ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 25-03-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗುರುದಾಸ ತಂದೆ ಸುಬ್ರಾಯ ಪಾಯ್ದೆ, ಸಾ|| ದೇವಳಮಕ್ಕಿ, ಕಾರವಾರ (ಮೋಟಾರ್ ಸೈಕಲ್ ನಂ: ಕೆ.ಎ-30/ಎಲ್-0573 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 25-03-2021 ರಂದು ಬೆಳಿಗ್ಗೆ 07-30 ಗಂಟೆಯ ಸಮಯಕ್ಕೆ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-30/ಎಲ್-0573 ನೇದನ್ನು ಕಾರವಾರ–ಕೈಗಾ ರಾಜ್ಯ ಹೆದ್ದಾರಿಯ ಮೇಲೆ ಕಿನ್ನರ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮಂದ್ರಾಳಿಯ ಹತ್ತಿರ ತನ್ನ ಮುಂದೆ ಇದ್ದ ಬಸ್ಸನ್ನು ಓವರಟೇಕ್ ಮಾಡಿ ರಸ್ತೆಯ ಬಲಬದಿಗೆ ಬಂದು ಕಾರವಾರ ಕಡೆಯಿಂದ ಸಕಲವಾಡಾ ಕಡೆಗೆ ಪಿರ್ಯಾದಿಯವರ ಗಂಡನವರಾದ ಶ್ರೀ ಶೇಷು ತಂದೆ ಹಾಡು ಹುಲಸ್ವಾರ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಹೀರೋ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-4623 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ, ಪಿರ್ಯಾದಿಯವರ ಗಂಡನವರಾದ ಶ್ರೀ ಶೇಷು ತಂದೆ ಹಾಡು ಹುಲಸ್ವಾರ ರವರಿಗೆ ಹಾಗೂ ಪಿರ್ಯಾದಿಯ ಮಗಳು ಕುಮಾರಿ: ಆರಾಧ್ಯ ಇವಳಿಗೆ ಗಾಯನೋವು ಪಡಿಸಿದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀಮತಿ ದೀಪಾ ಕೋಂ. ಶೇಷು ಹುಲಸ್ವಾರ್, ಪ್ರಾಯ-34 ವರ್ಷ, ವೃತ್ತಿ-ಗೃಹಿಣಿ, ಸಾ|| ಸಕಲವಾಡಾ, ಅಂಬೇಡ್ಕರ್ ಕಾಲೋನಿ, ಕಾರವಾರ ರವರು ದಿನಾಂಕ: 25-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಉಮೇಶ ತಂದೆ ಪಾಂಡುರಂಗ ಪೆಡ್ನೇಕರ, ಪ್ರಾಯ-34 ವರ್ಷ, ವೃತ್ತಿ-ವ್ಯಾಪಾರ, ಸಾ|| ಇಂಡಸ್ಟ್ರೀಯಲ್ ಏರಿಯಾ, ಶಿರವಾಡ, ಕಾರವಾರ. ನಮೂದಿತ ಆರೋಪಿತನು ದಿನಾಂಕ: 25-03-2021 ರಂದು 19-45 ಗಂಟೆಯ ಸಮಯಕ್ಕೆ ಕಾರವಾರದ ಶಿರವಾಡ ಇಂಡಸ್ಟ್ರೀಯಲ್ ಏರಿಯಾದ ರೆವೆಂಟೋ ಲೈಫ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹತ್ತಿರದ ರಸ್ತೆಯ ಪಕ್ಕದ ಖುಲ್ಲಾ ಸ್ಥಳದಲ್ಲಿ ಬೀದಿ ದೀಪದ ಕೆಳಗಡೆ ತನ್ನ ತಾಬಾ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ 7,350/- ರೂಪಾಯಿ ಕಿಮ್ಮತ್ತಿನ ಗೋವಾ ಸರಾಯಿ ಬಾಟಲಿಗಳನ್ನು ಮಾರಾಟ ಮಾಡುವ ಕುರಿತು ಗೋವಾ ರಾಜ್ಯದಿಂದ ತರಿಸಿಕೊಂಡು ಅದನ್ನು ಮಾರಾಟ ಮಾಡಲು ತನ್ನ ತಾಬಾದಲ್ಲಿಟ್ಟುಕೊಂಡಿರುವಾಗ ದಾಳಿಯ ಕಾಲಕ್ಕೆ ಕತ್ತಲೆಯಲ್ಲಿ ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರೇವಣಸಿದ್ದಪ್ಪ ಜಿರಂಕಲಗಿ, ಪಿ.ಎಸ್.ಐ, ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 25-03-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕದ್ರಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 06/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಮೋಲ್ ತಂದೆ ಸದಾಶಿವ ಜಾಧವ, ಪ್ರಾಯ-31 ವರ್ಷ, ಸಾ|| ವಡಾಕ್ ಸಿವಲೆ, ತಾ: ಅಜರಾ, ಕೊಲ್ಲಾಪುರ ಮಹಾರಾಷ್ಟ್ರ (ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರ್ ನಂ: ಎಮ್.