ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 25-09-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 141/2021, ಕಲಂ: 323, 324, 504, 109 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಬೀರಾ ಬುದ್ದು ಗೌಡ, ಪ್ರಾಯ-66 ವರ್ಷ, ಸಾ|| ಮಾಧವ ನಗರ, ಕಂತ್ರಿ, ತಾ: ಅಂಕೋಲಾ, 2]. ಸುಮಂಗಲಾ ಗಜಾನನ ನಾಯ್ಕ, ಪ್ರಾಯ-65 ವರ್ಷ, ಸಾ|| ಮಾಧವ ನಗರ ಕಂತ್ರಿ, ತಾ: ಅಂಕೋಲಾ. ಪಿರ್ಯಾದುದಾರರು ದಿನಾಂಕ: 24-09-2021 ರಂದು 17-30 ಗಂಟೆಗೆ ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದಾಗ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಒಮ್ಮೇಲೆ ಬಂದು ‘ನಿನಗೆ ಆಸ್ತಿ ಬೇಕಾ ಬೋಳಿ ಮಗನೆ’ ಅಂತಾ ಅವಾಚ್ಯ ಶಬ್ದದಿಂದ ಬೈಯ್ದು ಕಟ್ಟಿಗೆಯ ಸೊಟ್ಟೆಯಿಂದ ಪಿರ್ಯಾದಿಯವರ ಎಡ ಮೊಣಕಾಲಿಗೆ ಹೊಡೆದನು. ಆಗ ಆರೋಪಿತೆ 2 ನೇಯವವಳು ‘ಬಿಡಬೇಡಾ’ ಅಂತಾ ಪ್ರಚೋದನೆ ನೀಡಿರುತ್ತಾಳೆ. ನಂತರ ಆರೋಪಿ 1 ನೇಯವನು ಅದೇ ಸೊಟ್ಟೆಯಿಂದ ಪಿರ್ಯಾದಿಯವರ ಬಲಭುಜಕ್ಕೆ ಹೊಡೆದು, ನಂತರ ಕೈಯಿಂದ ಪಿರ್ಯಾದಿಯವರ ಎಡ ಕಿಬ್ಬೊಟ್ಟೆಗೆ ಎರಡು ಬಾರಿ ಗುದ್ದಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಹಾಸ ತಂದೆ ವಿಷ್ಣು ಶಾನಭಾಗ, ಪ್ರಾಯ-58 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮಾಧವ ನಗರ, ಕಂತ್ರಿ, ತಾ: ಅಂಕೋಲಾ ರವರು ದಿನಾಂಕ: 25-09-2021 ರಂದು 18-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 142/2021, ಕಲಂ: 420, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಕ್ರಮ್ ತಂದೆ ವಿನಾಯಕ ನಾಯ್ಕ, ಸಾ|| ಕಂಚಿನಬಾಗಿಲು, ಅಗಸೂರು, ತಾ: ಅಂಕೋಲಾ. ಈತನು ಪಿರ್ಯಾದಿಯವರಿಗೆ ಕಾರವಾರದ ಐ.ಎನ್.ಎಚ್.ಎಸ್ ಪತಂಜಲಿಯಲ್ಲಿ ಸ್ಟೋರ್ ಮ್ಯಾನೇಜಮೆಂಟ್ ಕೆಲಸ ಕೊಡಿಸುವುದಾಗಿ ಹೇಳಿ, ದಿನಾಂಕ: 02-09-2021 ರಂದು 14-38 ಗಂಟೆಗೆ ಮತ್ತು 17-30 ಗಂಟೆಗೆ ಫೋನ್ ಪೇ ಮೂಲಕ ಒಟ್ಟೂ 7,050/- ರೂಪಾಯಿಗಳನ್ನು ಜಮಾ ಮಾಡಿಸಿಕೊಂಡು, ಯಾವುದೇ ಕೆಲಸ ಕೊಡಿಸದೇ, ಹಣವನ್ನು ಮರಳಿ ಕೇಳಿದ ಪಿರ್ಯಾದಿಯವರಿಗೆ ಆರೋಪಿತನು ಅವಾಚ್ಯವಾಗಿ ಬೈಯ್ದು, ಜೀವ ಬೆದರಿಕೆ ಹಾಕಿ ಹಣವನ್ನು ಮರಳಿಸದೇ ವಂಚಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಯುವರಾಜ ತಂದೆ ಮಂಜುನಾಥ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿ, ಸಾ|| ಗಾಬಿತ್ ಕೇಣಿ, ಕೋಮಾರಪಂಥವಾಡ, ತಾ: ಅಂಕೋಲಾ ರವರು ದಿನಾಂಕ: 25-09-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 247/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗೇಶ ತಂದೆ ಗಣಪತಿ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅಠಾರ, ಅರೇಂಗಡಿ, ತಾ: ಹೊನ್ನಾವರ. ಈತನು ಪಿರ್ಯಾದಿಯ ಕಿರಿಯ ಮಗನಾಗಿದ್ದು, ಪಿರ್ಯಾದಿಯಿಂದ ಪಾಲು ಪಡೆದು ಬೇರೆಯಾಗಿ ವಾಸ ಮಾಡಿಕೊಂಡಿದ್ದು, ಪಾಲು ಮಾಡುವ ಕಾಲಕ್ಕೆ ಆರೋಪಿತನ ಪಾಲಿಗೆ ಬಂದ ಅಡಿಕೆ ಸಸಿಗಳು ಪಿರ್ಯಾದಿಯವರ ಜಾಗದಲ್ಲಿದ್ದು, ಅವುಗಳನ್ನು ಪಿರ್ಯಾದಿಯವರು ತಗೆದುಕೊಂಡು ಹೋಗಲು ತಿಳಿಸಿದರೂ ಸಹಿತ ಆರೋಪಿತನು ತಗೆದುಕೊಂಡು ಹೋಗಿದ್ದು ಇರುವುದಿಲ್ಲ. ದಿನಾಂಕ: 25-09-2021 ರಂದು 11-00 ಗಂಟೆಗೆ ರಂದು ಪಿರ್ಯಾದಿ ಮತ್ತು ಪಿರ್ಯಾದಿಯ ಗಂಡ ಗಣಪತಿ ತಂದೆ ಜಟ್ಟಿ ನಾಯ್ಕ, ಪ್ರಾಯ-67 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅಠಾರ, ಅರೇಂಗಡಿ, ತಾ: ಹೊನ್ನಾವರ ಇವರು ತೋಟದಲ್ಲಿ ಕೆಲಸ ಮಾಡುತ್ತಿರುವಾಗ, ಆರೋಪಿತನು ತೋಟಕ್ಕೆ ಬಂದು ಅಡಿಕೆ ಸಸಿ ಕೀಳುವಾಗ ಪಿರ್ಯಾದಿಯ ಗಂಡ ಆರೋಪಿತನಿಗೆ ಸಂಬಂಧಿಸಿದ ಎಲ್ಲ ಅಡಿಕೆ ಸಸಿಗಳನ್ನು ತೆಗೆದುಕೊಂಡು ಹೋಗಲು ತಿಳಿಸಿದಾಗ ಸಿಟ್ಟಾದ ಆರೋಪಿತನು ಪಿರ್ಯಾದಿಯ ಗಂಡನಿಗೆ ‘ಬೋಳಿ ಮಗನೇ, ಸೂಳೆ ಮಗನೇ, ನಿನ್ನಿಂದಲೇ ಈ ರೀತಿ ಆಗತಿರೋದು. ನನ್ನ ಸಸಿಗಳನ್ನು ನಾನು ಯಾವಾಗಲಾದರು ತೆಗೆದುಕೊಂಡು ಹೋಗುತ್ತೇನೆ’ ಅಂತಾ ಹೇಳಿ ಅಲ್ಲಿಯೇ ಇದ್ದ ಒಂದು ಕಬ್ಬಿಣದ ರಾಡಿನಿಂದ ಪಿರ್ಯಾದಿಯ ಗಂಡನಾದ ಗಣಪತಿ ಇವರಿಗೆ ಎಡಗೈಗೆ ಹೊಡೆದು ಒಳನೋವು ಪಡಿಸಿದ್ದಲ್ಲದೇ, ಪಿರ್ಯಾದಿಯು ಕೂಗಿಕೊಂಡಾಗ ಅಕ್ಕಪಕ್ಕದವರು ಬಂದಾಗ ಆರೋಪಿತನು ‘ಇನ್ನೊಂದು ಸಾರಿ ನನ್ನ ತಂಟೆಗೆ ಬಂದರೆ ತಂದೆ ತಾಯಿ ಅಂತಾನು ನೋಡದೇ ನಿಮ್ಮನ್ನು ಕೊಂದು ಹಾಕುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಪರಮೇಶ್ವರಿ ಗಂಡ ಗಣಪತಿ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಅಠಾರ, ಅರೇಂಗಡಿ, ತಾ: ಹೊನ್ನಾವರ ರವರು ದಿನಾಂಕ: 25-09-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 248/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಅಪರಿಚಿತ ಸಿಲ್ವರ್ ಬಣ್ಣದಂತೆ ಕಂಡು ಬರುವ ಮಾರುತಿ ಎರ್ಟಿಗಾ ಕಾರ್ (ವೈಟ್ ಬೋರ್ಡ್ ನಲ್ಲಿ ಕೆ.