ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 25-05-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 269, 270 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾರಾಯಣ ಹುಲಿಯಾ ಗೌಡ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ತಲಗೇರಿ, ಗೋಕರ್ಣ, ತಾ: ಕುಮಟಾ, 2]. ಕುಸುಮಾಕರ ಹೊನ್ನಪ್ಪ ಗೌಡಾ, ಪ್ರಾಯ-29 ವರ್ಷ, ವೃತ್ತಿ-ಆಟೋರಿಕ್ಷಾ ಚಾಲಕ, 3]. ಗುರು ಮಹಾಬಲೇಶ್ವರ ಗೌಡ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಲಗೇರಿ, ಗೋಕರ್ಣ, ತಾ: ಕುಮಟಾ, 4]. ವೆಂಕಟ್ರಮಣ ಅನಂತ ಗೌಡ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ತಲಗೇರಿ, ಗೋಕರ್ಣ, ತಾ: ಕುಮಟಾ, 5]. ಸೋಮಾ ಮಂಕಾಳಿ ಗೌಡ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಲಗೇರಿ, ಗೋಕರ್ಣ, ತಾ: ಕುಮಟಾ, 6]. ಮಾರುತಿ ದಿನಕರ ಅಡಪೇಕರ್, ಪ್ರಾಯ-42 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಚೌಡಗೇರಿ, ಗೋಕರ್ಣ, ತಾ: ಕುಮಟಾ, 7]. ಮಹಾಬಲೇಶ್ವರ ಕುಪ್ಪಾ ಗೌಡ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚೌಡಗೇರಿ, ಗೋಕರ್ಣ, ತಾ: ಕುಮಟಾ, 8]. ಹೊನ್ನಪ್ಪ ಹಮ್ಮು ಗೌಡ, ಸಾ|| ಚೌಡಗೇರಿ, ಗೋಕರ್ಣ, ತಾ: ಕುಮಟಾ, 9]. ಮುಕುಂದ ಗೌಡ, ಸಾ|| ಬಿದ್ರಗೇರಿ, ಗೋಕರ್ಣ, ತಾ: ಕುಮಟಾ. ಈ ನಮೂದಿತ ಆರೋಪಿತರು ದಿನಾಂಕ: 25-05-2021 ರಂದು ಮಧ್ಯಾಹ್ನ 12-15 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಚೌಡಗೇರಿ ಗ್ರಾಮ ಆರ್.ಕೆ ಹಾರ್ಡವೇರ್ ಅಂಗಡಿಯ ಹಿಂಬದಿ ಭಾಗದ ಮೊಗೇರ ಕಟ್ಟೆ ಗುಡ್ಡದ ಸಾರ್ವಜನಿಕ ಪ್ರದೇಶದಲ್ಲಿ ಕೊರೋನಾ ರೋಗ ಹರಡುವ ಸಂಭವ ಇದ್ದ ಬಗ್ಗೆ ಮಾನ್ಯ ಕರ್ನಾಟಕ ಸರಕಾರದ ಹಾಗೂ ಜಿಲ್ಲಾಧಿಕಾರಿಯವರ ಲಾಕಡೌನ್ ಆದೇಶ ಇದ್ದ ಬಗ್ಗೆ ಗೊತ್ತಿದ್ದರೂ ಸಹ ವಿಧಿ ವಿರುದ್ಧವಾಗಿ ನಿರ್ಲಕ್ಷ್ಯತನದಿಂದ ಉದ್ದೇಶ ಪೂರ್ವಕವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಕೊರೋನಾ ರೋಗದ ಸೋಂಕು ಹರಡಿ ಮಾನವನ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಕುಳಿತುಕೊಂಡು ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ, ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿರುವಾಗ ನಗದು ಹಣ 3,640/- ರೂಪಾಯಿ ಹಾಗೂ ಇಸ್ಪೀಟ್ ಜೂಗಾರಾಟದ ಸಲಕರಣೆಗಳ ಸಮೇತ ಸಿಕ್ಕ ಆರೋಪಿ 1 ರಿಂದ 7 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 8 ಹಾಗೂ 9 ನೇಯವರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ನವೀನ ಎಸ್.ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 25-05-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 269, 270 ಐಪಿಸಿ ಹಾಗೂ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರಾಜು ತಂದೆ ಈಶ್ವರ ಹರಿಕಂತ್ರ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರಿಕಂತ್ರ ಓಣಿ, ಮಾದನಗೇರಿ, ತಾ: ಕುಮಟಾ. ಈತನು ದಿನಾಂಕ: 25-05-2021 ರಂದು 19-30 ಗಂಟೆಗೆ ಕುಮಟಾ ತಾಲೂಕಿನ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಮಾದನಗೇರಿ ಗ್ರಾಮದ ಹರಿಕಂತ್ರವಾಡಾ ಓಣಿಯ ರಸ್ತೆಯಲ್ಲಿ ತನ್ನ ಬಳಿ ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೇ ಸುಮಾರು 1,545/- ರೂಪಾಯಿ ಮೌಲ್ಯದ ಕರ್ನಾಟಕ ರಾಜ್ಯದಲ್ಲಿ ಮಾರಾಟಕ್ಕಿರುವ ORIGINAL CHOICE DELUXE WHISKY 90 ML ಅಂತಾ ಬರೆದಿರುವ 44 ಮದ್ಯದ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ತನ್ನ ವಶದಲ್ಲಿಟ್ಟುಕೊಂಡಾಗ ದಾಳಿಯ ಕಾಲಕ್ಕೆ ಸಿಕ್ಕಿದ್ದು, ಅಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಕೊರೋನಾ ರೋಗ ಹರಡುವ ಸಂಭವ ಇದ್ದ ಬಗ್ಗೆ ಮಾನ್ಯ ಕರ್ನಾಟಕ ಸರಕಾರದ ಹಾಗೂ ಜಿಲ್ಲಾಧಿಕಾರಿಯವರ ಲಾಕಡೌನ್ ಆದೇಶ ಇದ್ದ ಬಗ್ಗೆ ಗೊತ್ತಿದ್ದರೂ ಸಹ ವಿಧಿ ವಿರುದ್ಧವಾಗಿ ನಿರ್ಲಕ್ಷ್ಯತನದಿಂದ ಮಾಸ್ಕ್ ಅನ್ನು ಧರಿಸದೇ ಉದ್ದೇಶಪೂರ್ವಕವಾಗಿ ಹೊರಗಡೆ ಬಂದು ಮದ್ಯವನ್ನು ಮಾರಾಟ ಮಾಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 25-05-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 88/2021, ಕಲಂ: 323, 324, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ವೆಂಕಟರಮಣ ತಂದೆ ಹರಿಕೇಶ ಭಟ್, ಪ್ರಾಯ-63 ವರ್ಷ, ವೃತ್ತಿ-ಕೃಷಿ ಕೆಲಸ, 2]. ಸತೀಶ ತಂದೆ ವೆಂಕಟರಮಣ ಭಟ್, ಪ್ರಾಯ-36 ವರ್ಷ, ವೃತ್ತಿ-ಕೃಷಿ ಕೆಲಸ, 3]. ಶ್ರೀಮತಿ ಸವೀತಾ ಕೋಂ. ಸತೀಶ ಭಟ್, ಪ್ರಾಯ-30 ವರ್ಷ, ವೃತ್ತಿ-ಮನೆ ಕೆಲಸ, ಸಾ|| (ಎಲ್ಲರೂ) ಗುಡ್ನಹೊಂಡ, ಬೆಳಗೆರೆ ಗ್ರಾಮ, ತಾ: ಯಲ್ಲಾಪುರ, 4]. ವೆಂಕಟರಮಣ ತಂದೆ ಗೋಪಾಲ ಭಟ್, ಪ್ರಾಯ-56 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೂರಗಿ, ಶಿಸ್ತಮುಡಿ ಗ್ರಾಮ, ತಾ: ಯಲ್ಲಾಪುರ, 5]. ಇಬ್ಬರು ಅಪರಿಚಿತ ಕೂಲಿ ಕೆಲಸದವರು, 6]. ಗಣಪತಿ ತಂದೆ ರಾಮಚಂದ್ರ ಮುದ್ದೆಪಾಲ, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ದೇಹಳ್ಳಿ, ತಾ: ಯಲ್ಲಾಪುರ. ಪಿರ್ಯಾದಿಯವರ ಜಮೀನಿನ ಹತ್ತಿರ ಹರಿದು ಹೋದ ಅನಗೋಡ ಗ್ರಾಮದ ಗುಡ್ನಹೊಂಡ ಹಳ್ಳದ ಪಕ್ಕದಲ್ಲಿ  ಈ ನಮೂದಿತ ಆರೋಪಿತರ ಕೃಷಿ ಜಮೀನು ಇದ್ದು, ದಿನಾಂಕ: 22-05-2021 ರಂದು ಸದರಿ ಹಳ್ಳದಲ್ಲಿ ಆರೋಪಿ 1 ಮತ್ತು 2 ನೇಯವರು ರವರು ಜೆ.ಸಿ.ಬಿ ಸಹಾಯದಿಂದ ಹಳ್ಳದಲ್ಲಿರುವ ಮಣ್ಣನ್ನು ತೆಗೆದು ತಮ್ಮ ಜಮೀನಿನ ಕಡೆ ಹಾಕಿಕೊಳ್ಳುತ್ತಿದ್ದಾಗ, ಪಿರ್ಯಾದಿಯವರು ಹೋಗಿ ‘ಹಳ್ಳದಲ್ಲಿರುವ ಮಣ್ಣನ್ನು ತೆಗೆಯಬೇಡಿ. ಮಣ್ಣನ್ನು ತೆಗೆದರೆ ನಮ್ಮ ಜಮೀನಿನ ಮಣ್ಣು ಕೊರೆದು ತೊಂದರೆ ಆಗುತ್ತದೆ’ ಅಂತಾ ಹೇಳಿದರೂ ಮಣ್ಣನ್ನು ತೆಗೆಯುವುದನ್ನು ನಿಲ್ಲಿಸದೇ ಇದ್ದುದರಿಂದ ಪಿರ್ಯಾದಿಯವರು ಸಂಭಂದಪಟ್ಟ ಅರಣ್ಯ ಇಲಾಖೆಯವರಿಗೆ ಕರೆಯಿಸಿ ಮಣ್ಣು ತೆಗೆಯುವುದನ್ನು ನಿಲ್ಲಿಸಿದ್ದರು. ಆದರೆ ಮರುದಿವಸ ದಿನಾಂಕ: 23-05-2021 ರಂದು 14-45 ಗಂಟೆಯ ಸುಮಾರಿಗೆ ಆರೋಪಿ 1 ನೇಯವನು ಪುನಃ ಸದರಿ ಹಳ್ಳದಲ್ಲಿ ಜೆ.ಸಿ.ಬಿ ಯಿಂದ ಮಣ್ಣು ತೆಗೆಯುತ್ತಿದ್ದಾಗ, ಪಿರ್ಯಾದಿಯವರು ತಮ್ಮೊಂದಿಗೆ ಪರಿಚಯದವರಾದ ಕೃಷ್ಣ ತಮ್ಮಯ್ಯ ಹೆಗಡೆ ರವರನ್ನು ಸಂಗಡ ಕರೆದುಕೊಂಡು ಅಲ್ಲಿಗೆ ಹೋಗಿ ‘ಮಣ್ಣನ್ನು ತೆಗೆಯಬೇಡಿ’ ಅಂತಾ ಹೇಳಿದಾಗ ಸಿಟ್ಟಿನಿಂದ ಇದ್ದ ಆರೋಪಿ 1 ರಿಂದ 5 ನೇಯವರು ಕೂಡಿಕೊಂಡು ಬಂದು ಪಿರ್ಯಾದಿಯವರೊಂದಿಗೆ ಜಗಳ ತೆಗೆದು, ಆರೋಪಿ 1 ನೇಯವನು ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿಯವರ ತಲೆಗೆ ಹೊಡೆದು ರಕ್ತಗಾಯ ಮಾಡಿ, ಆರೋಪಿ 2 ರಿಂದ 5 ನೇಯವರು ಪಿರ್ಯಾದಿಯವರ ಕೈಗಳನ್ನು ಹಿಡಿದುಕೊಂಡು ಅವಾಚ್ಯವಾಗಿ ಬೈಯ್ದು, ಕೈ ಕಾಲುಗಳನ್ನು ಕಟ್ಟಿ ಹಾಕಿ, ಕೈಯಿಂದ ಹೊಡೆದಿದ್ದು, ನಂತರ ಆರೋಪಿ 6 ನೇಯವನು ಆರೋಪಿತರಿಗೆ ಪಿರ್ಯಾದಿಯ ವಿರುದ್ಧ ನೀವು ಸಹ ದೂರು ನೀಡಿ ಅಂತಾ ಪ್ರಚೋದನೆ ನೀಡಿದ್ದು, ಅಲ್ಲದೇ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿಯವರಿಗೆ ‘ನಿನ್ನನ್ನು ಮುಗಿಸಿಯೇ ತಿರುತ್ತೇವೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣ ತಂದೆ ನರಸಿಂಹ ಭಟ್ ಕೊರಗಿ, ಪ್ರಾಯ-44 ವರ್ಷ, ವೃತ್ತಿ-ಕೃಷಿ ಕೆಲಸ ಮತ್ತು ವಕೀಲ, ಸಾ|| ಶಿಸ್ತಮುಡಿ, ಪೋ: ಆನಗೋಡ, ತಾ: ಯಲ್ಲಾಪುರ ರವರು ದಿನಾಂಕ: 25-05-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 269, 271 ಐಪಿಸಿ ವಿವರ...... ನಮೂದಿತ ಆರೋಪಿತ ಸೈಯದ್ ಅಲಿ ಪೀರ್ ಮಹಮ್ಮದ್, ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, ಸಾ|| 3 ನೇ ನಂಬರ್ ಗೇಟ್ ಹತ್ತಿರ, ಹಳಿಯಾಳ ರೋಡ್, ದಾಂಡೇಲಿ. ಜಗತ್ತಿನಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವು ಹರಡಿಕೊಂಡಿದ್ದು, ಅದು ಭಾರತ ದೇಶದಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಅದರಂತೆ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ದಿನಾಂಕ: 07-06-2021 ರವರೆಗೆ ಲಾಕಡೌನ್ ಘೋಷಣೆ ಮಾಡಿ ಆದೇಶಿಸಿದ್ದು, ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿ ದಾಂಡೇಲಿ ನಗರವನ್ನು ವಿಶೇಷ ಕಂಟೈನಮೆಂಟ್ ಝೋನ್ ಆಗಿ ಘೋಷಿಸಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟನ್ನು ನಿಷೇಧಿಸಿದ್ದು ಇರುತ್ತದೆ. ಆದರೆ ನಮೂದಿತ ಆರೋಪಿತನು ತಾನು ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿದರೆ ಅಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ, ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡಿ ಪ್ರಾಣಕ್ಕೆ ತೊಂದರೆ ಆಗಬಹುದು ಅಂತಾ ಗೊತ್ತಿದ್ದರೂ ಸಹ ಲಾಕಡೌನ್ ಮತ್ತು ಸರ್ಕಾರದ ಆದೇಶವನ್ನು ಪಾಲನೆ ಮಾಡದೇ ಉದ್ದೇಶಪೂರ್ವಕವಾಗಿ ದಿನಾಂಕ: 25-05-2021 ರಂದು 19-00 ಗಂಟೆಯಿಂದ 19-15 ಗಂಟೆಯವರೆಗೆ ದಾಂಡೇಳಿ-ಹಳಿಯಾಳ ರಸ್ತೆಯ 3 ನಂಬರ್ ಗೇಟ್ ಹತ್ತಿರ ಇರುವ ತನ್ನ ‘ಬಿಸ್ಮಿಲ್ಲಾ ಕಿರಾಣಿ ಅಂಗಡಿ’ ಯನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪಾ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 25-05-2021 ರಂದು 19-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 25-05-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

ಇತ್ತೀಚಿನ ನವೀಕರಣ​ : 26-05-2021 01:07 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080