ಎಚ್-01/ಡಿ.ಕೆ-7749 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 25-03-2021 ರಂದು 10-00 ಗಂಟೆಗೆ ತನ್ನ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರ್ ನಂ: ಎಮ್.ಎಚ್-01/ಡಿ.ಕೆ-7749 ನೇದನ್ನು ಕದ್ರಾ ಕಡೆಯಿಂದ ಕಾರವಾರದ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು ರಾಜ್ಯ ಹೆದ್ದಾರಿ ಸಂಖ್ಯೆ-34 ರ ಮೇಲೆ ಶ್ರೀ ದುರ್ಗಾದೇವಿ ದೇವಸ್ಥಾನ, ಭೈರಾದ ಹತ್ತಿರ ಕಾರವಾರ ಕಡೆಯಿಂದ ಕದ್ರಾ ಕಡೆಗೆ ಪ್ರೇಮಾನಂದ ರಾಮಚಂದ್ರ ವೇಳಿಪ್, ಪ್ರಾಯ-25 ವರ್ಷ, ಸಾ|| ಅಂಬಾಳಿ ಪೋ: ನುಜ್ಜಿ, ತಾ: ಜೋಯಿಡಾ ಇವನು ತನ್ನ ಎಡಬದಿಯಿಂದ ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-5726 ನೇದರ ಮೇಲೆ ಹಿಂಬದಿಯಲ್ಲಿ ನಿಲೇಶ ತಾಂಬಡೋ ವೇಳಿಪ್, ಪ್ರಾಯ-22 ವರ್ಷ, ಇವನನ್ನು ಕೂಡ್ರಿಸಿಕೊಂಡು ಬರುತ್ತಿದ್ದಾಗ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪ್ರೇಮಾನಂದನ ಹಣೆಗೆ, ಕಾಲಿಗೆ ಹಾಗೂ ದೇಹಕ್ಕೆ ಅಲ್ಲಲ್ಲಿ ತೆರಚಿದ ಗಾಯನೋವು ಮತ್ತು ನಿಲೇಶನಿಗೆ ಕೆನ್ನೆಯ ಹತ್ತಿರ ಹಾಗೂ ಮೈಕೈಗೆ ಅಲ್ಲಲ್ಲಿ ಗಾಯನೋವು ಪಡಿಸಿದ್ದಲ್ಲದೇ, ಎರಡೂ ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಜೇಶ ತಂದೆ ಗಜಾ ಗಾಂವಕರ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಪ್ಲಾಟ್, ಮರಾಠವಾಡ, ಭೈರಾ, ಕಾರವಾರ ರವರು ದಿನಾಂಕ: 25-03-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ವಿಕಾಸ ತಂದೆ ನಾರಾಯಣ ಬಾನಾವಳಿಕರ, ಪ್ರಾಯ-28 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕೊಂಕಣ ಖಾರ್ವಿವಾಡಾ, ಕಾಜುಬಾಗ, ಕಾರವಾರ. ನಮೂದಿತ ಆರೋಪಿತನು ದಿನಾಂಕ: 24-03-2021 ರಂದು ಮಧ್ಯಾಹ್ನ 15-15 ಗಂಟೆಗೆ ಮುಡಗೇರಿಯ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದು ಆ ಹಣವನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಚೀಟಿಯನ್ನು ಬರೆದುಕೊಡುತ್ತಿದ್ದವನಿಗೆ ಪಿರ್ಯಾದಿಯುವರು ದಾಳಿ ನಡೆಸಿ ಸೆರೆ ಹಿಡಿದು ಅವನಿಂದ ನಗದು ಹಣ 1,120/- ರೂಪಾಯಿ ಹಾಗೂ ಅಂಕೆ-ಸಂಖ್ಯೆ ಬರೆದ ಚೀಟಿ ಮತ್ತು ಬಾಲ್ ಪೆನ್ ಅನ್ನು ವಶಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ, ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 25-03-2021 ರಂದು 16-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಯೋಗೇಶ ತಂದೆ ಪ್ರಭಾಕರ ಠಕ್ಕರಕರ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಣಕೋಣಜೂಗ, ಕಾರವಾರ. ನಮೂದಿತ ಆರೋಪಿತನು ದಿನಾಂಕ: 24-03-2021 ರಂದು ಮಧ್ಯಾಹ್ನ 15-30 ಗಂಟೆಗೆ ಹಣಕೋಣಜೂಗದ ಬ್ರಿಡ್ಜ್ ಹತ್ತಿರ ಬಸ್ ಸ್ಟ್ಯಾಂಡ್ ಪಕ್ಕ ಇರುವ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ನಿಂತು 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದು ಆ ಹಣವನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಚೀಟಿಯನ್ನು ಬರೆದುಕೊಡುತ್ತಿದ್ದವನಿಗೆ ಪಿರ್ಯಾದಿಯವರು ದಾಳಿ ನಡೆಸಿ ಸೆರೆ ಹಿಡಿದು ಅವನಿಂದ ನಗದು ಹಣ 1,170/- ರೂಪಾಯಿ ಹಾಗೂ ಅಂಕೆ-ಸಂಖ್ಯೆ ಬರೆದ ಚೀಟಿ ಮತ್ತು ಬಾಲ್ ಪೆನ್ ಅನ್ನು ವಶಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಿತ್ಯಾನಂದ ಪಂಡಿತ, ಪೊಲೀಸ್ ವೃತ್ತ ನಿರೀಕ್ಷಕರು, ಕದ್ರಾ ವೃತ್ತ, ಕದ್ರಾ ರವರು ದಿನಾಂಕ: 25-03-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 27/2021, ಕಲಂ: 8 (C), 20(B)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಬ್ದುಲ್ ಹಮೀದ್ ತಂದೆ ರಿಯಾಜ್ ಶೇಖ್, ಪ್ರಾಯ-21 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ಮಾಲ್ದಾರವಾಡಾ, ಚಿತ್ತಾಕುಲಾ, ಕಾರವಾರ, 2]. ಸೂಫಿಯಾನಾ ಅಬ್ದುಲ್ ಲತೀಫ್ ಶೇಖ್, ಸಾ|| ಸದಾಶಿವಗಡ, ಕಾರವಾರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 25-03-2021 ರಂದು ಅನಧೀಕೃತವಾಗಿ ಸುಮಾರು 10,000/- ರೂಪಾಯಿ ಬೆಲೆಬಾಳುವ ಗಾಂಜಾ ಮಾದಕ/ಅಮಲು ಪದಾರ್ಥವನ್ನು ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ತನ್ನ ಆಟೋ ರಿಕ್ಷಾ ನಂ: ಕೆ.ಎ-30/ಎ-3225 ನೇದರ ಮೇಲೆ ಇಟ್ಟುಕೊಂಡು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುವ ತಯಾರಿಯಲ್ಲಿರುವಾಗ ಸೆರೆ ಸಿಕ್ಕಿದ್ದು  ಹಾಗೂ ಆರೋಪಿ 2 ನೇಯವನಿಗೆ ಗಾಂಜಾ ತಂದು ನೀಡುತ್ತಿದ್ದುದಾಗಿ ತಿಳಿಸುದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ, ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 25-03-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಬೀರಾ ತಂದೆ ಮಂಕಾಳಿ ಗೌಡ, ಪ್ರಾಯ-66 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಾರಮಕ್ಕಿ, ಗೋಕರ್ಣ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 24-03-2021 ರಂದು 12-00 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜ್ಜೂರು ಕ್ರಾಸ್ ರಸ್ತೆಯ ಎದುರಿನ ಸಾರ್ವಜನಿಕ ಸ್ಥಳದಲ್ಲ್ಲಿ ರಸ್ತೆಯ ಮೇಲೆ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ, ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ, ಅದೃಷ್ಟದ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು, ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ ನಗದು ಹಣ 670/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳೊಂದಿಗೆ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 25-03-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಚಂದ್ರಶೇಖರ ತಂದೆ ಈಶ್ವರ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಮಾವಳ್ಳಿ, ಮುರ್ಡೇಶ್ವರ, ತಾ: ಭಟ್ಕಳ (ಕಂಟೇನರ್ ಲಾರಿ ನಂ: ಕೆ.ಎ-20/ಎ.ಎ-9827 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ 25-03-2021 ರಂದು 01-30 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಕಂಟೇನರ್ ಲಾರಿ ನಂ: ಕೆ.ಎ-20/ಎ.ಎ-9827 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಕುಮಟಾ ತಾಲೂಕಿನ ಹೊನ್ಮಾಂವ್ ದಂಡಿನ ದುರ್ಗಾದೇವಿ ದೇವಸ್ಥಾನ ಹತ್ತಿರ ರಸ್ತೆಯ ಬದಿಯಿಂದ ಸೈಕಲ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿಯವರ ತಂದೆಯಾದ ಮಾದೇವ ತಂದೆ ಗಣಪತಿ ಗೌಡಾ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ ಸಾ|| ಅಪ್ಪಿ ಓಣಿ, ನೆಲ್ಲಿಕೇರಿ, ತಾ: ಕುಮಟಾ ಇವರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಅವರ ತಲೆಗೆ, ಎಡಗಾಲಿನ ತೊಡೆಯ ಭಾಗಕ್ಕೆ ಹಾಗೂ ಗುಪ್ತಾಂಗದ ಭಾಗಕ್ಕೆ ಭಾರೀ ಗಾಯವಾಗಿ ಸ್ಥಳದಲ್ಲಿಯೇ ಮೃತಪಡಲು ಆರೋಪಿ ಕಂಟೇನರ್ ಲಾರಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಕಾಂತ ತಂದೆ ಮಾದೇವ ಗೌಡಾ, ಪ್ರಾಯ-24 ವರ್ಷ, ವೃತ್ತಿ-ಕಿರಾಣಿ ಅಂಗಡಿಯಲ್ಲಿ ಕೆಲಸ, ಸಾ|| ಅಪ್ಪಿ ಓಣಿ, ನೆಲ್ಲಿಕೇರಿ, ತಾ: ಕುಮಟಾ ರವರು ದಿನಾಂಕ: 25-03-2021 ರಂದು 01-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಫೀಕ್ ಅಹಮ್ಮದ್ ಸಾಬ್, ಪ್ರಾಯ-50 ವರ್ಷ, ವೃತ್ತಿ-ವ್ಯಾಪಾರ, ಸಾ|| ಬೆಳಗಲಗದ್ದೆ, ಸಂತೆಗುಳಿ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 24-03-2021 ರಂದು-11-10 ಗಂಟೆಗೆ ಕುಮಟಾದ ಸಂತೆಗುಳಿ ರಿಕ್ಷಾ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯಲ್ಲಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜುಗರಾಟ ನಡೆಸುತ್ತಿದ್ದಾಗ ದಾಳಿಯ ಕಾಲ 1). ನಗದು ಹಣ 1,380/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ನೇದವುಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ (ಕಾ&ಸು-2), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 25-03-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣ ತಂದೆ ನಾಗಪ್ಪ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಉಳ್ಳೂರು ಮಠ, ಸಂತೆಗುಳಿ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 24-03-2021 ರಂದು-15-40 ಗಂಟೆಗೆ ಕುಮಟಾದ ಸಂತೆಗುಳಿಯ ಸಾರ್ವಜನಿಕ ಗಣಪತಿ ಕಟ್ಟೆಯ ಎದುರು ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯಲ್ಲಿ ಬರ-ಹೋಗುವ ಜನರಿಗೆ 01 ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜುಗರಾಟ ನಡೆಸುತ್ತಿದ್ದಾಗ ದಾಳಿಯ ಕಾಲ 1). ನಗದು ಹಣ 1,340/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ನೇದವುಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ (ಕಾ&ಸು-2), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 25-03-2021 ರಂದು 09-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಆನಂದ ತಂದೆ ಸುಬ್ರಾಯ ದೇಶಭಂಡಾರಿ, ಪ್ರಾಯ-50 ವರ್ಷ, ವೃತ್ತಿ-ವ್ಯಾಪಾರ, ಸಾ|| ಹರವಳ್ಳಿ, ಸಂತೆಗುಳಿ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 24-03-2021 ರಂದು 17-15 ಗಂಟೆಗೆ ಬಸ್ತಿಕೇರಿ ಊರಿನ ಕೊಳೆಗೇರಿ ಸೊಸೈಟಿ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಅದನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ನಗದು ಹಣ 1,670/- ರೂಪಾಯಿ ಹಾಗೂ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳೊಂದಿಗೆ ದಾಳಿಯ ವೇಳೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು-1), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 25-03-2021 ರಂದು 09-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು  ಶ್ರೀ ರಾಮಕೃಷ್ಣ ತಂದೆ ಬೀರಪ್ಪ ಮುಕ್ರಿ, ಪ್ರಾಯ-80 ವರ್ಷ, ವೃತ್ತಿ-ಧಾರವಾಡದ ಕೃಷಿ ಇಲಾಖೆಯ ನಿವೃತ್ತ ನೌಕರ, ಸಾ|| ಹೊದಿಕೆ ಶಿರೂರು, ತಾ: ಹೊನ್ನಾವರ. ಪಿರ್ಯಾದುದಾರರ ತಂದೆಯವರಾದ ಇವರು ಕಳೆದ 4 ತಿಂಗಳಿನಿಂದ ಆರಾಮ ಇಲ್ಲದೇ ಬಗ್ಗೋಣದ ಪಿರ್ಯಾದಿಯ ಮನೆಯಲ್ಲಿ ಉಳಿದುಕೊಂಡವರು, ದಿನಾಂಕ 11-03-2021 ರಂದು ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಹುಬ್ಬಳ್ಳಿಯಲ್ಲಿರುವ ತನ್ನ ಪರಿಚಯದವರ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವರು, ಹುಬ್ಬಳ್ಳಿಗೂ ಹೋಗದೇ ಮರಳಿ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವರನ್ನು ಹುಡುಕಿಕೊಡಲು ವಿನಂರತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಗುಲಾಬಿ ನಾರಾಯಣ ಮುಕ್ರಿ, ಪ್ರಾಯ-38 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಬಗ್ಗೋಣ, ತಾ: ಕುಮಟಾ ರವರು ದಿನಾಂಕ: 25-03-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಭಾಷ ತಂದೆ ಗೋಪಾಲ ಮಿರಾಶಿ, ಪ್ರಾಯ-43 ವರ್ಷ, ವೃತ್ತಿ-ಚಾಲಕ, ಸಾ|| ಡಿಗ್ಗಿ, ತಾ: ಜೊಯಿಡಾ (ಟ್ರ್ಯಾಕ್ಸ್ ನಂ: ಕೆ.