ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 25-10-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 178/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶರದ್ ತಂದೆ ಆನಂದ ಭಂಡಾರಕರ, ಪ್ರಾಯ-ಸುಮಾರು 54 ವರ್ಷ, ಸಾ|| ದೇವರಹಕ್ಕಲ, ತಾ: ಕುಮಟಾ (ಸೈಕಲ್ ಸವಾರ). ಈತನು ದಿನಾಂಕ: 25-10-2021 ರಂದು-16-45 ಗಂಟೆಗೆ ರಾಷ್ಟೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಕುಮಟಾ-ಹೊನ್ನಾವರ ಡಾಂಬರ್ ರಸ್ತೆಯ ಮೇಲೆ ತನ್ನ ಸೈಕಲನ್ನು ಕುಮಟಾದ ಬಗ್ಗೋಣ ಕ್ರಾಸ್ ಕಡೆಯಿಂದ ರಾಷ್ಟೀಯ ಹೆದ್ದಾರಿಯ ಮೇಲೆ ಇಳಿಜಾರಿನಲ್ಲಿ ತನ್ನ ಎಡಗಡೆಯಿಂದ ಬರುತ್ತಿದ್ದವನು, ಹೊನ್ಮಾಂವ್ ಕ್ರಾಸ್ ಹತ್ತಿರ ಎದುರಿನಿಂದ ಬರುತ್ತಿದ್ದ ಕಾರನ್ನು ನೋಡದೇ ಒಮ್ಮೇಲೆ ರೋಡ್ ಕ್ರಾಸ್ ಮಾಡಿ ಬಲಕ್ಕೆ ತೆಗೆದುಕೊಂಡು ಹೋಗಿ, ಆ ಸಮಯದಲ್ಲಿ ಆತನ ಎದುರಿನಿಂದ ಅಂದರೆ ಹೊನ್ನಾವರ ಕಡೆಯಿಂದ ಅವರ ಸೈಡಿನಿಂದ ಬರುತ್ತಿದ್ದ ಕಾರಿನವರು ಆರೋಪಿ ಸೈಕಲ್ ಸವಾರನಿಗೆ ತಪ್ಪಿಸಲು ಕಾರನ್ನು ಇನ್ನೂ ತಮ್ಮ ಎಡಕ್ಕೆ ತೆಗೆದುಕೊಂಡರೂ ಕೂಡಾ ಆರೋಪಿ ಸೈಕಲ್ ಸವಾರನು ಮುಂದೆ ಹೋಗಿ ಕಾರ್ ನಂ: ಕೆ.ಎ-30/ಎಮ್-3897 ನೇದಕ್ಕೆ ಡಿಕ್ಕಿ ಹೊಡೆದುಕೊಂಡು ಹಾರಿ ಕೆಳಗಡೆ ಬಿದ್ದು ತಲೆಗೆ ಗಾಯ ಪಡಿಸಿಕೊಂಡಿರುವುದಲ್ಲದೇ, ಕಾರ್ ಚಾಲಕ ಕೃಷ್ಣಾನಂದ ನಾಯ್ಕ ಇವರ ತುಟಿಗೆ ಗಾಯವಾಗಲು ಆರೋಪಿ ಸೈಕಲ್ ಸವಾರನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಮನೋಜ ತಂದೆ ಸುಬ್ರಾಯ ನಾಯಕ, ಪ್ರಾಯ-46 ವರ್ಷ, ವೃತ್ತಿ-ಬಿಸಿನೆಸ್, ಸಾ|| ಸಿದ್ಧನಬಾವಿ, ತಾ: ಕುಮಟಾ ರವರು ದಿನಾಂಕ: 25-10-2021 ರಂದು 18-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 179/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣಾನಂದ ತಂದೆ ಗಣಪತಿ ನಾಯಕ, ಸಾ|| ನವನೀತ ಅಪಾರ್ಟಮೆಂಟ್, ತಾ: ಕುಮಟಾ (ಕಾರ್ ನಂ: ಕೆ.ಎ-30/ಎಮ್-3897 ನೇದರ ಚಾಲಕ). ಈತನು ದಿನಾಂಕ: 25-10-2021 ರಂದು 16-45 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-30/ಎಮ್-3897 ನೇದನ್ನು ರಾಷ್ಟೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಬಂದು, ಕುಮಟಾ ತಾಲೂಕಿನ ಹೊನ್ಮಾಂವ್ ಕುಂಬಾರಮಕ್ಕಿ ಕ್ರಾಸ್ ಹತ್ತಿರ ಎದುರಿನಿಂದ ಅಂದರೆ ಕುಮಟಾ ಕಡೆಯಿಂದ ಸೈಕಲನ್ನು ಸವಾರಿ ಮಾಡಿಕೊಂಡು ಹೊನ್ಮಾಂವ್ ಕುಂಬಾರಮಕ್ಕಿ ಕ್ರಾಸ್ ಹತ್ತಿರ ರಸ್ತೆ ಕ್ರಾಸ್ ಮಾಡುತ್ತಿದ್ದ ಪಿರ್ಯಾದಿಯ ಮೈದುನ ಶರದ ತಂದೆ ಆನಂದ ಭಂಡಾರಕರ ಇವರಿಗೆ ನಿಷ್ಕಾಳಜಿಯಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರ ತಲೆಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಗೀತಾ ದಿನೇಶ ಭಂಡಾರಕರ, ಪ್ರಾಯ-56 ವರ್ಷ, ವೃತ್ತಿ-ಮನೆ ಕೆಲಸ, ಸಾ|| ದೇವರಹಕ್ಕಲ, ತಾ: ಕುಮಟಾ ರವರು ದಿನಾಂಕ: 25-10-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 180/2021, ಕಲಂ: 302 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಕಾಂತ ತಂದೆ ರಾಮಚಂದ್ರ ಗೌಡ, ಪ್ರಾಯ-31 ವರ್ಷ, ಸಾ|| ಕಲವೆ, ಸಂತೆಗುಳಿ, ತಾ: ಕುಮಟಾ. ಈತನು ತನ್ನ ತಂದೆ ಶ್ರೀ ರಾಮಚಂದ್ರ ತಂದೆ ಕುಪ್ಪು ಗೌಡ, ಪ್ರಾಯ-55 ವರ್ಷ, ಸಾ|| ಕಲವೆ, ಸಂತೆಗುಳಿ, ತಾ: ಕುಮಟಾ ಈತನೊಂದಿಗೆ ಈ ಹಿಂದಿನಿಂದಲೂ ಸರಾಯಿ ಕುಡಿದು ಗಲಾಟೆ ಮಾಡಿಕೊಂಡು ಬಂದವನಿದ್ದು, ದಿನಾಂಕ: 25-10-2021 ರಂದು ಸಂಜೆ 19-45 ಗಂಟೆಯ ಸುಮಾರಿಗೆ ಮನೆಯಲ್ಲಿ ತನ್ನ ತಂದೆಯೊಂದಿಗೆ ಮನೆಗೆ ಬರುವ ದಾರಿಯ ಗೇಟಿನ ಸರಗೋಲ ಹಾಕಿರುವ ವಿಚಾರದಲ್ಲಿ ಜಗಳ ತೆಗೆದು, ಮಾತಿಗೆ ಮಾತಾಗಿ ಪಿರ್ಯಾದಿಯ ಗಂಡ ರಾಮಚಂದ್ರ ಗೌಡ ಈತನು ತನ್ನ ಮಗನಿಗೆ ’ನಿನಗೆ ಮುಗಿಸಿಯೇ ಬಿಡುತ್ತೇನೆ’ ಅಂತಾ ಹೇಳಿದ್ದು, ಅದಕ್ಕೆ ಆರೋಪಿತನು ಒಮ್ಮೇಲೆ ಸಿಟ್ಟಿಗೆದ್ದು ‘ನನಗೆ ನೀನು ಮುಗಿಸುತ್ತೀಯಾ ಅಂತಾ ಹೇಳ್ತೀಯಾ. ಈಗ ನಿನ್ನನು ಕೊಲೆ ಮಾಡಿಯೇ ಬಿಡುತ್ತೇನೆ’ ಅಂತಾ ಹೇಳಿ ಅಲ್ಲಿಯೇ ವರಾಂಡದ ಮೇಲಿದ್ದ ಕತ್ತಿಯಿಂದ ತನ್ನ ತಂದೆಯ ಕುತ್ತಿಗೆಯ ಮೇಲೆ, ಹಣೆಯ ಮೇಲೆ ಬಲವಾಗಿ ಹೊಡೆದು ಮಾರಣಾಂತಿಕ ಗಾಯಗೊಳಿಸಿ, ಮನೆಯ ವರಾಂಡದ ಮೇಲೆ ಕುಸಿದು ಬೀಳುವಂತೆ ಮಾಡಿ, ಕೊಲೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸುಮಿತ್ರಾ ರಾಮಚಂದ್ರ ಗೌಡ, ಪ್ರಾಯ-49 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲವೆ, ಸಂತೆಗುಳಿ, ತಾ: ಕುಮಟಾ ರವರು ದಿನಾಂಕ: 25-10-2021 ರಂದು 23-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 128/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೆ. ಸತೀಶ ತಂದೆ ಕೃಷ್ಣ ರೆಡ್ಡಿಯಾರ್, ಪ್ರಾಯ-43 ವರ್ಷ, ವೃತ್ತಿ-ಚಾಲಕ, ಸಾ|| ಮಾರಿಯಮ್ಮನ್ ಕೋವಿಲ್ ಸ್ಟ್ರೀಟ್, ವಡಂಪುಡಿ, ತಾ: ತಿಂಡಿವನಮ್, ಜಿ: ವಿಲ್ಲುಪುರಂ, ತಮಿಳುನಾಡು ರಾಜ್ಯ (ಟೆಂಪೋ ವಾಹನ ನಂ: ಟಿ.