ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 25-11-2021

at 00:00 hrs to 24:00 hrs

 

ಕದ್ರಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 13/2021, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಅಧಿನಿಯಮ-2021 ನೇದ್ದರ ವಿವರ...... ನಮೂದಿತ ಆರೋಪಿತ ರೋಹನ್ ತಂದೆ ಧನಂಜಯ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ಚಾಲಕ, ಸಾ|| ಮೇಲಿನ ಬಾಳ್ನಿ, ಕದ್ರಾ, ಕಾರವಾರ. ಈತನು ದಿನಾಂಕ: 25-11-2021 ರಂದು 15-00 ಗಂಟೆಗೆ ಮೇಲಿನ ಬಾಳ್ನಿಯ ಶ್ರೀ ಸಿದ್ಧೇಶ್ವರ ಬಸ್ ನಿಲ್ದಾಣದ ಹತ್ತಿರ ನಿಂತು 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದು ಆ ಹಣವನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಚೀಟಿಯನ್ನು ಬರೆದು ಕೊಡುತ್ತಿದ್ದವನಿಗೆ ದಾಳಿ ನಡೆಸಿ ಹಿಡಿದು, ಅವನಿಂದ ನಗದು ಹಣ 600/- ರೂಪಾಯಿ ಹಾಗೂ ಅಂಕೆ-ಸಂಖ್ಯೆ ಬರೆದ ಚೀಟಿ ಮತ್ತು ನೀಲಿ ಬಣ್ಣದ ಬಾಲ್ ಪೆನ್ ಅನ್ನು ವಶಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾದೇವ ಭೋಸಲೆ, ಪಿ.ಎಸ್.ಐ, ಕದ್ರಾ ಪೊಲೀಸ್ ಠಾಣೆ ರವರು ದಿನಾಂಕ: 25-11-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 208/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಚೇತನ ತಂದೆ ದೊರೆಸ್ವಾಮಿ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ನಂ: 14, ಇಂದ್ರ ಕಾಲೋನಿ, ಆರ್.ಪಿ.ಸಿ ನಗರ, ಅತ್ತಿಗುಪ್ಪೆ, ಬೆಂಗಳೂರು (ಲಾರಿ ನಂ: ಕೆ.ಎ-52/ಎ-0392 ನೇದರ ಚಾಲಕ). ಈತನು ದಿನಾಂಕ: 29-11-2021 ರಂದು 08-30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಕುಮಟಾ-ಅಂಕೋಲಾ ಡಾಂಬರ್ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಲಾರಿ ನಂ: ಕೆ.ಎ-52/ಎ-0392 ನೇದನ್ನು ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ  ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಕುಮಟಾದ ದುಂಡಕುಳಿ ಉಡುಪಿ ಹೋಟೆಲ್ ಹತ್ತಿರ ತಾನು ಚಲಾಯಿಸುತ್ತಿದ್ದ ಲಾರಿಯನ್ನು ಒಮ್ಮೆಲೇ ಬಲಕ್ಕೆ ಚಲಾಯಿಸಿ, ಪಿರ್ಯಾದಿಯು ಚಲಾಯಿಸಿಕೊಂಡು ಹೋಗುತ್ತಿದ್ದ ಸೂಪರ್ ಕ್ಯಾರಿ ವಾಹನ ನಂ: ಕೆ.