ಎ-30/ಎಮ್-6650 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 24-03-2021 ರಂದು 15-30 ಗಂಟೆಗೆ ತನ್ನ ಬಾಬ್ತು ಟ್ರ್ಯಾಕ್ಸ್ ನಂ: ಕೆಎ-30/ಎಮ್-6650 ನೇದನ್ನು ಜೋಯಿಡಾ ಕಡೆಯಿಂದ ಕಿರವತ್ತಿ ಮಾರ್ಗವಾಗಿ ಡಿಗ್ಗಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದಿದ್ದು, ಜೋಯಿಡಾ ತಾಲೂಕಿನ ಕಿರವತ್ತಿ ಗ್ರಾಮದ ಹತ್ತಿರ ರಸ್ತೆಯ ಮೇಲೆ ತನ್ನ ವಾಹನದ ಬಲಬದಿಯ ಬಾಗಿಲು ತೆರೆದಿದ್ದರಿಂದ ಸದರ ವಾಹನದಲ್ಲಿ ಕುಳಿತಿದ್ದ ಪಿರ್ಯಾದಿಯ ಗಂಡ ಮೃತ ಸಂತೋಷ ತಂದೆ ಶಂಕರ ಮಿರಾಶಿ ಈತನು ವಾಹನದಿಂದ ಹೊರಗೆ ರಸ್ತೆಯ ಮೇಲೆ ಬಿದ್ದು, ಈತನ ತಲೆಗೆ ಭಾರೀ ರಕ್ತದ ಗಾಯವುಂಟಾಗಿದ್ದರಿಂದ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆ ಜೋಯಿಡಾಕ್ಕೆ ತಂದು, ನಂತರ ಹೆಚ್ಚಿನ ಚಿಕಿತ್ಸೆಗೆ ಎಸ್.ಡಿ.ಎಮ್ ಆಸ್ಪತ್ರೆ ಧಾರವಾಡಕ್ಕೆ ತೆಗೆದುಕೊಂಡು ಚಿಕಿತ್ಸೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 25-03-2021 ರಂದು ಬೆಳಿಗ್ಗೆ 10-00 ಗಂಟೆಗೆ ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ನೀತಾ ಕೋಂ. ಸಂತೋಷ ಮಿರಾಶಿ, ಪ್ರಾಯ-30 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನಮಶೀತ, ಡಿಗ್ಗಿ, ತಾ: ಜೋಯಿಡಾ ರವರು ದಿನಾಂಕ: 25-03-2021 ರಂದು 15-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಂಜೀತಕುಮಾರ ತಂದೆ ರಾಜಾ, ಪ್ರಾಯ-26 ವರ್ಷ, ವೃತ್ತಿ-ಬಲೂನ್ ಡೆಕೋರೇಶನ್, ಸಾ|| ಮನೆ ನಂ: 53, 10 ನೇ ಮುಖ್ಯ ರಸ್ತೆ, ಜೆ.ಸಿ ನಗರ, ಕುರುಬರ ಹಳ್ಳಿ, ಪೋ: ಮಹಾಲಕ್ಷ್ಮೀಪುರಂ, ಬೆಂಗಳೂರು ದಕ್ಷಿಣ (ಕಾರ್ ನಂ:  ಕೆಎ-01/ಎಮ್‍ಎ-1504 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 24-03-2021 ರಂದು 20-15 ಗಂಟೆಗೆ ತನ್ನ ಕಾರ್ ನಂ: ಕೆ.ಎ-01/ಎಮ್.ಎ-1504 ನೇದನ್ನು ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ, ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿ ಇಸಳೂರ ಹೊಟೇಲ್ ಶ್ರೀ ಕೃಷ್ಣ ಗ್ರ್ಯಾಂಡ್ ಹತ್ತಿರ ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಎದುರುಗಡೆ ಶಿರಸಿ ಕಡೆಯಿಂದ ಮಳಗಿ ಕಡೆಗೆ ಚಲಾಯಿಸಿಕೊಂಡು ಹೊರಟಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ನಂ: ಕೆ.ಎ-31/ಎನ್-1505 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ವಾಹನಗಳನ್ನು ಜಖಂಗೊಳಿಸಿ ಪಿರ್ಯಾದಿ ಹಾಗೂ ಪಿರ್ಯಾದಿಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಕುಮಾರಿ ಅಶೋಕ ಪವಾರ, ಅಮೃತ  ಪವಾರ, ಸ್ವರೂಪ  ಪವಾರ ಹಾಗೂ ಅಪಘಾತ ಪಡಿಸಿದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಶಿಕುಮಾರ ತಂದೆ ಮಹಾದೇವ, ಚೇತನ ಕೃಷ್ಣಪ್ಪ, ಶಿವಶರಣ ತಂದೆ ಸುರೇಶ ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅಶೋಕ ತಂದೆ ಸೋಮಸಿಂಗ್ ಪವಾರ, ಪ್ರಾಯ-58 ವರ್ಷ, ವೃತ್ತಿ-ಕೆ.ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್, ಸಾ|| ಶಾಲ್ಮಲಾ ಬಡಾವಣೆ, ಕಸ್ತೂರಬಾ ನಗರ, ತಾ: ಶಿರಸಿ ರವರು ದಿನಾಂಕ: 25-03-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2021, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರವೀಣ ತಂದೆ ರಾಜು ಬಂಡಾರಿ, ಸಾ|| ಉಂಚಳ್ಳಿ, ತಾ: ಶಿರಸಿ (ಲಾರಿ ನಂ: ಕೆ.ಎ-41/1898 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 25-03-2021 ರಂದು ಬೆಳಿಗ್ಗೆ 09-30 ಗಂಟೆಗೆ ಬಾಬ್ತು ತನ್ನ ಲಾರಿ ನಂ: ಕೆ.ಎ-41/1898 ನೇದನ್ನು ಶಿರಸಿ ಕಡೆಯಿಂದ ಬನವಾಸಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೆರೆಕೊಪ್ಪ ಕ್ರಾಸ್ ಹತ್ತಿರ ಎದುರಿನಿಂದ ಬರುವ ವಾಹನಗಳಿಗೆ ಯಾವುದೇ ಸೂಚನೆ ಕೊಡದೇ ನಿರ್ಲಕ್ಷ್ಯತನದಿಂದ ಲಾರಿಯನ್ನು ಹರಿಶಿ ಕಡೆಗೆ ತಿರುಗಿಸಿ ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಕೆ-7887 ನೇದಕ್ಕೆ ಲಾರಿಯ ಎಡಬದಿಗೆ ಅಳವಡಿಸಿದ ಸ್ಟೆಪ್ನಿ ಟಾಯರ್ ತಾಗಿಸಿ, ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ವಿನಯ ತಂದೆ ಶೇಖರ ನಾಯ್ಕ ಹಾಗೂ ಹಿಂಬದಿಯ ಸವಾರಳಾದ ವಿದ್ಯಾ ಶೇಖರ ನಾಯ್ಕ ಇವರ ತಲೆಗೆ ಹಾಗೂ ಕಾಲುಗಳಿಗೆ ಸಾದಾ ಹಾಗೂ ಗಂಭೀರ ಸ್ವರೂಪದ ಗಾಯಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಆನಂದ ತಂದೆ ತಿಮ್ಮಾ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲ್ಲಿ, ತಾ: ಶಿರಸಿ ರವರು ದಿನಾಂಕ: 25-03-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರು ದಾಖಲಿಸಿದನ್ನು ಗುನ್ನಾ ನಂ: 32/2021, ಕಲಂ: 279. 337. 338 ಐಪಿಸಿ ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

           ಈ ಪ್ರಕರಣದಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರ ಸ್ವರೂಪದ ರಕ್ತಗಾಯ ಹೊಂದಿದ ಗಾಯಾಳುಗಳಾದ 1]. ವಿದ್ಯಾ ತಂದೆ ಶೇಖರ ನಾಯ್ಕ, ಪ್ರಾಯ-28 ವರ್ಷ, ಸಾ|| ಕಲ್ಲಿ, ತಾ: ಶಿರಸಿ, 2]. ವಿನಯ ತಂದೆ ಶೇಖರ ನಾಯ್ಕ, ಪ್ರಾಯ-30 ವರ್ಷ, ಸಾ|| ಕಲ್ಲಿ, ತಾ: ಶಿರಸಿ ಇವರುಗಳಿಗೆ ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದು, ಸದರಿ ಗಾಯಾಳುಗಳು ಮೃತಪಟ್ಟ ಬಗ್ಗೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಿಂದ ದಿನಾಂಕ: 25-03-2021 ರಂದು 21-30 ಗಂಟೆಗೆ Brought Dead ಅಂತಾ ಎಮ್.ಎಲ್.ಸಿ. ಮಾಹಿತಿ ಬಂದಿರುತ್ತದೆ. ಆದಕಾರಣ ಈ ಪ್ರಕರಣಕ್ಕೆ ಕಲಂ:304(ಎ) ಐಪಿಸಿ ನೇದನ್ನು ಅಳವಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 25-03-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

 

ಇತ್ತೀಚಿನ ನವೀಕರಣ​ : 27-03-2021 05:13 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080