ಎನ್-16/ಡಿ-4952 ನೇದರ ಚಾಲಕ). ಈತನು ದಿನಾಂಕ: 23-10-2021 ರಂದು 21-45 ಗಂಟೆಗೆ ತನ್ನ ಟೆಂಪೋ ವಾಹನ ನಂ: ಟಿ.ಎನ್-16/ಡಿ-4952 ನೇದನ್ನು ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಸರ್ಪನಕಟ್ಟಾದಲ್ಲಿ ರಾಷ್ಟೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯಲ್ಲಿ ತನ್ನ ವೇಗವನ್ನು ನಿಯಂತ್ರಿಸಲಾಗದೇ ತಾನು ಚಲಾಯಿಸುತ್ತಿದ್ದ ಟೆಂಪೋ ವಾಹನವನ್ನು ಒಮ್ಮೇಲೆ ಎಡಕ್ಕೆ ಚಲಾಯಿಸಿ ಎಡಮಗ್ಗಲಾಗಿ ಪಲ್ಟಿ ಕೆಡವಿದರ ಪರಿಣಾಮ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ 1). ಗೋಪಿನಾಥ ರಾಜೇಂದ್ರಬಾಬು, 2). ದೀಪಿಕಾ ಗೋಪಿನಾಥ, 3). ನಿಲೇಶ ಗೋಪಿನಾಥ, 4). ರಾಜೇಂದ್ರ ಬಾಬು, 5). ರೇಖಾ, 6). ಧನಲಕ್ಷ್ಮೀ, 7). ಸುರೇಶ, 8). ಸಂಧ್ಯಾ, 9). ಕೀರ್ತನಾ, 10). ಮಂಜುನಾಥ, 11). ರಾಘಶ್ರೀ, 12). ಮಿತ್ರೇಶ, 13). ಜ್ಞಾನೇಶ ಇವರಿಗೆ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಕೆ. ಮುರಳಿ ತಂದೆ ಕುಮಾರ ಯಾದವ, ಪ್ರಾಯ-37 ವರ್ಷ, ವೃತ್ತಿ-ಚಾಲಕ, ಸಾ|| 159, ಮಾರಿಯಮ್ಮನ ಕೋವಿಲ್ ಸ್ಟ್ರೀಟ್, ಗೋವಿಂದಪುರಂ ಗ್ರಾಮ, ಪೋ: ಕರುವಂಪಕ್ಕಂ, ತಾ: ತಿಂಡಿವನಂ, ಜಿ: ವಿಲ್ಲುಪುರಂ, ತಮಿಳುನಾಡು ರಾಜ್ಯ ರವರು ದಿನಾಂಕ: 25-10-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಸೋಬಿನಾ ಕೋಂ. ಫ್ರಾನ್ಸಿಸ್ ಫರ್ನಾಂಡೀಸ್, ಪ್ರಾಯ-42 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನ್ಯೂ ಟೌನಶಿಪ್, ಜೋಯಿಡಾ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 30-08-2021 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ಪಿರ್ಯಾದಿ ಹಾಗೂ ಪಿರ್ಯಾದಿಯ ದೊಡ್ಡ ಮಗಳು ಪ್ಲೇವಿಯಾ, ಇವರು ಮನೆಯಲ್ಲಿದ್ದಾಗ ಪಿರ್ಯಾದಿಯ ಹೆಂಡತಿಯು ‘ತಾನು ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಬರುತ್ತೇನೆ’ ಅಂತಾ ನಮ್ಮ ಹತ್ತಿರ ಹೇಳಿ ಹೋಗಿದ್ದಳು, ನನ್ನ ಹೆಂಡತಿ ತನ್ನ ಹತ್ತಿರ ಮೊಬೈಲ್ ನಂ: 94817XXXXX ನೇದನ್ನು ಉಪಯೋಗಿಸುತ್ತಿದ್ದು, ನನ್ನ ಹೆಂಡತಿಯು ಒಂದು ವಾರಕ್ಕೆ ಎರಡು ವಾರಕ್ಕೆ ನಮಗೆ ಪೋನ್ ಮಾಡಿ ಮಾತಾಡುತ್ತಿದ್ದವಳು. ಆದರೆ ದಿನಾಂಕ: 30-08-2021 ರಿಂದ ಹೋದಾಗಿನಿಂದ ಪೋನ್ ಕೂಡ ಮಾಡಲಿಲ್ಲ. ಆದ್ದರಿಂದ ನಾವು ಮನೆಯಿಂದ ನನ್ನ ಹೆಂಡತಿಯ ನಂಬರಿಗೆ ಪೋನ್ ಮಾಡಿದರೆ ಪೋನ್ ಸ್ವಿಚ್ ಆಫ್ ಅಂತಾ ಬರುತ್ತಿದ್ದು, ಮೊಬೈಲ್ ಏನಾದರೂ ಹಾಳಾಗಿರಬಹುದು ಅಂತಾ ನಾವು ಭಾವಿಸಿಕೊಂಡು