ, ವೃತ್ತಿ-ಪಾತ್ರೆ ವ್ಯಾಪಾರ, ಸಾ|| ಐದು ರಸ್ತೆಯ ಹತ್ತಿರ, ಕುಮಟಾ ರೋಡ್, ತಾ: ಶಿರಸಿ. ಈತನು ದಿನಾಂಕ: 25-06-2021 ರಂದು ಬೆಳಿಗ್ಗೆ 08-15 ಗಂಟೆಯ ಸುಮಾರಿಗೆ ಶಿರಸಿ ಶಹರ ಐದು ರಸ್ತೆಯ ಹತ್ತಿರ ಕುಮಟಾ ರೋಡಿನಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಬಿಳಿ ಬಣ್ಣದ ಒಂದು ಕೈ ಚೀಲದಲ್ಲಿ 1). Original Choice DELUXE WHISKY ಅಂತಾ ಲೇಬಲ್ ಇದ್ದ 90 ML ಅಳತೆಯ ಮದ್ಯದ ಪ್ಯಾಕೆಟ್ ಗಳು-84, 2). HAYWARDS CHEERS WHISKY ಅಂತಾ ಲೇಬಲ್ ಇದ್ದ 90 ML ಅಳತೆಯ ಮದ್ಯದ ಪ್ಯಾಕೆಟ್ ಗಳು-8, 3). BAGPIPER DELUXE WHISKY ಅಂತಾ ಲೇಬಲ್ ಇದ್ದ 180 ML ಅಳತೆಯ ಮದ್ಯದ ಪ್ಯಾಕೆಟ್ ಗಳು-6, ಮದ್ಯದ ಒಟ್ಟು ಮೌಲ್ಯ 3,868/- ರೂಪಾಯಿ ಇದ್ದು, ಸದ್ರಿ ಮದ್ಯದ ಪ್ಯಾಕೆಟ್ ಗಳನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ ಎಸ್. ಉಕ್ಕಲಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 25-06-2021 ರಂದು 09-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 4, 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ-2020 ಹಾಗೂ ಕಲಂ: 429 ಸಹಿತ 34 ಐಪಿಸಿ ಮತ್ತು ಕಲಂ: 66 ಸಹಿತ 192(ಎ) ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹ್ಮದ್ ಜಾಯಿದ್ ತಂದೆ ಯಾಕೂಬ್ ಶೇಖ್, ಪ್ರಾಯ-24 ವರ್ಷ, ವೃತ್ತಿ-ಪೈನಾಪಲ್ ವ್ಯಾಪಾರ, ಸಾ|| ಅಯ್ಯಪ್ಪ ನಗರ, ತಾ: ಶಿರಸಿ, 2]. ಸಿದ್ದಿಕ್ ಹುಸೇನ್ ತಂದೆ ಅಬ್ದುಲ್ ವಹಾಬ್ ಸೌದಾಗರ್, ಪ್ರಾಯ-24 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಕಸ್ತೂರಬಾ ಮೇನ್ ರೋಡ್, ತಾ: ಶಿರಸಿ, 3]. ಅಪ್ರೋಜ್ ತಂದೆ ಮೌಲಸಾಬ್ ತಂಬ್ರೊಳ್ಳಿ, ಪ್ರಾಯ-25 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕಸ್ತೂರಬಾ ನಗರ, ಬಸು ಬೇಕರಿ ಹತ್ತಿರ, ತಾ: ಶಿರಸಿ, 4]. ಮಹ್ಮದ್ ಗೌಸ್ ಸಲಿಂಬಾಷಾ ಬಹಾದ್ದೂರ್, ಸಾ|| ಅಕ್ಕಿಆಲೂರು, ಹಾವೇರಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ರಿಂದ 3 ನೇಯವರು ಆರೋಪಿ 4 ನೇಯವನೊಂದಿಗೆ ಸೇರಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ದಿನಾಂಕ: 25-06-2021 ರಂದು ಬೆಳಿಗಿನ ಜಾವ 03-00 ಗಂಟೆಯ ಸುಮಾರಿಗೆ ಹಾವೇರಿ ಜಿಲ್ಲೆಯ ಅಕ್ಕಿಆಲೂರಿನಲ್ಲಿರುವ ಆರೋಪಿ 4 ನೇಯವನ ಮನೆಯ ಹತ್ತಿರ ಎಮ್ಮೆಯನ್ನು ವಧೆ ಮಾಡಿ ಮಾಂಸವನ್ನಾಗಿ ಮಾಡಿ ಸದ್ರಿ ಮಾಂಸವನ್ನು 4 ಪಾಲಿಥಿನ್ ಚೀಲದಲ್ಲಿ ತುಂಬಿಕೊಂಡು ಆರೋಪಿ 1 ರಿಂದ 3 ನೇಯವರು ಅದನ್ನು ಕಾರ್ ನಂ: ಕೆ.ಎ-03/ಎನ್.ಬಿ-6402 ನೇದರಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡುವಾಗ ಶಿರಸಿ ನಗರದ ಲಿಡ್ಕರ್ ಕಾಂಪ್ಲೆಕ್ಸ್ ಹತ್ತಿರದ ಕಸ್ತೂರಬಾ ನಗರದ ಅಡ್ಡ ರಸ್ತೆಯಲ್ಲಿ ಮಾರಾಟ ಮಾಡುತ್ತಿರುವಾಗ ದಿನಾಂಕ: 25-06-2021 ರಂದು ಬೆಳಿಗ್ಗೆ 09-05 ಗಂಟೆಗೆ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಮಚಂದ್ರ ನಾಯಕ, ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ ವೃತ್ತ, ಶಿರಸಿ ರವರು ದಿನಾಂಕ: 25-06-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 24-06-2021 ರಂದು ಸಂಜೆ 07-30 ಗಂಟೆಯಿಂದ ದಿನಾಂಕ: 25-06-2021 ರಂದು ಮುಂಜಾನೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಕರಗಿನಕೊಪ್ಪದಲ್ಲಿರುವ ತಮ್ಮ ಮನೆಯ ಮುಂದಿನ ಬಾಗಿಲಗೆ ಹಾಕಿದ ಬೀಗವನ್ನು ಮೀಟಿ ತೆಗೆದು ಮನೆಯ ಒಳ ಹೊಕ್ಕಿ ಮನೆಯ ಮೊದಲನೇ ಕೋಣೆಯ ತಿಜೋರಿಯಲ್ಲಿಟ್ಟಿದ್ದ ಒಟ್ಟೂ 20 ಗ್ರಾಂ ತೂಕದ 80,000/- ರೂಪಾಯಿ  ಬೆಲೆಬಾಳುವ ಬಂಗಾರದ ಆಭರಣಗಳನ್ನು ಹಾಗೂ 360 ಗ್ರಾಂ ತೂಕದ 20000/- ರೂಪಾಯಿ ಬೆಲೆಬಾಳುವ ಬೆಳ್ಳಿಯ ಆಭರಣಗಳನ್ನು ಹಾಗೂ ನಗದು ಹಣ 33,000/- ರೂಪಾಯಿಯನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಭೀಮು ತಂದೆ ಭದ್ರಪ್ಪ ಲಮಾಣಿ,  ಪ್ರಾಯ-42 ವರ್ಷ, ವೃತ್ತಿ-ಐಸ್ ಕ್ರೀಂ ಅಂಗಡಿ ವ್ಯಾಪಾರ, ಸಾ|| ಕರಗಿನಕೊಪ್ಪ, ತಾ: ಮುಂಡಗೋಡ ರವರು ದಿನಾಂಕ: 25-06-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣದೇವರಾಯ @ ಕೃಷ್ಣ ತಂದೆ ವೆಂಕಪ್ಪ ಸೋನಗಾರ, ಪ್ರಾಯ-50 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಬೇಗಾರ, ಪೋ: ವಂದಾನೆ, ತಾ: ಸಿದ್ದಾಪುರ. ಈತನು ದಿನಾಂಕ: 25-06-2021 ರಂದು 17-00 ಗಂಟೆಗೆ ಸಿದ್ದಾಪುರ ತಾಲೂಕಿನ ಬೇಗಾರದಲ್ಲಿರುವ ತನ್ನ ಮನೆಯ ಪಕ್ಕದ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 06 ಟೆಟ್ರಾ ಪ್ಯಾಕೆಟ್ ಗಳು, 2). 02 ಪ್ಲಾಸ್ಟಿಕ್ ಗ್ಲಾಸುಗಳು, 3). Original Choice Deluxe Whisky 90 ML ಅಂತಾ ಬರೆದ 02 ಮದ್ಯದ ಖಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 25-06-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರಘುಪತಿ ತಂದೆ ಪ್ರಭಾಕರ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಕ್ಯಾದಗಿ, ತಾ: ಸಿದ್ದಾಪುರ. ಈತನು ದಿನಾಂಕ: 25-06-2021 ರಂದು 20-00 ಗಂಟೆಗೆ ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿರುವ ತನ್ನ ಮನೆಯ ಮುಂದಿನ ಅಂಗಡಿಯ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 4 ಪೌಚ ಗಳು, 2). 02 ಪ್ಲಾಸ್ಟಿಕ್ ಗ್ಲಾಸುಗಳು, 3). Original Choice Deluxe Whisky 90 ML ಅಂತಾ ಬರೆದ 04 ಮದ್ಯದ ಖಾಲಿ ಪೌಚ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 25-06-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 25-06-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಾರುತಿ ತಂದೆ ಮಂಜುನಾಥ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಅಡುಗೆ ಕೆಲಸ, ಸಾ|| ಮಾರುಕೇರಿ, ತಾ: ಭಟ್ಕಳ, ಹಾಲಿ ಸಾ|| ಮನೆ ನಂ: 1361, ಅಭಿಷೇಕ್ ರಾವ್ ಕಂಪೌಂಡ್, ಹೈ ಚರ್ಚ್ ರೋಡ್, ಕಾರವಾರ. ಈತನು ಕಳೆದ 6 ತಿಂಗಳಿನಿಂದ ಕಾರವಾರ ಜನತಾ ಬಜಾರ್ ಹತ್ತಿರ ಇರುವ ಸುದ್ದಿದಾರರ ಬಾಬ್ತು ಉಪಾಹಾರ ದರ್ಶಿನಿ ಅಂತಾ ಹೆಸರಿನ ಹೊಟೇಲಿನಲ್ಲಿ ಅಡುಗೆ ಕೆಲಸ ಮಾಡಿಕೊಂಡು ಕಾರವಾರದ ಹೈ ಚರ್ಚ್ ರಸ್ತೆಯಲ್ಲಿರುವ ಹೊಟೇಲ್ ಮಾಲಿಕರ ಬಾಬ್ತು ಮನೆಯಲ್ಲಿ ವಾಸ ಮಾಡಿಕೊಂಡಿದ್ದವನು, ವಿಪರೀತ ಸರಾಯಿ ಕುಡಿಯುವ ಚಟವನ್ನು ಅಂಟಿಸಿಕೊಂಡು ಅನಾರೋಗ್ಯದಿಂದ ಬಳಲುತ್ತ ಇದ್ದವನು, ಕಳೆದ ದಿನಾಂಕ: 20-05-2021 ರಂದು ತನಗೆ ಅನಾರೋಗ್ಯ ಇರುವುದಾಗಿ ತಿಳಿಸಿ ಕೆಲಸಕ್ಕೆ ರಜೆ ಮಾಡಿಕೊಂಡು ತಾನು ವಾಸವಾಗಿದ್ದ ಮನೆಯಲ್ಲಿಯೇ ಉಳಿದುಕೊಂಡಿದ್ದವನು, ದಿನಾಂಕ: 25-06-2021 ರಂದು 17-00 ಗಂಟೆಗೆ ತಾನು ಉಳಿದುಕೊಂಡಿದ್ದ ಮನೆಯ ಕೊಠಡಿಯಲ್ಲಿ ಮಲಗಿದ್ದಲ್ಲಿಯೇ ಅಸಹಜವಾಗಿ ಮೃತಪಟ್ಟಿದ್ದು, ಮೃತನು ತನಗಿರುವ ಯಾವುದೋ ಖಾಯಿಲೆಯಿಂದ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಅಭಿಷೇಕ್ ತಂದೆ ಸುಬ್ರಹ್ಮಣ್ಯ ರಾವ್, ಸಾ|| ಅಭಿನಂದನ ಹೌಸ್, ವೆಂಕಟೇಶ್ವರ ಗ್ಯಾಸ್ ಹತ್ತಿರ, ಹಬ್ಬುವಾಡ, ಕಾರವಾರ ರವರು ದಿನಾಂಕ: 25-06-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 32/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಬೊಮ್ಮಯ್ಯ ತಂದೆ ರಾಮಕೃಷ್ಣ ನಾಯಕ, ಪ್ರಾಯ-83 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಉಳಗೇರಿ, ಬೆಳಸೆ, ತಾ: ಅಂಕೋಲಾ. ಈತನು ದಿನಾಂಕ: 24-06-2021 ರಂದು ರಾತ್ರಿ 08-00 ಗಂಟೆಯಿಂದ ದಿನಾಂಕ: 25-06-2021 ರಂದು ಬೆಳಿಗ್ಗೆ 09-30 ಗಂಟೆಯ ನಡುವಿನ ಅವಧಿಯಲ್ಲಿ ಕೊರೋನಾ ರೋಗ ಬಂದಿದ್ದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಅಥವಾ ಯಾವುದೋ ಕಾರಣಕ್ಕೆ ನಮ್ಮ ಮನೆಯ ಹತ್ತಿರದ ಬಾವಿಯ ಹತ್ತಿರ ಹೋಗಿ ಯಾವುದೋ ಕಾರಣಕ್ಕೆ ಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂಜೀವ ತಂದೆ ಬೊಮ್ಮಯ್ಯ ನಾಯಕ, ಪ್ರಾಯ-48 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಉಳಗೇರಿ, ಬೆಳಸೆ, ತಾ: ಅಂಕೋಲಾ ರವರು ದಿನಾಂಕ: 25-06-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 30-06-2021 07:18 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080