ಎ-47 ಅಂತಾ ನಮೂದಿದ್ದು, ಮುಂದಿನ ನಂಬರ್ ತಿಳಿದಿರುವುದಿಲ್ಲ) ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 25-09-2021 ರಂದು ಮಧ್ಯಾಹ್ನ 13-30 ಗಂಟೆಯ ಸುಮಾರಿಗೆ ತನ್ನ ಬಾಬ್ತು ಕಾರನ್ನು ಅತೀವೇಗವಾಗಿ ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಚಲಾಯಿಸಿ, ನಿಷ್ಕಾಳಜಿತನದಿಂದ ರಸ್ತೆಯ ಎಡಕ್ಕೆ ಚಲಾಯಿಸಿ, ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಶ್ರೀಮತಿ ಇಂದಿರಾ ಕೋಂ. ಮಾರುತಿ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಗೃಹಿಣಿ, ಸಾ|| ಹೊದ್ಕೆಶಿರೂರ, ತಾ: ಹೊನ್ನಾವರ, ಹಾಲಿ ಸಾ|| ನಾಣಿನಾಯ್ಕ ರವರ ಮನೆ, ತೊಪ್ಪಲಕೇರಿ, ಕರ್ಕಿ, ತಾ: ಹೊನ್ನಾವರ ದಲ್ಲಿ ಬಾಡಿಗೆ ವಾಸವಿರುವ ಇವರಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರು ರಸ್ತೆಯ ಪಕ್ಕ ಬೀಳುವಂತೆ ಮಾಡಿ, ಅವರ ತಲೆಗೆ ಮತ್ತು ಮೈಮೇಲೆ ಅಲ್ಲಲ್ಲಿ ರಕ್ತಗಾಯ ಪಡಿಸಿ, ಆರೋಪಿ ಚಾಲಕನು ಸ್ಥಳದಲ್ಲಿ ತನ್ನ ಕಾರನ್ನು ನಿಲ್ಲಿಸದೇ ಪರಾರಿಯಾದ ಬಗ್ಗೆ ಪಿರ್ಯಾದಿ ರಮೇಶ ತಂದೆ ಶಿವು ನಾಯ್ಕ, ಪ್ರಾಯ-61 ವರ್ಷ, ವೃತ್ತಿ-ನಿವೃತ್ತ ಕೆ.ಎಸ್.ಆರ್.ಟಿ.ಸಿ ನೌಕರ, ಸಾ|| ಕನಕಭಟ್ರಮನೆ ಕೇರಿ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 25-09-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 249/2021, ಕಲಂ: ಹೆಂಗಸು ಮತ್ತು ಮಗು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ವಸಂತ ಕೋಂ. ಪ್ರವೀಣ ಉಪ್ಪಾರ, ಪ್ರಾಯ-26 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಪ್ಲಾಟಕೇರಿ, ಸರಳಗಿ, ತಾ: ಹೊನ್ನಾವರ, 2]. ಮನ್ವೀತ ತಂದೆ ಪ್ರವೀಣ ಉಪ್ಪಾರ, ಪ್ರಾಯ-2 ವರ್ಷ, ಸಾ|| ಪ್ಲಾಟಕೇರಿ, ಸರಳಗಿ, ತಾ: ಹೊನ್ನಾವರ. ಪಿರ್ಯಾದಿಯ ಹೆಂಡತಿಯಾದ ಕಾಣೆಯಾದ ಶ್ರೀಮತಿ ವಸಂತ ಕೋಂ. ಪ್ರವೀಣ ಉಪ್ಪಾರ ಇವಳು ತನ್ನ ಮಗನಾದ ಮನ್ವೀತ ತಂದೆ ಪ್ರವೀಣ ಉಪ್ಪಾರ ಈತನಿಗೆ ಕರೆದುಕೊಂಡು ದಿನಾಂಕ: 25-09-2021 ರಾತ್ರಿ 19-30 ಗಂಟೆ ಸಮಯಕ್ಕೆ ತನ್ನ ಮನೆಯಾದ ಪ್ಲಾಟಕೇರಿ ಸರಳಗಿಯ ಮನೆಯಲ್ಲಿ ಇದ್ದವಳು, ರಾತ್ರಿ ಬರ್ಹೀದೆಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು, ಈವರೆಗೂ ವಾಪಸ್ ಮನೆಗೆ ಬಾರದೇ ತನ್ನ ಇರುವಿಕೆಯ ಬಗ್ಗೆ ಸಹ ತಿಳಿಸದೆ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿ ಮಗುವನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಪ್ರವೀಣ ತಂದೆ ಸುಬ್ರಾಯ ಉಪ್ಪಾರ, ಪ್ರಾಯ-27 ವರ್ಷ, ವೃತ್ತಿ-ಪಾಸ್ಟಪುಡ್ ಅಂಗಡಿ ವ್ಯಾಪಾರ, ಸಾ|| ಪ್ಲಾಟಕೇರಿ, ಸರಳಗಿ, ತಾ: ಹೊನ್ನಾವರ ರವರು ದಿನಾಂಕ: 25-09-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 118/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಭಟ್ಕಳದ ಮಾವಿನಕುರ್ವೆ ಬಂದರಿನ ಎನ್.