ಇದ್ದೆವು, ಆದರೆ ಈವರೆಗೂ ಪೋನ್ ಸ್ವಿಚ್ ಆಫ್ ಅಂತಾ ಬರುತ್ತಿದ್ದು, ನಾವು ನಮ್ಮ ಸಂಬಂಧಿಕರಲ್ಲಿ ಎಲ್ಲಾ ಕಡೆ ವಿಚಾರಿಸಿದರೂ ಸಹ ನನ್ನ ಹೆಂಡತಿಯ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ. ನನ್ನ ಹೆಂಡತಿಗೆ ಎಲ್ಲಾ ಕಡೆ ಹುಡುಕಾಡಿದರು ಈವರೆಗೂ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ನನ್ನ ಹೆಂಡತಿ ನಮ್ಮ ಮನೆಯಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೆನೆ ಅಂತಾ ಹೇಳಿ ಹೋದವಳು ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಕಾರಣ ಕಾಣೆಯಾದ ನನ್ನ ಹೆಂಡತಿಯನ್ನು ಹುಡುಕಿ ಕೊಡಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಫ್ರಾನ್ಸಿಸ್ ತಂದೆ ಸೆವರಿನ್ ಫರ್ನಾಂಡೀಸ್, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನ್ಯೂ ಟೌನಶಿಪ್, ತಾ|| ಜೋಯಿಡಾ ರವರು ದಿನಾಂಕ: 25-10-2021 ರಂದು 19-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 190/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಅನೀತಾ ಕೋಂ. ರಾಜಕುಮಾರ ಕೆಸರೆಕರ್, ಪ್ರಾಯ-30 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಹುಣಶೆಟ್ಟಿಕೊಪ್ಪಾ, ತಾ: ಯಲ್ಲಾಪುರ. ಪಿರ್ಯಾದುದಾರರ ಹೆಂಡತಿಯಾದ ಇವರು ದಿನಾಂಕ: 22-10-2021 ರಂದು ಸಾಯಂಕಾಲ 04-00 ಗಂಟೆಗೆ ಪಿರ್ಯಾದಿಯವರು ಹೊಲಕ್ಕೆ ಹೋದಾಗ ಮನೆಯಲ್ಲಿ ಯಾರಿಗೂ ಹೇಳದೇ ತನ್ನ ಬಟ್ಟೆ ತೆಗೆದುಕೊಂಡು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಜಕುಮಾರ ತಂದೆ ತಮ್ಮು ಕೆಸರೆಕರ್, ಪ್ರಾಯ-39 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಹುಣಶೆಟ್ಟಿಕೊಪ್ಪಾ, ತಾ: ಯಲ್ಲಾಪುರ ರವರು ದಿನಾಂಕ: 25-10-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: 323, 324, 34,1 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುನೀಲ್ @ ಅನಂತ ತಂದೆ ವಿಶ್ವನಾಥ ಮಾಶಲ್ಕರ್, ಪ್ರಾಯ-60 ವರ್ಷ, ವೃತ್ತಿ-ಸೆಕ್ಯೂರಿಟಿ ಗಾರ್ಡ್, ಸಾ|| ಹವಾಲ್ದಾರ್ ಗಲ್ಲಿ, ಹುಬ್ಬಳ್ಳಿ ರೋಡ್, ತಾ: ಶಿರಸಿ. ಈತನು ತನ್ನ ಹೆಂಡತಿಯಾದ ಪಿರ್ಯಾದಿಯವರೊಂದಿಗೆ ಸಣ್ಣಪುಟ್ಟ ವಿಷಯಕ್ಕೆ ಜಗಳ ಮಾಡುತ್ತಾ ಬಂದವನು, ದಿನಾಂಕ: 25-10-2021 ರಂದು 18-00 ಗಂಟೆಯ ಸುಮಾರಿಗೆ ಶಿರಸಿ ಶಹರದ ಹವಾಲ್ದಾರ್ ಗಲ್ಲಿಯಲ್ಲಿರುವ ತನ್ನ ಮನೆಯ ಎದುರಿಗೆ ಸಾಲ ತೆಗೆದುಕೊಂಡ ವಿಷಯವಾಗಿ ಪಿರ್ಯಾದಿಯೊಂದಿಗೆ ಜಗಳ ತೆಗೆದು ‘ಸೂಳೆ, ರಂಡೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು, ಆಗ ಪಿರ್ಯಾದಿಯು ‘ಯಾಕೆ ಬೈಯ್ಯುತ್ತಿಯಾ?’ ಅಂತಾ ಕೇಳಿದಕ್ಕೆ, ಪಿರ್ಯಾದಿಗೆ ಅಡ್ಡಗಟ್ಟಿ ತಡೆದು, ದೂಡಿ ಹಾಕಿ ಕೈಯಿಂದ ಮುಖಕ್ಕೆ ಗುದ್ದಿ, ಸ್ಟೀಲಿನ ಪೈಪಿನಿಂದ ಮೈಮೇಲೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ‘ಈ ದಿನ ಉಳಿದುಕೊಂಡಿದ್ದಿ. ಇನ್ನೊಂದು ದಿನ ನಿನಗೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ರೂಪಾ ಕೋಂ. ಸುನೀಲ್ @ ಅನಂತ ಮಾಶಲ್ಕರ್, ಪ್ರಾಯ-53 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹವಾಲ್ದಾರ್ ಗಲ್ಲಿ, ಹುಬ್ಬಳ್ಳಿ ರೋಡ್, ತಾ: ಶಿರಸಿ ರವರು ದಿನಾಂಕ: 25-10-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 25-10-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 33/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 50 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯು ದಿನಾಂಕ: 25-10-2021 ರಂದು ಅಲಿಗದ್ದಾದ ಸಮುದ್ರದ ದಂಡೆಯ ಮೇಲೆ ಇರುವಾಗ ಸಮುದ್ರದ ನೀರಿನಲ್ಲಿ ನಮೂದಿತ ಮೃತನ ಮೃತದೇಹವು ಸಿಕ್ಕಿದ್ದು, ಮೃತನು 5.6 ಇಂಚು ಎತ್ತರ ಹಾಗೂ ಗೋಧಿ ವರ್ಣವನ್ನು ಹೊಂದಿದ್ದು, ಮೃತನ ಮೈಮೇಲೆ ಯಾವುದೇ ಗಾಯ ವಗೈರೆ ಇರುವುದಿಲ್ಲ. ಮೃತನು ಸಮುದ್ರದ ನೀರಿನಲ್ಲಿ ಸ್ನಾನ ಮಾಡುವಾಗಲೋ, ಅಥವಾ ಈಜಾಡುವಾಗಲೋ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಕಂಡುಬರುತ್ತಿದ್ದು, ಅಲ್ಲದೇ ಮೃತನು ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಂಡು ಬರುತ್ತಿದ್ದು, ಮಾನಸಿಕ ಅಸ್ವಸ್ಥತೆಯಿಂದ ನೀರಿನಲ್ಲಿ ಬಿದ್ದು ಮೃತಪಟ್ಟಿರುವ ಸಾಧ್ಯತೆಯೂ ಕಂಡು ಬರುತ್ತಿದೆ. ಇದರ ಹೊರತಾಗಿ ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಕಂಡು ಬರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚೇತನ ತಂದೆ ಯಶ್ವಂತ ಹರಿಕಂತ್ರ, ಪ್ರಾಯ-35 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕೋಣೆವಾಡಾ, ಕಾರವಾರ ರವರು ದಿನಾಂಕ: 25-10-2021 ರಂದು 08-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 26-10-2021 01:43 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080