ಎ-30/ಎ-2927 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸೂಪರ್ ಕ್ಯಾರಿ ವಾಹನವನ್ನು ಪಲ್ಟಿಯಾಗುವಂತೆ ಮಾಡಿ ಪಿರ್ಯಾದಿಗೆ ಎಡಗೈ ಭುಜಕ್ಕೆ ಸಾದಾ ಗಾಯವಾಗುವಂತೆ ಮಾಡಿದ್ದಲ್ಲದೇ, ಆರೋಪಿ ಚಾಲಕನು ತಾನು ಚಲಾಯಿಸುತ್ತಿದ್ದ ಲಾರಿ ಮುಂಭಾಗದ ಬಲಭಾಗವು ಜಖಂ ಆಗುವಂತೆ ಮಾಡಿ, ತನಗೂ ಸಹ ಬಲಗೈ ತೋಳಿಗೆ ಹಾಗೂ ಬಲಗಾಲಿಗೆ ಗಾಯನೋವಾಗಾಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಎನ್. ಡಿ. ಅಭಿಷೇಕ (ಅಭಿಷೇಕ ತಂದೆ ದುರ್ಗು ನಾಯ್ಕ), ಪ್ರಾಯ-27 ವರ್ಷ, ವೃತ್ತಿ-ಶೋ ರೂಮ್ ನಲ್ಲಿ ಅಡ್ವೈಸರ್ ಕೆಲಸ, ಸಾ|| ಹಿಚ್ಕಡ, ತಾ: ಅಂಕೋಲಾ ರವರು ದಿನಾಂಕ: 25-11-2021 ರಂದು 10-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 102/2021, ಕಲಂ: 295(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 22-11-2021 ರಿಂದ ಸಾಮಾಜಿಕ ಜಾಲತಾಣದಲ್ಲಿ ‘ದಿ ವೈಸ್ ಆಫ್ ಹಿಂದ್’ ಎಂಬ ಶೀರ್ಷಿಕೆಯಡಿ ಮುರ್ಡೇಶ್ವರದ ಶಿವನ ಮೂರ್ತಿಯನ್ನು ಪೋಸ್ಟ್ ಮಾಡಿ, ಮೂರ್ತಿಯ ಶಿರದ ಭಾಗವನ್ನು ದ್ವಂಸಗೊಳಿಸಿ, ಅದರ ಮೇಲೆ ಧ್ವಜವನ್ನು ಹಾರಿಸಿ ‘IT IS TIME TO BREAK THE FALSE GODS’ ಎಂಬ ಸುದ್ದಿ ಹರಿದಾಡುತ್ತಿದ್ದು, ‘ದಿ ವೈಸ್ ಆಫ್ ಹಿಂದ್’ ಪತ್ರಿಕೆಯು ಐ.ಎಸ್.ಐ.ಎಸ್ ಉಗ್ರ ಸಂಘಟನೆಯ ಪತ್ರಿಕೆಯಾಗಿದ್ದು, ಸಂಘಟನೆಯು ತನ್ನ ಪತ್ರಿಕೆಯ ಮುಖಪುಟದಲ್ಲಿ ಈ ರೀತಿ ಶಿವನ ಮೂರ್ತಿಯ ಬಗ್ಗೆ ಪ್ರಕಟಿಸಿರುತ್ತಾರೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಟ್ಟಿರುವ ವಿಷಯ ಪಿಂiÀರ್iÁದಿಯವರ  ಗಮನಕ್ಕೆ ಬಂದಿರುತ್ತದೆ. ನಮೂದಿತ ಆರೋಪಿತರು ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗುವ ರೀತಿಯಲ್ಲಿ ಮುರ್ಡೇಶ್ವರದ ಶಿವನ ಮೂರ್ತಿಯ ಶಿರದ ಭಾಗವನ್ನು ದ್ವಂಸಗೊಳಿಸಿ, ಅದರ ಮೇಲೆ ಧ್ವಜವನ್ನು ಹಾರಿಸಿ ಒಂದು ಸಮುದಾಯದ ಮತೀಯ ನಂಬಿಕೆಗಳನ್ನು ಅಪಮಾನಗೊಳಿಸಿ, ಉದ್ದೇಶಪೂರ್ವಕವಾಗಿ ದ್ವೇಷ ಭಾವದಿಂದ ಈ ರೀತಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮತೀಯ ಭಾವನೆಗಳಿಗೆ ಆಘಾತವನ್ನುಂಟು ಮಾಡಿರುತ್ತಾರೆ. ಈ ರೀತಿ ಮತೀಯ ಭಾವನೆಗಳಿಗೆ ಧಕ್ಕೆ ಆಗುವ ರೀತಿಯಲ್ಲಿ ಚಿತ್ರ ಪ್ರಕಟಿಸಿರುವ ಅಥವಾ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವ ಕಿಡಿಗೇಡಿ (ಆರೋಪಿ) ಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶ್ರೀಪತಿ ತಂದೆ ಕೆ. ಶ್ರೀನಿವಾಸಮೂರ್ತಿ, ಪ್ರಾಯ-50 ವರ್ಷ, ವೃತ್ತಿ-ಜನರಲ್ ಮ್ಯಾನೇಜರ್ ಆಡಿಟ್, ಆರ್.ಎನ್.ಎಸ್ ಗ್ರೂಪ್, ಮುರ್ಡೇಶ್ವರ, ಸಾ|| ಬಟ್ಸ್ ಕಂಪೌಂಡ್, ಬಿಜೈ ಚರ್ಚ್ ಹಿಂದುಗಡೆ, ಬಿಜೈ ಪೋಸ್ಟ್, ಮಂಗಳೂರು, ಹಾಲಿ ಸಾ|| ಆರ್.ಎನ್.ಎಸ್ ಆಸ್ಪತ್ರೆ ಹಿಂದುಗಡೆ, ಪ್ಲಾಟ್ ನಂ: 8, ಮಾವಳ್ಳಿ-2, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 25-11-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 182/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪುಂಡ್ಲಿಕ ತಂದೆ ಲೋಕುರ ಗರಗ, ಪ್ರಾಯ-27 ವರ್ಷ, ವೃತ್ತಿ-ಸೈನಿಕ, ಸಾ|| ಮುಂಡವಾಡ ಗ್ರಾಮ, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆ.ಎ-31/ಎಲ್-5765 ನೇದರ ಚಾಲಕ). ಈತನು ದಿನಾಂಕ: 25-11-2021 ರಂದು 19-00 ಗಂಟೆಗೆ ಹಳಿಯಾಳ ತಾಲೂಕಿನ ಹಳಿಯಾಳ-ಕಲಘಟಗಿ ರಸ್ತೆಯ ಎನ್.ಎಸ್ ಕೊಪ್ಪ ಗ್ರಾಮದ ಹಿಂದೆ ಇರುವ ಕ್ರಾಸ್ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಎಲ್-5765 ನೇದನ್ನು ಹಳಿಯಾಳ ಬದಿಯಿಂದ ಮುಂಡವಾಡ ಬದಿಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಾ ಮೋಟಾರ್ ಸೈಕಲ್ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಡಾಂಬರ್ ರಸ್ತೆಯ ಮೇಲೆ ತನಗೆ ತಾನೇ ಸ್ಕಿಡ್ಡಾಗಿ ಪಲ್ಟಿ ಪಡಿಸಿಕೊಂಡು ಬಿದ್ದ ಪರಿಣಾಮ ತನ್ನ ಬಲಗಣ್ಣಿನ ಹತ್ತಿರ ಗಂಭೀರ ರಕ್ತಗಾಯ ಮತ್ತು ಬಲಗೈ ಮುಂಗೈಗೆ ರಕ್ತಗಾಯ ಪಡಿಸಿಕೊಂಡಿದ್ದಲ್ಲದೇ, ಮೋಟಾರ್ ಸೈಕಲನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜ್ಞಾನೇಶ್ವರ ತಂದೆ ಸಂಭಾಜಿ ಅಗಸರ, ಪ್ರಾಯ-28 ವರ್ಷ, ವೃತ್ತಿ-ಟೆಕ್ನೀಷಿಯನ್ ಜಿಯೋ ಕಂಪನಿ, ಸಾ|| ಮುಂಡವಾಡ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 25-11-2021 ರಂದು 21-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಕುಮಾರಿ: ಅರ್ಚನಾ ತಂದೆ ಸುಭಾಷ ಅಳವಿ, ಪ್ರಾಯ-31 ವರ್ಷ, ಸಾ|| ಲಕ್ಷ್ಮೀ ಗಲ್ಲಿ, ಜಗಲಬೇಟ, ತಾ: ಜೋಯಿಡಾ. ಪಿರ್ಯಾದಿಯ ಮಗಳಾದ ಇವಳು ಬೆಳಗಾವಿಯ ಪುರೋಹಿತ ಸ್ವೀಟ್ ಮಾರ್ಟ್ ನಲ್ಲಿ ಕಳೆದ ಒಂದು ವರ್ಷದ ಹಿಂದೆ ಕೆಲಸ ಮಾಡಿಕೊಂಡು ಇದ್ದವಳು, ಕೋವಿಡ್ ನಿಂದ ಮನೆಗೆ ಬಂದು ಕಳೆದ ಒಂದು ವರ್ಷದಿಂದ ಜಗಲಬೇಟದ ತನ್ನ ಮನೆಯಲ್ಲಿ ತಾಯಿಯೊಂದಿಗೆ ಇದ್ದವಳು, ದಿನಾಂಕ: 08-11-2021 ರಂದು ಮನೆಯಿಂದ ತನ್ನ ಪರಿಚಯದ ಊರಾದ ರಾಮನಗರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದು, ಕಾಣೆಯಾಗಿರುವ ತನ್ನ ಮಗಳನ್ನು ಹುಡುಕಿ ಕೊಡಲುವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಲಲಿತಾ ಕೋಂ. ಸುಭಾಷ ಅಳವಿ, ಪ್ರಾಯ-51 ವರ್ಷ, ವೃತ್ತಿ-ಗೃಹಿಣಿ, ಸಾ|| ಲಕ್ಷ್ಮೀ ಗಲ್ಲಿ, ಜಗಲಬೇಟ, ತಾ: ಜೋಯಿಡಾ ರವರು ದಿನಾಂಕ: 25-11-2021 ರಂದು 18-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 25-11-2021

at 00:00 hrs to 24:00 hrs

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 32/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಹನ್ಮಂತಪ್ಪ ತಂದೆ ಹನ್ಮಂತ ಆಚಮಟ್ಟಿ, ಪ್ರಾಯ-50 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಭಜಂತ್ರಿ ಗಲ್ಲಿ, ಹಳಿಯಾಳ ಶಹರ. ಈತನು ಪಿರ್ಯಾದಿಯವರ ಗಂಡನಾಗಿದ್ದು, ವೀಪರಿತ ಸರಾಯಿ ಕುಡಿಯುವ ಚಟದವನಿದ್ದು, ಸರಾಯಿ ಕುಡಿತದಿಂದ ಆರೋಗ್ಯವನ್ನು ಹಾಳು ಮಾಡಿಕೊಂಡವನು. ಅದೇ ಮಾನಸಿಕತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 25-11-2021 ರಂದು ಬೆಳಿಗ್ಗೆ 05-00 ಗಂಟೆಯಿಂದ 06-00 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ಶಹರದ ದೇಶಪಾಂಡೆ ನಗರದ ಮಂಜುನಾಥ ಸೋನಾರ ಇವರ ಜಮೀನಿನಲ್ಲಿನ ಮಾವಿನ ಗಿಡದ ಟೊಂಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇದರ ಹೊರತು ತನ್ನ ಗಂಡನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಯಮುನಾ ಕೋಂ. ಹನ್ಮಂತಪ್ಪ ಆಚಮಟ್ಟಿ, ಪ್ರಾಯ-45 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಭಜಂತ್ರಿ ಗಲ್ಲಿ, ತಾ: ಹಳಿಯಾಳ, ಹಾಲಿ ಸಾ|| ಮಂಚಿಕೇರಿ, ತಾ: ಯಲ್ಲಾಪುರ ರವರು ದಿನಾಂಕ: 25-11-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 28-11-2021 12:05 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080