ಕೆ ಫೆಡರೇಷನ್ ಡಿಸೇಲ್ ಬಂಕಿನ ಬಳಿ ಚಾವಿ ಹಾಕಿ ಇಟ್ಟಿದ್ದ ಪಿರ್ಯಾದಿಯವರ ಬಾಬ್ತು ಹೀರೋ ಹೋಂಡಾ ಸ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-9571 (ಇಂಜಿನ್ ನಂ: HA10EFBHJ73967 ಚಾಸಿಸ್ ನಂ: MBLHA10EYBHJ71041) ನೇದನ್ನು ದಿನಾಂಕ: 23-09-2021 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ: 24-09-2021 ರಂದು ಬೆಳಗಿನ ಜಾವ 02-00 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಮಹೇಶ ತಂದೆ ವೆಂಕಟರಮಣ ಮೊಗೇರ, ಪ್ರಾಯ-31 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಮೊಗೇರಕೇರಿ, ಮುಂಡಳ್ಳಿ, ತಾ: ಭಟ್ಕಳ ರವರು ದಿನಾಂಕ: 25-09-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 152/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 18-09-2021 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 19-09-2021 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರದ ಈಶ್ವರ ಗಲ್ಲಿಯಲ್ಲಿರುವ ನಮ್ಮ ಮನೆಯ ಮುಂದೆ ನಿಲ್ಲಿಸಿಟ್ಟ ಅ||ಕಿ|| 60,000/- ರೂಪಾಯಿ ಮೌಲ್ಯದ ಪಿರ್ಯಾದಿಯ ಬಾಬ್ತು ಕಪ್ಪು ಬಣ್ಣದ ಹೀರೋ ಸ್ಲೈಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಡಿ-2030 (ಚಾಸಿಸ್ ನಂ: MBLHAW122M5D90470 ಹಾಗೂ ಇಂಜಿನ್ ನಂ: HA11EYM5D06627) ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದಸ್ತಗಿರ ಸೈಯದ್ ತಂದೆ ಮಹ್ಮದಮೀಯಾ ಸೈಯದ್, ಪ್ರಾಯ-27 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಈಶ್ವರ ಗಲ್ಲಿ, ತಾ: ಯಲ್ಲಾಪುರ ರವರು ದಿನಾಂಕ: 25-09-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 121/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಶಿವರಾಮ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಚಾಲಕ, ಸಾ|| ಹೆಗ್ಗರಣೆ, ತಾ: ಸಿದ್ದಾಪುರ. ಈತನು ದಿನಾಂಕ: 25-09-2021 ರಂದು 19-00 ಗಂಟೆಗೆ ಸಿದ್ದಾಪುರ ತಾಲೂಕಿನ ಹೆಗ್ಗರಣೆಯಲ್ಲಿ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky, 90 ML ಅಂತಾ ಬರೆದ ಮದ್ಯ ತುಂಬಿದ 04 ಟೆಟ್ರಾ ಪ್ಯಾಕೆಟ್ ಗಳು, 2). Original Choice Deluxe Whisky, 90 ML ಅಂತಾ ಬರೆದ ಖಾಲಿ 02 ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಮತ್ತು ಪ್ಲಾಸ್ಟಿಕ್ ಗ್ಲಾಸುಗಳು-02, ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 25-09-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 94/2021, ಕಲಂ: 323, 324, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಚೇತನ ರವಿ ನಾಯ್ಕ, 2]. ಮದನ ರವಿ ನಾಯ್ಕ, ಸಾ|| (ಇಬ್ಬರೂ) ಕಲಕರಡಿ, ತಾ: ಶಿರಸಿ. ಈ ನಮೂದಿತ ಆರೋಪಿತರು ಪಿರ್ಯಾದಿಯ ಸ್ವಂತ ತಮ್ಮನ ಮಕ್ಕಳಿರುತ್ತಾರೆ. ಪಿರ್ಯಾದಿಯವರ ಮನೆಯಲ್ಲಿ ಈಗ ಕಳೆದ 15 ದಿನಗಳ ಹಿಂದೆ ಕೆಲವು ನೀರಿನ ಪೈಪ್ ಗಳು ಕಾಣುತ್ತಿಲ್ಲವಾದ್ದರಿಂದ ಪಿರ್ಯಾದಿಯವರ ತಮ್ಮನ ಮಕ್ಕಳಾದ ನಮೂದಿತ ಆರೋಪಿತರುಗಳು ತೆಗೆದುಕೊಂಡಿರಬಹುದು ಅಂತಾ ಪಿರ್ಯಾದುದಾರರು ಕೇಳಿದ್ದಕ್ಕೆ ಆರೋಪಿತರು ಪಿರ್ಯಾದಿಯವರ ಮೇಲೆ ದ್ವೇಷದಿಂದ ಇದ್ದರು. ಹೀಗಿದ್ದು ದಿನಾಂಕ: 23-09-2021 ರಂದು ಮಧ್ಯಾಹ್ನ 03-00 ಗಂಟೆಗೆ ಪಿರ್ಯಾದಿ ಮತ್ತು ಅವರ ಮಗ ಆದರ್ಶ ಕೂಡಿಕೊಂಡು ಹೊಲಕ್ಕೆ ಹೋಗುತ್ತಿರುವಾಗ ಹನಮಂತ ದೇವಸ್ಥಾನದ ಎದುರು ನಮೂದಿತ ಆರೋಪಿತರುಗಳು ಪಿರ್ಯಾದಿ ಮತ್ತು ಅವರ ಮಗನನ್ನು ಅಡ್ಡಗಟ್ಟಿ ತಡೆದು, ‘ಪೈಪ್ ಗಳನ್ನು ನಾವೇ ತೆಗೆದುಕೊಂಡಿದ್ದೇವೆ ಅಂತಾ ಹೇಗೆ ಹೇಳುತ್ತೀರಿ, ಬೋಳಿ ಮಕ್ಕಳೆ, ಸೂಳೆ ಮಕ್ಕಳೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಅವರಿಬ್ಬರೂ ಕೂಡಿಕೊಂಡು ಪಿರ್ಯಾದಿಗೆ ಮತ್ತು ಅವರ ಮಗ ಆದರ್ಶ ಈತನಿಗೆ ಕೈಯಿಂದ ಮೈಮೇಲೆ ಹೊಡೆದು, ಕಾಲಿನಿಂದ ಒದ್ದು, ನೆಲಕ್ಕೆ ದೂಡಿ ಕೆಡವಿ, ಕಾಲಿನಿಂದ ತುಳಿದಿದ್ದಲ್ಲದೇ, ಆರೋಪಿ 2 ನೇಯವನು ಬಡಿಗೆಯಿಂದ ಪಿರ್ಯಾದಿಗೆ ಹೊಡೆಬಡೆ ಮಾಡಿ, ಆರೋಪಿತರಿಬ್ಬರೂ ಪಿರ್ಯಾದಿ ಮತ್ತು ಅವರ ಮಗನನ್ನು ಉದ್ದೇಶಿಸಿ ‘ಇನ್ನೊಮ್ಮೆ ಪೈಪಿನ ವಿಚಾರಕ್ಕೆ ಬಂದಲ್ಲಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಮುಕುಂದ ತಂದೆ ಬೀರಪ್ಪ ನಾಯ್ಕ, ಪ್ರಾಯ-61 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಲಕರಡಿ, ಪೋ: ಅಂಡಗಿ, ತಾ: ಶಿರಸಿ ರವರು ದಿನಾಂಕ: 25-09-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 25-09-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

ಇತ್ತೀಚಿನ ನವೀಕರಣ​ : 27-09-2021 05:41 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080